ಗ್ರೇಟಾ ಥನ್‍ಬರ್ಗ್

ಗ್ರೇಟಾ ಥನ್ ಬರ್ಗ್
ಗ್ರೇಟಾ ಥನ್‍ಬರ್ಗ್
ಏಪ್ರಿಲ್ - 2019 ರಲ್ಲಿ ಗ್ರೇಟಾ ಥನ್ ಬರ್ಗ್
Born3 ಜನವರಿ 2003 (ವಯಸ್ಸು 16-in 2019)
ಸ್ಟಾಕ್ಹೋಮ್, ಸ್ವೀಡನ್
Cause of death.
Occupation(s)ವಿದ್ಯಾರ್ಥಿ, ಪರಿಸರ ಕಾರ್ಯಕರ್ತ
Known for.ಹವಾಮಾನಕ್ಕಾಗಿ ಚಳುವಳಿ ಶಾಲೆಯ ಮುಷ್ಕರ
Titleರಾಯಲ್ ಸ್ಕಾಟಿಷ್ ಭೌಗೋಳಿಕ ಸೊಸೈಟಿಯ ಸಹವರ್ತಿ -ಎಫ್ ಆರ್ ಎಸ್ ಜಿ ಎಸ್
Parentಮಲೆನಾ ಎರ್ನ್ಮನ್ (ತಾಯಿ)
Relativesಸಂಬಂಧಿಗಳು ಓಲೋಫ್ ಥನ್ಬರ್ಗ್ (ಅಜ್ಜ)
Websitemalladihalliast.com
Notes
ಪ್ರಶಸ್ತಿ -ಗೋಲ್ಡೆನ್ ಕಮೆರಾ (2019); ಫ್ರಿಟ್ ಆರ್ಡ್ ಪ್ರಶಸ್ತಿ (2019); ರಾಚೆಲ್ ಕಾರ್ಸನ್ ಪ್ರಶಸ್ತಿ (2019) ;ಆತ್ಮಸಾಕ್ಷಿಯ ರಾಯಭಾರಿ ಪ್ರಶಸ್ತಿ (2019); ರಾಯಲ್ ಸ್ಕಾಟಿಷ್ ಜಿಯಾಗ್ರಫಿಕಲ್ ಸೊಸೈಟಿಯ ಫೆಲೋ (FRSGS -Fellow of the Royal Scottish Geographical Society) (ಗೆಡ್ಡೆಸ್ ಎನ್ವಿರಾನ್ಮೆಂಟ್ ಮೆಡಲ್ ಸೇರಿದಂತೆ) (2019); ಜೀವನೋಪಾಯ ಹಕ್ಕು ಪ್ರಶಸ್ತಿ (2019); ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ (2019); ವರ್ಷದ ವ್ಯಕ್ತಿ (2019)

