ಅಗಸ್ತ್ಯ

ಅಗಸ್ತ್ಯ ಸಪ್ತರ್ಷಿಗಳಲ್ಲಿ ಒಬ್ಬನು.

ಪ್ರಜಾಪತಿ ಬ್ರಹ್ಮನ ಪುತ್ರ ಮರೀಚಿ. ಈ ಮರೀಚಿಯ ಮಗ ಕಶ್ಯಪ. ಈ ಕಶ್ಯಪರಿಗೆ ಅದಿತಿಯಲ್ಲಿ ಮಿತ್ರಾವರುಣರೆಂಬ ಯಮಳರು ಜನಿಸಿದರು. ಒಮ್ಮೆ ಈ ಮಿತ್ರಾವರುಣರು ಭವ್ಯವಾದ ಯಜ್ಞವೊಂದನ್ನು ಮಾಡಲು ತೊಡಗಿದರು. ಅದಕ್ಕಾಗಿ ಎಲ್ಲ ದೇವತೆಗಳೂ, ಮುನಿಗಳೂ, ಪಿತೃದೇವತೆಗಳೂ ಬಂದು ಸೇರಿದ್ದರು. ಅಲ್ಲಿಗೆ ಅಪ್ಸರೆಯರಲ್ಲಿ ಅತಿ ಲಾವಣ್ಯವತಿಯಾದ ಊರ್ವಶಿಯು ಬಂದಳು. ದೀಕ್ಷಾಬದ್ಧರಾದ ಮಿತ್ರಾವರುಣರು ಈಊರ್ವಶಿಯನ್ನು ನೋಡಿದರು. ಅವಳನ್ನು ನೋಡುವ ಮಾತ್ರದಿಂದಲೇ ಅವರ ಮನಸ್ಸಿನಲ್ಲಿ ವಿಕಾರವುಂಟಾಯಿತು. ಕಠೋರವಾದ ನಿಷ್ಠೆಯಿಂದ ಆಚರಿಸಿದ ಅವರ ಬ್ರಹ್ಮಚರ್ಯ ಸಡಿಲಗೊಂಡಿತು. ಅವರಿಬ್ಬರಿಗೂ ವೀರ್ಯಸ್ಖಲನವಾಯಿತು. ಅದನ್ನು ಕುಂಭವೊಂದರಲ್ಲಿ ರಕ್ಷಿಸಿದರು. ಅದರಿಂದ ಎರಡು ಶಿಶುಗಳು ಹುಟ್ಟಿಬಂದವು. ಹಾಗೆ ಹುಟ್ಟಿದ ಮೊದಲ ಶಿಶುವೇ ಅಗಸ್ತ್ಯ. ಆದ್ದರಿಂದಲೇ ಇವರು ಕುಂಭಸಂಭವ. ಅಗಸ್ತ್ಯ ಮಹರ್ಷಿ ವಾತಾಪಿಯನ್ನು ಜೀರ್ಣಿಸಿಕೊಂಡವರು. ಇವರು ವಿಂಧ್ಯಪರ್ವತದ ಸೊಕ್ಕನ್ನು ಮುರಿದವರು. ಈ ಮಹರ್ಷಿಗಳು ಒಮ್ಮೆ ಇಡೀ ಸಮುದ್ರವನ್ನು ಕುಡಿದರು. ಶ್ರೀ ರಾಮ ರಾವಣನೊಂದಿಗೆ ಯುದ್ಧ ಮಾಡುತ್ತಿರುವಾಗ ಅಲ್ಲಿಗೆ ಅಗಸ್ತ್ಯ ಮಹರ್ಷಿ ಬಂದು ಶ್ರೀರಾಮನಿಗೆ ಆದಿತ್ಯ ಹೃದಯ ಸ್ತೋತ್ರವನ್ನು ಉಪದೇಶ ಮಾಡಿದರು.

Agastya/Agasthiyar
ಅಗಸ್ತ್ಯ
ಅಗಸ್ತ್ಯ ಮುನಿಯ ವಿಗ್ರಹ.
ಸಂಸ್ಕೃತ ಲಿಪ್ಯಂತರಣAgastya
Tamilஅகத்தியர்
ಸಂಲಗ್ನತೆಋಷಿ (sage), ಸಪ್ತರ್ಷಿ (seven sages)
ಸಂಗಾತಿಲೋಪಾಮುದ್ರ

ಖಗೋಳ ಶಾಸ್ತ್ರದಲ್ಲಿ

ಮಹಾವ್ಯಾಧ (ಒರೈಯನ್) ನಕ್ಷತ್ರಪುಂಜದ ಪೂರ್ವ-ದಕ್ಷಿಣಕ್ಕೆ ಇರುವ ಲುಬ್ಧಕದ (ಸಿರಿಯಸ್) ದಕ್ಷಿಣದಲ್ಲಿರುವ ಸಮಾನಪ್ರಕಾಶದ ನಕ್ಷತ್ರವೇ ಅಗಸ್ತ್ಯ (ಕ್ಯಾನೊಪಸ್). ಇದು ಕರಿನಾ ಪುಂಜದ ಪ್ರಥಮ ನಕ್ಷತ್ರ. ಭೂಮಿಯಿಂದ ಇದರ ದೂರ 65೦ ಜ್ಯೋತಿರ್ವರ್ಷಗಳು. ಇದರ ಪ್ರಕಾಶ ಸೂರ್ಯಪ್ರಕಾಶದ ಸುಮಾರು 1,೦೦,೦೦೦ದಷ್ಟು. ಕಾಣುವ ಅತಿ ಪ್ರಕಾಶಮಾನ ನಕ್ಷತ್ರಗಳಲ್ಲಿ ಇದು ಎರಡನೆಯದು.

