ಕೆ.ವಿ.ಸುಬ್ಬಣ್ಣ

ಕೆ.ವಿ.ಸುಬ್ಬಣ್ಣ (ಫೆಬ್ರವರಿ ೨೦, ೧೯೩೨ - ಜುಲೈ ೧೬, ೨೦೦೫) ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿ.

ಕೆ.ವಿ.ಸುಬ್ಬಣ್ಣ
ಕೆ.ವಿ.ಸುಬ್ಬಣ್ಣ
ಜನನ೨೦ ಫೆಬ್ರವರಿ ೧೯೩೨
ಹೆಗ್ಗೋಡು, ಸಾಗರ, ಕರ್ನಾಟಕ, ಭಾರತ
ಮರಣ೧೬ ಜುಲೈ ೨೦೦೫ (ವರ್ಷ ೭೩)
ಹೆಗ್ಗೋಡು, ಸಾಗರ, ಕರ್ನಾಟಕ, ಭಾರತ
ವೃತ್ತಿನಾಟಕಕಾರ, ರಂಗಭೂಮಿ, ಬರಹಗಾರ
ಪ್ರಕಾರ/ಶೈಲಿಕಾದಂಬರಿ
ಸಾಹಿತ್ಯ ಚಳುವಳಿನವ್ಯ
ಮಕ್ಕಳುಕೆ. ವಿ. ಅಕ್ಷರ

ಜೀವನ

ಕೆ.ವಿ.ಸುಬ್ಬಣ್ಣನವರ(ಕುಂಟಗೋಡು ವಿಭೂತಿ ಸುಬ್ಬಣ್ಣ) ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡು. ೧೯೩೨ ಫೆಬ್ರವರಿ ೨೦ ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ೧೯೪೯ ರಲ್ಲಿ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ)ರಂಗ ಸಂಸ್ಥೆಯನ್ನು ನಿರ್ಮಿಸಿ, ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ೨೦೦೫ ಜುಲೈ ೧೬ ರಂದು ಹೃದಯಾಘಾತದಿಂದ ನಿಧನರಾದರು. ಅಕ್ಷರ ಪ್ರಕಾಶನವನ್ನು ಕೆ.ವಿ.ಸುಬ್ಬಣ್ಣನವರು ಹೆಗ್ಗೋಡಿನಲ್ಲಿ ಸ್ಥಾಪಿಸಿದರು.

ಕೃತಿಗಳು

  • ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು

ನಾಟಕಗಳು

  • ಗಾರ್ಗಿಯ ಕಥೆಗಳು
  • ರಾಜಕೀಯದ ಮಧ್ಯೆ ಬಿಡುವು
  • ಅಭಿಜ್ಞಾನ ಶಾಕುಂತಲ
  • ಸೂಳೆ ಸನ್ಯಾಸಿ

ಸುಬ್ಬಣ್ಣ ನಾಟಕಕಾರ ಮಾತ್ರವಲ್ಲದೆ ಅನುವಾದಕ, ಉತ್ತಮ ವಿಮರ್ಶಕ ಹಾಗೂ ಪ್ರಕಾಶಕ ಕೂಡಾ ಆಗಿದ್ದರು. ಇವರು ಚಲನಚಿತ್ರಕ್ಕೆ ಸಂಬಂಧಿಸಿದಂತೆ ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರು ಸ್ಥಾಪಿಸಿದ ‘ಅಕ್ಷರ ಪ್ರಕಾಶನ’ವೆಂಬ ಸಂಸ್ಥೆಯ ಮೂಲಕ ೫೦೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಂದ ಪ್ರಶಸ್ತಿಗಳು

ಸುಬ್ಬಣ್ಣ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಯಲ್ಲಿ ಕನ್ನಡದ ಸಂದರ್ಭದ ಬಗ್ಗೆ ಅಚ್ಚರಿಗೊಳಿಸುವ ವಿವರಗಳಿವೆ. ಅಲ್ಲಿ ಅವರು ಕನ್ನಡ ಜನಪದದ ಶಕ್ತಿಯ ಕುರಿತು ಬರೆದಿದ್ದಾರೆ. ಇದು ಅತ್ಯಂತ ಮಹತ್ವದ ಕೃತಿ. ಕರ್ನಾಟಕದ ಸಮಾಜವಾದಿ ಚಳವಳಿಯ ಹಿರಿಯ ನಾಯಕ ಶಾಂತವೇರಿ ಗೋಪಾಲ ಗೌಡರ ಪ್ರಭಾವದಿಂದ ಸುಬ್ಬಣ್ಣ ಸಮಾಜವಾದಿ ಸಿದ್ಧಾಂತವನ್ನು ಪ್ರತಿಪಾದಿಸಿದರು.

