ಸೂತ್ರದ ಬೊಂಬೆ

ಒಂದು ಸೂತ್ರದ ಬೊಂಬೆ ಎಂದರೆ ಅದೊಂದು ಯಥಾರೂಪಣದ ಕಲೆ ಪ್ರದರ್ಶಿಸುವ ನಿರ್ಜೀವ ವಸ್ತು ಅಥವಾ ಒಂದು ಚಲನಶೀಲತೆಯನ್ನು ಪ್ರತಿನಿಧಿಸುವ ಪ್ರತಿರೂಪಕ ಪ್ರದರ್ಶಕದ ವಸ್ತು ಅಥವಾ ಓರ್ವ ಸೂತ್ರದ ಕೀಲುಬೊಂಬೆಯಾಟಗಾರನ ಕುಶಲತೆಯಿಂದ ಮಾಡಿದ ಸೂತ್ರದ ಬೊಂಬೆ ಎನಿಸಿದೆ.

ಇದನ್ನು ಸೂತ್ರದ ಬೊಂಬೆಯಾಟದಲ್ಲಿ ಬಳಸಲಾಗುತ್ತದೆ,ಇದೊಂದು ಅಭಿನಯದ ಕಲೆ ಅಥವಾ ಅತ್ಯಂತ ಹಳೆಯ ಕಾಲದ ರಂಗಮಂಚದ ಮೇಲಿನ ನಾಟಕ ಕಲೆಯ ರೂಪವಾಗಿದೆ.

ಸೂತ್ರದ ಬೊಂಬೆ
ಸಾಂಪ್ರದಾಯಿಕ ಕೈ ಸೂತ್ರದ ಬೊಂಬೆಗಳು
ಸೂತ್ರದ ಬೊಂಬೆ
ವಿಯೆಟ್ನಾಮೀಸ್ ವಾಟರ್ ಪಪಿಟ್ಸ್

ಸೂತ್ರದ ಬೊಂಬೆಯಾಟದ ವಿಭಿನ್ನ ಪ್ರಕಾರಗಳು

ಸೂತ್ರದ ಬೊಂಬೆಯಾಟದಲ್ಲಿ ಹಲವಾರು ವಿಭಿನ್ನ ಪ್ರಕಾರಗಳಿವೆ. ವಿಶಾಲವಾದ ವ್ಯಾಪಕ ಶ್ರೇಣಿಯ ವಸ್ತುಗಳನ್ನು ಬಳಸಿ ಈ ಕೀಲುಬೊಂಬೆಗಳನ್ನು ತಯಾರಿಸಲಾಗುತ್ತದೆ.ಆಯಾ ವಸ್ತುಗಳನ್ನು ಅಗತ್ಯ ಆಕಾರ ಮತ್ತು ಉದ್ದೇಶಗಳ ಅವಲಂಬಿಸಿ ಅವುಗಳ ಉಪಯೋಗ ಮಾಡಲಾಗುತ್ತದೆ. ಇವುಗಳಲ್ಲಿ ಕೆಲವು ಅತ್ಯಂತ ಸಂಕೀರ್ಣ ಅಥವಾ ಅತ್ಯಂತ ಸಾಧಾರಣವಾದ ರಚನೆಗಳನ್ನು ಹೊಂದಿರುವ ಸಾಧ್ಯತೆ ಇದೆ.

  • ಅವುಗಳು ಕೆಲವು ವೇಳೆ ಎರಕ ಹೊಯ್ದ ವಸ್ತುಗಳೂ ಸಹ ಆಗಿರುತ್ತವೆ. ಲೇಖಕ ಆಸ್ಕರ್ ವಿಲ್ಡೆ ಅವರು ಹೀಗೆ ಬರೆಯುತ್ತಾರೆ, "ಸೂತ್ರದ ಬೊಂಬೆಗಳಲ್ಲಿ ಹಲವಾರು ಅನುಕೂಲಕರ ಸೌಕರ್ಯಗಳಿವೆ: ಅವುಗಳೆಂದೂ ವಾದ ಮಾಡಲಾರವು. ಅವುಗಳಿಗೆ ಕಲೆಯ ಬಗ್ಗೆ ಅಪಕ್ವ ದೃಷ್ಟಿಕೋನಗಳಿಲ್ಲ. ಅವುಗಳಿಗೆ ಖಾಸಗಿ ಬದುಕಿಲ್ಲ".

