ಅನಿತಾ ದೇಸಾಯಿ

ಅನಿತಾ ಮಜುಂದಾರ್ ದೇಸಾಯಿ ಅವರು ಭಾರತೀಯ ಲೇಖಕಿ.

ಅವರು ತಮ್ಮ ಬರಹಗಳಿಗಾಗಿ ಬೂಕರ್ ಪ್ರಶಸ್ತಿಗೆ ಮೂರು ಬಾರಿ ಆಯ್ಕೆಯಾಗಿದ್ದರು. ಅವರ ಫೈಯರ್ ಆನ್ ದಿ ಮೌಂಟೇನ್" ಕಾದಂಬರಿಗೆ ೧೯೭೮ರಂದು, ಭಾರತದ ರಾಷ್ಟ್ರೀಯ ಅಕಾಡೆಮಿ ಲೆಟರ್ಸ್ ಇಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಅವರ "ದಿ ವಿಲೇಜ್ ಬೈ ದಿ ಸೀ" ಕೃತಿಗೆ ಬ್ರಿಟಿಷ್ ಗಾರ್ಡಿಯನ್ ಪ್ರಶಸ್ತಿ ದೊರೆಯಿತು.

ಅನಿತಾ ದೇಸಾಯಿ
ಜನನ೨೪ ಜೂನ್ ೧೯೩೭
ಮಸ್ಸೂರಿ, ಗಡ್ವಾಲ್ ಕಿಂಗ್ಡಮ್ (ಇಂದಿನ ಭಾರತ)
ವೃತ್ತಿಬರಹಗಾರ್ತಿ, ಪ್ರಾಧ್ಯಾಪಕಿ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆದೆಹಲಿ ವಿಶ್ವವಿದ್ಯಾಲಯ
ಕಾಲ೧೯೬೩–ಪ್ರಸ್ತುತ
ಪ್ರಕಾರ/ಶೈಲಿಕಲ್ಪನೆ
ಮಕ್ಕಳುಕಿರಣ್ ದೇಸಾಯಿ

