ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು

1945ರಲ್ಲಿ ನಡೆದ IIನೇ ಜಾಗತಿಕ ಸಮರದ ಅಂತಿಮ ಹಂತಗಳ ಅವಧಿಯಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನವು ಜಪಾನ್‌‌‌ನಲ್ಲಿರುವ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ವಿರುದ್ಧ ಪರಮಾಣು ಬಾಂಬ್‌ ದಾಳಿಗಳನ್ನು ನಡೆಸಿತು.

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು
ಲಿಟ್ಲ್‌ ಬಾಯ್‌ನ್ನು ಬೀಳಿಸಿದ ನಂತರ ಹಿರೋಷಿಮಾದ ಮೇಲೆ ಆವರಿಸಿಕೊಂಡ ಅಣಬೆ ಮೋಡ
ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು
ನಾಗಸಾಕಿಯ ಮೇಲಿನ ಪರಮಾಣು ಬಾಂಬ್‌ ಸ್ಫೋಟದಿಂದ ಉದ್ಭವಿಸಿದ ಫ್ಯಾಟ್‌ ಮ್ಯಾನ್‌ ಅಣಬೆ ಮೋಡವು, ಅಧಿಕೇಂದ್ರದಿಂದ ವಾಯುವಿನೊಳಗೆ 18 ಕಿ.ಮೀ.ವರೆಗೆ (11 ಮೈಲು, 60,000 ಅಡಿ) ಏಳುತ್ತದೆ.

ತೀವ್ರ ಯುದ್ಧತಂತ್ರವನ್ನೊಳಗೊಂಡಿದ್ದ ಜಪಾನಿಯರ 67 ನಗರಗಳ ಮೇಲಿನ ಬೆಂಕಿ-ಬಾಂಬ್‌ ದಾಳಿಯ ಆರು ತಿಂಗಳುಗಳ ನಂತರ, ಪಾಟ್ಸ್‌ಡ್ಯಾಂ ಘೋಷಣೆಯಿಂದ ನೀಡಲ್ಪಟ್ಟ ಒಂದು ಅಂತಿಮ ಷರತ್ತನ್ನು ಜಪಾನಿಯರ ಸರ್ಕಾರ ಉಪೇಕ್ಷಿಸಿತು. ಅಧ್ಯಕ್ಷ ಹ್ಯಾರಿ S. ಟ್ರೂಮನ್‌‌‌‌‌ನಿಂದ ಬಂದ ಕಾರ್ಯಕಾರಿ ಆದೇಶದ ಅನುಸಾರ, 1945ರ ಆಗಸ್ಟ್‌‌ 6ರ ಸೋಮವಾರದಂದು "ಲಿಟ್ಲ್‌ ಬಾಯ್‌" ಎಂಬ ಹೆಸರಿನ ಪರಮಾಣು ಶಸ್ತ್ರಾಸ್ತ್ರವನ್ನು ಹಿರೋಷಿಮಾ ನಗರದ ಮೇಲೆ U.S. ಬೀಳಿಸಿತು; ಇದಾದ ನಂತರ ಆಗಸ್ಟ್‌‌ 9ರಂದು ನಾಗಸಾಕಿಯ ಮೇಲೆ "ಫ್ಯಾಟ್‌ ಮ್ಯಾನ್‌"ನ ಆಸ್ಫೋಟನವನ್ನು ಅದು ನಡೆಸಿತು. ಇವು ಯುದ್ಧದಲ್ಲಿನ ಪರಮಾಣು ಶಸ್ತ್ರಾಸ್ತ್ರಗಳ ಏಕೈಕ ಬಳಕೆಯಾಗಿವೆ. ಹಿರೋಷಿಮಾವು ಜಪಾನ್‌ನ ಎರಡನೇ ಸೇನಾ ಕೇಂದ್ರಕಾರ್ಯಾಲಯವನ್ನು ಒಳಗೊಳ್ಳುವುದರ ಜೊತೆಗೆ, ಒಂದು ಸಂವಹನೆಗಳ ಕೇಂದ್ರ ಮತ್ತು ಶೇಖರಣಾ ಉಗ್ರಾಣವಾಗಿರುವುದರ ಮೂಲಕ ಪರಿಗಣನೀಯ ಸೇನಾ ಪ್ರಾಮುಖ್ಯತೆಯನ್ನು ಹೊಂದಿದ್ದ ಒಂದು ನಗರವಾಗಿದ್ದರಿಂದ, ಅದನ್ನು ಗುರಿಯನ್ನಾಗಿ ಆರಿಸಿಕೊಳ್ಳಲಾಯಿತು.

ಬಾಂಬ್‌ ದಾಳಿಗಳಾದ ಮೊದಲ ಎರಡರಿಂದ ನಾಲ್ಕು ತಿಂಗಳುಗಳ ಒಳಗಾಗಿ, ಅದರ ತೀವ್ರವಾದ ಪ್ರಭಾವಗಳು ಹಿರೋಷಿಮಾದಲ್ಲಿ 90,000–166,000 ಜನರನ್ನು, ಮತ್ತು ನಾಗಸಾಕಿಯಲ್ಲಿ 60,000–80,000 ಜನರನ್ನು ಕೊಂದಿತು. ಪ್ರತಿ ನಗರದಲ್ಲೂ ಸಂಭವಿಸಿದ ಸಾವುನೋವುಗಳ ಪೈಕಿ ಸ್ಥೂಲವಾಗಿ ಅರ್ಧದಷ್ಟು ಮೊದಲ ದಿನದಂದೇ ಸಂಭವಿಸಿದವು. ಹಿರೋಷಿಮಾದ ಪ್ರಿಫೆಕ್ಟಿನ ಆಡಳಿತ ಪ್ರಾಂತಕ್ಕೆ ಸಂಬಂಧಿಸಿದ ಆರೋಗ್ಯ ಇಲಾಖೆಯು ಅಂದಾಜು ಮಾಡಿರುವ ಪ್ರಕಾರ, ಸ್ಫೋಟದ ದಿನದಂದು ಸತ್ತ ಜನರ ಪೈಕಿ 60%ನಷ್ಟು ಜನರು ಥಟ್ಟನೆ ಎದ್ದ ಉರಿ ಅಥವಾ ಜ್ವಾಲೆಯ ಸುಟ್ಟಗಾಯಗಳಿಂದ ಸತ್ತರೆ, 30%ನಷ್ಟು ಜನರು ಬೀಳುತ್ತಿರುವ ಭಗ್ನಾವಶೇಷದಿಂದ ಮತ್ತು 10%ನಷ್ಟು ಜನರು ಇತರ ಕಾರಣಗಳಿಂದ ಸತ್ತರು. ಇದನ್ನು ಅನುಸರಿಸಿಕೊಂಡು ಬಂದ ತಿಂಗಳುಗಳ ಅವಧಿಯಲ್ಲಿ, ಸುಟ್ಟಗಾಯಗಳು, ವಿಕಿರಣದ ಕಾಯಿಲೆ, ಮತ್ತು ಅಸ್ವಸ್ಥತೆಯಿಂದ ಜಟಿಲಗೊಳಿಸಲ್ಪಟ್ಟ ಇತರ ಗಾಯಗಳ ಪ್ರಭಾವದಿಂದ ಬೃಹತ್‌‌ ಸಂಖ್ಯೆಗಳಲ್ಲಿ ಜನರು ಸತ್ತರು. ಮರಣಕ್ಕೆ ಸಂಬಂಧಿಸಿದ ತತ್‌ಕ್ಷಣದ ಮತ್ತು ಅಲ್ಪಾವಧಿಯ ಕಾರಣಗಳ ಒಟ್ಟಾರೆ ಪ್ರಮಾಣದ ಒಂದು ತೋರುವ ಅಂದಾಜಿನ ಅನುಸಾರ, 15–20%ನಷ್ಟು ಜನರು ವಿಕಿರಣದ ಕಾಯಿಲೆಯಿಂದ ಸತ್ತರೆ, 20–30%ನಷ್ಟು ಜನರು ಥಟ್ಟನೆ ಎದ್ದ ಉರಿಯ ಸುಟ್ಟಗಾಯಗಳಿಂದ, ಮತ್ತು 50–60%ನಷ್ಟು ಜನರು ಅಸ್ವಸ್ಥತೆಯಿಂದ ಜಟಿಲಗೊಳಿಸಲ್ಪಟ್ಟ ಇತರ ಗಾಯಗಳಿಂದ ಸತ್ತರು.

ಎರಡೂ ನಗರಗಳಲ್ಲಿ ಸತ್ತವರ ಪೈಕಿ ಬಹುಪಾಲು ಮಂದಿ ಸೈನಿಕರಲ್ಲದ ನಾಗರಿಕರಾಗಿದ್ದರು.

ನಾಗಸಾಕಿಯ ಮೇಲೆ ಆಸ್ಫೋಟನವಾದ ಆರು ದಿನಗಳ ನಂತರ, ಆಗಸ್ಟ್‌‌ 15ರಂದು, ಒಕ್ಕೂಟಕ್ಕೆ ಸೇರಿದ ಶಕ್ತಿಗಳಿಗೆ ಜಪಾನ್‌ ತನ್ನ ಶರಣಾಗತಿಯನ್ನು ಘೋಷಿಸಿತು ಹಾಗೂ ಸೆಪ್ಟೆಂಬರ್‌‌ 2ರಂದು ಶರಣಾಗತಿಯ ದಸ್ತೈವಜಿಗೆ ಸಹಿಹಾಕಿತು. ತನ್ಮೂಲಕ ಪೆಸಿಫಿಕ್‌ ಯುದ್ಧ ಮತ್ತು ಆದ್ದರಿಂದ IIನೇ ಜಾಗತಿಕ ಸಮರವು ಕೊನೆಗೊಂಡಂತಾಯಿತು. ಮೇ 7ರಂದು ಜರ್ಮನಿಯು ತನ್ನ ಶರಣಾಗತಿಯ ದಸ್ತೈವಜಿಗೆ ಸಹಿಹಾಕಿತ್ತು, ಇದರಿಂದಾಗಿ ಯುರೋಪ್‌ನಲ್ಲಿನ ಯುದ್ಧವು ಕೊನೆಗೊಂಡಂತಾಯಿತು. ರಾಷ್ಟ್ರವು ಪರಮಾಣು ಶಸ್ತ್ರಾಸ್ತ್ರದ ಬಳಕೆ ಮಾಡದಿರುವಂತೆ ತಪ್ಪಿಸುವ, ಅಣ್ವಸ್ತ್ರಗಳನ್ನು-ಹೊಂದಿರದ ಮೂರು ತತ್ತ್ವಗಳನ್ನು ಯುದ್ಧಾನಂತರದ ಜಪಾನ್‌ ದೇಶವು ಅಳವಡಿಸಿಕೊಳ್ಳುವುದಕ್ಕೆ ಈ ಬಾಂಬ್‌ ದಾಳಿಗಳು ಭಾಗಶಃ ಕಾರಣವಾದವು.

ಜಪಾನ್‌ನ ಶರಣಾಗತಿಯಲ್ಲಿನ ಬಾಂಬ್‌ ದಾಳಿಗಳ ಪಾತ್ರ ಹಾಗೂ ಸದರಿ ಬಾಂಬ್‌ ದಾಳಿಗಳಿಗೆ ಮಾತ್ರವೇ ಅಲ್ಲದೇ ಅವುಗಳ ಯುದ್ಧತಂತ್ರದ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ U.S.ವತಿಯಿಂದ ನೀಡಲ್ಪಟ್ಟ ನೈತಿಕ ಸಮರ್ಥನೆಯು ಈಗಲೂ ಚರ್ಚಿಸಲ್ಪಡುತ್ತಿದೆ.

ಮ್ಯಾನ್‌ಹಾಟ್ಟನ್‌‌ ಯೋಜನೆ

ಯುನೈಟೆಡ್‌ ಕಿಂಗ್‌ಡಂ ಮತ್ತು ಕೆನಡಾ ದೇಶಗಳ ಸಹಯೋಗದೊಂದಿಗೆ ಮತ್ತು ಕ್ರಮವಾಗಿ ಅವುಗಳಿಗೆ ಸಂಬಂಧಿಸಿದ ರಹಸ್ಯ ಯೋಜನೆಗಳಾದ ಟ್ಯೂಬ್‌ ಅಲಾಯ್ಸ್‌ ಮತ್ತು ಚಾಕ್‌ ರಿವರ್‌ ಲ್ಯಾಬರೇಟರೀಸ್‌ ನೆರವಿನೊಂದಿಗೆ, ಮ್ಯಾನ್‌ಹಾಟ್ಟನ್‌‌ ಯೋಜನೆ ಎಂದು ಕರೆಯಲ್ಪಟ್ಟ ಯೋಜನೆಯ ಅಡಿಯಲ್ಲಿ U.S. ಮೊದಲ ಪರಮಾಣು ಬಾಂಬುಗಳನ್ನು ವಿನ್ಯಾಸಗೊಳಿಸಿತು ಮತ್ತು ನಿರ್ಮಿಸಿತು. ಇದಕ್ಕೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನೆಗೆ ಅಮೆರಿಕಾದ ಭೌತವಿಜ್ಞಾನಿಯಾದ J. ರಾಬರ್ಟ್‌ ಓಪನ್‌ಹೀಮರ್‌ ಎಂಬಾತನ ನಿರ್ದೇಶನವಿತ್ತು ಮತ್ತು ಒಟ್ಟಾರೆ ಯೋಜನೆಯು U.S. ಆರ್ಮಿ ಕಾರ್ಪ್ಸ್‌ ಆಫ್‌ ಇಂಜಿನಿಯರ್ಸ್‌‌ನ ಜನರಲ್‌ ಲೆಸ್ಲೀ ಗ್ರೂವ್ಸ್‌‌ ಎಂಬಾತನ ನಿಯೋಜಿತ ಅಧಿಕಾರದ ಅಡಿಯಲ್ಲಿತ್ತು. "ಲಿಟ್ಲ್‌ ಬಾಯ್‌" ಎಂದು ಕರೆಯಲಾಗಿದ್ದ ಒಂದು ಬಂದೂಕು-ಮಾದರಿಯ ಬಾಂಬ್‌ ಆಗಿದ್ದ ಹಿರೋಷಿಮಾ ಬಾಂಬನ್ನು ಯುರೇನಿಯಂ-235ನಿಂದ ರೂಪಿಸಲಾಗಿತ್ತು. ಯುರೇನಿಯಂ-235 ಎಂಬುದು ಯುರೇನಿಯಂನ ಒಂದು ಅಪರೂಪದ ಐಸೊಟೋಪು ಆಗಿದ್ದು, ಟೆನ್ನೆಸ್ಸೀಯ ಓಕ್‌ ರಿಡ್ಜ್‌‌‌ನಲ್ಲಿನ ದೈತ್ಯ ಕಾರ್ಖಾನೆಗಳಲ್ಲಿ ಸಾರತೆಗೆಯುವಿಕೆಯ ವಿಧಾನದಿಂದ ಇದನ್ನು ಪಡೆಯಲಾಗಿತ್ತು. 1945ರ ಜುಲೈ 16ರಂದು, ನ್ಯೂ ಮೆಕ್ಸಿಕೋದ ಅಲಾಮೊಗೊರ್ಡೋ ಸಮೀಪವಿರುವ ಟ್ರಿನಿಟಿ ಸೈಟ್‌ ಎಂಬಲ್ಲಿ ಪರಮಾಣು ಬಾಂಬಿನ ಮೊದಲ ಪರೀಕ್ಷಾ-ಪ್ರಯೋಗವನ್ನು ನಡೆಸಲಾಯಿತು. ಪರೀಕ್ಷಾ ಶಸ್ತ್ರಾಸ್ತ್ರವಾದ "ದಿ ಗ್ಯಾಡ್ಜೆಟ್‌" ಮತ್ತು ನಾಗಸಾಕಿ ಬಾಂಬ್‌ ಆದ "ಫ್ಯಾಟ್‌ ಮ್ಯಾನ್‌" ಈ ಎರಡೂ ಸಹ ಒಳಸಿಡಿತದ-ಬಗೆಯ ಸಾಧನಗಳಾಗಿದ್ದು, ಪ್ರಧಾನವಾಗಿ ಇವನ್ನು ಪ್ಲುಟೋನಿಯಂ-239ರಿಂದ ರೂಪಿಸಲಾಗಿತ್ತು; ಪ್ಲುಟೋನಿಯಂ-239 ಎಂಬುದು ಒಂದು ಸಂಶ್ಲೇಷಿತ ಧಾತುವಾಗಿದ್ದು, ವಾಷಿಂಗ್ಟನ್‌‌ನ ಹಾನ್‌ಫೋರ್ಡ್‌‌‌ನಲ್ಲಿನ ಪರಮಾಣು ರಿಯಾಕ್ಟರ್‌‌‌‌‌‌ಗಳಲ್ಲಿ ಅದನ್ನು ಸೃಷ್ಟಿಸಲಾಗಿತ್ತು.

ಗುರಿಗಳ ಆಯ್ಕೆ

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ಎರಡು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಕೆಮಾಡಲ್ಪಟ್ಟ ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿ ತಾಣಗಳನ್ನು ನಕಾಶೆಯು ತೋರಿಸುತ್ತಿರುವುದು.

1945ರ ಮೇ 10–11ರಂದು, ಲಾಸ್‌ ಅಲಾಮೊಸ್‌‌‌ನಲ್ಲಿರುವ J. ರಾಬರ್ಟ್‌ ಓಪನ್‌ಹೀಮರ್‌ ನೇತೃತ್ವದ ಗುರಿ ಸಮಿತಿಯು ಕ್ಯೋಟೋ, ಹಿರೋಷಿಮಾ, ಯೋಕೋಹಾಮಾ ನಗರಗಳನ್ನು, ಮತ್ತು ಕೊಕುರಾದಲ್ಲಿನ ಶಸ್ತ್ರಾಸ್ತ್ರ ಸಂಗ್ರಹವನ್ನು ಸಂಭವನೀಯ ಗುರಿಗಳಾಗಿ ಶಿಫಾರಸು ಮಾಡಿತು. ಈ ಕೆಳಗಿನ ಮಾನದಂಡಗಳ ಆಧಾರದ ಮೇಲೆ ಬಾಂಬ್‌ ದಾಳಿಯ ಗುರಿಯನ್ನು ಆಯ್ಕೆಮಾಡಲಾಗಿತ್ತು:

  • ಗುರಿಯು ವ್ಯಾಸದಲ್ಲಿ ಮೂರು ಮೈಲುಗಳಿಗಿಂತ ದೊಡ್ಡದಾಗಿತ್ತು ಮತ್ತು ಅದು ಬೃಹತ್‌‌ ನಗರ ಪ್ರದೇಶವೊಂದರಲ್ಲಿನ ಒಂದು ಪ್ರಮುಖ ಗುರಿಯಾಗಿತ್ತು.
  • ಸ್ಫೋಟವು ಪರಿಣಾಮಕಾರಿಯಾದ ಹಾನಿಯನ್ನು ಉಂಟುಮಾಡಬಲ್ಲಷ್ಟು ಸಮರ್ಥವಾಗಿತ್ತು.
  • 1945ರ ಆಗಸ್ಟ್‌ ವೇಳೆಗೆ ಸದರಿ ಗುರಿಯು ದಾಳಿಗೊಳಗಾಗುವುದು ಅಸಂಭವವಾಗಿತ್ತು. "ಬಾಂಬನ್ನು ಕೆಟ್ಟದಾದ ರೀತಿಯಲ್ಲಿ ಹಾಕುವುದರಿಂದಾಗಿ, ಶಸ್ತ್ರಾಸ್ತ್ರವು ಕಳೆದುಹೋಗುವ ಅನಾವಶ್ಯಕ ಅಪಾಯಗಳನ್ನು ತಪ್ಪಿಸುವ ದೃಷ್ಟಿಯಿಂದ, ಸ್ಫೋಟದ ಹಾನಿಗೊಳಗಾಗುವ ಒಂದು ಸಾಕಷ್ಟು ದೊಡ್ಡದಾದ ಪ್ರದೇಶದಲ್ಲಿ ಯಾವುದೇ ಸಣ್ಣ ಮತ್ತು ಕಟ್ಟುನಿಟ್ಟಾಗಿರುವ ಸೇನಾ ಉದ್ದೇಶಿತ ಅಂಶವು ನೆಲೆಗೊಂಡಿರಬೇಕು."

ರಾತ್ರಿವೇಳೆಯ ಬಾಂಬ್‌ ದಾಳಿಯ ಆಕ್ರಮಣಗಳ ಅವಧಿಯಲ್ಲಿ ಈ ನಗರಗಳು ಬಹುಮಟ್ಟಿಗೆ ಹಾನಿಗೀಡಾಗದೆ ಉಳಿದಿದ್ದವು ಮತ್ತು ಗುರಿಯ ಪಟ್ಟಯಿಂದ ಅವುಗಳನ್ನು ಆಚೆಗಿಟ್ಟಿರಲು ಸೇನಾ ವಾಯುಪಡೆಯು ಒಪ್ಪಿಗೆ ನೀಡಿತ್ತು; ಇದರಿಂದಾಗಿ ಶಸ್ತ್ರಾಸ್ತ್ರದ ಕರಾರುವಾಕ್ಕಾದ ನಿರ್ಧಾರಣೆಯನ್ನು ಮಾಡಲು ಅವಕಾಶವಿತ್ತು. ಹಿರೋಷಿಮಾ ನಗರವು ಈ ರೀತಿಯಲ್ಲಿ ವಿವರಿಸಲ್ಪಟ್ಟಿತ್ತು: "ಹಿರೋಷಿಮಾವು ನಗರ ಪ್ರದೇಶವೊಂದರ ಕೈಗಾರಿಕಾ ವಲಯದ ಮಧ್ಯಭಾಗದಲ್ಲಿನ ವಿಮಾನ ಆರೋಹಣದ ನೆಲೆ ಮತ್ತು ಒಂದು ಮುಖ್ಯ ಸೇನಾ ಉಗ್ರಾಣವಾಗಿದೆ. ಅದೊಂದು ಒಳ್ಳೆಯ ರೇಡಾರ್‌ ಗುರಿಯಾಗಿದೆ ಮತ್ತು ನಗರದ ಬೃಹತ್‌‌ ಭಾಗವೊಂದು ವ್ಯಾಪಕವಾಗಿ ಹಾನಿಗೀಡಾಗಬಹುದಾದ ರೀತಿಯಲ್ಲಿ ಅದರ ಗಾತ್ರವಿದೆ. ನಗರಕ್ಕೆ ಹೊಂದಿಕೊಂಡಂತಿದ್ದ ಬೆಟ್ಟಗಳು ಸ್ಫೋಟದ ಹಾನಿಯನ್ನು ಗಣನೀಯವಾಗಿ ಹೆಚ್ಚಿಸಬಲ್ಲ ಒಂದು ಕೇಂದ್ರೀಕರಿಸುವ ಪ್ರಭಾವವನ್ನು ಉಂಟುಮಾಡಬಲ್ಲವಾಗಿವೆ. ಇಲ್ಲಿ ನದಿಗಳಿರುವ ಕಾರಣದಿಂದಾಗಿ ಇದೊಂದು ಒಳ್ಳೆಯ ಬೆಂಕಿಯಿಡುವ ಗುರಿಯಲ್ಲ." ಪಾಟ್ಸ್‌ಡ್ಯಾಂ ಘೋಷಣೆಯ ನಿಬಂಧನೆಗಳ ಅನುಸಾರ ಬೇಷರತ್ತಾಗಿ ಶರಣಾಗುವಂತೆ ಜಪಾನ್‌ನ ಮನವೊಲಿಸುಸುವುದು ಶಸ್ತ್ರಾಸ್ತ್ರದ ಉದ್ದೇಶವಾಗಿತ್ತು. ಈ ಕುರಿತು ಗುರಿಯ ಸಮಿತಿಯನ್ನು ತನ್ನ ಅಭಿಪ್ರಾಯವನ್ನು ಹೀಗೆ ಮಂಡಿಸಿತು: "ಗುರಿಯ ಆಯ್ಕೆಯಲ್ಲಿ ಮಾನಸಿಕ ಅಂಶಗಳು ಮಹಾನ್‌ ಪ್ರಾಮುಖ್ಯತೆಯನ್ನು ಹೊಂದಿವೆ ಎಂಬುದಕ್ಕೆ ಸಮ್ಮತಿಸಲಾಗಿತ್ತು. ಇದರ ಎರಡು ಮಗ್ಗುಲುಗಳೆಂದರೆ, (1) ಜಪಾನ್‌ಗೆ ವಿರುದ್ಧವಾಗಿ ಮಹೋನ್ನತವಾದ ಮಾನಸಿಕ ಪ್ರಭಾವವನ್ನು ಪಡೆಯುವುದು ಮತ್ತು (2) ಶಸ್ತ್ರಾಸ್ತ್ರದ ಕುರಿತಾದ ಪ್ರಚಾರ ಸಾಮಗ್ರಿಯು ಬಿಡುಗಡೆ ಮಾಡಲ್ಪಟ್ಟಿರುವುದರಿಂದ, ಶಸ್ತ್ರಾಸ್ತ್ರದ ಪ್ರಾಮುಖ್ಯತೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗುವುದಕ್ಕೆ ಸಂಬಂಧಿಸಿದಂತೆ, ಸಾಕಷ್ಟು ಅದ್ಭುತವೆನ್ನುವ ರೀತಿಯಲ್ಲಿ ಆರಂಭಿಕ ಬಳಕೆಯನ್ನು ಮಾಡುವುದು. ಸೇನಾ ಉದ್ಯಮಕ್ಕೆ ಸಂಬಂಧಿಸಿದ ಒಂದು ಮುಖ್ಯ ಕೇಂದ್ರವಾಗಿರುವುದರ ಮತ್ತು ಒಂದು ಬೌದ್ಧಿಕ ಕೇಂದ್ರವಾಗಿರುವುದರ ಪ್ರಯೋಜನವನ್ನು ಕ್ಯೋಟೋ ಹೊಂದಿತ್ತು. ಆದ್ದರಿಂದ, ಶಸ್ತ್ರಾಸ್ತ್ರದ ಪ್ರಾಮುಖ್ಯತೆಯನ್ನು ಗ್ರಹಿಸುವಲ್ಲಿ ಅದು ಸಾಕಷ್ಟು ಸಮರ್ಥವಾಗಿತ್ತು. ಟೋಕಿಯೋದಲ್ಲಿನ ಚಕ್ರವರ್ತಿಯ ಅರಮನೆಯು ಬೇರಾವುದೇ ಗುರಿಗಿಂತ ಒಂದು ಮಹತ್ತರವಾದ ಕೀರ್ತಿಯನ್ನು ಹೊಂದಿದೆಯಾದರೂ, ಇದಕ್ಕಿರುವ ಯುದ್ಧತಂತ್ರದ ಮೌಲ್ಯ ಕನಿಷ್ಟ ಪ್ರಮಾಣದ್ದಾಗಿದೆ."