15 ವರ್ಷದ ಬಾಲಕಿಯ ಸಾಹಸ ಮತ್ತು ಪ್ರತಿಭೆ

    ಗ್ರೇಟಾ ಟಿನ್ಟಿನ್ ಎಲಿಯೊನೊರಾ ಅರ್ನ್ಮನ್ ಥನ್‍ಬರ್ಗ್ (ಜನನ 3 ಜನವರಿ 2003) ಹವಾಮಾನ ಬದಲಾವಣೆಯ ಅಪಾಯದ ಬಗ್ಗೆ ಚಳುವಳಿಯಲ್ಲಿ ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ಸ್ವೀಡಿಷ್ ಪರಿಸರ ಕಾರ್ಯಕರ್ತೆ. ಥನ್‍ಬರ್ಗ್ ತನ್ನ ನೇರ ಮಾತಿನ ವಿಧಾನಕ್ಕೆ ಹೆಸರುವಾಸಿಯಾಗಿದ್ದಾಳೆ, ಸಾರ್ವಜನಿಕವಾಗಿ ಸಭೆಗಳಲ್ಲಿ, ಹವಾಮಾನ ಬಿಕ್ಕಟ್ಟು ಕುರಿತು ಅವಳು ವಿವರಿಸಿ, ರಾಜಕೀಯ ಮುಖಂಡರು ಮತ್ತು ಸಾರ್ಜನಿಕರು ಬಿಕ್ಕಟ್ಟನ್ನು ಪರಿಹರಿಸಲು ಮತ್ತು ತಕ್ಷಣದ ಕ್ರಮವನ್ನು ಕೈಗೊಳ್ಲಲು ಅವಳು ಒತ್ತಾಯಿಸುತ್ತಾಳೆ.
  • ಆಗಸ್ಟ್ 2018 ರಲ್ಲಿ ಥನ್ಬರ್ಗ್ ತನ್ನ ಕ್ರಿಯಾಶೀಲತೆಗೆ ಹೆಸರುವಾಸಿಯಾದಳು, 15 ನೇ ವಯಸ್ಸಿನಲ್ಲಿ, ಸ್ವೀಡಿಷ್ ಸಂಸತ್ತಿನ ಹೊರಗೆ ತನ್ನ ಶಾಲಾ ದಿನಗಳನ್ನು ಕಳೆಯಲು ಪ್ರಾರಂಭಿಸಿದಾಗ, ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ (ಜಾಗತಿಕ ತಾಪಮಾನ ನಿಯಂತ್ರಣ) ಬಗ್ಗೆ ಬಲವಾದ ಕ್ರಮ ಕೈಗೊಳ್ಳಲು ಕರೆ ನೀಡಿದ್ದಳು (ಸ್ವೀಡಿಷ್ ಭಾಷೆಯಲ್ಲಿ)-ಅದು "ಹವಾಮಾನಕ್ಕಾಗಿ ಶಾಲಾ ಮುಷ್ಕರ "ಆರಂಬಿಸಿದಳು. ಶೀಘ್ರದಲ್ಲೇ, ಇತರ ವಿದ್ಯಾರ್ಥಿಗಳು ತಮ್ಮದೇ ಸಮುದಾಯಗಳಲ್ಲಿ ಇದೇ ರೀತಿಯ ಪ್ರತಿಭಟನೆಯಲ್ಲಿ ತೊಡಗಿದರು. ಒಟ್ಟಾಗಿ, ಅವರು "ಭವಿಷ್ಯಕ್ಕಾಗಿ ಶುಕ್ರವಾರ" ಹೆಸರಿನಲ್ಲಿ ಶಾಲಾ ಹವಾಮಾನ ಮುಷ್ಕರ ಆಂದೋಲನವನ್ನು ಆಯೋಜಿಸಿದರು. ಥನ್ಬರ್ಗ್ 2018 ರ ವಿಶ್ವಸಂಸ್ಥೆಹವಾಮಾನ ಬದಲಾವಣೆ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ನಂತರ, ಪ್ರತಿ ವಾರ ವಿಶ್ವದ ಅನೇಕ ಕಡೆ ವಿದ್ಯಾರ್ಥಿ ಮುಷ್ಕರಗಳು ನಡೆಯುತ್ತಿದ್ದವು. 2019 ರಲ್ಲಿ, ತಲಾ ಒಂದು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಕನಿಷ್ಠ ಎರಡು ಸಂಘಟಿತ ಬಹು-ನಗರ ಪ್ರತಿಭಟನೆಗಳು ನಡೆದವು. ಮನೆಯಲ್ಲಿ, ಥನ್ಬರ್ಗ್ ತನ್ನ ಹೆತ್ತವರಿಗೆ ತಮ್ಮದೇ ಆದ "ಇಂಗಾಲದ ಹೆಜ್ಜೆಗುರುತ"ನ್ನು ಕಡಿಮೆ ಮಾಡಲು ಹಲವಾರು ಜೀವನಶೈಲಿ ಆಯ್ಕೆಗಳನ್ನು ಅಳವಡಿಸಿಕೊಳ್ಳಲು ಮನವರಿಕೆ ಮಾಡಿಕೊಟ್ಟರು, ಇದರಲ್ಲಿ ವಿಮಾನ ಪ್ರಯಾಣವನ್ನು ಬಿಟ್ಟುಬಿಡುವುದು ಮತ್ತು ಮಾಂಸವನ್ನು ತಿನ್ನುವುದನ್ನು ಬಿಡುವುದು ಇತ್ಯಾದಿ.

2019 ರ ವರ್ಷದ ವ್ಯಕ್ತಿ

  • ಥನ್‍ಬರ್ಗ್ ರಾಯಲ್ ಸ್ಕಾಟಿಷ್ ಜಿಯಾಗ್ರಫಿಕಲ್ ಸೊಸೈಟಿಯ ಫೆಲೋಶಿಪ್ ಸೇರಿದಂತೆ ಹಲವಾರು ಗೌರವಗಳು ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು 2019 ರ 'ಟೈಮ್ ನಿಯತಕಾಲಿಕೆ'ಯು ಅವಳನ್ನು 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬ ಮತ್ತು "2019 ನೇ ವರ್ಷದ ಟೈಮ್ ಪತ್ರಿಕೆಯ ಅತ್ಯಂತ ಕಿರಿಯ ವೈಯಕ್ತಿಕ ವ್ಯಕ್ತಿ" ಎಂದು ಹೆಸರಿಸಿದೆ. ಸೆಪ್ಟೆಂಬರ್ 2019 ರಲ್ಲಿ, ಅವರು ನ್ಯೂಯಾರ್ಕ್‍ನಲ್ಲಿ ನಡೆದ ಯು,ಎನ್. ಕ್ಲೈಮೇಟ್ ಆಕ್ಷನ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು. ಥನ್ಬರ್ಗ್ ಅವರನ್ನು 2019 ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಯಿತು.

