ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ (ಹಿಂದಿ:अक्षय कुमार; 1967 ರ ಸೆಪ್ಟೆಂಬರ್ 9 ರಂದು ಜನಿಸಿದ ರಾಜೀವ್ ಹರಿ ಓಮ್ ಭಾಟಿಯಾ ) ಇವರು ಭಾರತೀಯ ಚಲನಚಿತ್ರ ನಟರಾಗಿದ್ದಾರೆ.

ಮತ್ತು ಇವರು 100 ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1990 ರ ದಶಕದಲ್ಲಿ, ಅಕ್ಷಯ್ ಕುಮಾರ್ ಅವರು ಮುಖ್ಯವಾಗಿ ಖಿಲಾಡಿ (1992), ಮೊಹ್ರಾ (1994), ಸಬಸೆ ಬಡಾ ಖಿಲಾಡಿ (1995) ಮತ್ತು ಖಿಲಾಡಿಯೋಂಕಾ ಖಿಲಾಡಿ (1996) ನಂತಹ ಚಿತ್ರಗಳಲ್ಲಿ ನಟಿಸುವ ಮೂಲಕ ಸಾಮಾನ್ಯವಾಗಿ "ಖಿಲಾಡಿ ಸರಣಿಗಳು" ಎಂದು ಕರೆಯಲಾಗುವ ಚಲನಚಿತ್ರಗಳಲ್ಲಿನ ತಮ್ಮ ನಟನೆಗೆ ಹೆಸರುವಾಸಿಯಾಗಿದ್ದರು. ಇವರು ಯೇಹ್ ದಿಲ್ಲಗಿ (1994) ಮತ್ತು ಧಡ್ಕನ್ ನಂತಹ ಪ್ರಣಯಭರಿತ ಚಿತ್ರಗಳಲ್ಲಿ ಹಾಗೂ ಏಕ್ ರಿಶ್ತಾ (2001)ನಂತಹ ಅಭಿನಯಾತ್ಮಕ ಚಿತ್ರಗಳಲ್ಲಿ ನಟಿಸಿದ್ದಾರೆ. ಹೇರಾ ಫೇರಿ (2000), ಮುಜಸೆ ಶಾದಿ ಕರೋಗಿ (2004), ಗರಂ ಮಸಾಲಾ (2005) ಮತ್ತು Waqt: The Race Against Time (2005) ನಂತಹ ಹಾಸ್ಯ ಚಿತ್ರಗಳಲ್ಲಿನ ಇವರ ಅಭಿನಯವು ಪ್ರಶಂಸೆಗೆ ಪಾತ್ರವಾಯಿತು. 2007 ರಲ್ಲಿ ಇವರು ನಾಲ್ಕು ಸತತ ಕಮರ್ಶಿಯಲ್ ಹಿಟ್ ಚಿತ್ರಗಳನ್ನು ನೀಡಿದಾಗ ಇವರ ಯಶಸ್ಸು ಇನ್ನಷ್ಟು ಉತ್ತುಂಗಕ್ಕೇರಿತು. 2008 ರಲ್ಲಿ, ಕೆನಡಾದ ಒಂಟಾರಿಯೋನಲ್ಲಿನ ವಿಂಡ್ಸರ್ ವಿಶ್ವವಿದ್ಯಾನಿಲಯವು ಅಕ್ಷಯ್ ಕುಮಾರ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕಾನೂನು ಗೌರವ ಡಾಕ್ಟರೇಟ್ ಅನ್ನು ಪ್ರದಾನ ಮಾಡಿತು. 2009 ರಲ್ಲಿ, ಇವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಈ ಮೂಲಕ ಇವರು ಹಿಂದಿ ಚಿತ್ರರಂಗದಲ್ಲಿ ಪ್ರಮುಖ ನಟರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. 2009 ರಲ್ಲಿ, ಕುಮಾರ್ ಅವರು ಹರಿ ಓ ಎಂಟರ್‌ಟೈನ್‌ಮೆಂಟ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು.

Akshay Kumar
ಅಕ್ಷಯ್ ಕುಮಾರ್
Akshay Kumar in 2009
Born
Rajiv Hari Om Bhatia

(1967-09-09) ೯ ಸೆಪ್ಟೆಂಬರ್ ೧೯೬೭ (ವಯಸ್ಸು ೫೬)
ಅಮೃತಸರ, ಪಂಜಾಬ್, ಭಾರತ
OccupationFilm actor
Years active1991–present
SpouseTwinkle Khanna (2001–present)