IIನೇ ಜಾಗತಿಕ ಸಮರದ ಅವಧಿಯಲ್ಲಿ, ಎಡ್ವಿನ್‌ O. ರೀಸ್‌ಚೌವರ್‌‌ ಎಂಬಾತ U.S. ಸೇನಾ ಗುಪ್ತಚರ ಸೇವೆಗೆ ಸಂಬಂಧಿಸಿದಂತೆ ಜಪಾನ್‌ ಪರಿಣತನಾಗಿದ್ದ. ಈ ಪಾತ್ರವನ್ನು ವಹಿಸುವಾಗ, ಆತ ಕ್ಯೋಟೋ ಮೇಲೆ ಬಾಂಬ್‌ ದಾಳಿಯಾಗುವುದನ್ನು ತಪ್ಪಿಸಿದ ಎಂದು ತಪ್ಪಾಗಿ ಹೇಳಲಾಗಿದೆ. ತನ್ನ ಆತ್ಮಚರಿತ್ರೆಯಲ್ಲಿ, ಈ ವಾದದ ಸಿಂಧುತ್ವ ಅಥವಾ ನ್ಯಾಯಸಮ್ಮತತೆಯನ್ನು ರೀಸ್‌ಚೌವರ್‌ ನಿರ್ದಿಷ್ಟವಾಗಿ ಅಲ್ಲಗಳೆದ:

    "...ನಾಶಗೊಳ್ಳುವುದರಿಂದ ಕ್ಯೋಟೋವನ್ನು ಉಳಿಸಿದ್ದರ ಕೀರ್ತಿಗೆ ಅರ್ಹನಾದ ಏಕೈಕ ವ್ಯಕ್ತಿಯೆಂದರೆ, ಅದು ಆ ಕಾಲದಲ್ಲಿ ಯುದ್ಧದ ಕಾರ್ಯದರ್ಶಿಯಾಗಿದ್ದ ಹೆನ್ರಿ L. ಸ್ಟಿಮ್ಸನ್‌ ಮಾತ್ರ; ಈತ ಹಲವಾರು ದಶಕಗಳ ಹಿಂದೆಯೇ ಕ್ಯೋಟೋದಲ್ಲಿ ತನ್ನ ಮಧುಚಂದ್ರವಾದಂದಿನಿಂದಲೂ ಅದರ ಬಗ್ಗೆ ತಿಳಿದಿದ್ದ ಮತ್ತು ಕ್ಯೋಟೋ ಕುರಿತು ಮೆಚ್ಚುಗೆಯನ್ನು ಸೂಚಿಸುತ್ತಾ ಬಂದಿದ್ದ."

ಪಾಟ್ಸ್‌ಡ್ಯಾಂ ಅಂತಿಮ ಷರತ್ತು

ಜಪಾನ್‌ಗೆ ಸಂಬಂಧಿಸಿದ ಶರಣಾಗತಿಯ ನಿಬಂಧನೆಗಳ ಸ್ಥೂಲವಿವರಣೆಯನ್ನು ನೀಡುವ ಪಾಟ್ಸ್‌ಡ್ಯಾಂ ಘೋಷಣೆಯನ್ನು ಟ್ರೂಮನ್‌‌ ಮತ್ತು ಒಕ್ಕೂಟಕ್ಕೆ ಸೇರಿದ ಇತರ ನಾಯಕರು ಜುಲೈ 26ರಂದು ಜಾರಿಮಾಡಿದರು. ಇದನ್ನು ಒಂದು ಅಂತಿಮ ಷರತ್ತಾಗಿ ಪ್ರಸ್ತುತಪಡಿಸಲಾಯಿತು ಮತ್ತು ಒಂದು ವೇಳೆ ಜಪಾನ್‌ ಶರಣಾಗದಿದ್ದರೆ ಅದರ ಮೇಲೆ ಮಿತ್ರರಾಷ್ಟ್ರಗಳು ದಾಳಿಮಾಡಲಿವೆ ಎಂದು ತಿಳಿಸಲಾಯಿತು; ಇದರಿಂದಾಗಿ "ಜಪಾನಿಯರ ಸಶಸ್ತ್ರ ಪಡೆಗಳು ಅನಿವಾರ್ಯವಾಗಿ ಮತ್ತು ಸಂಪೂರ್ಣವಾಗಿ ನಾಶವಾಗಲಿದೆ ಮತ್ತು ಅದೇ ರೀತಿಯಲ್ಲಿ ಜಪಾನಿಯರ ಮಾತೃಭೂಮಿಯು ಅನಿವಾರ್ಯವಾಗಿ ಸಂಪೂರ್ಣ ವಿಧ್ವಂಸಗೊಳ್ಳಲಿದೆ" ಎಂದು ಸ್ಪಷ್ಟಪಡಿಸಲಾಯಿತು. ಅಧಿಕೃತ ಪ್ರಕಟಣೆಯಲ್ಲಿ ಪರಮಾಣು ಬಾಂಬ್‌ ಕುರಿತು ಉಲ್ಲೇಖಿಸಲಿಲ್ಲ. ಆ ಘೋಷಣೆಯನ್ನು ಜಪಾನಿನ ಸರ್ಕಾರವು ತಿರಸ್ಕರಿಸಿದೆ ಎಂದು ಜಪಾನಿನ ಪತ್ರಿಕೆಗಳು ಜುಲೈ 28ರಂದು ವರದಿಮಾಡಿದವು. ಆ ಅಪರಾಹ್ನ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯೊಂದರಲ್ಲಿ ಪ್ರಧಾನಮಂತ್ರಿ ಕಾಂಟಾರೊ ಸುಝುಕಿ ಮಾತನಾಡುತ್ತಾ, ಪಾಟ್ಸ್‌ಡ್ಯಾಂ ಘೋಷಣೆಯು ಕೈರೋ ಘೋಷಣೆಯ ಒಂದು ಹೊಸರೂಪದ ನಿದರ್ಶನವಲ್ಲದೆ (ಯಾಕಿನವೋಶಿ ) ಮತ್ತೇನೂ ಅಲ್ಲ ಎಂಬುದಾಗಿ ಹಾಗೂ ಇದನ್ನು ಉಪೇಕ್ಷಿಸಲು (ಮೊಕುಸಾಟು ಅಕ್ಷರಶಃ ಅರ್ಥ: "ಮೌನದಿಂದ ಕೊಲ್ಲು") ಸರ್ಕಾರವು ಆಶಿಸಿದೆ ಎಂಬುದಾಗಿ ಘೋಷಿಸಿದ. ಈ ಹೇಳಿಕೆಯು ಪಾಟ್ಸ್‌ಡ್ಯಾಂ ಘೋಷಣೆಯ ಒಂದು ಸ್ಪಷ್ಟ ನಿರಾಕರಣೆಯಾಗಿದೆ ಎಂದು ಜಪಾನಿನ ಮತ್ತು ವಿದೇಶಿ ಪತ್ರಿಕೆಗಳೆರಡೂ ಪರಿಗಣಿಸಿದವು. ಜಪಾನಿನ ಅನಿಬದ್ಧ ಶಾಂತಿ ಬೇಹುಗಾರರಿಗೆ ಸೋವಿಯೆಟ್‌ನಿಂದ ಬರುವ ಒಂದು ಜವಾಬಿಗೆ ಸಂಬಂಧಿಸಿದಂತೆ ಕಾಯುತ್ತಿದ್ದ ಚಕ್ರವರ್ತಿ ಹೀರೋಹಿಟೋ, ಸರ್ಕಾರದ ನಿಲುವನ್ನು ಬದಲಾಯಿಸಲು ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಜುಲೈ 31ರಂದು, ಆತ ತನ್ನ ಸಲಹೆಗಾರ ಕೊಯಿಚಿ ಕಿಡೋಗೆ ಈ ಕುರಿತು ಸ್ಪಷ್ಟಪಡಿಸುತ್ತಾ, ಏನೇ ಆಗಲಿ ಜಪಾನಿನ ಚಕ್ರವರ್ತಿಯ ವಿಶೇಷ ಪರಮಾಧಿಕಾರವನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದ.

ಜುಲೈ ಆರಂಭದಲ್ಲಿ, ಪಾಟ್ಸ್‌ಡ್ಯಾಂಗೆ ತೆರಳುವ ಹಾದಿಯಲ್ಲಿ, ಬಾಂಬನ್ನು ಬಳಕೆ ಮಾಡುವುದರ ಕುರಿತಾದ ತೀರ್ಮಾನವನ್ನು ಟ್ರೂಮನ್‌ ಮರು-ಪರಿಶೀಲಿಸಿದ್ದ. ಕೊನೆಯಲ್ಲಿ, ಜಪಾನ್‌ ಮೇಲೆ ಪರಮಾಣು ಬಾಂಬುಗಳನ್ನು ಬೀಳಿಸಲು ಟ್ರೂಮನ್‌‌ ತೀರ್ಮಾನಿಸಿದ. ಜಪಾನ್‌ ಶರಣಾಗುವಂತೆ ಮಾಡಲು, ಸಾಕಷ್ಟು ಬಲದೊಂದಿಗೆ ನಾಶಮಾಡುವುದರ ಮೂಲಕ ಮತ್ತು ಕ್ರಮ ಕ್ರಮವಾಗಿ ಮತ್ತಷ್ಟು ನಾಶದ ಭಯವನ್ನು ಸೃಷ್ಟಿಸುವುದರ ಮೂಲಕ ಯುದ್ಧದ ಒಂದು ತ್ವರಿತ ಸಂಕಲ್ಪವನ್ನು ಉಂಟುಮಾಡುವುದು, ಬಾಂಬ್‌ ದಾಳಿಗಳಿಗೆ ಆದೇಶ ನೀಡುವಲ್ಲಿನ ಅವನ ಘೋಷಿತ ಆಶಯವಾಗಿತ್ತು.

ಹಿರೋಷಿಮಾ

IIನೇ ಜಾಗತಿಕ ಸಮರದ ಅವಧಿಯಲ್ಲಿನ ಹಿರೋಷಿಮಾ

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ಹಿರೋಷಿಮಾದ ಮೇಲೆ "ಲಿಟ್ಲ್‌ ಬಾಯ್‌" ಪರಮಾಣು ಬಾಂಬನ್ನು ಬೀಳಿಸಿದ ಎನೊಲಾ ಗಾಯ್‌ ಮತ್ತು ಅದರ ತಂಡ.

ತನ್ನ ಮೇಲಾದ ಬಾಂಬ್‌ ದಾಳಿಯ ಸಮಯದಲ್ಲಿ, ಹಿರೋಷಿಮಾವು ಕೆಲವೊಂದು ಕೈಗಾರಿಕಾ ಮತ್ತು ಸೇನಾ ಪ್ರಾಮುಖ್ಯತೆಯ ಒಂದು ನಗರವಾಗಿತ್ತು. ಐದನೇ ವಿಭಾಗದ ಕೇಂದ್ರಕಾರ್ಯಾಲಯ ಮತ್ತು ಫೀಲ್ಡ್‌ ಮಾರ್ಷಲ್‌ ಶುನ್ರೊಕು ಹಟಾನ 2ನೇ ಜನರಲ್‌ ಸೇನಾ ಕೇಂದ್ರಕಾರ್ಯಾಲಯವೂ ಸೇರಿದಂತೆ, ಹಲವಾರು ಸೇನಾ ಶಿಬಿರಗಳು ಹತ್ತಿರದಲ್ಲೇ ನೆಲೆಗೊಂಡಿದ್ದು, ದಕ್ಷಿಣದ ಜಪಾನ್‌ನ ಸಂಪೂರ್ಣ ರಕ್ಷಣೆಯನ್ನು ಅವು ನೋಡಿಕೊಂಡಿದ್ದವು. ಜಪಾನಿನ ಸೇನೆಗೆ ಸಂಬಂಧಿಸಿದಂತೆ, ಹಿರೋಷಿಮಾವು ಪೂರೈಕೆ ಮತ್ತು ಸೈನ್ಯ ವ್ಯವಸ್ಥಾಪನಾ ತಂತ್ರದ ಒಂದು ಕಿರುನೆಲೆಯಾಗಿತ್ತು. ಸೇನಾಪಡೆಗಳಿಗೆ ಸಂಬಂಧಿಸಿದಂತೆ ಈ ನಗರವು ಒಂದು ಸಂವಹನೆಗಳ ಕೇಂದ್ರ, ಒಂದು ಶೇಖರಣಾ ತಾಣ, ಮತ್ತು ಒಂದು ಜೋಡಣಾ ಪ್ರದೇಶವೂ ಆಗಿತ್ತು. ಅಮೆರಿಕಾದ ಬಾಂಬ್‌ ದಾಳಿಯಿಂದ ಹಾನಿಗೊಳಗಾಗದಂತೆ ಉದ್ದೇಶಪೂರ್ವಕವಾಗಿ ಬಿಡಲಾಗಿದ್ದ ಜಪಾನಿನ ಹಲವಾರು ನಗರಗಳ ಪೈಕಿ ಇದೂ ಒಂದಾಗಿತ್ತು. ಪರಮಾಣು ಬಾಂಬಿನಿಂದ ಉಂಟಾದ ಹಾನಿಯನ್ನು ಅಳೆಯುವಲ್ಲಿ ಒಂದು ಹಾನಿಗೊಳಗಾಗದ ಪರಿಸರಕ್ಕೆ ಅವಕಾಶ ಕಲ್ಪಿಸಲು ಈ ತಂತ್ರವನ್ನು ಬಳಸಲಾಗಿತ್ತು.

ನಗರದ ಕೇಂದ್ರಭಾಗವು ಹಲವಾರು ಬಲವರ್ಧಿತ ಕಾಂಕ್ರೀಟ್‌ ಕಟ್ಟಡಗಳು ಮತ್ತು ಹಗುರವಾದ ರಚನೆಗಳನ್ನು ಒಳಗೊಂಡಿತ್ತು. ಕೇಂದ್ರಭಾಗದ ಹೊರಗಡೆಯಿದ್ದ ಪ್ರದೇಶವು, ಜಪಾನಿಯರ ಮನೆಗಳ ಮಧ್ಯೆ ಸ್ಥಾಪಿಸಲಾಗಿದ್ದ ಸಣ್ಣ ಮರದ ಕಾರ್ಯಾಗಾರಗಳ ಒಂದು ದಟ್ಟ ಸಂಗ್ರಹದಿಂದ ನಿಬಿಡವಾಗಿತ್ತು. ನಗರದ ಹೊರವಲಯದ ಸಮೀಪದಲ್ಲಿ ಕೆಲವೊಂದು ಕೈಗಾರಿಕಾ ಸ್ಥಾವರಗಳು ಬೀಡುಬಿಟ್ಟಿದ್ದವು. ಮನೆಗಳನ್ನು ಮರದಿಂದ ನಿರ್ಮಿಸಲಾಗಿದ್ದು ಅವು ಹಂಚಿನ ಛಾವಣಿಗಳನ್ನು ಹೊಂದಿದ್ದವು, ಮತ್ತು ಅನೇಕ ಕೈಗಾರಿಕಾ ಕಟ್ಟಡಗಳನ್ನು ಕೂಡಾ ಮರದ ಚೌಕಟ್ಟುಗಳ ಸುತ್ತ ನಿರ್ಮಿಸಲಾಗಿತ್ತು. ಒಟ್ಟಾರೆಯಾಗಿ ಹೇಳುವುದಾದರೆ, ಈ ನಗರವು ಬೆಂಕಿಯ ಹಾನಿಗೆ ಅತೀವವಾಗಿ ಈಡಾಗಬಲ್ಲ ರೀತಿಯಲ್ಲಿತ್ತು.

ಯುದ್ಧಕ್ಕೆ ಮುಂಚಿನ ಅವಧಿಯಲ್ಲಿ ಹಿರೋಷಿಮಾದ ಜನಸಂಖ್ಯೆಯು 381,000ಕ್ಕೂ ಹೆಚ್ಚಿನ ಒಂದು ಉನ್ನತ ಮಟ್ಟವನ್ನು ತಲುಪಿತ್ತು; ಆದರೆ ಜಪಾನಿನ ಸರ್ಕಾರದಿಂದ ಆದೇಶಿಸಲ್ಪಟ್ಟ ಒಂದು ವ್ಯವಸ್ಥಿತವಾದ ಸ್ಥಳಾಂತರಿಸುವಿಕೆಯ ಕಾರಣದಿಂದಾಗಿ, ಪರಮಾಣು ಬಾಂಬ್‌ ದಾಳಿಗೆ ಮುಂಚಿತವಾಗಿ ಜನಸಂಖ್ಯೆಯು ಏಕಪ್ರಕಾರವಾಗಿ ಕಡಿಮೆಯಾಗಿತ್ತು.

ದಾಳಿಯ ಸಮಯದಲ್ಲಿ ಜನಸಂಖ್ಯೆಯು ಸರಿಸುಮಾರಾಗಿ 340,000-350,000ದಷ್ಟಿತ್ತು. ಅಧಿಕೃತ ದಸ್ತಾವೇಜುಗಳು ಸುಟ್ಟುಹೋಗಿದ್ದರಿಂದಾಗಿ, ನಿಖರವಾದ ಜನಸಂಖ್ಯೆಯ ವಿವರವು ಅನಿಶ್ಚಿತವಾಗಿದೆ. 

ಬಾಂಬ್‌ ದಾಳಿ

    USAAF ಸೈನಿಕ ಕಾರ್ಯಾಚರಣೆಯ ಸಂಯೋಜನೆಗೆ ಸಂಬಂಧಿಸಿದಂತೆ ನೋಡಿ: 509ನೇ ಸಂಘಟಿತ ಗುಂಪು‌.
ಚಿತ್ರ:Hirgrnd1.jpg
ಹಿರೋಷಿಮಾದ ಸರಿಸುಮಾರಾಗಿ 7 ಕಿ.ಮೀ.ನಷ್ಟು ಈಶಾನ್ಯದಿಂದ ತೆಗೆಯಲ್ಪಟ್ಟ ಸೀಝೋ ಯಮಡಾದ ನೆಲಮಟ್ಟದ ಛಾಯಾಚಿತ್ರ.

ಆಗಸ್ಟ್‌‌ 6ರಂದು ನಡೆದ ಮೊದಲ ಪರಮಾಣು ಬಾಂಬ್‌ ದಾಳಿಯ ಕಾರ್ಯಾಚರಣೆಯಲ್ಲಿ ಹಿರೋಷಿಮಾವು ಪ್ರಧಾನ ಗುರಿಯಾಗಿದ್ದರೆ, ಕೊಕುರಾ ಮತ್ತು ನಾಗಸಾಕಿ ಪರ್ಯಾಯ ಗುರಿಗಳಾಗಿದ್ದವು. ಇದಕ್ಕೂ ಮುಂಚೆ ಮೋಡಗಳು ಗುರಿಯನ್ನು ಮಸುಕುಗೊಳಿಸಿದ್ದ ಕಾರಣದಿಂದಾಗಿ ಆಗಸ್ಟ್‌‌ 6ರ ದಿನವನ್ನು ಆಯ್ದುಕೊಳ್ಳಲಾಗಿತ್ತು. 509ನೇ ಸಂಘಟಿತ ಗುಂಪಿನ‌ ದಳಪತಿಯಾಗಿದ್ದ ಕರ್ನಲ್‌ ಪಾಲ್‌ ಟಿಬೆಟ್ಸ್‌ ಎಂಬಾತನ ವಿಮಾನ ಚಾಲಕತ್ವ ಮತ್ತು ಅಧಿಪತ್ಯವನ್ನು ಹೊಂದಿದ್ದ 393ನೇ ಬಾಂಬಿನ ಸುರಿಮಳೆಯ ದಳದ ಮುಖ್ಯವಿಭಾಗದ B-29 ಎನೊಲಾ ಗಾಯ್‌‌‌ ನ್ನು, ಜಪಾನ್‌ನಿಂದ ಸುಮಾರು ಆರು ಗಂಟೆಗಳ ಹಾರಾಟದ ಕಾಲದಷ್ಟು ದೂರದಲ್ಲಿರುವ, ಪಶ್ಚಿಮ ಪೆಸಿಫಿಕ್‌‌ನಲ್ಲಿನ ಟಿನಿಯಾನ್‌‌ನಲ್ಲಿ ನೆಲೆಗೊಂಡಿರುವ ಉತ್ತರ ಮೈದಾನದ ವಾಯುನೆಲೆಯಿಂದ ಉಡಾವಣೆ ಮಾಡಲಾಯಿತು. ಎನೊಲಾ ಗಾಯ್‌ (ಕರ್ನಲ್‌ ಟಿಬೆಟ್ಸ್‌ನ ತಾಯಿಯ ಹೆಸರನ್ನು ಇದಕ್ಕೆ ಇಡಲಾಗಿತ್ತು) ಜೊತೆಯಲ್ಲಿ ಇನ್ನೆರಡು B29ಗಳಿದ್ದವು. ಮೇಜರ್‌ ಚಾರ್ಲ್ಸ್‌ W. ಸ್ವೀನಿ ಎಂಬಾತನ ನಿಯಂತ್ರಣದ ಅಡಿಯಲ್ಲಿದ್ದ ದಿ ಗ್ರೇಟ್‌ ಆರ್ಟಿಸ್ಟ್‌ ಎಂಬ ವಿಮಾನವು ಹತ್ಯಾರಗಳನ್ನು ಹೊತ್ತೊಯ್ದಿತು; ಮತ್ತು ಆಗ ಒಂದು ಹೆಸರಿರದ ವಿಮಾನವಾಗಿದ್ದು ನಂತರದಲ್ಲಿ ನೆಸಸರಿ ಇವಿಲ್‌ (ಛಾಯಾಚಿತ್ರಗ್ರಹಣದ ವಿಮಾನ) ಎಂದು ಕರೆಯಲ್ಪಟ್ಟ ವಿಮಾನವು ಕ್ಯಾಪ್ಟನ್‌ ಜಾರ್ಜ್‌ ಮಾರ್ಕ್ವಾರ್ಡ್ಟ್ ಎಂಬಾತನ ನಿಯಂತ್ರಣದಲ್ಲಿತ್ತು‌.