2019 ರ ಉತ್ತರ ಅಮೆರಿಕಾ ಭೇಟಿ

ಗ್ರೇಟಾ ಥನ್‍ಬರ್ಗ್ 
ಕೆನಡಾದ ಮಾಂಟ್ರಿಯಲ್‌ನಲ್ಲಿ ಸೆಪ್ಟೆಂಬರ್ 27, 2019 ರ ಹವಾಮಾನದ ಬಗೆಗೆ ಮೆರವಣಿಗೆಯಲ್ಲಿ (ಮಾರ್ಚ್‌ನಲ್ಲಿ) ಮಾತನಾಡುತ್ತಿರುವ ಗ್ರೇಟಾ ಥನ್‌ಬರ್ಗ್
  • ಆಗಸ್ಟ್ 2019 ರಲ್ಲಿ, ಥನ್ಬರ್ಗ್ ಅಟ್ಲಾಂಟಿಕ್ ಮಹಾಸಾಗರದ ಮೂಲಕ ಇಂಗ್ಲೆಂಡ್‍ನ ಪ್ಲೈಮೌತ್ ನಿಂದ ಯುಎಸ್ಎ-ಯ ನ್ಯೂಯಾರ್ಕ್‍ಗೆ, ಹವಾಮಾನ ಕೆಡಿಸುವ ಪೆಟ್ರೋಲ್ ಇಂಧನ ಬಳಕೆಯ ವಿರೋಧವಾಗಿ, ಅನೇಕ ಸೌರ ಫಲಕಗಳು ಮತ್ತು ನೀರೊಳಗಿನ ಟರ್ಬೈನ್ಗಳನ್ನು ಹೊಂದಿದ್ದ 60 ಅಡಿ ಉದ್ದದ ರೇಸಿಂಗ್ ವಿಹಾರ ನೌಕೆಯಲ್ಲಿ ಪ್ರಯಾಣಮಾಡಿದರು. ಈ ಪ್ರವಾಸವನ್ನು "ಇಂಗಾಲ-ತಟಸ್ಥ ಅಟ್ಲಾಂಟಿಕ್ ಕ್ರಾಸಿಂಗ್" ಎಂದು ಘೋಷಿಸಲಾಗಿದ್ದು, ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮಹತ್ವದ ಬಗ್ಗೆ ಥನ್‌ಬರ್ಗ್ ಘೋಷಿಸಿದ ನಂಬಿಕೆಗಳ ಪ್ರದರ್ಶನವಾಗಿದೆ. ಆದರೆ ಆ ವಿಹಾರ ನೌಕೆಯನ್ನು ಯುರೋಪಿಗೆ ಪುನಃ ಕೊಂಡೊಯ್ಯಲು ಹಲವಾರು ಸಿಬ್ಬಂದಿಗಳು ನ್ಯೂಯಾರ್ಕ್‌ಗೆ ವಿಮಾನದಲ್ಲಿ ಹಾರಲಿದ್ದಾರೆ ಎಂದು ಫ್ರಾನ್ಸ್ 24 ರಂದು ವ್ಯಂಗ್ಯವಾಗಿ ವರದಿ ಮಾಡಿದೆ.
  • ಸಮುದ್ರಯಾನವು 15 ದಿನಗಳವರೆಗೆ, ಆಗಸ್ಟ್ 14 ರಿಂದ 28 ರವರೆಗೆ ನಡೆಯಿತು. ಅಮೆರಿಕಾದಲ್ಲಿದ್ದಾಗ, ಥನ್ಬರ್ಗ್ ನ್ಯೂಯಾರ್ಕ್ ನಗರದಲ್ಲಿ ನಡೆದ ಯುಎನ್- ವಿಶ್ವಸಂಸ್ಥೆಯ ಕ್ಲೈಮೇಟ್ ಆಕ್ಷನ್ ಶೃಂಗಸಭೆಯಲ್ಲಿ ಭಾಗವಹಿಸಿದರು. ಸಾಮೂಹಿಕ ಪ್ರತಿಭಟನೆಯಿಂದಾಗಿ ಅದನ್ನು ರದ್ದುಗೊಳಿಸುವ ಮೊದಲು, ಡಿಸೆಂಬರ್‌ನಲ್ಲಿ ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆದ "ಸಿಒಪಿ 25 ಹವಾಮಾನ ಬದಲಾವಣೆ ಸಮಾವೇಶ"ದಲ್ಲಿ ಪಾಲ್ಗೊಳ್ಳಲು ಥನ್‌ಬರ್ಗ್ ಯೋಜಿಸಿದ್ದರು.