ಮೂಲಗಳು

  • ಅರಿಸ್ಟಾಟಲ್ ಅವರು ತಮ್ಮ ಕೃತಿ ಆನ್ ದಿ ಮೊಶನ್ ಆಫ್ ಎನಿಮಲ್ಸ್ ನಲ್ಲಿ ಈ ಸೂತ್ರದ ಬೊಂಬೆಗಳ ಬಗೆಗೆ ಚರ್ಚಿಸಿದ್ದಾರೆ. "ಪ್ರಾಣಿಗಳ ಚಲನವಲನವನ್ನು ಸ್ವಯಂಚಾಲಿತ ಸೂತ್ರದ ಬೊಂಬೆಗಳೊಂದಿಗೆ ಹೋಲಿಕೆ ಮಾಡಬಹುದು,ಇವುಗಳು ಸಣ್ಣ ಚಲನ ಶೀಲ ಶಕ್ತಿಯ ಮೇಲೆ ನಡೆಯುತ್ತವೆ;ಅದಕ್ಕೆ ತಕ್ಕಂತೆ ಸನ್ನೆ-ಸೂತ್ರಗಳನ್ನು ವ್ಯವಸ್ಥಿತವಾಗಿ ಬಳಸಬಹುದಾಗಿದೆ.ಒಂದು ಬೊಂಬೆಯಿಂದ ಮತ್ತೊಂದಕ್ಕೆ ಸೂತ್ರದ ಹುರಿ ದಾರಗಳಿಂದ ಸಂಪರ್ಕ ಕಲ್ಪಿಸಬಹುದು.
  • ಈ ಸೂತ್ರದ ಬೊಂಬೆಯಾಟವೇ ಮೂಲಸ್ವಭಾವದಲ್ಲಿ ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ ಮತ್ತು ಸೃಜನಶೀಲತೆಗೆ ಮಾಧ್ಯಮವಾಗಿದೆ,ಹೀಗಾಗಿ ಹಲವು ಸೂತ್ರದ ಬೊಂಬೆಗಳ ಕಂಪನಿಗಳು ಸೂತ್ರದ ಬೊಂಬೆಗಳ ಒಟ್ಟುಗೂಡಿಸುವಿಕೆಯ ಸ್ವರೂಪಗಳ ಮೇಲೆ ಕೆಲಸ ಮಾಡುತ್ತವೆ.ಇವುಗಳು ಬೊಂಬೆಗಳ ಆಟಕ್ಕೆ ಅನುಕೂಲವಾಗುವ ನೈಜ ವಸ್ತುಗಳನ್ನು ಸಂಯೋಜಿಸಿ ಅವುಗಳ ಪ್ರದರ್ಶನಗಳಿಗೆ ದೊರಕಿಸುತ್ತವೆ.
  • ಅವುಗಳೆಂದರೆ ಸಾಮಾನ್ಯವಾಗಿ "ಪ್ರದರ್ಶನಕ್ಕಾಗಿ ಸಂಯೋಜನಾ ವಸ್ತುಗಳ"ಒಂದುಗೂಡಿಸುವಿಕೆ,ಉದಾಹರಣೆಗಾಗಿ ಹರಿದ ಕಾಗದ ಚೂರುಗಳನ್ನು ಹಿಮ ಸುರಿದಂತೆ ತೋರಿಸಲು ಅಥವಾ ಒಂದು ಸಂಜ್ಞಾ ಫಲಕವನ್ನು ಆ ಕಲೆ ಪ್ರದರ್ಶನದ ಅಳವಡಿಕೆಗಳನ್ನು ವಿವರಿಸಲು ಅದರೊಳಗಿನ ಶಬ್ದಗಳ ಮೂಲಕ ಒಡಮೂಡಿಸಬಹುದು. ಈ ಕೆಳಗಿನವುಗಳನ್ನು ವರ್ಣಾನುಕ್ರಮದಲ್ಲಿ ಮೂಲವಾಗಿ ಮತ್ತು ಸಾಂಪ್ರಾದಾಯಿಕ ರೂಪಗಳ ಸೂತ್ರದ ಬೊಂಬೆ ಎಂದು ವಿಂಗಡಿಸಲಾಗಿದೆ:
