ನರರೋಗNeuropathy

'ಬಹು-ನರರೋಗ', 'ಏಕ-ನರರೋಗ', 'ಮಾನೊನ್ಯೂರಿಟಿಸ್ ಮಲ್ಟಿಪ್ಲೆಕ್ಸ್'(ಒಂದಕ್ಕಿಂತ ಹೆಚ್ಚು ಪ್ರತ್ಯೇಕ ನರದ ಗುಂಪುಗಳಿಗೆ ಹಾನಿ) ಹಾಗೂ 'ಸ್ವನಿಯಂತ್ರಿತ ನರರೋಗ' ಎಂಬ ಬಾಹ್ಯ ನರರೋಗದ ನಾಲ್ಕು ಪ್ರಧಾನ ನಮೂನೆಗಳಿವೆ.

ಪಾದಗಳು ಮತ್ತು ಕಾಲುಗಳಿಗೆ ದುಷ್ಪರಿಣಾಮ ಉಂಟುಮಾಡುವ(ಸಮ್ಮಿತೀಯ) ಬಾಹ್ಯ ಬಹು-ನರರೋಗವು ಅತೀ ಸಾಮಾನ್ಯ ರೂಪವಾಗಿದೆ. ನರರೋಗದ ರೂಪವನ್ನು ಕಾರಣ ಅಥವಾ ಪ್ರಧಾನ ತಂತು ಒಳಗೊಳ್ಳುವ ಗಾತ್ರದ ಮೇಲೆ ಮತ್ತಷ್ಟು ವಿಭಜನೆ ಮಾಡಬಹುದು. ಅವು ದೊಡ್ಡ ತಂತು ಅಥವಾ ಚಿಕ್ಕ ತಂತು ಬಾಹ್ಯ ನರರೋಗ. ನರರೋಗದ ಕಾರಣವನ್ನು ಆಗಾಗ್ಗೆ ಗುರುತಿಸಲು ಸಾಧ್ಯವಾಗದು. ಇದನ್ನು ನಿರುಪಾಧಿಕ ರೋಗ(ಸ್ವಯಂಜನ್ಯ) ಎನ್ನಲಾಗಿದೆ.

Peripheral neuropathy
Classification and external resources
ICD-10G64, G90.0
ICD-9356.0, 356.8
DiseasesDB9850
MeSHD010523
ಬಾಹ್ಯ ನರ ವ್ಯವಸ್ಥೆಯ  ನರಗಳಿಗೆ ಹಾನಿಯಾದರೆ, ಇದಕ್ಕೆ 'ಬಾಹ್ಯ ನರ ರೋಗ ' ಎನ್ನಲಾಗುವುದು. ಮಾನವ ಶರೀರದಲ್ಲಿನ ನರದ ರೋಗಗಳು ಅಥವಾ ಇಡೀ ದೇಹದಲ್ಲಿ ಕಾಯಿಲೆಯ ಅಡ್ಡ-ಪರಿಣಾಮಗಳಿಂದಾಗಿ ಇದು ಸಂಭವಿಸಬಹುದು. 

ನರರೋಗಗಳು ದೌರ್ಬಲ್ಯ, ಸ್ವನಿಯಂತ್ರಿತ ಬದಲಾವಣೆಗಳು ಹಾಗೂ ಸಂವೇದನೆ ಬದಲಾವಣೆಗಳ ವಿಭಿನ್ನ ಸಂಯೋಗಗಳೊಂದಿಗೆ ಸಂಬಂಧಿಸಿರುತ್ತದೆ. ಸ್ನಾಯುಗಳ ಗಾತ್ರ ಕಡಿಮೆಯಾಗುವುದು ಅಥವಾ ಸೆಳೆತಗಳು, ಸ್ನಾಯುವಿನ ನಿರ್ದಿಷ್ಟ ಸೆಳೆತ ಅಥವಾ ಜಗ್ಗುವಿಕೆಯನ್ನು ಗಮನಿಸಬಹುದಾಗಿದೆ. ಸಂವೇದನೆ ರೋಗಲಕ್ಷಣಗಳಲ್ಲಿ ನೋವುಸೇರಿದಂತೆ ಇತರೆ ಸಂವೇದನೆಗಳ ಕೊರತೆ ಒಳಗೊಂಡಿದೆ. ರೋಗ ಲಕ್ಷಣಗಳು ತೊಂದರೆಗೀಡಾದ ನರಗಳ ವಿಧದ ಮೇಲೆ ಅವಲಂಬಿಸಿವೆ.(ಉದಾಹರಣೆಗೆ ಪ್ರಚೋದಕ, ಸಂವೇದನಾ ಅಥವಾ ಸ್ವನಿಯಂತ್ರಿತ ನರಗಳು) ಹಾಗೂ ನರವು ಶರೀರದ ಯಾವ ಭಾಗದಲ್ಲಿದೆ ಎಂಬುದನ್ನೂ ಸಹ ಅವಲಂಬಿಸಿದೆ. ಒಂದಕ್ಕಿಂತಲೂ ಹೆಚ್ಚು ತರಹದ ನರಗಳ ಮೇಲೆ ಸಹ ದುಷ್ಪರಿಣಾಮ ಬೀರಬಹುದು. ಸ್ನಾಯುಗಳ ದೌರ್ಬಲ್ಯ, ಸೆಡೆತಗಳು ಹಾಗೂ ಸಂಕೋಚನವು ಪ್ರಚೋದಕ ನರಗಳ ಹಾನಿಗೆ ಸಂಬಂಧಿಸಿದ ಸಾಮಾನ್ಯ ರೋಗಲಕ್ಷಣಗಳಾಗಿರುತ್ತವೆ. ಸಮತೋಲನ ತಪ್ಪುವುದು ಮತ್ತು ಹೊಂದಾಣಿಕೆಯ ಕೊರತೆಯೂ ಸಂಭವಿಸಬಹುದು. ಸಂವೇದನಾ ನರಗಳಿಗೆ ಹಾನಿಯಿಂದ ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಮತ್ತು ನೋವುಂಟಾಗಬಹುದು. ಇಂತಹ ನರಕ್ಕೆ ಸಂಬಂಧಿಸಿದ ನೋವನ್ನು ವಿವಿಧ ರೀತಿಯಲ್ಲಿ ವಿವರಿಸಬಹುದು: ಅದೃಶ್ಯ ಕೈಚೀಲ ಅಥವಾ ಕಾಲ್ಚೀಲ ಧರಿಸಿದ ರೀತಿಯಲ್ಲಿ ಸಂವೇದನೆ, ಉರಿ, ವಿಪರೀತ ಶೈತ್ಯದ, ಅಥವಾ ವಿದ್ಯುತ್‌ ಸಂಚಾರದಂತಿರುವ ಸಂವೇದನೆ, ಸ್ಪರ್ಶಕ್ಕೆ ವಿಪರೀತ ಸೂಕ್ಷ್ಮತೆ. ಸ್ವನಿಯಂತ್ರಿತ ನರದ ಹಾನಿಯಿಂದ ಅನೈಚ್ಛಿಕ ಕ್ರಿಯೆಗಳಲ್ಲಿ ಸಮಸ್ಯೆಗಳುಂಟಾಗಿ, ಅಪಸಾಮಾನ್ಯ ರಕ್ತದೊತ್ತಡ ಮತ್ತು ಹೃದಯ ಬಡಿತದ ಪ್ರಮಾಣ, ಬೆವರು ಸುರಿಸುವ ಕ್ಷಮತೆ ಕಡಿಮೆಯಾಗುವಿಕೆ, ಮಲಬದ್ಧತೆ, ಮೂತ್ರ ಕೋಶದ ದೌರ್ಬಲ್ಯ(ನಿರೋಧರಾಹಿತ್ಯ) ಹಾಗೂ ಲೈಂಗಿಕ ದೌರ್ಬಲ್ಯದಂತ ಸಮಸ್ಯೆಗಳಾಗಬಹುದು.

ವರ್ಗೀಕರಣ

ತೊಂದರೆಯಾದ ನರಗಳ ಸಂಖ್ಯೆ ಅಥವಾ ತೊಂದರೆಯಾದ ನರಕೋಶದ ವಿಧ(ಪ್ರಚೋದಕ,ಸಂವೇದನೆ, ಸ್ವನಿಯಂತ್ರಿತ) ಅಥವಾ ನರಗಳ ಮೇಲೆ ಪ್ರಭಾವ ಬೀರುವ ಪ್ರಕ್ರಿಯೆ (ಉದಾಹರಣೆಗೆ ನರ ಉರಿಯೂತ) ಅವಲಂಬಿಸಿ, ಬಾಹ್ಯ ನರರೋಗವನ್ನು ವರ್ಗೀಕರಿಸಬಹುದಾಗಿದೆ.