ಕೆನಡಾದಲ್ಲಿ

"ನನಗೆ ಆಸ್ಪರ್ಜರ್ ಸಿಂಡ್ರೋಮ್, ಒಸಿಡಿ ಮತ್ತು ಆಯ್ದ-(selective mutism) ಮ್ಯೂಟಿಸಮ್ ಇದೆ ಎಂದು ರೋಗನಿರ್ಣಯ ಮಾಡಲಾಯಿತು. ಇದರರ್ಥ ಮೂಲತಃ ಅದು ಅಗತ್ಯವೆಂದು ನಾನು ಭಾವಿಸಿದಾಗ ಮಾತ್ರ ಮಾತನಾಡುತ್ತೇನೆ. ಈಗ ಆ ಕ್ಷಣಗಳಲ್ಲಿ ಒಂದು." - 'ಗ್ರೇಟಾ ಥನ್‍ಬರ್ಗ್'
  • ಗ್ರೇಟಾ ಥನ್‍ಬರ್ಗ್ 
    ಗ್ರೇಟಾ ಥನ್‍ಬರ್ಗ್- "ಹವಾಮಾನದ ಬಿಕ್ಕಟ್ಟು ಪರಿಹರಿಸಿ- ಭೂಮಿ ಉಳಿಸಿ" ಏಕಾಂಗಿ ಹೋರಾಟಗಾರ್ತಿ
ದಾವೋಸ್‌ನಲ್ಲಿ ನಡೆದ 2019 ರ ವಿಶ್ವ ಆರ್ಥಿಕ ವೇದಿಕೆಯಲ್ಲಿ ಥನ್‌ಬರ್ಗ್ ಮಾತನಾಡುವ ವಿಡಿಯೋ
  • ಕೆನಡಾದಲ್ಲಿದ್ದಾಗ, ಮಾಂಟ್ರಿಯಲ್, ಎಡ್ಮಂಟನ್ ಮತ್ತು ವ್ಯಾಂಕೋವರ್ ನಗರಗಳಲ್ಲಿ ಹವಾಮಾನ ಪ್ರತಿಭಟನೆಯಲ್ಲಿ ಥನ್ಬರ್ಗ್ ಭಾಗವಹಿಸಿದರು. ಯುನೈಟೆಡ್ ಸ್ಟಟ್ಸ್‍ನಲ್ಲಿ, ನ್ಯೂಯಾರ್ಕ್ ನಗರ, ಅಯೋವಾ ಸಿಟಿ, ಲಾಸ್ ಏಂಜಲೀಸ್, ಷಾರ್ಲೆಟ್, ಎನ್‌ಸಿ, ಡೆನ್ವರ್, ಕೊಲೊರಾಡೋ ಮತ್ತು ಸ್ಟ್ಯಾಂಡಿಂಗ್ ರಾಕ್ ಇಂಡಿಯನ್ ರಿಸರ್ವೇಶನ್‌ನಲ್ಲಿ ಹವಾಮಾನ ಪ್ರತಿಭಟನೆಯಲ್ಲಿ ಥನ್‌ಬರ್ಗ್ ಭಾಗವಹಿಸಿದರು. ಪ್ರತಿ ನಗರ ಅಥವಾ ಸ್ಥಳದಲ್ಲಿ, ಥನ್ಬರ್ಗ್ ಅವರು ಮುಖ್ಯ ಭಾಷಣ ಮಾಡಿದರು, ಅವರು "ಸ್ಥಳೀಯ ಅಥವಾ ಸ್ಥಳೀಯರ ಭೂಮಿಯಲ್ಲಿ ನಿಂತಿದ್ದಾಗಿ" (ಮೂಲನಿವಾಸಿಗಳು) ಒಪ್ಪಿಕೊಳ್ಳುವ ಮೂಲಕ ಪ್ರಾರಂಭಿಸಿದರು. ಥನ್ಬರ್ಗ್ ಹೇಳಿದರು: "ಈ ಜನರ ಮೇಲೆ ಆಗಿರುವ ಅಗಾಧ ಅನ್ಯಾಯಗಳನ್ನು ಅಂಗೀಕರಿಸುವಲ್ಲಿ, ಗುಲಾಮರ ಮತ್ತು ಒಪ್ಪಂದದ ಅನೇಕ ಸೇವಕರನ್ನು ಸಹ ನಾವು ಉಲ್ಲೇಖಿಸಬೇಕು ಮತ್ತು ಅವರ ಶ್ರಮದಿಂದ ಇಂದಿಗೂ ಜಗತ್ತು ಲಾಭ ಪಡೆಯುತ್ತಿದೆ."

