ಬಿ-ಬಾಯಿಂಗ್

ಸಾಮಾನ್ಯವಾಗಿ ಬ್ರೇಕ್ ಡ್ಯಾನ್ಸಿಂಗ್ ಎಂದು ಕರೆಯಲ್ಪಡುವ ಬಿ-ಬಾಯಿಂಗ್ ಮೊದಲಿಗೆ ಆಫ್ರಿಕನ್ ಅಮೆರಿಕನ್ ರ ಪೈಕಿ ಹಿಪ್-ಹಾಪ್ ಶೈಲಿಯ ಒಂದು ಅಂಗವಾಗಿ ಸೃಷ್ಟಿಸಿ, ಅಭಿವೃದ್ಧಿಗೊಳಿಸಲ್ಪಟ್ಟ ಒಂದು ಜನಪ್ರಿಯ ಸ್ಟ್ರೀಟ್ ಡ್ಯಾನ್ಸ್ (ಬೀದಿ ನೃತ್ಯ)ದ ಮಾದರಿಯಾಗಿದೆ; ನಂತರದ ದಿನಗಳಲ್ಲಿ ಇದು ನ್ಯೂ ಯಾರ್ಕ್ ನಗರದ ಲ್ಯಾಟಿನೋ ಯುವಕರಿಂದ ಮತ್ತಷ್ಟು ಅಭಿವೃದ್ಧಿಗೊಳಿಸಲ್ಪಟ್ಟಿತು.: 125, 141, 153  ಈ ನೃತ್ಯವು ನಾಲ್ಕು ಅಂಶಗಳನ್ನು ಒಳಗೊಂಡಿದೆ: ಟಾಪ್ ರಾಕ್ , ಡೌನ್ ರಾಕ್ , ಶಕ್ತ ಚಲನೆಗಳು ಮತ್ತು ಸ್ಥಬ್ಧ/ಅತ್ಮಹತ್ಯೆಗಳು(ಸೂಯಿಸೈಡ್) ಗಳು .

ಈ ನೃತ್ಯವನ್ನು ಹಿಪ್-ಹಾಪ್ ಮತ್ತು ಇತರ ರೀತಿಯ, ಸಾಮಾನ್ಯವಾಗಿ ಸಂಗೀತದ ವಿರಾಮಗಳನ್ನು ಹೆಚ್ಚಿಸಲೆಂದೇ ಮರುಸಂಕಲಿತವಾದ ಸಂಗೀತದ ನುಡಿಗಳಿಗೆ ಅನುಗುಣವಾಗಿ ಆಡಲಾಗುತ್ತದೆ. ಬಿ-ಬಾಯಿಂಗ್ ಗೆ ಹಿಪ್-ಹಾಪ್ ಸಂಗೀತವೇ ಆಗಬೇಕೆಂಬ ನಿರ್ಬಂಧವೇನಿಲ್ಲ; ಸಂಗೀತದ ವೇಗ ಮತ್ತು ರೀತಿಗಳು ಹೊಂದಾಣಿಕೆಯಾದರೆ ಯಾವ ವಿಧದ ಸಂಗೀತಕ್ಕಾದರೂ ಈ ನೃತ್ಯವನ್ನು ಮಾಡಬಹುದು. ಈ ನೃತ್ಯವನ್ನು ಅಭ್ಯಸಿಸಿ, ಇದರಲ್ಲಿ ನಿರತರಾಗುವವರನ್ನು ಬಿ-ಬಾಯ್, ಬಿ-ಗರ್ಲ್ ಅಥವಾ ಬ್ರೇಕರ್ ಎಂದು ಕರೆಯಲಾಗುತ್ತದೆ. ಈ ನೃತ್ಯಪಟುಗಳು ಹಲವಾರು ಬಾರಿ ಕದನಗಳಲ್ಲಿ ಭಾಗವಹಿಸುತ್ತಾರೆ; ಇಬ್ಬರು ವ್ಯಕ್ತಿಗಳ ಅಥವಾ ಕ್ರೂ(ಗುಂಪು)ಗಳ ನಡುವಣ ಔಪಚಾರಿಕ ಅಥವಾ ಅನೌಪಚಾರಿಕ ನೃತ್ಯ ಸ್ಪರ್ಧೆಯ ಮಾದರಿಯಲ್ಲಿ ಈ ಕದನಗಳು ಏರ್ಪಡುತ್ತವೆ. ಈ ನೃತ್ಯಕ್ಕೆ "ಬ್ರೇಕ್ ಡ್ಯಾನ್ಸ್" ಎಂಬ ಪದವನ್ನು ಬಳಸಲಾಗುವುದಾದರೂ, "ಬಿ-ಬಾಯಿಂಗ್" ಮತ್ತು "ಬ್ರೇಕಿಂಗ್" ಎಂಬ ಪದಗಳು ಈ ನೃತ್ಯವನ್ನು ಸೂಚಿಸುವ ಮೂಲ ಪದಗಳಾಗಿವೆ. ಈ ನೃತ್ಯಶೈಲಿರ ಹರಿಕಾರರಲ್ಲಿ ಬಹುತೇಕ ಜನರು ಹಾಗೂ ಇದರಲ್ಲಿ ನುರಿತ ಪಟುಗಳು ಈ ಪದಗಳನ್ನೇ ಉಪಯೋಗಿಸಬಯಸುತ್ತಾರೆ.

B-boying
ಬಿ-ಬಾಯಿಂಗ್
A b-boy performing in Faneuil Hall, Boston, MA.
GenreHip-hop dance
InventorN/A - Street dancers from New York City
Year1970s
CountryUnited States
CompetitionsBattle of the Year
The Notorious IBE
R-16 Korea
Red Bull BC One

ಪಾರಿಭಾಷಿಕ ಪದಗಳು

"ಬ್ರೇಕ್ ಡ್ಯಾನ್ಸಿಂಗ್" ಪದವು ಜನಜನಿತವಾದರೂ, ಹಿಪ್-ಹಾಪ್ ಸಂಸ್ಕೃತಿಯಲ್ಲಿ ಮಗ್ನರಾದವರು ಈ ಪದವನ್ನು ತಿರಸ್ಕಾರದಿಂದ ನೋಡುತ್ತಾರೆ. ಹಿಪ್-ಹಾಪ್ ಸಂಸ್ಕೃತಿಗೆ ಬದ್ಧರಾಗುವುದಕ್ಕಿಂತಲೂ ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ನೃತ್ಯವನ್ನು ಕಲಿತವರನ್ನು ಅವಹೇಳನ ಮಾಡುವುದಕ್ಕಾಗಿಯೂ ಸಹ "ಬ್ರೇಕ್ ಡ್ಯಾನ್ಸರ್" ಎಂಬ ಪದವನ್ನು ಬಳಸಲಾಗುವುದು.: 61  ಈ ನೃತ್ಯಗಾರರನ್ನು ವರ್ಣಿಸಲು ಸಾಮಾನ್ಯವಾಗಿ ಬಳಸುವ ಪದಗಳೆಂದರೆ 'ಬಿ-ಬಾಯ್ಸ್', 'ಬಿ-ಗರ್ಲ್ಸ್' ಮತ್ತು 'ಬ್ರೇಕರ್ಸ್' ಎಂಬ ಪದಗಳು. ಹೆರ್ಕ್ ರ ಬ್ರೇಕ್ ಗಳಿಗೆ ನೃತ್ಯವಾಡುತ್ತಿದ್ದ ಪಟುಗಳನ್ನು 'ಬಿ-ಬಾಯ್ಸ್' ಮತ್ತು 'ಬಿ-ಗರ್ಲ್ಸ್' ಎಂದು ಕರೆಯಲಾಗುತ್ತಿದ್ದು, ಅವರ ನೃತ್ಯವನ್ನು "ಬ್ರೇಕಿಂಗ್" ಎಂದು ವರ್ಣಿಸಲಾಗುತ್ತಿತ್ತು. ಇದು ಬ್ರೇಕ್ ಬೀಟ್ ಗೆ ಸಂಬಂಧಿಸಿದುದು ಎಂಬುದು ವಿದಿತವೇ ಆದರೂ, ಹೆರ್ಕ್ "ಬ್ರೇಕಿಂಗ್" ಎಂದರೆ "ಉದ್ರೇಕಗೊಳ್ಳುವಿಕೆ", "ಉತ್ಸಾಹಭರಿತವಾಗಿ ಆಡುವಿಕೆ" ಅಥವಾ "ಗೊಂದಲ ಉಂಟುಮಾಡುವಿಕೆ" ಎಂಬ ಅರ್ಥಗಳೂ ಆ ಕಾಲದ ಬೀದಿ ಅನ್ಯೋಕ್ತಿಗಳಲ್ಲಿ ಇದ್ದಿತು ಎಂಬುದನ್ನು ಗಮನಿಸಿದ್ದಾರೆ. ನ್ಯೂ ಯಾರ್ಕ್ ಸಿಟಿ ಬ್ರೇಕರ್ಸ್ ನ ಬಿ-ಬಾಯ್ ಲಂಡನ್ ಮತ್ತು ಚಿತ್ರನಿರ್ಮಾಪಕ ಮೈಕಲ್ ಹಾಲ್ಮನ್ ಈ ನರ್ತಕರನ್ನು "ಬ್ರೇಕರ್ಸ್" ಎಂದೇ ಗುರುತಿಸುತ್ತಾರೆ. ರಾಕ್ ಸ್ಟೆಡಿ ಕ್ರೂ ತಂಡದ ಫ್ರಾಸ್ಟಿ ಫ್ರೀಝ್ "ನಾವು ಬಿ-ಬಾಯ್ಸ್ ಎಂದೇ ಖ್ಯಾತರಾಗಿದ್ದೇವೆ" ಎನ್ನುತ್ತಾರೆ ಹಾಗೂ ಹಿಪ್-ಹಾಪ್ ಹರಿಕಾರರಾದ ಆಫ್ರಿಕಾ ಬಂಬಾಟಾ "ಬ್ರೇಕ್ ಬಾಯ್ಸ್ ಅನ್ನು ಬಿ-ಬಾಯ್ಸ್ ಎಂದೇ ಕರೆಯಲಾಗುತ್ತದೆ… ಅಥವಾ ಬ್ರೇಕ್ ನೃತ್ಯಗಾರ್ತಿಯರನ್ನು ಬಿ-ಗರ್ಲ್ಸ್ ಎಂದೇ ಕರೆಯಲಾಗುತ್ತದೆ" ಎಂದು ಹೇಳಿದರು. ಅಲ್ಲದೆ, ಸ್ಯಾಂಟಿಯಾಗೋ "ಜೋ ಜೋ" ಟೋರೆಸ್ (ರಾಕ್ ಸ್ಟೆಡಿ ಕ್ರೂ ನ ಸಹ-ಸಂಸ್ಥಾಪಕ), ರಾಕ್ ಸ್ಟೆಡಿ ಕ್ರೂ ನ ಮಿಸ್ಟರ್ ಫ್ರೀಝ್ ಮತ್ತು ಹಿಪ್-ಹಾಪ್ ಇತಿಹಾಸಕಾರ ಫ್ಯಾಬ್ ೫ ಫ್ರೆಡ್ಡಿ ಮತ್ತು ರಾಪರ್ ಗಳಾದ ಬಿಗ್ ಡ್ಯಾಡಿ ಕೇನ್ ಮತ್ತು ಟೆಕ್ N೯ne ಸಹ "ಬಿ-ಬಾಯ್" ಪದವನ್ನೇ ಬಳಸುತ್ತಾರೆ. ರಾಪರ್ ಗಳಾದ ರನ್-ಡಿಎಂಸಿಯ ಕೆಆರ್ಎಸ್ - ಒನ್, ತಾಲಿಬ್ ಕ್ವೆಲಿ, ಮಾಸ್ ಡೆಫ್, ಮತ್ತು ಡ್ಯಾರಿಲ್ ಮೆಕ್ಡೇನಿಯಲ್ಸ್ ದ ಫ್ರೆಷೆಸ್ಟ್ ಕಿಡ್ಸ್ ಎಂಬ ಬ್ರೇಕಿಂಗ್ ವಿಷಯದ ಬಗ್ಗೆ ತೆಗೆದ ಸಾಕ್ಷ್ಯಚಿತ್ರದಲ್ಲಿ ಈ ನರ್ತನದ ನಿಜವಾದ/ಸರಿಯಾದ ಹೆಸರು "ಬ್ರೇಕಿಂಗ್" ಎಂದು ಹೇಳಿದ್ದಾರೆ. ಆಫ್ರಿಕಾ ಬಂಬಾಟಾ, ಫ್ಯಾಬ್ ೫ ಫ್ರೆಡ್ಡಿ, ಮೈಕಲ್ ಹಾಲ್ಮನ್, ಫ್ರಾಸ್ಟಿ ಫ್ರೀಜ್ ಮತ್ತು ಜೋ ಜೋ ಮೂಲ ಪದವಾದ "ಬಿ-ಬಾಯಿಂಗ್" ಅನ್ನೇ ಬಳಸುತ್ತಾರೆ. ಸಂಪ್ರದಾಯಶರಣರು "ಬ್ರೇಕ್ ಡ್ಯಾನ್ಸಿಂಗ್" ಎನ್ನುವುದು ಮಾಧ್ಯಮದವರು: 58  ತಿಳುವಳಿಕೆ ಇಲ್ಲದೆ ಬಳಸಿದ ಪದವೆಂದೂ, ಅದು ಈ ನೃತ್ಯಕಲೆಯ ಅನುಚಿತ ಬಳಕೆಯನ್ನು ಸೂಚಿಸುತ್ತದೆಂದೂ ಅಭಿಪ್ರಾಯ ವ್ಯಕ್ತಪಡಿಸಿದರು.: 60 