ಟಿನಿಯಾನ್ ನೆಲೆಯನ್ನು ಬಿಟ್ಟ ನಂತರ, ವಿಮಾನಗಳು ತಮ್ಮ ಮಾರ್ಗವನ್ನು ಬದಲಿಸಿಕೊಂಡು ಪ್ರತ್ಯೇಕವಾಗಿ ಇವೊ ಜಿಮಾ ಎಂಬಲ್ಲಿಗೆ ಬಂದವು; ಅಲ್ಲಿ ...2,440 meters (8,010 ft)ನಲ್ಲಿ ರಹಸ್ಯವಾಗಿ ಸಂಧಿಸಿದ ಅವು, ಜಪಾನ್‌ಗೆ ಸಂಬಂಧಿಸಿದ ಮುನ್ನಡೆಯ ಪಥವನ್ನು ಸಜ್ಜುಗೊಳಿಸಿಕೊಂಡವು. ...9,855 meters (32,333 ft)ನಷ್ಟು ಎತ್ತರದಲ್ಲಿ ಸ್ಪಷ್ಟ ಗೋಚರತ್ವವನ್ನು ಹೊಂದಿದ್ದ ಗುರಿಯ ಮೇಲೆ ವಿಮಾನಗಳು ಬಂದವು. ಪ್ರಯಾಣದ ಅವಧಿಯಲ್ಲಿ, ನೌಕಾಪಡೆ ಕ್ಯಾಪ್ಟನ್‌ ವಿಲಿಯಂ ಪಾರ್ಸನ್ಸ್‌ ಎಂಬಾತ ಬಾಂಬನ್ನು ಸಜ್ಜುಗೊಳಿಸಿದ; ಉಡಾವಣೆಯ ಸಮಯದಲ್ಲಿನ ಅಪಾಯಗಳನ್ನು ಕನಿಷ್ಟಗೊಳಿಸಲು ಅದರ ರಕ್ಷಾಕವಚವನ್ನು ತೆಗೆದಿರಿಸಲಾಗಿತ್ತು. 2ನೇ ಲೆಫ್ಟಿನೆಂಟ್‌ ಮೋರಿಸ್‌ ಜೆಪ್‌ಸನ್‌ ಎಂಬ ಅವನ ಸಹಾಯಕ, ಗುರಿ ಪ್ರದೇಶವನ್ನು ತಲುಪುವುದಕ್ಕೆ 30 ನಿಮಿಷಗಳಷ್ಟು ಮುಂಚಿತವಾಗಿ ಸುರಕ್ಷತಾ ಸಾಧನಗಳನ್ನು ತೆಗೆದುಹಾಕಿದ್ದ.

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ಬಿಡುಗಡೆಯಾದ ಶಕ್ತಿಯು ಬಟ್ಟೆಯ ಮೂಲಕ ಹಾದು ಸುಡುವಷ್ಟು ಶಕ್ತಿಯುತವಾಗಿತ್ತು.ಸ್ಫೋಟದ ಸಮಯದಲ್ಲಿ ಈ ಬಲಿಪಶುವು ಧರಿಸಿದ್ದ ಉಡುಪುಗಳ ಕಪ್ಪಾದ ಭಾಗಗಳು ಹೊಡೆತದ ಗುರುತುಗಳಾಗಿ ಮಾಂಸದ ಮೇಲ್ಭಾಗಕ್ಕೆ ಅಲಂಕರಿಸಲ್ಪಟ್ಟವು.

ಬಾಂಬ್‌ ದಾಳಿಗೆ ಸುಮಾರು ಒಂದು ಗಂಟೆ ಮುಂಚಿತವಾಗಿ, ಮುಂಚಿತವಾಗಿ ಎಚ್ಚರಿಕೆ ನೀಡುವ ಜಪಾನಿಯರ ರೇಡಾರ್‌ ಒಂದು ಜಪಾನ್‌ನ ದಕ್ಷಿಣದ ಭಾಗದ ಕಡೆಗೆ ಸಾಗುತ್ತಿರುವ ಅಮೆರಿಕಾದ ವಿಮಾನವೊಂದರ ಸಮೀಪಿಸುವಿಕೆಯನ್ನು ಪತ್ತೆಹಚ್ಚಿತು. ಎಚ್ಚರಿಕೆಯೊಂದನ್ನು ನೀಡಲಾಯಿತು ಮತ್ತು ಅನೇಕ ನಗರಗಳಲ್ಲಿ ರೇಡಿಯೋ ಪ್ರಸಾರಕಾರ್ಯವು ನಿಂತಿತು. ಆ ನಗರಗಳಲ್ಲಿ ಹಿರೋಷಿಮಾ ಸೇರಿತ್ತು. ಸುಮಾರು 08:00 ಗಂಟೆಯ ಸಮಯದಲ್ಲಿ ಹಿರೋಷಿಮಾದಲ್ಲಿನ ರೇಡಾರ್‌ ನಿರ್ವಾಹಕನು, ಸಾಗಿಬರುತ್ತಿರುವ ವಿಮಾನಗಳ ಸಂಖ್ಯೆಯು ತುಂಬಾ ಸಣ್ಣದಾಗಿದ್ದು- ಪ್ರಾಯಶಃ ಮೂರಕ್ಕಿಂತ ಅದು ಹೆಚ್ಚಿನದಾಗಿಲ್ಲ- ಎಂದು ನಿರ್ಣಯಿಸಿದ ಮತ್ತು ವಾಯುದಾಳಿ ಎಚ್ಚರಿಕೆಯನ್ನು ಕೊನೆಗೊಳಿಸಲಾಯಿತು. ಇಂಧನ ಮತ್ತು ವಿಮಾನವನ್ನು ಸಂರಕ್ಷಿಸುವ ಸಲುವಾಗಿ, ಸಣ್ಣ ವಿಮಾನವ್ಯೂಹಗಳನ್ನು ಪ್ರತಿಬಂಧಿಸದಿರಲು ಜಪಾನಿಯರು ನಿರ್ಧರಿಸಿದ್ದರು. ಒಂದು ವೇಳೆ B-29 ವಿಮಾನಗಳನ್ನು ಕಂಡಿದ್ದೇ ಆದಲ್ಲಿ, ವಾಯು-ದಾಳಿಯ ಆಶ್ರಯಗಳಿಗೆ ಹೋಗುವುದು ಸೂಕ್ತವಾದ ನಿರ್ಧಾರವಾಗಬಹುದು ಎಂದು ಜನರಿಗೆ ಎಂದಿನಂತೆ ರೇಡಿಯೋ ಪ್ರಸಾರ ಮೂಲಕ ಎಚ್ಚರಿಕೆಯನ್ನು ನೀಡಲಾಯಿತು, ಆದರೆ ಒಂದು ರೀತಿಯ ನೆಲೆಗಳ ಪತ್ತೇದಾರಿಕೆಯ ಆಚೆಗೆ ಯಾವುದೇ ದಾಳಿಯನ್ನು ನಿರೀಕ್ಷಿಸಲಾಗಿರಲಿಲ್ಲ.

08:15ರ ವೇಳೆಗೆ (ಹಿರೋಷಿಮಾ ಕಾಲ) ಮಾಡಬೇಕಿದ್ದ ಬಿಡುಗಡೆಯು ಯೋಜಿಸಿದಂತೆಯೇ ಸಾಗಿತು. "ಲಿಟ್ಲ್‌ ಬಾಯ್‌" ಎಂದು ಕರೆಯಲ್ಪಡುತ್ತಿದ್ದ, ...60 kilograms (130 lb)ನಷ್ಟು ಯುರೇನಿಯಂ-235ನೊಂದಿಗಿನ ಒಂದು ಬಂದೂಕು-ಮಾದರಿಯ ವಿದಳನ ಶಸ್ತ್ರಾಸ್ತ್ರವಾದ ಗುರುತ್ವದ ಬಾಂಬು, ಪೂರ್ವನಿರ್ಧಾರಿತ ಆಸ್ಫೋಟನದ ಎತ್ತರಕ್ಕೆ ವಿಮಾನದಿಂದ ಬೀಳಲು 57 ಸೆಕೆಂಡುಗಳನ್ನು ತೆಗೆದುಕೊಂಡಿತು; ಸದರಿ ಆಸ್ಫೋಟನದ ಎತ್ತರವು ನಗರದಿಂದ ಸುಮಾರು ...600 meters (2,000 ft)ನಷ್ಟು ಇತ್ತು.

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ಬೃಹತ್‌ ಸುಟ್ಟಗಾಯಗಳೊಂದಿಗಿನ ಓರ್ವ ಬಲಿಪಶು.

ಎದುರುಗಾಳಿಯ ಕಾರಣದಿಂದಾಗಿ, ಗುರಿಯಿಟ್ಟ ಬಿಂದುವಾದ ಐಯೋಯೈ ಸೇತುವೆಯನ್ನು ಅದು ಹೆಚ್ಚೂಕಮ್ಮಿ ...800 feet (240 m)ನಷ್ಟು ಅಂತರದಲ್ಲಿ ತಪ್ಪಿಸಿಕೊಂಡಿತು ಮತ್ತು ಷಿಮಾ ಸರ್ಜಿಕಲ್‌ ಕ್ಲಿನಿಕ್‌ ಮೇಲ್ಭಾಗದಲ್ಲಿ ನೇರವಾಗಿ ಅದು ಆಸ್ಫೋಟಿಸಿತು. ಸುಮಾರು ...13 kilotons of TNT (54 TJ)ನಷ್ಟು ಪ್ರಮಾಣಕ್ಕೆ ಸಮಾನವಾದ ಒಂದು ಸ್ಫೋಟವನ್ನು ಅದು ಸೃಷ್ಟಿಸಿತು. (U-235 ಶಸ್ತ್ರಾಸ್ತ್ರದ ಕೇವಲ 1.38%ನಷ್ಟು ಮೂಲದ್ರವ್ಯವು ವಿದಳನಗೊಂಡಿದ್ದರಿಂದಾಗಿ, U-235 ಶಸ್ತ್ರಾಸ್ತ್ರವು ಅತ್ಯಂತ ಅದಕ್ಷ ಎಂದು ಪರಿಗಣಿಸಲ್ಪಟ್ಟಿತು.) ನಾಶದ ಒಟ್ಟು ವ್ಯಾಪ್ತಿಯು ಸುಮಾರು ಒಂದು ಮೈಲುಗಳಷ್ಟಿದ್ದರೆ (1.6 km), ಅದರ ಪರಿಣಾಮವಾಗಿ ಹಬ್ಬಿದ ಬೆಂಕಿಯ ಕೆನ್ನಾಲಿಗೆಗಳ ವ್ಯಾಪ್ತಿಯು ...4.4 square miles (11 km2)ವರೆಗೆ ಇತ್ತು. ನಗರದ ...4.7 square miles (12 km2)ನಷ್ಟು ಭಾಗವು ನಾಶಗೊಳಿಸಲ್ಪಟ್ಟಿದೆ ಎಂದು ಅಮೆರಿಕನ್ನರು ಅಂದಾಜಿಸಿದರು. ಹಿರೋಷಿಮಾದ 69%ನಷ್ಟು ಕಟ್ಟಡಗಳು ನಾಶಗೊಳಿಸಲ್ಪಟ್ಟಿದ್ದರೆ, ಮತ್ತೊಂದು 6–7%ನಷ್ಟು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಜಪಾನಿನ ಅಧಿಕಾರಿಗಳು ನಿರ್ಣಯಿಸಿದರು.

70,000–80,000 ಜನರು, ಅಥವಾ ಹಿರೋಷಿಮಾದ ಜನಸಂಖ್ಯೆಯ ಸುಮಾರು 30%ನಷ್ಟು ಮಂದಿ ತತ್‌ಕ್ಷಣವೇ ಸಾಯಿಸಲ್ಪಟ್ಟರು, ಮತ್ತು ಮತ್ತೊಂದು 70,000 ಮಂದಿ ಗಾಯಗೊಂಡರು. ಹಿರೋಷಿಮಾದಲ್ಲಿನ 90%ಗೂ ಹೆಚ್ಚಿನ ವೈದ್ಯರು ಮತ್ತು 93%ನಷ್ಟು ದಾದಿಯರು ಸಾಯಿಸಲ್ಪಟ್ಟರು ಅಥವಾ ಗಾಯಗೊಂಡರು- ಇವರಲ್ಲಿ ಬಹುಪಾಲು ಮಂದಿ ಮಹತ್ತರವಾದ ಪ್ರಮಾಣದಲ್ಲಿ ಹಾನಿಗೊಳಗಾದ ನಗರದ ಮಧ್ಯಭಾಗದ ಪ್ರದೇಶದಲ್ಲಿದ್ದರು.

ವಾಯು ಆಕ್ರಮಣಗಳ ಕುರಿತಾಗಿ ನಾಗರಿಕರನ್ನು ಎಚ್ಚರಿಸುವ ಕರಪತ್ರಗಳನ್ನು ಹಿರೋಷಿಮಾ ಮತ್ತು ನಾಗಸಾಕಿಗಳೂ ಸೇರಿದಂತೆ ಜಪಾನಿನ 35 ನಗರಗಳ ಮೇಲೆ U.S. ಮುಂಚಿತವಾಗಿ ಬೀಳಿಸಿತ್ತಾದರೂ, ಪರಮಾಣು ಬಾಂಬಿನ ಕುರಿತಾದ ಯಾವುದೇ ತಿಳುವಳಿಕೆ ಅಥವಾ ಸೂಚನೆಯನ್ನು ಹಿರೋಷಿಮಾದ ನಿವಾಸಿಗಳಿಗೆ ನೀಡಿರಲಿಲ್ಲ.

ಬಾಂಬ್‌ ದಾಳಿಯರ ಕುರಿತಾದ ಜಪಾನಿಯರ ಅರಿವು

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು  ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
Hiroshima before the bombing.
Hiroshima after the bombing.

ವ್ಯಾಪ್ತಿಗೆ ಸಿಲುಕದೆ, ಹಿರೋಷಿಮಾ ಕೇಂದ್ರದ ಪ್ರಸಾರವು ನಿಂತಿರುವುದನ್ನು ಜಪಾನೀಸ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌‌‌ನ ಟೋಕಿಯೋದ ನಿಯಂತ್ರಣ ನಿರ್ವಾಹಕನು ಗಮನಕ್ಕೆ ತಂದುಕೊಂಡ. ಮತ್ತೊಂದು ದೂರವಾಣಿ ಮಾರ್ಗವನ್ನು ಬಳಸುವ ಮೂಲಕ ತನ್ನ ಪ್ರಸಾರ ಕಾರ್ಯಕ್ರಮವನ್ನು ಮರು-ಸ್ಥಾಪಿಸಲು ಅವನು ಪ್ರಯತ್ನಿಸಿದನಾದರೂ, ಅದೂ ಸಹ ವಿಫಲಗೊಂಡಿತು. ಸುಮಾರು 20 ನಿಮಿಷಗಳ ನಂತರ, ಹಿರೋಷಿಮಾದ ಸ್ವಲ್ಪವೇ ಉತ್ತರಕ್ಕಿರುವ ಭಾಗದಲ್ಲಿನ ಮುಖ್ಯ ಮಾರ್ಗದ ಟೆಲಿಗ್ರಾಫ್‌ ತನ್ನ ಕೆಲಸವನ್ನು ನಿಲ್ಲಿಸಿರುವುದು ಟೋಕಿಯೋ ರೈಲುಮಾರ್ಗದ ಟೆಲಿಗ್ರಾಫ್‌ ಕೇಂದ್ರದ ಅರಿವಿಗೆ ಬಂತು. ಹಿರೋಷಿಮಾದಲ್ಲಿ ಒಂದು ಭಯಾನಕ ಸ್ಫೋಟವಾಗಿರುವುದರ ಕುರಿತಾದ ಅನಧಿಕೃತ ಮತ್ತು ಗೊಂದಲಮಯ ವರದಿಗಳು ನಗರದ 16 ಕಿಲೋಮೀಟರ್‌ಗಳಷ್ಟು (10 ಮೈಲು) ವ್ಯಾಪ್ತಿಯೊಳಗಿನ ಕೆಲವೊಂದು ಸಣ್ಣ ರೈಲ್ವೆ ನಿಲುಗಡೆಗಳಿಂದ ಬಂದವು. ಈ ಎಲ್ಲಾ ವರದಿಗಳನ್ನು ಚಕ್ರವರ್ತಿಯ ಜಪಾನಿ ಸೇನಾ ಜನರಲ್‌ ಸಿಬ್ಬಂದಿಯ ಕೇಂದ್ರಕಾರ್ಯಾಲಯಕ್ಕೆ ರವಾನಿಸಲಾಯಿತು.

ಹಿರೋಷಿಮಾದಲ್ಲಿನ ಸೇನಾ ನಿಯಂತ್ರಣ ಕೇಂದ್ರಕ್ಕೆ ಕರೆಮಾಡಲು ಸೇನಾ ನೆಲೆಗಳು ಮತ್ತೆಮತ್ತೆ ಪ್ರಯತ್ನಿಸಿದವು. ಆ ನಗರದಿಂದ ಹೊರಹೊಮ್ಮಿದ ಸಂಪೂರ್ಣ ಮೌನವು ಕೇಂದ್ರಕಾರ್ಯಾಲಯದಲ್ಲಿನ ಜನರಿಗೆ ಗೊಂದಲವನ್ನುಂಟುಮಾಡಿತು; ಯಾವುದೇ ಬೃಹತ್‌ ಶತ್ರುವಿನ ದಾಳಿಯು ಸಂಭವಿಸಿಲ್ಲ ಎಂದು ಅವರಿಗೆ ಗೊತ್ತಿತ್ತು ಮತ್ತು ಆ ಸಮಯದಲ್ಲಿ ಹಿರೋಷಿಮಾದಲ್ಲಿ ಸ್ಫೋಟಕಗಳ ಒಂದು ಸಾಕಷ್ಟು ದೊಡ್ಡ ಗಾತ್ರದ ಸಂಗ್ರಹವೇನೂ ಇರಲಿಲ್ಲ ಎಂಬುದೂ ಅವರಿಗೆ ಗೊತ್ತಿತ್ತು. ಹಿರೋಷಿಮಾಕ್ಕೆ ತಕ್ಷಣವೇ ಹಾರಿಹೋಗಿ, ಅಲ್ಲಿ ಇಳಿದು ಹಾನಿಯ ಸಮೀಕ್ಷೆ ನಡೆಸಿ, ಸಿಬ್ಬಂದಿಗಾಗಿ ವಿಶ್ವಾಸಾರ್ಹ ಮಾಹಿತಿಯೊಂದಿಗೆ ಟೋಕಿಯೋಗೆ ಹಿಂದಿರುಗಲು ಜಪಾನಿನ ಜನರಲ್‌ನ ಸಿಬ್ಬಂದಿಯ ಓರ್ವ ಯುವ ಅಧಿಕಾರಿಗೆ ಸೂಚಿಸಲಾಯಿತು. ಗಂಭೀರ ಸ್ವರೂಪದ ಯಾವ ಸಮಸ್ಯೆಯೂ ಸಂಭವಿಸಿಲ್ಲ ಎಂಬುದಾಗಿ ಮತ್ತು ಸ್ಫೋಟದ ಸುದ್ದಿಯು ಕೇವಲ ವದಂತಿಯಾಗಿದೆ ಎಂಬುದಾಗಿ ಕೇಂದ್ರಕಾರ್ಯಾಲಯದಲ್ಲಿ ಸಾಮಾನ್ಯವಾಗಿ ಭಾವಿಸಲಾಗಿತ್ತು.

ವಿಮಾನ ನಿಲ್ದಾಣಕ್ಕೆ ತೆರಳಿದ ಸಿಬ್ಬಂದಿ ಅಧಿಕಾರಿ, ವಿಮಾನವೇರಿ ನೈಋತ್ಯ ದಿಕ್ಕಿನೆಡೆಗೆ ಹಾರಿದ. ಸುಮಾರು ಮೂರು ಗಂಟೆಗಳವರೆಗೆ ಹಾರಾಟ ನಡೆಸಿದ ನಂತರ ಹಿರೋಷಿಮಾದಿಂದ ಇನ್ನೂ ಸುಮಾರು 100 ಮೈಲುಗಳಷ್ಟು (160 ಕಿಮೀ) ದೂರವಿರುವಂತೆಯೇ, ಬಾಂಬ್‌ನಿಂದ ಸೃಷ್ಟಿಯಾದ ಹೊಗೆಯ ಒಂದು ಮಹಾನ್‌ ಮೋಡವನ್ನು ಆತ ಮತ್ತು ಅವನ ವಿಮಾನ ಚಾಲಕ ಕಂಡರು. ಪ್ರಕಾಶಮಾನವಾದ ಅಪರಾಹ್ನದಲ್ಲಿ, ಹಿರೋಷಿಮಾದ ಭಗ್ನಾವಶೇಷಗಳು ಹೊತ್ತಿಕೊಂಡು ಉರಿಯುತ್ತಿದ್ದವು. ಕೆಲವೇ ಸಮಯದಲ್ಲಿ ಅವರ ವಿಮಾನವು ನಗರವನ್ನು ತಲುಪಿತು, ಅಪನಂಬಿಕೆಯಲ್ಲೇ ಅದರ ಸುತ್ತ ಅವರು ಸುತ್ತುಹಾಕಿದರು. ಇನ್ನೂ ಉರಿಯುತ್ತಲೇ ಇದ್ದ ನೆಲದ ಮೇಲಿನ ಒಂದು ಮಹಾನ್‌ ಹೊಡೆತದ ಗುರುತು ಹಾಗೂ ಹೊಗೆಯ ಒಂದು ಬೃಹತ್ತಾದ ಮೋಡದಿಂದ ಅದು ಆವರಿಸಲ್ಪಟ್ಟಿದ್ದು, ಇಷ್ಟು ಮಾತ್ರವೇ ಅಲ್ಲಿ ಉಳಿದಿತ್ತು. ನಗರದ ದಕ್ಷಿಣ ಭಾಗದಲ್ಲಿ ಅವರು ವಿಮಾನವನ್ನು ಇಳಿಸಿದರು, ಮತ್ತು ಸಿಬ್ಬಂದಿ ಅಧಿಕಾರಿಯು ಟೋಕಿಯೋಗೆ ವರದಿ ಸಲ್ಲಿಸಿದ ಮೇಲೆ, ತತ್‌ಕ್ಷಣದಿಂದಲೇ ಪರಿಹಾರ ಕ್ರಮಗಳನ್ನು ಸಂಘಟಿಸಲು ಶುರುಮಾಡಿದ.

ಹಿರೋಷಿಮಾದಲ್ಲಿ ವೀಕ್ಷಿಸಲಾದ ನಾಶವನ್ನು ರೇಡಿಯೋ ಟೋಕಿಯೋದಿಂದ ಮಾಡಲಾದ ಪ್ರಸಾರಗಳು ವಿವರಿಸಿದವು ಎಂಬುದಾಗಿ 1945ರ ಆಗಸ್ಟ್‌‌ 8ರ ವೇಳೆಗಾಗಲೇ U.S.ನಲ್ಲಿನ ವೃತ್ತಪತ್ರಿಕೆಗಳು ವರದಿಮಾಡುತ್ತಿದ್ದವು.