ಏಕ-ನರರೋಗ

ಒಂದೇ ಒಂದು ನರಕ್ಕೆ ಉಂಟಾಗುವ ನರರೋಗದ ವಿಧವನ್ನು ಏಕ-ನರರೋಗ ಎನ್ನಲಾಗುವುದು. ವ್ಯಾಪ್ತಿ ಸೀಮಿತವಾಗಿರುವುದರಿಂದ, ಸ್ಥಳೀಯ ಆಘಾತ ಅಥವಾ ಸೋಂಕು ಈ ರೋಗಕ್ಕೆ ಕಾರಣ ಎಂದು ಗುರುತಿಸುವ ಮೂಲಕ, ಬಹು-ನರರೋಗಗಳಿಂದ ಏಕ-ನರರೋಗವನ್ನು ಪ್ರತ್ಯೇಕಿಸುವುದು, ರೋಗನಿರ್ಣಯದ ದೃಷ್ಟಿಯಿಂದ ಉಪಯುಕ್ತವಾಗಿದೆ.

ನರದ ದೈಹಿಕ ಸಂಕೋಚನವು ಏಕ-ನರರೋಗದ ಸರ್ವೇಸಾಮಾನ್ಯ ಕಾರಣವಾಗಿದೆ. ಇದನ್ನು ಸಂಕೋಚನ ನರರೋಗ ಎನ್ನಲಾಗಿದೆ. ಮಣಿಕಟ್ಟಿನ ನರ ರೋಗಲಕ್ಷಣ ಇದಕ್ಕೆ ಒಂದು ಉದಾಹರಣೆ.

ಕಾಲು ಜೋಂಪು ಹಿಡಿಯುವಿಕೆ(ಪೆರೆಸ್ತೀಸಿಯ)ಯ ಜುಮ್ಮೆನ್ನುವ ಸಂವೇದನೆಯು  ಸಂಕೋಚನ ಏಕ-ನರರೋಗದಿಂದ ಉಂಟಾಗುವುದು. ಇದು ಅಲ್ಪಕಾಲಿಕ ತೊಂದರೆಯಾಗಿದ್ದು, ಅತ್ತಿತ್ತ ಚಲಿಸಿ, ಇನ್ನಷ್ಟು ಸೂಕ್ತ ಸ್ಥಾನದಲ್ಲಿ ಕೂಡುವುದರಿಂದ ಈ ಜೋಂಪನ್ನು ನಿವಾರಿಸಬಹುದು.  ನರಕ್ಕೆ ನೇರ ಗಾಯ, ಅದರ ರಕ್ತ ಪೂರೈಕೆಯಲ್ಲಿ ಅಡಚಣೆ, (ರಕ್ತ ಕೊರತೆ) ಅಥವಾ ಉರಿಯೂತದಿಂದ ಏಕ-ನರರೋಗವು ಸಂಭವಿಸಬಹುದು. 

ಮಾನೊನ್ಯೂರಿಟಿಸ್ ಮಲ್ಟಿಪ್ಲೆಕ್ಸ್

ಮಾನೊನ್ಯೂರಿಟಿಸ್ ಮಲ್ಟಿಪ್ಲೆಕ್ಸ್‌ನಲ್ಲಿ ಒಂದಕ್ಕೊಂದು ಹೊಂದಿಕೊಂಡಿರದ ಹಲವು ನರಗಳು ಏಕಕಾಲಿಕ ಅಥವಾ ಅನುಕ್ರಮವಾಗಿ, ಆಂಶಿಕ ಅಥವಾ ಪೂರ್ಣ ಪ್ರಮಾಣದಲ್ಲಿ, ದಿನಗಳು ಅಥವಾ ವರ್ಷಗಳ ಕಾಲ ವಿಕಾಸವಾಗಿ, ಒಂದು ಮಾದರಿಯಲ್ಲಿ ಬಾಹ್ಯ ನರಗಳ ಸಂವೇದನಾವಾಹಕ ಮತ್ತು ಪ್ರಚೋದಕ ಕಾರ್ಯನಿರ್ವಹಣೆಯಲ್ಲಿ ತೀವ್ರ ಅಥವಾ ಕಡಿಮೆತೀವ್ರತೆಯ ನಷ್ಟ ಉಂಟಾಗುತ್ತದೆ. ಒಳಗೊಂಡಿರುವ ನಮೂನೆಯು ಅಸಮ್ಮಿತವಾಗಬಹುದು. ಆದಾಗ್ಯೂ, ರೋಗವು ಉಲ್ಬಣವಾಗುತ್ತಿದ್ದಂತೆ, ಕೊರತೆಗಳು ಹೆಚ್ಚು ಕೂಡಿಕೊಂಡು ಸಮ್ಮಿತೀಯವಾಗುತ್ತದೆ ಹಾಗು ಬಹುನರರೋಗದಿಂದ ವ್ಯತ್ಯಾಸ ತಿಳಿಯುವುದು ಕಷ್ಟವಾಗುತ್ತದೆ. ಆದ್ದರಿಂದ, ರೋಗದ ಆರಂಭಿಕ ಹಂತದಲ್ಲಿಯೇ ಲಕ್ಷಣಗಳ ನಮೂನೆಗಳನ್ನು ಗಮನಿಸುವುದು ಬಹಳ ಮುಖ್ಯ.

ಮಾನೊನ್ಯೂರಿಟಿಸ್ ಮಲ್ಟಿಪ್ಲೆಕ್ಸ್‌ನಲ್ಲಿ ಕೆಳಬೆನ್ನು, ಸೊಂಟ ಅಥವಾ ಕಾಲಿನಲ್ಲಿ ಆಗಾಗ್ಗೆ ನೋವು ಉಂಟಾಗಿ, ರಾತ್ರಿಯ ವೇಳೆ ಇನ್ನಷ್ಟು ಹೆಚ್ಚಾಗುವ ತೀವ್ರ ಯಾತನೆಯ ನೋವಿನ ಲಕ್ಷಣದಿಂದ ಕೂಡಿರುತ್ತದೆ. ಮಧುಮೇಹ ರೋಗಿಗಳಲ್ಲಿ ಬಹುವಿಧದ ಏಕ-ನರರೋಗವು ತೊಡೆಭಾಗದಲ್ಲಿ ತೀಕ್ಷ್ಣ, ಏಕಪಕ್ಷೀಯ ಹಾಗೂ ತೀವ್ರ ನೋವು, ಹಾಗೂ ಮುಂಭಾಗದಲ್ಲಿ ಸ್ನಾಯು ದೌರ್ಬಲ್ಯ ಮತ್ತು ಮಂಡಿ ಅನುವರ್ತನದ ಕೊರತೆ ಕಂಡುಬರುತ್ತದೆ.

ವಿದ್ಯುತ್‌-ಅಧಾರಿತ ರೋಗನಿರ್ಣಯ ಅಧ್ಯಯನವು ಬಹು-ಕೇಂದ್ರೀಯ ಸಂವೇದನಾ ಪ್ರಚೋದಕ ನರತಂತುವಿನ ನರರೋಗವನ್ನು ತೋರಿಸುತ್ತದೆ.

ಕೆಳಕಂಡ ಹಲವು ವೈದ್ಯಕೀಯ ಸ್ಥಿತಿಗಳು ಇದಕ್ಕೆ ಕಾರಣವಾಗಿವೆ ಅಥವಾ ಸಂಬಂಧಿತವಾಗಿವೆ.

  • ಡಯಾಬಿಟೀಸ್ ಮೆಲಿಟಸ್‌ (ತೀವ್ರ ಮಧುಮೇಹ)
  • ರಕ್ತನಾಳಗಳ ಉರಿಯೂತ(ವ್ಯಾಸ್ಕುಲೈಟೈಡ್ಸ್): ಮಧ್ಯಮ ಗಾತ್ರದ ಅಪಧಮನಿಗಳ ಉರಿಯೂತ(ಪಾಲಿಆರ್ಟರೀಸ್ ನೊಡೋಸಾ) ಶ್ವಾಸಕೋಶ ಮತ್ತು ಮೂತ್ರಪಿಂಡಗಳಿಗೆ ಹಾನಿಕಾರಕ ರಕ್ತನಾಳಗಳ ಉರಿಯೂತ(ಗ್ರಾನ್ಯುಲೊಮಟೋಸಿಸ್) ಮತ್ತು ಹಾಗೂ ಶ್ವಾಸಕೋಶಗಳ ರಕ್ತನಾಳಗಳ ಉರಿಯೂತ(ಚರ್ಗ್-ಸ್ಟ್ರಾಸ್ ಸಿಂಡ್ರೋಮ್)


  • ಕೀಲುವಾಯುರೋಗ, ಲ್ಯೂಪಸ್ ಎರಿತೆಮೇಟಸ್(ಚರ್ಮಕ್ಷಯ) (ಎಸ್‌ಎಲ್‌ಇ) ಹಾಗೂ ವಿವಿಧ ಅಂಗಗಳಲ್ಲಿ ಗಂಟು ಕಾಣಿಸಿಕೊಳ್ಳುವ ರೋಗ(ಸಾರ್ಕೋಯಿಡೋಸಿಸ್) ದಂತಹ ಪ್ರತಿರಕ್ಷಣಾವ್ಯವಸ್ಥೆಯ ಅಪಸಾಮಾನ್ಯ ಚಟುವಟಿಕೆ ರೋಗಗಳು
  • ಸೋಂಕುಗಳು: ಕುಷ್ಠರೋಗ, ಸಾಂಕ್ರಾಮಿಕ ಚರ್ಮರೋಗ (ಲೈಮ್‌ ರೋಗ), ಎಚ್‌ಐವಿ
  • ಆಮಿಲಾಯಿಡೋಸಿಸ್(ವಿವಿಧ ಅಂಗಗಳಲ್ಲಿ ಪೈಷ್ಠಕಗಳ ಸಂಗ್ರಹ)
  • ಕ್ರಯೊಗ್ಲೊಬ್ಲ್ಯುಲೀನಿಯ(ರಕ್ತದಲ್ಲಿ ಅಪಸಾಮಾನ್ಯ ಪ್ರೊಟೀನ್‌ಗಳ ಉಪಸ್ಥಿತಿ)
  • ಟ್ರೈಕ್ಲೊರೊಎತಿಲೀನ್‌ ಹಾಗೂ ಡ್ಯಾಪ್ಸೊನ್‌ ಸೇರಿದಂತೆ ಹಲವು ರಾಸಾಯನಿಕ ಕಾರಕಗಳು.