ಬೆಂಜಮಿನ್ "ಬಿ-ಟೆಕ್" ಚಂಗ್; ಜಬ್ಬಾವೋಕ್ಕೀಝ್ "ಯಾರಾದರೂ ಬ್ರೇಕ್ ಡ್ಯಾನ್ಸಿಂಗ್ ಎಂದು ಹೇಳಿದರೆ, ಅಲ್ಲ, ಅದು ಬಿ-ಬಾಯಿಂಗ್ ಎಂದು ಹೇಳಿ ಅವರನ್ನು ತಿದ್ದುತ್ತೇವೆ."
ತಿಮೋತಿ "ಪಾಪಿನ್' ಪೀಟೆ" ಸಾಲೋಮನ್; ಎಲೆಕ್ಟ್ರಿಕ್ ಬೂಗಾಲೂಸ್ "ಮುಖ್ಯವಾಗಿ ಸ್ಪಷ್ಟಪಡಿಸಬೇಕಾದ ಅಂಶವೆಂದರೆ ಬ್ರೇಕ್ ಡ್ಯಾನ್ಸಿಂಗ್ ಎಂಬ ಪದದ ಬಳಕೆಯು ತಪ್ಪು. ಈ ಪದವನ್ನು ನಾನು ಬಹಳ ಮ್ಯಾಗಝೀನ್ ಗಳಲ್ಲಿ ಓದಿದ್ದೇನೆ, ಆದರೆ ಇದು ಮಾಧ್ಯಮದವರು ಸೃಷ್ಟಿಸಿದ ಪದ. ಸರಿಯಾದ ಪದ 'ಬ್ರೇಕಿನ್', ನರ್ತಿಸುವವರು ಬಿ-ಬಾಯ್ಸ್ ಮತ್ತು ಬಿ-ಗರ್ಲ್ಸ್. 'ಬ್ರೇಕ್ ಡ್ಯಾನ್ಸಿಂಗ್' ಎಂಬ ಪದವನ್ನು ನೃತ್ಯ ಪದಕೋಶದಿಂದ ಹೊರಕ್ಕೆ ಎಸೆಯಬೇಕು."
ನ್ಯೂ ಯಾರ್ಕ್ ರಿಕನ್ಸ್ ಫ್ರಮ ದ ಹಿಪ್ ಹಾಪ್ ಝೋನ್ ಪುಸ್ತಕದಿಂದ ಆಯ್ದ ಭಾಗಗಳು "ಬ್ರೇಕಿಂಗ್ ಮಾಧ್ಯಮಗಳ ಗಮನದ ಮಹಾಪೂರವನ್ನೇ ಸೆಳೆದಾಗ ಪಾರಿಭಾಷಿಕತೆಯೂ ಸಹ ಬದಲಾಗಲಾರಂಭಿಸಿತು. 'ಬ್ರೇಕ್ ಡ್ಯಾನ್ಸಿಂಗ್' ಎಂಬ ಪದವು ಮೊದಲಿಗೆ ಬಳಸಲಾಗುತ್ತಿದ್ದ 'ಬರ್ನಿಂಗ್', 'ಗೋಯಿಂಗ್ ಆಫ್', 'ಬ್ರೇಕಿಂಗ್;, 'ಬಿ-ಬಾಯಿಂಗ್' ಮತ್ತು 'ಬಿ-ಗರ್ಲಿಂಗ್' ಪದಗಳ ಬದಲಿಗೆ ಅದೆಲ್ಲವನ್ನೂ ವರ್ಣಿಸುವಂತಹ ಸರ್ವಾಕರ್ಷಕ ಪದವಾಗಿ ಪರಿಣಮಿಸಿತುg'... ಹಿಪ್-ಹಾಪ್ ನ ಹರಿಕಾರರು ಮೊದಮೊದಲು ಈ ಪಾರಿಭಾಷಿಕ ಪದವನ್ನು ೧೯೮೦ ರ ದಶಕದಲ್ಲಿ ಸ್ವಲ್ಪಕಾಲ ಅಂಗೀಕರಿಸಿದರಾದರೂ, ನಂತರದ ದಿನಗಳಲ್ಲಿ ಅವರು ಮೂಲ ಪದವನ್ನೇ ಪಟ್ಟಾಗಿ ಹಿಡಿದಿದ್ದಾರೆ ಮತ್ತು 'ಬ್ರೇಕ್ ಡ್ಯಾನ್ಸಿಂಗ್' ಪದವನ್ನು ಮಾಧ್ಯಮಗಳು ಹುಟ್ಟುಹಾಕಿದ ಪದವೆಂದೂ, ಅದು ಈ ಕಲಾ ವಿಧಾನವನ್ನು ವಿಕೃತವಾಗಿಸಿ, ಮೇಳೈಸುವಂತಹುದನ್ನು ಸೂಚಿಸುವಂತಹ ಪದವಾಗಿದೆ ಎನ್ನುತ್ತಾ ಅದನ್ನು ತಿರಸ್ಕರಿಸಿದರು."

"ಬ್ರೇಕ್ ಡ್ಯಾನ್ಸಿಂಗ್" ಎಂಬ ಪದವು ಸಮಸ್ಯಾತ್ಮಕವೂ ಆಗಿದೆ, ಏಕೆಂದರೆ ಅದು ಪಾಪಿಂಗ್, ಲಾಕಿಂಗ್, ಮತ್ತು ಎಲೆಕ್ಟ್ರಿಕ್ ಬೂಗಾಲೂಗಳನ್ನೂ ತಪ್ಪಾಗಿ ಒಂದೇ ಎಡೆಯಲ್ಲಿ ಸೇರಿಸಿಕೊಂಡಂತಹ ಕೊಡೆಪದ (ಒಂದೇ ಛತ್ರಿಯ ಕೆಳಗೆ ಇರುವುದನ್ನೆಲ್ಲಾ ಸೂಚಿಸಲು ಬಳಸುವ ಏಕಪದ)ವಾಗಿದೆ.: 60  ಪಾಪಿಂಗ್, ಲಾಕಿಂಗ್, ಮತ್ತು ಎಲೆಕ್ಟ್ರಿಕ್ ಬೂಗಾಲೂಗಳು "ಬ್ರೇಕ್ ಡ್ಯಾನ್ಸ್" ನ ಶೈಲಿಗಳಲ್ಲ. ಅವು ಫಂಕ್ ಶೈಲಿ ಗೆ ಸೇರಿದವಾಗಿದ್ದು, ಬ್ರೇಕಿಂಗ್ ಗಿಂತಲೂ ವಿಭಿನ್ನವಾಗಿ ಕ್ಯಾಲಿಫೋರ್ನಿಯಾದಲ್ಲಿ ಅಭಿವೃದ್ಧಿಗೊಂಡವು.

