ಬೆಲ್ಲ

ಬೆಲ್ಲವು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸದ, ಅಪಕೇಂದ್ರಕವನ್ನು ಉಪಯೋಗಿಸದೆ ತಯಾರಿಸಲಾಗುವ ಸಕ್ಕರೆ.

ಅದನ್ನು ನೇರ ಬಳಕೆಗಾಗಿ ತಯಾರಿಸಲಾಗುತ್ತದೆ. ಈ ಬಗೆಯ ಸಕ್ಕರೆಯು ಕಾಕಂಬಿ ಮತ್ತು ಹಳುಕುಗಳ ಬೇರ್ಪಡಿಸುವಿಕೆಯಿಲ್ಲದ ಕಬ್ಬಿನ ರಸದ ಸಾಂದ್ರಿತ ಉತ್ಪನ್ನ, ಮತ್ತು ಇದರ ಬಣ್ಣವು ಬಂಗಾರ ಕಂದು ಅಥವಾ ಗಾಢ ಕಂದು ಇರಬಹುದು. ಇದು ೫೦ ಪ್ರತಿಶತದವರೆಗೆ ಸುಕ್ರೋಸ್, ೨೦ ಪ್ರತಿಶತದವರೆಗೆ ವಿಲೋಮ ಸಕ್ಕರೆಗಳು, ೨೦ ಪ್ರತಿಶತದವರೆಗೆ ತೇವಾಂಶ, ಮತ್ತು ಉಳಿದಂತೆ ಬೂದಿ, ಪ್ರೋಟೀನ್‌ಗಳು ಹಾಗೂ ಕಬ್ಬಿನ ಸಿಪ್ಪೆಯ ನಾರುಗಳಂತಹ ಇತರ ಕರಗದ ವಸ್ತುವನ್ನು ಹೊಂದಿದೆ. ಇದು ದಕ್ಷಿಣ ಭಾರತದಲ್ಲಿ ಸಕ್ಕರೆಯ ಬದಲಿಗಾಗಿಯೂ ಬಳಸುತ್ತಾರೆ.