ಬಹು-ನರರೋಗ

ಬಹು-ನರರೋಗ ವು ಏಕ-ನರರೋಗಕ್ಕಿಂತ ಬಹಳಷ್ಟು ಭಿನ್ನವಾಗಿರುವ ನರ ಹಾನಿಯ ರೀತಿಯಾಗಿದೆ. ಬಾಹ್ಯ ನರರೊಗವನ್ನು ಕೆಲವೊಮ್ಮೆ ಬಹು-ನರರೋಗವನ್ನು ಉಲ್ಲೇಖಿಸಲು ಲಕ್ಷ್ಯವಿಲ್ಲದೇ ಬಳಸಲಾಗಿದೆ. ಬಹು-ನರರೋಗದಲ್ಲಿ, ಶರೀರದ ವಿವಿಧ ಭಾಗಗಳಲ್ಲಿರುವ ಬಹಳಷ್ಟು ನರ ಕೋಶಗಳು ಹಾನಿಗೀಡಾಗಿರುತ್ತವೆ. ಅವು ಹಾದುಹೋಗುವ ನರವು ಪರಿಗಣಿತವಾಗುವುದಿಲ್ಲ. ಇಂತಹ ನಿದರ್ಶನದಲ್ಲಿ ಎಲ್ಲಾ ನರಗಳ ಕೋಶಗಳು ಹಾನಿಯಾಗುವುದಿಲ್ಲ. ಕೊನೆಯ ನರತಂತು ರೋಗದಲ್ಲಿ, ಒಂದು ಸಾಮಾನ್ಯ ನಮೂನೆಯಲ್ಲಿ ನರಕೋಶಗಳ ಜೀವಕೋಶಗಳು ಹಾಗೆಯೇ ಉಳಿದಿರುತ್ತವೆ, ಆದರೆ ನರತಂತುಗಳು ಅವುಗಳ ಉದ್ದಕ್ಕೆ ಅನುಗುಣವಾಗಿ ಹಾನಿಗೀಡಾಗಿರುತ್ತವೆ. ಇಂತಹ ಸಮೂನೆಗೆ ಮಧುಮೇಹ ನರರೋಗವೇ ಸರ್ವೇಸಾಮಾನ್ಯ ಕಾರಣವಾಗಿದೆ. ಮಯಲಿನ್ ಪದರಕ್ಕೆ ಹಾನಿಯಾಗುವ ಬಹು-ನರರೋಗಗಳಲ್ಲಿ, ನರತಂತುಗಳನ್ನು ಆವರಿಸಿರುವ ಕವಚದಂತಿರುವ ಮಯಲಿನ್ ಪದರಕ್ಕೆ ಹಾನಿಯಾಗುತ್ತದೆ. ಇದರಿಂದಾಗಿ, ನರತಂತುಗಳು ವಿದ್ಯುತ್‌ ಪ್ರಚೋದನೆಗಳನ್ನು ರವಾನಿಸಲು ದುಸ್ತರವಾಗುತ್ತದೆ. ಮೂರನೆಯ ಮತ್ತು ಬಹಳ ವಿರಳವಾದ ನಮೂನೆಯು ನರ-ಜೀವಕೋಶಗಳ ಜೀವಕೋಶ ಕಾಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಸಾಮಾನ್ಯವಾಗಿ ಪ್ರಚೋದಕ ನರಕೋಶಗಳು (ಪ್ರಚೋದಕ ನರಕೋಶ ರೋಗ ಎನ್ನಲಾಗಿದೆ) ಅಥವಾ ಸಂವೇದನಾ ನರಕೋಶಗಳ (ಸಂವೇದನಾ ನರಕೋಶ ರೋಗ ಅಥವಾ ಬೆನ್ನಿನ ಮೇಲ್ಭಾಗದ ನರಗ್ರಂಥಿ ರೋಗ ) ಮೇಲೆ ಪರಿಣಾಮ ಬೀರುತ್ತದೆ.


ಶರೀರದಲ್ಲಿ ಒಂದಕ್ಕಿಂತಲೂ ಹೆಚ್ಚು ಭಾಗಗಳಲ್ಲಿ ಲಕ್ಷಣಗಳುಂಟಾಗಲು ಕಾರಣವಾಗುವುದು ಇದರ ಪರಿಣಾಮವಾಗಿದೆ. ಆಗಾಗ್ಗೆ ಸಮನಾಗಿ ಎಡ ಮತ್ತು ಬಲ ಬದಿಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ನರರೋಗಗಳ ವಿಚಾರದಲ್ಲಿ, ದೌರ್ಬಲ್ಯ ಅಥವಾ ಚಲನವಲನಗಳಲ್ಲಿ ಅಸಂಬದ್ಧತೆ (ಪ್ರಚೋದಕ), ಜುಮ್ಮೆನ್ನುವ ಅಥವಾ ಉರಿಯಂತಹ ಬಹಳ ಅಪರೂಪ ಅಥವಾ ಅಹಿತಕರ ಸಂವೇದನಗಳು, ಸ್ಪರ್ಶದ ಮೂಲಕ ವಸ್ತುವಿನ ಲಕ್ಷಣ ಅಥವಾ ಉಷ್ಣಾಂಶವನ್ನು ಅರಿಯುವ ಸಾಮರ್ಥ್ಯ ಕುಂಠಿತ , ನಿಂತಿರುವಾಗ ಅಥವಾ ಕುಳಿತಿರುವಾಗ ಶಾರೀರಿಕ ಅಸಮತೋಲನ (ಸಂವೇದನಾ ಸಮಸ್ಯೆ) ಪ್ರಮುಖ ಲಕ್ಷಣಗಳಾಗಿರುತ್ತವೆ. ಬಹಳಷ್ಟು ಬಹುವಿಧ-ನರರೋಗಗಳಲ್ಲಿ, ಈ ರೋಗಲಕ್ಷಣಗಳು ಮೊದಲಿಗೆ ಹಾಗೂ ತೀವ್ರವಾಗಿ ಕಾಲಿನಲ್ಲಿ ಸಂಭವಿಸುವುದು. ಸ್ವನಿಯಂತ್ರಿತ ರೋಗಲಕ್ಷಣಗಳು ಸಹ ಸಂಭವಿಸಬಹುದು (ಉದಾಹರಣೆಗೆ ಎದ್ದು ನಿಲ್ಲುವಾಗ ತಲೆ ಸುತ್ತುವ ಅನುಭವ, ನಿಮಿರುವಿಕೆಯಲ್ಲಿ ಅಪಸಾಮಾನ್ಯ ಕ್ರಿಯೆ ಹಾಗೂ ಮೂತ್ರ ವಿಸರ್ಜನೆ ನಿಯಂತ್ರಿಸುವಲ್ಲಿ ತೊಂದರೆ ಸಂಭವಿಸಬಹುದು.