ಇತಿಹಾಸ

೧೯೮೦ ರ ದಶಕಕ್ಕೆ ಮುಂಚಿನ ದಿನಗಳಲ್ಲೂ ಇತರ ಪೂರ್ವಗತ ವಿಧಿಗಳಲ್ಲಿ ಬ್ರೇಕಿಂಗ್ ನ ಅಂಶಗಳನ್ನು ಗುರುತಿಸಬಹುದಾಗಿತ್ತಾದರೂ, ಬ್ರೇಕಿಂಗ್ ಬೀದಿನೃತ್ಯದ ಶೈಲಿಯಾಗಿ ಅಭಿವೃದ್ಧಿಯನ್ನು ಹೊಂದಿದುದು ೧೯೮೦ ರ ದಶಕದಲ್ಲಿಯೇ. ಬೀದಿ ಮೂಲೆಯ DJಗಳು ಲಯಬದ್ಧವಾದ ಬ್ರೇಕ್ ಡೌನ್ ಭಾಗಗಳನ್ನು (ಅಥವಾ "ಬ್ರೇಕ್(ವಿರಾಮ)")ಗಳನ್ನು ನರ್ತನದ ರೆಕಾರ್ಡ್ ಗಳಿಂದ ಆಯ್ದು ಒಂದರೊಡನೆ ಇನ್ನೊಂದನ್ನು ಪೋಣಿಸುತ್ತಿದ್ದರು.(ವಿರಾಮ ಎಂದರೆ ಹಾಡಿನ ಮಧ್ಯದ ವಾದ್ಯಸಂಗೀತದ ಭಾಗ). ಹೀಗೆ ಪೋಣಿಸಿದ ಲಯಬದ್ಧ ತುಣುಕುಗಳು ಅವನ್ನು ಸೂಕ್ತವಾಗಿ ಉತ್ತಮಗೊಳಿಸಲು ಮತ್ತು ಸಂಕಲನಗೊಳಿಸಲು ತಳಹದಿಯನ್ನು ಒದಗಿಸುತ್ತಿದ್ದವು ಹಾಗೂ ಈ ವಿರಾಮದಲ್ಲಿ ನರ್ತಕರು ತಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶ ಒದಗುತ್ತಿದ್ದಿತು. ಸರದಿಯ ಪ್ರಕಾರ ತಮ್ಮ ಕೌಶಲಗಳನ್ನು ಪ್ರದರ್ಶಿಸಲು ಅವಕಾಶ ನೀಡುವ ಈ ನರ್ತನದಲ್ಲಿ ಬ್ರೇಕ್ ನ ತಾಳಕ್ಕೆ ತಪ್ಪದಂತೆ ತಮ್ಮ ಹೆಜ್ಜೆಗಳನ್ನು ಹಾಕುತ್ತಾ ನವೀನ ಮಾದರಿಯ ಭಂಗಿಗಳನ್ನು ಪ್ರದರ್ಶಿಸಿ, ಯಾವ ತಂಡದವರು ಇತರ ತಂಡವು ಮಾಡುವುದಕ್ಕಿಂತಲೂ ಶ್ರೇಷ್ಠವಾದ/ಸಂಕೀರ್ಣವಾದ ಚಲನೆಗಳು/ಭಂಗಿಗಳನ್ನು ಪ್ರದರ್ಶಿಸುತ್ತಿದ್ದರೋ ಆ ತಂಡವನ್ನೇ ವಿಜಯಿ ಎಂದು ನಿರ್ಧರಿಸಲಾಗುತ್ತಿತ್ತು.

ರಾಕ್ ಸ್ಟೆಡಿ ಕ್ರೂ ಜಪಾನ್ ಗೆ ಬಂದ ಅನತಿ ಕಾಲದಲ್ಲೇ ಜಪಾನ್ ನಲ್ಲಿ ಬ್ರೇಕಿಂಗ್ ಜನಪ್ರಿಯವಾಗತೊಡಗಿತು.ಪ್ರತಿ ಭಾನುವಾರ ಬಿ-ಬಾಯ್ ಗಳು ಟೋಕ್ಯೋದ ಯೋಯೋಗಿ ಪಾರ್ಕ್ ನಲ್ಲಿ ತಮ್ಮ ನೃತ್ಯಪ್ರದರ್ಶನವನ್ನು ನೀಡಲಾರಂಭಿಸಿದರು. ಜಪಾನಿನ ಮೊದಮೊದಲ ಹಾಗೂ ಬಹಳ ಪ್ರಭಾವೀ ಬ್ರೇಕರ್ ಗಳ ಪೈಕಿ ಕ್ರೇಝಿ-A ಪ್ರಮುಖರು; ಅವರು ಈಗ ರಾಕ್ ಸ್ಟೆಡಿ ಕ್ರೂ ನ ಟೋಕ್ಯೋ ವಿಭಾಗದ ಮುಖಂಡರಾಗಿದ್ದಾರೆ. ಅವರು ಒಂದು ವಾರ್ಷಿಕ ಬಿ-ಬಾಯ್ ಪಾರ್ಕ್ ಎಂಬ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುತ್ತಿದ್ದರು; ಆ ಕಾರ್ಯಕ್ರಮವು ೧೦,೦೦೦ ಕ್ಕೂ ಹೆಚ್ಚು ಅಭಿಮಾನಿಗಳನ್ನು ಸೆಳೆಯುತ್ತಿದ್ದಿತು; ಅವರು ಈ ನರ್ತನಶೈಲಿಗೆ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲು ಹಲವಾರು ವಿಧದ ಪ್ರಯತ್ನಗಳನ್ನೂ ಹಮ್ಮಿಕೊಳ್ಳುತ್ತಿದ್ದಾರೆ.

ಅಪ್ ರಾಕ್

ಬ್ರೇಕಿಂಗ್ ಮೇಲೆ ಪ್ರಭಾವ ಬೀರಿದ ವಿಭಿನ್ನ ಹಾಗೂ ಬಿ-ಬಾಯಿಂಗ್ ಶೈಲಿಗೆ ಸಂಬಂಧಿತ ವಿಧಾನದ ನೃತ್ಯವನ್ನು ಅಪ್ ರಾಕ್ ಎಂದು ಕರೆಯುತ್ತಾರೆ; ಇದನ್ನು ರಾಕಿಂಗ್ ಅಥವಾ ಬ್ರೂಕ್ಲಿನ್ ರಾಕ್ ಎಂದು ಸಹ ಕರೆಯಲಾಗುತ್ತದೆ. ಅಪ್ ರಾಕ್ ಒಂದು ಕೆಣಕುವ ಶೈಲಿಯ ನೃತ್ಯವಾಗಿದ್ದು ಈ ನೃತ್ಯಪ್ರಕಾರದಲ್ಲಿ ಇಬ್ಬರು ನರ್ತಕರು ಕಾಲ್ಪನಿಕ ಶಸ್ತ್ರಗಳನ್ನು ಬಳಸುತ್ತಾ ಕಾದಾಡುವುದನ್ನು ಹಿನ್ನೆಲೆ ಸಂಗೀತದ ಲಯಕ್ಕೆ ತಕ್ಕಂತೆ ಕುಣಿಯುತ್ತಾ ವ್ಯಕ್ತಪಡಿಸುತ್ತಾರೆ. ಅಪ್ ರಾಕ್ ತನ್ನ ಸ್ವಂತಿಕೆಯ ಆಧಾರದ ಮೇಲೆ ಬ್ರೇಕಿಂಗ್ ಗಳಿಸಿದ ವ್ಯಾಪಕ ಜನಪ್ರಿಯತೆಯನ್ನು ಗಳಿಸುವಲ್ಲಿ ವಿಫಲವಾಯಿತು; ಆದರೆ ಕೆಲವು ಬ್ರೇಕರ್ ಗಳು ಟಾಪ್ ರಾಕ್ ನ ಮಾರ್ಪಟ್ಟ ಚಲನೆಗಳಾಗಿ ಕೆಲವು ನಿರ್ದಿಷ್ಟ ಅಪ್ ರಾಕ್ ನ ಚಲನೆಗಳನ್ನು ಬಳಸಿದರು ಹಾಗೂ ಈ ಚಲನೆಗಳು ತಕ್ಕಮಟ್ಟಿಗೆ ಜನಪ್ರಿಯವಾದವು.೧/}: 138  ಬಿ-ಬಾಯ್ ಕದನದಲ್ಲಿ ಅಪ್ ರಾಕ್ ಅನ್ನು ಬಳಸಿದಾಗ, ಪ್ರತಿಸ್ಪರ್ಧಿಗಳೂ ಸಾಮಾನ್ಯವಾಗಿ ಅದೇ ರೀತಿಯ ಅಪ್ ರಾಕ್ ಚಲನೆಗಳಿಂದಲೇ ಉತ್ತರಿಸುತ್ತಾರೆ; ಈ ಚಲನೆಗಳು ಒಂದು ಸಣ್ಣ ಅಪ್ ರಾಕ್ ಕದನವನ್ನು ಉಂಟುಮಾಡಿದಂತೆ ಭಾಸವಾಗುತ್ತದೆ. ಅಪ್ ರಾಕ್ ಮೂಲತಃ ವಿಭಿನ್ನ ಶೈಲಿಯ ನೃತ್ಯವಾಗಿದ್ದುದರಿಂದ ಅದನ್ನು ಬ್ರೇಕಿಂಗ್ ನೊಡನೆ ಮಿಶ್ರಣ ಮಾಡಬಾರದೆಂಬುದು ಕೆಲವು ನರ್ತಕರ ಅಭಿಪ್ರಾಯವಾಗಿದೆ; ಈಗಿನ ಬ್ರೇಕರ್ ಗಳು ಪ್ರದರ್ಶಿಷುವ ಅಪ್ ರಾಕ್ ಚಲನೆಗಳು ಮೂಲ ಅಪ್ ರಾಕ್ ಚಲನೆಗಳಲ್ಲ, ಅವುಗಳ ಕೆಟ್ಟ ಅಣಕಗಳಾಗಿವೆ ಹಾಗೂ ಮೂಲ ಅಪ್ ರಾಕ್ ಶೈಲಿಯ ಬಹಳ ಸಣ್ಣಪ್ರಮಾಣದ ಶೈಲಿಯನ್ನು ಮಾತ್ರ ಪ್ರಚುರಪಡಿಸುತ್ತದೆ ಎಂಬುದು ಅವರ ವಾದವಾಗಿದೆ.

ಬೀದಿಯ ಗುಂಪುಗಳ ನಡುವೆ ನಡೆಯುತ್ತಿದ್ದ ಘರ್ಷಣೆಗಳ ಸ್ಥಾನವನ್ನು ಬ್ರೇಕಿಂಗ್ ತುಂಬಿತು ಎಂದು ಹೇಳಲಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಬಿ-ಬಾಯಿಂಗ್ ಗುಂಪುಗಳ ನಡುವಣ ಕದನಗಳನ್ನು ಹತ್ತಿಕ್ಕಲು ಸಹಾಯಕವಾಗಿದ್ದಿತು ಎಂಬುದು ತಪ್ಪು ಅಭಿಪ್ರಾಯ ಎಂದು ಕೆಲವರು ನಂಬಿದ್ದಾರೆ. ಎರಡೂ ವಾದಗಳಲ್ಲಿ ಕೊಂಚ ಹುರುಳಿದೆ. ಅಪ್ ರಾಕ್ ನ ಬೇರುಗಳು ಗುಂಪುಗಳಲ್ಲಿಯೇ ಇವೆ.: 116, 138  ಯಾವುದೇ ವಿವಾದಗಳು ಉಂಟಾದಾಗ, ಕದನಸನ್ನದ್ಧ ಗುಂಪುಗಳ ರಣಪ್ರಮುಖರು ಅಪ್ ರಾಕ್ ಆಡತೊಡಗುತ್ತಿದ್ದರು. ಯಾವ ತಂಡ ಈ ಮೊದಲ ಸುತ್ತನ್ನು ಗೆಲ್ಲುತ್ತದೋ ಅದು ನಿಜವಾದ ಕದನವು ಎಲ್ಲಿ ನಡೆಯಬೇಕೆಂಬುದನ್ನು ನಿರ್ಧರಿಸುತ್ತಿದ್ದಿತು. ಈ ರೀತಿಯಾಗಿ ಬ್ರೇಕಿಂಗ್ ನಲ್ಲಿ ನಿರ್ದಿಷ್ಟವಾಗಿ ಮತ್ತು ಹಿಪ್ ಹಾಪ್ ನಲ್ಲಿ ಸಾಮಾನ್ಯವಾಗಿ ಕದನಕೌತುಕದ ಬುದ್ಧಿಯು ಜಾಗೃತಗೊಂಡಿತು. "ಕೆಲವೊಮ್ಮೆ ಬೀಫ್(ವಿವಾದ)ವನ್ನು ಬಗೆಹರಿಸಲು ಈ ನೃತ್ಯವೇ ಸಾಕಾಗುತ್ತಿತ್ತು, ಕೆಲವೊಮ್ಮೆ ಈ ನೃತ್ಯದಿಂದ ವಿವಾದವು ಹೆಚ್ಚಾಗುತ್ತಿದ್ದಿತು.": 116 

ನೃತ್ಯಕಲಾ ಕೌಶಲಗಳು

ಬ್ರೇಕಿಂಗ್ ನಲ್ಲಿ ಪ್ರಮುಖವಾಗಿ ನಾಲ್ಕು ಅಂಶಗಳಿರುತ್ತವೆ: ಅವುಗಳಲ್ಲಿ ಟಾಪ್ ರಾಕ್, ಡೌನ್ ರಾಕ್, ಶಕ್ತ ಚಲನೆಗಳು ಮತ್ತು {0}ಸ್ಥಬ್ಧ/ಅತ್ಮಹತ್ಯೆಗಳು(ಸೂಯಿಸೈಡ್) ಗಳು ಸಹ ಸೇರಿರುತ್ತವೆ.

