ಪೊಂಗಲ್

ಪೊಂಗಲ್ ಅಕ್ಕಿಯಿಂದ ಅಥವಾ ಅವಲಕ್ಕಿಯ ಜೊತೆ ಹೆಸರು ಬೇಳೆ ಹಾಕಿ ತಯಾರಿಸಲಾದ ಒಂದು ಜನಪ್ರಿಯ ದಕ್ಷಿಣ ಭಾರತೀಯ ತಿನಿಸು.

ಪೊಂಗಲ್ ನಲ್ಲಿ ಎರಡು ಬಗೆಯ ಪೊಂಗಲ್‌ಗಳಿವೆ, ಒಂದು ಸಿಹಿ ಪೊಂಗಲ್, ಮತ್ತೊಂದು ಖಾರ ಪೊಂಗಲ್. ಸಾಮಾನ್ಯವಾಗಿ ಇದು ಹುಗ್ಗಿ ಎಂದು ಪರಿಚಿತವಾಗಿದೆ. ಸಾಮಾನ್ಯವಾಗಿ ಭಾರತದ ಹಲವು ಭಾಗಗಳಲ್ಲಿ ಖಾರ ಪೊಂಗಲ್ ಬೆಳಗಿನ ಒಂದು ತಿಂಡಿಯಾಗಿದೆ. ಧನುರ್ಮಾಸದಲ್ಲಿ ಆಯಾಯ ಊರಿನ ರಾಮಮಂದಿರಗಳಲ್ಲಿ, ಸಂಕ್ರಾಂತಿ ಹಬ್ಬದ ದಿನ ಇದನ್ನು ಮನೆ ಮನೆಗಳಲ್ಲೂ ಮಾಡುವುದು ರೂಢಿ.

ಪೊಂಗಲ್

ಮಾಡಲು ಬೇಕಾಗುವ ಸಾಮಾನು

ಮಾಡುವ ವಿಧಾನ

  • ೧. ಸಿಹಿ ಪೊಂಗಲು - ಅಕ್ಕಿ ಅಥವಾ ಅವಲಕ್ಕಿ, ಮುಕ್ಕಾಲು ಪಾವು ಹೆಸರುಬೇಳೆಯನ್ನು ಮೊದಲು ಹುರಿದು ಕೊಳ್ಳಬೇಕು. ನಂತರ ಗೋಡಂಬಿ, ಒಣದ್ರಾಕ್ಷಿ, ಬಾದಾಮಿ, ಒಣಖರ್ಜೂರ, ಫೀಸ್ತಾವನ್ನು ತುಪ್ಪದಲ್ಲಿ ಹುರಿದು ಕೊಳ್ಳಬೇಕು. ಅಕ್ಕಿ ಅಥವಾ ಅವಲಕ್ಕಿ, ಮುಕ್ಕಾಲು ಪಾವು ಹೆಸರುಬೇಳೆ, ಏಲಕ್ಕಿ ಸ್ವಲ್ಪ ಒಣಶುಂಠಿಯನ್ನು ಸೇರಿಸಿ ಮುಕ್ಕಾಲು ಭಾಗ ಬೇಯಿಸಿಕೊಂಡು, ಅದಕ್ಕೆ ಅರಿಸಿನ, ಸಕ್ಕರೆ ಅಥವಾ ಬೆಲ್ಲ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿ, ಒಣಖರ್ಜೂರ, ಫೀಸ್ತಾ, ಕಾಯಿತುರಿ, ಹಾಲು ಚಿಟಿಕಿ ಉಪ್ಪು ಹಾಕಿ ಚೆನ್ನಾಗಿ ಗೋಟಾಯಿಸಬೇಕು. ನೀರೆಲ್ಲ ಸಂಪೂರ್ಣ ಹಿಂಗಿದ ಮೇಲೆ ಕೆಳಗಿಳಿಸಿ ತುಪ್ಪವನ್ನು ಸೇರಿಸಬೇಕು.
  • ೨. ಖಾರ ಪೊಂಗಲು - ಅಕ್ಕಿ ಅಥವಾ ಅವಲಕ್ಕಿ, ಮುಕ್ಕಾಲು ಪಾವು ಹೆಸರುಬೇಳೆ, ಒಣ ಮೆಣಸಿನಕಾಯಿ, ಕಾಳು ಮೆಣಸು, ಜೀರಿಗೆ ಎಲ್ಲವನ್ನು ಸೇರಿಸಿ ಮೊದಲು ಹುರಿದು ಕೊಳ್ಳಬೇಕು. ನಂತರ ಅಕ್ಕಿ ಅಥವಾ ಅವಲಕ್ಕಿ, ಮುಕ್ಕಾಲು ಪಾವು ಹೆಸರುಬೇಳೆಯನ್ನು ಬೇಯಲು ಹಾಕಿ, ಒಣ ಮೆಣಸಿನಕಾಯಿ, ಕಾಳು ಮೆಣಸು, ಜೀರಿಗೆ ಎಲ್ಲವನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಆಮೇಲೆ ಈರುಳ್ಳಿಯನ್ನು ಉದ್ದಕ್ಕೆ ಹೆಚ್ಚಿ ಒಗ್ಗರಣೆ ಕೊಡುವಾಗ -ಎಣ್ಣೆ, ಸಾಸಿವೆ ಕರಿಬೇವು ಹಾಕಿ ಅದರೊಂದಿಗೆ ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ, ಅದನ್ನು ಬೇಯುತ್ತಿರುವುದರೊಂದಿಗೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ತುಸು ತುಪ್ಪ ಹಾಕಿದರೆ ಖಾರ ಪೊಂಗಲು ಸಿದ್ದವಾಗುತ್ತದೆ.