ಒಟ್ಟಾರೆ, ಬಹು-ನರರೋಗಗಳು ಸಾಮಾನ್ಯವಾಗಿ ಇಡೀ ಶರೀರದ ಮೇಲೆ ಪರಿಣಾಮ ಉಂಟುಮಾಡುವ ಪ್ರಕ್ರಿಯೆಗಳಿಂದ ಸಂಭವಿಸುತ್ತವೆ. ಮಧುಮೇಹ ಮತ್ತು ದುರ್ಬಲಗೊಂಡ ಗ್ಲುಕೋಸ್‌ ಸೈರಣೆ ಬಹಳಷ್ಟು ಸರ್ವೇಸಾಮಾನ್ಯ ಕಾರಣಗಳಾಗಿವೆ. ಇತರೆ ಕಾರಣಗಳಲ್ಲಿ ಬಹು-ನರರೋಗದ ವಿಶಿಷ್ಟ ರೀತಿಗೆ ಸಂಬಂಧಿಸಿದೆ. ಲೈಮ್‌ ರೋಗದಂತಹ ಉರಿಯೂತದ ರೋಗಗಳು, ಜೀವಸತ್ವಗಳ ಕೊರತೆ, ರಕ್ತ ಅವ್ಯವಸ್ಥೆ, ಹಾಗೂ (ಮದ್ಯ ಮತ್ತು ನಿರ್ದಿಷ್ಟ ಔಷಧಗಳು ಒಳಗೊಂಡಿವೆ) ವಿಷಕಾರಕಗಳು ಸೇರಿದಂತೆ, ಪ್ರತಿಯೊಂದು ವಿಧಕ್ಕೂ ಭಿನ್ನ ಕಾರಣಗಳಿವೆ. ಬಹು-ನರರೋಗಗಳಲ್ಲಿ ಬಹಳಷ್ಟು ರೀತಿಗಳು ಹಲವು ತಿಂಗಳುಗಳು ಅಥವಾ ವರ್ಷಗಳ ಕಾಲ ನಿಧಾನಗತಿಯಲ್ಲಿ ಸಾಗುತ್ತವೆ, ಆದರೆ ಬಹಳ ಬೇಗ ಮುಂದುವರೆಯುವ ಬಹು-ನರರೋಗವೂ ಸಹ ಸಂಭವಿಸುವುದು. ಇದು ಕೆಲವೊಮ್ಮೆ ಗುರುತಿಸಬಲ್ಲ ಕಾರಣ ಹೊಂದಿರುತ್ತದೆ; ಒಂದು ವೇಳೆ ಹೊಂದಿರದಿದ್ದಲ್ಲಿ, ಇದನ್ನು ಗ್ವಿಲ್ಲೆನ್‌-ಬಾರ್‌ ಸಿಂಡ್ರೊಮ್‌ ಎನ್ನಲಾಗಿದೆ. ನಿರಾಹಾರದ ಸಮಯ ರಕ್ತದಲ್ಲಿ ಸಕ್ಕರೆಯ ಮಟ್ಟ ಹಾಗೂ ರಕ್ತದ ಗ್ಲುಕೋಸ್‌ನ ಸರಾಸರಿ ಮಟ್ಟಗಳು ಸಹಜಕ್ಕಿಂತಲೂ ಕಡಿಮೆ ಮಟ್ಟದಲ್ಲಿದ್ದರೂ, (ಸದ್ಯಕ್ಕೆ ನಿರಾಹಾರ ಸಮಯದ ರಕ್ತದ ಪ್ಲಾಸ್ಮಾಗಾಗಿ 100ಕ್ಕಿಂತಲೂ ಕಡಿಮೆ ಹಾಗೂ ಎಚ್‌ಜಿಬಿಎ1ಸಿಗೆ 6.0) ಆಹಾರ ಸೇವಿಸಿದ ಮೇಲೆ ರಕ್ತದಲ್ಲಿ ಗ್ಲುಕೋಸ್ ಮಟ್ಟವು ನರಗಳಿಗೆ ಹಾನಿಯಾಗುವಷ್ಟು ಹೆಚ್ಚಾಗಬಹುದು ಎಂಬುದನ್ನು ಗಮನಿಸತಕ್ಕದ್ದು. (ವಿಸ್ತರಿತ ಕಾಲಾವಧಿಯಲ್ಲಿ ಸರಾಸರಿ ರಕ್ತ ಗ್ಲೂಕೋಸ್‌ ಮಟ್ಟಗಳನ್ನು ಮಾಪನ ಮಾಡಲು ಎಚ್‌ಜಿಬಿಎ1ಸಿ ಪರೀಕ್ಷೆಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.) ಜುಮ್ಮೆನಿಸುವ ಸಂವೇದನ, ನೋವು ಮತ್ತು ಕೈ-ಕಾಲುಗಳಲ್ಲಿ ಸಂವೇದನೆಯ ಕೊರತೆಗಳಂತಹ ಬಾಹ್ಯ ಸಣ್ಣ ತಂತುಗಳ ನರರೋಗಗಳ ಅನೇಕ ಪ್ರಕರಣಗಳು, ಮಧುಮೇಹದ ಅಥವಾ ಮಧುಮೇಹ-ಪೂರ್ವ ರೋಗನಿರ್ಣಯಕ್ಕೆ ಮುಂಚಿನ ಗ್ಲೂಕೋಸ್‌ ಅಸಹಿಷ್ಣುತೆಯೇ ಕಾರಣ ಎಂದು ಅಧ್ಯಯನಗಳು ಪತ್ತೆ ಮಾಡಿವೆ. ನಿರ್ದಿಷ್ಟವಾಗಿ ಆರಂಭಿಕ ಹಂತದಲ್ಲಿಯೇ ಆಹಾರ ಪಥ್ಯ, ವ್ಯಾಯಾಮ ಮತ್ತು ದೇಹದ ತೂಕ ಇಳಿಸುವ ಕ್ರಮಗಳಿಂದ, ಇಂತಹ ಹಾನಿಯನ್ನು ಹಿಮ್ಮೊಗವಾಗಿಸಬಹುದು. 17

ಬಹುನರರೋಗಗಳ ಚಿಕಿತ್ಸೆಯು ಮೊದಲಿಗೆ ಕಾರಣವನ್ನು ನಿಯಂತ್ರಿಸುವ ಅಥವಾ ನಿವಾರಿಸುವ, ಎರಡನೆಯದಾಗಿ, ಸ್ನಾಯುಗಳ ಶಕ್ತಿ ಮತ್ತು ದೈಹಿಕ ಕ್ರಿಯೆಗಳನ್ನು ಕಾಯ್ದುಕೊಳ್ಳುವುದಾಗಿದೆ. ಹಾಗೂ, ಮೂರನೆಯದಾಗಿ ನರರೋಗದ ನೋವು ಸೇರಿದಂತೆ ರೋಗಲಕ್ಷಣಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಲಾಗಿದೆ.

ಸ್ವನಿಯಂತ್ರಿತ ನರರೋಗ

ಸ್ವನಿಯಂತ್ರಿತ ನರರೋಗ ವೆಂಬುದು ಬಹು-ನರರೋಗದ ರೂಪವಾಗಿದ್ದು, ಅನೈಚ್ಛಿಕ, ಸಂವೇದನೆಯಲ್ಲದ ನರಜಾಲ ವ್ಯವಸ್ಥೆಗಳಿಗೆ (ಅರ್ಥಾತ್‌ ಸ್ವನಿಯಂತ್ರಿತ ನರ ವ್ಯವಸ್ಥೆಗೆ) ಹಾನಿಯೊಡ್ಡುತ್ತದೆ. ಇಂತಹ ರೋಗಗಳು ಮೂತ್ರ ಕೋಶದ ಸ್ನಾಯುಗಳು, ಹೃದಯರಕ್ತನಾಳ ವ್ಯವಸ್ಥೆ, ಜೀರ್ಣ ಪಥ ಮತ್ತು ಜನನಾಂಗಗಳಿಗೆ ಹಾನಿಯೊಡ್ಡುತ್ತವೆ. ಈ ನರಗಳು ಮಾನವನ ಜಾಗೃತ ನಿಯಂತ್ರಣದಲ್ಲಿರದು ಮತ್ತು ಅವು ಸ್ವನಿಯಂತ್ರಿತವಾಗಿ ಕಾರ್ಯನಿರ್ವಹಿಸುತ್ತವೆ. ಸ್ವನಿಯಂತ್ರಿತ ನರ ತಂತುಗಳು ಗಂಟಲು, ಉದರ ಮತ್ತು ಬೆನ್ನೆಲುಬಿನ ಹೊರಗಿನ ಶ್ರೋಣಿ ಕುಹರದಲ್ಲಿ ವಿಶಾಲ ಸಂಗ್ರಹಗಳಿರುತ್ತವೆ. ಆದರೆ, ಅವು ಬೆನ್ನುಹುರಿಯೊಂದಿಗೆ ಸಂಪರ್ಕದಲ್ಲಿದ್ದು, ಅಂತಿಮವಾಗಿ, ಮೆದುಳಿನೊಂದಿಗೂ ಸಹ ಸಂಪರ್ಕ ಹೊಂದಿರುತ್ತವೆ. ದೀರ್ಘಕಾಲದ ಮೊದಲ ಮತ್ತು ಎರಡನೆಯ ಮಾದರಿಯ ಮಧುಮೇಹ ಪೀಡಿತರಲ್ಲಿ ಇಂತಹ ಸ್ವನಿಯಂತ್ರಿತ ನರರೋಗವು ಸರ್ವೇಸಾಮಾನ್ಯ. ಬಹಳಷ್ಟು ನಿದರ್ಶನಗಳಲ್ಲಿ, (ಆದರೆ ಎಲ್ಲದರಲ್ಲೂ ಅಲ್ಲ) ಸ್ವನಿಯಂತ್ರಿತ ನರರೋಗವು, ಸಂವೇದನಾ ನರರೋಗ ಸೇರಿದಂತೆ, ನರರೋಗದ ಇತರೆ ರೂಪಗಳೊಂದಿಗೆ ಸಂಭವಿಸುತ್ತವೆ.