ಬಿ-ಬಾಯಿಂಗ್ 
ಮಾಸ್ಕೋದ ಒಂದು ಸ್ಟುಡಿಯೋದಲ್ಲಿ ಡೌನ್ ರಾಕ್ ಅಭ್ಯಾಸ ಮಾಡುತ್ತಿರುವ ಒಬ್ಬ ಬಿ-ಬಾಯ್.

ಸಾಮಾನ್ಯವಾಗಿ ನಿಂತ ಭಂಗಿಯಿಂದ (ಸ್ಥಾನದಿಂದ) ಪ್ರದರ್ಶಿಸುವ ಯಾವುದೇ ಹೆಜ್ಜೆಗಳ ಸರಣಿಯನ್ನು ಟಾಪ್ ರಾಕ್ ಎಂದು ಕರೆಯಲಾಗುತ್ತದೆ. ನೃತ್ಯಪಟುಗಳು ಹಲವಾರು ಸಾರಿ ಬ್ರೇಕಿಂಗ್ ನ ಇತರ ಅಂಶಗಳಿಂದ ಟಾಪ್ ರಾಕ್ ಗೆ ಮತ್ತು ಮತ್ತೆ ಇತರ ವಿಧಗಳಿಗೆ ಸುಳಿದರೂ ಸಹ, ಟಾಪ್ ರಾಕ್ ಸಾಮಾನ್ಯವಾಗಿ ಪ್ರದರ್ಶನದ ಪ್ರಮುಖ ಮತ್ತು ಮೊದಲನೆಯ ನರ್ತನಶೈಲಿಯಾಗಿರುತ್ತದೆ. ಟಾಪ್ ರಾಕ್ ನಲ್ಲಿ ವಿಭಿನ್ನ ಹೆಜ್ಜೆಗಳನ್ನು ಹಾಕುವ ಕ್ರಮಗಳಿದ್ದು ನರ್ತಕನ ಭಾವಕ್ಕೆ ತಕ್ಕಂತೆ (ಎಂದರೆ ಆಕ್ರಮಣಕಾರಿ, ಶಾಂತ, ಉದ್ವಿಗ್ನ, ಇತ್ಯಾದಿ ಭಾವಗಳು) ಈ ನರ್ತನಕ್ರಮವನ್ನು ಮಾರ್ಪಡಿಸಿಕೊಳ್ಳಬಹುದಾಗಿದೆ. ನರ್ತಕನು ಪರಿಶುದ್ಧತೆ, ಸ್ವರೂಪ, ಮತ್ತು ಬಿ-ಬಾಯ್ ನಡವಳಿಕೆಯನ್ನು ಹೊಂದಿರುವವರೆಗೆ ಟಾಪ್ ರಾಕ್ ನ ನಿರೂಪಣೆಗೆ ಬಹಳ ವಿಸ್ತಾರವಾದ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಸೈದ್ಧಾಂತಿಕವಾಗಿ ಯಾವುದೇ ನೃತ್ಯವೂ ಟಾಪ್ ರಾಕ್ ಆಗಬಹುದು. ಟಾಪ್ ರಾಕ್ ಪಾಪಿಂಗ್, ಲಾಕಿಂಗ್ ಮತ್ತು ಹೌಸ್ ಡ್ಯಾನ್ಸ್ ನಂತಹ ಶೈಲಿಗಳನ್ನೂ ಸಹ ಸೆಳೆಯಲು ಪೂರಕವಾಗಿ ಬಳಸಬಹುದಾದ ನೃತ್ಯರೂಪವಾಗಿದೆ. ಟಾಪ್ ರಾಕ್ ನಿಂದ ಡೌನ್ ರಾಕ್ ಮತ್ತು ಶಕ್ತ ಚಾಲನೆಗಳಿಗೆ ಮಾರ್ಪಡುವುದನ್ನು ಡ್ರಾಪ್ಸ್ ಎಂದು ಕರೆಯಲಾಗುತ್ತದೆ.

ನರ್ತಕನನ್ನು ಕಾಲುಗಳು ಎಷ್ಟರ ಮಟ್ಟಿಗೆ ಬೆಂಬಲಿಸುತ್ತವೋ ಅಷ್ಟೇ ಮಟ್ಟಕ್ಕೆ ಕೈಗಳೂ ಆಧಾರವಾಗುವುದರ ಮೂಲಕ ನರ್ತಕನು ನೆಲದ ಮೇಲೆ ಪ್ರದರ್ಶಿಸುವ ಚಲನಗಳಿಗೆ ಪೂರಕವಾಗುವಂತಹ ನೃತ್ಯದ ವರ್ಣನೆಯೇ (ಆ ನೃತ್ಯವೇ) ಡೌನ್ ರಾಕ್ (ಇದನ್ನು "ಫುಟ್ ವರ್ಕ್" ಅಥವಾ "ಫ್ಲೋರ್ ವರ್ಕ್" ಎಂದೂ ಕರೆಯಲಾಗುತ್ತದೆ). ಡೌನ್ ರಾಕ್ ನಲ್ಲಿ ನೃತ್ಯದ ತಳಹದಿಯಾದ ಆರು-ಹೆಜ್ಜೆಗಳು, ಹಾಗೂ ಅದರ ವಿಭಿನ್ನ ಪ್ರಕಾರಗಳಾದ ಮೂರು-ಹೆಜ್ಜೆ ಹಾಗೂ ಇನ್ನೂ ಸಣ್ಣ ಸಂಖ್ಯೆಯ ಹೆಜ್ಜೆಗಳ ಚಲನಗಳು ಇದ್ದು ಇವು ನೃತ್ಯಕ್ಕೆ ನಾವೀನ್ಯವನ್ನು ತುಂಬಲು ಸಹಾಯಕವಾಗುತ್ತವೆ. ಮೂಲ ಡೌನ್ ರಾಕ್ ಅನ್ನು ಕೇವಲ ಪಾದಗಳು ಮತ್ತು ಹಸ್ತಗಳನ್ನು ಬಳಸಿಯೇ ಮಾಡಲಾಗುತ್ತದೆ ಆದರೆ ಅದರ ಸಂಕೀರ್ಣ ರೀತಿಯ ನೃತ್ಯಗಳಲ್ಲಿ ಕಾಲುಗಳನ್ನು ಒಂದರಲ್ಲೊಂದರಂತೆ ಬೆಸೆಯುವ ಸಂದರ್ಭಗಳಲ್ಲಿ, ಮಂಡಿಗಳನ್ನೂ ಬಳಸಲಾಗುತ್ತದೆ.

ಶಕ್ತ ಚಲನೆಗಳು (ಪವರ್ ಮೂವ್ ಗಳು) ಮೈಕೈ ಕಸರತ್ತಿನ ಚಲನೆಗಳಾಗಿದ್ದು ಅವನ್ನು ಮಾಡಲು ಚಲನೆಯ ಒತ್ತಡ, ವೇಗ, ತಾಳಿಕೆ, ಶಕ್ತಿ ಮತ್ತು ಹತೋಟಿಗಳು ಬೇಕಾಗುತ್ತವೆ. ಸಾಮಾನ್ಯವಾಗಿ ಬ್ರೇಕರ್ ನ ದೇಹದ ಮೇಲ್ಭಾಗವು ಈ ಚಲನೆಗಳಿಗೆ ಆಧಾರವಾಗಿದ್ದು, ದೇಹದ ಇತರ ಭಾಗವು ವರ್ತುಲಾಕಾರದ ಚಲನಾ ಒತ್ತಡವನ್ನು ಉಂಟುಮಾಡುತ್ತದೆ. ಗಮನಾರ್ಹವಾದ ಉದಾಹರಣೆಗಳೆಂದರೆ ವಿಂಡ್ ಮಿಲ್ (ವಾಯುಯಂತ್ರ), ಸ್ವೈಪ್ (ಸಾರಿಸುವ ಕ್ರಮ), ಮತ್ತು ತಲೆಯ ಮೇಲೆ ಗಿರ್ರನೆ ತಿರುಗುವಿಕೆ. ಕೆಲವು ಶಕ್ತ ಚಲನೆಗಳು ಅಂಗಸಾಧನಾ ತಂತ್ರಗಳು ಮತ್ತು ಯುದ್ಧತಂತ್ರ(ಮಾರ್ಷಿಯಲ್ ಆರ್ಟ್ಸ್)ಗಳಿಂದ ಎರವಲು ಪಡೆದಂತಹವಾಗಿವೆ. ಥಾಮಸ್ ಫ್ಲೇಯ್ರ್ ಎಂಬ ಚಲನೆಯು ಅಂಗಸಾಧನೆ (ಜಿಮ್ನಾಸ್ಟಿಕ್ಸ್)ಯಿಂದ ಪಡೆದ ಶಕ್ತ ಚಲನೆಯ ಉದಾಹರಣೆಯಾಗಿದ್ದು, ಇದನ್ನು ಬಿ-ಬಾಯಿಂಗ್ ನಲ್ಲಿ ಹ್ರಸ್ವವಾಗಿ ಫ್ಲೇರ್ ಎಂದು ಕರೆಯುತ್ತಾರೆ.