  • ಕಪ್ಪು ಬೆಳಕಿನ ಸೂತ್ರದ ಬೊಂಬೆ - ಈ ಪ್ರಕಾರದ ಸೂತ್ರದ ಬೊಂಬೆಯಾಟದಲ್ಲಿ ನೇರಳಾತೀತ ವಿಕಿರಣಗಳ ಬೆಳಕನ್ನು ವೇದಿಕೆ ಮೇಲೆ ಅಳವಡಿಸಲಾಗಿರುತ್ತದೆ.ಇದರಿಂದಾಗಿ ಸೂತ್ರದ ಬೊಂಬೆಗಳ ಸೂತ್ರಧಾರರನ್ನು ತೆರೆಗೆ ಕಾಣದಂತೆ ಮತ್ತು ಬೊಂಬೆಗಳ ಬಣ್ಣಗಳು ಸ್ಪಷ್ಟವಾಗಿ ಕಾಣುವಂತೆ ಮಾಡಲಾಗುತ್ತದೆ. ಇಲ್ಲಿ ಸೂತ್ರಧಾರರು ಕಪ್ಪು ಹಿನ್ನಲೆಯಲ್ಲಿ ಕಪ್ಪು ಉಡುಪು ಧರಿಸಿರುತ್ತಾರೆ,ಹಿನ್ನಲೆಯಲ್ಲಿ ಕಪ್ಪು ಹಾಗು ಪೋಷಾಕುಗಳು ಕಪ್ಪು ಮಖಮಲ್ ಬಣ್ಣದ್ದೇ ಆಗಿರುವುದು ಮಹತ್ವದ ಸಂಗತಿಯಾಗಿದೆ.
  • ಈ ಸೂತ್ರದ ಬೊಂಬೆಯಾಟಗಾರರು ಹಲವು ಬಾರಿ ಬೆಳಕನ್ನು ಹಿನ್ನಲೆಯಲ್ಲಿ ಚೆಲ್ಲುವಂತೆ ಮಾಡಲು ಮತ್ತು ತಮ್ಮನ್ನು ತಾವು ಅಡಗಿಸಿಕೊಳ್ಳಲು ಕಪ್ಪು ಬೆಳಕುರಹಿತ ಹಿನ್ನಲೆಗೆ ವಾಲುತ್ತಾರೆ. ಪ್ರೇಕ್ಷಕರು ಗಮನಿಸುವ ಆಟವನ್ನು ನಿಖರವಾಗಿ ನಿಯಂತ್ರಿಸಲು ಕುಶಲ ಬೊಂಬೆಯಾಟದ ಸೂತ್ರ ಧಾರ ತನ್ನ ಸಂಪೂರ್ಣ ಜವಾಬ್ದಾರಿಯನ್ನು ತೋರಿಸಬೇಕಾಗುತ್ತದೆ.ಇದಕ್ಕೆ ಪೂರಕವಾಗಿ ಹಿನ್ನಲೆಯಲ್ಲಿನ ಕಪ್ಪು ಗಾಢತೆಯನ್ನು ಸ್ಪಷ್ಟಪಡಿಸಲು ಇದನ್ನು ಅಳವಡಿಸಬೇಕಾಗುತ್ತದೆ. ಎಲ್ಲಾ ಗಾತ್ರ ಮತ್ತು ಪ್ರಕಾರದ ಸೂತ್ರದ ಬೊಂಬೆಗಳನ್ನು ಸಮರ್ಥವಾಗಿ ಬಳಸಲಾಗುತ್ತದೆ.