ಬೆಲ್ಲ
ಭಾರತದ ಬೆಲ್ಲದ ಒಂದು ಪೆಂಟೆ

ಬೆಲ್ಲ ತಯಾರಿಕೆ ವಿಧಾನ

    ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಕೆ
    ಬೆಲ್ಲ ತಯಾರಿಸುವ ಜಾಗಕ್ಕೆ "ಆಲೆಮನೆ" ಎನ್ನುವರು.
  • ಹೊಲದಿಂದ ತಂದು ತುಂಡರಿಸಿದ ಮೊದಲ ಕಬ್ಬನ್ನು ರಸ ಪಡೆಯಲು ಕಬ್ಬು ಹಿಂಡುವ ಕಣೆಯ (ಕ್ರಷರ್) ಒಳಗೆ ಹಾಕುವುದು.
  • ನಂತರ ಕಬ್ಬಿನ ಹಾಲನ್ನು (ರಸ) ಶೋದಿಸಿ ದೊಡ್ಡ ಕುದಿಯುವ ಕಬ್ಬಿಣದ ಬಾನಿಯಲ್ಲಿ (ದೊಡ್ಡಕಡಾಯಿ) ಹಾಕಿ ಅಡಿಯಲ್ಲಿ ಬೆಂಕಿಹಾಕಿ ಕುದಿಸಲಾಗುತ್ತದೆ.
  • ಶಾಖ ವ್ಯರ್ಥವಾಗದಂತೆ ಗೂಡು ಕುಲುಮೆಯನ್ನು ನೆಲದಲ್ಲಿ ನಿರ್ಮಿಸಲಾಗಿರುತ್ತದೆ.
ಬೆಲ್ಲ 
ಆಲೆಮನೆಯಲ್ಲಿ ಕಬ್ಬಿನಹಾಲನ್ನು ಕುದಿಸಿ ಬೆಲ್ಲ ತಯಾರಿಸುತ್ತಿರುವುದು.
  • ಇತ್ತೀಚೆಗೆ ಒಂದು ಬಾನಿಯ (ಕಡಾಯಿ) ಬದಲು 3 ರಿಂದ 4 ಬಾನಿಗಳನ್ನು ಸಾಲಿನಲ್ಲಿ ಇಟ್ಟು ಕಬ್ಬಿನ ಹಾಲು ಕುದಿಯುವ ವ್ಯವಸ್ಥೆ ಮಾಡಲಾಗುವುದು ಮತ್ತು ಹೊಗೆ ಕೊಳವೆಯ ಮೂಲಕ ಅನಿಲಗಳು ಎಲ್ಲಾ ನಾಲ್ಕು ಕುದಿಯುವ ಕಡಾಯಿಗಳಿಗೆ ಒಂದರ ನಂತರ ಮತ್ತೊಂದು,ಮತ್ತೆ ಒಂದು; ನಂತರಲ್ಲಿ ಚಿಮಣಿ ಮೂಲಕ ಅಡಿಯಲ್ಲಿ ಬೆಂಕಿಯ ಸುಳಿ ಹೋಗಲು ವ್ಯವಸ್ಥೆ ಮಾಡುವರು.
ಬೆಲ್ಲ 
ಆಲೆಮನೆಯ ಒಲೆ ಮತ್ತು ಬಾನಿಯಲ್ಲಿ ಕಬ್ಬಿನ ಹಾಲು ಕಾಯಿಸುವುದು.
  • ಕುದಿಯುವ ಸಮಯದಲ್ಲಿ ಮೇಲಕ್ಕೆ ಬಂದ ಎಲ್ಲ ಕಶ್ಮಲಗಳನ್ನು ಉದ್ದ ಕೋಲಿಗೆ ಕಟ್ಟಿದ ಜರಡಿ ಅಥವಾ ಬಟ್ಟೆಯ ಮೂಲಕ ತೆಗೆದುಹಾಕಲಾಗುತ್ತದೆ.
  • ಕುದಿಯುವುದರಿಂದ ಎಲ್ಲಾ ನೀರಿನ ಅಂಶ ಆವಿಯಾಗಿ ನಂತರ ಕಬ್ಬಿನ ಹಾಲು (ರಸ) ಗಟ್ಟಿಯಾಗುತ್ತದೆ; ಮಂದವಾದ ಹಳದಿ ವಸ್ತುವು ಎತ್ತಿ ಬಿಟ್ಟಾಗ ದಾರವಾಗುವ ಹದ ಬಂದಾಗ ಕುದಿಯುವ ಬೆಲ್ಲವನ್ನು ತಂಪಾಗಿಸುವ ಅಗಲದ ಸಿಮೆಂಟಿನ ಕಟ್ಟೆಯಿರುವ ಹೊಂಡಕ್ಕೆ ಬಿಡಲಾಗುವುದು ಅಥವಾ ಬೋಗುಣಿಗೆ ಬಿಡಲಾಗುತ್ತದೆ. ಅದನ್ನು ಸ್ವಲ್ಪ ಆರಿದ ನಂತರ ಬೇಕಾದ ಗಾತ್ರಕ್ಕೆ ಬೇಕಾದ ಆಕಾರದ ಅಚ್ಚುಗಳನ್ನು ಮಾಡಲಾಗುವುದು.
  • ಮಲೆನಾಡಿನಲ್ಲಿ ಕುದಿದ ಬೆಲ್ಲವನ್ನು ನಾದಿದ ತಿಳಿಹಿಟ್ಟನ ಹದಕ್ಕೆ ತಂದು ಡಬ್ಬಗಳಲ್ಲಿ ತುಂಬುವರು. ಇನ್ನೂ ಕೆಲವರು ಬೇಡಿಕೆ ಇದ್ದರೆ ದೋಸೆಯ ಹಿಟ್ಟನ ಹದಕ್ಕೆ ಬಾನಿಯಿಂದ ತೆಗೆದು ಜೇನುತುಪ್ಪದ ರೀತಿಯ "ಜೋನಿ ಬೆಲ್ಲ"ಮಾಡಿ ಡಬ್ಬ ತುಂಬುವರು. ಡಬ್ಬದಲ್ಲಿ ಕಾಲುಭಾಗ ಅಥವಾ ಅದಕ್ಕೂ ಕಡಿಮೆ ಜೋನಿಬೆಲ್ಲ ಇರುವುದು, ಅದರ ತಳದಲ್ಲಿ ಚಮಚೆಯಿಂದ ತೆಗೆಯಬಹುದಾದ ಗಟ್ಟಿ ಬೆಲ್ಲ ಇರುವುದು. ಹೀಗೆ ಈಗ ಬೆಲ್ಲ ತಯಾರಿ ಆಗುವುದು.