ಸ್ಥಬ್ಧತೆಗಳು ವಿವಿಧ ವಿನ್ಯಾಸದ ಭಂಗಿಗಳಾಗಿದ್ದು, ಪೈಕ್ ನಂತಹ ಕ್ಲಿಷ್ಟವಾದ ಭಂಗಿಗಳನ್ನು ಪ್ರದರ್ಶಿಸಲು ನರ್ತಕ ಅಥವಾ ನರ್ತಕಿಯು ತನ್ನ ದೇಹದ ಶಕ್ತಿಯನ್ನುಪಯೋಗಿಸಿ ತನ್ನ ದೇಹದ ಮೇಲ್ಭಾಗವು ನೆಲದಿಂದ ಮೇಲಕ್ಕೆ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಗುವ ರೀತಿಯಲ್ಲಿ ಒಡ್ಡಬೇಕು. ಇವುಗಳನ್ನು ಸಂಗೀತದಲ್ಲಿನ ಪ್ರಬಲ ಬಡಿತಗಳನ್ನು ಎತ್ತಿ ತೋರಿಸಲು ಬಳಸಲಾಗುವುದು ಮತ್ತು ಸಾಮಾನ್ಯವಾಗಿ ಇವುಗಳು ಬಿ-ಬಾಯ್ ಪ್ರದರ್ಶನದ ಅಂತ್ಯವನ್ನು ಸೂಚಿಸುತ್ತವೆ. ಸ್ಥಬ್ಧತೆಗಳನ್ನು ಚೈನುಗಳಾಗಿ ಕೊಂಡಿ ಹಾಕಬಹುದು ಅಥವಾ "ಪೇರಿಸಬಹುದು"; ಇಂತಹ ಪ್ರದರ್ಶನಗಳಲ್ಲಿ ಬ್ರೇಕರ್ ಗಳು ಸ್ಥಬ್ಧತೆಯಿಂದ ಸ್ಥಬ್ಧತೆಗೆ ಸಾಗುತ್ತಾ ಸಂಗೀತತ್ವವನ್ನೂ, ದೈಹಿಕ ಶಕ್ತಿಯನ್ನೂ ಪ್ರದರ್ಶಿಸುತ್ತಾರೆ.

ಆತ್ಮಹತ್ಯೆ ಗಳನ್ನೂ ಸ್ಥಬ್ಧತೆಗಳಂತೆಯೇ ಸಂಗೀತದಲ್ಲಿನ ಪ್ರಬಲ ಬಡಿತವನ್ನು ಎತ್ತಿ ತೋರಿಸಲು ಮತ್ತು ಒಂದು ನೃತ್ಯಾಂಗದ ಅಂತ್ಯವನ್ನು ಸೂಚಿಸಲು ಬಳಸಲಾಗುತ್ತದೆ. ಸ್ಥಬ್ಧತೆಗಳಿಗೆ ವಿರುದ್ಧವಾಗಿ, ಆತ್ಮಹತ್ಯೆಗಳು ಬೀಳುವ ಅಥವಾ ಹತೋಟಿ ತಪ್ಪುವ ಚಲನೆಗಳಿಂದ ಗಮನ ಸೆಳೆಯುತ್ತವೆ; ಸ್ಥಬ್ಧತೆಗಳು ಹತೋಟಿಭರಿತ ಕೊನೆಯ ಭಂಗಿಯಿಂದ ಗಮನ ಸೆಳೆಯುತ್ತವೆ. ಬ್ರೇಕರ್ ಗಳು ತಾವು ಹತೋಟಿ ತಪ್ಪಿದಂತೆ ಗೋಚರಿಸುವ ಪ್ರದರ್ಶನ ನೀಡುತ್ತಾ ಅಂಗಾತ, ಬೋರಲು, ಇತ್ಯಾದಿ ಭಂಗಿಗಳಲ್ಲಿ ಬೀಳುತ್ತಾರೆ. ಆತ್ಮಹತ್ಯೆಯು ಹೆಚ್ಚು ನೋವು ಉಂಟು ಮಾಡಿದಂತೆ ಭಾಸವಾದಷ್ಟೂ ಹೆಚ್ಚು ಪರಿಣಾಮಿಕಾರಿಯೆನ್ನಿಸುತ್ತದೆ, ಆದರೆ ಬ್ರೇಕರ್ ಗಳು ಅಂತಹ ಬೀಳುಗಳನ್ನು ತಮಗೆ ಹೆಚ್ಚು ಪೆಟ್ಟಾಗದ ರೀತಿಯಲ್ಲಿ ಚಾಕಚಕ್ಯತೆಯಿಂದ ಆ ಭಂಗಿಗಳನ್ನು ನಿರ್ವಹಿಸುತ್ತಾರೆ.

ಶಕ್ತಿ - ವಿನ್ಯಾಸಗಳ ಸಾದೃಶ್ಯತೆ

ತಾಂತ್ರಿಕ ಕಾಲ್ಗೆಲಸ (ನಟನಾಕೌಶಲ) ಮತ್ತು ದೈಹಿಕ ಶಕ್ತಿಯ ನಡುವಣ ಸಂಬಂಧದಲ್ಲಿನ ಕೊಡು-ಕೊಳ್ಳುವಿಕೆಯ ವಿಷಯದಲ್ಲಿ ಬ್ರೇಕಿಂಗ್ ಸಮುದಾಯದಲ್ಲಿ ವಿವಿಧ ಮಾದರಿಗಳು ಹೊರಹೊಮ್ಮಿವೆ. ಯಾರು ನೃತ್ಯದ ಹೆಜ್ಜೆಗಳು ಮತ್ತು ಮೂಲ ಚುರುಕುತನಕ್ಕೆ ಹೆಚ್ಚು ಒತ್ತು ಕೊಡುತ್ತಾರೋ ಅವರಿಗೆ "ಸ್ಟೈಲ್-ಹೆಡ್ ಗಳು" ಎಂಬ ಹಣೆಪಟ್ಟಿ ನೀಡಲಾಗುತ್ತದೆ. ಅಂಗಸಾಧನೆ-ಸಂಬಂಧಿತ ಕೌಶಲಗಳಲ್ಲಿ ಮತ್ತು ವಿಧಿಗಳಲ್ಲಿ ಹೆಚ್ಚು ಪರಿಣಿತರಾದವರನ್ನು - ಈ ವಿದಯಗಳಿಗಾಗಿ ಆಕರ್ಷಣೆ ಮತ್ತು ಸಂತುಲಿತ ಕಾಲ್ಗೆಲಸವನ್ನೂ ಕಡೆಗಣಿಸುವವರನ್ನು - "ಪವರ್-ಹೆಡ್ ಗಳು" ಎಂದು ಕರೆಯುತ್ತಾರೆ. ಈ ಪಾರಿಭಾಷಿಕ ಪದಗಳನ್ನು ರೂಢೀಗತವಾಗಿ ನೃತ್ಯಪಟುವಿನ ಕೌಶಲವನ್ನು ವರ್ಗೀಕರಿಸಲು ಬಳಸಲಾಗುತ್ತದೆ, ಆದರೆ ತೀರ್ಪುಗಾರರು ಒಂದು ವಿಧವಾದ ಕೌಶಲಕ್ಕಿಂತಲೂ ಮತ್ತೊಂದು ವಿಧವಾದ ಕೌಶಲದತ್ತ ಹೆಚ್ಚಿನ ಒಲವು ತೋರುವಂತಹ ಸಂದರ್ಭಗಳಲ್ಲಿ ಈ ವಿಷಯವು ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಂಗ ಉಂಟುಮಾಡಿದೆ.

ಆದರೆ ಈ ಬಗ್ಗೆ ಚರ್ಚೆಯೇ ಒಂದು ವಿಧವಾದ ಮಿಥ್ಯಾನಾಮವಾಗಿದೆ. ಬಿ-ಬಾಯಿಂಗ್ ನಲ್ಲಿ ಯಾವುದೇ ನರ್ತನ "ಶೈಲಿ"ಯನ್ನು ವರ್ಗೀಕರಿಸುವುದು ಕರಾರುವಾಕ್ಕಾದುದಲ್ಲ, ಏಕೆಂದರೆ ಪ್ರತಿ ಬಿ-ಬಾಯ್ ಅಥವಾ ಬಿ-ಗರ್ಲ್ ಗೆ ತನ್ನದೇ ಆದ ಅಪೂರ್ವ ಶೈಲಿಯನ್ನು ಬಹಿರಂಗವಾಗಿಯೂ, ಆಂತರಿಕವಾಗಿಯೂ ಅಭಿವೃದ್ಧಿಗೊಳಿಸಿಕೊಂಡಿರುತ್ತಾರೆ. ಪ್ರತಿ ಬಿ-ಬಾಯ್ ಅಥವಾ ಬಿ-ಗರ್ಲ್ ನ ಶೈಲಿಯು ತಾನು ಚಲನಗಳನ್ನು ಪ್ರದರ್ಶಿಸುವ ಒಂದು ನಡವಳಿಕೆ ಅಥವಾ ಒಂದು ಕ್ರಮವಾಗಿರುತ್ತದೆ. ಬ್ರೇಕರ್ ನ ಅಪೂರ್ವ ಶೈಲಿಯು ಕಟ್ಟುನಿಟ್ಟಾಗಿ ಟಾಪ್ ರಾಕ್ ಅಥವಾ ಡೌನ್ ರಾಕ್ ಗೆ ಆರೋಪಿತವಾಗುವುದಿಲ್ಲ. ಈ ವಿಷಯವು ಚಲನೆಗಳನ್ನು ಹೇಗೆ ಪ್ರದರ್ಶಿಸಲಾಯಿತು ಎಂಬುದರ ಬಗ್ಗೆ ಯಾವ ಚಲನೆಗಳನ್ನು ಮಾಡಿದರು ಎಂಬುದಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವಂತಹ ವ್ಯಾಪ್ತಿಯುಳ್ಳದ್ದಾಗಿದೆ.