ಆರಂಭಿಕ ಜೀವನ

ಅನಿತಾ ಮಜುಂದಾರ್ ಜರ್ಮನ್ ತಾಯಿ ಟೋನಿ ನೈಮ್ ಮತ್ತು ಬಂಗಾಳಿ ಉದ್ಯಮಿ ಡಿ. ಎನ್. ಮಜುಂದಾರ್ ಅವರ ಮಗಳಾಗಿ ಭಾರತದ ೨೪ ಜೂನ್ ೧೯೩೭ರಂದು ಮಸ್ಸೂರಿಯಲ್ಲಿ ಜನಿಸಿದರು. ಅವರು ಮನೆಯಲ್ಲಿ ಜರ್ಮನ್ ಮಾತನಾಡುತ್ತಿದ್ದರು ಹಾಗೂ ಹೊರಗೆ ಬೆಂಗಾಳಿ, ಉರ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅನಿತಾ ದೇಸಾಯಿ ಅವರು ಶಾಲೆಯಲ್ಲಿ ಇಂಗ್ಲಿಷ್ ಓದಲು ಮತ್ತು ಬರೆಯಲು ಕಲಿತದ್ದರಿಂದ ಇಂಗ್ಲೀಷ್ ಅವರ ಸಾಹಿತ್ಯ ಭಾಷೆಯಾಯಿತು. ಅವರು ಏಳನೇ ವಯಸ್ಸಿನಲ್ಲಿ ಇಂಗ್ಲೀಷ್‌ನಲ್ಲಿ ಬರೆಯಲು ಆರಂಭಿಸಿದರು ಮತ್ತು ಒಂಭತ್ತನೆ ವಯಸ್ಸಿನಲ್ಲಿ ಅವರ ಮೊದಲ ಕಥೆ ಪ್ರಕಟವಾಯಿತು. ಅವರು ದೆಹಲಿಯ ಕ್ವೀನ್ ಮೇರೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿಯಾಗಿದ್ದರು ಮತ್ತು ೧೯೫೭ರಲ್ಲಿ ಮಿರಾಂಡಾ ಹೌಸಾಫ್ ದಿ ಯೂನಿವರ್ಸಿಟಿ ಆಫ್ ದೆಹಲಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಪದವಿ ಪಡೆದರು. ಇದರ ಮುಂದಿನ ವರ್ಷದಲ್ಲೇ ಅವರು ಅಶ್ವಿನ್ ದೇಸಾಯಿ ಅವರನ್ನು ಮದುವೆಯಾದರು. ಅಶ್ವಿನ್ ದೇಸಾಯಿ ಕಂಪ್ಯೂಟರ್ ಸಾಫ್ಟ್ವೇರ್ ಕಂಪನಿಯ ನಿರ್ದೇಶಕ ಮತ್ತು "ಬಿಟ್ವಿನ್ ಎಟರ್ನಿಟಿಸ್: ಐಡಿಯಾಸ್ ಆನ್ ಲೈಫ್ ಅಂಡ್ ದಿ ಕಾಸ್ ಮೋಸ್" ಪುಸ್ತಕವನ್ನು ಬರೆದಿದ್ದಾರೆ. ಅನಿತಾರವರಿಗೆ ನಾಲ್ಕು ಮಕ್ಕಳಿದ್ದಾರೆ, ಅದರಲ್ಲಿ ಬೂಕರ್ ಪ್ರಶಸ್ತಿ ವಿಜೇತ ಕಾದಂಬರಿಕಾರ ಕಿರಣ್ ದೇಸಾಯಿಯವರು ಒಬ್ಬರು. ಅವರು ತಮ್ಮ ಮಕ್ಕಳನ್ನು ವಾರಾಂತ್ಯಗಳಲ್ಲಿ ತುಲ್(ಅಳಿಭಾಗ್ ಬಳಿ) ಕರೆದೊಯ್ಯುತ್ತಿದ್ದರು, ಅಲ್ಲಿ ಅನಿತಾ ರವರು ದಿ ವಿಲೇಜ್ ಬೈ ದಿ ಸೀ ಕಾದಂಬರಿಯನ್ನು ಬರೆದರು. ಅವರ ಈ ಕೆಲಸಕ್ಕೆ ಗಾರ್ಡಿಯನ್ ಚಿಲ್ಡ್ರನ್ಸ್ ಫಿಕ್ಷನ್ ಪ್ರಶಸ್ತಿಯನ್ನು ಬ್ರಿಟಿಷ್ ಮಕ್ಕಳ ಬರಹಗಾರರ ಒಂದು ಸಮಿತಿ ತೀರ್ಮಾನಿಸಲ್ಪಟ್ಟಿತು. \

