ಆಟೋ ರಾಜ: ವಿಜಯ್ ನಿರ್ದೇಶನದ ಕನ್ನಡ ಚಲನಚಿತ್ರ

ಆಟೋ ರಾಜಾ ೧೯೮೦ ರ ಭಾರತೀಯ ಕನ್ನಡ-ಭಾಷೆಯ ಚಿತ್ರವಾಗಿದ್ದು, ಎಂ ಡಿ ಸುಂದರ್ ಅವರ ಚಿತ್ರಕಥೆಯನ್ನು ಆಧರಿಸಿ ನಿರ್ದೇಶಕ ವಿಜಯ್ ಅವರು ನಿರ್ದೇಶಿಸಿದ್ದಾರೆ.

ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರಿಯ ಪತಿ ಸಿ.ಜಯರಾಮ್ ಅವರು ಸಪ್ತಸ್ವರ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶಂಕರ್ ನಾಗ್ ಮತ್ತು ಗಾಯತ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ದ್ವಾರಕೀಶ್, ಬಾಲಕೃಷ್ಣ ಮತ್ತು ಲೀಲಾವತಿ ಇತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರವು ಸಂಗೀತ ಜೋಡಿ ರಾಜನ್-ನಾಗೇಂದ್ರ ಸಂಯೋಜಿಸಿದ ಮೂಲ ಹಾಡುಗಳನ್ನು ಒಳಗೊಂಡಿದೆ. ಚಿತ್ರದ ಛಾಯಾಗ್ರಹಣವನ್ನು ಎಸ್ ವಿ ಶ್ರೀಕಾಂತ್ ನಿರ್ವಹಿಸಿದ್ದಾರೆ. ಇದು ಕನ್ನಡ ಚಿತ್ರರಂಗದ ಅತ್ಯುತ್ತಮ ವಾಣಿಜ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ ಮತ್ತು ಆರಾಧನಾ ಸ್ಥಾನಮಾನವನ್ನು ಪಡೆದುಕೊಂಡಿದೆ. ಈ ಚಿತ್ರವು ಶಂಕರ್ ನಾಗ್ ಅವರ ಸ್ಟಾರ್‌ಡಮ್ ಅನ್ನು ಹೆಚ್ಚಿಸುವಲ್ಲಿ ಗಮನಾರ್ಹವಾಗಿದೆ.

ಆಟೋ ರಾಜ
ನಿರ್ದೇಶನವಿಜಯ್
ನಿರ್ಮಾಪಕಸಿ.ಜಯರಾಂ
ಪಾತ್ರವರ್ಗಶಂಕರನಾಗ್, ಗಾಯತ್ರಿ ದ್ವಾರಕೀಶ್, ಲೀಲಾವತಿ, ಪದ್ಮ, ಅಶ್ವಥ್ ಬಾಲಕೃಷ್ಣ,ತೂಗುದೀಪ ಶ್ರೀನಿವಾಸ್,ಸುಂದರ ಕೃಷ್ಣ ಅರಸ್,ಪ್ರಭಾಕರ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಸಪ್ತಸ್ವರ ಮೂವೀಮೇಕರ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ

ಪಾತ್ರವರ್ಗ

ಧ್ವನಿಮುದ್ರಿಕೆ

ಚಿತ್ರದ ಧ್ವನಿಪಥವನ್ನು ಪ್ರಸಿದ್ಧ ಜೋಡಿ ರಾಜನ್-ನಾಗೇಂದ್ರ ಮತ್ತು ಸಾಹಿತ್ಯವನ್ನು ಚಿ. ಉದಯಶಂಕರ್ ಸಂಯೋಜಿಸಿದ್ದಾರೆ. ರಾಜನ್-ನಾಗೇಂದ್ರ "ನನ್ನ ಆಸೆ ಹಣ್ಣಾಗಿ" ರಾಗವನ್ನು ೧೯೮೩ ರ ತೆಲುಗು ಚಲನಚಿತ್ರ "ಪುಲಿ ಬೆಬ್ಬುಲಿ" ಯ "ಪರಿಮಲಿಂಚು ಪುನ್ನಮಿಲೋ" ಹಾಡಿಗೆ ಮರುಬಳಕೆ ಮಾಡಿದ್ದಾರೆ.

ಧ್ವನಿಮುದ್ರಿಕೆ ಹಾಡು ಗಾಯಕರು ಸಮಯ
"ಹೊಸ ಬಾಳು" ಎಸ್.ಜಾನಕಿ
"ನನ್ನ ಆಸೆ ಹಣ್ಣಾಗಿ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ೪:೧೯
"ಪರಮಾತ್ಮ ಆಡಿಸಿದಂತೆ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮಣಿ
"ನಲಿವ ಗುಲಾಬಿ ಹೂವೆ" ಎಸ್.ಪಿ.ಬಾಲಸುಬ್ರಹ್ಮಣ್ಯಂ ೪:೦೫

ಪರಂಪರೆ

ಆಟೋ ರಾಜ: ಪಾತ್ರವರ್ಗ, ಧ್ವನಿಮುದ್ರಿಕೆ, ಪರಂಪರೆ 
ಬೆಂ‌ಗಳೂರಿನ ಆಟೋವೊಂದರ ಮೇಲೆ ಶಂಕರ್ ನಾಗ್ ಅವರ ಫೋಟೊ

ರಾಜಾ ಎಂಬ ವಿನಮ್ರ ಆಟೋ ಚಾಲಕನ ಪಾತ್ರದಲ್ಲಿ ನಟಿಸಿರುವ ಶಂಕರ್ ನಾಗ್ ಆಟೋ ರಿಕ್ಷಾ ಚಾಲಕರ ವೃತ್ತಿಗೆ ಒಂದು ಘನತೆಯನ್ನು ತಂದುಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ. ಚಿತ್ರ ಬಿಡುಗಡೆಯಾಗಿ ನಾಲ್ಕು ದಶಕಗಳ ನಂತರವೂ ಸಹ ಶಂಕರ್ ನಾಗ್ ಅವರ ಫೋಟೋ ಕರ್ನಾಟಕದಾದ್ಯಂತ ಆಟೋ ರಿಕ್ಷಾಗಳನ್ನು ಅಲಂಕರಿಸಿದೆ.