ಪೊಂಗಲ್ ಮಾಡುವ ಸ್ಥಳಗಳು

  • ಹೆಣ್ಣು ಮಕ್ಕಳ ಶಬರಿಮಲೆ ಅಟ್ಟುಕಲ್ ಪೊಂಗಲ್ ಭಗವತಿ ಕ್ಷೇತ್ರ ತಿರುವನಂತಪುರ ಕೇರಳ. ಈ ದೇವಿ ದೇವಸ್ಥಾನ ಗಿನ್ನಿಸ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಕಾರಣ ಪ್ರಪಂಚದಲ್ಲೇ ಅತ್ಯದಿಕ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಒಟ್ಟು ಸೇರಿ ಒಲೆ ಹಾಕಿ ಅದರ ಮೇಲೆ ಮಣ್ಣಿನ ಪಾತ್ರೆ ಇಟ್ಟು ಪೊಂಗಲ್ (ಅಕ್ಕಿ,ಸಕ್ಕರೆ,ತೆಂಗಿನ ತುರಿ,ಒಣದ್ರಾಕ್ಷಿ,ಹಾಲು ಹಾಕಿ ತಯಾರಿಸುವ ಪಾಯಸ) ತಯಾರಿಸುತ್ತಾರೆ. ಅದು ಕುದಿದು ಉಕ್ಕೇರಿ ಬೆಂಕಿಯ ಮೇಲೆ ಬೀಳಬೇಕು ಎನ್ನುವ ಪದ್ಧತಿ ಸಂಪ್ರದಾಯ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
  • ಅಷ್ಟೇ ಅಲ್ಲದೆ ಆ ಆಚರಣೆಯಲ್ಲಿ ವರ್ಷ ವರ್ಷ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಅದು ಎಲ್ಲಿಯವರೆಗೆ ಅಂದರೆ ಸುಮಾರು 10 ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹೆಣ್ಣು ಮಕ್ಕಳು ಒಲೆ ಹಾಕಿ ಪೊಂಗಲ್ ತಯಾರಿಸುತ್ತಾರೆ. ಇತ್ತಿಚೆಗೆ ಜನರ ಸಂಖ್ಯೆ ಹೆಚ್ಚಾಗಿ ಕಂಡು ಬಂದ ಕಾರಣ ಅದರ ಉದ್ದ ರೈಲ್ವೆ ನಿಲ್ದಾಣ ಬಸ್ ನಿಲ್ದಾಣದ ಕಡೆಯವರೆಗೂ ಮುಟ್ಟಿದೆ. ಬಸ್ಸಿನಿಂದ ಇಳಿದು ಅಲ್ಲೇ ಪೊಂಗಲ್ ಮಾಡಿ ತಮ್ಮ ದೈವಿ ಭಕ್ತಿ ತೋರಿಸಿಕೊಳ್ಳುತ್ತಾರೆ. ಈ ಪೊಂಗಲ್ ಹಬ್ಬವು ವರ್ಷಂಪ್ರತಿ ಭರಣಿ ಸಲುವ ಕಾರ್ತಿಕ ನಕ್ಷತ್ರದ ಮಕರ ಮಾಸ ಅಥವಾ ಕುಂಭ ಮಾಸದಲ್ಲಿ ಬರುತ್ತದೆ, 10 ದಿವಸ ಜಾತ್ರೆ ನಡೆಯುತ್ತದೆ. ಈ ಉತ್ಸವದಲ್ಲಿ ವಿದೇಶಿಯರು ಸಹ ಅತ್ಯದಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
  • ತಮಿಳುನಾಡಿನವರು ಇದೇ ಮಾದರಿಯಲ್ಲಿ ಪೊಂಗಲ್ ನ್ನು ತಯಾರಿಸುತ್ತಾರೆ.


