ಸೈಕಲ್

ಸೈಕಲ್ (ಬೈಸಿಕಲ್ ಎಂದೂ ಕರೆಯಲಾಗುತ್ತದೆ) ಪೆಡಲ್ಲುಗಳನ್ನು ತುಳಿಯುವ ಮೂಲಕ ಚಾಲನೆ ಮಾಡುವ ಮಾನವಚಾಲಿತ ದ್ವಿಚಕ್ರವಾಹನ.

ಸೈಕಲ್
ಒಂದು ಸಾಧಾರಣ ಬೈಸಿಕಲ್

ಸೈಕಲ್ಲುಗಳು ೧೯ ನೆಯ ಶತಮಾನದಲ್ಲಿ ಯೂರೋಪ್ ಖಂಡದಲ್ಲಿ ಮೊದಲು ಬಳಕೆಗೆ ಬಂದವು. ಈಗ ಪ್ರಪಂಚದಲ್ಲಿ ಒಟ್ಟು ೧೦೦ ಕೋಟಿ ಸೈಕಲ್ಲುಗಳಿವೆ ಎಂದು ಅಂದಾಜು ಮಾಡಲಾಗಿದೆ. ಅನೇಕ ಪ್ರದೇಶಗಳಲ್ಲಿ ಸೈಕಲ್ಲುಗಳು ಪ್ರಮುಖವಾದ ಸಂಚಾರ ವಾಹನಗಳು. ಸಂಚಾರವಲ್ಲದೆ ಸೈಕಲ್ಲುಗಳನ್ನು ಮನರಂಜನೆಗಾಗಿ, ವ್ಯಾಯಾಮಕ್ಕಾಗಿ ಸಹ ಉಪಯೋಗಿಸಲಾಗುತ್ತದೆ.

ಸೈಕಲ್ಲುಗಳ ಮೂಲಭೂತ ಆಕಾರ ಮತ್ತು ರಚನೆ ೧೮೮೫ ರಿಂದ ಮುಂದಕ್ಕೆ ಹೆಚ್ಚಾಗಿ ಬದಲಾಗಿಲ್ಲ. ಆದರೆ ಸೈಕಲ್ಲುಗಳನ್ನು ತಯಾರಿಸುವ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಹಾಗೆಯೇ ವಿವಿಧ ಉದ್ದೇಶಗಳಿಗಾಗಿ ವಿಶೇಷ ವಿನ್ಯಾಸದ ಸೈಕಲ್ಲುಗಳ ತಯಾರಿಕೆ ನಡೆಯುತ್ತದೆ.

ಚರಿತ್ರೆ

ಸೈಕಲ್ 
ಸೈಕಲ್ಲುಗಳ ವಿಕಾಸ

ಸೈಕಲ್ಲುಗಳ ಆವಿಷ್ಕರಣಕ್ಕೆ ಮುಂಚೆಯೂ ಮಾನವಚಾಲಿತ ವಾಹನಗಳನ್ನು ನಿರ್ಮಿಸುವತ್ತ ಅನೇಕರು ಕೆಲಸ ಮಾಡಿದ್ದರು. ೧೮೧೮ ರಲ್ಲಿ ಬಳಕೆಗೆ ಬಂದ ಡ್ರೈಸೀನ್ ವಾಹನ ಸೈಕಲ್ಲುಗಳ ಪೂರ್ವಜ ಎನ್ನಬಹುದು. ಎರಡು ಚಕ್ರಗಳನ್ನು ಹೊಂದಿದ್ದ ಇದರಲ್ಲಿ ಪೆಡಲ್ ಅಥವಾ ಚೈನ್ ಇರಲಿಲ್ಲ. ಈ ವಾಹನದ ಮೇಲೆ ಕುಳಿತ ಸವಾರ ಕಾಲುಗಳಿಂದ ನೆಲವನ್ನು ತಳ್ಳುವುದರ ಮೂಲಕ ಚಲಿಸಬೇಕಾಗಿತ್ತು.