ಉಲ್ಲೇಖಗಳು

Tags:

ಆಟೋ ರಾಜ ಪಾತ್ರವರ್ಗಆಟೋ ರಾಜ ಧ್ವನಿಮುದ್ರಿಕೆಆಟೋ ರಾಜ ಪರಂಪರೆಆಟೋ ರಾಜ ಉಲ್ಲೇಖಗಳುಆಟೋ ರಾಜಕನ್ನಡಗಾಯತ್ರಿ (ನಟಿ)ದ್ವಾರಕೀಶ್ಪಾರ್ವತಮ್ಮ ರಾಜ್‌ಕುಮಾರ್ಬಾಲಕೃಷ್ಣರಾಜನ್-ನಾಗೇಂದ್ರಲೀಲಾವತಿಶಂಕರ್ ನಾಗ್

🔥 Trending searches on Wiki ಕನ್ನಡ:

ಓಂ ನಮಃ ಶಿವಾಯಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಹಾಸನ ಜಿಲ್ಲೆಕೆ.ಜಿ.ಎಫ್ಭಾರತದ ಮುಖ್ಯಮಂತ್ರಿಗಳುಮೈಸೂರು ಸಂಸ್ಥಾನಮೂಲಧಾತುಗಳ ಪಟ್ಟಿಸಮಾಜಶಾಸ್ತ್ರಹಿಮಚಂಪೂಕಪ್ಪೆ ಅರಭಟ್ಟವ್ಯವಸಾಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹಾಕಿಸೂರ್ಯ ಗ್ರಹಣಭಾರತದ ನಿರ್ದಿಷ್ಟ ಕಾಲಮಾನಮಲೆನಾಡುನವಗ್ರಹಗಳುಅರ್ಜುನಪ್ರವಾಸಿಗರ ತಾಣವಾದ ಕರ್ನಾಟಕಹಟ್ಟಿ ಚಿನ್ನದ ಗಣಿದಯಾನಂದ ಸರಸ್ವತಿಬರವಣಿಗೆವಿಜಯದಾಸರುಮಸೂದೆಕಲ್ಯಾಣ ಕರ್ನಾಟಕಜವಹರ್ ನವೋದಯ ವಿದ್ಯಾಲಯಫ್ರಾನ್ಸ್ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಜೋಗಿ (ಚಲನಚಿತ್ರ)ಕಾವ್ಯಮೀಮಾಂಸೆಭಾರತೀಯ ನೌಕಾ ಅಕಾಡೆಮಿಸಗಟು ವ್ಯಾಪಾರಊಳಿಗಮಾನ ಪದ್ಧತಿಹರಿಶ್ಚಂದ್ರಕೊಡವರುಭಾರತೀಯ ಸಂಸ್ಕೃತಿಲಕ್ಷ್ಮೀಶಕುದುರೆಮುಖಭಾರತದ ನದಿಗಳುಎರಡನೇ ಮಹಾಯುದ್ಧಮೀರಾಬಾಯಿರಾಮ್ ಮೋಹನ್ ರಾಯ್ನಯನ ಸೂಡವ್ಯವಹಾರ ನಿವ೯ಹಣೆಭಾರತದ ಬಂದರುಗಳುಕರ್ನಾಟಕದ ಹಬ್ಬಗಳುಭಾರತದ ಸಂವಿಧಾನಕೇಂದ್ರ ಲೋಕ ಸೇವಾ ಆಯೋಗವಚನ ಸಾಹಿತ್ಯಸವರ್ಣದೀರ್ಘ ಸಂಧಿಕರ್ನಾಟಕ ಪೊಲೀಸ್ರಾಷ್ತ್ರೀಯ ಐಕ್ಯತೆಬ್ಯಾಡ್ಮಿಂಟನ್‌ಸದಾನಂದ ಮಾವಜಿಬಾಸ್ಟನ್ರಷ್ಯಾಉತ್ತರ ಕರ್ನಾಟಕಪ್ರಸ್ಥಭೂಮಿಮೆಂತೆತತ್ಪುರುಷ ಸಮಾಸರವಿಚಂದ್ರನ್ಶ್ರೀ ರಾಮಾಯಣ ದರ್ಶನಂಶ್ಯೆಕ್ಷಣಿಕ ತಂತ್ರಜ್ಞಾನಆಧುನಿಕ ವಿಜ್ಞಾನತುಮಕೂರುಭಾರತೀಯ ರಿಸರ್ವ್ ಬ್ಯಾಂಕ್ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಮೈಸೂರುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಅವರ್ಗೀಯ ವ್ಯಂಜನಜೋಳಮಹೇಶ್ವರ (ಚಲನಚಿತ್ರ)🡆 More