ಅಕಿರಾ ಕುರೋಸಾವಾ: ಜಪಾನ್ ಚಿತ್ರ ನಿರ್ದೇಶಕ

ಅಕಿರಾ ಕುರೋಸಾವಾ (黒澤 明 Kurosawa Akira, ಹಾಗೂ 黒沢 明) (ಮಾರ್ಚ್ ೨೩, ೧೯೧೦ – ಸೆಪ್ಟೆಂಬರ್ ೬, ೧೯೯೮)ಜಪಾನಿನ ಪ್ರಮುಖ ನಿರ್ದೇಶಕ, ನಿರ್ಮಾಪಕ, ಹಾಗೂ ಚಿತ್ರಕಥಾ ಲೇಖಕರಾಗಿದ್ದರು.

ಇವರ ಚಿತ್ರಗಳು ಜಗತ್ತಿನಾದ್ಯಂತ ಪರಿಣಾಮಕಾರಿ ಮತ್ತು ಶ್ರೇಷ್ಠ ಚಿತ್ರಗಳಲ್ಲಿ ಕೆಲವಾಗಿ ಗುರುತಿಸಲಾಗುತ್ತದೆ. ವಿಶ್ವದಾದ್ಯಂತ ಹಲವಾರು ಪ್ರಸಿದ್ಧ ನಿರ್ದೇಶಕರಿಗೆ ಇವರ ಚಿತ್ರಗಳು ಪ್ರೇರಣೆಯಾಗಿವೆ. ೧೯೪೩ರಲ್ಲಿ ತಮ್ಮ ೩೩ನೇ ವಯಸ್ಸಿನಲ್ಲಿ 'ಸಂಶಿರೋ ಸುಗಾತಾ' ಚಿತ್ರದಿಂದ ನಿರ್ದೇಶನ ಪ್ರಾರಂಭಿಸಿದ ಇವರ ಕೊನೆಯ ಚಿತ್ರ 'ಮದದಾಯೋ' ೧೯೯೯ರಲ್ಲಿ (ಮರಣಾನಂತರ) ಹೊರಬಂದದ್ದು. ಪ್ರಾಚೀನ ಜಪಾನ್ ಕುರಿತು ಇವರು ನಿರ್ದೇಶಿಸಿದ ಹಲವು ಚಿತ್ರಗಳು ಇಂದಿಗೂ ಸಹೃದಯಿಗಳ ಮೆಚ್ಚುಗೆ ಪಡೆದಿವೆ. ಅವುಗಳಲ್ಲಿ ದಿ ಸೆವೆನ್ ಸಮುರಾಯ್, ಸಂಜುರೋ, ಕಾಗೆಮುಶಾ ಕೆಲವು.

ಅಕಿರಾ ಕುರೋಸಾವಾ: ಜೀವನ, ಪ್ರೇರಣೆ, ಸ್ಫೂರ್ತಿ
ಅಕಿರಾ ಕುರೋಸಾವಾ

ಜೀವನ

ಮಿಲಿಟರಿ ರಾಜ್ಯಭಾರದ ಜಪಾನ್‌ನಲ್ಲಿ ಬೆಳೆದ ಕುರೋಸಾವಾ, ವಿಶ್ವ ಮಹಾ ಯುದ್ಧ, ಕೆಂಟೋ ಭೂಕಂಪದಿಂದ ತತ್ತರಿಸಿದ ಜಪಾನ್ ನಲ್ಲಿ ತಮ್ಮ ವೃತ್ತಿಯ ಶಿಖರವನ್ನು ತಲುಪಿದವರು, ಕಷ್ಟಕರವಾದ ಕಾಲದಲ್ಲಿ ಛಲದಿಂದ ಮುಂದೆ ಬಂದವರು. ಓದು ಮುಗಿದ ನಂತರ ಹಲವು ದಿನಗಳ ಕಾಲ ಚಿತ್ರ ಕಲಾವಿದನಾಗಿ ದಿನ ಕಳೆದ ಕುರೋಸಾವಾ, ದೃಶ್ಯಕಲೆಯಲ್ಲಿ ಅಪಾರ ಪರಿಣಿತಿಯನ್ನು ಹೊಂದಿದ್ದುದು ಅವರ ಚಿತ್ರಗಳಲ್ಲಿ ಕಂಡುಬರುತ್ತದೆ.

ಪ್ರೇರಣೆ

ಜಾರ್ಜ್ ಲ್ಯೂಕಾಸ್, ಫ್ರಾಂಸಿಸ್ ಫೋರ್ಡ್ ಕೊಪ್ಪಲಾ, ಸ್ಟೀವನ್ ಸ್ಪೀಲ್ಬರ್ಗ್ ಮುಂತಾದ ವಿಶ್ವವಿಖ್ಯಾತ ನಿರ್ದೇಶಕರಿಗೆ ಇವರು ಪ್ರೇರಣೆಯಾಗಿದ್ದರು. ಇದನ್ನೇ ಸೂಚಿಸುವೆಂಬಂತೆ, ೧೯೮೦ರಲ್ಲಿ ಕುರೋಸಾವಾ ಹಲವು ದಿನಗಳ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶಿಸಲು ಬಯಸಿದಾಗ ಜಾರ್ಜ್ ಲ್ಯೂಕಾಸ್, ಫ್ರಾಂಸಿಸ್ ಫೋರ್ಡ್ ಕೊಪ್ಪಲಾರವರು ಜೊತೆಯಾಗಿ ಮುಂದೆ ಬಂದು 'ಕಗೆಮುಶಾ' (ನೇಪಥ್ಯದ ಯೋಧ) ಚಿತ್ರಕ್ಕೆ ಹಣದ ನೆರವು ನೀಡಿದರಂತೆ. ಇವರ ಚಿತ್ರ 'ಸೆವೆನ್ ಸಮುರಾಯ್' ಹಿಂದಿಯ 'ಶೋಲೆ', ಮತ್ತು ಇಂಗ್ಲೀಷಿನ 'ಮ್ಯಾಗ್ನಿಫಿಸಿಯೆಂಟ್ ಸೆವೆನ್' ಚಿತ್ರಗಳಿಗೆ ಸ್ಪೂರ್ತಿಯಾಗಿದೆ.

ಸ್ಫೂರ್ತಿ

ಕುರೊಸಾವಾ, ಪಾಶ್ಚಿಮಾತ್ಯ ಸಾಹಿತ್ಯವನ್ನು ಬಹಳವಾಗಿ ಅಧ್ಯಯನ ಮಾಡಿದವರು. ವಿಲ್ಲಿಯಮ್ ಷೇಕ್‍ಸ್ಪಿಯರ್ ನ ಹಲವು ನಾಟಕಗಳ ಸೊಬಗು ಅಲ್ಲಲ್ಲಿ ಕುರೊಸಾವಾರವರ ಚಿತ್ರಗಳಲ್ಲೂ ಮೂಡಿ ಬರುತ್ತದೆ.

ದಂತ ಕಥೆ

ಕುರೊಸಾವಾರವರಿಗೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಇವರ ಚಿತ್ರ 'ಡೆರ್ಸು ಉಝಾಲಾ' (Dersu Uzala), ಉತ್ತಮ ವಿದೇಶೀ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದಲ್ಲದೆ, ಇವರ ಸಾಧನೆಯನ್ನು ಗುರುತಿಸಲು ಆಸ್ಕರ್ ನ 'ಅಜೀವ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.

ಚಿತ್ರಗಳು

ಇವನ್ನೂ ನೋಡಿ

ಹೊರಗಿನ ಸಂಪರ್ಕಗಳು

Tags:

ಅಕಿರಾ ಕುರೋಸಾವಾ ಜೀವನಅಕಿರಾ ಕುರೋಸಾವಾ ಪ್ರೇರಣೆಅಕಿರಾ ಕುರೋಸಾವಾ ಸ್ಫೂರ್ತಿಅಕಿರಾ ಕುರೋಸಾವಾ ದಂತ ಕಥೆಅಕಿರಾ ಕುರೋಸಾವಾ ಚಿತ್ರಗಳುಅಕಿರಾ ಕುರೋಸಾವಾ ಇವನ್ನೂ ನೋಡಿಅಕಿರಾ ಕುರೋಸಾವಾ ಹೊರಗಿನ ಸಂಪರ್ಕಗಳುಅಕಿರಾ ಕುರೋಸಾವಾಮಾರ್ಚ್ ೨೩ಸೆಪ್ಟೆಂಬರ್ ೬೧೯೧೦೧೯೪೩೧೯೯೮೧೯೯೯