ಆರಂಭಿಕ ಜೀವನ

ಅಕ್ಷಯ್ ಕುಮಾರ್ ಅವರು ಪಂಜಾಬ್ಅಮೃತಸರದಲ್ಲಿ ಪಂಜಾಬೀ ಕುಟುಂಬವೊಂದರಲ್ಲಿ ಜನಿಸಿದರು. ಇವರ ತಂದೆಯವರು ಸರ್ಕಾರಿ ಉದ್ಯೋಗಿಯಾಗಿದ್ದರು. ಬಾಲ್ಯದಿಂದಲೇ ಇವರು ನಟನೆಯಲ್ಲಿ ಅದರಲ್ಲೂ ಮುಖ್ಯವಾಗಿ ನೃತ್ಯಪಟುವಾಗಿ ಗುರುತಿಸಲ್ಪಟ್ಟರು. ಕುಮಾರ್ ಅವರು ಮುಂಬೈಯಲ್ಲಿ ನೆಲೆಸುವ ಮುನ್ನ ದೆಹಲಿಯ ಚಾಂದನಿ ಚೌಕ್ನಲ್ಲಿ ಜೀವನವನ್ನು ಕಳೆದರು. ಮುಂಬಯಿಯಲ್ಲಿ ಅವರು ಪಂಜಾಬೀ ಪ್ರಾಬಲ್ಯದ ಪ್ರದೇಶವಾದ ಕೋಳಿವಾಡದಲ್ಲಿ ಜೀವನವನ್ನು ಸಾಗಿಸಿದರು. ಇವರು ಡಾನ್ ಬಾಸ್ಕೋ ಶಾಲೆಯಲ್ಲಿ ತದನಂತರ ಗುರು ನಾನಕ್ ಖಾಲ್ಸಾ ಕಾಲೇಜ್ (ಕಿಂಗ್ಸ್ ಸರ್ಕಲ್)ನಲ್ಲಿ ಅಧ್ಯಯನ ಮಾಡಿದರು ಮತ್ತು ಅಲ್ಲಿ ಅವರು ಜನಪಾಲ್ ಸಿಂಗ್ ಅವರೊಂದಿಗೆ ಕ್ರೀಡೆಯಲ್ಲೂ ಭಾಗವಹಿಸಿದರು. ಇವರು ಬ್ಯಾಂಕಾಕ್ನಲ್ಲಿ ಕದನ ಕಲೆಯನ್ನು ಅಭ್ಯಾಸ ಮಾಡಿದರು ಮತ್ತು ಬಾಣಸಿಗರಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ಅವರು ಮುಂಬಯಿಗೆ ಮರಳಿದರು ಮತ್ತು ಕದನ ಕಲೆಯ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದರು. ಅವರ ವಿದ್ಯಾರ್ಥಿಗಳಲ್ಲೊಬ್ಬರು ಫೋಟೋಗ್ರಾಫರ್ ಆಗಿದ್ದರು ಮತ್ತು ಅವರು ಮಾಡೆಲಿಂಗ್ ವೃತ್ತಿಯನ್ನು ಕೈಗೊಳ್ಳಲು ಇವರಿಗೆ ಶಿಫಾರಸು ಮಾಡಿದರು. ಆ ವಿದ್ಯಾರ್ಥಿಯು ಇವರಿಗೆ ಸಣ್ಣ ಕಂಪನಿಯೊಂದರಲ್ಲಿ ಮಾಡಲಿಂಗ್ ಕಾರ್ಯವನ್ನು ನೀಡಿದರು. ಅವರ ಹಿಂದಿನ ತಿಂಗಳ ಸಂಬಳವಾದ ರೂ 4000 ಗೆ ಹೋಲಿಸಿದರೆ ಈ ಕ್ಯಾಮೆರಾದೆದುರಿಗಿನ ಎರಡು ಗಂಟೆಗಳ ಕಾರ್ಯಕ್ಕೆ ಕುಮಾರ್ ಅವರು 5000 ರೂಪಾಯಿಗಳನ್ನು ಗಳಿಸಿದರು. ಇದು ಅವರು ಮಾಡೆಲ್ ಆಗುವ ಆಯ್ಕೆಯನ್ನು ಕೈಗೊಳ್ಳಲು ಪ್ರಮುಖ ಕಾರಣವಾಗಿತ್ತು. ಹಲವು ತಿಂಗಳ ಮಾಡಲಿಂಗ್‌ ಬಳಿಕ ನಿರ್ಮಾಪಕರಾದ ಪ್ರಮೋದ ಚಕ್ರವರ್ತಿಯವರು ಕುಮಾರ್ ಅವರಿಗೆ ದೀದಾರ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡಿದರು.

ವೃತ್ತಿಜೀವನ

1990 ರ ದಶಕ

ಕುಮಾರ್ ಅವರು 1991 ರ ಸೌಗಂಧ್ ಚಲನಚಿತ್ರದ ಮೂಲಕ ಬಾಲಿವುಡ್ ನಟನೆಗೆ ಪಾದಾರ್ಪಣೆಯನ್ನು ಮಾಡಿದರು ಮತ್ತು ಇದರ ನಂತರ 1992 ರಲ್ಲಿ ಥ್ರಿಲ್ಲರ್ ಚಲನಚಿತ್ರ ಖಿಲಾಡಿ ಯಲ್ಲಿ ನಟಿಸಿದರು. 1994 ರಲ್ಲಿ ಅವರ ಆಕ್ಷನ್ ಚಿತ್ರಗಳಾದ ಮೈ ಖಿಲಾಡಿ ತೂ ಅನಾರಿ ಮತ್ತು ಮೊಹ್ರಾ ಚಿತ್ರಗಳು ಬಿಡುಗಡೆಯಾದವು ಮತ್ತು ಅವುಗಳು ವರ್ಷದ ಅತೀ ಹೆಚ್ಚಿನ ಗಳಿಕೆಯ ಚಲನಚಿತ್ರಗಳಾದವು. ಆ ವರ್ಷದ ನಂತರದಲ್ಲಿ ಯಶ್ ಚೋಪ್ರಾರವರು ತಮ್ಮ ಯೆಹ್ ದಿಲ್ಲಗಿ ರೊಮ್ಯಾಂಟಿಕ್ ಚಿತ್ರಕ್ಕೆ ಅಕ್ಷಯ್ ಕುಮಾರ್ ಅವರನ್ನು ಆಯ್ಕೆ ಮಾಡಿದರು ಮತ್ತು ಇದೂ ಸಹ ಯಶಸ್ವಿ ಚಲನಚಿತ್ರವಾಯಿತು. ತಮ್ಮ ಆಕ್ಷನ್ ಪಾತ್ರಗಳಿಗೆ ಹೋಲಿಸಿದರೆ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್‌ರವರು ವಿಭಿನ್ನವಾದ ರೊಮ್ಯಾಂಟಿಕ್ ಪಾತ್ರದಲ್ಲಿ ಅಭಿನಯಿಸಿದರು ಮತ್ತು ಇದರಲ್ಲಿ ಅವರ ನಟನೆಯು ಪ್ರಶಂಸೆಗೆ ಪಾತ್ರವಾಯಿತು. ತನ್ಮೂಲಕ ಅವರು ಫಿಲ್ಮ್‌ಫೇರ್ ಮತ್ತು ಸ್ಟಾರ್ ಸ್ಕ್ರೀನ್ ಸಮಾರಂಭಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗಾಗಿ ಮೊದಲ ಬಾರಿಗೆ ನಾಮಾಂಕಿತರಾದರು. ಇದೇ ವರ್ಷದಲ್ಲಿ, ಕುಮಾರ್ ಅವರು ಸುಹಾಗ್ ಮತ್ತು ಕಡಿಮೆ ವೆಚ್ಚದ ಎಲಾನ್ ನಂತಹ ಚಲನಚಿತ್ರಗಳಲ್ಲೂ ಸಹ ಯಶಸ್ಸನ್ನು ಗಳಿಸಿದರು. ಈ ಎಲ್ಲಾ ಸಾಧನೆಗಳು ಅಕ್ಷಯ್ ಕುಮಾರ್ ಅವರನ್ನು ವರ್ಷದ ಅತೀ ಯಶಸ್ವಿ ನಟರಲ್ಲೊಬ್ಬರಾಗಿ ಬಡ್ತಿ ನೀಡಿತು. 1995 ರಲ್ಲಿ, ಸೋತ ಚಲನಚಿತ್ರಗಳಲ್ಲಿ ತಮ್ಮ ಪಾಲಿನೊಂದಿಗೆ, ಅವರು ತಮ್ಮ ಖಿಲಾಡಿ ಸರಣಿಯ ಮೂರನೇ ಚಲನಚಿತ್ರವಾದ ಸಬಸೆ ಬಡಾ ಖಿಲಾಡಿ ಯಲ್ಲಿ ನಟಿಸಿದರು ಮತ್ತು ಅದು ಯಶಸ್ವಿಯಾಯಿತು. ಇವರು ಮುಂದಿನ ವರ್ಷಖಿಲಾಡಿ ಶೀರ್ಷಿಕೆಯ ನಾಲ್ಕನೇ ಯಶಸ್ವಿ ಚಲನಚಿತ್ರವಾದ ಖಿಲಾಡಿಯೋಂಕ ಖಿಲಾಡಿ ಚಿತ್ರದಲ್ಲಿ ರೇಖಾ ಮತ್ತು ರವೀನ ಟಂಡನ್ ಅವರ ಎದುರು ನಟಿಸಿ ಖಿಲಾಡಿ ಸರಣಿಯ ಚಲನಚಿತ್ರಗಳೊಂದಿಗೆ ಯಶಸ್ವಿ ಎಂಬುದನ್ನು ಸಾಬೀತು ಪಡಿಸಿದರು. ಈ ಚಿತ್ರವು ವರ್ಷದ ಅತೀ ಹೆಚ್ಚಿನ ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಯಿತು. 1997 ರಲ್ಲಿ, ಅಕ್ಷಯ್ ಕುಮಾರ್ ಅವರು ಯಶ್ ಚೋಪ್ರಾರವರ ಹಿಟ್ ಚಿತ್ರವಾದ ದಿಲ್ ತೋ ಪಾಗಲ್ ಹೈ ಚಿತ್ರದಲ್ಲಿ ಪೋಷಕ ನಟನ ಪಾತ್ರದಲ್ಲಿ ಕಾಣಿಸಿಕೊಂಡರು ಮತ್ತು ಈ ನಟನೆಗಾಗಿ ಅವರು ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮಾಂಕಿತರಾದರು. ಅದೇ ವರ್ಷದಲ್ಲಿ ಅವರು ಖಿಲಾಡಿ ಸರಣಿಯ ಐದನೇ ಚಿತ್ರವಾದ ಮಿಸ್ಟರ್ ಮತ್ತು ಮಿಸ್ಟರ್ಸ್ ಖಿಲಾಡಿ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ಖಿಲಾಡಿ ಶೀರ್ಷಿಕೆಯ ಹಿಂದಿನ ಚಲನಚಿತ್ರಗಳಿಗೆ ವಿರುದ್ಧವಾಗಿ ಈ ಚಿತ್ರವು ಪ್ರೇಕ್ಷಕರನ್ನು ಗೆಲ್ಲುವಲ್ಲಿ ವಿಫಲವಾಗಿ ಸೋಲು ಕಂಡಿತು. ಈ ಚಲನಚಿತ್ರದಂತೆಯೇ ಮುಂದಿನ ವರ್ಷಗಳಲ್ಲಿ ಅವರ ಮುಂದಿನ ಖಿಲಾಡಿ ಬಿಡುಗಡೆಗಳು ಗಲ್ಲಾ ಪೆಟ್ಟಿಗೆಯಲ್ಲಿ ಸೋಲನ್ನು ಕಂಡವು. 1999 ರಲ್ಲಿ, ಅಕ್ಷಯ್ ಕುಮಾರ್ ಅವರು ಸಂಘರ್ಷ್ ಮತ್ತು ಜಾನ್ವರ್ ಚಿತ್ರಗಳಲ್ಲಿನ ತಮ್ಮ ನಟನೆಗಾಗಿ ಪ್ರಶಂಸೆಯನ್ನು ಪಡೆದರು. ಪ್ರಥಮ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಲಾಭವನ್ನು ತಂದುಕೊಡದಿದ್ದರೂ, ದ್ವಿತೀಯ ಚಿತ್ರವು ಯಶಸ್ವಿ ಚಿತ್ರವಾಯಿತು.