"ಹೆಚ್ಚೂಕಮ್ಮಿ ಎಲ್ಲಾ ಜೀವವಿರುವ ವಸ್ತುಗಳು, ಮಾನವರು ಮತ್ತು ಪ್ರಾಣಿಗಳು, ಸಾಯುವವರೆಗೂ ಅಕ್ಷರಶಃ ಸುಟ್ಟುಹೋದವು" ಎಂಬುದಾಗಿ ಜಪಾನಿನ ರೇಡಿಯೋ ಉದ್ಘೋಷಕರು ಪ್ರಸಾರವೊಂದರಲ್ಲಿ ಘೋಷಿಸಿದ್ದು ಒಕ್ಕೂಟಕ್ಕೆ ಸೇರಿದ ಮೂಲಗಳಿಗೆ ತಲುಪಿತು. 

ದಾಳಿಯ-ನಂತರದ ದುರ್ಘಟನೆಗಳು

US ಶಕ್ತಿ ಇಲಾಖೆಯ ಅನುಸಾರ, ಸ್ಫೋಟದ ತತ್‌ಕ್ಷಣದ ಪರಿಣಾಮಗಳು ಸರಿಸುಮಾರಾಗಿ ಹಿರೋಷಿಮಾದಲ್ಲಿನ 70,000 ಜನರನ್ನು ಮತ್ತು ನಾಗಸಾಕಿಯಲ್ಲಿನ 40,000 ಜನರನ್ನು ಸಾಯಿಸಿತು. 1945ದ ಅಂತ್ಯದ ವೇಳೆಗೆ, ಸುಟ್ಟಗಾಯಗಳು, ವಿಕಿರಣ ಮತ್ತು ವೈದ್ಯಕೀಯ ಸಂಪನ್ಮೂಲಗಳ ಕೊರತೆಯಿಂದ ಉಲ್ಬಣಗೊಂಡ ಸಂಬಂಧಿತ ಕಾಯಿಲೆಗಳ ಪ್ರಭಾವಗಳಿಂದ ಆದ ಒಟ್ಟು ಸಾವುನೋವುಗಳ ಅಂದಾಜುಗಳು 90,000ದಿಂದ 166,000ದವರೆಗೆ ಇದ್ದವು. ಕೆಲವೊಂದು ಅಂದಾಜುಗಳು ತಿಳಿಸುವ ಪ್ರಕಾರ, ಕ್ಯಾನ್ಸರ್‌‌ ಮತ್ತು ಇತರ ದೀರ್ಘಾವಧಿ ಪರಿಣಾಮಗಳ ಕಾರಣದಿಂದಾಗಿ 1950ರ ಹೊತ್ತಿಗೆ 200,000 ಜನರು ಸತ್ತಿದ್ದರು. ಮತ್ತೊಂದು ಅಧ್ಯಯನವು ತಿಳಿಸುವ ಪ್ರಕಾರ, ಬಾಂಬ್‌ ದಾಳಿಗೆ ಈಡಾಗಿ ಉಳಿದುಕೊಂಡವರ ಪೈಕಿ 1950ರಿಂದ 1990ರವರೆಗೆ ಕಂಡುಬಂದ, ಸ್ಥೂಲವಾಗಿ 9%ನಷ್ಟಿದ್ದ ಕ್ಯಾನ್ಸರ್‌‌ ಮತ್ತು ರಕ್ತದ ಕ್ಯಾನ್ಸರ್‌ನ‌ ಸಾವುನೋವುಗಳು, ಬಾಂಬುಗಳಿಂದ ಹೊಮ್ಮಿದ ವಿಕಿರಣದಿಂದಾಗಿ ಉಂಟಾದವು; ಸಂಖ್ಯಾಶಾಸ್ತ್ರದ ಆಧಿಕ್ಯವು ಅಂದಾಜಿಸಿದ ಪ್ರಕಾರ 89 ರಕ್ತದ ಕ್ಯಾನ್ಸರ್‌ಗಳು‌ ಮತ್ತು 339 ಅಖಂಡ ಕ್ಯಾನ್ಸರ್‌‌ಗಳು ಸಂಭವಿಸಿದವು. ಕಡೇಪಕ್ಷ ಹನ್ನೊಂದು ಜ್ಞಾತ ಯುದ್ಧದ ಸೆರೆಯಾಳುಗಳು ಬಾಂಬ್‌ ದಾಳಿಯಿಂದ ಸತ್ತರು.

ಕೆಲವೊಂದು ರಚನೆಗಳ ಉಳಿಕೆ

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ಶೂನ್ಯಭೂಮಿಯ ಸುತ್ತಲೂ ಇರುವ ನಕಾಜಿಮಾ ಪ್ರದೇಶದ ಸಣ್ಣ-ಪ್ರಮಾಣದ ಮರುಸೃಷ್ಟಿ.

ಜಪಾನ್‌ನಲ್ಲಿ ಕಂಡುಬರುವ ಭೂಕಂಪದ ಅಪಾಯದ ಕಾರಣದಿಂದಾಗಿ, ಹಿರೋಷಿಮಾದಲ್ಲಿನ ಕೆಲವೊಂದು ಬಲವರ್ಧಿತ ಕಾಂಕ್ರೀಟ್‌ ಕಟ್ಟಡಗಳು ಅತ್ಯಂತ ದೃಢವಾಗಿ ನಿರ್ಮಿಸಲ್ಪಟ್ಟಿದ್ದವು, ಮತ್ತು ಅವು ಸ್ಫೋಟ ಕೇಂದ್ರಕ್ಕೆ ಸಾಕಷ್ಟು ಹತ್ತಿರದಲ್ಲೇ ಇದ್ದರೂ ಸಹ, ಅವುಗಳ ಕಟ್ಟಡದ ಹಂದರವು ಕುಸಿದು ಬೀಳಲಿಲ್ಲ. ...Eizo Nomura (野村 英三 Nomura Eizō?) ಎಂಬಾತ ಉಳಿದುಕೊಂಡವರ ಪೈಕಿ ಸ್ಫೋಟಕ್ಕೆ ಅತಿಹತ್ತಿರದಲ್ಲಿ ಇದ್ದವನಾಗಿದ್ದ; ಈತ ದಾಳಿಯ ಸಮಯದಲ್ಲಿ, ಶೂನ್ಯ-ಭೂಮಿಯಿಂದ ಕೇವಲ ...100 m (330 ft)ನಷ್ಟು ತಗ್ಗಿನಲ್ಲಿದ್ದ ಆಧುನಿಕ "ವಿಶ್ರಾಂತಿ ಮನೆ"ಯ ನೆಲಮಾಳಿಗೆಯೊಂದರಲ್ಲಿದ್ದ. ...Akiko Takakura (高蔵 信子 Takakura Akiko?) ಎಂಬಾಕೆಯು ಸ್ಫೋಟದ ಕೆಳಗಡೆಯ ಕೇಂದ್ರಕ್ಕೆ ಸಮೀಪವಿದ್ದು ಉಳಿದುಕೊಂಡವರ ಪೈಕಿ ಸೇರಿದ್ದಳು. ದಾಳಿಯ ಸಮಯದಲ್ಲಿ ಈಕೆ, ಶೂನ್ಯ-ನೆಲದಿಂದ ಕೇವಲ ...300 meters (980 ft)ನಷ್ಟಿದ್ದ ಸದೃಢವಾಗಿ ನಿರ್ಮಿಸಲಾಗಿದ್ದ ಹಿರೋಷಿಮಾದ ಕುಳಿಯ ಅಂಚಿನಲ್ಲಿದ್ದಳು. ಬಾಂಬು ಗಾಳಿಯಲ್ಲಿ ಆಸ್ಫೋಟಿಸಿದ ಕಾರಣದಿಂದಾಗಿ, ಅಕ್ಕಪಕ್ಕಗಳಿಗೆ ಬದಲಾಗಿ ಹೆಚ್ಚು ಕೆಳಗಡೆಯ ದಿಕ್ಕಿಗೆ ಸ್ಫೋಟವು ನಿರ್ದೇಶಿಸಲ್ಪಟ್ಟಿತು. ಇದರಿಂದಾಗಿ, ಈಗ ಜೆನ್‌ಬಾಕು , ಅಥವಾ A-ಬಾಂಬ್‌ ಡೋಮ್‌ ಎಂದು ಸಾಮಾನ್ಯವಾಗಿ ಕರೆಯಲಾಗುತ್ತಿರುವ ಪ್ರಿಫೆಕ್ಟುರಲ್‌ ಇಂಡಸ್ಟ್ರಿಯಲ್‌ ಪ್ರಮೋಷನಲ್‌ ಹಾಲ್‌‌ ಉಳಿದುಕೊಳ್ಳಲು ಅದು ಬಹುಮಟ್ಟಿಗೆ ಕಾರಣವಾಯಿತು. ಈ ಕಟ್ಟಡದ ವಿನ್ಯಾಸ ಮತ್ತು ನಿರ್ಮಾಣವನ್ನು ಜಾನ್‌ ಲೆಟ್‌ಜೆಲ್‌ ಎಂಬ ಝೆಕ್‌ ವಾಸ್ತುಶಿಲ್ಪಿ ನಿರ್ವಹಿಸಿದ್ದ, ಮತ್ತು ಈ ಕಟ್ಟಡವು ಶೂನ್ಯಭೂಮಿಯಿಂದ (ಕೆಳಗಡೆಯ ಕೇಂದ್ರ) ಕೇವಲ ...150 m (490 ft)ನಷ್ಟಿತ್ತು. ಭಗ್ನಾವಶೇಷಕ್ಕೆ ಹಿರೋಷಿಮಾ ಪೀಸ್‌ ಮೆಮರಿಯಲ್‌ ಎಂದು ಹೆಸರಿಸಲಾಯಿತು ಮತ್ತು U.S. ಮತ್ತು ಚೀನಾದ ಆಕ್ಷೇಪಣೆಗಳ ನಡುವೆಯೂ ಇದನ್ನು 1996ರಲ್ಲಿ UNESCO ವಿಶ್ವ ಪರಂಪರೆಯ ತಾಣವನ್ನಾಗಿಸಲಾಯಿತು. ಹಿರೋಷಿಮಾಕ್ಕೆ ಸಂಬಂಧಿಸಿದ ಸ್ಮರಣಾರ್ಥ ಸ್ಮಾರಕವನ್ನು ಹಿರೋಷಿಮಾದಲ್ಲಿ ಬಾಂಬ್‌ ದಾಳಿಯ ಬಲಿಪಶುಗಳಿಗಾಗಿ ನಿರ್ಮಿಸಲಾಯಿತು.

ಆಗಸ್ಟ್‌‌ 7–9ರ ಘಟನೆಗಳು

ಹಿರೋಷಿಮಾ ಬಾಂಬ್‌ ದಾಳಿಯ ನಂತರ, ಹೊಸ ಶಸ್ತ್ರಾಸ್ತ್ರದ ಬಳಕೆಯನ್ನು ಪ್ರಕಟಿಸುವ ಹೇಳಿಕೆಯೊಂದನ್ನು ಅಧ್ಯಕ್ಷ ಟ್ರೂಮನ್‌‌ ನೀಡಿದ ಮತ್ತು ಈ ರೀತಿಯಲ್ಲಿ ಭರವಸೆ ನೀಡಿದ:

ಒಂದು ವೇಳೆ ಅವರು ನಮ್ಮ ನಿಬಂಧನೆಗಳನ್ನು ಒಪ್ಪದೇ ಹೋದಲ್ಲಿ, ವಾಯುದಾಳಿಯ ಮೂಲಕ ವಿನಾಶದ ಒಂದು ಮಳೆಯನ್ನೇ ಅವರು ನಿರೀಕ್ಷಿಸಬಹುದು; ಇದು ಈ ಭೂಮಿಯ ಮೇಲೆ ಹಿಂದೆಂದೂ ಕಂಡಿರದಂಥ ಸನ್ನಿವೇಶವಾಗಿರುತ್ತದೆ. ವಾಯು ದಾಳಿಯ ಹಿಂದಿನಿಂದ, ಅವರು ಹಿಂದೆಂದೂ ಕಂಡಿರದ ರೀತಿಯಲ್ಲಿರುವ ಸಂಖ್ಯೆಗಳು ಮತ್ತು ಶಕ್ತಿಯೊಂದಿಗೆ ಸಮುದ್ರ ಮತ್ತು ಭೂಪಡೆಗಳು ಅನುಸರಿಸಿಕೊಂಡು ಬರುತ್ತವೆ ಮತ್ತು ಈ ಪಡೆಗಳ ಹೋರಾಟದ ಪರಿಣಿತಿಯೇನು ಎಂಬುದು ಅವರಿಗೆ ಈಗಾಗಲೇ ಗೊತ್ತಿದೆ.

ಇಷ್ಟಾಗಿಯೂ ಜಪಾನಿನ ಸರ್ಕಾರವು ಪಾಟ್ಸ್‌ಡ್ಯಾಂ ಘೋಷಣೆಗೆ ಪ್ರತಿಕ್ರಿಯಿಸಲಿಲ್ಲ. ಚಕ್ರವರ್ತಿ ಹೀರೋಹಿಟೋ, ಸರ್ಕಾರ, ಮತ್ತು ಯುದ್ಧ ಪರಿಷತ್ತು ಸೇರಿಕೊಂಡು ಶರಣಾಗತಿಗೆ ಸಂಬಂಧಿಸಿದ ನಾಲ್ಕು ಷರತ್ತುಗಳ ಕುರಿತು ಪರ್ಯಾಲೋಚಿಸುತ್ತಿದ್ದರು. ಅವೆಂದರೆ: ಕೊಕುಟಾಯ್‌‌‌‌ ನ್ನು (ಚಕ್ರವರ್ತಿಯ ಸ್ಥಾಪಿತ ಪದ್ಧತಿ ಮತ್ತು ರಾಷ್ಟ್ರೀಯ ರಾಜವ್ಯವಸ್ಥೆ) ಕಾಪಾಡುವುದು; ನಿರಸ್ತ್ರೀಕರಣ ಮತ್ತು ವಿಸೇನೀಕರಣಕ್ಕೆ ಸಂಬಂಧಿಸಿದ ಉತ್ತರದಾಯಿತ್ವದ ಚಕ್ರವರ್ತಿಯ ಕೇಂದ್ರಕಾರ್ಯಾಲಯದಿಂದ ಅಧಿಕಾರ ಸ್ವೀಕರಣ; ಜಪಾನಿಯರ ಸ್ವದೇಶಿ ದ್ವೀಪಗಳು, ಕೊರಿಯಾ, ಅಥವಾ ಫಾರ್ಮೋಸಾವನ್ನು ಸ್ವಾಧೀನಪಡಿಸಿಕೊಳ್ಳದಿರುವುದು, ಮತ್ತು ಯುದ್ಧದ ಅಪರಾಧಿಗಳ ಶಿಕ್ಷೆಯ ನಿಯೋಜನೆಯನ್ನು ಜಪಾನಿನ ಸರ್ಕಾರಕ್ಕೆ ವಹಿಸುವುದು.

ಸೋವಿಯೆಟ್‌-ಜಪಾನಿಯರ ತಾಟಸ್ಥ್ಯ ಒಡಂಬಡಿಕೆಯ ಬಗೆಗಿನ ಸೋವಿಯೆಟ್‌ ಒಕ್ಕೂಟದ ಏಕಪಕ್ಷೀಯ ನಿರಾಕರಣದ ಕುರಿತಾಗಿ ಸೋವಿಯೆಟ್‌ ವಿದೇಶಿ ಮಂತ್ರಿಯಾದ ವ್ಯಾಕೆಸ್ಲಾವ್‌ ಮೊಲೊಟೊವ್‌ ಎಂಬಾತ ಏಪ್ರಿಲ್‌ 5ರಂದು ಟೋಕಿಯೋಗೆ ಮಾಹಿತಿ ನೀಡಿದ್ದ. ಟೋಕಿಯೋ ಸಮಯದಲ್ಲಿ ಆಗಸ್ಟ್‌‌ 9ರ ಮಧ್ಯರಾತ್ರಿಯಾಗಿ ಎರಡು ನಿಮಿಷಗಳ ನಂತರ, ಸೋವಿಯೆಟ್‌ ಕಾಲಾಳು ಪಡೆ, ಯುದ್ಧಕವಚ, ಮತ್ತು ವಾಯುಪಡೆಗಳು ಮಂಚೂರಿಯನ್‌‌ ಯುದ್ಧತಂತ್ರದ ಆಕ್ರಮಣಕಾರಿ ಕಾರ್ಯಾಚರಣೆಯನ್ನು ಶುರುಮಾಡಿಕೊಂಡಿದ್ದವು. ನಾಲ್ಕು ಗಂಟೆಗಳ ನಂತರ, ಜಪಾನ್‌ನ ಮೇಲೆ ಸೋವಿಯೆಟ್‌ ಒಕ್ಕೂಟವು ಯುದ್ಧವನ್ನು ಘೋಷಿಸಿದೆ ಎಂಬ ವರ್ತಮಾನವು ಟೋಕಿಯೋವನ್ನು ತಲುಪಿತು. ಯಾರಾದರೂ ರಾಜಿಮಾಡಿಸುವುದಕ್ಕೆ ಪ್ರಯತ್ನಿಸುವುದನ್ನು ನಿಲ್ಲಿಸುವ ಉದ್ದೇಶದಿಂದ, ಯುದ್ಧದ ಮಂತ್ರಿಯಾದ ಕೊರೆಚಿಕಾ ಅನಾಮಿಯ ಬೆಂಬಲದೊಂದಿಗೆ ಜಪಾನಿನ ಸೇನೆಯ ಹಿರಿಯ ನಾಯಕತ್ವವು ರಾಷ್ಟ್ರದ ಮೇಲೆ ಮಾರ್ಷಲ್‌ ಕಾನೂನನ್ನು ವಿಧಿಸಲು ಸಿದ್ಧತೆಗಳನ್ನು ಮಾಡಿಕೊಂಡಿತು.

ಎರಡನೇ ಬಾಂಬ್‌ ದಾಳಿಯ ಸಮಯಯೋಜನೆಗೆ ಸಂಬಂಧಿಸಿದಂತೆ, ಟಿನಿಯಾನ್ ಮೇಲಿನ 509ನೇ ಸಂಘಟಿತ ಗುಂಪಿನ ದಳಪತಿಯಾಗಿ ಕರ್ನಲ್‌ ಟಿಬೆಟ್ಸ್‌ಗೆ ಹೊಣೆಗಾರಿಕೆಯನ್ನು ವಹಿಸಲಾಯಿತು. ಆಗಸ್ಟ್‌‌ 10ರಿಂದ ಪ್ರಾರಂಭವಾಗಲಿದ್ದ ಕೆಟ್ಟ ಹವಾಮಾನದ ಮುನ್ಸೂಚನೆಯ ಒಂದು ಐದು ದಿನದ ಅವಧಿಯನ್ನು ತಪ್ಪಿಸುವ ಸಲುವಾಗಿ, ಕೊಕುರಾದ ವಿರುದ್ಧ ಆಗಸ್ಟ್‌‌ 11ರಂದು ನಡೆಸಲು ನಿಗದಿಪಡಿಸಲಾಗಿದ್ದ ದಾಳಿಯನ್ನು ಎರಡು ದಿನಗಳಷ್ಟು ಹಿಂದಕ್ಕೆ ಹಾಕಲಾಯಿತು. ತಮ್ಮ ಹೊರಮೈಗಳ ಮೇಲೆ F-31, F-32, ಮತ್ತು F-33 ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿದ್ದ ಮೂರು ಬಾಂಬಿನ ಪೂರ್ವಭಾವಿ-ಜೋಡಣೆಗಳು ಟಿನಿಯಾನ್‌ಗೆ ಸಾಗಿಸಲ್ಪಟ್ಟಿದ್ದವು. ಬಾಕ್‌ಸ್ಕಾರ್‌‌‌ ನ್ನು ಬಾಂಬ್‌ ಬೀಳಿಸುವ ವಿಮಾನವಾಗಿ ಬಳಸಿಕೊಳ್ಳುವ ಮೂಲಕ, ಟಿನಿಯಾನ್ ಆಚೆಗೆ ಮೇಜರ್‌ ಚಾರ್ಲ್ಸ್‌ ಸ್ವೀನಿಯಿಂದ ಆಗಸ್ಟ್‌‌ 8ರಂದು ಒಂದು ಸಮವಸ್ತ್ರಾಭ್ಯಾಸವು ನಡೆಸಲ್ಪಟ್ಟಿತು. ಅಂಗಭಾಗಗಳನ್ನು ಪರೀಕ್ಷಿಸುವುದಕ್ಕಾಗಿ F-33 ಜೋಡಣೆಯನ್ನು ಬಳಸಿಕೊಳ್ಳಲಾಯಿತು ಮತ್ತು ಆಗಸ್ಟ್‌‌ 9ರ ಕಾರ್ಯಾಚರಣೆಗೆ ಸಂಬಂಧಿಸಿದಂತೆ F-31ನ್ನು ನಿಗದಿಗೊಳಿಸಲಾಗಿತ್ತು.

ನಾಗಸಾಕಿ

IIನೇ ಜಾಗತಿಕ ಸಮರದ ಅವಧಿಯಲ್ಲಿನ ನಾಗಸಾಕಿ

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ನಾಗಸಾಕಿಯ ಮೇಲೆ "ಫ್ಯಾಟ್‌ ಮ್ಯಾನ್‌" ಪರಮಾಣು ಬಾಂಬನ್ನು ಬೀಳಿಸಿದ ಬಾಕ್‌ಸ್ಕಾರ್‌ ಮತ್ತು ಅದರ ತಂಡ.

ನಾಗಸಾಕಿ ನಗರವು ದಕ್ಷಿಣದ ಜಪಾನ್‌ನಲ್ಲಿನ ಅತಿದೊಡ್ಡ ಸಮುದ್ರ ನೆಲೆಗಳ ಪೈಕಿ ಒಂದೆನಿಸಿಕೊಂಡಿತ್ತು ಮತ್ತು ಫಿರಂಗಿಗಳು, ಹಡಗುಗಳು, ಸೇನಾ ಉಪಕರಣ, ಹಾಗೂ ಇತರ ಯುದ್ಧ ಸಾಮಗ್ರಿಗಳ ಉತ್ಪಾದನೆಯನ್ನು ಒಳಗೊಂಡಂತೆ ತನ್ನ ವಿಶಾಲ-ವ್ಯಾಪ್ತಿಯ ಕೈಗಾರಿಕಾ ಚಟುವಟಿಕೆಯ ಕಾರಣದಿಂದಾಗಿ ಅದು ಯುದ್ಧಕಾಲದ ಮಹಾನ್‌ ಪ್ರಾಮುಖ್ಯತೆಯನ್ನು ಹೊಂದಿತ್ತು.

