ಟೋಕ್ಯೊ (東京), ಅಧಿಕೃತವಾಗಿ ಟೋಕ್ಯೊ ಮಹಾನಗರ(東京都, とうきょうと, ತೋಕ್ಯೋತೊ), ಜಪಾನ್ ದೇಶದ ರಾಜಧಾನಿ ಮತ್ತು ಜಪಾನಿನ ೪೭ ರಾಜ್ಯ (都道府県, ಟೊದೋಫುಕೆನ್) ಗಳಲ್ಲಿ ಅತೀದೊಡ್ಡದಾದದ್ದು.
ಜಪಾನಿನ ಮುಖ್ಯ ದ್ವೀಪವಾಗಿರವ ಹೋಂಶು (本州) ವಿನ ಪೂರ್ವಭಗದಲ್ಲಿರುವ ಕಾನ್ತೋ(関東) ಉಪರಾಜ್ಯ(地方, ಚಿಹೋ)ದಲ್ಲಿ ಟೋಕ್ಯೊ ಸ್ಥಿತವಾಗಿದೆ. ಟೋಕ್ಯೊ ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೧೪ ದಶಲಕ್ಷಕಿಂತಲೂ ಹೆಚ್ಚು ಜನರು ವಾಸವಾಗಿದ್ದು, ನಗರದ ಹೊರಭಾಗಗಳನ್ನು ಸೇರಿಸಿ ಒಟ್ಟು ೩೮ ದಶಲಕ್ಷಕಿಂತಲೂ ಹೆಚ್ಚು ಜನರು ಟೋಕ್ಯೋ ರಾಜ್ಯದಲ್ಲಿ ವಾಸವಾಗಿದ್ದಾರೆ.
ಟೋಕ್ಯೊ ಮಹಾನಗರ | |||||||||
| |||||||||
ರಾಜಧಾನಿ | - | ||||||||
ಪ್ರದೇಶ | ಕಾಂತೋ | ||||||||
ದ್ವೀಪ | ಹೊಂಶು | ||||||||
ರಾಜ್ಯಪಾಲ | ಶಿನ್ತಾರೋ ಇಶಿಹಾರ | ||||||||
ವಿಸ್ತೀರ್ಣ | 2,187.08 (621.81) km² (೪೫ನೆಯ) | ||||||||
- % ನೀರು | 1.0% | ||||||||
ಜನಸಂಖ್ಯೆ (ಅಕ್ಟೋಬರ್ ೧, ೨೦೦೭) | |||||||||
- ಒಟ್ಟು | 12,790,000 (ವಿಶೇಷ ವಾರ್ಡ್ ಗಳಲ್ಲಿ 8,652,700 ) (1ನೆಯ) | ||||||||
- ಸಾಂದ್ರತೆ | 5796 (13,890.25) /km² | ||||||||
ಅಂತರ್ಜಾಲ ತಾಣ | metro.tokyo.jp | ||||||||
ರಾಜ್ಯದ ಚಿನ್ಹೆಗಳು | |||||||||
- ಹೂವು | ಸಕುರಾ | ||||||||
- ಮರ | ಗಿಂಕ್ಗೊ ಬಿಲೊಬ | ||||||||
- ಪಕ್ಷಿ | ಕಪ್ಪು ತಲೆಯ ಗಲ್ಲ್ (Larus ridibundus) | ||||||||
ಟೋಕ್ಯೊ ಮಹಾನಗರದ ಅಧಿಕೃತ ಚಿನ್ಹೆ. |
ಟೋಕ್ಯೊವು ಮೆಯ್ಜಿ (明治) ಪುನಃಸ್ಥಾಪನೆಯ ಮೊದಲು ಎದೊ (江戸) ಎಂದು ಹೆಸರಾಗಿತ್ತು. ಎದೊ(江戸) ಎಂಬ ಪದವು 江(ಎ, ಖಾರಿ) ಮತ್ತು 戸(ತೊ, ಬಾಗಿಲು) ಕಾನ್ಜಿಗಳ ಸಂಧಿಯಿಂದ ಬಂದಿರುವುದಾಗಿದ್ದು ಇದರ ಅರ್ಥವು ಟೋಕ್ಯೊ ಖಾರಿಯಲ್ಲಿ ಪೆಸಿಫಿಕ್ ಮಹಾಸಾಗರಕ್ಕೆ ಸೇರುವ ಸುಮಿದ ನದೀಯ (隅田川, ಸುಮಿದ ಕವ) ನದೀಮುಖವನ್ನು ಸೂಚಿಸುತ್ತದೆ. ವರ್ಷ ೧೮೬೮ ರ ಮೆಯ್ಜಿ ಪುನಃಸ್ಥಾಪನೆಯಾದ ಮೇಲೆ ನಿಹೋನಿನ ರಾಜಮನೆತನವು ಕ್ಯೋತೊವನ್ನು ಬಿಟ್ಟು ಅಂದಿನ ತೋಕುಗಾವ-ರಾಜಧಾನಿಯಾಗಿದ್ದ ಎದೊವಿನಲ್ಲಿ ನೆಲೆಯನ್ನು ಹೂಡಿದರು; ಇದರ ನಂತರ ಎದೊವಿನ ಹೆಸರನ್ನು ತೋಕ್ಯೋವಿಗೆ (東京, 東 "ತೋ" ಪೂರ್ವ, 京 "ಕ್ಯೋ" ರಾಜಧಾನಿ) ಬದಲಾಯಿಸಲಾಯಿತು. ಮೆಯ್ಜಿ ಕಾಲದ ಹೊಸತರಲ್ಲಿ '東京' ಪದದ ಉಚ್ಛಾರಣೆಯನ್ನು 'ತೋಕೆಯಿ' ಎಂದು ಕೂಡ ಮಾಡಲಾಗುತ್ತಿತ್ತು; ಆ ಕಾಲದ ಹಲವು ಆಂಗ್ಲ ದಾಖಲೆಗಳಲಿ 'Tokei' ಎಂಬ ಬಳಿಕೆಯೂ ಇತ್ತು; ಆದರೆ ಈ ಉಚ್ಛಾರಣೆಯು ಇಂದು ಬಳಿಕೆಯಲ್ಲಿಲ್ಲ.
ಟೋಕ್ಯೊವಿನ ೨೩ ವಿಶೇಷ ವಾರ್ಡ್ಗಳು ಇಂತಿವೆ:
|
|
ಟೋಕ್ಯೊವಿನಲ್ಲಿ ಇರುವ ೨೬ ನಗರಗಳು:
|
|
|
ಟೋಕ್ಯೊ ಮಹಾನಗರವು ೧೧ ಸಹೋದರಿ ನಗರಗಳನ್ನು ಹೊಂದಿದೆ.
This article uses material from the Wikipedia ಕನ್ನಡ article ಟೋಕ್ಯೊ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.