ವೃತ್ತಿ ಜೀವನ

ದೇಸಾಯಿ ರವರು "ಕ್ರೈ ದಿ ಪೀಕಾಕ್" ಎಂಬ ತಮ್ಮ ಮೊದಲ ಕಾದಂಬರಿಯನ್ನು ೧೯೬೩ರಲ್ಲಿ ಪ್ರಕಟಿಸಿದರು. ಅವರು ತನ್ನ 'ಕ್ಲಿಯರ್ ಲೈಟ್ ಆಫ್ ಡೆ'(೧೯೮೦) ಅವರು ಉರ್ದು ಕವಿಯ ಕುಸಿಯುತ್ತಿರುವ ದಿನಗಳ ಬಗ್ಗೆ ೧೯೮೪ ರಲ್ಲಿ "ಇನ್ ಕಸ್ಟೊಡಿ"ಯನ್ನು ಪ್ರಕಟಿಸಿದರು, ಆದ್ದರಿಂದ ಭೂಕರ್ ಪ್ರಶಸ್ತಿಗೆ ನೇಮಕವಾಗಿದ್ದರು. ಅವರು ೧೯೯೩ರಲ್ಲಿ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೃಜನಾತ್ಮಕ ಯೋಚನೆ ಶಿಕ್ಷಕರಾದರು. ೨೦ ನೇ ಶತಮಾನದ ಮೆಕ್ಸಿಕೋದಲ್ಲಿ ಮಾಡಿದ 'ದಿ ಜ಼ಿಗ್ ಜ಼ಾಗ್ ವೇ' ಕಾದಂಬರಿ ೨೦೦೪ ರಲ್ಲಿ ಕಾಣಿಸಿಕೊಂಡಿತು. ೨೦೧೧ರಲ್ಲಿ ತಮ್ಮ ಸಣ್ಣ ಕಥೆಗಳ ಸಂಗ್ರಹ 'ದಿ ಆರ್ಟಿಸ್ಟ್ ಆಫ್ ಡಿಸ್ ಅಪಿಯರೆನ್ಸ್' ಪ್ರಕಟವಾಯಿತು. ದೇಸಾಯಿ ಮೌಂಟ್ ಹೊಲ್ಯೋಕ್ ಕಾಲೇಜ್, ಬರೂಚ್ ಕಾಲೇಜು ಮತ್ತು ಸ್ಮಿತ್ ಕಾಲೇಜಿನಲ್ಲಿ ಪಾಠ ಕಲಿಸಿದರು. ಅವರು ರಾಯಲ್ ಸೊಸೈಯಿಟಿ ಆಫ್ ಲಿಟರೇಚರ್, ದಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಲೆಟರ್ಸ್, ಗ್ರಿಟನ್ ಕಾಲೇಜು, ಕ್ಯಾಂಬ್ರಿಡ್ಜ್ ಮುಂತಾದವುಗಳಲ್ಲಿ ಸಹ ಸದಸ್ಯರಾಗಿದ್ದರು. ಇದರ ಜೊತೆಗೆ ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್ ಗೆ ಬರೆಯುತ್ತಾರೆ.

ಚಿತ್ರ

೧೯೯೩ ರಲ್ಲಿ, ಅವರ ಕಾದಂಬರಿ ಇನ್ ಕಸ್ಟಡಿ ಅನ್ನು ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್ ಅದೇ ಹೆಸರಿನಲ್ಲಿ ಇಂಗ್ಲಿಷ್ ಚಿತ್ರಕ್ಕೆ ಅಳವಡಿಸಿಕೊಂಡಿತು, ಇಸ್ಮಾಯಿಲ್ ಮರ್ಚೆಂಟ್ ನಿರ್ದೇಶಿಸಿದ, ಶಾರುಖ್ ಹುಸೈನ್ ಅವರ ಚಿತ್ರಕಥೆಯೊಂದಿಗೆ. ಇದು ೧೯೯೪ ರ ಅತ್ಯುತ್ತಮ ಚಿತ್ರಕ್ಕಾಗಿ ಭಾರತದ ರಾಷ್ಟ್ರಪತಿ ಚಿನ್ನದ ಪದಕವನ್ನು ಗೆದ್ದುಕೊಂಡಿತು ಮತ್ತು ಶಶಿ ಕಪೂರ್, ಶಬಾನಾ ಅಜ್ಮಿ ಮತ್ತು ಓಂ ಪುರಿ ನಟಿಸಿದ್ದಾರೆ.