ವಿಶ್ವ ಆರ್ಥಿಕ ವೇದಿಕೆಯ 50ನೇ ಅಧಿವೇಶನದಲ್ಲಿ - ಗ್ರೇಟಾ

  • ಸ್ವಿಟ್ಜರ್ಲೆಂಡ್‌ನ ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 50ನೇ ಅಧಿವೇಶನ 2020,ಜ. 21ರಿಂದ 24ರಂದು ನೆಡೆಯಿತು., ಭಾರಿ ಪ್ರಚಾರ ಪಡೆದ ‘ಹವಾಗುಣ ಬದಲಾವಣೆಯ ಮೇಲೆ ಚರ್ಚೆ ಆಯಿತು. ಅಲ್ಲಿ ಜಗತ್ತಿನ ರಾಜಕೀಯ ಲೇಪವಿರಲಿಲ್ಲ. ಜಾಗತಿಕ ಭವಿಷ್ಯದ ಬಗ್ಗೆ ಮುಖ್ಯ ಚರ್ಚೆಗೆ ಮುಕ್ತ ಅವಕಾಶವಿತ್ತು. ಇದು ಜಗತ್ತಿನ ‘ಚಿಂತಕರ ಚಾವಡಿ’.ನಾಲ್ಕು ದಿನಗಳ ಸಮಾವೇಶದ ಅಜೆಂಡಾದಲ್ಲಿ ಆದ್ಯತೆ ಗಳಿಸಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಈಗಾಗಲೇ ‘ಭೂಪುತ್ರಿ’ ಎಂದು ಪ್ರಶಂಸೆಗೆ ಪಾತ್ರಳಾಗಿರುವ ಸ್ವೀಡನ್ನಿನ ಗ್ರೇತಾ ಥನ್‍ಬರ್ಗ್ ಉಪನ್ಯಾಸವಿತ್ತು.
  • ಟ್ರಂಪ್, ಪ್ಯಾರಿಸ್'ನ ಹವಾಮಾನ ಒಪ್ಪಂದದಿಂದ ಹಿಂದೆ ಸರಿದಿರುವರು. ಟ್ರಂಪ್‍ಗೆ ಅಮೆರಿಕದ ಆರ್ಥಿಕತೆ ಮುಖ್ಯವಾಗಿತ್ತು. ಅವರಿಗೆ ಜಗತ್ತನ್ನು ಸುಡುತ್ತಿರುವ ಭೂತಾಪದ ಏರಿಕೆ ಮುಖ್ಯವಲ್ಲ. ಅದನ್ನು ಅವರು ಒಪ್ಪುವುದೂ ಇಲ್ಲ. ಹವಾಗುಣ ಬದಲಾವಣೆಯಾಗುತ್ತಿದೆ ಎಂದು ಎಚ್ಚರಿಸುತ್ತಿರುವವರನ್ನೆಲ್ಲ ಅವರು ಪ್ರಳಯವಾದಿಗಳು ಎಂದು ಆ ಸಭೆಯಲ್ಲಿ ಜರಿದರು.ಅದಕ್ಕೆ ಉತ್ತರವಾಗಿ ಅವರ ನಂತರ 3,000ಕ್ಕೂ ಹೆಚ್ಚು ಮಂದಿ ದೇಶ, ವಿದೇಶಗಳ ಪ್ರತಿನಿಧಿಗಳು ಭಾಗವಹಿಸಿದ ಸಭೆಯಲ್ಲಿ 17 ವರ್ಷದ ಗ್ರೇಟಾ ಮಾತನಾಡಿದಳು:
      ಒಂದು ವರ್ಷದ ಹಿಂದೆ ಇದೇ ವೇದಿಕೆಯಲ್ಲಿ ಹೇಳಿದ್ದೆ. ನಮ್ಮ ಮನೆಗೆ ಬೆಂಕಿ ಬಿದ್ದಿದೆ. ಇದು ಭಯಪಡಬೇಕಾದ ಸಂಗತಿ ಎಂದಿದ್ದೆ. ಇಂಥ ಭಾಷೆ ಉಪಯೋಗಿಸಬಾರದು ಎಂಬ ಎಚ್ಚರಿಕೆಯನ್ನೂ ಈ ಬಾರಿ ಕೊಡಲಾಗಿತ್ತು. ಈಗ ಅಸ್ತಿತ್ವದಲ್ಲಿರುವ ತಂತ್ರಜ್ಞಾನವನ್ನು ನೆಚ್ಚಿ ಕುಳಿತುಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ಯಾವ ಯಾವುದೋ ಸಂಖ್ಯೆಯನ್ನು ಒದರಿ ಶೂನ್ಯ ಕಾರ್ಬನ್ ಉತ್ಸರ್ಜನೆ ಕುರಿತು ನೀವು ಮಾತನಾಡಿ ಎಂದು ನಾನು ಹೇಳುತ್ತಿಲ್ಲ. ಅತ್ತ ಅಮೆಜಾನ್ ಕಾಡು ಸುಡುತ್ತಿದ್ದರೆ, ಇತ್ತ ಆಫ್ರಿಕಾದಲ್ಲಿ ಮರ ನೆಟ್ಟು ಆ ನಷ್ಟವನ್ನು ಸರಿದೂಗಿಸಿ ಎಂದು ನಾನು