2000 ರ ದಶಕ

ಅಕ್ಷಯ್ ಕುಮಾರ್ 
ಹೇ ಬೇಬಿ ಸೆಟ್‌ನಲ್ಲಿ ಅಕ್ಷಯ್ ಕುಮಾರ್

2000 ರಲ್ಲಿ ಅವರು ಹೇರಾ ಫೇರಿ (2000) ಎಂಬ ಹಾಸ್ಯ ಚಿತ್ರದಲ್ಲಿ ನಟಿಸಿದರು ಮತ್ತು ಇದು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಹಾಗೆಯೇ ಅವರು ಇದೇ ವರ್ಷದ ನಂತರದ ದಿನದಲ್ಲಿ ಧಡ್ಕನ್ ಎಂಬ ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸಿದರು ಮತ್ತು ಇದು ಗಲ್ಲಾ ಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸನ್ನು ಕಂಡಿತು. 2001 ರಲ್ಲಿ, ಕುಮಾರ್ ಅವರು ಅಜನಬಿ ಎಂಬ ಚಲನಚಿತ್ರದಲ್ಲಿ ನಕಾರಾತ್ಮಕ ಪಾತ್ರದಲ್ಲಿ ನಟನೆಯನ್ನು ಮಾಡಿದರು. ಈ ಚಿತ್ರವು ಅವರಿಗೆ ಪ್ರಶಂಸೆಯನ್ನು ಗಳಿಸಿಕೊಟ್ಟಿತಲ್ಲದೇ ಅತ್ಯುತ್ತಮ ಖಳನಾಯಕ ವರ್ಗದಲ್ಲಿ ಅವರಿಗೆ ಪ್ರಥಮ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಸಹ ತಂದುಕೊಟ್ಟಿತು. ಅಕ್ಷಯ್ ಕುಮಾರ್ ಅವರು ಆಂಕೇನ್ ಚಿತ್ರದಲ್ಲಿ ಕುರುಡ ವ್ಯಕ್ತಿಯ ಪಾತ್ರವೊಂದರಲ್ಲಿ ನಟಿಸಿದರು. ಹೇರಾ ಫೇರಿ ಯ ಬಳಿಕ ಅಕ್ಷಯ್ ಕುಮಾರ್ ಅವರು ಅವಾರಾ ಪಾಗಲ್ ದೀವಾನಾ (2002) ಮತ್ತು ಮುಜಸೆ ಶಾದಿ ಕರೋಗಿ (2004). ಮತ್ತು ಗರಮ್ ಮಸಾಲಾ (2005) ಚಲನಚಿತ್ರಗಳನ್ನು ಒಳಗೊಂಡು ಹಲವಾರು ಹಾಸ್ಯ ಚಿತ್ರಗಳಲ್ಲಿ ನಟಿಸಿದರು. ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡವು ಅವರು ಅವರ ಎರಡನೆಯ ಚಿತ್ರದಲ್ಲಿನ ಅವರ ನಟನೆಯು ಅವರಿಗೆ ಅತ್ಯುತ್ತಮ ಹಾಸ್ಯನಟ ವಿಭಾಗದಲ್ಲಿ ಎರಡನೆಯ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು. ಇವರ ಆಕ್ಷನ್, ಹಾಸ್ಯ ಮತ್ತು ರೊಮ್ಯಾಂಟಿಕ್ ಪಾತ್ರಗಳನ್ನು ಹೊರತುಪಡಿಸಿ, ಕುಮಾರ್ ಅವರು ಏಕ್ ರಿಶ್ತಾ (2001), ಆಂಕೇನ್ (2002), ಬೇವಫಾ (2005) ಮತ್ತು Waqt: The Race Against Time (2005) ನಂತಹ ಚಲನಚಿತ್ರಗಳಲ್ಲಿ ಮನಮುಟ್ಟುವ ಪಾತ್ರಗಳಲ್ಲೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. 2006 ರಲ್ಲಿ ಅವರು ಹೇರಾ ಫೇರಿ ಚಿತ್ರದ ಸರಣಿಯ ಮುಂದಿನ ಚಿತ್ರ ಫಿರ್ ಹೇರಾ ಫೇರಿ ಯಲ್ಲಿ ನಟನೆಯನ್ನು ಮಾಡಿದರು. ಹಿಂದಿನಂತೆಯೇ ಈ ಚಲನಚಿತ್ರವೂ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಗಳಿಸಿತು. ಇದೇ ವರ್ಷದ ಕೊನೆಯಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಅಕ್ಷಯ್ ಕುಮಾರ್ ಅವರು ಸಂಗೀತಭರಿತ ರೊಮ್ಯಾಂಟಿಕ್ ಚಿತ್ರವಾದ ಜಾನ್-ಎ-ಮನ್ ಚಿತ್ರದಲ್ಲಿ ನಟಿಸಿದರು. ಚಿತ್ರವು ಬಹುನಿರೀಕ್ಷಿತ ಬಿಡುಗಡೆಯಾಗಿತ್ತು, ಮತ್ತು ಚಿತ್ರವು ವಿಮರ್ಶಕರಿಂದ ಧನಾತ್ಮಕ ವಿಮರ್ಶೆಯನ್ನು ಗಳಿಸಿದರೂ, ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷಿಸಿದಷ್ಟು ಯಶಸ್ಸನ್ನು ಗಳಿಸಲಿಲ್ಲ. ಚಿತ್ರವು ಹೆಚ್ಚಿನ ಪ್ರದರ್ಶನವನ್ನು ಕಾಣದಿದ್ದರೂ, ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಸಂಕೋಚ ಸ್ವಭಾವದ, ಪ್ರೀತಿಪಾತ್ರ ದಡ್ಡ ವ್ಯಕ್ತಿಯ ಪಾತ್ರವು ಮೆಚ್ಚುಗೆಗೆ ಪಾತ್ರವಾಯಿತು. ಅಕ್ಷಯ್ ಅವರು ಯಶಸ್ವಿ ಹಾಸ್ಯ ಚಿತ್ರ ಭಾಗಮ್ ಭಾಗ್ ನೊಂದಿಗೆ ವರ್ಷವನ್ನು ಕೊನೆಗೊಳಿಸಿದರು. ಇದೇ ವರ್ಷದಲ್ಲಿ ಅವರು ಸಹನಟರಾದ ಸೈಫ್ ಅಲಿ ಖಾನ್, ಪ್ರೀತಿ ಜಿಂಟಾ, ಸುಶ್ಮಿತಾ ಸೇನ್ ಮತ್ತು ಸೆಲಿನಾ ಜೇಟ್ನಿ ಅವರೊಂದಿಗೆ ಹೀಟ್ 2006 ಎಂಬ ವಿಶ್ವ ಪ್ರವಾಸ ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಿದರು. 