ಸ್ವನಿಯಂತ್ರಿತ ನರರೋಗವು ಸ್ವನಿಯಂತ್ರಿತ ನರಮಂಡಲದ ಸಮಸ್ಯೆಯ ಮೂಲ ಕಾರಣವಾಗಿದೆ. ಆದರೆ ಇದೊಂದೇ ಅಲ್ಲ. ಮೆದುಳು ಅಥವಾ ಬೆನ್ನುಹುರಿಗೆ ಹಾನಿಯೆಸಗುವ ಕೆಲವು ಸ್ಥಿತಿಗಳು ಬಹು-ವ್ಯವಸ್ಥೆಯ ಕ್ಷಯದಂತಹ ಸ್ವನಿಯಂತ್ರಿತ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು. ಇದರಿಂದಾಗಿ, ಸ್ವನಿಯಂತ್ರಿತ ನರರೋಗಳಂತೆ ಒಂದೇ ರೀತಿಯ ಲಕ್ಷಣಗಳನ್ನುಂಟು ಮಾಡುತ್ತವೆ.

ಸ್ವನಿಯಂತ್ರಿತ ನರರೋಗದ ಲಕ್ಷಣಗಳಲ್ಲಿ ಕೆಳಕಂಡವು ಸೇರಿವೆ:

  • ಮೂತ್ರಕೋಶದ ಸ್ಥಿತಿ: ಮೂತ್ರಕೋಶದ ಅಸಂಯಮ ಅಥವಾ ಮೂತ್ರ ಹಿಡಿದಿಟ್ಟುಕೊಳ್ಳುವಿಕೆ
  • ಉದರ ಮತ್ತು ಕರುಳು ಪಥ: ನುಂಗಲು ಕಷ್ಟವಾಗುವ ಸ್ಥಿತಿ, ಉದರದ ಬೇನೆ, ವಾಕರಿಕೆ, ವಾಂತಿ, ಅರೆಜೀರ್ಣತೆ, ಮಲವಿಸರ್ಜನೆಯ ಅಸಂಯಮ, ಉದರದಲ್ಲಿ ನಿಧಾನ ಗತಿಯ ಜೀರ್ಣಕ್ರಿಯೆ, ಅತಿಸಾರ, ಮಲಬದ್ಧತೆ
  • ಹೃದಯರಕ್ತನಾಳದ ವ್ಯವಸ್ಥೆ: ಹೃದಯ ಬಡಿತ ಪ್ರಮಾಣದಲ್ಲಿ ತೊಂದರೆ (ಟ್ಯಾಕಿಕಾರ್ಡಿಯಾ, ನಿಧಾನಗೊಳ್ಳುವ ಹೃದಯ ಬಡಿತ ಪ್ರಮಾಣ), ನಿಂತಾಗ ಕಡಿಮೆ ರಕ್ತದೊತ್ತಡ(ಆರ್ತೊಸ್ಟಾಟಿಕ್ ಹೈಪೊಟೆನ್ಫನ್) ಒತ್ತಡ ಹಾಕಿದಾಗಲೂ ಹೆಚ್ಚಾಗದ ಹೃದಯದ ಮಿಡಿತ


ನರಗಳ ಉರಿಯೂತ

ನರವೊಂದರ ಅಥವಾ ಬಾಹ್ಯ ನರ ವ್ಯವಸ್ಥೆಯ ಒಟ್ಟಾರೆ ಉರಿಯೂತಕ್ಕೆ ನರಗಳ ಉರಿಯೂತ ಎನ್ನಲಾಗಿದೆ. ರೋಗಲಕ್ಷಣಗಳು ಸಂಬಂಧಿತ ನರಗಳನ್ನು ಅವಲಂಬಿಸಿವೆ, ಆದರೂ, ನೋವು, ಚರ್ಮದಲ್ಲಿ ಜುಮ್ಮೆನಿಸುವ ಸಂವೇದನೆ(ಪೆರೆಸ್ತೀಸಿಯ) ಚಲನವಲನಗಳಲ್ಲಿ ಆಂಶಿಕ ಅಡಚಣೆ(ಪ್ಯಾರೆಸಿಸ್), {3}ಕಡಿಮೆಯಾದ ಸ್ಪರ್ಶ ಅಥವಾ ಸಂವೇದನೆಯ ತೀವ್ರತೆ (ಮರಗಟ್ಟುವಿಕೆ), ಅರಿವಳಿಕೆ, ಪಾರ್ಶ್ವವಾಯು, ಕ್ಷಯ ಹಾಗೂ ಪ್ರತಿವರ್ತನೆಗಳು ಅದೃಶ್ಯವಾಗುವ ಸಮಸ್ಯೆಗಳನ್ನು ಒಳಗೊಂಡಿರಬಹುದು.

ಕಾರಣಗಳಲ್ಲಿ ಕೆಳಕಂಡವು ಸೇರಿವೆ: 
  • ಸೋಂಕು
    • ಹರ್ಪಿಸ್ ಸಿಂಪ್ಲೆಕ್ಸ್
    • ಸರ್ಪಸುತ್ತು
    • ಕುಷ್ಠರೋಗ
    • ಗ್ವಿಲೆನ್‌-ಬಾರ್‌ ಸಹಲಕ್ಷಣಗಳು
    • ಲೈಮ್‌ ರೋಗ
  • ರಾಸಾಯನಿಕ ಗಾಯಗಳು
  • ದೈಹಿಕ ಗಾಯಗಳು
  • ವಿಕಿರಣ
  • ಸ್ಥಳೀಯ ನರಗಳ ಉರಿಯೂತ (ಒಂದೇ ನರದ ಸಮಸ್ಯೆ) ಉಂಟಾಗಿಸುವ ಮೂಲ ಕಾರಣಗಳು:
    • ಗಳಚರ್ಮರೋಗ (Diphtheria)
    • ಸ್ಥಳೀಯ ಗಾಯ (Localised injury)
    • ಮಧುಮೇಹ
  • ಹಲವು ನರಗಳ ಉರಿಯೂತ ಉಂಟಾಗಿಸುವ ಮೂಲ ಕಾರಣಗಳು:
    • ಬೆರಿಬೆರಿ ರೋಗ (Beriberi)
    • ಬಿ12 ಜೀವಸತ್ತ್ವದ ಕೊರತೆ
    • ಚಯಾಪಚಯ-ಸಂಬಂಧಿತ ರೋಗಗಳು
    • ಮಧುಮೇಹ
    • ಹೈಪೋಥೈರಾಯ್ಡಿಸಮ್‌
    • ಫಾರ್ಫಿರಿಯಾ
    • ಬ್ಯಾಕ್ಟೀರಿಯಾ ಮೂಲದ ಮತ್ತು/ಅಥವಾ ವೈರಸ್‌ ಮೂಲದ ಸೋಂಕುಗಳು
    • ಸ್ವರಕ್ಷಿತ ರೋಗ, ವಿಶಿಷ್ಟವಾಗಿ ಬಹ್ವಂಶವುಳ್ಳ ನರಸಂಬಂಧಿತ ಕಾಯಿಲೆ
    • ಅರ್ಬುದರೋಗ
    • ಮದ್ಯದ ಚಟ
    • ವಾರ್ಟೆನ್ಬರ್ಗ್‌ರ ಸಂಚಾರಿ ಸಂವೇದನದ ನರರೋಗ

ನರಗಳ ಉರಿಯೂತಗಳಲ್ಲಿ ಕೆಳಕಂಡವೂ ಸೇರಿವೆ:

ಸಂಕೇತಗಳು ಹಾಗೂ ರೋಗ ಲಕ್ಷಣಗಳು

ಬಾಹ್ಯ ನರ ವ್ಯವಸ್ಥೆಗಳ ಸಮಸ್ಯೆ ಅಥವಾ ರೋಗಕ್ಕೀಡಾದವರು ಬಾಹ್ಯ ನರಗಳ ಸಹಜ ಕ್ರಿಯೆಗಳಲ್ಲಿ ಈ ಸಮಸ್ಯೆಗಳನ್ನು ಹೊಂದಿರಬಹುದು.

ಸಂವೇದನಾ ಕ್ರಿಯೆಯ ವಿಚಾರದಲ್ಲಿ, ಸಾಮಾನ್ಯವಾಗಿ ಮರಗಟ್ಟುವಿಕೆ, ನಡುಕ ಮತ್ತು ಭಂಗಿಯ ಅಪಸಾಮಾನ್ಯತೆ ಸೇರಿದಂತೆ ಕ್ರಿಯೆಗಳಲ್ಲಿ ನಷ್ಟ (ನಕಾರಾತ್ಮಕ ) ರೋಗಲಕ್ಷಣಗಳಿರುತ್ತವೆ. ಗುಂಯ್‌ಗುಟ್ಟುವಿಕೆ, ಜುಮ್ಮೆನಿಸುವ ಸಂವೇದನೆ, ನೋವು, ಕೆರೆತ, ತೆವಳುವಿಕೆ ಹಾಗೂ ಜುಮ್ಮೆನ್ನಿಸುವ ಸಂವೇದನೆ ಸೇರಿವೆ.