ಹೇಳುತ್ತಿಲ್ಲ. ಎಷ್ಟು ಹೊಸ ಮರ ನೆಟ್ಟರೂ ಈಗ ನಾಶವಾಗಿರುವ ಕಾಡನ್ನು ಮತ್ತೆ ಗಳಿಸಲು ಆಗದಂಥ ಸ್ಥಿತಿಗೆ ತಲುಪಿದ್ದೇವೆ. ಕಾರ್ಬನ್ ಕಡಿತಗೊಳಿಸಲು ನೀವು ಯಾವ ತಂತ್ರ ಅನುಸರಿಸುತ್ತೀರೋ ಅದು ಮುಖ್ಯವಲ್ಲ. ನಾವು ಬದುಕಬೇಕೆಂದಿದ್ದರೆ ಈಗಿನ ಉಷ್ಣತೆಗಿಂತ ಜಾಗತಿಕ ಉಷ್ಣತೆ 1.5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲೇಬೇಕು,’.
      ‘ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವುದು ಜಗತ್ತನ್ನೇ ಕಳವಳಕ್ಕೆ ಈಡುಮಾಡಿದೆ. ಅಧಿಕಾರದಲ್ಲಿರುವವರು ಈ ಒಪ್ಪಂದಕ್ಕೆ ಕವಡೆ ಕಿಮ್ಮತ್ತೂ ಕೊಡುವುದಿಲ್ಲ. ಎಡ-ಬಲ-ನಡು ಎಂದು ಬಲವಾಗಿ ಪ್ರತಿಪಾದಿಸುವವರು ಭೂಮಿಗೆ ಒದಗಿರುವ ದುರ್ಗತಿಯನ್ನು ಸರಿಪಡಿಸಲು ಆಗಿಲ್ಲ. ಅವರದು ಬರೀ ಮೌನ ಅಷ್ಟೆ. ಈ ಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ನಡೆದಿದೆಯೆಂದು ಹೇಳುತ್ತಿರುವವರು ಹುಸಿಮಾತುಗಳನ್ನೇ ಆಡುತ್ತಿದ್ದಾರೆ. ನಾವು ಅದನ್ನೇ ನಂಬಿ ಕೂರುವ ಯುವಜನಾಂಗವಲ್ಲ. ಪರಿಹಾರ ಎಂಬುದು ಒಂದೇ ದಿನಕ್ಕೆ ಸಿಕ್ಕುವಂಥದ್ದಲ್ಲ. ನಮಗೆ ಅಷ್ಟು ಸಮಯವೂ ಇಲ್ಲ. ನಾವು ಭೂಮಿಯನ್ನು ಉಳಿಸಲು ಹೊರಟಿರುವವರು. ಇಲ್ಲಿ ಭಾಗವಹಿಸಿರುವ ಕಂಪನಿಗಳು, ಬ್ಯಾಂಕುಗಳು, ಸಂಸ್ಥೆಗಳು ಮತ್ತು ಸರ್ಕಾರವನ್ನು ಕೇಳುವುದಿಷ್ಟು- ಜೀವ್ಯವಶೇಷ ಇಂಧನಗಳ ಪರಿಶೋಧನೆಗಳನ್ನು ನಿಲ್ಲಿಸಿ. ಅವಕ್ಕೆ ನೀಡುವ ಸಬ್ಸಿಡಿಯನ್ನು ಕೊನೆಗೊಳಿಸಿ. ಇದನ್ನು 2050ರಲ್ಲಿ ಅಥವಾ 2021ರಲ್ಲಿಯೇ ಜಾರಿ ಮಾಡಿ ಎಂದು ಕೇಳುತ್ತಿಲ್ಲ. ಅದು ಈಗಿನಿಂದಲೇ ಆಗಬೇಕು. ನಮ್ಮನ್ನು ಏನೂ ತಿಳಿಯದ ಅಮಾಯಕರು ಎಂದು ನೀವು ಬಿಂಬಿಸಬೇಕಾಗಿಲ್ಲ. ನೀವು ಕೈಚೆಲ್ಲಿ ಕೂಡಬಹುದು. ಆದರೆ ನಾವು ಹೋರಾಟ ಮಾಡಿಯೇ ತೀರುತ್ತೇವೆ. ಹವಾಗುಣ ಬದಲಾವಣೆ ತಂದಿರುವ ಸಂಕಷ್ಟಗಳನ್ನು ನಿಭಾಯಿಸುವುದರಲ್ಲಿ ನಾವು ವಿಫಲರಾಗಿದ್ದೇವೆ ಎಂದು ಯಾವ ಬಾಯಿಯಲ್ಲಿ ಮಕ್ಕಳಿಗೆ ಹೇಳುತ್ತೀರಿ, ಅದೂ ಒಂದು ಪ್ರಾಮಾಣಿಕ ಪ್ರಯತ್ನವನ್ನೂ ಮಾಡದೆ. ನಮ್ಮ ಮನೆಗೆ ಬಿದ್ದಿರುವ ಬೆಂಕಿ ಇನ್ನೂ ಆರಿಲ್ಲ. ಅದಕ್ಕೆ ನಿಮ್ಮ ನಿಷ್ಕ್ರಿಯತೆಯೇ ತುಪ್ಪ ಸುರಿಯುತ್ತಿದೆ’....