ಸಂಗೀತ

ಬ್ರೇಕಿಂಗ್ ಗೆ ಬೇಕಾದಂತಹ ಸಂಗೀತದ ಆಯ್ಕೆಯು ಕೇವಲ ಹಿಪ್-ಹಾಪ್ ಸಂಗೀತಕ್ಕೆ ಸೀಮಿತವಾಗಿಲ್ಲ; ಈ ನೃತ್ಯಕ್ಕೆ ಅನುಗುಣವಾದ ಗತಿ ಮತ್ತು ವಿಧಾನಗಳು ಇರುವ ಯಾವುದೇ ಸಂಗೀತವಾದರೂ ಬಳಸಿಕೊಳ್ಳಲಾಗುತ್ತದೆ. ಮರುಸಂಕಲನದ ಸಹಾಯದಿಂದ ವಿವಿಧ ಸಂಗೀತ ಪ್ರಕಾರಗಳಿಗೆ ಬ್ರೇಕಿಂಗ್ ಅನ್ನು ಅಳವಡಿಸಿಕೊಳ್ಳಬಹುದು. ಈ ನರ್ತನವಿಧಾನವನ್ನು ಜನಪ್ರಿಯಗೊಳಿಸಿದ ಮೂಲ ಹಾಡುಗಳು ಹೆಚ್ಚಾಗಿ ಜಾಝ್, ಸೌಲ್, ಫಂಕ್, ಎಲೆಕ್ಟ್ರೋ, ಮತ್ತು ಡಿಸ್ಕೋಗಳ ಪ್ರಗತಿಪರ ಶೈಲಿಗಳಿಂದ ಎರವಲು ಪಡೆದಂತಹವಾಗಿದ್ದವು. ಬಿ-ಬಾಯ್ ಸಂಗೀತದ ಅತ್ಯಂತ ಸಾಮಾನ್ಯ ಲಕ್ಷಣವು ಸಂಗೀತದ ವಿರಾಮಗಳಲ್ಲಿದೆ ಅಥವಾ ಡಿಜೆಯು ವಿವಿಧ ಹಾಡುಗಳಿಂದ ತುಣುಕುಗಳನ್ನು ಹೆಕ್ಕಿ ತೆಗೆದು, ಅವನ್ನು ಒಟ್ಟುಗೂಡಿಸಿ, ನಂರ ಅವುಗಳನ್ನು ವರ್ತುಲದಲ್ಲಿ ಬಂಧಿಸಿ ಹಾಗೂ ಕೊಂಡಿಗಳನ್ನು ನೀಡುವುದರಲ್ಲಿದೆ. ಈ ಸಂಗೀತದ ವೇಗವು ಪ್ರತಿ ನಿಮಿಷಕ್ಕೆ ೧೧೦ ರಿಂದ ೧೩೫ ಬೀಟ್ಸ್ (ಬಡಿತ)ಗಳ ವರೆಗೆ ಇರುತ್ತದೆ ಹಾಗೂ ಹದಿನಾರನೆಯ ಬಡಿತದಲ್ಲಿ ಅದಲುಬದಲಾಗಿಸುವಿಕೆ ಹಾಗೂ ತಬಲಾಗಳ ಮಾದರಿಯಲ್ಲಿ ಕಾಲು ಬಡಿತ(೧/೪ ಬೀಟ್ ಗಳು)ದ ಬದ್ಧತೆಯನ್ನು ಹೊಂದಿರುತ್ತದೆ. ಈ ಮಾದರಿ ಯನ್ನು ಡಿಜೆ ಕೂಲ್ ಹೆರ್ಕ್ ಕಂಡುಹಿಡಿದರೆಂದು ಇತಿಹಾಸ ಉಲ್ಲೇಖಿಸುತ್ತದೆ: 79  ; ಇದನ್ನು ನಂತರ ಬ್ರೇಕ್ ಬೀಟ್ ಎಂದು ಕರೆಯಲಾಯಿತು.

ಲಿಂಗ ತಾರತಮ್ಯ

ಹಿಪ್-ಹಾಪ್ ಸಂಸ್ಕೃತಿಯ ಇತರ ಅಂಗಗಳಾದ ಗ್ರಾಫಿಟಿ ಬರವಣಿಗೆ, ಎಂಸೀಯಿಂಗ್ ಮತ್ತು ಡೀಜೇಯಿಂಗ್ ಗಳಂತೆಯೇ ಬ್ರೇಕಿಂಗ್ ಸಹ ಪುರುಷ ಪ್ರಧಾನವಾದ ನೃತ್ಯವಾಗಿದೆ. ಆದರೆ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಿ-ಗರ್ಲ್ಸ್ ಈ ನೃತ್ಯಕ್ಕೆ ಸೇರುತ್ತಾ ಪುರುಷಪ್ರಾಧಾನ್ಯಕ್ಕೆ ಸವಾಲಾಗುತ್ತಿದ್ದಾರೆ. ಲಿಂಗ ತಾರತಮ್ಯದ ಬಗ್ಗೆ ಸಾಮಾನ್ಯವಾದ ಹಾಗೂ ಹುರುಳಿಲ್ಲದ ಅಭಿಪ್ರಾಯಗಳನ್ನು ಮಂಡಿಸುವುದು ತಪ್ಪು, ಏಕೆಂದರೆ ಮಹಿಳೆಯರು ಈಗ ಬ್ರೇಕಿಂಗ್ ಕ್ಷೇತ್ರದಲ್ಲಿ ಮಹತ್ತರವಾದ ಪಾತ್ರಗಳನ್ನು ವಹಿಸಲಾರಂಭಿಸಿದ್ದಾರೆ.೦/}

ಮಹಿಳಾ ಬ್ರೇಕರ್ ಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸಹ, ಈ ತಾರತಮ್ಯವನ್ನು ತೊಡೆಯಲು ಪ್ರಚಾರದ ಕೊರತೆಯೂ ಒಂದು ಅಡ್ಡಗೋಡೆಯಾಗಿರಬಹುದು. ಫೈರ್ ಫ್ಲೈ ಎಂಬ ಪೂರ್ಣಕಾಲ ನಿರತ ಬಿ-ಗರ್ಲ್ ಹೇಳುವಂತೆ "ಅದು ಹೆಚ್ಚು ಜನಪ್ರಿಯವಾಗುತ್ತಿದೆ. ಈಗ ಬಹಳ ಹುಡುಗಿಯರು ಇದರಲ್ಲಿ ತೊಡಗಿಕೊಂಡಿದ್ದಾರೆ. ತೊಂದರೆಯೆಂದರೆ ಪ್ರಚಾರ ಮಾಡುವವರು/ಬೆಂಬಲ ನೀಡುವವರು ಮಹಿಳೆಯರು-ಮಾತ್ರ ಭಾಗವಹಿಸುವ ಕದನಗಳನ್ನು ನಡೆಸಲು ಸಾಕಷ್ಟು ಪ್ರಮಾಣದಲ್ಲಿ ಮುಂದೆ ಬರುತ್ತಿಲ್ಲ." ಹಿಪ್-ಹಾಪ್ ಸಂಸ್ಕೃತಿಯಲ್ಲಿ ಮಹಿಳೆಯರು ಹೊಂದಿರುವ ಸಾಂಪ್ರದಾಯಿಕ ಚಿತ್ರಣವನ್ನು (ಹಾಗೂ ತನ್ಮೂಲಕ ಬಿ-ಬಾಯ್ ಸಂಸ್ಕೃತಿಯನ್ನು) ಹೆಚ್ಚು ಸಕಾರಾತ್ಮಕವಾಗಿ ಬದಲಾಯಿಸಲು ಹಾಗೂ ಆಧುನಿಕ ಹಿಪ್-ಹಾಪ್ ನೃತ್ಯದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಬಲತೆಯನ್ನು ನೀಡಲು ಹಲವಾರು ಜನರು ಪ್ರಯತ್ನಿಸುತ್ತಿದ್ದಾರೆ. ಪ್ರಾಯಶಃ ನೃತ್ಯನಿರತ ಮಹಿಳೆಯರಿಗೆ ಹೆಚ್ಚಿನ ಪ್ರಚಾರ ಸಿಗದಿರುವುದಕ್ಕೆ ಕಾರಣ ಯಾವುದೇ ಪ್ರಜ್ಞಾಪೂರ್ವಕ ತಾರತಮ್ಯುಭಾವವಲ್ಲದೆ, ಪುರುಷ ಬ್ರೇಕರ್ ಗಳಿಗಿಂತಲೂ ಸ್ತ್ರೀ ಬ್ರೇಕರ್ ಗಳ ಸಂಖ್ಯೆ ಕಡಿಮೆಯಾಗಿರುವುದೇ ಕಾರಣವಾಗಿರಬಹುದು. ಆದಾಗ್ಯೂ, ಪುರುಷ ಮತ್ತು ಮಹಿಳಾ ಬ್ರೇಕರ್ ಗಳಿಬ್ಬರೂ ಈ ನೃತ್ಯಕಲಾ ವಿಧಾನವನ್ನು ಸಮವಾಗಿಯೇ, ಒಟ್ಟಾಗಿಯೇ ಅಭ್ಯಸಿಸುತ್ತಾರೆ ಹಾಗೂ ಕೇವಲ ತಮ್ಮ ಕೌಶಲ ಮತ್ತು ಭಾವಗಳ ಆಧಾರದ ಮೇಲೆಯೇ ಸ್ಪರ್ಧೆಗಳಲ್ಲಿ ನಿರ್ಣಯಿಸಲ್ಪಡುವರೇ ವಿನಹ ಲಿಂಗದ ಆಧಾರದ ಮೇಲಲ್ಲ.

ಮಾಧ್ಯಮದಲ್ಲಿ ವ್ಯಕ್ತವಾಗುವಿಕೆ

ಚಲನಚಿತ್ರ ಮತ್ತು ಕಿರುತೆರೆ

೧೯೮೦ ರ ದಶಕದ ಪೂರ್ವಭಾಗದಲ್ಲಿ ಬಿ-ಬಾಯಿಂಗ್ ಒಳಗೊಂಡ ಹಲವಾರು ಚಿತ್ರಗಳು ತೆರೆ ಕಂಡವು; ಅವುಗಳ ಪೈಕಿ ಕೆಲವೆಂದರೆ ವೈಲ್ಡ್ ಸ್ಟೈಲ್ , ಫ್ಲ್ಯಾಷ್ ಡ್ಯಾನ್ಸ್ , ಬ್ರೇಕಿನ್' , Breakin' 2: Electric Boogaloo , ಡೆಲಿವರಿ ಬಾಯ್ಸ್ , ಕ್ರಷ್ ಗ್ರೋವರ್ , ಮತ್ತು ಬೀಟ್ ಸ್ಟ್ರೀಟ್ . ನ್ಯೂ ಯಾರ್ಕ್ ನ ಗ್ರಾಫಿಟಿ ಬರಹಗಳನ್ನು ಬರೆಯುವ ಕಲಾವಿದರನ್ನು ಕುರಿತಾದ ೧೯೮೩ ರ PBS ಸಾಕ್ಷ್ಯಚಿತ್ರ ಸ್ಟೈಲ್ ವಾರ್ಸ್ ಬ್ರೇಕಿಂಗ್ ನ ಅಂಶಗಳನ್ನೂ ಒಳಗೊಂಡಿತ್ತು. "ಬ್ರೇಕ್ ಬಾಯ್" (೧೯೮೫) ಒಬ್ಬ ವ್ಯಕ್ತಿಯು ಶ್ರೇಷ್ಠರಲ್ಲೊಬ್ಬನಾಗಲು ಹೊಂದಿದ ದೃಢನಿರ್ಧಾರವನ್ನು ಬಿಂಬಿಸುವಂತಹ ಚಿತ್ರಣವಾಗಿದೆ. ಸಾಕ್ಷ್ಯಚಿತ್ರವಾದ The Freshest Kids: A History of the B-Boy(೨೦೦೨) ಬಿ-ಬಾಯಿಂಗ್ ನ ಸಮಗ್ರ ಇತಿಹಾಸವನ್ನು ತೋರಿಸುವುದಲ್ಲದೆ ಅದರ ಉಗಮ ಮತ್ತು ಹಿಪ್-ಹಾಪ್ ವಿಧಿಯಲ್ಲಿ ಈ ಪ್ರಕಾರಕ್ಕೆ ಇರುವ ಸ್ಥಾನವನ್ನೂ ಬಿಂಬಿಸುತ್ತದೆ. ೨೦೦೧ ರ ಹಾಸ್ಯಮಯ ಚಿತ್ರ ಝೂಲ್ಯಾಂಡರ್ ನಲ್ಲಿ ಝೂಲ್ಯಾಂಡರ್ (ಬೆನ್ ಸ್ಟಿಲ್ಲರ್) ಮತ್ತು ಹಾನ್ಸೆಲ್ (ಓವನ್ ವಿಲ್ಸನ್) ಕ್ಯಾಟ್ ವಾಕ್ ನಲ್ಲಿ ಬಿ-ಬಾಯ್ ಚಲನೆಗಳನ್ನು ನರ್ತಿಸುವ ದೃಶ್ಯಗಳನ್ನು ಹೊಂದಿದೆ. ಪ್ಲಾನೆಟ್ ಬಿ-ಬಾಯ್ (೨೦೦೭) ಚಿತ್ರದಲ್ಲಿ ೨೦೦೫ ರ ವಾರ್ಷಿಕ ಸಮರವನ್ನು ಗೆಲ್ಲಲು ಕ್ರೂ ತಂಡವು ಜಗದಾದ್ಯಂತ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಸೆಣಸಿದ್ದನ್ನು ವಿವರವಾಗಿ ತೋರಿಸಲಾಗಿದೆ.