  • ಹಿಂದೆ ಕಬ್ಬು ಹಿಂಡಲು 8"-10” ದಪ್ಪದ ಎರಡು ಅಡಿ ಎತ್ತರದ ದುಂಡನೆಯ ಕಬ್ಬಿಣದ ಕಣೆಯನ್ನು ತ್ರಿಕೋನಾಕಾರವಾಗಿ ಜೋಡಿಸಿ, ಅದನ್ನು ಉದ್ದ ನೊಗಕ್ಕೆ ಅಳವಡಿಸಿ ಕೋಣಗಳನ್ನು ಕಟ್ಟಿ ಕೋಣಗಳು ಸುತ್ತತಿರುಗುವ ಕ್ರಿಯೆಯಿಂದ ಕಣೆ ತಿರುಗಿಸುತ್ತಿದ್ದರು. ಆ ಕಣೆಗಳ ನಡುವೆ ಕಬ್ಬುಕೊಟ್ಟು (ತುರಕಿ) ಅದು ಜಜ್ಜಿ ರಸ ಬರುವಂತೆ ಮಾಡುತ್ತಿದ್ದರು. ಮಲೆನಾಡಿನಲ್ಲ್ಲಿ ಅದನ್ನು ಸೋಯಿಸಿ ದೊಡ್ಡ ಕಡಾಯಿಯಲ್ಲಿ (ಕಬ್ಬಿಣದ ಬಾನಿ)ಕಾಯಿಸಿ ತೆಳುವಾದ ಇಡ್ಡಲಿ ಹಿಟ್ಟಿನಂತಿರುವ ಹಳದಿ ಬಣ್ಣದ ಅಥವಾ ನಸು ಕಪ್ಪು ಬಣ್ಣದ ಬೆಲ್ಲವನ್ನು ಬಿಸಿ ಆರಿದ ನಂತರ ಕೊಡದ ಆಕೃತಿಯ ಮಡಕೆಗೆ ತುಂಬಿ ಅದರ ಬಾಯಿಗೆ ಮಣ್ಣಿನ ಸಣ್ಣ ತಟ್ಟೆಯಿಟ್ಟು ಮಣ್ಣಿನಿಂದ ಗಾಳಿಯಾಡದಂತೆ ಮೆತ್ತುತ್ತಿದ್ದರು.ನಂತರದ ದಿನಗಳಲ್ಲಿ ಗಡಿಗೆ ಅಥವಾ ಮಡಕೆಯ ಬದಲು ತಗಡಿನ ಡಬ್ಬಿಗಳಲ್ಲಿ ತುಂಬುತ್ತಿದ್ದರು ಈಗ ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬುವರು.
  • ಬಯಲುಸೀಮೆಯ ಕಡೆ ಬೆಲ್ಲವನ್ನು ಇನ್ನೂ ಗಟ್ಟಿಹದದಲ್ಲಿ ಬಿಸಿ ಬೆಲ್ಲವನ್ನು ಬಾನಿಯಿಂದ ಇಳಿಸಿ ಉಂಡೆಗಳನ್ನು ಮಾಡುವರು ಅಥವಾ ಬಕೇಟಿನ ಮಾದರಿಯ ಆನೆಪಿಂಟೆ ಬೆಲ್ಲ ಮಾಡುವರು. ಒಂದು ಕೆಜಿ ಯಿಂದ ಹದಿನೈದು ಕೆಜಿಯವರೆಗೂ ತೂಗುವ ಬೆಲ್ಲದ ಅಚ್ಚು ಮಾಡುವರು. ಹೀಗೆ ಅಚ್ಚುಮಾಡಲು ಕೆಲವರು ಅಡಿಗೆ ಸೋಡಾ, ಸುಣ್ಣ ಮತ್ತು ಇತರ ವನಸ್ಪತಿ ವಸ್ತುಗಳನ್ನು, ಬಣ್ಣ ಮತ್ತು ತೂಕ ಬರಲು ಸೇರಿಸವರು. ಆದರೆ ಅದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.
100ಗ್ರಾಂ ಬೆಲ್ಲದಲ್ಲಿ ಇರುವ ಅಣಶಗಳು
ಕ್ಯಾಲೊರಿ 383
ಸರ್ಕೋಸ್ 65-95 gr
ಪ್ರಕ್ಟೋಸ್ &ಗ್ಲೂಕೊಸ್ 10-15gr
ಪ್ರೊಟೀನ್ 0.4gr
ಕೊಬ್ಬು 0.1gr
ಕಬ್ಬಿಣ 11mg
ಮೆಗ್ನೀಶಿಯಂ 70-90mg
ಪೊಟ್ಯಾಸಿಯಂ 1050mg
ಮ್ಯಾಂಗನೀಸ್ 0.2- 0.5mg
ಖನಿಜಾಂಶ 5%
ವಿಟಮಿನ್ ಬಿ
ಕ್ಯಾಲ್ಶಿಯಂ+ ಫಾಸ್ಪರಸ್+
ತಾಮ್ರಾಂಶ +