Tags:

ಅಕ್ಕಿಅವಲಕ್ಕಿದಕ್ಷಿಣ ಭಾರತಮಕರ ಸಂಕ್ರಾಂತಿಹೆಸರು ಬೇಳೆ

🔥 Trending searches on Wiki ಕನ್ನಡ:

ಸೇಂಟ್ ಲೂಷಿಯಎರಡನೇ ಮಹಾಯುದ್ಧಗರ್ಭಧಾರಣೆಕರ್ನಾಟಕದ ಮಹಾನಗರಪಾಲಿಕೆಗಳುಅಂಜನಿ ಪುತ್ರಊಳಿಗಮಾನ ಪದ್ಧತಿಮಾಸ್ತಿ ವೆಂಕಟೇಶ ಅಯ್ಯಂಗಾರ್ನೇಮಿಚಂದ್ರ (ಲೇಖಕಿ)ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಪಾಂಡವರುಸಿಂಗಾಪುರಯು.ಆರ್.ಅನಂತಮೂರ್ತಿತೆಲುಗುದೇವತಾರ್ಚನ ವಿಧಿಭಾರತದ ಪ್ರಧಾನ ಮಂತ್ರಿಸ್ತನ್ಯಪಾನಬಾಲ್ಯ ವಿವಾಹಮೋಡಬೇಡಿಕೆಯ ನಿಯಮಉಡಪ್ರಜಾಪ್ರಭುತ್ವಛಂದಸ್ಸುಕಥೆಬೊನೊಅಲೆಕ್ಸಾಂಡರ್ಉಡುಪಿ ಜಿಲ್ಲೆದ್ವೈತಸತಿಬ್ಯಾಂಕ್ಗೀಳು ಮನೋರೋಗರೇಡಿಯೋಸ್ವಾಮಿ ವಿವೇಕಾನಂದಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತೀಯ ನೌಕಾಪಡೆವಿಮರ್ಶೆಕರಗಹೆಚ್.ಡಿ.ಕುಮಾರಸ್ವಾಮಿಆಂಗ್‌ಕರ್ ವಾಟ್ಯಣ್ ಸಂಧಿಹರಪ್ಪದಾಕ್ಷಾಯಿಣಿ ಭಟ್ಕಲೆಜೈಮಿನಿ ಭಾರತದಲ್ಲಿ ನವರಸಗಳುಕರ್ನಾಟಕದ ಇತಿಹಾಸಬ್ಯಾಸ್ಕೆಟ್‌ಬಾಲ್‌ಪ್ರಜಾಪ್ರಭುತ್ವದ ಲಕ್ಷಣಗಳುಎತ್ತಿನಹೊಳೆಯ ತಿರುವು ಯೋಜನೆಹದಿಬದೆಯ ಧರ್ಮರಾಷ್ಟ್ರಕೂಟಆದಿ ಕರ್ನಾಟಕಅದ್ವೈತಹವಾಮಾನಮಾರುಕಟ್ಟೆಭಾರತದಲ್ಲಿನ ಜಾತಿ ಪದ್ದತಿದಾಳಿಂಬೆಜೀವಸತ್ವಗಳುವಿಜಯಪುರ ಜಿಲ್ಲೆಗುವಾಮ್‌‌‌‌ಸೌರಮಂಡಲಚಂದ್ರಾ ನಾಯ್ಡುಭೂಕುಸಿತಲೋಹಜ್ಯೋತಿಬಾ ಫುಲೆಕೊಡವರುಓಂ ನಮಃ ಶಿವಾಯಅಜಂತಾಯೂಟ್ಯೂಬ್‌ಹಲ್ಮಿಡಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಸದಾನಂದ ಮಾವಜಿ೧೯೭೧ರ ಭಾರತ-ಪಾಕಿಸ್ತಾನ ಯುದ್ಧಭಾರತದ ವಿಜ್ಞಾನಿಗಳುರತನ್ ನಾವಲ್ ಟಾಟಾಜಿ.ಎಸ್.ಶಿವರುದ್ರಪ್ಪಜನ್ನವಿಕ್ರಮಾದಿತ್ಯ ೬🡆 More