ತಮಿಳು ಸಾಹಿತ್ಯದಲ್ಲಿ

ತಮಿಳು ನಾಡಿನ ಪೊದಿಯಲ್ ಬೆಟ್ಟದಲ್ಲಿ ನೆಲೆಸಿ ತಮಿಳುಭಾಷೆಗೆ ಜನ್ಮವಿತ್ತನೆಂದೂ ಅಗತ್ತಿಯಂ ಎಂಬ ಪ್ರಥಮ ತಮಿಳುವ್ಯಾಕರಣವನ್ನು ಬರೆದನೆಂದೂ ತಮಿಳು ಪ್ರಥಮ ಸಾಹಿತ್ಯ ಸಂಘದ ಅಧ್ಯಕ್ಷನಾಗಿದ್ದನೆಂದೂ ತಮಿಳು ಸಾಹಿತ್ಯದಲ್ಲಿ ವರ್ಣಿತವಾಗಿದೆ.

ಉಲ್ಲೇಖಗಳು

Tags:

ಕಶ್ಯಪಬ್ರಹ್ಮಚರ್ಯ

🔥 Trending searches on Wiki ಕನ್ನಡ:

ಮದಕರಿ ನಾಯಕಪ್ರೇಮಾಇಸ್ಲಾಂ ಧರ್ಮಹರಪ್ಪಸುದೀಪ್ಕೊರೋನಾವೈರಸ್ ಕಾಯಿಲೆ ೨೦೧೯ಇಂದಿರಾ ಗಾಂಧಿದ್ವಿರುಕ್ತಿಮೂರನೇ ಮೈಸೂರು ಯುದ್ಧದಯಾನಂದ ಸರಸ್ವತಿತ್ರಿಪದಿಉತ್ತರ (ಮಹಾಭಾರತ)ಕನ್ನಡ ರಂಗಭೂಮಿದ್ರವ್ಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬಾಲ್ಯ ವಿವಾಹಕೆ.ವಿ.ಸುಬ್ಬಣ್ಣವಾಣಿವಿಲಾಸಸಾಗರ ಜಲಾಶಯಮಲೈ ಮಹದೇಶ್ವರ ಬೆಟ್ಟಶಾಂತಕವಿವ್ಯವಹಾರಹುಯಿಲಗೋಳ ನಾರಾಯಣರಾಯಭಾರತದಲ್ಲಿನ ಜಾತಿ ಪದ್ದತಿರಗಳೆಜಾನಪದಕನ್ನಡ ರಾಜ್ಯೋತ್ಸವಪರಮಾಣುನಿಜಗುಣ ಶಿವಯೋಗಿನಾಟಕಪುಟ್ಟರಾಜ ಗವಾಯಿವಿಜ್ಞಾನಶಾತವಾಹನರುಸಂವತ್ಸರಗಳುಹೊಯ್ಸಳಗೌತಮಿಪುತ್ರ ಶಾತಕರ್ಣಿಕವಿಗಳ ಕಾವ್ಯನಾಮಸುಧಾ ಮೂರ್ತಿಊಳಿಗಮಾನ ಪದ್ಧತಿಬಸವೇಶ್ವರಕೆರೆಗೆ ಹಾರ ಕಥನಗೀತೆಏಡ್ಸ್ ರೋಗಸವರ್ಣದೀರ್ಘ ಸಂಧಿಓಂ (ಚಲನಚಿತ್ರ)ನಾಗವರ್ಮ-೧ಕ್ರಿಯಾಪದ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆದಲಿತಸೂಕ್ಷ್ಮ ಅರ್ಥಶಾಸ್ತ್ರಪೊನ್ನನೆಲ್ಸನ್ ಮಂಡೇಲಾಸೂರ್ಯದ್ರವ್ಯ ಸ್ಥಿತಿಪರಿಸರ ವ್ಯವಸ್ಥೆಪುನೀತ್ ರಾಜ್‍ಕುಮಾರ್ಜೈನ ಧರ್ಮಅರ್ಥಶಾಸ್ತ್ರಅಸಹಕಾರ ಚಳುವಳಿಸ್ವಾಮಿ ವಿವೇಕಾನಂದಪ್ರಬಂಧಭಾರತ ಸಂವಿಧಾನದ ಪೀಠಿಕೆವಿಕಿಭೂಮಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಹಲ್ಮಿಡಿವರ್ಗೀಯ ವ್ಯಂಜನಪಿ.ಲಂಕೇಶ್ಖೊ ಖೋ ಆಟಹಳೇಬೀಡುದರ್ಶನ್ ತೂಗುದೀಪ್ಕೊರೋನಾವೈರಸ್ಸನ್ನತಿತಿಂಥಿಣಿ ಮೌನೇಶ್ವರಕಾಗೆಜಿ.ಪಿ.ರಾಜರತ್ನಂಬ್ಯಾಬಿಲೋನ್ಅಂತರಜಾಲಶಾಸಕಾಂಗಬೆಸಗರಹಳ್ಳಿ ರಾಮಣ್ಣಕರ್ನಾಟಕ ಪೊಲೀಸ್🡆 More