ವೇದನಾಶಾಮಕ(ನಾರ್ಕೋಟಿಕ್) ಔಷಧಗಳ ಬಳಕೆ ಅನಿವಾರ್ಯವಾಗುವಷ್ಟು ನೋವು ತೀವ್ರವಾಗಬಹುದು (ಉದಾಹರಣೆಗೆ, ಅಫೀಮು, ಆಕ್ಸಿಕೊಡೊನ್‌) 

ಚರ್ಮವು ತೀವ್ರ ಸಂವೇದನಾತ್ಮಕವಾಗಬಹುದು. ಇದರಿಂದಾಗಿ ರೋಗಿಗಳು ವಿಶೇಷವಾಗಿ ಕಾಲು ಹಾಗೂ ಇತರೆ ಅಂಗಗಳಿಗೆ ಯಾವುದೇ ವಸ್ತು ಸ್ಪರ್ಶಿಸುವುದಕ್ಕೆ ನಿಷೇಧ ವಿಧಿಸಲಾಗುತ್ತದೆ. ಇಂತಹ ಪ್ರಮಾಣದ ಸಂವೇದನೆ ಹೊಂದಿರುವ ಜನರು ಹಾಸಿಗೆಹಾಸು ಅವರ ಪಾದಗಳಿಗೆ ತಾಗುವುದು, ಕಾಲ್ಚೀಲ ಮತ್ತು ಬೂಟುಗಳನ್ನು ಧರಿಸುವುದು ಸಾಧ್ಯವಾಗುವುದಿಲ್ಲ ಹಾಗು ಅವರು ಮನೆಯಲ್ಲಿಯೇ ಉಳಿದುಬಿಡುವ ಪರಿಸ್ಥಿತಿ ಎದುರಾಗುತ್ತದೆ.

ಪ್ರಚೋದಕ ನರಗಳ ರೋಗಲಕ್ಷಣಗಳಲ್ಲಿ ಕ್ರಿಯೆಯ ನಷ್ಟನಕಾರಾತ್ಮಕ ರೋಗಲಕ್ಷಣಗಳಾದ ದೌರ್ಬಲ್ಯ, ಆಯಾಸ, ತಲೆಭಾರದ ಸ್ಥಿತಿ ಹಾಗೂ ಚಲಿಸುವ ಗತಿಯಲ್ಲಿ ಅಪಸಾಮಾನ್ಯತೆ; ಹಾಗೂ ಕ್ರಿಯೆಯ ನಷ್ಟ(ಸಕಾರಾತ್ಮಕ) ರೋಗಲಕ್ಷಣಗಳಲ್ಲಿ ಮಾಂಸಖಂಡಗಳ ಸೆಳೆತ, ನಡುಕ ಹಾಗೂ ಸ್ನಾಯು ಸೆಳೆತ (ಸಂಕೋಚನ) ಸೇರಿರುತ್ತವೆ.

ಸ್ನಾಯುಗಳಲ್ಲಿ ನೋವು ಸಹ ಉಂಟಾಗುವುದು (ಸ್ನಾಯುಶೂಲೆ ), ಮಾಂಸಖಂಡಗಳ ಸೆಳೆತ, ಇತ್ಯಾದಿ ಸಮಸ್ಯೆಗಳುಂಟು, ಹಾಗೂ ಸ್ವನಿಯಂತ್ರಣದ ಅಪಸಾಮಾನ್ಯ ಕ್ರಿಯೆಗಳೂ ಇರಬಹುದು.

ದೈಹಿಕ ಪರೀಕ್ಷೆಯ ವೇಳೆ, ಒಟ್ಟಾರೆ ಬಾಹ್ಯ ನರರೋಗ ಪೀಡಿತರು ಸಾಮಾನ್ಯವಾಗಿ ಅಂಗದ ಕೊನೆಯಲ್ಲಿ ಸಂವೇದನಾ ಅಥವಾ ಚಲನೆಯ ಅಥವಾ ಎರಡರ ಕ್ಷಮತೆಯ ನಷ್ಟ ಅನುಭವಿಸಬಹುದು. ಬಾಹ್ಯ ನರಗಳ ರೋಗಲಕ್ಷಣ ಹೊಂದಿರುವವರು ಸಹಜ ಸ್ಥಿತಿಯಲ್ಲೇ ಇರುತ್ತಾರೆ. ಆದರೆ, ಗ್ವಿಲೆನ್‌-ಬಾರ್‌ ಸಿಂಡ್ರೊಮ್‌‌ನಂತಹ ಉರಿಯೂತದ ನರರೋಗಗಳಂತೆ ಸಮೀಪದ ಸ್ನಾಯು ದೌರ್ಬಲ್ಯ ಸ್ಥಿತಿ ಅನುಭವಿಸಬಹುದು, ಅಥವಾ ಏಕ-ನರರೋಗಗಳ ಸ್ಥಿತಿಗಳಂತೆ ಸಂವೇದನಾ ಅಡಚಣೆ ಅಥವಾ ದೌರ್ಬಲ್ಯ ಅನುಭವಿಸಬಹುದು. ಬಾಹ್ಯ ನರರೋಗಗಳಲ್ಲಿ ಕಣಕಾಲು ಜಗ್ಗಿಸುವ ಅನುವರ್ತನೆಯ ಕೊರತೆಯಿರುತ್ತದೆ.

ಕಾರಣಗಳು

ಕಾರಣಗಳನ್ನು ಕೆಳಕಂಡಂತೆ ಸ್ಥೂಲವಾಗಿ ವರ್ಗೀಕರಿಸಲಾಗಿದೆ:

  • ಅನುವಂಶೀಯ ರೋಗಗಳು: ಫ್ರೆಡ್ರೀಕ್ಸ್‌ ಹತೋಟಿ ತಪ್ಪುವ ರೋಗ, ಚಾರ್ಕಾಟ್‌-ಮೇರೀ-ಟೂತ್‌ ಸಿಂಡ್ರೊಮ್‌
  • ಚಯಾಪಚಯದ/ನಿರ್ನಾಳ ಗ್ರಂಥಿಗಳ ಸಮಸ್ಯೆ: ತೀವ್ರ ಮಧುಮೇಹ , ದೀರ್ಘಕಾಲಿಕ ಮೂತ್ರಪಿಂಡ ವ್ಯವಸ್ಥೆಯ ವೈಫಲ್ಯ, ಮೂತ್ರದಲ್ಲಿ ವರ್ಣದ್ರವ್ಯ ವಿಸರ್ಜನೆಯಾಗುವ ಆನುವಂಶಿಕ ಅಪಸಾಮಾನ್ಯತೆ (ಪಾರ್ಫಿರಿಯಾ), ಪಿಷ್ಟಸದೃಶ ಉರಿಯೂತ, ಪಿತ್ತಜನಕಾಂಗ ವೈಫಲ್ಯ, ಥೈರಾಯ್ಡ್‌ ನಿರ್ನಾಳ ಗ್ರಂಥಿಯು ಸಾಮಾನ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಸ್ರವಿಸುವಿಕೆ
  • ನಂಜಿನ ಕಾರಣಗಳು: ಔಷಧ/ಮದ್ದುಗಳು (ವಿಂಕ್ರಿಸ್ಟೀನ್‌, ಫೆನಿಟೊಯಿನ್‌, ನೈಟ್ರೊಫ್ಯುರಾಂಟೊಯಿನ್‌, ಐಸೊನಿಯಾಝಿಡ್‌, ಇತೈಲ್‌ ಆಲ್ಕೊಹಾಲ್‌), ಸಾವಯವ ಲೋಹಗಳು, ಭಾರಿ ಲೋಹಗಳು ಹಾಗೂ ಬಿ6 ಜೀವಸತ್ತ್ವದ ಮಿತಿಮೀರಿದ ಸೇವನೆ (ಪಿರಿಡಾಕ್ಸಿನ್‌)
  • ಫ್ಲುವೊರೊಕ್ವಿನೊಲೊನ್ ವಿಷತ್ವ: ಮಾರ್ಪಡಿಸಲಾಗದ ನರರೋಗವು, ಫ್ಲುವೊರೊಕ್ವಿನೊಲೊನ್‌ ಔಷಧಗಳಿಗೆ ಉಂಟಾಗುವ ವ್ಯತಿರಿಕ್ತ ಪ್ರತಿಕ್ರಿಯೆ
  • ಉರಿಯೂತದ ರೋಗಗಳು: ಗ್ವಿಲೇನ್‌-ಬಾರ್‌ ಸಿಂಡ್ರೊಮ್‌, ಇಡೀ ದೇಹದ ಚರ್ಮ ಮತ್ತು ಅಂಗಾಂಶ ರೋಗ(ಲ್ಯೂಪಸ್ಎರಿತ್ ಮ್ಯಾಟೊಸಿಸ್) ಕುಷ್ಠರೋಗ, ಜೊಗ್ರೆನ್ಸ್ ಸಿಂಡ್ರೊಮ್‌, ಲೈಮ್ ರೋಗ,ಶರೀರದ ಪ್ರಮುಖ ಅಂಗಗಳಲ್ಲಿ ಗಂಟು ಕಾಣಿಸಿಕೊಳ್ಳುವ ರೋಗ,
  • ಜೀವಸತ್ತ್ವ ಕೊರತೆಯ ಸ್ಥಿತಿಗಳು: 'ಬಿ12' ಜೀವಸತ್ತ್ವ (ಸಯಾನೊಕೊಬಾಲಮಿನ್‌), 'ಎ' ಜೀವಸತ್ತ್ವ, 'ಇ' ಜೀವಸತ್ತ್ವ, 'ಬಿ1' ಜೀವಸತ್ತ್ವ (ಥಯಮಿನ್‌)