೧೮೬೦ ರಲ್ಲಿ ಪಿಯರಿ ಮಿಕಾ ಮತ್ತು ಪಿಯರಿ ಲಾಲೆಮೆಂಟ್ ಅಂಬ ಫ್ರೆಂಚ್ ಆವಿಷ್ಕರ್ತರು ಪೆಡಲ್ಲುಗಳನ್ನುಳ್ಳ ಸೈಕಲ್ ಒಂದನ್ನು ನಿರ್ಮಿಸಿದರು. ಇವುಗಳಲ್ಲಿ ಪೆಡಲ್ ಗಳು ನೇರವಾಗಿ ಚಕ್ರಕ್ಕೆ ಸಂಪರ್ಕ ಹೊಂದಿರುತ್ತಿದ್ದವು. ಈಗಿನ ಸೈಕಲ್ಲುಗಳಲ್ಲಿರುವಂತೆ ಪೆಡಲ್ ಮತ್ತು ಚಕ್ರವನ್ನು ಜೋಡಿಸುವ ಚೈನ್ ಬಳಕೆಗೆ ಬಂದಿರಲಿಲ್ಲ. ಚೈನ್ ಗಳನ್ನುಳ್ಳ ಸೈಕಲ್ ಬಳಕೆಗೆ ಬಂದ ನಂತರ ನಿರ್ಮಿಸಲಾದ ೧೮೮೫ ರ ರೋವರ್ ಸೈಕಲ್ ಅನ್ನು ಆಧುನಿಕ ಸೈಕಲ್ ಗಳ ಮೊದಲ ರೂಪ ಎಂದು ಗುರುತಿಸಬಹುದು.

೧೮೮೮ ರಲ್ಲಿ ಗಾಳಿ ತುಂಬಿಸುವ ರಬ್ಬರ್ ಟೈರುಗಳು ಉಪಯೋಗಕ್ಕೆ ಬಂದವು. ಗೇರುಗಳನ್ನುಳ್ಳ ಸೈಕಲ್ ಗಳ ಆವಿಷ್ಕರಣವೂ ಸುಮಾರು ಇದೇ ಸಮಯಕ್ಕೆ ನಡೆಯಿತು.

ಉಪಯೋಗಗಳು

ಸೈಕಲ್ 
ಸೈಕಲ್ಲುಗಳ ಮೇಲೆ ಹಾಲನ್ನು ಒಯ್ಯುತ್ತಿರುವ ಸವಾರರು

ಸೈಕಲ್ ಗಳನ್ನು ಪ್ರಧಾನವಾಗಿ ಕೆಳಗಿನ ಉದ್ದೇಶಗಳಿಗಾಗಿ ಬಳಸಲಾಗುತ್ತದೆ:

  1. ಸಂಚಾರ
  2. ಸರಕು ಸಾಗಣೆ
  3. ವ್ಯಾಯಾಮ
  4. ಮನರಂಜನೆ (ಸೈಕಲ್ ಪ್ರವಾಸಗಳು, ಸೈಕಲ್ ಪರ್ವತಾರೋಹಣ, ಇತ್ಯಾದಿ)
  5. ಕೆಲವು ಪ್ರದೇಶಗಳಲ್ಲಿ ಅಂಚೆ ರವಾನೆ ಮತ್ತು ಪೊಲೀಸ್ ಕೆಲಸಕ್ಕಾಗಿ ಉಪಯೋಹಗಿಸಲಾಗುತ್ತದೆ.
  6. ಸ್ಪರ್ಧೆ - ಅನೇಕ ಸೈಕಲ್ ರೇಸ್ ಮತ್ತು ಇತರ ಸ್ಪರ್ಧೆಗಳು ನಡೆಯುತ್ತವೆ. ಇವುಗಳಲ್ಲಿ ಎಲ್ಲಕ್ಕಿಂತ ಪ್ರಸಿದ್ಧವಾದ ಸ್ಪರ್ಧೆ ಟೂರ್ ಡೆ ಫ್ರಾನ್ಸ್.