2007 ವರ್ಷವು ಅಕ್ಷಯ್ ಕುಮಾರ್ ಅವರ ವೃತ್ತಿ ಜಗತ್ತಿನಲ್ಲಿ ಅತೀ ಯಶಸ್ವಿ ವರ್ಷವಾಯಿತು ಮತ್ತು " ನಾಲ್ಕು ಸಂಪೂರ್ಣ ಹಿಟ್ ಚಿತ್ರಗಳು ಮತ್ತು ಯಾವುದೇ ಫ್ಲಾಪ್ ಚಿತ್ರವಿಲ್ಲದೇ ಬಹುಶಃ ಯಾವುದೇ ನಟನ ಅತೀ ಯಶಸ್ವಿ ಅವಧಿ" ಎಂದು ಗಲ್ಲಾ ಪೆಟ್ಟಿಗೆಯ ವಿಶ್ಲೇಷಕರು ವಿವರಿಸಿದರು. ಅವರ ಮೊದಲ ಬಿಡುಗಡೆಯಾದ ನಮಸ್ತೆ ಲಂಡನ್ ಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಅವರ ನಟನೆಯು ಅವರಿಗೆ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಟನೆಗಾಗಿನ ವಿಭಾಗದಲ್ಲಿ ನಾಮಕರಣವನ್ನು ಗಳಿಸಿಕೊಟ್ಟಿತು. ವಿಮರ್ಶಕರಾದ ತರಣ್ ಆದರ್ಶ್ ಅವರು ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ನಟನೆಯ ಬಗ್ಗೆ "ಈ ಚಿತ್ರದಲ್ಲಿನ ಅತ್ಯದ್ಭುತ ಭಾವಪೂರ್ಣ ಅಭಿನಯದಿಂದ ಅವರು ಲಕ್ಷಾಂತರ ಚಿತ್ರರಸಿಕರ ಹೃದಯಗಳನ್ನು ಖಂಡಿತವಾಗಿ ಗೆಲ್ಲುತ್ತಾರೆ" ಎಂದು ಬರೆದರು. ಅವರ ಮುಂದಿನ ಎರಡು ಬಿಡುಗಡೆಗಳಾದ ಹೇ ಬೇಬಿ ಮತ್ತು ಭೂಲ್ ಭುಲಯ್ಯಾ ಚಿತ್ರಗಳೂ ಸಹ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿದವು. ಕುಮಾರ್ ಅವರ ವರ್ಷದ ಕೊನೆಯ ಬಿಡುಗಡೆಯ ವೆಲ್‌ಕಮ್ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಕಂಡಿದ್ದಲ್ಲದೇ ಬ್ಲಾಕ್‌ಬಸ್ಟರ್ ಮಾನ್ಯತೆಯನ್ನು ಪಡೆಯಿತು ಮತ್ತು ಅದು ಅಕ್ಷಯ್ ಕುಮಾರ್ ಅವರ ಸತತ ಐದನೇ ಹಿಟ್ ಚಲನಚಿತ್ರವಾಯಿತು. ಆ ವರ್ಷ ಬಿಡುಗಡೆಯಾದ ಕುಮಾರ್ ಎಲ್ಲಾ ಎಲ್ಲಾ ಚಲನಚಿತ್ರಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಹ ಉತ್ತಮ ಪ್ರದರ್ಶನವನ್ನು ಕಂಡವು. 2008 ರಲ್ಲಿ ಅವರ ಪ್ರಥಮ ಚಿತ್ರವಾದ ತಶಾನ್ ಮೂಲಕ ಅಕ್ಷಯ್ ಕುಮಾರ್ ಅವರು 11 ವರ್ಷಗಳ ಬಳಿಕ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮರಳಿ ನಟನೆಯನ್ನು ಮಾಡಿದರು. ಸಾರ್ವಜನಿಕರಿಂದ ಬಹು ನಿರೀಕ್ಷೆಗೆ ಒಳಗಾದರೂ, ಚಲನಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. ಇವರ ಎರಡನೆಯ ಚಿತ್ರವಾದ ಸಿಂಗ್ ಈಸ್ ಕಿಂಗ್ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಗಳಿಸಿತು ಮತ್ತು ಈ ಹಿಂದೆ ವಿಶ್ವದಾದ್ಯಂತ ಮೊದಲ ವಾರದ ಅತೀ ಹೆಚ್ಚಿನ ಗಳಿಕೆಯಲ್ಲಿ ಓಂ ಶಾಂತಿ ಓಂ ಸ್ಥಾಪಿಸಿದ್ದ ದಾಖಲೆಯನ್ನು ಮುರಿಯಿತು. ಇವರ ಮುಂದಿನ ಚಿತ್ರವು ಜಂಬೋ ಎಂಬ ಅನಿಮೇಟೆಡ್ ಚಿತ್ರವಾಗಿತ್ತು. ಇದೇ ವರ್ಷದಲ್ಲಿ ಅಕ್ಷಯ್ ಕುಮಾರ್ ಅವರು ಫಿಯರ್ ಫ್ಯಾಕ್ಟರ್ – ಖತ್ರೋಂಕೆ ಖಿಲಾಡಿ ಎಂಬ ಯಶಸ್ವಿ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪಾದಾರ್ಪಣೆಯನ್ನು ಮಾಡಿದರು. ಇವರು ನಂತರ 2009 ರಲ್ಲಿ ಪ್ರದರ್ಶನದ ಎರಡನೆಯ ಋತುವನ್ನು ನಿರ್ವಹಿಸಲು ಮರಳಿ ಬಂದರು. 2009 ರಲ್ಲಿ ಕುಮಾರ್ ಅವರು ವಾರ್ನರ್ ಬಾಸ್.-ರೋಹನ್ ಸಿಪ್ಪಿ ನಿರ್ಮಾಣ ಚಾಂದನಿ ಚೌಕ್ ಟು ಚೀನಾ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರೆದುರು ನಟಿಸಿದರು. ನಿಖಿಲ್ ಅಡ್ವಾಣಿ ನಿರ್ದೇಶನದ ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. ಕುಮಾರ್ ಅವರ ಮುಂದಿನ ಬಿಡುಗಡೆಯ ಚಿತ್ರವು 8 x 10 ತಸ್ವೀರ್ ಆಗಿತ್ತು. ನಾಗೇಶ್ ಕುಕನೂರ್ ನಿರ್ದೇಶನದ ಈ ಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. ಇವರ ಮುಂದಿನ ಚಿತ್ರವು ಕಂಬತ್ ಇಷ್ಕ್ ಆಗಿತ್ತು. ಕುಮಾರ್ ಅವರ ಬ್ಲೂ ಚಿತ್ರವು 2009 ರ ಅಕ್ಟೋಬರ್ 16 ರಂದು ಬಿಡುಗಡೆಯಾಯಿತು. ಬ್ಲೂ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಸುಮಾರು 42 ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡಿತು. 2009 ರಲ್ಲಿ ಇವರ ಚಿತ್ರವು ಪ್ರಿಯದರ್ಶನ್ ಅವರ ದೇ ದನ್ ದನ್ ಆಗಿತ್ತು. ಅಕ್ಷಯ್ ಕುಮಾರ್ ಅವರು ನಂತರ 2010 ರಲ್ಲಿ ಸಾಜಿದ್ ಖಾನ್ ನಿರ್ದೇಶಿಸಿದ ಹೌಸ್ ಫುಲ್ ಚಿತ್ರದಲ್ಲಿ ಕಾಣಿಸಿಕೊಂಡರು ಮತ್ತು ಈ ಚಿತ್ರವು ಈವರೆಗಿನ ಪ್ರಥಮ ವಾರದ ಎರಡನೆಯ ಅತೀಹೆಚ್ಚಿನ ಗಳಿಕೆಯನ್ನು ಸಂಪಾದಿಸಿತು. ಕುಮಾರ್ ಅವರ ಮುಂದಿನ ಚಿತ್ರವು ಪ್ರಿಯದರ್ಶನ್ ನಿರ್ದೇಶನದ ಖಟ್ಟಾ ಮೀಟಾ ಆಗಿತ್ತು ಮತ್ತು ಇದು ಸಾಧಾರಣ ಗಳಿಕೆಯನ್ನು ಕಂಡಿತು. ಇವರು ವಿಪುಲ್ ಶಾಹ್ರವರ ಆಕ್ಷನ್ ರೀಪ್ಲೆ ಚಿತ್ರದಲ್ಲೂ ಕಾಣಿಸಿಕೊಂಡರು ಮತ್ತು ಇದು ಗಲ್ಲಾ ಪೆಟ್ಟಿಗೆಯಲ್ಲಿ ವಿಫಲವಾಯಿತು.