  • ದೈಹಿಕ ಆಘಾತ: ಸಂಕೋಚನ, ಚಿವುಟುವಿಕೆ, ಕತ್ತರಿಸುವಿಕೆ, ಪ್ರಕ್ಷೇಪಕದಿಂದಾಗುವ ಗಾಯಗಳು (ಉದಾಹರಣೆಗೆ ಗುಂಡೇಟು), ರಕ್ತನಾಳಗಳ ದೀರ್ಘಕಾಲಿಕ ತಡೆ ಸೇರಿದಂತೆ ಪಾರ್ಶ್ವವಾಯು


  • ಇತರೆ: ಸರ್ಪಸುತ್ತು, ಮಾರಕ ರೋಗ, ಎಚ್‌ಐವಿ , ವಿಕಿರಣ, ರಾಸಾಯನಿಕ ಚಿಕಿತ್ಸೆ

ಬಾಹ್ಯ ನರ ವ್ಯವಸ್ಥೆಯ ರೋಗಗಳಲ್ಲಿ ಹಲವು ಸ್ನಾಯು ಸಮಸ್ಯೆಗಳಿಗೆ (ಸ್ನಾಯುರೋಗ)ಸದೃಶವಾಗಿ ಕಾಣಿಸಬಹುದು. ಆದ್ದರಿಂದ, ರೋಗಿಗಳಲ್ಲಿ ಸಂವೇದನೆ ಮತ್ತು ಪ್ರಚೋದಕ ತೊಂದರೆಗಳನ್ನು ನಿರ್ಣಯಿಸಲು ಹೊಸ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಬಹಳ ಮುಖ್ಯ. ಇದರಿಂದ ವೈದ್ಯರು ನಿಖರವಾದ ರೋಗನಿರ್ಣಯ ಮಾಡಬಹುದು.

ಚಿಕಿತ್ಸೆ

ಬಾಹ್ಯ ನರರೋಗಗಳಿಗೆ ಚಿಕಿತ್ಸೆಯ ಹಲವು ರೂಪುರೇಖೆಗಳು ರೋಗಲಕ್ಷಣಗಳನ್ನು ಅವಲಂಬಿಸಿವೆ. ಪ್ರಾಣಿಗಳ ಮಾದರಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ನ್ಯೂರೊಟ್ರೊಫಿನ್‌-3 ಔಷಧವು, ಕೆಲವು ಬಾಹ್ಯ ನರರೋಗಗಳಲ್ಲಿ ಕಂಡುಬರುವ ನರತಂತುಗಳ ಮೈಲೀನ್ ಕವಚಕ್ಕೆ ಹಾನಿ(ಡಿಮೈಲಿನೇಷನ್) ಯನ್ನು ತಡೆಗಟ್ಟುತ್ತದೆ ಎಂದು ತೋರಿಸಿದೆ.

ಕೇಂದ್ರೀಯ ನರ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ, ಮೂಲತಃ ಕೆಲವು ಔಷಧಗಳು ಖಿನ್ನತಾ ಮತ್ತು ಮೂರ್ಛೆರೋಗ ನಿವಾರಕಗಳು ಎನ್ನಲಾದ ಔಷಧಗಳು, ನರರೋಗದ ಯಾತನೆಯನ್ನು ನಿಯಂತ್ರಿಸಲು ಬಹಳ ಉಪಯುಕ್ತವಾಗಿವೆ. ಅಮಿಟ್ರಿಪ್ಟಿಲೀನ್‌ನಂತಹ ತ್ರಿಚಕ್ರೀಯ ಖಿನ್ನತೆ ಶಮನ ಔಷಧಗಳ ಬಳಕೆ, ಹಾಗೂ, ಗಬಪೆಂಟಿನ್‌ ಅಥವಾ ಸೊಡಿಯಮ್‌ ವಾಲ್ಪ್ರೊಯೇಟ್‌ನಂತಹ ಮೂರ್ಛೆ-ರೋಗ-ನಿವಾರಕ ಔಷಧಗಳನ್ನು ಬಳಸಿ ಚಿಕಿತ್ಸೆ ನೀಡಬಹುದು. ಹಲವು ನಿದರ್ಶನಗಳಲ್ಲಿ ಇವು ಪರಿಣಾಮಕಾರಿಯಾಗಿರುವುದು, ಅಲ್ಲದೆ ಅವು ಕಡಿಮೆ ವೆಚ್ಚದ್ದು ಎಂಬುದು ಅನುಕೂಲಕರ.

ವಿವಿಧ ರೀತಿಯ ನರರೋಗ ಸಮಸ್ಯೆಗಳಿಗಾಗಿ, ಸಂಶ್ಲೇಷಿತ ಕ್ಯಾನಬಿನೊಯಿಡ್‌ಗಳು ಹಾಗೂ ಉಚ್ಛ್ವಸಿತ ಕ್ಯಾನಬಿಸ್‌(ಗಾಂಜಾ, ಭಂಗಿ) ಪರಿಣಾಮಕಾರಿ ಚಿಕಿತ್ಸೆಗಳಾಗಿವೆ ಎಂದು 2005 ಮತ್ತು 2010ರ ನಡುವೆ ನಡೆಸಲಾದ ಬಹಳಷ್ಟು ಸಂಶೋಧನೆಗಳು ನಿರ್ಣಯಿಸಿವೆ. ಸಾಮಾನ್ಯ ಔಷಧಗಳತ್ತ ಪ್ರತಿರೋಧ, ಅಸಹಿಷ್ಣುತೆ ಅಥವಾ ಅಲರ್ಜಿಕ್ ತೋರುವ ರೋಗಿಗಳಿಗೆ, ಬಾಯಿಯ ಮೂಲಕ ಸೇವಿಸಲಾದ ಸಂಶ್ಲೇಷಿತ ಕ್ಯಾನಬಿನೊಯಿಡ್‌ ನೆಬಿಲೊನ್‌, ನರರೋಗ ಸ್ಥಿತಿಗಳಿಗಾಗಿ ಪರಿಣಾಮಕಾರಿ ಜತೆಯಾದ ಚಿಕಿತ್ಸೆಯಾಗಿದೆ. ಹಲವು ಜನರಿಗೆ, ಬಾಯಿಯ ಮೂಲಕ ನೀಡಲಾದ ಅಫೀಮಿನ ಔಷಧದ ಉತ್ಪನ್ನಗಳು ಕ್ಯಾನಬಿಸ್‌ಗಳಿಗಿಂತಲೂ ಹೆಚ್ಚು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಧೂಮಪಾನದ ಮೂಲಕ ಸೇದಲಾದ ಕ್ಯಾನಬಿಗಳು ಎಚ್‌ಐವಿ-ಸಂಬಂಧಿತ ಸಂವೇದನಾ ನರರೋಗದಿಂದ ಶಮನ ನೀಡುವುದೆಂದು ತಿಳಿದುಬಂದಿದೆ. ಧೂಮಪಾನದ ಮೂಲಕ ಸೇದಲಾದ ಕ್ಯಾನಬಿಗಳು ಸಿಆರ್‌ಪಿಎಸ್‌ ಟೈಪ್‌ 1 ಸಂಬಂಧಿತ ನರರೋಗ, ಬೆನ್ನುಹುರಿ ಗಾಯ, ಬಾಹ್ಯ ನರರೋಗ ಮತ್ತು ನರದ ಗಾಯ ಸಮಸ್ಯೆಯಿಂದ ಶಮನ ನೀಡುವುದೆಂದು ಕಂಡುಬಂದಿದೆ.