ಭಾರತದಲ್ಲಿ ೨೦೨೧ ರ ರೈತರ ಪ್ರತಿಭಟನೆಗೆ ಬೆಂಬಲ

  • 2020ರ ಭಾರತೀಯ ರೈತರ ಪ್ರತಿಭಟನೆ‎
  • ಇವರು ಭಾರತಾದ್ಯಂತ ನೆಡೆಯುತ್ತಿರುವ ರೈತರ , ಹೊಸ ಕೃಷಿಕಾಯಿದೆ ವಿರೋಧಿ ಚಳುವಳಿಗೆ ಬೆಂಬಲ ನೀಡಿದ್ದಾರೆ. ಅವರ ಜೊತೆ ರೈತರಗೆ ಬೆಂಬಲ ಕೊಟ್ಟು ಟೂಲ್ಕಿಟ್‍ನಲ್ಲಿ ಪ್ರಚಾರ ಮಾಡಿದ ಬೆಂಗಳೂರಿನ ದಿಶಾ ರವಿ ದೆಹಲಿಯ ಪೋಲಿಸ್ ಬಂಧನದಲ್ಲಿದ್ದಾಳೆ. ದಿ.19 ಫೆಬ್ರವರಿ 2021- ಟೂಲ್‌ಕಿಟ್‌ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನಲ್ಲಿರುವ ಪರಿಸರ ಹೋರಾಗಾರ್ತಿ ಬೆಂಗಳೂರಿನ ದಿಶಾ ರವಿ ಅವರಿಗೆ ಅಂತರರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಬೆಂಬಲ ಸೂಚಿಸಿದದರು.'ವಾಕ್ ಸ್ವಾತಂತ್ರ್ಯ, ಶಾಂತಿಯುತ ಪ್ರತಿಭಟನೆ ಮತ್ತು ಸಭೆ ಸೇರುವ ಹಕ್ಕು ಚೌಕಾಸಿ ಇಲ್ಲದ ಮಾನವ ಹಕ್ಕುಗಳಾಗಿವೆ. ಇವು ಯಾವುದೇ ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿರಬೇಕು,' ಎಂದು ಗ್ರೆಟಾ ಪ್ರತಿಪಾದಿಸಿದ್ದಾರೆ. ಅಲ್ಲದೆ, ಈ ಟ್ವೀಟ್‌ ನೊಂದಿಗೆ ಗ್ರೆಟಾ ಅವರು #StandWithDishaRavi ಎಂಬ ಹ್ಯಾಷ್‌ ಟ್ಯಾಗ್‌ ಅನ್ನೂ ಬಳಸಿದ್ದಾರೆ.

ನೋಡಿ

ಹೆಚ್ಚಿನ ಓದಿಗೆ

    ಭೂಮಿಯ ಆರೋಗ್ಯಕ್ಕಾಗಿ ಹೋರಾಡಿದ-ಗ್ರೇತಾ ಥನ್‍ಬರ್ಗ್: (ನಾಗೇಶ ಹೆಗಡೆಯವರ ಗ್ರಂಥ): ಗ್ರೇತಾಳ ಜೀವನಗಾಥೆ ಅವಳು ಹುಟ್ಟುಹಾಕಿದ ಹೋರಾಟದ ಕಥೆ: ಮೂಕ ಪೃಥ್ವಿಗೆ ಮಾತುಕೊಟ್ಟ ಕಿಶೋರಿ;: "ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ." ಹದಿನೈದು ವರ್ಷದ ಹುಡುಗಿ ಒಬ್ಬಂಟಿಯಾಗಿ ಧರಣಿ ಕುಳಿತಳು. ಅವಳ ಮುಷ್ಕರವನ್ನು ಬೆಂಬಲಿಸಿ 130 ರಾಷ್ಟ್ರಗಳಲ್ಲಿ ಎಳೆಯರು ಬೀದಿಗೆ ಬಂದರು. ಬಹುತೇಕ ಮಾತನಾಡದ ಇವಳು ಬ್ರಿಟನ್‌, ಫ್ರಾನ್ಸ್‌ ಸಂಸತ್ತಿನಲ್ಲಿ ಮಾತನಾಡಿದಳು. ಟೈಮ್‌ ಪತ್ರಿಕೆಯ ಮುಖಪುಟಕ್ಕೆ ಬಂದಳು. ಮಕ್ಕಳ ಕ್ಲೈಮೇಟ್‌ ಪ್ರಶಸ್ತಿ ಪಡೆದಳು. ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಳು. ಗೌರವ ಡಾಕ್ಟರೇಟ್‌ ಪಡೆದಳು. ಕೊನೆಗೆ ನೊಬೆಲ್‌ ಪ್ರಶಸ್ತಿಗೆ ನಾಮಾಂಕಿತಗೊಂಡಳು. ಈಗ ಬದಲೀ ನೊಬೆಲ್‌ ಪ್ರಶಸ್ತಿ ಪಡೆಯುತ್ತಿದ್ದಾಳೆ.