ವೈಯಕ್ತಿಕ ಜೀವನ

ಕುಮಾರ್ ಅವರು ಹಲವಾರು ಸಹ ನಟಿಯರೊಂದಿಗೆ ಈ ಮೊದಲು ಪ್ರೇಮ ಪಾಶಕ್ಕೆ ಸಿಲುಕಿದ್ದರು ಮತ್ತು ಅವರಲ್ಲಿ ಶಿಲ್ಪಾ ಶೆಟ್ಟಿ ಮತ್ತು ರವೀನಾ ಟಂಡನ್ ಪ್ರಮುಖರು. ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ದಂಪತಿಗಳ ಪುತ್ರಿಯಾದ ಟ್ವಿಂಕಲ್ ಖನ್ನಾ ಅವರೊಂದಿಗೆ ಎರಡು ಬಾರಿ ನಿಶ್ಚಿತಾರ್ಥಕ್ಕೊಳಗಾದ ಅಕ್ಷಯ್ ಕುಮಾರ್ ನಂತರ 2001 ರ ಜನವರಿ 14 ರಂದು ಅವರನ್ನು ವಿವಾಹವಾದರು. 2002 ರ ಸೆಪ್ಪೆಂಬರ್‌ನಲ್ಲಿ ದಂಪತಿಗಳಿಗೆ ಆರವ್ ಎಂಬ ಮಗನು ಜನಿಸಿದನು. ಲಕ್ಮೆ ಫ್ಯಾಷನ್ ವೀಕ್‌ನಲ್ಲಿ ಖನ್ನಾ ಅವರು ಕುಮಾರ್ ಅವರ ಜೀನ್ಸ್‌ನ ಬಟನ್ ಅನ್ನು ಬಿಚ್ಚಿದ ಘಟನೆಗೆ ಸಂಬಂಧಿಸಿದಂತೆ ಭಾರತದ ದಂಡ ಸಂಹಿತೆಯ 294 ನೇ ಕಾಯ್ದೆಯ ಅಡಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಪತ್ನಿ ಟ್ವಿಂಕಲ್ ಖನ್ನಾ ಅವರ ವಿರುದ್ಧ ಏಪ್ರಿಲ್ 2009 ರಲ್ಲಿ ವಾಕೋಲಾ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದರು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಚಲನಚಿತ್ರಗಳ ಪಟ್ಟಿ