ಬ್ರೇಕ್ ಎನ್ನುವುದ ಬ್ರೇಕಿಂಗ್ ಸ್ಪರ್ಧೆಯ ಬಗ್ಗೆ ೨೦೦೬ ರಲ್ಲಿ ಕೊರಿಯಾದಲ್ಲಿ ತೆರೆಕಂಡ ಮಿನಿ ಸರಣಿ.[ಸೂಕ್ತ ಉಲ್ಲೇಖನ ಬೇಕು] ಓವರ್ ದ ರೈನ್ ಬೋ (ನಾಟಕ ಸರಣಿ ೨೦೦೬) ಬಿ-ಬಾಯಿಂಗ್ ನಿಂದ ಒಟ್ಟುಗೂಡಿದಂತಹ ವಿವಿಧ ಪಾತ್ರಗಳ ಮೇಲೆ ಕೇಂದ್ರಿತವಾದ ನಾಟಕ. ಪ್ರಶಸ್ತಿ ವಿಜೇತ (SXSW ಚಿತ್ರೋತ್ಸವ ವೀಕ್ಷಕ ಪ್ರಶಸ್ತಿ) ಸಾಕ್ಷ್ಯಚಿತ್ರವಾದ "ಇನ್ ಸೈಡ್ ದ ಸರ್ಕಲ್" (೨೦೦೭) ಮೂರು ಬಿ-ಬಾಯ್ ಗಳ (ಒಮರ್ ಡಾವಿಲಾ, ಜೋಶ್ "ಮಿಲ್ಕಿ" ಅಯೆರ್ಸ್ ಮತ್ತು ರೋಮಿಯೋ ನವಾರೋ) ವೈಯಕ್ತಿಕ ಕಥೆಗಳು ಮತ್ತು ಅವರು ನೃತ್ಯವನ್ನು ತಮ್ಮ ಜೀವನದ ಕೇಂದ್ರಬಿಂದುವಾಗಿರಿಸಿಕೊಳ್ಳಲು ಹೆಣಗಾಡುವುದನ್ನು ಹೃದಯಂಗಮವಾಗಿ ಬಿಂಬಿಸಿದೆ. ಅನಿಮೆ TV ಸರಣಿಯ ಸಮುರಾಯ್ ಚಾಂಪ್ಲೂ ದ ಪಾತ್ರವಾದ ಮುಗೆನ್ ಬ್ರೇಕಿಂಗ್ ಆಧಾರಿತ ಕದನಶೈಲಿಯನ್ನು ಬಳಸುತ್ತಾನೆ.[ಸೂಕ್ತ ಉಲ್ಲೇಖನ ಬೇಕು].

ಜರ್ಮನ್ ಸಾಕ್ಷ್ಯಚಿತ್ರವಾದ ನ್ಯೂಕೋಲಿನ್ ಅನ್ ಲಿಮಿಟೆಡ್ (೨೦೧೦) ಬರ್ಲಿನ್ ನ ಇಬ್ಬರು ಬಿ-ಬಾಯಿಂಗ್ ಸಹೋದರರು ತಮ್ಮ ನರ್ತನ ಕೌಶಲವನ್ನು ಬಳಸಿಕೊಂಡು ಜೀವನವನ್ನು ರೂಪಿಸಲು ಯತ್ನಿಸುವುದನ್ನು ಕಥಾವಸ್ತುವಾಗಿ ಒಳಗೊಂಡಿದೆ. ಇತ್ತೀಚೆಗೆ ಸ್ಟೆಪ್ ಅಪ್ ೩D ಎಂಬ ೨೦೧೦ ರ ಒಂದು ಹಿಪ್ ಹಾಪ್ ನೃತ್ಯ ಚಲನಚಿತ್ರದಲ್ಲಿ ಬ್ರೇಕಿಂಗ್ ಅನ್ನು ಪ್ರಮುಖವಾದ ನರ್ತನಶೈಲಿಯಾಗಿ ಪ್ರದರ್ಶಿದಲಾಗಿದೆ.

TV ಜಾಹಿರಾತುಗಳಲ್ಲಿ, ಶೀರ್ಷಿಕೆಗಳಲ್ಲಿ, ಮತ್ತು ಕಾರ್ಯಕ್ರಮ-ತಳುಕುಹಾಕುವಿಕೆಗಳಲ್ಲಿ ಹಾಗೂ ವಾರ್ತೆಗಳು, ಪ್ರವಾಸಕಥನ, ಮತ್ತು ಸಾಕ್ಷ್ಯಚಿತ್ರಗಳ ವಿಭಾಗಗಳಲ್ಲಿ ಯುವಕರ/ಬೀದಿಯ ಸಂಸ್ಕೃತಿಯಾಗಿ ಬಿ-ಬಾಯಿಂಗ್ ಅನ್ನು ವ್ಯಾಪಕವಾಗಿ ಉಲ್ಲೇಖಿಸಲಾಗುತ್ತದೆ. ಇದನ್ನು ತಯಾರಕರ/ನಿರ್ಮಾಪಕರ ದೃಷ್ಟಿಕೋನದಿಂದ ನೋಡಿದರೆ, ಈ ಶೈಲಿಯು ವೀಕ್ಷಕರನ್ನು ಸೆರೆಹಿಡಿಯಲು ಸಮರ್ಥವಾಗಿದೆ, ತಕ್ಷಣವೇ ಗುರುತಿಸಬಲ್ಲುದಾಗಿದೆ ಮತ್ತು ವೇಗವಾಗಿ ತಿದ್ದಲು ಅನುಕೂಲಕರವಾಗಿದೆ; ಇದರ ವಿಶಿಷ್ಟತೆಯು ಅನೇಕ-ಕುಲಸಂಬಂಧಿತವೂ, ಶಕ್ತಿಯುತವೂ ಹಾಗೂ ತೀಕ್ಷ್ಣವಾದುದಾದರೂ, ರಾಪ್-ಸಂಸ್ಕೃತಿಯಲ್ಲಿ ಕಂಡು ಬರುವ ದರೋಡೆಕೋರ-ಭರಿತ (ದುರುಳತನಭರಿತ) ಕಲ್ಪನೆಗಳಿಂದ ಮುಕ್ತವಾಗಿದೆ. ಈ ವಿಧಧ ನರ್ತನವನ್ನು ಅಭ್ಯಸಿಸುವ/ಮೆಚ್ಚುವ ಗುಂಪಿಗಿಂತ ಹೆಚ್ಚಿನ ಜನರನ್ನು ಈ ಪ್ರಕಾರವು ತಲುಪುವಲ್ಲಿ ವಿಫಲವಾಗಿ, ಸಣ್ಣ ಸಂಖ್ಯೆಲ್ಲಿ ಹಿಂಬಾಲಕರನ್ನು ಹೊಂದಿದ್ದರೂ ಸಹ, ದೃಶ್ಯಮಾಧ್ಯಮದಲ್ಲಿ ಬಹಳವೇ ಬಳಸಲು ಸಾಧ್ಯವಾಗುವುದರಿಂದ ಇದು ಪ್ರಾಯೋಜಕತ್ವ ಪಡೆಯಲು ಬಹಳ ಅನುಕೂಲಕರವಾದ ನೃತ್ಯರೂಪವಾಗಿದೆ.