ನರರೋಗ-ಸಂಬಂಧಿತ ನೋವು ಶಮನಗೊಳಿಸಲು ಪ್ರೆಗಬಲಿನ್‌ (ಐಎನ್‌ಎನ್‌, pronounced /prɨˈɡæbəlɨn/) ಎಂಬ ಸೆಳವು-ಶಮನಕಾರಿ ಔಷಧವನ್ನು ಬಳಸಲಾಗುವುದು. ಇದಲ್ಲದೆ, ಮಾನಸಿಕ ತಳಮಳದಂತಹ ಸಮಸ್ಯೆಗಳಿಗೆ ಶಮನಕಾರಿ ಎಂದೂ ಕಂಡುಬಂದಿದೆ. ಗ್ಯಾಬಪೆಂಟಿನ್‌ ಎಂಬ ಔಷಧಕ್ಕೆ ಸೂಕ್ತ ಬದಲಿ ಔಷಧ ಎಂದು ವಿನ್ಯಾಸ ಮಾಡಲಾಗಿತ್ತು. ಆದರೆ ಇದು ಗ್ಯಾಬಪೆಂಟಿನ್‌ ಔಷಧಕ್ಕಿಂತಲೂ ದುಬಾರಿ, ಅದರಲ್ಲೂ ವಿಶಿಷ್ಟವಾಗಿ ಗ್ಯಾಬಪೆಂಟಿನ್ ಮೇಲಿನ ಹಕ್ಕುಸ್ವಾಮ್ಯವು ಅಂತ್ಯಗೊಂಡಿದ್ದು, ಇಂದು‌ ಸಾಮಾನ್ಯ ಔಷಧವಾಗಿ ಲಭ್ಯವಾಗಿದೆ. ಫಿಝರ್‌ ಉದ್ದಿಮೆಯು ಪ್ರೆಗಬಲಿನ್‌‌ನನ್ನು ಲಿರಿಕಾ ಎಂಬ ಹೆಸರಿನಡಿ ಮಾರುಕಟ್ಟೆಯಲ್ಲಿ ಮಾರುತ್ತಿದೆ.

TENS (ಟಿಇಎನ್‌ಎಸ್‌) (ಚರ್ಮದಿಂದಾಚೆಗಿನ ವಿದ್ಯುತ್‌ ನರ ಉತ್ತೇಜನ) ಚಿಕಿತ್ಸಾ ವಿಧಾನವು, ಮಧುಮೇಹ ಸಂಬಂಧಿತ ಬಾಹ್ಯ ನರರೋಗ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿ ಹಾಗೂ ಕ್ಷೇಮವೆನಿಸಿದೆ. 78 ಜನ ರೋಗಿಗಳನ್ನು ಒಳಗೊಂಡ ಮೂರು ಪ್ರಯೋಗಗಳ ಪುನರ್ವಿಮರ್ಶೆಯಲ್ಲಿ, ಚಿಕಿತ್ಸೆಯಾದ ನಾಲ್ಕು ಹಾಗೂ ಆರು ವಾರಗಳ ನಂತರ (ಆದರೆ ಹನ್ನೆರಡು ವಾರಗಳಲ್ಲ) ನೋವಿನ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡುಬಂತು.ಅಲ್ಲದೇ, 12 ವಾರಗಳ ನಂತರ ನರರೋಗ ಲಕ್ಷಣಗಳಲ್ಲಿ ಒಟ್ಟಾರೆ ಉತ್ತಮ ಸ್ಥಿತಿ ತಲುಪಿತೆಂದು ತಿಳಿದುಬಂದಿದೆ. ನಾಲ್ಕು ಪ್ರಯೋಗಗಳ ಎರಡನೆಯ ಪರಿಶೀಲನೆಯ ಪ್ರಕಾರ, ನೋವು ಮತ್ತು ಇತರೆ ಒಟ್ಟಾರೆ ಲಕ್ಷಣಗಳಲ್ಲಿ ಇನ್ನಷ್ಟು ಸುಧಾರಣೆ ಕಂಡುಬಂತು, ಒಂದು ಪ್ರಯೋಗದ 38%ರಷ್ಟು ರೋಗಿಗಳಲ್ಲಿ ಯಾವುದೇ ರೋಗ ಲಕ್ಷಣಗಳಿರಲಿಲ್ಲ. ದೀರ್ಘಾವಧಿಯ ಬಳಕೆಯ ನಂತರವೂ ಈ ಚಿಕಿತ್ಸೆಯು ಪರಿಣಾಮಕಾರಿಯಾಗಿರುವುದು. ಆದರೆ, ಸುಮಾರು ಒಂದು ತಿಂಗಳ ಕಾಲ ಚಿಕಿತ್ಸೆ ನಿಲ್ಲಿಸಿದಲ್ಲಿ ಈ ರೋಗಲಕ್ಷಣಗಳು ಪುನಃ ಮರುಕಳಿಸಬಹುದು.

ಉಲ್ಲೇಖಗಳು

ಟೆಂಪ್ಲೇಟು:Neuropathy

Tags:

ನರರೋಗNeuropathy ವರ್ಗೀಕರಣನರರೋಗNeuropathy ಸಂಕೇತಗಳು ಹಾಗೂ ರೋಗ ಲಕ್ಷಣಗಳುನರರೋಗNeuropathy ಕಾರಣಗಳುನರರೋಗNeuropathy ಚಿಕಿತ್ಸೆನರರೋಗNeuropathy ಉಲ್ಲೇಖಗಳುನರರೋಗNeuropathy ಬಾಹ್ಯ ಕೊಂಡಿಗಳುನರರೋಗNeuropathy

🔥 Trending searches on Wiki ಕನ್ನಡ:

ಫುಟ್ ಬಾಲ್ಇತಿಹಾಸಮೈಸೂರುಕರ್ನಾಟಕ ಸ್ವಾತಂತ್ರ್ಯ ಚಳವಳಿಖ್ಯಾತ ಕರ್ನಾಟಕ ವೃತ್ತಕನ್ನಡದಲ್ಲಿ ಸಣ್ಣ ಕಥೆಗಳುಸಜ್ಜೆಪುನೀತ್ ರಾಜ್‍ಕುಮಾರ್ಪರಿಸರ ವ್ಯವಸ್ಥೆಸುಗ್ಗಿ ಕುಣಿತಲಕ್ಷ್ಮಿಸಾರ್ವಜನಿಕ ಆಡಳಿತದಾಸ ಸಾಹಿತ್ಯತತ್ಪುರುಷ ಸಮಾಸಕ್ರೈಸ್ತ ಧರ್ಮಗಾದೆವೇದವ್ಯಾಸಭಾರತೀಯ ರೈಲ್ವೆಎಸ್.ಜಿ.ಸಿದ್ದರಾಮಯ್ಯಕುಕ್ಕೆ ಸುಬ್ರಹ್ಮಣ್ಯ ದೇವಾಲಯವೀರಪ್ಪನ್ರತ್ನಾಕರ ವರ್ಣಿಹಲ್ಮಿಡಿಮಾರ್ಕ್ಸ್‌ವಾದಜೋಡು ನುಡಿಗಟ್ಟುತತ್ತ್ವಶಾಸ್ತ್ರಮಹಾತ್ಮ ಗಾಂಧಿಪೆರಿಯಾರ್ ರಾಮಸ್ವಾಮಿವಾಯು ಮಾಲಿನ್ಯಚಂದ್ರಯಾನ-೩ದೇವರ/ಜೇಡರ ದಾಸಿಮಯ್ಯಧರ್ಮರಾಯ ಸ್ವಾಮಿ ದೇವಸ್ಥಾನತ. ರಾ. ಸುಬ್ಬರಾಯರಾಘವಾಂಕಪುರಂದರದಾಸಪಾಕಿಸ್ತಾನಮಹಾಭಾರತಚಂದ್ರಶೇಖರ ಕಂಬಾರಗುಪ್ತ ಸಾಮ್ರಾಜ್ಯಹಂಪೆಸಾದರ ಲಿಂಗಾಯತರಾಶಿಸಾವಯವ ಬೇಸಾಯಕನ್ನಡ ವ್ಯಾಕರಣಪರಮಾಣುತುಳಸಿಆರೋಗ್ಯಗಾಳಿ/ವಾಯುಮೈಸೂರು ಅರಮನೆರವಿಕೆಉಪೇಂದ್ರ (ಚಲನಚಿತ್ರ)ಕರ್ನಾಟಕಧಾರವಾಡಝಾನ್ಸಿ ರಾಣಿ ಲಕ್ಷ್ಮೀಬಾಯಿಜಶ್ತ್ವ ಸಂಧಿಯೋಗಪೌರತ್ವರಾಯಚೂರು ಜಿಲ್ಲೆಸ್ವಾಮಿ ವಿವೇಕಾನಂದಶ್ರೀಧರ ಸ್ವಾಮಿಗಳುಪಿತ್ತಕೋಶಕನ್ನಡ ಸಾಹಿತ್ಯ ಸಮ್ಮೇಳನರಂಗಭೂಮಿನೈಸರ್ಗಿಕ ಸಂಪನ್ಮೂಲದೇವನೂರು ಮಹಾದೇವಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕನ್ನಡದಲ್ಲಿ ಮಹಿಳಾ ಸಾಹಿತ್ಯಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕಿತ್ತೂರು ಚೆನ್ನಮ್ಮಚಿತ್ರಲೇಖಭಾರತದಲ್ಲಿ ಬಡತನಹರಿಹರ (ಕವಿ)ಕವಿಗಳ ಕಾವ್ಯನಾಮಜರಾಸಂಧಕಲ್ಯಾಣಿವಿಜಯಪುರ🡆 More