Year (ಚಿತ್ರೀಕರಣ) ಪಾತ್ರ
1991 ಸೌಗಂಧ್ ಶಿವ
1992 ಡ್ಯಾನ್ಸರ್ ರಾಜ
ಮಿಸ್ಟರ್ ಬಾಂಡ್ ಮಿಸ್ಟರ್ ಬಾಂಡ್
ಖಿಲಾಡಿ ರಾಜ್‌ ಮಲ್ಹೋತ್ರಾ
ದೀದಾರ್ ಆನಂದ್ ಮಲ್ಹೋತ್ರಾ
1993 ಅಶಾಂತ್ ವಿಜಯ್
ದಿಲ್‌ ಕಿ ಬಾಝಿ ವಿಜಯ್
ಕಾಯ್ದಾ ಕಾನೂನ್ ದೌಡ್
ವಕ್ತ್‌ ಹಮಾರಾ ಹೈ ವಿಕಾಸ್ ಸಬ್‌ಕುಚ್‌ವಾಲಾ
ಸೈನಿಕ್ ಸೂರಜ್ ದತ್
1994 ಎಲಾನ್ ವಿಶಾಲ್ ಚೌಧರಿ
ಯೆಹ್ ದಿಲ್ಲಗಿ ವಿಜ್ ಸೈಗಲ್ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಜೈ ಕಿಶನ್‌‌ ಜೈ ವರ್ಮಾ/ಕಿಶನ್
ಮೊಹ್ರಾ ಅಮರ್ ಸಕ್ಸೇನಾ
ಮೇ ಖಿಲಾಡಿ ತು ಅನಾರಿ ಕರಣ್ ಜೋಗಳೇಕರ್
ಇಕ್ಕೇ ಪೆ ಇಕ್ಕಾ ರಾಜೀವ್
ಅಮಾನತ್‌‌ ಅಮರ್‌
ಸುಹಾಗ್ ರಾಜ್‌
ನಜರ್ ಕೆ ಸಾಮನೆ ಜೈ ಕುಮಾರ್
ಜಕ್ಮಿ ದಿಲ್ ಜೈದೇವ್ ಆನಂದ್
ಜಾಲಿಮ್ ರವಿ
ಹಮ್ ಹೇ ಬೇಮಿಸಾಲ್ ವಿಜಯ್ ಸಿನ್ಹಾ
1995 ಪಾಂಡವ್ ವಿಜಯ್
ಮೈದಾನ್-ಈ-ಜಂಗ್ ಕರಣ್
ಸಬಸೆ ಬಡಾ ಖಿಲಾಡಿ ವಿಜಯ್ ಕುಮಾರ್/ಲಲ್ಲು
1996 ತು ಚೋರ್ ಮೈ ಸಿಪಾಹಿ ಅಮರ್ ವರ್ಮಾ
ಖಿಲಾಡಿಯೋಂ ಕಾ ಕಿಲಾಡಿ ಅಕ್ಷಯ್ ಮಲ್ಹೋತ್ರಾ
ಸಪೂಟ್ ಪ್ರೇಮ್‌
1997 ಲಾಹೂ ಕೆ ದೋ ರಂಗ್ ಸಿಕಂದರ್ ದವಾಯಿ
Insaaf: The Final Justice ವಿಕ್ರಮ್
ದವಾ ಅರ್ಜುನ್
ತರಾಜು ಇನ್ಸ್‌ಪೆಕ್ಟರ್ ರಾಮ್ ಯಾದವ್
ಮಿಸ್ಟರ್ ಎಂಡ್ ಮಿಸ್ಟರ್ಸ್ ಖಿಲಾಡಿ ರಾಜ
ದಿಲ್‌ ತೊ ಪಾಗಲ್‌ ಹೈ ಅಜಯ್‌ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮಕರಣ
ಅಫ್ಲಾಟೂನ್ ರಾಕಿ/ರಾಜಾ
1998 Keemat: They Are Back ದೇವ್
ಅಂಗಾರೇ ಅಮರ್‌
ಬಾರೂದ್‌‌ ಜೈ ಶರ್ಮಾ
1999 ಆರ್ಜೂ ವಿಜಯ್ ಖನ್ನಾ
ಇಂಟರ್‌ನ್ಯಾಷನಲ್ ಖಿಲಾಡಿ ರಾಹುಲ್ "ದೇವರಾಜ್"
ಜುಲ್ಮಿ ರಾಜ್‌
ಸಂಘರ್ಷ್ ಪ್ರೊಫೆಸರ್ ಅಮಿತ್ ವರ್ಮಾ
ಜಾನ್ವರ್ ಬಾದ್‌ಶಾಹ್/ಬಾಬು ಲೋಹರ್
2000 ಹೇರಾ ಫೇರಿ ರಾಜು
ಧಡ್ಕನ್ ರಾಮ್
ಖಿಲಾಡಿ 420 ದೇವ್ ಕುಮಾರ್/ಆನಂದ್ ಕುಮಾರ್
2001 Ek Rishtaa: The Bond of Love ಅಜಯ್ ಕಪೂರ್
ಅಜ್ನಬೀ ವಿಕ್ರಮ್ ಬಜಾಜ್ ವಿಜೇತ, ಫಿಲ್ಮ್‌ಫೇರ್‌ ಅತ್ಯುತ್ತಮ ಖಳನಾಯಕ ಪ್ರಶಸ್ತಿ,
2002 ಹಾಂ ಮೈನೆ ಭೀ ಪ್ಯಾರ್ ಕಿಯಾ ರಾಜ್‌ ಮಲ್ಹೋತ್ರಾ
ಆಂಖೇ ವಿಶ್ವಾಸ್ ಪ್ರಜಾಪತಿ
ಆವಾರಾ ಪಾಗಲ್ ದೀವಾನಾ ಗುರು ಗುಲಾಬ್ ಖತ್ರಿ
Jaani Dushman: Ek Anokhi Kahani ಅತುಲ್
2003 Talaash: The Hunt Begins... ಅರ್ಜುನ್
ಅಂದಾಜ್‌ ರಾಜ್‌ ಮಲ್ಹೋತ್ರಾ
2004 ಘರ್‌ ಗೃಹಸ್ತಿ ವಿಶೇಷ ಪಾತ್ರ
ಖಾಕೀ ಸೀನಿಯರ್ ಇನ್ಸ್‌ಪೆಕ್ಟರ್ ಶೇಖರ್ ವರ್ಮಾ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮಕರಣ
Police Force: An Inside Story ವಿಜಯ್ ಸಿಂಗ್
Aan: Men at Work ಡಿಸಿಪಿ ಹರಿ ಓಂ ಪಟ್ನಾಯಕ್
ಮೇರಿ ಬೀವಿ ಕಾ ಜವಾಬ್ ಕಹೀಂ ಇನ್ಸ್‌ಪೆಕ್ಟರ್ ವಿಜಯ್
ಮುಝಸೆ ಶಾದೀ ಕರೋಗಿ ಅರುಣ್ "ಸನ್ನಿ" ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮಕರಣ
ಫಿಲ್ಮ್‌ಫೇರ್‌ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಗೆ ನಾಮಕರಣ
Hatya: The Murder ರವಿ
ಐತ್ರಾಜ್‌‌ ರಾಜ್‌ ಮಲ್ಹೋತ್ರಾ
ಅಬ್ ತುಮ್ಹಾರಾ ಹವಾಲಾ ವತನ್ ಸಾಥಿಯೋ ಮೇಜರ್ ರಾಜೀವ್
2005 ಇನ್ಸಾನ್ ಅಮ್ಜದ್
ಬೇವಫಾ ರಾಜ
Waqt: The Race Against Time ಆದಿತ್ಯ ಠಾಕೂರ್
ಗರಂ ಮಸಾಲಾ ಮಕರಂದ್ "ಮ್ಯಾಕ್" ವಿಜೇತ, ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ
ದೀವಾನೆ ಹುಯೇ ಪಾಗಲ್ ರಾಕಿ ಹೀರಾನಂದಾನಿ
Dosti: Friends Forever ರಾಜ್‌ ಮಲ್ಹೋತ್ರಾ
2006 ಫ್ಯಾಮಿಲಿ - ಟೈಸ್ ಆಫ್ ಬ್ಲಡ್ ಶೇಖರ್ ಭಾಟಿಯಾ
ಮೇರೇ ಜೀವನ್ ಸಾಥಿ ವಿಕ್ಕಿ
ಹಮಕೋ ದೀವಾನಾ ಕರ್ ಗಯೇ ಆದಿತ್ಯ ಮಲ್ಹೋತ್ರಾ
ಫಿರ್ ಹೇರಾ ಫೇರಿ ರಾಜು
ಜಾನ್-ಎ-ಮನ್ ಅಗಸ್ತ್ಯ ರಾವ್ "ಚಂಪು"
ಭಾಗಮ್ ಭಾಗ್ ಬಂಟಿ
2007 ನಮಸ್ತೆ ಲಂಡನ್ ಅರ್ಜುನ್ ಸಿಂಗ್ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಹೇ ಬೇಬಿ ಅರುಷ್ ಮೆಹ್ರಾ
ಭೂಲ್ ಭುಲಯ್ಯಾ ಡಾ. ಆದಿತ್ಯ ಶ್ರೀವಾಸ್ತವ
ಓಂ ಶಾಂತಿ ಓಂ ಸ್ವತಃ ಅವರೇ ವಿಶೇಷ ಪಾತ್ರ
ವೆಲ್ ಕಮ್ ರಾಜೀವ್ ಸೈನಿ
2008 ತಶಾನ್ ಬಚ್ಚನ್ ಪಾಂಡೇ
ಸಿಂಗ್ ಈಸ್ ಕಿಂಗ್ ಹ್ಯಾಪಿ ಸಿಂಗ್ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ನಾಮಾಂಕಿತ, ಏಷ್ಯನ್ ಫಿಲ್ಮ್ ಅವಾರ್ಡ್ ಅತ್ಯುತ್ತಮ ನಟ
ಜಂಬೋ ಜಂಬೋ (voice)
ಡೆಲ್ಲಿ-6 ವೀರು ವಿಶೇಷ ಪಾತ್ರ
2009 ಚಾಂದನಿ ಚೌಕ್‌ ಟು ಚೀನಾ ಸಿಧು ಶರ್ಮಾ
8 X 10 ತಸ್ವೀರ್ ಜೈ ಪುರಿ/ಜೀತ್
ಕಂಭಕ್ತ್ ಇಷ್ಕ್ ವಿರಾಜ್ ಶೆರ್ಗಿಲ್
ಬ್ಲೂ ಆರವ್ ಮಲ್ಹೋತ್ರಾ
ದೇ ದನಾ ದನ್ ನಿತಿನ್ ಬ್ಯಾಂಕರ್
2010 ಜಾನೆ ಕಹಾ ಸೆ ಆಯಿ ಹೈ ಸ್ವತಃ ಅವರೇ ವಿಶೇಷ ಪಾತ್ರ
ಹೌಸ್ ಫುಲ್ ಆರುಷ್
ಖಟ್ಟಾ ಮೀಟಾ ಸಚಿನ್ ಟಿಚ್‌ಕುಲೆ
ಆಕ್ಷನ್ ರಿಪ್ಲೆ ಕಿಶನ್
ತೀಸ್ ಮಾರ್ ಖಾನ್ ತಾಬ್ರೆಜ್ ಮಿರ್ಜಾ ಖಾನ್
2011 ಪಟಿಯಾಲಾ ಹೌಸ್ ಗಟ್ಟು ಸಿಂಗ್ ಕಹ್ಲೋನ್ ಫೆಬ್ರವರಿ 11, 2011 ರಂದು ಬಿಡುಗಡೆ
ಥ್ಯಾಂಕ್ ಯೂ ಏಪ್ರಿಲ್ 8 , 2011 ರಂದು ಬಿಡುಗಡೆ
ದೇಸಿ ಬಾಯ್ಸ್ ಚಿತ್ರೀಕರಣಗೊಳ್ಳುತ್ತಿದೆ
2012 ಜೋಕರ್ ನಿರ್ಮಾಣ-ಪೂರ್ವ ಹಂತದಲ್ಲಿ[93]
ಹೌಸ್‌ಫುಲ್ 2 ನಿರ್ಮಾಣ-ಪೂರ್ವ ಹಂತದಲ್ಲಿ[95]