ಪಾಪ್ ಸಂಸ್ಕೃತಿ

ಬಿ-ಬಾಯಿಂಗ್ 
2008 ನೆಯ ಇಸವಿಯಲ್ಲಿ ಸ್ಯಾನ್ ಫ್ರ್ಯಾನ್ಸಿಸ್ಕೋದ ಪೊವೆಲ್ ಸ್ಟ್ರೀಟ್ ನಲ್ಲಿ ನರ್ತಿಸುತ್ತಿರುವ ಬಿ-ಬಾಯ್ಸ್.
  • ಬ್ರೇಕ್ ಡ್ಯಾನ್ಸ್ ಆಟವು 'ಬ್ರೇಕಿಂಗ್' ತನ್ನ ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ, ೧೯೮೪ ರಲ್ಲಿ, ಎಪಿಕ್ಸ್ ಕಂಪನಿಯಿಂದ ಬಿಡುಗಡೆ ಮಾಡಲ್ಪಟ್ಟ ಒಂದು ೮ - ತುಣುಕುಗಳ ಗಣಕಯಂತ್ರ-ಕ್ರೀಡೆಯಾಗಿತ್ತು.
  • ಬಿ-ಬಾಯ್ (ವಿಡಿಯೋ ಆಟ) ೨೦೦೬ ನೆಯ ಇಸವಿಯ ಕನ್ಸೋಲ್ (ಕಂಪ್ಯೂಟರ್ ನಲ್ಲಿ ಆಡುವ) ಆಟವಾಗಿದ್ದು ಬ್ರೇಕಿಂಗ್ ನ ಅನಾಚ್ಛಾದಿತ ಚಿತ್ರಣವನ್ನು ತೋರಿಸುವ ಗುರಿ ಹೊಂದಿರುವ ಕ್ರೀಡೆಯಾಗಿದೆ.
  • ಬಸ್ಟ್ A ಗ್ರೂವ್ ಎಂಬುದು ಒಂದು ವಿಡಿಯೋಕ್ರೀಡಾವಿಶೇಷವಾಗಿದ್ದು ಅದರಲ್ಲಿನ ಪಾತ್ರವಾದ "ಹೀಟ್" ಬ್ರೇಕಿಂಗ್ ನಲ್ಲಿ ಪ್ರಾವೀಣ್ಯವನ್ನು ಹೊಂದಿರುವವನಾಗಿದ್ದಾನೆ.
  • ಪಂಪ್ ಇಟ್ ಅಪ್ ಎಂಬುದು ಒಂದು ಕೊರಿಯನ್ ಆಟವಾಗಿದ್ದು, ಇದರಲ್ಲಿ ಕಾಲುಗಳನ್ನು ಅಲುಗಾಡಿಸಬೇಕಾಗುತ್ತದೆ. ಈ ಆಟವು ಬ್ರೇಕಿಂಗ್[ಸೂಕ್ತ ಉಲ್ಲೇಖನ ಬೇಕು] ಅನ್ನು ಒಳಗೊಂಡಿದೆ ಹಾಗೂ ಹಲವಾರು ಜನರು ಈ ಆಟಕ್ಕೆ ಅವಶ್ಯವಾದ ಹೆಜ್ಜೆಗಳನ್ನು ಜ್ಞಾಪಕದಲ್ಲಿರಿಸಿಕೊಂಡು ಹಾಗೂ ತನ್ಮೂಲಕ ಬಾಣಗಳನ್ನು ಕರಾರುವಾಕ್ಕಾಗಿ, ಸಮಯಕ್ಕೆ ಸರಿಯಾಗಿ ಹೊಡೆಯಲು ಬೇಕಾದ ನರ್ತನ ಚಲನೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಈ ಆಟದಲ್ಲಿ ಸಾಧನೆಗೈದಿದ್ದಾರೆ.
  • ೧೯೯೭ ರಲ್ಲಿ ಕಿಮ್ ಸೂ ಯಾಂಗ್ ಮೊಟ್ಟ ಮೊದಲ ಸೈದ್ಧಾಂತಿಕ ಕಾಮಿಕ್ ಆದ ಹಿಪ್ ಹಾಪ್ ಅನ್ನು ಸರಣಿಯ ಕ್ರಮದಲ್ಲಿ ರಚಿಸಲಾರಂಭಿಸಿದರು.[ಸೂಕ್ತ ಉಲ್ಲೇಖನ ಬೇಕು] ಈ ಕಾಮಿಕ್ ನ ೧.೫ ಮಿಲಿಯನ್ ಪುಸ್ತಕಗಳು ಖರ್ಚಾದವು[ಸೂಕ್ತ ಉಲ್ಲೇಖನ ಬೇಕು] ಹಾಗೂ ಈ ಪುಸ್ತಕಗಳು ಹಿಪ್-ಹಾಪ್ ಸಂಸ್ಕೃತಿ ಮತ್ತು ಬ್ರೇಕಿಂಗ್ ಅನ್ನು ಕೊರಿಯಾದ ಯುವಕರಿಗೆ ಪರಿಚಯಿಸಲು ಸಹಕಾರಿಯಾದವು.
  • ಬ್ರೇಕಿಂಗ್ ಅನ್ನು ವಿಷಯವಾಗಿ ಹೊಂದಿದ ಮೊದಲ ಕಾದಂಬರಿಯಾದ ಕಿಡ್ ಬಿ ಯನ್ನು ೨೦೦೬ ರಲ್ಲಿ ಹೌಟನ್ ಮಿಫಿನ್ ಸಂಸ್ಥೆಯು ಬಿಡುಗಡೆ ಮಾಡಿತು.[ಸೂಕ್ತ ಉಲ್ಲೇಖನ ಬೇಕು] ಅದರ ಲೇಖಕರಾದ ಲಿಂಡೆನ್ ಡಾಲೆಕ್ಕಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಒಬ್ಬ ಹವ್ಯಾಸಿ ಬಿ-ಬಾಯ್ ಆಗಿದ್ದರು ಹಾಗೂ ಈ ಕಾದಂಬರಿಯನ್ನು ಬರೆಯುವುದಕ್ಕೆ ಮುನ್ನ ಟೆಕ್ಸಾಸ್ ಬಿ-ಬಾಯ್ ಸಂಸ್ಕೃತಿಯ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದರು. ಈ ಕಾದಂಬರಿಗೆ ಪ್ರೇರಣೆ ಡಾಲೆಕ್ಕಿಯವರದೇ ಆದ, ಬಿ-ಬಾಯ್ ವಿಷಯಾಧಾರಿತವಾದ ಬಿ-ಬಾಯ್ಸ್ ಆಫ್ ಬ್ಯೂಮೌಂಟ್ ಎಂಬ ಸಣ್ಣಕಥೆಯಾಗಿದ್ದಿತು ಹಾಗೂ ಈ ಕಥೆಯು ೨೦೦೪ ರ ಆಸ್ಟಿನ್ ಕ್ರಾನಿಕಲ್ ನ ಸಣ್ಣಕಥಾ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿತ್ತು.[ಸೂಕ್ತ ಉಲ್ಲೇಖನ ಬೇಕು]
  • ೨೦೦೫ ರಲ್ಲಿ ವೋಲ್ಕ್ಸ್ ವ್ಯಾಗನ್ ಗಾಲ್ಫ್ GTiಗಾಗಿ ತಯಾರಿಸಿದ ಒಂದು ಜಾಹಿರಾತು ಜೀನ್ ಕೆಲಿಯು 'ಸಿಂಗಿಂಗ್ ಇನ್ ದ ರೈನ್' ನ ಹೊಸ ಅವತರಣಿಕೆಯಾದ, ಮಿಂಟ್ ರಾಯೇಲ್ ರಿಂದ ಮರುಸಂಕಲನಗೊಂಡ, ಹೊಸ ಆವೃತ್ತಿಯ ಭಾಗಶಃ CGI ಆವೃತ್ತಿಯನ್ನು ಹೊಂದಿದ್ದಿತು.[ಸೂಕ್ತ ಉಲ್ಲೇಖನ ಬೇಕು] ಅದರ ವಿವರಣಾಪಟ್ಟಿಯಲ್ಲಿ "ಮೂಲ, ಪ್ರಸ್ತುತದವರೆಗೆ ಪರಿಷ್ಕೃತ" ಎಂದು ಬರೆದಿದ್ದಿತು.

ಇವನ್ನೂ ಗಮನಿಸಿ‌

ಉಲ್ಲೇಖಗಳು‌‌

ಬಾಹ್ಯ ಕೊಂಡಿಗಳು‌‌

  1. REDIRECT Template:Hip hop

Tags:

ಬಿ-ಬಾಯಿಂಗ್ ಪಾರಿಭಾಷಿಕ ಪದಗಳುಬಿ-ಬಾಯಿಂಗ್ ಇತಿಹಾಸಬಿ-ಬಾಯಿಂಗ್ ನೃತ್ಯಕಲಾ ಕೌಶಲಗಳುಬಿ-ಬಾಯಿಂಗ್ ಸಂಗೀತಬಿ-ಬಾಯಿಂಗ್ ಲಿಂಗ ತಾರತಮ್ಯಬಿ-ಬಾಯಿಂಗ್ ಮಾಧ್ಯಮದಲ್ಲಿ ವ್ಯಕ್ತವಾಗುವಿಕೆಬಿ-ಬಾಯಿಂಗ್ ಇವನ್ನೂ ಗಮನಿಸಿ‌ಬಿ-ಬಾಯಿಂಗ್ ಉಲ್ಲೇಖಗಳು‌‌ಬಿ-ಬಾಯಿಂಗ್ ಬಾಹ್ಯ ಕೊಂಡಿಗಳು‌‌ಬಿ-ಬಾಯಿಂಗ್ನ್ಯೂ ಯಾರ್ಕ್ ನಗರ

🔥 Trending searches on Wiki ಕನ್ನಡ:

ಊಳಿಗಮಾನ ಪದ್ಧತಿದೇವನೂರು ಮಹಾದೇವಕೊಲ್ಲೂರು ಮೂಕಾಂಬಿಕಾ ದೇವಸ್ಥಾನನಗರೀಕರಣರಾಜ್‌ಕುಮಾರ್ಹೋಮಿ ಜಹಂಗೀರ್ ಭಾಬಾಹೆಚ್.ಡಿ.ಕುಮಾರಸ್ವಾಮಿಭಾರತೀಯ ಸಂಸ್ಕೃತಿಕಬ್ಬುತೆಂಗಿನಕಾಯಿ ಮರಮಲ್ಲಿಕಾರ್ಜುನ ಜ್ಯೋತಿರ್ಲಿಂಗಪಂಚಾಂಗಚೆನ್ನಕೇಶವ ದೇವಾಲಯ, ಬೇಲೂರುಭಾರತದ ಬಂದರುಗಳುಬುಡಕಟ್ಟುಕಾರ್ಯಾಂಗಇಚ್ಛಿತ್ತ ವಿಕಲತೆವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಭಾರತ ರತ್ನಭಾರತದ ಚಲನಚಿತ್ರೋದ್ಯಮಮಡಿವಾಳ ಮಾಚಿದೇವಪೋಲಿಸ್ವಿಜಯಪುರ ಜಿಲ್ಲೆಟಿಪ್ಪು ಸುಲ್ತಾನ್ದರ್ಶನ್ ತೂಗುದೀಪ್ಟೆನಿಸ್ ಕೃಷ್ಣಜಗ್ಗೇಶ್ವಿಜಯನಗರ ಸಾಮ್ರಾಜ್ಯಉಡುಪಿ ಜಿಲ್ಲೆಸೂರ್ಯ (ದೇವ)ಉಪನಿಷತ್ರಾಷ್ಟ್ರಕವಿವಾಣಿ ಹರಿಕೃಷ್ಣರಾವಣಕೃಷಿಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿವೇದನೈಲ್ಎಸ್. ಬಂಗಾರಪ್ಪಕನ್ನಡ ವಿಶ್ವವಿದ್ಯಾಲಯಭಾರತದ ಆರ್ಥಿಕ ವ್ಯವಸ್ಥೆಕನ್ನಡ ಚಂಪು ಸಾಹಿತ್ಯಸಾಲುಮರದ ತಿಮ್ಮಕ್ಕಸರ್ವಜ್ಞಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಗೋಡಂಬಿರಚಿತಾ ರಾಮ್ಆಶಿಶ್ ನೆಹ್ರಾಸಾರ್ವಜನಿಕ ಹಣಕಾಸುಅಸಹಕಾರ ಚಳುವಳಿಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಭಾರತದ ರೂಪಾಯಿಸಿದ್ದಲಿಂಗಯ್ಯ (ಕವಿ)ಸಂಸ್ಕೃತ ಸಂಧಿಯುಗಾದಿಭಾರತದ ಮಾನವ ಹಕ್ಕುಗಳುಸಂಧ್ಯಾವಂದನ ಪೂರ್ಣಪಾಠಕಿರುಧಾನ್ಯಗಳುಶ್ರವಣಬೆಳಗೊಳಶಿವನ ಸಮುದ್ರ ಜಲಪಾತಹುಬ್ಬಳ್ಳಿಇತಿಹಾಸಕರ್ನಾಟಕದ ತಾಲೂಕುಗಳುಭಾರತೀಯ ಕಾವ್ಯ ಮೀಮಾಂಸೆಕುರು ವಂಶಎಸ್.ಎಲ್. ಭೈರಪ್ಪಕಾರ್ಮಿಕ ಕಾನೂನುಗಳುಬಾಬು ಜಗಜೀವನ ರಾಮ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಗೂಬೆದೇವತಾರ್ಚನ ವಿಧಿಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕದಂಬ ರಾಜವಂಶಭಾರತದ ರಾಷ್ಟ್ರೀಯ ಉದ್ಯಾನಗಳುಸಾಮಾಜಿಕ ಸಮಸ್ಯೆಗಳುಭಾರತೀಯ ಭೂಸೇನೆಆಗುಂಬೆ🡆 More