🔥 Trending searches on Wiki ಕನ್ನಡ:

ಪ್ರಜ್ವಲ್ ರೇವಣ್ಣಕರ್ನಾಟಕದಲ್ಲಿ ಪಂಚಾಯತ್ ರಾಜ್ಸಂಸ್ಕಾರಮಾನವನ ವಿಕಾಸವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಬಳ್ಳಾರಿಜಾಗತಿಕ ತಾಪಮಾನ ಏರಿಕೆನೈಸರ್ಗಿಕ ಸಂಪನ್ಮೂಲಸಂಭೋಗಇಮ್ಮಡಿ ಪುಲಿಕೇಶಿಚಾರ್ಲಿ ಚಾಪ್ಲಿನ್ಜಾಹೀರಾತುಮತದಾನ (ಕಾದಂಬರಿ)ಕೇಂದ್ರಾಡಳಿತ ಪ್ರದೇಶಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಆವಕಾಡೊತಂತ್ರಜ್ಞಾನವೀರಗಾಸೆಶಿಕ್ಷಣಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮಹಾಲಕ್ಷ್ಮಿ (ನಟಿ)ಅವತಾರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಹಲ್ಮಿಡಿ ಶಾಸನರಾಷ್ಟ್ರೀಯತೆಕರ್ನಾಟಕದ ಇತಿಹಾಸರಾಷ್ಟ್ರಕೂಟಗಾಳಿ/ವಾಯುಮುಟ್ಟು ನಿಲ್ಲುವಿಕೆತಿರುಪತಿಅಂಬಿಗರ ಚೌಡಯ್ಯಎಸ್.ಎಲ್. ಭೈರಪ್ಪಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಯೋಗ ಮತ್ತು ಅಧ್ಯಾತ್ಮಕನಕದಾಸರುರಾಹುಲ್ ಗಾಂಧಿಗರ್ಭಧಾರಣೆಕೃಷ್ಣದೇವರಾಯಗೋಕಾಕ್ ಚಳುವಳಿಕನ್ನಡ ಜಾನಪದಝಾನ್ಸಿ ರಾಣಿ ಲಕ್ಷ್ಮೀಬಾಯಿಕೈಗಾರಿಕೆಗಳುಶಬರಿಸಾರ್ವಜನಿಕ ಹಣಕಾಸುಕನ್ನಡಪ್ರಭಜಾತ್ಯತೀತತೆಗೂಗಲ್ಕೊಳಲುಸಾರ್ವಜನಿಕ ಆಡಳಿತಶನಿದೇಶಗಳ ವಿಸ್ತೀರ್ಣ ಪಟ್ಟಿಗುಬ್ಬಚ್ಚಿಸಂಯುಕ್ತ ರಾಷ್ಟ್ರ ಸಂಸ್ಥೆಶಬ್ದವೇಧಿ (ಚಲನಚಿತ್ರ)ಕಾಳಿದಾಸಏಡ್ಸ್ ರೋಗಮೆಕ್ಕೆ ಜೋಳಯೇಸು ಕ್ರಿಸ್ತಕಾವೇರಿ ನದಿಫುಟ್ ಬಾಲ್ರಾಷ್ಟ್ರೀಯ ಶಿಕ್ಷಣ ನೀತಿಗುರುಬುಡಕಟ್ಟುವೆಂಕಟೇಶ್ವರ ದೇವಸ್ಥಾನಎಸ್.ನಿಜಲಿಂಗಪ್ಪಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಭಾರತೀಯ ನದಿಗಳ ಪಟ್ಟಿಯೋನಿಸಮಾಸಮಲಬದ್ಧತೆಗುರು (ಗ್ರಹ)ದ.ರಾ.ಬೇಂದ್ರೆಕನ್ನಡ ರಾಜ್ಯೋತ್ಸವಭಾರತದ ಸಂವಿಧಾನದ ೩೭೦ನೇ ವಿಧಿವೈದಿಕ ಯುಗ🡆 More