ವಿವರ

  • ಬೆಲ್ಲದ ಹೆಸರು:ಮೆಕ್ಷಿಕ-ಪಿಲಾಂತಿಲ್ಲೊ; ಭಾರತ -ಗರ್ ; ಮಲೇಷಿಯಾ -ಗುಲ್ಮೇರಾ; ಸಂಸ್ಕೃತ-ಗುಡಾ.ಇಂಗ್ಲಿಷ್-ಜಾಗರಿ.
  • ಕಬ್ಬಿನ ರಸದಿಂದ ತಯಾರಿಸಲಾಗುವ ಉತ್ಪನ್ನ ಬೆಲ್ಲ. ಸಂಸ್ಕರಿಸದ ಸಕ್ಕರೆ ಉತ್ಪನ್ನ ಎಂದೂ ಕರೆಯಲಾಗುತ್ತದೆ. ವಿಶ್ವದ ಬೆಲ್ಲ ಉತ್ಪಾದನೆಯಲ್ಲಿ ಭಾರತದ್ದು 70% ಪಾಲು ಇದೆ. ಬೆಲ್ಲದ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಸಕ್ಕರೆ ಬಳಸುವ ದೇಶ ಭಾರತ. ಭಾರತದಲ್ಲಿ ಸುಮಾರು ನಲವತ್ತು ಲಕ್ಷ ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದೆ.
  • ಭಾರತದಲ್ಲಿ 3 ಕೋಟಿ ಟನ್ ಕಬ್ಬು ಬೆಳೆಯುತ್ತಿದ್ದು, ಅದರಲ್ಲಿ 36% ಬೆಲ್ಲ ತಯಾರಿಕೆಗೆ ಬಳಸಲಾಗುತ್ತಿದೆ.

  • ಬೆಲ್ಲವನ್ನು ಮುಖ್ಯವಾಗಿ ಕಬ್ಬು ಹಾಗೂ ಖರ್ಜೂರದ ಮರದಿಂದ ತಯಾರಿಸಲಾಗುತ್ತದೆ. ಖರ್ಜೂರದ ರಸದಿಂದ ಮಾಡಲಾಗುವ ಬೆಲ್ಲ ಹೆಚ್ಚು ಬೆಲೆ ಹಾಗೂ ದೊರೆಯುವುದು ಕಡಿಮೆ. ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಸುವ ಪ್ರಕ್ರಿಯೆಯೇ ಇರುವುದು. ಪಶ್ಚಿಮ ಬಂಗಾಳ, ದಕ್ಷಿಣ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಶ್ರೀಲಂಕಾದಲ್ಲಿ ಇದನ್ನು ತಯಾರಿಸಲಾಗುತ್ತದೆ.
  • ಬೆಲ್ಲದ–ಸಂಪ್ರದಾಯ: ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವು ಗ್ರಾಮಗಳಲ್ಲಿ ಮನೆಗೆ ಬಂದವರಿಗೆ ಬೇಸಿಗೆಯಲ್ಲಿ ಬೆಲ್ಲ ಮತ್ತು ನೀರನ್ನು ಕೊಡುವ ರೂಢಿಯಿದೆ. ಗುಜರಾತ್‌ನಲ್ಲಿ ದನಿಯಾ ಹಾಗೂ ಬೆಲ್ಲವನ್ನು ನಿಶ್ಚಿತಾರ್ಥ ಸಮಯದಲ್ಲಿ ನೀಡುತ್ತಾರೆ.