ಪ್ರತಿ ವರ್ಷ ಅವರು ನಡೆಸುತ್ತಿರುವ "ಸಂಸ್ಕೃತಿ ಶಿಬಿರ"ದಲ್ಲಿ ಎಲ್ಲ ಬಗೆಯ ಚಿಂತನೆಗಳಿಗೆ ವೇದಿಕೆಯನ್ನೊದಗಿಸಿ ಕರ್ನಾಟಕದೆಲ್ಲಡೆಯಿಂದ ಬಂದ ಶಿಬಿರಾರ್ಥಿಗಳಿಗೆ ಸಂಸ್ಕೃತಿಯ ಪರಿಚಯವನ್ನು, ಚಿಂತಕರ ಸಂಪರ್ಕವನ್ನೂ ಮಾಡಿಸಿದ್ದಾರೆ. ಇತರ ಭಾಷೆಗಳ ನಾಟಕಗಳ ಅನುವಾದಗಳನ್ನು ಒಳಗೊಂಡಿರುವ ರಂಗಭೂಮಿಗೆ ಸಂಬಂಧಿಸಿದ ಸಾಹಿತ್ಯವನ್ನು ಕನ್ನಡದಲ್ಲಿ ಪ್ರಕಟಿಸಲು ಅವರು ಅಕ್ಷರ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದರು. ಅವರ ಮಗ ಕೆ.ವಿ.ಅಕ್ಷರ ಕೂಡ ನಾಟಕಕಾರ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಕೆ.ವಿ.ಸುಬ್ಬಣ್ಣ ಜೀವನಕೆ.ವಿ.ಸುಬ್ಬಣ್ಣ ಕೃತಿಗಳುಕೆ.ವಿ.ಸುಬ್ಬಣ್ಣ ಸಂದ ಪ್ರಶಸ್ತಿಗಳುಕೆ.ವಿ.ಸುಬ್ಬಣ್ಣ ಉಲ್ಲೇಖಗಳುಕೆ.ವಿ.ಸುಬ್ಬಣ್ಣ ಬಾಹ್ಯ ಕೊಂಡಿಗಳುಕೆ.ವಿ.ಸುಬ್ಬಣ್ಣಕರ್ನಾಟಕಜುಲೈ ೧೬ಫೆಬ್ರವರಿ ೨೦೧೯೩೨೨೦೦೫

🔥 Trending searches on Wiki ಕನ್ನಡ:

ಎತ್ತಿನಹೊಳೆಯ ತಿರುವು ಯೋಜನೆಯಕ್ಷಗಾನಶಬ್ದಮಣಿದರ್ಪಣಚಿತ್ರಲೇಖಇಸ್ಲಾಂ ಧರ್ಮಕಪ್ಪೆ ಅರಭಟ್ಟಬಾರ್ಲಿಅ.ನ.ಕೃಷ್ಣರಾಯಪಾಲಕ್ಅರ್ಜುನಮಾನವ ಅಸ್ಥಿಪಂಜರಪಂಪಷಟ್ಪದಿಒಡೆಯರ್ವಡ್ಡಾರಾಧನೆಕರ್ನಾಟಕ ಲೋಕಸಭಾ ಚುನಾವಣೆ, 2019ಮೈಸೂರುಕಲ್ಯಾಣ್ಬಳ್ಳಾರಿಭಾರತದ ರಾಷ್ಟ್ರಗೀತೆಉತ್ತರ ಪ್ರದೇಶಛತ್ರಪತಿ ಶಿವಾಜಿಪಶ್ಚಿಮ ಘಟ್ಟಗಳುಶಿವರಾಜ್‍ಕುಮಾರ್ (ನಟ)ಕಾಮಸೂತ್ರಕೃಷ್ಣರಾಜನಗರಟಿಪ್ಪು ಸುಲ್ತಾನ್ಇಮ್ಮಡಿ ಪುಲಿಕೇಶಿಚಂದ್ರಗುಪ್ತ ಮೌರ್ಯತಾಳಗುಂದ ಶಾಸನಅಂಚೆ ವ್ಯವಸ್ಥೆನಾರುಬುಧಕಲಿಯುಗಭಾರತೀಯ ರೈಲ್ವೆನೀನಾದೆ ನಾ (ಕನ್ನಡ ಧಾರಾವಾಹಿ)ಗೋಪಾಲಕೃಷ್ಣ ಅಡಿಗಕುಟುಂಬಸೂರ್ಯವ್ಯೂಹದ ಗ್ರಹಗಳುಅವರ್ಗೀಯ ವ್ಯಂಜನಸರಾಸರಿಸಂಧಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸತ್ಯ (ಕನ್ನಡ ಧಾರಾವಾಹಿ)ಅಂಟುಹರಪ್ಪವೀರಗಾಸೆಗಂಗ (ರಾಜಮನೆತನ)ಮತದಾನಶನಿಕೃಷ್ಣಶಾಂತರಸ ಹೆಂಬೆರಳುಸಂಜಯ್ ಚೌಹಾಣ್ (ಸೈನಿಕ)ಕಲ್ಯಾಣಿಫೇಸ್‌ಬುಕ್‌ಉಪ್ಪಿನ ಸತ್ಯಾಗ್ರಹಕ್ರೈಸ್ತ ಧರ್ಮಗೌತಮ ಬುದ್ಧದಕ್ಷಿಣ ಕನ್ನಡಪುರಂದರದಾಸಇ-ಕಾಮರ್ಸ್ಜವಹರ್ ನವೋದಯ ವಿದ್ಯಾಲಯಕರ್ನಾಟಕದ ಹಬ್ಬಗಳುಸೂರ್ಯ ಗ್ರಹಣರಾಷ್ಟ್ರೀಯತೆಮದುವೆನವಿಲುಕರ್ನಾಟಕವಿಕಿರಣರವೀಂದ್ರನಾಥ ಠಾಗೋರ್ವೀರಪ್ಪನ್ಕೈಗಾರಿಕೆಗಳುಕನ್ನಡದಲ್ಲಿ ಸಣ್ಣ ಕಥೆಗಳುಮಾದರ ಚೆನ್ನಯ್ಯಜಲ ಮಾಲಿನ್ಯಸಮಾಜ ವಿಜ್ಞಾನವಾದಿರಾಜರುಎ.ಎನ್.ಮೂರ್ತಿರಾವ್🡆 More