ಪ್ರಶಸ್ತಿಗಳು

೧೯೭೮ - ವಿನಿಫ್ರೆಡ್ ಹಾಲ್ಟ್ ಬೈ ಸ್ಮಾರಕ ಪ್ರಶಸ್ತಿ, ಫೈರ್ ಆನ್ ದಿ ಮೌಂಟೇನ್ ಗೆ
೧೯೭೮ - ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ನ್ಯಾಷನಲ್ ಅಕಾಡೆಮಿ ಆಫ್ ಲೆಟರ್ಸ್ ಅವಾರ್ಡ್), ಫೈರ್ ಆನ್ ದಿ ಮೌಂಟೇನ್ ಗೆ
೧೯೮೦ - ಬೂಕರ್ ಪ್ರಶಸ್ತಿಗೆ ಆಯ್ಕೆಯಾದರು, ಕ್ಲಿಯರ್ ಲೈಟ್ ಆಫ್ ಡೇ ಕಾದಂಬರಿಗೆ
೧೯೮೩ - ಗಾರ್ಡಿಯನ್ ಚಿಲ್ಡ್ರನ್ಸ್ ಫಿಕ್ಷನ್ ಪ್ರಶಸ್ತಿ - ದಿ ವಿಲೇಜ್ ಬೈ ದಿ ಸೀ: ಭಾರತೀಯ ಕೌಟುಂಬಿಕ ಕಥೆ
೧೯೮೪ - ಬೂಕರ್ ಪ್ರಶಸ್ತಿಗೆ ಆಯ್ಕೆಯಾದರು, ಇನ್ ಕಸ್ಟೊಡಿ ಕಾದಂಬರಿಗೆ
೧೯೯೯ - ಬೂಕರ್ ಪ್ರಶಸ್ತಿಗೆ ಆಯ್ಕೆಯಾದರು, ಪಾಸ್ಟಿಂಗ್, ಫೀಸ್ಟಿಂಗ್
೨೦೦೦ - ಸಾಹಿತ್ಯಕ್ಕೆ ಆಲ್ಬರ್ಟೊ ಮೊರಾವಿಯಾ ಪ್ರಶಸ್ತಿ (ಇಟಲಿ)
೨೦೦೩ - ಬೆನ್ಸನ್ ಮೆಡಲ್ ಆಫ್ ರಾಯಲ್ ಸೊಸೈಟಿ ಆಫ್ ಲಿಟರೇಚರ್
೨೦೦೭ - ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್
೨೦೧೪ - ಪದ್ಮಭೂಷಣ

ಆಯ್ದ ಕೃತಿಗಳು

ದಿ ಆರ್ಟಿಸ್ಟ್ ಆಫ್ ಡಿಸ್ ಅಪಿಯರೆನ್ಸ್(೨೦೧೧)
ದಿ ಜ಼ಿಗ್ ಜ಼ಾಗ್ ವೇ(೨೦೦೪)
ಡೈಮಂಡ್ ಡಸ್ಟ್ ಅಂಡ್ ಅದರ್ ಸ್ಟೋರೀಸ್(೨೦೦೦)
ಪಾಸ್ಟಿಂಗ್, ಫೀಸ್ಟಿಂಗ್(೧೯೯೯)
ಜರ್ನಿ ಟೂ ಇತಾಕಾ(೧೯೯೫)
ಇನ್ ಕಸ್ಟೊಡಿ(೧೯೮೪)
ದಿ ವಿಲೇಜ್ ಬೈ ದಿ ಸೀ(೧೯೮೨)
ಕ್ಲಿಯರ್ ಲೈಟ್ ಆಫ್ ಡೇ(೧೯೮೦)
ಫೈರ್ ಆನ್ ದಿ ಮೌಂಟೇನ್(೧೯೭೭)
ದಿ ಪೀಕಾಕ್ ಗಾರ್ಡೆನ್(೧೯೭೪)

ಹೊರಗಿನ ಕೊಂಡಿಗಳು

ಉಲ್ಲೇಖಗಳು

Tags:

ಅನಿತಾ ದೇಸಾಯಿ ಆರಂಭಿಕ ಜೀವನಅನಿತಾ ದೇಸಾಯಿ ವೃತ್ತಿ ಜೀವನಅನಿತಾ ದೇಸಾಯಿ ಚಿತ್ರಅನಿತಾ ದೇಸಾಯಿ ಪ್ರಶಸ್ತಿಗಳುಅನಿತಾ ದೇಸಾಯಿ ಆಯ್ದ ಕೃತಿಗಳುಅನಿತಾ ದೇಸಾಯಿ ಹೊರಗಿನ ಕೊಂಡಿಗಳುಅನಿತಾ ದೇಸಾಯಿ ಉಲ್ಲೇಖಗಳುಅನಿತಾ ದೇಸಾಯಿಭಾರತಸಾಹಿತ್ಯ೧೯೭೮

🔥 Trending searches on Wiki ಕನ್ನಡ:

ನಗರೀಕರಣಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಡಿ.ಆರ್. ನಾಗರಾಜ್ಮೋಕ್ಷಗುಂಡಂ ವಿಶ್ವೇಶ್ವರಯ್ಯನಾಟಕಎರಡನೇ ಎಲಿಜಬೆಥ್ಕರ್ನಾಟಕದ ಅಣೆಕಟ್ಟುಗಳುಪಾಂಡವರುಬರಗೂರು ರಾಮಚಂದ್ರಪ್ಪಅಂಚೆ ವ್ಯವಸ್ಥೆಪ್ರಬಂಧ ರಚನೆಶಬ್ದಭಾರತದಲ್ಲಿ ಕಪ್ಪುಹಣಸಿದ್ಧರಾಮಭಾರತದಲ್ಲಿನ ಜಾತಿ ಪದ್ದತಿವೀರಗಾಸೆಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಕಬಡ್ಡಿಸಂಯುಕ್ತ ರಾಷ್ಟ್ರ ಸಂಸ್ಥೆಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯೇಸು ಕ್ರಿಸ್ತಕಾನೂನುಭಂಗ ಚಳವಳಿರಾಜಧಾನಿಗಳ ಪಟ್ಟಿಸಂಶೋಧನೆಕೆ.ವಿ.ಸುಬ್ಬಣ್ಣಪಂಜೆ ಮಂಗೇಶರಾಯ್ಶ್ರೀಶೈಲಬಾರ್ಬಿಅಂಬಿಗರ ಚೌಡಯ್ಯಪೂರ್ಣಚಂದ್ರ ತೇಜಸ್ವಿಅಲ್ಲಮ ಪ್ರಭುಬಾಹುಬಲಿಭಾರತದ ಮುಖ್ಯ ನ್ಯಾಯಾಧೀಶರುದಲಿತರಾಮಾಯಣಮದಕರಿ ನಾಯಕಸಂಧಿಮಂತ್ರಾಲಯಕಾರ್ಯಾಂಗಕೆಳದಿಯ ಚೆನ್ನಮ್ಮಹಲ್ಮಿಡಿರೈತವಾರಿ ಪದ್ಧತಿಕಲ್ಯಾಣಿವಲ್ಲಭ್‌ಭಾಯಿ ಪಟೇಲ್ಸರ್ವೆಪಲ್ಲಿ ರಾಧಾಕೃಷ್ಣನ್ಕರ್ನಾಟಕ ಐತಿಹಾಸಿಕ ಸ್ಥಳಗಳುಐತಿಹಾಸಿಕ ನಾಟಕಜನಪದ ಕ್ರೀಡೆಗಳುಲೋಕಸಭೆಭಾರತದ ಮುಖ್ಯಮಂತ್ರಿಗಳುತುಳಸಿಚಂದ್ರಶೇಖರ ವೆಂಕಟರಾಮನ್ಶಬರಿಬುದ್ಧಹಂಪೆಅಕ್ಷಾಂಶರವೀಂದ್ರನಾಥ ಠಾಗೋರ್ಜೈಮಿನಿ ಭಾರತಬೀದರ್ವಿಜ್ಞಾನಧರ್ಮ (ಭಾರತೀಯ ಪರಿಕಲ್ಪನೆ)ಮೂರನೇ ಮೈಸೂರು ಯುದ್ಧಚಿತ್ರದುರ್ಗಚಂದ್ರಬಂಡವಾಳಶಾಹಿಯೋಗಹಸ್ತ ಮೈಥುನಇರುವುದೊಂದೇ ಭೂಮಿಭಾರತಭಾರತದಲ್ಲಿ ಪಂಚಾಯತ್ ರಾಜ್ವಂದನಾ ಶಿವಕದಂಬ ಮನೆತನರಾಮ್ ಮೋಹನ್ ರಾಯ್ರಾಣೇಬೆನ್ನೂರುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಪ್ರವಾಸೋದ್ಯಮಚನ್ನವೀರ ಕಣವಿಭಾರತದ ಜನಸಂಖ್ಯೆಯ ಬೆಳವಣಿಗೆ🡆 More