ಹಿರೋಷಿಮಾದ ಅನೇಕ ಆಧುನಿಕ ಮಗ್ಗುಲುಗಳಿಗೆ ತದ್ವಿರುದ್ಧವಾಗಿ, ಹೆಚ್ಚೂಕಮ್ಮಿ ಎಲ್ಲಾ ಕಟ್ಟಡಗಳು ಜಪಾನಿಯರ ಹಳೆಯ-ಶೈಲಿಯ ನಿರ್ಮಾಣಗಳಾಗಿದ್ದು, (ಗಿಲಾವು ಸಹಿತ ಅಥವಾ ಗಿಲಾವು ರಹಿತವಾಗಿರುವ) ಮರದ ಗೋಡೆಗಳು ಮತ್ತು ಹಂಚಿನ ಛಾವಣಿಗಳೊಂದಿಗಿನ ಮರ ಅಥವಾ ಮರದ-ಚೌಕಟ್ಟು ಕಟ್ಟಡಗಳನ್ನು ಅವು ಒಳಗೊಂಡಿದ್ದವು. ಸ್ಫೋಟಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಿರದ, ಮರ ಅಥವಾ ಇತರ ಸಾಮಗ್ರಿಗಳಿಂದ ನಿರ್ಮಿಸಲಾಗಿದ್ದ ಕಟ್ಟಡಗಳಲ್ಲಿ ಅನೇಕ ಸಣ್ಣ ಗಾತ್ರದ ಉದ್ಯಮಗಳು ಮತ್ತು ವ್ಯವಹಾರ ಸಂಸ್ಥೆಗಳೂ ಸಹ ನೆಲೆಗೊಂಡಿದ್ದವು. ಯಾವುದೇ ನಿರ್ದಿಷ್ಟವಾದ ನಗರ ವಲಯದ ಯೋಜನೆಗೆ ಅನುಗುಣವಾಗಿರದಿರುವ ರೀತಿಯಲ್ಲಿ ಅನೇಕ ವರ್ಷಗಳವರೆಗೆ ಬೆಳೆಯಲು ನಾಗಸಾಕಿಗೆ ಅವಕಾಶ ದೊರೆತಿತ್ತು; ಕಾರ್ಖಾನೆ ಕಟ್ಟಡಗಳಿಗೆ ಹೊಂದಿಕೊಂಡಂತಿರುವ ರೀತಿಯಲ್ಲಿ ವಾಸದ ಮನೆಗಳನ್ನು ಕಟ್ಟಲಾಗಿತ್ತು ಮತ್ತು ಸಂಪೂರ್ಣ ಕೈಗಾರಿಕಾ ಕಣಿವೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹತ್ತಿರ ಹತ್ತಿರದಲ್ಲಿ ಅವು ಪರಸ್ಪರ ನಿರ್ಮಾಣಗೊಂಡಿದ್ದವು.

ನಾಗಸಾಕಿಯಲ್ಲಿ ಆದ ಒಂದು ಪರಮಾಣು ಶಸ್ತ್ರಾಸ್ತ್ರದ ಸ್ಫೋಟಕ್ಕೆ ಮುಂಚಿತವಾಗಿ, ಅದು ಯಾವತ್ತೂ ಒಂದು ಬೃಹತ್‌-ಪ್ರಮಾಣದ ಬಾಂಬ್‌ ದಾಳಿಗೆ ಈಡಾಗಿರಲಿಲ್ಲ. ಆದಾಗ್ಯೂ, 1945ರ ಆಗಸ್ಟ್‌‌ 1ರಂದು ಅತೀವವಾಗಿ-ಸ್ಫೋಟಕವಾಗಿರುವ ಹಲವಾರು ಪರಮಾಣ್ವೇತರ ಬಾಂಬುಗಳನ್ನು ನಗರದ ಮೇಲೆ ಬೀಳಿಸಲಾಯಿತು. ನಗರದ ನೈಋತ್ಯ ಭಾಗದಲ್ಲಿನ ಹಡಗಿನ ಅಂಗಳಗಳು ಮತ್ತು ಹಡಗುಕಟ್ಟೆ ಪ್ರದೇಶಗಳಿಗೆ ಅವುಗಳಲ್ಲಿ ಕೆಲವು ಬಡಿದರೆ, ಇನ್ನು ಕೆಲವು ಮಿಟ್ಸುಬಿಷಿ ಸ್ಟೀಲ್‌ ಅಂಡ್‌ ಆರ್ಮ್ಸ್‌ ವರ್ಕ್ಸ್‌‌ಗೆ ಬಡಿದವು, ಮತ್ತು ನಾಗಸಾಕಿ ವೈದ್ಯಕೀಯ ಶಾಲೆ ಮತ್ತು ಆಸ್ಪತ್ರೆಯ ಸಮೀಪದಲ್ಲಿ ಬಿದ್ದ ಆರು ಬಾಂಬುಗಳ ಪೈಕಿ ಮೂರು ಬಾಂಬುಗಳು ಅಲ್ಲಿನ ಕಟ್ಟಡಗಳ ಮೇಲೆ ನೇರವಾಗಿ ಬಿದ್ದವು. ಈ ಬಾಂಬುಗಳಿಂದ ಆದ ಹಾನಿಯ ಪ್ರಮಾಣವು ತುಲನಾತ್ಮಕವಾಗಿ ಸಣ್ಣಮಟ್ಟದ್ದಾಗಿತ್ತಾದರೂ ಸಹ, ನಾಗಸಾಕಿಯಲ್ಲಿ ಅದು ಪರಿಗಣನೀಯವಾದ ಕಳವಳವನ್ನು ಹುಟ್ಟುಹಾಕಿತು. ಅನೇಕ ಜನರನ್ನು, ಅದರಲ್ಲೂ ಮುಖ್ಯವಾಗಿ ಶಾಲೆ ಮಕ್ಕಳನ್ನು ಸುರಕ್ಷತಾ ಉದ್ದೇಶಗಳಿಗಾಗಿ ಗ್ರಾಮೀಣ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಇದರಿಂದಾಗಿ ಪರಮಾಣು ದಾಳಿಯ ವೇಳೆಗೆ ನಗರದಲ್ಲಿನ ಜನಸಂಖ್ಯೆಯನ್ನು ತಗ್ಗಿಸಲು ಸಾಧ್ಯವಾಯಿತು.

ನಾಗಸಾಕಿಯ ಉತ್ತರಭಾಗದಲ್ಲಿ ಬ್ರಿಟಿಷ್‌ ಕಾಮನ್‌ವೆಲ್ತ್‌‌ ಯುದ್ಧದ ಸೆರೆಯಾಳುಗಳನ್ನು ಹಿಡಿದಿಡಲಾಗಿದ್ದ ಒಂದು ಶಿಬಿರವಿದ್ದು, ಅವರ ಪೈಕಿ ಕೆಲವರು ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡುತ್ತಿದ್ದರು. ಗಣಿಯ ಮೇಲ್ಮೈಗೆ ಅವರು ಬಂದಾಗಲಷ್ಟೇ ಅವರಿಗೆ ಬಾಂಬ್‌ ದಾಳಿಯ ಕುರಿತಾಗಿ ತಿಳಿದುಬಂತು.

ಬಾಂಬ್‌ ದಾಳಿ

    USAAF ಸೈನಿಕ ಕಾರ್ಯಾಚರಣೆಯ ಸಂಯೋಜನೆಗೆ ಸಂಬಂಧಿಸಿದಂತೆ, ನೋಡಿ: 509ನೇ ಸಂಘಟಿತ ಗುಂಪು‌.
ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ಯುದ್ಧದ-ನಂತರದ ಒಂದು "ಫ್ಯಾಟ್‌ ಮ್ಯಾನ್‌" ಮಾದರಿ.

1945ರ ಆಗಸ್ಟ್‌‌ 9ರಂದು ಬೆಳಗ್ಗೆ, 393ನೇ ಸ್ಕ್ವಾಡ್ರನ್‌ ದಳಪತಿ ಮೇಜರ್‌ ಚಾರ್ಲ್ಸ್‌ W. ಸ್ವೀನಿಯ ತಂಡದಿಂದ ಹಾರಿಸಲ್ಪಡುತ್ತಿದ್ದ U.S. B-29 ಸೂಪರ್‌ಫೋರ್ಟ್ರೆಸ್‌ ಬಾಕ್‌ಸ್ಕಾರ್‌ ವಿಮಾನವು, "ಫ್ಯಾಟ್‌ ಮ್ಯಾನ್‌" ಎಂಬ ಸಂಕೇತ-ನಾಮವನ್ನು ಹೊಂದಿದ್ದ ಪರಮಾಣು ಬಾಂಬನ್ನು ಹೊತ್ತೊಯ್ದಿತು; ಕೊಕುರಾ ನಗರವು ಅದರ ಪ್ರಧಾನ ಗುರಿಯಾಗಿದ್ದರೆ, ನಾಗಸಾಕಿಯು ಅದರ ದ್ವಿತೀಯಕ ಗುರಿಯಾಗಿತ್ತು. ಎರಡನೇ ದಾಳಿಗೆ ಸಂಬಂಧಿಸಿದ ಕಾರ್ಯಾಚರಣೆಯ ಯೋಜನೆಯು ಹಿರೋಷಿಮಾ ಕಾರ್ಯಾಚರಣೆಯನ್ನು ಹೆಚ್ಚೂಕಮ್ಮಿ ಹೋಲುವಂತಿತ್ತು; ಹವಾಮಾನ ಅನ್ವೇಷಕ ಪಡೆಗಳಾಗಿ ಎರಡು B-29 ವಿಮಾನಗಳು ಒಂದು ಗಂಟೆ ಮುಂಚಿತವಾಗಿ ಹಾರಿದರೆ, ಸೈನಿಕ ಕಾರ್ಯಾಚರಣೆಯ ಹತ್ಯಾರಗಳು ಮತ್ತು ಛಾಯಾಗ್ರಹಣದ ಬೆಂಬಲಕ್ಕೆ ಸಂಬಂಧಿಸಿದಂತೆ ಸ್ವೀನಿಯ ಚಾಲಕತ್ವದಲ್ಲಿ ಎರಡು ಹೆಚ್ಚುವರಿ B-29 ವಿಮಾನಗಳು ಹಾರಿದವು. ಅಷ್ಟು ಹೊತ್ತಿಗಾಗಲೇ ಸಜ್ಜುಗೊಳಿಸಲಾಗಿದ್ದ ತನ್ನ ಶಸ್ತ್ರಾಸ್ತ್ರದೊಂದಿಗೆ ಸ್ವೀನಿ ಹಾರಾಟಕ್ಕೆ ಮುಂದಾಗಿದ್ದನಾದರೂ, ಅದರ ವಿದ್ಯುತ್ತಿನ ಸುರಕ್ಷತಾ ಬಿರಡೆಗಳು ಇನ್ನೂ ಕಟ್ಟಿಗೊಳಪಟ್ಟಿದ್ದವು.

ಹವಾಮಾನ ವಿಮಾನಗಳ ಒಳಗಿದ್ದ ವೀಕ್ಷಕರು ಎರಡೂ ಗುರಿಗಳ ಕುರಿತು ಸ್ಪಷ್ಟವಾಗಿ ವರದಿಮಾಡಿದರು. ಜಪಾನ್‌ನ ತೀರಪ್ರದೇಶದಿಂದಾಚೆಗಿದ್ದ ತನ್ನ ವಿಮಾನಕ್ಕೆ ಸಂಬಂಧಿಸಿದ ಜೋಡಣಾ ತಾಣಕ್ಕೆ ಸ್ವೀನಿಯ ವಿಮಾನವು ಆಗಮಿಸಿದಾಗ, ಗುಂಪಿನ ಕಾರ್ಯಾಚರಣೆಗಳ ಅಧಿಕಾರಿಯಾದ ಲೆಫ್ಟಿನೆಂಟ್‌ ಕರ್ನಲ್‌ ಜೇಮ್ಸ್‌ I. ಹಾಪ್ಕಿನ್ಸ್‌ ಜೂನಿಯರ್‌ನಿಂದ ಹಾರಿಸಲ್ಪಡುತ್ತಿದ್ದ ಬಿಗ್‌ ಸ್ಟಿಂಕ್‌ ಎಂಬ ಮೂರನೇ ವಿಮಾನವು ರಹಸ್ಯಭೇಟಿಯನ್ನು ಮಾಡುವಲ್ಲಿ ವಿಫಲಗೊಂಡಿತು. ಬಾಕ್‌ಸ್ಕಾರ್‌ ಮತ್ತು ಹತ್ಯಾರಗಳನ್ನು ಒಳಗೊಂಡಿದ್ದ ವಿಮಾನಗಳು ಹಾಪ್ಕಿನ್ಸ್‌‌ನನ್ನು ಪತ್ತೆಹಚ್ಚಲು ಸುಮಾರು 40 ನಿಮಿಷಗಳವರೆಗೆ ಸುತ್ತಾಟಗಳನ್ನು ನಡೆಸಿದರೂ ಸಹ ಅವನು ಪತ್ತೆಯಾಗಲಿಲ್ಲ. ಅಷ್ಟು ಹೊತ್ತಿಗಾಗಲೇ ನಿಗದಿತ ಕಾರ್ಯಸೂಚಿಗಿಂತ 30 ನಿಮಿಷಗಳಷ್ಟು ಹಿಂದೆ ಉಳಿದಿದ್ದರಿಂದಾಗಿ, ಹಾಪ್ಕಿನ್ಸ್‌‌ ಇಲ್ಲದೆಯೇ ಹಾರಾಟ ನಡೆಸಲು ಸ್ವೀನಿ ನಿರ್ಧರಿಸಿದ.

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ಬಾಂಬ್‌ ದಾಳಿಗೆ ಮುಂಚಿನ ಹಾಗೂ ನಂತರದ ನಾಗಸಾಕಿ.

ಒಂದರ್ಧ ಗಂಟೆಯ ನಂತರ ಅವರು ಕೊಕುರಾವನ್ನು ತಲುಪುವ ವೇಳೆಗೆ, ಒಂದು 70%ನಷ್ಟಿದ್ದ ಮೋಡದ ಹೊದಿಕೆಯು ನಗರವನ್ನು ಮಸುಕುಗೊಳಿಸುವ ಮೂಲಕ ಆದೇಶಗಳ ಅನುಸಾರ ನಡೆಯಬೇಕಿದ್ದ ದೃಶ್ಯಗೋಚರ ದಾಳಿಗೆ ತಡೆಯೊಡ್ಡಿತು. ನಗರದ ಮೇಲೆ ಮೂರು ಸುತ್ತುಗಳನ್ನು ಹಾಕಿದ ನಂತರ, ಮತ್ತು ವಿಮಾನದ ಉಡಾವಣೆಗೆ ಮುಂಚಿತವಾಗಿ ರಿಸರ್ವ್‌ ಟ್ಯಾಂಕಿನ ಮೇಲಿನ ಒಂದು ವರ್ಗಾವಣೆ ಪಂಪ್‌ ವಿಫಲಗೊಂಡಿದ್ದ ಕಾರಣದಿಂದಾಗಿ ಇಂಧನವು ಕಡಿಮೆ ಇದ್ದುದರಿಂದ, ತಮ್ಮ ದ್ವಿತೀಯಕ ಗುರಿಯಾದ ನಾಗಸಾಕಿಯೆಡೆಗೆ ಅವರು ಹಾರಾಟವನ್ನು ಮುಂದುವರಿಸಿದರು.

ಮಾರ್ಗಮಧ್ಯದಲ್ಲಿ ಮಾಡಲಾದ ಇಂಧನ ಬಳಕೆಯ ಲೆಕ್ಕಾಚಾರಗಳು ಸೂಚಿಸಿದ ಪ್ರಕಾರ, ಇವೊ ಜಿಮಾವನ್ನು ತಲುಪಲು ಬೇಕಾಗುವಷ್ಟು ಇಂಧನವನ್ನು ಬಾಕ್‌ಸ್ಕಾರ್‌ ಹೊಂದಿರಲಿಲ್ಲ ಮತ್ತು ಓಕಿನವಾ ಕಡೆಗೆ ಬಲವಂತವಾಗಿ ಅದನ್ನು ತಿರುಗಿಸಬೇಕಾದ ಸನ್ನಿವೇಶ ಎದುರಾಗಿತ್ತು. ಒಂದು ವೇಳೆ ತಮ್ಮ ಆಗಮನವಾದ ಮೇಲೆ ನಾಗಸಾಕಿ ನಗರವು ಮಸುಕುಗೊಳಿಸಲ್ಪಟ್ಟರೆ, ಬಾಂಬನ್ನು ಓಕಿನವಾದ ಕಡೆಗೆ ತಂಡವು ಒಯ್ಯಬೇಕು ಮತ್ತು ಒಂದು ವೇಳೆ ಅವಶ್ಯವೆನಿಸಿದರೆ ಅದನ್ನು ಸಾಗರದಲ್ಲಿ ವಿಲೇವಾರಿ ಮಾಡಬೇಕು ಎಂದು ಆರಂಭಿಕವಾಗಿ ನಿರ್ಧರಿಸಿದ ನಂತರ, ಶಸ್ತ್ರಾಸ್ತ್ರ ಪರಿಣತನಾದ ನೌಕಾಪಡೆಯ ದಳಪತಿ ಫ್ರೆಡೆರಿಕ್‌ ಆಶ್‌ವರ್ತ್‌ ಒಂದು ವೇಳೆ ಗುರಿಯು ಮಸುಕುಗೊಳಿಸಲ್ಪಟ್ಟರೆ ರೇಡಾರ್‌ ವಿಧಾನವನ್ನು ಬಳಸಬೇಕು ಎಂದು ನಿರ್ಧರಿಸಿದ.

ಜಪಾನಿನ ಕಾಲಮಾನದಲ್ಲಿ 07:50 ಗಂಟೆಯಾಗಿದ್ದಾಗ, ನಾಗಸಾಕಿಯಲ್ಲಿ ಒಂದು ವಾಯುದಾಳಿಯ ಎಚ್ಚರಿಕೆಯು ಧ್ವನಿಸಿತಾದರೂ, "ಎಲ್ಲಾ ಸ್ಪಷ್ಟವಾಗಿದೆ" ಎಂಬ ಸಂಕೇತವನ್ನು 08:30ರ ವೇಳೆಗೆ ನೀಡಲಾಯಿತು. 10:53ರ ವೇಳೆಗೆ ಕೇವಲ ಎರಡು B-29 ಸೂಪರ್‌ಫೋರ್ಟ್ರೆಸ್ ವಿಮಾನಗಳು ಮಾತ್ರವೇ ಕಾಣಿಸಿಕೊಂಡಾಗ, ಅವು ಕೇವಲ ನೆಲೆಗಳ ಪತ್ತೇದಾರಿಕೆಯ ಮೇಲಿನ ವಿಮಾನಗಳೆಂದು ಜಪಾನಿಯರು ಸ್ಪಷ್ಟವಾಗಿ ಭಾವಿಸಿದರು ಮತ್ತು ಈ ಕುರಿತು ಮತ್ತೇನೂ ಎಚ್ಚರಿಕೆಯು ನೀಡಲ್ಪಡಲಿಲ್ಲ.

ಕೆಲವೇ ನಿಮಿಷಗಳ ನಂತರ 11:00ರ ವೇಳೆಗೆ, ಕ್ಯಾಪ್ಟನ್‌ ಫ್ರೆಡೆರಿಕ್‌ C. ಬಾಕ್‌‌‌ನಿಂದ ಚಾಲಿಸಲ್ಪಟ್ಟ ದಿ ಗ್ರೇಟ್‌ ಆರ್ಟಿಸ್ಟ್‌ ಎಂಬ B-29 ಬೆಂಬಲ ವಿಮಾನವು ಮೂರು ಪ್ಯಾರಾಶೂಟ್‌ಗಳಿಗೆ ಜೋಡಣೆ ಮಾಡಲಾಗಿದ್ದ ಹತ್ಯಾರಗಳನ್ನು ಬೀಳಿಸಿತು. ಟೋಕಿಯೋ ವಿಶ್ವವಿದ್ಯಾಲಯದಲ್ಲಿ ಓರ್ವ ಪರಮಾಣು ಭೌತವಿಜ್ಞಾನಿಯಾಗಿದ್ದ ಪ್ರೊಫೆಸರ್‌ ರೈಯೋಕಿಚಿ ಸಗಾನೆಯನ್ನು ಉದ್ದೇಶಿಸಿ ಬರೆಯಲಾಗಿದ್ದ ಒಂದು ಸಹಿರಹಿತ ಪತ್ರವನ್ನೂ ಸಹ ಈ ಹತ್ಯಾರಗಳು ಒಳಗೊಂಡಿದ್ದವು. ಈತ ಬರ್ಕ್‌ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪರಮಾಣು ಬಾಂಬ್‌ಗೆ ಸಂಬಂಧಿಸಿ ಹೊಣೆಗಾರರಾಗಿದ್ದ ಮೂವರು ವಿಜ್ಞಾನಿಗಳೊಂದಿಗೆ ಅಧ್ಯಯನ ಮಾಡಿದವನಾಗಿದ್ದ. ಈ ಸಾಮೂಹಿಕ ನಾಶದ ಶಸ್ತ್ರಾಸ್ತ್ರಗಳು ಒಳಗೊಂಡಿರುವ ಅಪಾಯದ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಂತೆ ರೈಯೋಕಿಚಿ ಸಗಾನೆಗೆ ಬರೆದ ಆ ಪತ್ರದಲ್ಲಿ ಒತ್ತಾಯಿಸಲಾಗಿತ್ತು. ಈ ಸಂದೇಶಗಳು ಸೇನಾ ಅಧಿಕಾರಿಗಳ ಕೈಗೆ ಸಿಕ್ಕವಾದರೂ ಅವನ್ನು ಒಂದು ತಿಂಗಳಾಗುವವರೆಗೂ ಸಗಾನೆಗೆ ಅವರು ತಲುಪಿಸಲಿಲ್ಲ. 1949ರಲ್ಲಿ, ಈ ಪತ್ರದ ಲೇಖಕರಲ್ಲಿ ಒಬ್ಬನಾದ ಲೂಯಿಸ್‌ ಅಲ್ವಾರೆಝ್‌ ಎಂಬಾತ ಸಗಾನೆಯನ್ನು ಭೇಟಿಮಾಡಿದ ಮತ್ತು ದಸ್ತಾವೇಜಿಗೆ ಸಹಿಹಾಕಿದ.

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ಬಾಂಬ್‌ ದಾಳಿಯ ಕುರಿತಾದ ಒಂದು ಜಪಾನೀ ವರದಿಯು ನಾಗಸಾಕಿಯನ್ನು "ಒಂದು ಸಮಾಧಿಯ ಕಲ್ಲು ನಿಂತಿರದ ಒಂದು ಸ್ಮಶಾನದ ರೀತಿಯಲ್ಲಿ" ನಿರೂಪಿಸಿತು.

11:01ರ ವೇಳೆಗೆ, ನಾಗಸಾಕಿಯ ಮೇಲಿನ ಮೋಡಗಳು ಒಂದು ಕೊನೆಯ ನಿಮಿಷದ ವಿರಾಮವನ್ನು ಕೊಟ್ಟಿದ್ದರಿಂದಾಗಿ, ಆದೇಶಿಸಲ್ಪಟ್ಟಂತೆ ಗುರಿಯನ್ನು ದೃಶ್ಯಗೋಚರವಾಗಿ ವೀಕ್ಷಿಸಲು ಬಾಕ್‌ಸ್ಕಾರ್‌‌‌ಗಳ ದಾಳಿ ನಡೆಸುವವನಾದ ಕ್ಯಾಪ್ಟನ್‌ ಕೆರ್ಮಿಟ್‌ ಬೀಹನ್‌‌‌‌ಗೆ ಅವಕಾಶ ದೊರೆಯಿತು. ಸುಮಾರು ~6.4 ಕೆ.ಜಿ.ಗಳಷ್ಟು (14.1 ಪೌಂಡುಗಳಷ್ಟು) ಪ್ಲುಟೋನಿಯಂ-239 ತಿರುಳನ್ನು ಒಳಗೊಂಡಿದ್ದ "ಫ್ಯಾಟ್‌ ಮ್ಯಾನ್‌" ಶಸ್ತ್ರಾಸ್ತ್ರವನ್ನು ನಗರದ ಕೈಗಾರಿಕಾ ಕಣಿವೆಯ ಮೇಲೆ ಬೀಳಿಸಲಾಯಿತು. ನೆಲದಿಂದ ಮೇಲ್ಭಾಗದಲ್ಲಿನ 469 ಮೀಟರುಗಳಷ್ಟು (1,540 ಅಡಿ) ಎತ್ತರದಲ್ಲಿ, 43 ಸೆಕೆಂಡುಗಳ ನಂತರ ಅದು ಸ್ಫೋಟಿಸಿತು. ದಕ್ಷಿಣ ಭಾಗದಲ್ಲಿನ ಮಿಟ್ಸುಬಿಷಿ ಸ್ಟೀಲ್‌ ಅಂಡ್‌ ಆರ್ಮ್ಸ್‌ ವರ್ಕ್ಸ್‌ ಹಾಗೂ ಉತ್ತರ ಭಾಗದಲ್ಲಿನ ಮಿಟ್ಸುಬಿಷಿ-ಉರಾಕಮಿ ಆರ್ಡ್‌ನನ್ಸ್‌ ವರ್ಕ್ಸ್‌ (ಟಾರ್ಪೆಡೋ ವರ್ಕ್ಸ್‌) ನಡುವಿನ ನಿಖರವಾದ ಅರ್ಧಹಾದಿಯಲ್ಲಿ ಈ ಸ್ಫೋಟವು ಸಂಭವಿಸಿತು. ಇದು ಯೋಜಿತ ಅಧಿಕೇಂದ್ರದ (ಹೈಪೋಸೆಂಟರ್‌) ಸುಮಾರು 3 ಕಿಲೋಮೀಟರ್‌ಗಳಷ್ಟು (2 ಮೈಲು) ವಾಯವ್ಯ ಭಾಗದಲ್ಲಿತ್ತು; ಉರಾಕಮಿ ಕಣಿವೆಗೆ ಸ್ಫೋಟವನ್ನು ಸೀಮಿತಗೊಳಿಸಲಾಯಿತು ಹಾಗೂ ಮಧ್ಯೆ ಬರುವ ಬೆಟ್ಟಗಳಿಂದಾಗಿ ನಗರದ ಒಂದು ಪ್ರಮುಖ ಭಾಗವು ರಕ್ಷಿಸಲ್ಪಟ್ಟಿತು. ಸ್ಫೋಟವು ಉಂಟುಮಾಡಿದ ಸಿಡಿತದ ಒಂದು ಹುಟ್ಟುವಳಿಯು ...21 kilotons of TNT (88 TJ)ಗೆ ಸಮನಾಗಿತ್ತು. ಅಂದಾಜು 3,900 ಡಿಗ್ರಿಗಳಷ್ಟು ಸೆಲ್ಷಿಯಸ್‌ (4,200 K, 7,000 °F) ಪ್ರಮಾಣದಲ್ಲಿದ್ದ ಶಾಖವನ್ನು ಹಾಗೂ ಗಂಟೆಗೆ 1005 ಕಿ.ಮೀ.ಗಳಷ್ಟು (ಗಂಟೆಗೆ 624 ಮೈಲುಗಳು) ಅಂದಾಜು ವೇಗದಲ್ಲಿದ್ದ ಬಿರುಗಾಳಿಯನ್ನು ಸದರಿ ಸ್ಫೋಟವು ಉಂಟುಮಾಡಿತು.