Tags:

🔥 Trending searches on Wiki ಕನ್ನಡ:

ಭಾರತದ ಸಂಸತ್ತುಕಂಪ್ಯೂಟರ್ಉಡಭಾರತೀಯ ರೈಲ್ವೆವೆಬ್‌ಸೈಟ್‌ ಸೇವೆಯ ಬಳಕೆಎರಡನೇ ಮಹಾಯುದ್ಧವಿದ್ಯಾರಣ್ಯಪಂಜೆ ಮಂಗೇಶರಾಯ್ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ವಿಜಯದಾಸರುಕನ್ನಡದಲ್ಲಿ ವಚನ ಸಾಹಿತ್ಯಆರೋಗ್ಯಶುಕ್ರಟಿಪ್ಪು ಸುಲ್ತಾನ್ಶಿವರಾಮ ಕಾರಂತಅಡಿಕೆಸ್ವರಮುಹಮ್ಮದ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮಾನವ ಅಸ್ಥಿಪಂಜರಕನ್ನಡದಲ್ಲಿ ಕಾದಂಬರಿ ಸಾಹಿತ್ಯತತ್ಪುರುಷ ಸಮಾಸಜೀನುಶೈಕ್ಷಣಿಕ ಮನೋವಿಜ್ಞಾನಭಾರತದ ರಾಷ್ಟ್ರೀಯ ಉದ್ಯಾನಗಳುಪೂರ್ಣಚಂದ್ರ ತೇಜಸ್ವಿಜಯಪ್ರಕಾಶ ನಾರಾಯಣಕಪ್ಪೆ ಅರಭಟ್ಟಬಿ. ಆರ್. ಅಂಬೇಡ್ಕರ್ಸೀತಾ ರಾಮಗುರು (ಗ್ರಹ)ಜಾನಪದಮೈಸೂರು ಸಂಸ್ಥಾನಕರ್ನಾಟಕದ ಕಲೆ ಮತ್ತು ಸಂಸ್ಕೃತಿಆಟಿಸಂಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕೆ.ಎಲ್.ರಾಹುಲ್ವೇದವ್ಯಾಸಸ್ವಾಮಿ ವಿವೇಕಾನಂದಬಸವೇಶ್ವರಕನಕದಾಸರುಶ್ರೀವಿಜಯಧರ್ಮರಾಯ ಸ್ವಾಮಿ ದೇವಸ್ಥಾನಹುಲಿತೆಲುಗುಕನ್ನಡ ಸಾಹಿತ್ಯ ಸಮ್ಮೇಳನಅನುನಾಸಿಕ ಸಂಧಿಸಂಯುಕ್ತ ಕರ್ನಾಟಕಸಿದ್ದಲಿಂಗಯ್ಯ (ಕವಿ)ಶಕ್ತಿಕಲಬುರಗಿಸನ್ನಿ ಲಿಯೋನ್ಬೆಂಗಳೂರು ಗ್ರಾಮಾಂತರ ಜಿಲ್ಲೆಸಹಕಾರಿ ಸಂಘಗಳುಚನ್ನಬಸವೇಶ್ವರದೇವತಾರ್ಚನ ವಿಧಿಛತ್ರಪತಿ ಶಿವಾಜಿಜೀವನಜೋಗಹಿಂದೂ ಧರ್ಮಕಬ್ಬುನಾಗರೀಕತೆನಾಗಸ್ವರಕಲ್ಯಾಣ ಕರ್ನಾಟಕಅನುಶ್ರೀಯುಗಾದಿಗೂಗಲ್ಭಾರತದ ರಾಷ್ಟ್ರಪತಿಸಂಯುಕ್ತ ರಾಷ್ಟ್ರ ಸಂಸ್ಥೆದಿವ್ಯಾಂಕಾ ತ್ರಿಪಾಠಿಭಾರತೀಯ ಅಂಚೆ ಸೇವೆದ್ವಂದ್ವ ಸಮಾಸಯು. ಆರ್. ಅನಂತಮೂರ್ತಿಖಗೋಳಶಾಸ್ತ್ರಅನುರಾಗ ಅರಳಿತು (ಚಲನಚಿತ್ರ)ಲೋಕಸಭೆ🡆 More