ಬೆಲ್ಲ ಮತ್ತು ಆರೋಗ್ಯ

  • ಸಂಸ್ಕರಿತ ಸಕ್ಕರೆಗಿಂತ ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿವೆ. ಏಕೆಂದರೆ ಇದರಲ್ಲಿ ಕಾಕಂಬಿ ಹೆಚ್ಚಿರುತ್ತದೆ. ಸಂಸ್ಕರಿಸಿದ ಸಕ್ಕರೆಯಲ್ಲಿ ಯಾವುದೇ ವಿಟಮಿನ್ ಮತ್ತು ಖನಿಜಾಂಶ ಇರುವುದಿಲ್ಲ. ಇದರ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಸಂಸ್ಕರಿತ ಸಕ್ಕರೆಗಿಂತ ಬೆಲ್ಲವೇ ಉತ್ತಮ.
    ಕೆಲವು ಔಷಧೀಯ ಗುಣ
  • ಕೀಲು ನೋವಿದ್ದವರಿಗೆ, ಋತು ಸಮಸ್ಯೆ ಇದ್ದವರಿಗೆ ಇದರ ಸೇವನೆ ಒಳ್ಳೆಯದು. ನಿಶ್ಶಕ್ತಿಯಿಂದ ಬಳಲುವವರಿಗೆ ಉಪಕಾರಿ. ಮಲಬದ್ಧತೆ ನಿವಾರಿಸುತ್ತದೆ.ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶ್ವಾಸನಾಳ ಶುದ್ಧಗೊಳಿಸುತ್ತದೆ. ಪಿತ್ತಕೋಶದ ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ. ಆ್ಯಸಿಡಿಟಿಗೆ ಒಳ್ಳೆಯದು. ಟಾನಿಕ್‌ಗಳಿಗೂ ಬಳಸಲಾಗುತ್ತದೆ. ರಕ್ತಹೀನತೆ ನಿವಾರಿಸುತ್ತದೆ. ರಕ್ತ ಶುದ್ಧಗೊಳಿಸುತ್ತದೆ. ಬೆಲ್ಲ ಸೇವನೆ ಎಂಡಾರ್ಫಿನ್ ಹಾರ್ಮೋನಿಗೆ ಪ್ರೇರಕವಾಗಿದೆ. ಆದ್ದರಿಂದ ಇದು ಆತಂಕ, ಒತ್ತಡ ಹಾಗೂ ಋತುಸ್ರಾವದ ಮುನ್ನದ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ನೆಗಡಿ, ಶೀತಕ್ಕೆ ಒಳ್ಳೆಯದು.
  • ಆದರೆ ಮಿತಿ ಮೀರಿ ಬೆಲ್ಲ ಸೇವಿಸಿದರೆ ಸ್ಥೂಲಕಾಯ ಬರುವ ಸಾಧ್ಯತೆ ಇದೆ. ಟೈಪ್‌ 2 ಮಧುಮೇಹಕ್ಕೆ ಎಡೆಮಾಡಿಕೊಡುತ್ತದೆ.

ನೋಡಿ

ಬಾಹ್ಯ ಸಂಪರ್ಕಗಳು

  • jaggery automatic plant quality [[೧]]
  • ಮಲೆನಾಡು ಬೆಲ್ಲ-ಆಲೆಮನೆ[[೨]]

ಉಲ್ಲೇಖ

Tags:

ಬೆಲ್ಲ ತಯಾರಿಕೆ ವಿಧಾನಬೆಲ್ಲ ವಿವರಬೆಲ್ಲ ಮತ್ತು ಆರೋಗ್ಯಬೆಲ್ಲ ನೋಡಿಬೆಲ್ಲ ಬಾಹ್ಯ ಸಂಪರ್ಕಗಳುಬೆಲ್ಲ ಉಲ್ಲೇಖಬೆಲ್ಲಕಬ್ಬಿನ ರಸಕಾಕಂಬಿಸಕ್ಕರೆಸುಕ್ರೋಸ್