ತತ್‌ಕ್ಷಣದ ಸಾವುನೋವುಗಳಿಗೆ ಸಂಬಂಧಿಸಿದ ದುರ್ಘಟನೆಯ ಅಂದಾಜುಗಳು 40,000ದಿಂದ 75,000ದವರೆಗಿವೆ. 1945ರ ಅಂತ್ಯದ ವೇಳೆಗೆ ಆದ ಒಟ್ಟು ಸಾವುನೋವುಗಳು 80,000ವನ್ನು ತಲುಪಿರಬಹುದು. ಬಾಂಬ್‌ ದಾಳಿಯಿಂದಾಗಿ ಕಡೇಪಕ್ಷ ಎಂಟು ಪ್ರಸಿದ್ಧ POWಗಳು ಸಾವನ್ನಪ್ಪಿದರು ಮತ್ತು ಸುಮಾರು 13 POWಗಳು ಪ್ರಾಯಶಃ ಸತ್ತಿರಬಹುದು:

  • ಓರ್ವ ಬ್ರಿಟಿಷ್‌ ಕಾಮನ್‌ವೆಲ್ತ್‌‌ ನಾಗರಿಕ ಬಾಂಬ್‌ ದಾಳಿಯಿಂದ ಮರಣ ಹೊಂದಿದ.
  • ಏಳು ಡಚ್‌ POWಗಳು (ಎರಡು ಹೆಸರುಗಳು ತಿಳಿದಿವೆ) ಬಾಂಬ್‌ ದಾಳಿಯಲ್ಲಿ ಅಸುನೀಗಿದರು.
  • ಕಡೇಪಕ್ಷ ಇಬ್ಬರು POWಗಳು ಯುದ್ಧದ ನಂತರ ಕ್ಯಾನ್ಸರ್‌ನಿಂದ ಮರಣ ಹೊಂದಿದರು ಎಂದು ವರದಿಯಾಯಿತು; ಪರಮಾಣು ಬಾಂಬಿನ ಪ್ರಭಾವದಿಂದ ಈ ಕ್ಯಾನ್ಸರ್‌ ಕಂಡುಬಂತು ಎಂದು ತಿಳಿದುಬಂತು.
ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
U.S. ಸಾಗರ ಛಾಯಾಚಿತ್ರಗಾರನಿಂದ 1946ರ ಜನವರಿಯಲ್ಲಿ ತೆಗೆಯಲ್ಪಟ್ಟ ಸುಮಿತೆರು ತಾನಿಗುಚಿಯ ಬೆನ್ನಿನ ಗಾಯಗಳ ಛಾಯಾಚಿತ್ರ.

ಒಟ್ಟು ನಾಶದ ವ್ಯಾಪ್ತಿಯು ಸುಮಾರು ಒಂದು ಮೈಲಿಯಷ್ಟು (1–2 ಕಿ.ಮೀ.ಯಷ್ಟು) ಇತ್ತು. ಬಾಂಬ್‌ ದಾಳಿಯಾದ ನಗರದ ಉತ್ತರದ ಭಾಗದಿಂದ ಎರಡು ಮೈಲುಗಳಷ್ಟು (3 ಕಿ.ಮೀ.ಯಷ್ಟು) ದಕ್ಷಿಣದವರೆಗೆ ಬೆಂಕಿಯ ಕೆನ್ನಾಲಿಗೆಯು ಹಬ್ಬಿತ್ತು.

ಹಿರೋಷಿಮಾ ಬಾಂಬ್‌ ದಾಳಿಯಿಂದ ಉಳಿದುಕೊಂಡವರ ಪೈಕಿ ಲೆಕ್ಕವಿಲ್ಲದಷ್ಟು ಮಂದಿ ನಾಗಸಾಕಿಯ ಕಡೆಗೆ ಸಾಗಿದರೆ, ಅಲ್ಲಿಯೂ ಸಹ ಅವರ ಮೇಲೆ ಬಾಂಬ್‌ ದಾಳಿ ನಡೆಯಿತು.

ಪರ್ಲ್‌ ಹಾರ್ಬರ್‌ನಲ್ಲಿ ವಿಮೋಚನೆಗೊಳಿಸಲಾದ ಟೈಪ್‌ 91 ಎಂಬ ನೌಕಾಸ್ಫೋಟಕಗಳನ್ನು ತಯಾರಿಸಿದ ಮಿಟ್ಸುಬಿಷಿ-ಉರಾಕಮಿ ಆರ್ಡ್‌ನನ್ಸ್‌ ವರ್ಕ್ಸ್ ಕಾರ್ಖಾನೆಯು, ತರುವಾಯದಲ್ಲಿ ಆಸ್ಫೋಟವೊಂದರಲ್ಲಿ ನಾಶಗೊಳಿಸಲ್ಪಟ್ಟಿತು.

ಕೊಕುರಾದಲ್ಲಿ ನಾಗಸಾಕಿಯ ಒಂದು ಶಾಂತಿ ಸ್ಮಾರಕ ಮತ್ತು ಗಂಟೆಯೂ ಸಹ ಇದೆ.

ಜಪಾನ್‌ ಮೇಲಿನ ಹೆಚ್ಚಿನ ಪರಮಾಣು ದಾಳಿಗಳಿಗೆ ಸಂಬಂಧಿಸಿದ ಯೋಜನೆಗಳು

ಆಗಸ್ಟ್‌‌ ತಿಂಗಳ ಮೂರನೇ ವಾರದಲ್ಲಿ ಬಳಸುವುದಕ್ಕೆ ಸಂಬಂಧಿಸಿದಂತೆ, ಮತ್ತೊಂದು ಪರಮಾಣು ಬಾಂಬನ್ನು ಸಿದ್ಧವಾಗಿ ಹೊಂದಿರಲು U.S. ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಸೆಪ್ಟೆಂಬರ್‌ನಲ್ಲಿ ಮೂರು ಬಾಂಬ್‌ಗಳು ಹಾಗೂ ಮತ್ತೊಮ್ಮೆ ಅಕ್ಟೋಬರ್‌ನಲ್ಲಿ ಮೂರು ಬಾಂಬ್‌ಗಳನ್ನು ಬಳಸುವುದು ಅದರ ಆಶಯವಾಗಿತ್ತು. ಆಗಸ್ಟ್‌‌ 10ರಂದು, ಮ್ಯಾನ್‌ಹಾಟ್ಟನ್‌‌ ಯೋಜನೆಯ ಸೇನಾ ನಿರ್ದೇಶಕನಾಗಿದ್ದ ಮೇಜರ್‌ ಜನರಲ್‌ ಲೆಸ್ಲೀ ಗ್ರೂವ್ಸ್‌ ಎಂಬಾತ, ಸೇನಾ ಸಿಬ್ಬಂದಿಯ ಮುಖ್ಯಸ್ಥ, ಸೇನೆಯ ಜನರಲ್‌ ಆಗಿದ್ದ ಜಾರ್ಜ್‌ ಮಾರ್ಷಲ್‌‌ಗೆ ಒಂದು ಕರಾರು ದಸ್ತೈವಜನ್ನು ಕಳಿಸಿದ. ಅದರಲ್ಲಿ, "ಆಗಸ್ಟ್‌‌ 17 ಅಥವಾ 18ರ ನಂತರದ ಮೊದಲ ಸೂಕ್ತ ಹವಾಮಾನದಲ್ಲಿ ವಿತರಣೆಯಾಗುವುದಕ್ಕೆ ಸಂಬಂಧಿಸಿದಂತೆ ಮುಂದಿನ ಬಾಂಬು ... ಸಿದ್ಧವಾಗಿರಬೇಕು" ಎಂದು ಬರೆಯಲಾಗಿತ್ತು. ಅದೇ ದಿನದಂದು, "ಅಧ್ಯಕ್ಷದಿಂದ ಬರುವ ವಿಶೇಷ ನಿಯೋಜಿತ ಅಧಿಕಾರವಿಲ್ಲದೆಯೇ ಇದನ್ನು ಜಪಾನ್‌ನ ಮೇಲೆ ಬಿಡುಗಡೆ ಮಾಡಬಾರದು" ಎಂದು ಮಾರ್ಷಲ್‌ ಷರಾ ಬರೆದ. ಆಪರೇಷನ್‌ ಡೌನ್‌ಫಾಲ್‌ ಎಂಬ ಹೆಸರಿನ, ಜಪಾನ್‌ ಮೇಲಿನ ಯೋಜಿತ ಆಕ್ರಮಣವು ಶುರುವಾಗುವವರೆಗೂ, ಬಾಂಬುಗಳನ್ನು ತಯಾರಿಕೆಯಲ್ಲಿ ಕಾದಿರಿಸಿಟ್ಟುಕೊಳ್ಳುವುದರ ಕುರಿತಾಗಿ ಯುದ್ಧ ಇಲಾಖೆಯಲ್ಲಿ ಆಗಲೇ ಚರ್ಚೆಯು ನಡೆಯುತ್ತಿತ್ತು. "ಈಗಿರುವ [ಆಗಸ್ಟ್‌‌ 13] ಸಮಸ್ಯೆಯೆಂದರೆ, ಜಪಾನಿಯರು ಶರಣಾಗತರಾಗುವುದಿಲ್ಲ ಎಂಬುದು ಭಾವಿಸಿಕೊಂಡು, ಪ್ರತಿ ಬಾಂಬು ತಯಾರಾಗಿ ಅಲ್ಲಿಗೆ ಸಾಗಿಸಲ್ಪಟ್ಟ ನಂತರ ಅವರ ಮೇಲೆ ಬೀಳಿಸುವುದನ್ನು ಮುಂದುವರಿಸುವುದೋ ಅಥವಾ ಅವನ್ನು ಹಾಗೇ ಇರಿಸಿಕೊಂಡು.... ನಂತರದಲ್ಲಿ ಒಂದು ಸಮಂಜಸವಾದ ಅಲ್ಪಾವಧಿಯಲ್ಲಿ ಅವೆಲ್ಲವನ್ನೂ ಒಟ್ಟಿಗೇ ಸುರಿಯುವುದೋ ಅಥವಾ ಬೇಡವೋ ಎಂಬುದೇ ಆಗಿದೆ. ಎಲ್ಲವನ್ನೂ ಒಂದೇ ದಿನದಲ್ಲಿ ಹಾಕುವುದು ಎಂತಲ್ಲ, ಬದಲಿಗೆ ಒಂದು ಅಲ್ಪಾವಧಿಯ ನಂತರ ಹಾಕುವುದು ಎಂಬುದು ಇದರರ್ಥ. ಮತ್ತು ನಾವು ಯಾವ ಗುರಿಯನ್ನು ಬೆನ್ನತ್ತಿದ್ದೇವೋ ಅದನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಬೇರೆಯದೇ ರೀತಿಯಲ್ಲಿ ಹೇಳುವುದಾದರೆ, ಉದ್ಯಮ, ಧೃತಿ, ಮಾನಸಿಕ ಅಂಶ, ಮತ್ತು ಅದೇ ರೀತಿಯ ಇತರ ವಿಷಯಗಳಿಗಿಂತ, ಆಕ್ರಮಣವೊಂದಕ್ಕೆ ಮಹೋನ್ನತವಾದ ರೀತಿಯಲ್ಲಿ ನೆರವು ನೀಡುವ ಗುರಿಗಳ ಮೇಲೆ ನಾವೇಕೆ ಗಮನ ಕೇಂದ್ರೀಕರಿಸಬಾರದು? ಇದು ಇತರ ಬಳಕೆಗಿಂತ ಯುದ್ಧತಂತ್ರದ ಬಳಕೆಗೆ ಅತ್ಯಂತ ಹತ್ತಿರದಲ್ಲಿದೆ."

ಜಪಾನ್‌ನ ಶರಣಾಗತಿ ಮತ್ತು ತರುವಾಯದ ಸ್ವಾಧೀನ

ಶರಣಾಗತಿಗೆ ಸಂಬಂಧಿಸಿದ ತನ್ನ ನಾಲ್ಕು ಷರತ್ತುಗಳ ಕುರಿತಾಗಿ ಆಗಸ್ಟ್‌‌ 9ರವರೆಗೆ ಯುದ್ಧ ಪರಿಷತ್ತು ಒತ್ತಾಯಿಸುತ್ತಲೇ ಇತ್ತು. ಆ ದಿನದಂದು ಕಿಡೋಗೆ ಹಿರೋಹಿಟೋ ಆದೇಶವೊಂದನ್ನು ನೀಡಿ, "ನಮ್ಮ ವಿರುದ್ಧ ಸೋವಿಯೆಟ್‌ ಒಕ್ಕೂಟವು ಯುದ್ಧವನ್ನು ಘೋಷಿಸಿರುವುದರಿಂದ.... ಪರಿಸ್ಥಿತಿಯನ್ನು ತ್ವರಿತವಾಗಿ ನಿಯಂತ್ರಿಸಿ" ಎಂದು ತಿಳಿಸಿದ. ನಂತರ ಆತ ಚಕ್ರಾಧಿಪತ್ಯದ ಸಮಾವೇಶವೊಂದನ್ನು ಏರ್ಪಡಿಸಿದ ಮತ್ತು ಈ ಸಂದರ್ಭದಲ್ಲಿ ಒಂದು ಷರತ್ತಿನ ಮೇಲೆ ಮಿತ್ರರಾಷ್ಟ್ರಗಳ ನಿಬಂಧನೆಗಳನ್ನು ಜಪಾನ್‌ ಒಪ್ಪುವುದೆಂದು ಮಿತ್ರರಾಷ್ಟ್ರಗಳಿಗೆ ತಿಳಿಯಪಡಿಸುವ ಅಧಿಕಾರವನ್ನು ಆತ ತನ್ನ ಮಂತ್ರಿ ಟೋಗೋಗೆ ನೀಡಿದ. ನಿಬಂಧನೆಗಳು ಒಳಗೊಂಡಿದ್ದ ಘೋಷಣೆಯು "ಓರ್ವ ಪರಮಾಧಿಕಾರದ ಆಡಳಿತಗಾರನಾಗಿ ಮಹಾಪ್ರಭುವಿನ ವಿಶೇಷಾಧಿಕಾರಗಳಿಗೆ ಕೆಡುಕುಂಟುಮಾಡುವ ಯಾವುದೇ ಬೇಡಿಕೆಯೊಂದಿಗೆ ರಾಜಿಮಾಡಿಕೊಳ್ಳುವುದಿಲ್ಲ" ಎಂಬುದೇ ಆ ಒಂದು ಷರತ್ತಾಗಿತ್ತು.

ಪರಮಾಣು ಬಾಂಬ್‌ ದಾಳಿಗಳಿಗೆ ಸಂಬಂಧಿಸಿದ ಪ್ರತಿಭಟನೆಯ ಪತ್ರವೊಂದನ್ನು ಜಪಾನಿನ ಸರ್ಕಾರವು, ಸ್ವಿಜರ್‌ಲೆಂಡ್‌ನ ಸರ್ಕಾರದ ಮೂಲಕ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರ್ಕಾರಕ್ಕೆ ಆಗಸ್ಟ್‌‌ 10ರಂದು ಸಲ್ಲಿಸಿತು‌. ಶರಣಾಗತಿಯ ಕುರಿತಾದ ತನ್ನ ತೀರ್ಮಾನವನ್ನು ಚಕ್ರವರ್ತಿಯು ಚಕ್ರಾಧಿಪತ್ಯದ ಕುಟುಂಬಕ್ಕೆ ಆಗಸ್ಟ್‌‌ 12ರಂದು ತಿಳಿಸಿದ. ಅವನ ಚಿಕ್ಕಪ್ಪಂದಿರಲ್ಲಿ ಒಬ್ಬನಾದ ರಾಜಕುಮಾರ ಅಸಾಕ ಎಂಬಾತ, ಒಂದು ವೇಳೆ ಕೊಕುಟಾಯ್‌‌ ನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸಾಧ್ಯವಾಗದಿದ್ದಲ್ಲಿ ಯುದ್ಧವು ಮುಂದುವರಿಯುವುದೇ ಎಂದು ಪ್ರಶ್ನಿಸಿದ. "ಅವಶ್ಯವಾಗಿ" ಎಂದು ಹಿರೋಹಿಟೋ ಸರಳವಾಗಿ ಉತ್ತರಿಸಿದ. ಒಕ್ಕೂಟಕ್ಕೆ ಸೇರಿದ ನಿಬಂಧನೆಗಳು ಸಿಂಹಾಸನದ ಕಾಪಾಡುವಿಕೆಯ ತತ್ತ್ವವನ್ನು ಅಖಂಡವಾಗಿ ಬಿಡುವಂತೆ ಕಂಡುಬಂದಿದ್ದರಿಂದ, ಆಗಸ್ಟ್‌‌ 14ರಂದು ಹಿರೋಹಿಟೋ ತನ್ನ ಷರತ್ತಿನೊಂದಿಗಿನ ಶರಣಾಗತಿಯ ಘೋಷಣೆಯನ್ನು ದಾಖಲಿಸಿದ. ಶರಣಾಗತಿಯನ್ನು ವಿರೋಧಿಸುತ್ತಿದ್ದ ಸಮರವಾದಿಗಳ ಒಂದು ಕಿರು ಬಂಡಾಯದ ನಡುವೆಯೂ ಇದನ್ನು ಮರುದಿನ ಜಪಾನಿಯರ ರಾಷ್ಟ್ರಕ್ಕೆ ಬಿತ್ತರಿಸಲಾಯಿತು.

ತನ್ನ ಘೋಷಣೆಯಲ್ಲಿ, ಪರಮಾಣು ಬಾಂಬ್‌ ದಾಳಿಗಳಿಗೆ ಸಂಬಂಧಿಸಿದಂತೆ ಹಿರೋಹಿಟೋ ಉಲ್ಲೇಖಿಸಿದ:

Moreover, the enemy now possesses a new and terrible weapon with the power to destroy many innocent lives and do incalculable damage. Should we continue to fight, not only would it result in an ultimate collapse and obliteration of the Japanese nation, but also it would lead to the total extinction of human civilization.

Such being the case, how are We to save the millions of Our subjects, or to atone Ourselves before the hallowed spirits of Our Imperial Ancestors? This is the reason why We have ordered the acceptance of the provisions of the Joint Declaration of the Powers.

ಆಗಸ್ಟ್‌‌ 17ರಂದು ಆತ ತನ್ನ "ಸೈನಿಕರು ಮತ್ತು ನಾವಿಕರಿಗೆ ನೀಡಿದ ವಿಧ್ಯುಕ್ತ ಘೋಷಣೆ"ಯಲ್ಲಿ, ಬಾಂಬುಗಳ ಕುರಿತಾದ ಯಾವುದೇ ಉಲ್ಲೇಖವನ್ನು ಬಿಟ್ಟುಬಿಡುವುದರೊಂದಿಗೆ, ಶರಣಾಗತಿಗೆ ಸಂಬಂಧಿಸಿದ ತನ್ನ ತೀರ್ಮಾನ ಮತ್ತು ಸೋವಿಯೆಟ್‌ ಆಕ್ರಮಣದ ಪ್ರಭಾವದ ಕುರಿತು ಆತ ಒತ್ತುನೀಡಿದ.

ಬಾಂಬ್‌ ದಾಳಿಯ ನಂತರದ ಆ ವರ್ಷದ ಅವಧಿಯಲ್ಲಿ, ಸರಿಸುಮಾರಾಗಿ 40,000 U.S. ಪಡೆಗಳು ಹಿರೋಷಿಮಾವನ್ನು ಆಕ್ರಮಿಸಿಕೊಂಡರೆ, 27,000 ಪಡೆಗಳು ನಾಗಸಾಕಿಯನ್ನು ಆಕ್ರಮಿಸಿಕೊಂಡವು.

ಚಿತ್ರಣ ಮತ್ತು ಸಾರ್ವಜನಿಕರ ಪ್ರತಿಕ್ರಿಯೆ

ಯುದ್ಧದ ಅವಧಿಯಲ್ಲಿ "ಸರ್ವನಾಶವಾದಿ ಮತ್ತು ಮೂಲೋತ್ಪಾಟನವಾದಿ ಭಾಷಣಕಲೆ"ಯನ್ನು U.S. ಸಮಾಜದ ಎಲ್ಲಾ ಮಟ್ಟಗಳಲ್ಲೂ ಸಹಿಸಿಕೊಳ್ಳಲಾಯಿತು; ವಾಷಿಂಗ್ಟನ್‌‌ನಲ್ಲಿನ UK ದೂತಾವಾಸದ ಅನುಸಾರ, ಅಮೆರಿಕನ್ನರು ಜಪಾನಿಯರನ್ನು "ಒಂದು ಹೆಸರಿರದ ಪೀಡಕರ ಸಮೂಹ" ಎಂಬುದಾಗಿ ಪರಿಗಣಿಸಿದ್ದರು. ಜಪಾನಿಯರನ್ನು ಮಾನವರಿಗಿಂತ ಕೀಳು ಎಂಬಂತೆ, ಉದಾಹರಣೆಗೆ ಕೋತಿಗಳಂತೆ ಚಿತ್ರಿಸುವ ವಿಕಟಚಿತ್ರಣಗಳು ಸಾಮಾನ್ಯವಾಗಿದ್ದವು. ಜಪಾನ್‌ನೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಪ್ರಶ್ನೆಯನ್ನು ಕೇಳಿದ್ದ 1944ರ ಒಂದು ಜನಮತ ಸಂಗ್ರಹವು ಕಂಡುಕೊಂಡ ಪ್ರಕಾರ, ಪುರುಷರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲಾ ಜಪಾನಿಯರ ಮೂಲೋತ್ಪಾಟನ ಮಾಡಬೇಕು ಎಂಬುದರ ಪರವಾಗಿ U.S. ಸಾರ್ವಜನಿಕರ ಪೈಕಿ 13%ನಷ್ಟು ಮಂದಿ ನಿಂತರು.