ಉಲ್ಲೇಖ

🔥 Trending searches on Wiki ಕನ್ನಡ:

ಮುರುಡೇಶ್ವರಮೂಲಭೂತ ಕರ್ತವ್ಯಗಳುಒಗಟುತಲಕಾಡುಯೇಸು ಕ್ರಿಸ್ತಸೀತೆಪು. ತಿ. ನರಸಿಂಹಾಚಾರ್ಸೂರ್ಯ ಗ್ರಹಣಚಾಮರಾಜನಗರಸಾಮ್ರಾಟ್ ಅಶೋಕರಾಮಅನುನಾಸಿಕ ಸಂಧಿಕಂದಕರ್ನಾಟಕ ವಿಧಾನ ಪರಿಷತ್ನವೋದಯಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದೇವಸ್ಥಾನಭಾರತೀಯ ರೈಲ್ವೆಪ್ರಿನ್ಸ್ (ಚಲನಚಿತ್ರ)ಮಾದರ ಚೆನ್ನಯ್ಯವಿಷ್ಣುಗುರುರಾಜ ಕರಜಗಿಉಡುಪಿ ಜಿಲ್ಲೆಚನ್ನಬಸವೇಶ್ವರಶಬ್ದ ಮಾಲಿನ್ಯಎ.ಎನ್.ಮೂರ್ತಿರಾವ್ಲಕ್ಷ್ಮಿಕರ್ನಾಟಕ ವಿಧಾನ ಸಭೆಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕೊಡಗಿನ ಗೌರಮ್ಮಮಾನಸಿಕ ಆರೋಗ್ಯಕ್ರೀಡೆಗಳುಮೂಕಜ್ಜಿಯ ಕನಸುಗಳು (ಕಾದಂಬರಿ)ಭಾರತೀಯ ಸ್ಟೇಟ್ ಬ್ಯಾಂಕ್ಕರ್ಬೂಜಚಾಲುಕ್ಯಸ್ಕೌಟ್ಸ್ ಮತ್ತು ಗೈಡ್ಸ್ಅನುಶ್ರೀಅಂತರ್ಜಲಭಾರತದಲ್ಲಿ ಬಡತನಬಾಹುಬಲಿಕರ್ನಾಟಕದ ಶಾಸನಗಳುಕೊಪ್ಪಳಸಾಲುಮರದ ತಿಮ್ಮಕ್ಕಸಚಿನ್ ತೆಂಡೂಲ್ಕರ್ವ್ಯಾಸರಾಯರುವಲ್ಲಭ್‌ಭಾಯಿ ಪಟೇಲ್ಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ವಾಲ್ಮೀಕಿಹಸ್ತ ಮೈಥುನರಾಷ್ಟ್ರೀಯ ಶಿಕ್ಷಣ ನೀತಿತೆನಾಲಿ ರಾಮ (ಟಿವಿ ಸರಣಿ)ಇಂದಿರಾ ಗಾಂಧಿಮೂಲಧಾತುಗಳ ಪಟ್ಟಿಹೆಚ್.ಡಿ.ಕುಮಾರಸ್ವಾಮಿರಾಮಾಚಾರಿ (ಕನ್ನಡ ಧಾರಾವಾಹಿ)ಏಕರೂಪ ನಾಗರಿಕ ನೀತಿಸಂಹಿತೆತಾಳಗುಂದ ಶಾಸನಪಂಜುರ್ಲಿತ. ರಾ. ಸುಬ್ಬರಾಯಸಂಪ್ರದಾಯಮಹಾವೀರಜನ್ನಶಬರಿಅಲ್ಲಮ ಪ್ರಭುಅನುರಾಗ ಅರಳಿತು (ಚಲನಚಿತ್ರ)ನದಿಛತ್ರಪತಿ ಶಿವಾಜಿಕುಮಾರವ್ಯಾಸರವೀಂದ್ರನಾಥ ಠಾಗೋರ್ಕನ್ನಡ ಚಳುವಳಿಗಳುಸಮುಚ್ಚಯ ಪದಗಳುಅಕ್ಬರ್ಕಲ್ಯಾಣಿನಾಯಕ (ಜಾತಿ) ವಾಲ್ಮೀಕಿಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)🡆 More