🔥 Trending searches on Wiki ಕನ್ನಡ:

ಪರಿಸರ ವ್ಯವಸ್ಥೆಚಿನ್ನಭಗತ್ ಸಿಂಗ್ಮಹಾಲಕ್ಷ್ಮಿ (ನಟಿ)ಬಾದಾಮಿ ಗುಹಾಲಯಗಳುಮುತ್ತುಗಳುವಿಷ್ಣುವರ್ಧನ್ (ನಟ)ಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಭಾರತಬಾಳೆ ಹಣ್ಣುಋಷಿಬೆಟ್ಟದ ನೆಲ್ಲಿಕಾಯಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಧಾನ್ಯಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಭಾರತದ ಪಂಚಾಯತ್ ರಾಜ್ ವ್ಯವಸ್ಥೆಜೀವಕೋಶಕ್ಯಾರಿಕೇಚರುಗಳು, ಕಾರ್ಟೂನುಗಳುಸವದತ್ತಿರಾಘವಾಂಕದೆಹಲಿ ಸುಲ್ತಾನರುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಏಳು ಪ್ರಾಣಾಂತಿಕ ಪಾಪಗಳುಭೂತಾರಾಧನೆಹಿರಿಯಡ್ಕಸಮಾಜಶಾಸ್ತ್ರಭಾರತದ ಸಂಸತ್ತುಶಾಸನಗಳುಪೂರ್ಣಚಂದ್ರ ತೇಜಸ್ವಿನೀನಾದೆ ನಾ (ಕನ್ನಡ ಧಾರಾವಾಹಿ)ಸಂಗೀತಭಾರತದ ರಾಷ್ಟ್ರಗೀತೆತತ್ತ್ವಶಾಸ್ತ್ರಜಿ.ಪಿ.ರಾಜರತ್ನಂಶಾತವಾಹನರುಭಾರತ ಸಂವಿಧಾನದ ಪೀಠಿಕೆಬೇಲೂರುಸುಮಲತಾಸತ್ಯ (ಕನ್ನಡ ಧಾರಾವಾಹಿ)ಕುರಿಬೆಂಗಳೂರುಆವಕಾಡೊಜಿ.ಎಸ್.ಶಿವರುದ್ರಪ್ಪಮಧ್ವಾಚಾರ್ಯಮಂತ್ರಾಲಯಬ್ಯಾಡ್ಮಿಂಟನ್‌ಕರ್ನಾಟಕದ ಕಲೆ ಮತ್ತು ಸಂಸ್ಕೃತಿಶಾಸ್ತ್ರೀಯ ಭಾಷೆಗಣರಾಜ್ಯೋತ್ಸವ (ಭಾರತ)ಬಹಮನಿ ಸುಲ್ತಾನರುದಾಸ ಸಾಹಿತ್ಯಅಮೃತಬಳ್ಳಿಗಾದೆ ಮಾತುಅಡಿಕೆಕರ್ನಾಟಕದ ಜಾನಪದ ಕಲೆಗಳುಕರ್ಕಾಟಕ ರಾಶಿಸ್ತ್ರೀವಾದಚನ್ನವೀರ ಕಣವಿಹರಿಶ್ಚಂದ್ರಸೆಸ್ (ಮೇಲ್ತೆರಿಗೆ)ಪಂಜುರ್ಲಿಕೈಗಾರಿಕಾ ಕ್ರಾಂತಿವಿಜಯ ಕರ್ನಾಟಕಮಲೈ ಮಹದೇಶ್ವರ ಬೆಟ್ಟಸಂಶೋಧನೆಸೋಮನಾಥಪುರತಲಕಾಡುಕಾವೇರಿ ನದಿವಿಶ್ವ ಪರಿಸರ ದಿನಕರಗ (ಹಬ್ಬ)ಭಾರತದ ಚುನಾವಣಾ ಆಯೋಗಯಣ್ ಸಂಧಿಕೊರೋನಾವೈರಸ್ಒಡೆಯರ ಕಾಲದ ಕನ್ನಡ ಸಾಹಿತ್ಯಶಿವರಾಮ ಕಾರಂತ🡆 More