ಪರಮಾಣು ಬಾಂಬ್‌ ದಾಳಿಯ ಸುದ್ದಿಗೆ U.S.ನಲ್ಲಿ ಉತ್ಸಾಹದಿಂದ ಅಭಿನಂದಿಸಲಾಯಿತು; 1945ರ ಅಂತ್ಯದ ವೇಳೆಗೆ ‌ಫಾರ್ಚೂನ್ ನಿಯತಕಾಲಿಕದ ವತಿಯಿಂದ ಕೈಗೊಳ್ಳಲಾದ ಒಂದು ಜನಮತ ಸಂಗ್ರಹದಲ್ಲಿ, ಜಪಾನ್ ಮೇಲೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಮಾಣು ಬಾಂಬುಗಳನ್ನು ಬೀಳಿಸಬಹುದಾಗಿತ್ತು ಎಂದು ಒಂದು ಗಣನೀಯ ಪ್ರಮಾಣದ ಅಮೆರಿಕಾದ ಅಲ್ಪಸಂಖ್ಯಾತರು ಪ್ರತಿಕ್ರಿಯಿಸಿದ್ದು ಕಂಡುಬಂತು. ಸಾರ್ವಜನಿಕರಿಗೆ ಅಲಂಕಾರಿಕ ಚಿತ್ರಣವನ್ನು (ಮುಖ್ಯವಾಗಿ ಶಕ್ತಿಯುತ ಅಣಬೆ ಮೋಡದ ಚಿತ್ರವನ್ನು) ಅರ್ಪಿಸುವ ಮೂಲಕ ಆರಂಭಿಕ ಧನಾತ್ಮಕ ಪ್ರತಿಕ್ರಿಯೆಯು ಬೆಂಬಲಿಸಲ್ಪಟ್ಟಿತು, ಮತ್ತು ಮಾನವರ ಮೇಲಾಗಿರುವ ಪರಿಣಾಮಗಳ ಪುರಾವೆಯ ಗೈರುಹಾಜರಿಯನ್ನು- ಅಂದರೆ ಕಳೇಬರಗಳು ಮತ್ತು ಶಕ್ತಿಗುಂದಿಸಲ್ಪಟ್ಟಿರುವ ಉಳಿದುಕೊಂಡವರನ್ನು ತೋರಿಸುವ ಛಾಯಾಚಿತ್ರಗಳನ್ನು- ದಮನಮಾಡಲಾಯಿತು, ಮತ್ತು ವರದಿಗಳಿಗೆ ಕತ್ತರಿಪ್ರಯೋಗ ಮಾಡಲಾಯಿತು. ಒಂದು ಉದಾಹರಣೆಯಾಗಿ ಹೇಳುವುದಾದರೆ, U.S. ಯುದ್ಧತಂತ್ರದ ಬಾಂಬ್‌ ದಾಳಿಯ ಸಮೀಕ್ಷೆಯ ಓರ್ವ ಸದಸ್ಯನಾದ ಲೆಫ್ಟಿನೆಂಟ್‌ ಡೇನಿಯೆಲ್‌ ಮೆಕ್‌ಗವರ್ನ್ ಎಂಬಾತ, ಫಲಿತಾಂಶಗಳನ್ನು ದಾಖಲಿಸಲು ಒಂದು ಚಲನಚಿತ್ರ ತಂಡವನ್ನೇ ಬಳಸಿಕೊಂಡ. ಚಲನಚಿತ್ರ ತಂಡದ ಕಾರ್ಯವು, ದಿ ಇಫೆಕ್ಟ್ಸ್ ಆಫ್‌ ದಿ ಅಟಾಮಿಕ್‌ ಬಾಂಬ್ಸ್‌ ಎಗೇನ್ಸ್ಟ್‌ ಹಿರೋಷಿಮಾ ಅಂಡ್‌ ನಾಗಸಾಕಿ ಎಂಬ ಶೀರ್ಷಿಕೆಯ, ಮೂರು-ಗಂಟೆಯ ಅವಧಿಯ ಒಂದು ಸಾಕ್ಷ್ಯಚಿತ್ರವಾಗಿ ಹೊರಹೊಮ್ಮಿತು. ಬಾಂಬ್‌ನಿಂದ ಮಾನವರ ಮೇಲಾಗಿರುವ ಪರಿಣಾಮಗಳನ್ನು ತೋರಿಸುತ್ತಿರುವ ಆಸ್ಪತ್ರೆಗಳಿಂದ ಪಡೆಯಲಾದ ಚಿತ್ರಿಕೆಗಳನ್ನು ಸದರಿ ಸಾಕ್ಷ್ಯಚಿತ್ರವು ಒಳಗೊಂಡಿತ್ತು; ಸುಟ್ಟುಹೋದ ಕಟ್ಟಡಗಳು ಮತ್ತು ಕಾರುಗಳು, ಹಾಗೂ ನೆಲದ ಮೇಲೆ ಬಿದ್ದಿರುವ ತಲೆಬುರುಡೆಗಳು ಮತ್ತು ಮೂಳೆಗಳ ಸಾಲುಗಳನ್ನು ಅದು ತೋರಿಸಿತ್ತು. ಸಾಕ್ಷ್ಯಚಿತ್ರವನ್ನು U.S.ಗೆ ಕಳಿಸಿದಾಗ, ಅದನ್ನು U.S. ಪತ್ರಿಕೆಗಳಲ್ಲಿ ವ್ಯಾಪಕವಾಗಿ ಉಲ್ಲೇಖಿಸಲಾಯಿತು, ನಂತರ ಸದ್ದಿಲ್ಲದೆ ದಮನಮಾಡಲಾಯಿತು ಮತ್ತು ಎಂದೆಂದಿಗೂ ಅದನ್ನು ತೋರಿಸಲಿಲ್ಲ. ಮುಂದಿನ 22 ವರ್ಷಗಳವರೆಗೆ ಅದನ್ನು "ಉನ್ನತ ರಹಸ್ಯ" ಎಂದು ವರ್ಗೀಕರಿಸಲಾಯಿತು.

ಸ್ವಾಧೀನದ ಅವಧಿಯಲ್ಲಿ ಪರಮಾಣು ಬಾಂಬ್‌ ದಾಳಿಗಳ ಅಲಂಕಾರಿಕ ಚಿತ್ರಣವನ್ನು ಜಪಾನ್‌ನಲ್ಲಿ ದಮನಮಾಡಲಾಯಿತಾದರೂ, ಒಕ್ಕೂಟಕ್ಕೆ ಸೇರಿದ ಸ್ವಾಧೀನ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಮುಂಚೆಯೇ ಜಪಾನಿನ ಕೆಲವೊಂದು ನಿಯತಕಾಲಿಕಗಳು ಚಿತ್ರಿಕೆಗಳನ್ನು ಪ್ರಕಟಿಸುವಲ್ಲಿ ಯಶಸ್ವಿಯಾದವು. "ಸಾರ್ವಜನಿಕರ ಪ್ರಶಾಂತತೆಗೆ ನೇರವಾಗಿ ಅಥವಾ ತೀರ್ಮಾನದ ಮೂಲಕ ತೊಂದರೆಯನ್ನುಂಟು ಮಾಡಬಲ್ಲ" ಯಾವುದನ್ನೇ ಆದರೂ, ಮತ್ತು ಬಾಂಬ್‌ ಪರಿಣಾಮಕ್ಕೊಳಗಾಗಿ ನೆಲದ ಮೇಲೆ ಬಿದ್ದಿರುವ ಜನರ ಚಿತ್ರಗಳು ಪ್ರಚೋದಕವೆಂದು ಕಂಡುಬಂದಲ್ಲಿ ಅವನ್ನೂ ಕತ್ತರಿಪ್ರಯೋಗಕ್ಕೆ ಒಳಪಡಿಸುವ ಕ್ರಮವನ್ನು ಒಕ್ಕೂಟಕ್ಕೆ ಸೇರಿದ ಸ್ವಾಧೀನ ಪಡೆಗಳು ಜಾರಿಗೆ ತಂದವು. ಈ ಬಗೆಯ ನಿಷೇಧಿಸುವಿಕೆಗೆ ಇದ್ದ ಒಂದು ಸಂಭವನೀಯ ಕಾರಣವೆಂದರೆ, ಸುಟ್ಟಗಾಯದ ಬಲಿಪಶುಗಳು ಮತ್ತು ಅಂತಿಮಯಾತ್ರೆ ಚಿತೆಗಳನ್ನು ನಿರೂಪಿಸುತ್ತಿದ್ದ ಚಿತ್ರಿಕೆಗಳು, ಸ್ವಾತಂತ್ರ್ಯ ಪಡೆದ ನಾಜಿ ಸೆರೆ ಶಿಬಿರಗಳಲ್ಲಿ ತೆಗೆಯಲ್ಪಟ್ಟು ವ್ಯಾಪಕವಾಗಿ ಹರಡಲಾಗಿದ್ದ ಚಿತ್ರಿಕೆಗಳನ್ನು ಹೋಲುವಂತಿದ್ದವು.

ಪರಮಾಣು ಬಾಂಬು ದುರ್ಘಟನೆ ಆಯೋಗ

ಹ್ಯಾರಿ S. ಟ್ರೂಮನ್‌‌‌ನಿಂದ ರಾಷ್ಟ್ರೀಯ ವಿಜ್ಞಾನಗಳ ಅಕಾಡೆಮಿ-ರಾಷ್ಟ್ರೀಯ ಸಂಶೋಧನೆ ಪರಿಷತ್ತಿಗೆ ನೀಡಲ್ಪಟ್ಟ ಒಂದು ಅಧ್ಯಕ್ಷೀಯ ಮಾರ್ಗದರ್ಶಿ ಸೂಚನೆಯ ಅನುಸಾರ, 1948ರ ವಸಂತಋತುವಿನಲ್ಲಿ, ಪರಮಾಣು ಬಾಂಬು ದುರ್ಘಟನೆ ಆಯೋಗವನ್ನು (ಅಟಾಮಿಕ್‌ ಬಾಂಬ್‌ ಕ್ಯಾಷುಯಾಲಿಟಿ ಕಮಿಷನ್‌-ABCC) ಸ್ಥಾಪಿಸಲಾಯಿತು. ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಉಳಿದುಕೊಂಡವರ ಪೈಕಿ ಕಂಡುಬಂದಿರುವ ವಿಕಿರಣದ ತಡವಾದ ಪ್ರಭಾವಗಳ ಕುರಿತಾಗಿ ತನಿಖೆಗಳನ್ನು ಕೈಗೊಳ್ಳಲು ಇದನ್ನು ಸ್ಥಾಪಿಸಲಾಯಿತು.

ದುರ್ಘಟನೆಗಳ ಪೈಕಿ ಅನೇಕ ಅನುದ್ದೇಶಿತ ಬಲಿಪಶುಗಳು ಕಂಡುಬಂದರು. ಒಕ್ಕೂಟಕ್ಕೆ ಸೇರಿದ POWಗಳು, ಕೊರಿಯಾದ ಮತ್ತು ಚೀನಾದ ಕಾರ್ಮಿಕರು, ವಿದ್ಯಾರ್ಥಿ ವೇತನಗಳ ಮೇಲೆ ಮಲಯದಿಂದ ಬಂದಿದ್ದ ವಿದ್ಯಾರ್ಥಿಗಳು, ಮತ್ತು ಸುಮಾರು 3,200ರಷ್ಟು ಜಪಾನೀ ಅಮೆರಿಕನ್‌ ನಾಗರಿಕರು ಈ ಅನುದ್ದೇಶಿತ ಬಲಿಪಶುಗಳಲ್ಲಿ ಸೇರಿದ್ದರು.

ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ, ಮತ್ತು ಹಿರೋಷಿಮಾದಿಂದ ...18 miles (29 km)ನಷ್ಟು ದಕ್ಷಿಣಕ್ಕೆ ನೆಲೆಗೊಂಡಿರುವ ಒಂದು ನಿಯಂತ್ರಣ ನಗರವಾದ ಕ್ಯುರ್‌‌‌ನಲ್ಲಿ ಸಂಭವಿಸಿರುವ ಗರ್ಭಧರಿಸಿರುವ ಸ್ಥಿತಿಗಳ ಫಲಿತಾಂಶದ ಮೇಲೆ ABCCಯು ಕೈಗೊಂಡ ಅಧ್ಯಯನವು ಆರಂಭಿಕ ಅಧ್ಯಯನಗಳ ಪೈಕಿ ಒಂದಾಗಿತ್ತು. ವಿಕಿರಣದ ಒಡ್ಡುವಿಕೆಗೆ ಸಂಬಂಧಿಸಿದ ಷರತ್ತುಗಳು ಹಾಗೂ ತೀರ್ಮಾನಗಳನ್ನು ಗ್ರಹಿಸುವ ಉದ್ದೇಶದಿಂದ ಈ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಓರ್ವ ಲೇಖಕನು ಸಮರ್ಥಿಸಿರುವ ಪ್ರಕಾರ, ಅತ್ಯುತ್ತಮವಾದ ಸಂಶೋಧನಾ ಫಲಿತಾಂಶಗಳಿಗೋಸ್ಕರ ಬಾಂಬ್‌ ದಾಳಿಯಲ್ಲಿ ಉಳಿದುಕೊಂಡವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ABCCಯು ನಿರಾಕರಿಸಿತು. ABCCಯ ಹೊಣೆಗಾರಿಕೆಗಳನ್ನು ಹೊತ್ತುಕೊಳ್ಳಲು 1975ರಲ್ಲಿ ರೇಡಿಯೇಷನ್‌ ಎಫೆಕ್ಟ್ಸ್‌ ರಿಸರ್ಚ್‌ ಫೌಂಡೇಷನ್‌ನ್ನು ಸೃಷ್ಟಿಸಲಾಯಿತು.

ಹಿಬಾಕುಶಾ

Panoramic view of the monument marking the hypocenter, or ground zero, of the atomic bomb explosion over Nagasaki.
ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ಹಿರೋಷಿಮಾ ನಗರದ ಮೇಲಿನ ಪರಮಾಣು ಬಾಂಬ್‌ ದಾಳಿಯಿಂದ ಉಳಿದುಕೊಂಡಿರುವ ಅತ್ಯಂತ ಸನಿಹದ ಕಟ್ಟಡವಾದ ಹಿರೋಷಿಮಾ ಪೀಸ್‌ ಮೆಮರಿಯಲ್‌ ಪಕ್ಕದಲ್ಲಿ ಹಿರೋಷಿಮಾದ ನಾಗರಿಕರು ನಡೆಯುತ್ತಿರುವುದು.

ಬಾಂಬ್‌ ದಾಳಿಗಳಿಗೆ ಈಡಾಗಿ ಬದುಕುಳಿದಿರುವ ಬಲಿಪಶುಗಳನ್ನು ...hibakusha (被爆者?) ಎಂದು ಕರೆಯಲಾಗುತ್ತದೆ. ಇದೊಂದು ಜಪಾನೀ ಭಾಷೆಯ ಪದವಾಗಿದ್ದು, ಅಕ್ಷರಶಃ ಇದನ್ನು ಅನುವಾದಿಸಿದಾಗ "ಸ್ಫೋಟದಿಂದ-ಹಾನಿಗೊಳಗಾದ ಜನರು" ಎಂಬ ಅರ್ಥವನ್ನು ಅದು ಕೊಡುತ್ತದೆ. ಬಾಂಬ್‌ ದಾಳಿಯಿಂದ ಉಂಟಾದ ನರಳಿಕೆಯು, ಅಂದಿನಿಂದೀಚೆಗೆ ವಿಶ್ವದಿಂದ ಪರಮಾಣು ಶಸ್ತ್ರಾಸ್ತ್ರಗಳ ರದ್ದಿಯಾತಿಗೆ ಜಪಾನ್‌ ಪ್ರಯತ್ನಿಸುವಂತೆ ಮಾಡಿದೆ; ಇದರಿಂದಾಗಿ ವಿಶ್ವದ ಅತ್ಯಂತ ದೃಢವಾದ ಅಣ್ವಸ್ತ್ರಗಳನ್ನು-ಹೊಂದಿರದ ಕಾರ್ಯನೀತಿಗಳಲ್ಲಿ ಒಂದನ್ನು ಜಪಾನ್‌ ಪ್ರದರ್ಶಿಸಿದಂತಾಗಿದೆ. As of March 31, 2009, 235,569ನಷ್ಟು ಹಿಬಾಕುಶಾಗಳು ಜಪಾನಿನ ಸರ್ಕಾರದಿಂದ ಗುರುತಿಸಲ್ಪಟ್ಟರು; ಅವರಲ್ಲಿ ಬಹುಪಾಲು ಮಂದಿ ಜಪಾನ್‌ನಲ್ಲಿ ವಾಸಿಸುತ್ತಿದ್ದಾರೆ. ಇವರ ಪೈಕಿ 1%ನಷ್ಟು ಮಂದಿ ವಿಕಿರಣದಿಂದ ಉಂಟಾದ ಅಸ್ವಸ್ಥತೆಗಳನ್ನು ಹೊಂದಿದ್ದಾರೆ ಎಂದು ಜಪಾನ್‌ ಸರ್ಕಾರವು ಗುರುತಿಸಿದೆ. ಬಾಂಬ್‌ ದಾಳಿಗಳು ಆದಾಗಿನಿಂದಲೂ ಯಾರೆಲ್ಲಾ ಹಿಬಾಕುಶಾಗಳು ಸತ್ತರೆಂದು ತಿಳಿದುಬಂದಿದೆಯೋ ಅವರೆಲ್ಲರ ಹೆಸರುಗಳ ಪಟ್ಟಿಗಳನ್ನು ಹಿರೋಷಿಮಾ ಮತ್ತು ನಾಗಸಾಕಿಯಲ್ಲಿನ ಸ್ಮಾರಕಗಳು ಒಳಗೊಂಡಿವೆ. ಬಾಂಬ್‌ ದಾಳಿಗಳ ವಾರ್ಷಿಕ ದಿನಗಳಂದು ವಾರ್ಷಿಕವಾಗಿ ಪರಿಷ್ಕರಿಸಲ್ಪಡುವ ಈ ಸ್ಮಾರಕದ-ದಾಖಲೆಗಳು, 2009ರ ಆಗಸ್ಟ್‌ ವೇಳೆಗೆ ಇದ್ದಂತೆ 410,000ನಷ್ಟು ಹಿಬಾಕುಶಾಗಳು ಹೆಸರುಗಳನ್ನು ದಾಖಲಿಸಿವೆ. ಇದರ ಪೈಕಿ ಹಿರೋಷಿಮಾದಲ್ಲಿ 263,945ರಷ್ಟು ಸಂಖ್ಯೆಯಲ್ಲಿ ಹಾಗೂ ನಾಗಸಾಕಿಯಲ್ಲಿ 149,226ರಷ್ಟು ಸಂಖ್ಯೆಯಲ್ಲಿ ಅವರು ದಾಖಲಿಸಲ್ಪಟ್ಟಿದ್ದಾರೆ.

ಉಳಿದುಕೊಂಡಿರುವ ಕೊರಿಯನ್ನರು

ಕಡ್ಡಾಯಪಡಿಸಲಾದ ಕಾರ್ಮಿಕರಾಗಿ ಕೆಲಸ ಮಾಡಲು, ಒತ್ತಾಯದಿಂದ ಸೇರಿಸಲ್ಪಟ್ಟ ಕೊರಿಯಾದ ಅನೇಕ ಸೈನಿಕರನ್ನು ಹಿರೋಷಿಮಾ ಮತ್ತು ನಾಗಸಾಕಿ ಈ ಎರಡೂ ಕಡೆಗೆ ಜಪಾನ್‌ ಯುದ್ಧದ ಸಮಯದಲ್ಲಿ ಕರೆತಂದಿತು. ಇತ್ತೀಚಿನ ಅಂದಾಜುಗಳ ಪ್ರಕಾರ, ಸುಮಾರು 20,000 ಮಂದಿ ಕೊರಿಯನ್ನರು ಹಿರೋಷಿಮಾದಲ್ಲಿ ಸಾಯಿಸಲ್ಪಟ್ಟರು ಮತ್ತು ಸುಮಾರು 2,000 ಮಂದಿ ನಾಗಸಾಕಿಯಲ್ಲಿ ಸತ್ತರು. ಹಿರೋಷಿಮಾದ ಏಳು ಬಲಿಪಶುಗಳ ಪೈಕಿ ಒಬ್ಬರು ಕೊರಿಯಾದ ಮೂಲಕ್ಕೆ ಸೇರಿದವರಾಗಿದ್ದರು ಎಂದು ಅಂದಾಜಿಸಲಾಗಿದೆ. ಪರಮಾಣು ಬಾಂಬು ಬಲಿಪಶುಗಳು ಎಂಬ ಪರಿಗಣನೆಯನ್ನು ಪಡೆಯುವುದಕ್ಕೋಸ್ಕರ ಕೊರಿಯನ್ನರು ಅನೇಕ ವರ್ಷಗಳವರೆಗೆ ಸೆಣಸಾಡುತ್ತಾ ಒಂದು ಕಷ್ಟದ ಕಾಲವನ್ನು ಎದುರಿಸಿದ್ದರು ಮತ್ತು ಅವರಿಗೆ ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ನಿರಾಕರಿಸಲಾಗಿತ್ತು. ಆದಾಗ್ಯೂ, ಕಾನೂನು ದಾವೆಗಳ ಮೂಲಕ ಬಹುಪಾಲು ವಿವಾದಾಂಶಗಳ ಕಡೆಗೆ ಇತ್ತೀಚಿನ ವರ್ಷಗಳಲ್ಲಿ ಗಮನಹರಿಸಲಾಗಿದೆ.

ಎರಡು ಬಾರಿ ಉಳಿದುಕೊಂಡವರು

2009ರ ಮಾರ್ಚ್‌ 24ರಂದು, ಟ್ಸುಟೊಮು ಯಮಾಗುಚಿ (1916–2010) ಎಂಬಾತನನ್ನು ಓರ್ವ ಎರಡುಬಾರಿಯ ಹಿಬಾಕುಶಾ ಎಂಬುದಾಗಿ ಜಪಾನಿನ ಸರ್ಕಾರ ಅಧಿಕೃತವಾಗಿ ಗುರುತಿಸಿತು. ಸದರಿ ಬಾಂಬು ಆಸ್ಫೋಟಿಸಿದಾಗ, ಟ್ಸುಟೊಮು ಯಮಾಗುಚಿಯು ವ್ಯವಹಾರ ಪ್ರವಾಸವೊಂದರ ಮೇಲೆ ಹಿರೋಷಿಮಾದಲ್ಲಿನ ಶೂನ್ಯಭೂಮಿಯಿಂದ 3 ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದ ಎಂದು ದೃಢಪಡಿಸಲಾಯಿತು. ಆತನ ಶರೀರದ ಎಡಪಾರ್ಶ್ವಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು ಮತ್ತು ಆತ ಅಂದು ರಾತ್ರಿಯನ್ನು ಹಿರೋಷಿಮಾದಲ್ಲಿ ಕಳೆದ. ಆಗಸ್ಟ್‌‌ 8ರಂದು ಆತ ತನ್ನ ಸ್ವಂತ ನಗರವಾದ ನಾಗಸಾಕಿಗೆ ಮರಳಿದ; ಇದು ನಾಗಸಾಕಿಯಲ್ಲಿ ಸದರಿ ಬಾಂಬು ಬೀಳಿಸಲ್ಪಟ್ಟ ದಿನದ ಮುನ್ನಾದಿನವಾಗಿತ್ತು, ಮತ್ತು ಆತ ತನ್ನ ಸಂಬಂಧಿಗಳನ್ನು ಹುಡುಕುವಾಗ ಅವಶೇಷದ ವಿಕಿರಣಕ್ಕೆ ಅವನು ಒಡ್ಡಲ್ಪಟ್ಟ. ಎರಡೂ ಬಾಂಬ್‌ ದಾಳಿಗಳಲ್ಲಿ ಉಳಿದುಕೊಂಡವ ಎಂದು ಅವನನ್ನು ಮೊದಲಬಾರಿಗೆ ಅಧಿಕೃತವಾಗಿ ಗುರುತಿಸಲಾಯಿತು. ಜಠರದ ಕ್ಯಾನ್ಸರ್‌‌ನೊಂದಿಗೆ ಹೆಣಗಾಟ ನಡೆಸಿದ ನಂತರ, 2010ರ ಜನವರಿ 4ರ ಸೋಮವಾರದಂದು ಟ್ಸುಟೊಮು ಯಮಾಗುಚಿ ಅಸುನೀಗಿದ. ಅವನಿಗೆ 93 ವರ್ಷ ವಯಸ್ಸಾಗಿತ್ತು.