ಇವನ್ನೂ ಗಮನಿಸಿ

  • ಭಾರತೀಯ ನಟರ ಪಟ್ಟಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಅಕ್ಷಯ್ ಕುಮಾರ್ ಆರಂಭಿಕ ಜೀವನಅಕ್ಷಯ್ ಕುಮಾರ್ ವೃತ್ತಿಜೀವನಅಕ್ಷಯ್ ಕುಮಾರ್ ವೈಯಕ್ತಿಕ ಜೀವನಅಕ್ಷಯ್ ಕುಮಾರ್ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಅಕ್ಷಯ್ ಕುಮಾರ್ ಚಲನಚಿತ್ರಗಳ ಪಟ್ಟಿಅಕ್ಷಯ್ ಕುಮಾರ್ ಇವನ್ನೂ ಗಮನಿಸಿಅಕ್ಷಯ್ ಕುಮಾರ್ ಉಲ್ಲೇಖಗಳುಅಕ್ಷಯ್ ಕುಮಾರ್ ಬಾಹ್ಯ ಕೊಂಡಿಗಳುಅಕ್ಷಯ್ ಕುಮಾರ್ಕೆನಡಾಪದ್ಮಶ್ರೀಬಾಲಿವುಡ್ಭಾರತ ಸರ್ಕಾರಭಾರತದ ಚಲನಚಿತ್ರೋದ್ಯಮಹಿಂದಿ ಭಾಷೆ

🔥 Trending searches on Wiki ಕನ್ನಡ:

ಭಾರತದ ರಾಷ್ಟ್ರೀಯ ಉದ್ಯಾನಗಳುಜಿಡ್ಡು ಕೃಷ್ಣಮೂರ್ತಿಯೋಗಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಮಲೆಗಳಲ್ಲಿ ಮದುಮಗಳುಮಾಧ್ಯಮಭಾಮಿನೀ ಷಟ್ಪದಿಜನಪದ ಕಲೆಗಳುಇಮ್ಮಡಿ ಪುಲಿಕೇಶಿಸರ್ವಜ್ಞರಾಯಲ್ ಚಾಲೆಂಜರ್ಸ್ ಬೆಂಗಳೂರುನಾಡ ಗೀತೆಮಾದರ ಚೆನ್ನಯ್ಯಶಿವರಾಮ ಕಾರಂತಭಗತ್ ಸಿಂಗ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುವಾಸ್ತುಶಾಸ್ತ್ರಅಮೇರಿಕ ಸಂಯುಕ್ತ ಸಂಸ್ಥಾನಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಭಾರತದ ಜನಸಂಖ್ಯೆಯ ಬೆಳವಣಿಗೆಸಂಗೊಳ್ಳಿ ರಾಯಣ್ಣಖೊಖೊಧರ್ಮರಾಯ ಸ್ವಾಮಿ ದೇವಸ್ಥಾನಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಗೋಪಾಲಕೃಷ್ಣ ಅಡಿಗಭಾರತದ ರಾಷ್ಟ್ರಪತಿಗಳ ಪಟ್ಟಿಕಂದನೀರುಗಾದೆ ಮಾತುಕರ್ನಾಟಕ ಲೋಕಾಯುಕ್ತತ್ರಿವೇಣಿಹುಲಿಕೃತಕ ಬುದ್ಧಿಮತ್ತೆಭೂತಕೋಲಗ್ರಾಮ ಪಂಚಾಯತಿಚಿಕ್ಕಮಗಳೂರುಅಳತೆ, ತೂಕ, ಎಣಿಕೆಕರ್ನಾಟಕದ ಜಿಲ್ಲೆಗಳುಕಲ್ಲಂಗಡಿಜಶ್ತ್ವ ಸಂಧಿಫುಟ್ ಬಾಲ್ಉತ್ತರ ಪ್ರದೇಶಮಹಾತ್ಮ ಗಾಂಧಿಶಿಶುನಾಳ ಶರೀಫರುಚಾಮರಾಜನಗರಪಂಜೆ ಮಂಗೇಶರಾಯ್ಶಿವಮೊಗ್ಗಭಾರತದ ಸಂವಿಧಾನದ ೩೭೦ನೇ ವಿಧಿಮುದ್ದಣಜ್ಞಾನಪೀಠ ಪ್ರಶಸ್ತಿಕನ್ನಡ ಅಭಿವೃದ್ಧಿ ಪ್ರಾಧಿಕಾರಕುಮಾರವ್ಯಾಸಸೀಮೆ ಹುಣಸೆರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಸಮಾಜ ವಿಜ್ಞಾನಮಲೈ ಮಹದೇಶ್ವರ ಬೆಟ್ಟಮಾನವ ಸಂಪನ್ಮೂಲ ನಿರ್ವಹಣೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸಂವತ್ಸರಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಜರಾಸಂಧ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಮಹಾಭಾರತಯುಗಾದಿಗೌತಮ ಬುದ್ಧತತ್ಪುರುಷ ಸಮಾಸರಾಮ್ ಮೋಹನ್ ರಾಯ್ಕಬ್ಬುಚದುರಂಗದ ನಿಯಮಗಳುಜ್ಯೋತಿಷ ಶಾಸ್ತ್ರಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಜಪಾನ್ಶಿಶುಪಾಲಶಿವರಾಜ್‍ಕುಮಾರ್ (ನಟ)ದಾವಣಗೆರೆನಾರುಕೈವಾರ ತಾತಯ್ಯ ಯೋಗಿನಾರೇಯಣರುಅನುಶ್ರೀ🡆 More