ಚಾರ್ಲ್ಸ್‌ ಪೆಲ್ಲೆಗ್ರಿನೋ ಎಂಬಾತ ದಿ ಲಾಸ್ಟ್‌ ಟ್ರೇನ್‌ ಫ್ರಂ ಹಿರೋಷಿಮಾ ಎಂಬ ಪುಸ್ತಕದಲ್ಲಿ ಟ್ಸುಟೊಮು ಯಮಾಗುಚಿ ಜೊತೆಗೆ ನಡೆಸಲಾದ ಒಂದು ಸಂದರ್ಶನದ ಕುರಿತು ಬರೆಯುತ್ತಾನೆ. ಪರಮಾಣು ಬಾಂಬುಗಳಿಂದ ಉಂಟಾದ ಪರಿಣಾಮದಲ್ಲಿ ಗಾಯಗೊಂಡು ಉಳಿದುಕೊಂಡವರ ಕುರಿತು ಯಮಾಗುಚಿ ವಿವರಿಸಿದ್ದಾನೆ. ಬಾಂಬ್‌ ಬಲಿಪಶುಗಳನ್ನು "ಇರುವೆ-ನಡೆಯುವ ಮೊಸಳೆಗಳು" ಎಂದು ಯಮಾಗುಚಿ ಕರೆದಿದ. ತನ್ನ ವಿವರಣೆಯನ್ನು ಆತ ಮುಂದುವರೆಸುತ್ತಾ, "ಅವರ ತಲೆಗಳು ಮೊಸಳೆಯ ಕಪ್ಪಾದ ತೊಗಲುಗಳಾಗಿ ರೂಪಾಂತರ ಹೊಂದಿ, ಬಾಯಿಗಳನ್ನು ಸೂಚಿಸುವ ಕೆಂಪು ರಂಧ್ರಗಳನ್ನು ಪ್ರದರ್ಶಿಸುವುದರೊಂದಿಗೆ, ಅವರೀಗ ಣ್ಣುರಹಿತ ಮತ್ತು ಮುಖರಹಿತ ವ್ಯಕ್ತಿಗಳಾಗಿದ್ದರು. [...] ನೋಡಲು ಮೊಸಳೆಯ ಹಾಗಿದ್ದ ಜನರು ಕಿರುಚಿಕೊಳ್ಳಲಿಲ್ಲ. ಅವರ ಬಾಯಿಗಳಿಂದ ಧ್ವನಿಗಳು ಹೊರಡಂತಾಗಿತ್ತು. ಅವರು ಮಾಡುತ್ತಿದ್ದ ಶಬ್ದವು ಚೀರುವಿಕೆಗಿಂತಲೂ ಕೆಟ್ಟದಾಗಿತ್ತು. ನಡುಬೇಸಗೆಯ ರಾತ್ರಿಯೊಂದರಲ್ಲಿ ದಂಡುಮಿಡತೆಗಳು ಶಬ್ದಮಾಡುವಂತೆಯೇ ಅವರು ನಿರಂತರವಾಗಿ ಗೊಣಗುತ್ತಿದ್ದರು. ಸುಟ್ಟು ಕರಕಾದ ಕಾಲುಗಳ ಉಳಿಕೆಗಳೊಂದಿಗೆ ತತ್ತರಿಸುತ್ತಿದ್ದ ಓರ್ವ ಮನುಷ್ಯ, ಒಂದು ಮಗುವನ್ನು ತಲೆಕೆಳಗಾಗಿ ಹಿಡಿದುಕೊಂಡು ಹೋಗುತ್ತಿದ್ದ."

ಎರಡೂ ಬಾಂಬ್‌ ದಾಳಿಗಳಿಗೆ ಸಿಲುಕಿ ಅದರ ಪರಿಣಾಮಗಳಿಂದ ನರಳಿದ ಇತರ ಜನರ ಉದಾಹರಣೆಯೂ ಅಲ್ಲಿತ್ತು; ಅವರನ್ನು ಜಪಾನ್‌ನಲ್ಲಿ ನಿಜ್ಯೂ ಹಿಬಾಕುಶಾ ಎಂದು ಕರೆಯಲಾಗುತ್ತದೆ. 2006ರಲ್ಲಿ ನಿರ್ಮಿಸಲ್ಪಟ್ಟ ಟ್ವೈಸ್‌ ಸರ್ವೈವ್ಡ್‌: ದಿ ಡಬ್ಲಿ ಅಟಾಮಿಕ್‌ ಬಾಂಬ್ಡ್‌ ಆಫ್‌ ಹಿರೋಷಿಮಾ ಅಂಡ್‌ ನಾಗಸಾಕಿ ಎಂಬ ಒಂದು ಸಾಕ್ಷ್ಯಚಿತ್ರವು 165 ನಿಜ್ಯೂ ಹಿಬಾಕುಶಾಗಳ ಕುರಿತು ದಾಖಲಿಸಿದ್ದು, ಈ ಚಿತ್ರವನ್ನು ವಿಶ್ವಸಂಸ್ಥೆಯಲ್ಲಿ ಪ್ರದರ್ಶಿಸಲಾಯಿತು.

ಬಾಂಬ್‌ ದಾಳಿಗಳ ಕುರಿತಾದ ಚರ್ಚೆ

The atomic bomb was more than a weapon of terrible destruction; it was a psychological weapon.

—Former U.S. Secretary of War Henry L. Stimson, 1947

ಜಪಾನ್‌ನ ಶರಣಾಗತಿಯಲ್ಲಿ ಬಾಂಬ್‌ ದಾಳಿಗಳ ಪಾತ್ರ ಹಾಗೂ ಸದರಿ ಬಾಂಬ್‌ ದಾಳಿಗಳಿಗೆ ಸಂಬಂಧಿಸಿದಂತೆ U.S. ನೀಡಿದ ನೈತಿಕ ಸಮರ್ಥನೆಯು, ದಶಕಗಳಿಂದಲೂ ಪಾಂಡಿತ್ಯಪೂರ್ಣ ಮತ್ತು ಜನಪ್ರಿಯ ಚರ್ಚೆಗೆ ವಸ್ತುವಾಗುತ್ತಲೇ ಬಂದಿದೆ. ಇದರ ವಿವಾದಾಂಶದ ಕುರಿತಾದ ಇತ್ತೀಚಿನ ಇತಿಹಾಸ ಲೇಖನಕ್ಕೆ ಸಂಬಂಧಿಸಿದಂತೆ, 2005ರ ಏಪ್ರಿಲ್‌ನ ಒಂದು ಅವಲೋಕನದಲ್ಲಿ J. ಸ್ಯಾಮ್ಯುಯೆಲ್‌ ವಾಕರ್‌ ಎಂಬಾತ ಬರೆಯುತ್ತಾ, "ಬಾಂಬ್‌ನ ಬಳಕೆಯ ಕುರಿತಾದ ವಿವಾದವು ಮುಂದುವರಿಯುವುದು ನಿಶ್ಚಿತ ಎಂದು ತೋರುತ್ತದೆ" ಎಂದು ಅಭಿಪ್ರಾಯಪಟ್ಟ. ವಾಕರ್‌ ತನ್ನ ಅಭಿಪ್ರಾಯವನ್ನು ಮಂಡಿಸುತ್ತಾ, "ಸರಿಸುಮಾರು ನಾಲ್ಕು ದಶಕಗಳ ಒಂದು ಅವಧಿಯಿಂದ ವಿದ್ವಾಂಸರನ್ನು ಗುಂಪುಗಳಾಗಿ ವಿಭಜಿಸಿರುವ ಮೂಲಭೂತ ವಿವಾದಾಂಶವೆಂದರೆ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ತೃಪ್ತಿಕರವಾಗಿರುವ ರೀತಿಯಲ್ಲಿರುವ ನಿಬಂಧನೆಗಳ ಮೇಲೆ, ಪೆಸಿಫಿಕ್‌ ವಲಯದಲ್ಲಿನ ಯುದ್ಧದಲ್ಲಿ ವಿಜಯವನ್ನು ಸಾಧಿಸಲು ಬಾಂಬ್‌ನ ಬಳಕೆಯು ಅವಶ್ಯಕವಾಗಿತ್ತೇ ಎಂಬುದೇ ಆಗಿದೆ" ಎಂದು ತಿಳಿಸಿದ."

ಬಾಂಬ್‌ ದಾಳಿಗಳ ಬೆಂಬಲಿಗರು ಸಾಮಾನ್ಯವಾಗಿ ಸಮರ್ಥಿಸುವುದೇನೆಂದರೆ, ಅವು ಜಪಾನಿಯರ ಶರಣಾಗತಿಗೆ ಕಾರಣವಾಗುವುದರ ಜೊತೆಗೆ, ಜಪಾನ್‌ನ ಯೋಜಿತ ಆಕ್ರಮಣದಲ್ಲಿ ಎರಡೂ ಪಕ್ಷಗಳಲ್ಲಿ ಬೃಹತ್‌ ಅನಾಹಿತಗಳನ್ನು ತಡೆದವು: ಅಂದರೆ, 1945ರ ಅಕ್ಟೋಬರ್‌ನಲ್ಲಿ ಕ್ಯೂಷು ಆಕ್ರಮಿಸಲ್ಪಡಬೇಕಿತ್ತು ಮತ್ತು ಅದಾದ ಐದು ತಿಂಗಳುಗಳ ನಂತರ ಹೊನ್ಷು ಆಕ್ರಮಿಸಲ್ಪಡಬೇಕಿತ್ತು. ಇಂಥದೊಂದು ಸನ್ನಿವೇಶ ಎದುರಾಗಿದ್ದರೆ, ಒಕ್ಕೂಟಕ್ಕೆ ಸೇರಿದ ಪಡೆಗಳು ಏನಿಲ್ಲವೆಂದರೂ 1 ದಶಲಕ್ಷದಷ್ಟು ಸಾವುನೋವುಗಳನ್ನು, ಮತ್ತು ಜಪಾನಿನ ಪಡೆಗಳು ದಶಲಕ್ಷಗಳಷ್ಟು ಸಾವುನೋವುಗಳನ್ನು ಕಾಣಬೇಕಾಗಿ ಬರುತ್ತಿತ್ತು ಎಂದು ಕೆಲವರು ಅಂದಾಜಿಸುತ್ತಾರೆ. ಬಾಂಬ್‌ ದಾಳಿಗಳನ್ನು ವಿರೋಧಿಸುವ ಇತರರು ವಾದಿಸುವ ಪ್ರಕಾರ, ಇದು ಅಷ್ಟುಹೊತ್ತಿಗಾಗಲೇ ಉಗ್ರವಾಗಿದ್ದ ಪರಮಾಣ್ವೇತರ ಬಾಂಬ್‌ ದಾಳಿ ಆಂದೋಲನದ ಒಂದು ಕೇವಲ ವಿಸ್ತರಣೆಯಾಗಿತ್ತು ಮತ್ತು, ಆದ್ದರಿಂದ ಇದು ಸೈನ್ಯಯೋಗ್ಯ ರೀತಿಯಲ್ಲಿ ಅನವಶ್ಯಕವಾಗಿತ್ತು, ಅಂತರ್ಗತವಾಗಿ ಅನೈತಿಕವಾಗಿತ್ತು, ಒಂದು ಯುದ್ಧ ಅಪರಾಧ ಅಥವಾ ಸಂಸ್ಥಾನದ ಭಯೋತ್ಪಾದನೆಯ ಒಂದು ಸ್ವರೂಪವಾಗಿತ್ತು.

ಇವನ್ನೂ ನೋಡಿ

  • ಹಿರೋಷಿಮಾ ಮೇಡನ್ಸ್‌
  • ಪರಮಾಣು ಬಾಂಬು ಬಲಿಪಶುಗಳಿಗೆ ಸಂಬಂಧಿಸಿದಂತಿರುವ ಹಿರೋಷಿಮಾ ರಾಷ್ಟ್ರೀಯ ಶಾಂತಿ ಸ್ಮಾರಕ ಭವನ
  • ಹಿರೋಷಿಮಾ ಪೀಸ್‌ ಮೆಮರಿಯಲ್‌
  • ಜಪಾನ್‌ ಮತ್ತು ಸಾಮೂಹಿಕ ನಾಶದ ಶಸ್ತ್ರಾಸ್ತ್ರಗಳು
  • ಜಪಾನಿಯರ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಸೂಚಿ
  • ನಾಗಸಾಕಿ ಪರಮಾಣು ಬಾಂಬು ವಸ್ತುಸಂಗ್ರಹಾಲಯ
  • ನಾಗಸಾಕಿ ಶಾಂತಿ ಉದ್ಯಾನವನ
  • ಕುಂಬಳಕಾಯಿ ಬಾಂಬು, ನಕಲಿ ಪರಮಾಣು ಬಾಂಬು
  • ರೈಯುಚಿ ಶಿಮೊಡಾ ಮತ್ತು ಇತರರು v. ಅಮೆರಿಕಾ ಸಂಯುಕ್ತ ಸಂಸ್ಥಾನ
  • IIನೇ ಜಾಗತಿಕ ಸಮರದ ಅವಧಿಯಲ್ಲಿನ ಯುದ್ಧತಂತ್ರದ ಬಾಂಬ್‌ ದಾಳಿ
  • ಟ್ಸುಟೊಮು ಯಮಾಗುಚಿ, ಎರಡೂ ದಾಳಿಗಳ ಪೈಕಿ "ಎರಡುಬಾರಿ ಉಳಿದುಕೊಂಡವ"
  • ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳು

ಆಕರಗಳು

ಹೆಚ್ಚಿನ ಓದಿಗಾಗಿ

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು 
ಕಪ್ಪು ಗುರುತುಕಾರಕವು ನಾಗಸಾಕಿ ಪರಮಾಣು ಬಾಂಬು ಸ್ಫೋಟದ "ಶೂನ್ಯಭೂಮಿ"ಯನ್ನು ಸೂಚಿಸುತ್ತದೆ.

ಬಾಂಬ್‌ ದಾಳಿಗಳು, ಬಾಂಬುಗಳ ಬಳಕೆಯ ಕುರಿತಾದ ತೀರ್ಮಾನ, ಮತ್ತು ಜಪಾನ್‌ನ ಶರಣಾಗತಿಗೆ ಸಂಬಂಧಪಟ್ಟ ಹೇರಳ ಪ್ರಮಾಣದ ಸಾಹಿತ್ಯವು ಲಭ್ಯವಿದೆ. ಈ ವಸ್ತು-ವಿಷಯದ ಕುರಿತಾದ ಪ್ರಮುಖ ಕೃತಿಗಳ ಒಂದು ಮಾದರಿಯನ್ನು ಈ ಕೆಳಕಂಡ ಮೂಲಗಳು ಒದಗಿಸುತ್ತವೆ.

  • The Committee for the Compilation of Materials on Damage Caused by the Atomic Bombs in Hiroshima and Nagasaki (1981). Hiroshima and Nagasaki: The Physical, Medical, and Social Effects of the Atomic Bombings. Basic Books. ISBN 046502985X.
  • Campbell, Richard H. (2005). "Chapter 2: Development and Production". The Silverplate Bombers: A History and Registry of the Enola Gay and Other B-29s Configured to Carry Atomic Bombs. McFarland & Company, Inc. ISBN 0-7864-2139-8.
  • Goldstein, Donald M; Dillon, Katherine V. & Wenger, J. Michael (1995). Rain of Ruin: A Photographic History of Hiroshima and Nagasaki. Brasseys, Washington & London. ISBN 1-57488-033-0.{{cite book}}: CS1 maint: multiple names: authors list (link)
  • Hein, Laura and Selden, Mark (Editors) (1997). Living with the Bomb: American and Japanese Cultural Conflicts in the Nuclear Age. M. E. Sharpe. ISBN 1-56324-967-9. ; CS1 maint: multiple names: authors list (link)
  • Hogan, Michael J. (1996). Hiroshima in History and Memory. Cambridge University Press. ISBN 0521562066.
  • Knebel, Fletcher and Bailey, Charles W. (1960). No High Ground. Harper and Row. ISBN 0313242216.{{cite book}}: CS1 maint: multiple names: authors list (link) ಎ ಹಿಸ್ಟರಿ ಆಫ್‌ ದಿ ಬಾಂಬಿಂಗ್ಸ್‌, ಅಂಡ್‌ ದಿ ಡಿಸಿಷನ್‌-ಮೇಕಿಂಗ್‌ ಟು ಯೂಸ್‌ ದೆಮ್‌.
  • Merton, Thomas (1962). Original Child Bomb: Points for meditation to be scratched on the walls of a cave. New Directions. ISBN B0007EVXX2 A look at the universal ramifications of this event.
  • Murakami, Chikayasu (2007). Hiroshima no shiroi sora ~The white sky in Hiroshima~. Bungeisha. ISBN 4286037088.
  • Ogura, Toyofumi (1948). Letters from the End of the World: A Firsthand Account of the Bombing of Hiroshima. Kodansha International Ltd. ISBN 4-7700-2776-1.
  • Pellegrino, Charles (2010). The Last Train from Hiroshima: The Survivors Look Back. Henry Holt and Co. ISBN 9780805087963.
  • Rhodes, Richard (1977). Enola Gay: The Bombing of Hiroshima. Konecky & Konecky. ISBN 1568525974.
  • Sekimori, Gaynor (1986). Hibakusha: Survivors of Hiroshima and Nagasaki. Kosei Publishing Company. ISBN 4-333-01204-X.
  • Sherwin, Martin J. (2003). A World Destroyed: Hiroshima and its Legacies. Stanford University Press. ISBN 0-8047-3957-9.
  • Sodei, Rinjiro (1998). Were We the Enemy? American Survivors of Hiroshima. Westview Press. ISBN 081333750X.
  • Sweeney, Charles; et al. (1999). War's End: An Eyewitness Account of America's Last Atomic Mission. Quill Publishing. ISBN 0380788748.

ಬಾಹ್ಯ ಕೊಂಡಿಗಳು

[[ವರ್ಗ:ಪರಮಾಣು ಸಂಗ್ರಾಮ]]

Tags:

ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಮ್ಯಾನ್‌ಹಾಟ್ಟನ್‌‌ ಯೋಜನೆಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಪಾಟ್ಸ್‌ಡ್ಯಾಂ ಅಂತಿಮ ಷರತ್ತುಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಹಿರೋಷಿಮಾಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಆಗಸ್ಟ್‌‌ 7–9ರ ಘಟನೆಗಳುಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ನಾಗಸಾಕಿಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಜಪಾನ್‌ ಮೇಲಿನ ಹೆಚ್ಚಿನ ಪರಮಾಣು ದಾಳಿಗಳಿಗೆ ಸಂಬಂಧಿಸಿದ ಯೋಜನೆಗಳುಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಜಪಾನ್‌ನ ಶರಣಾಗತಿ ಮತ್ತು ತರುವಾಯದ ಸ್ವಾಧೀನಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಚಿತ್ರಣ ಮತ್ತು ಸಾರ್ವಜನಿಕರ ಪ್ರತಿಕ್ರಿಯೆಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಪರಮಾಣು ಬಾಂಬು ದುರ್ಘಟನೆ ಆಯೋಗಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಹಿಬಾಕುಶಾಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಬಾಂಬ್‌ ದಾಳಿಗಳ ಕುರಿತಾದ ಚರ್ಚೆಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಇವನ್ನೂ ನೋಡಿಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಆಕರಗಳುಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಹೆಚ್ಚಿನ ಓದಿಗಾಗಿಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು ಬಾಹ್ಯ ಕೊಂಡಿಗಳುಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು

🔥 Trending searches on Wiki ಕನ್ನಡ:

ಕೊಡಗುಆವಕಾಡೊಜ್ಯೋತಿಬಾ ಫುಲೆಕೃಷ್ಣರಾಜಸಾಗರಕಿತ್ತೂರು ಚೆನ್ನಮ್ಮರಾವಣಮಾಸ್ತಿ ವೆಂಕಟೇಶ ಅಯ್ಯಂಗಾರ್ವಚನ ಸಾಹಿತ್ಯಮೈಸೂರು ಅರಮನೆಮಹಾಕವಿ ರನ್ನನ ಗದಾಯುದ್ಧಚಾಮರಾಜನಗರಕರ್ಮಧಾರಯ ಸಮಾಸಗೋಲ ಗುಮ್ಮಟಕಂಪ್ಯೂಟರ್ಸಂಗ್ಯಾ ಬಾಳ್ಯಾ(ನಾಟಕ)ವಾದಿರಾಜರುಶಾಸನಗಳುಕನ್ನಡದಲ್ಲಿ ಕಾದಂಬರಿ ಸಾಹಿತ್ಯಇಮ್ಮಡಿ ಪುಲಿಕೇಶಿಬಿಳಿ ರಕ್ತ ಕಣಗಳುಬಾಲಕಾರ್ಮಿಕಛತ್ರಪತಿ ಶಿವಾಜಿಸಾದರ ಲಿಂಗಾಯತಭಾರತದ ಸಂವಿಧಾನದ ೩೭೦ನೇ ವಿಧಿಕಲ್ಪನಾಭಾರತೀಯ ರಿಸರ್ವ್ ಬ್ಯಾಂಕ್ಸಂಯುಕ್ತ ಕರ್ನಾಟಕಕಾಮಸೂತ್ರಒಕ್ಕಲಿಗಹೊಯ್ಸಳೇಶ್ವರ ದೇವಸ್ಥಾನಮೋಕ್ಷಗುಂಡಂ ವಿಶ್ವೇಶ್ವರಯ್ಯಭೂತಕೋಲಕಾಂತಾರ (ಚಲನಚಿತ್ರ)ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕೃಷ್ಣರಾಜನಗರಎಂ. ಕೆ. ಇಂದಿರಒಡೆಯರ್ವೀರಪ್ಪನ್ಸೂರ್ಯವ್ಯೂಹದ ಗ್ರಹಗಳುಸ್ಕೌಟ್ ಚಳುವಳಿಕರ್ನಾಟಕದ ನದಿಗಳುಮಧುಮೇಹಜೋಗಶಿವರಾಮ ಕಾರಂತಮಾಸಶಿಶುಪಾಲಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸಂಭೋಗಜ್ವರಪರಮಾಣುಚಿತ್ರದುರ್ಗ ಜಿಲ್ಲೆಅಮೃತಧಾರೆ (ಕನ್ನಡ ಧಾರಾವಾಹಿ)ಶ್ರೀವಿಜಯವರದಕ್ಷಿಣೆತತ್ಪುರುಷ ಸಮಾಸಹಲ್ಮಿಡಿಪಿ.ಲಂಕೇಶ್ಭಾರತದ ಸಂವಿಧಾನ ರಚನಾ ಸಭೆಕರ್ನಾಟಕದ ಏಕೀಕರಣಎಳ್ಳೆಣ್ಣೆಭೂಮಿಸ್ವರಾಜ್ಯತೆನಾಲಿ ರಾಮ (ಟಿವಿ ಸರಣಿ)ಹತ್ತಿಜನಪದ ಕಲೆಗಳುವಿಷ್ಣುಹಾಸನಸಾಲ್ಮನ್‌ಭಗವದ್ಗೀತೆಜನ್ನಕ್ರಿಯಾಪದಹಲ್ಮಿಡಿ ಶಾಸನವಿಜಯನಗರಸಿಂಧನೂರುಸೂರ್ಯಕನ್ನಡ ಸಾಹಿತ್ಯ ಪರಿಷತ್ತುಗಾದೆಪ್ರೀತಿ🡆 More