ಅತ್ಯಂತ ಥಳಥಳಿ ಸುವ ಶಕ್ತಿಯುತ ಬಣ್ಣ ಮತ್ತು ಬೊಂಬೆಗಳನ್ನು ಒಂದು ಮಾಂತ್ರಿಕ ವಿಧಾನದಲ್ಲಿ ಪ್ರದರ್ಶಿಸಲಾಗುತ್ತದೆ. ಈ ತೆರನಾದ ಬೊಂಬೆಯಾಟದ ಪರಿಕಲ್ಪನೆಯು ಮೂಲದಲ್ಲಿ ಬುನ್ರಾಕು ಸೂತ್ರದ ಬೊಂಬೆಯಾಟ ಎಂದು ಹೇಳಲಾಗುತ್ತದೆ.
  • ಬುನ್ರಾಕು ಸೂತ್ರದ ಬೊಂಬೆ – ಬುನ್ರಾಕು ಸೂತ್ರದ ಬೊಂಬೆಗಳು ಮರದಿಂದ-ಕೆತ್ತಿದ ಸೂತ್ರದ ಬೊಂಬೆಗಳಾಗಿವೆ.ಬೆಳಕಿನ ಆಕರ ಇರುವವರೆಗೆ ಇವುಗಳು ಥಳಥಳಿಸುತ್ತಿರುತ್ತವೆ. ಇವುಗಳನ್ನು ಸಾವಿರ ವರ್ಷಗಳ ಹಿಂದೆ ಜಪಾನ್‌ನಲ್ಲಿ ಅಭಿವೃದ್ಧಿಪಡಿಸಲಾಗಿ ದೆ. ಅಂದರೆ 16ನೆಯ ಶತಮಾನದ ಕೊನೆಯಲ್ಲಿ ಮೂರು ತಂತಿಗಳಿದ್ದ ಶಾಮಿಸೆನ್ ಸಂಗೀತದೊಂದಿಗೆ ಇವುಗಳ ಆಟಕ್ಕೆ ಮೆರಗು ತರಲಾಗುತ್ತಿತ್ತು.
  • ಸೂತ್ರಧಾರರ ಪೋಷಾಕು ಒಂದು ರಹಸ್ಯತೆ ತೋರಿದ್ದರೂ ಅಲ್ಲಿ ಅವರ"ನೆರಳು"ಗೋಚರವಾಗಿ ಬೊಂಬೆಯಾಟಕ್ಕೆ ಮತ್ತಷ್ಟು ಮೆರಗು ಬರುತ್ತಿತ್ತು. ಅದಲ್ಲದೇ ಬೊಂಬೆಗಳಿಗೂ ಒಂದು ಅವ್ಯಕ್ತ ಮಾಂತ್ರಿಕ ಶಕ್ತಿ ಬರುತ್ತಿತ್ತು. ಬುರ್ನಾಕು ಸಾಂಪ್ರದಾಯಿಕವಾಗಿ ಮೂರು ಸೂತ್ರಧಾರರನ್ನು ಆಟ ನಡೆಸಲು ಅನುವು ಮಾಡಿಕೊಡುತ್ತಿತ್ತು.ಆಗ ಗೊಂಬೆಗಳಿಗೆ ನೈಜತೆಯ 2/3 ರಷ್ಟು ಇರುತ್ತಿತ್ತು.
  • ಸಮಾರಂಭದ ಕಾರ್ನಿವಲ್ ಅಥವಾ ದೈಹಿಕ ಸೂತ್ರದ ಬೊಂಬೆ - ಸಾಮಾನ್ಯವಾಗಿ ಇಂತಹವುಗಳು ಎಲ್ಲರಿಗೂ ಸ್ಪಷ್ಟ ಗೋಚರವಾಗುವಂತೆ ನಿರ್ಮಿಸಲಾಗಿರುತ್ತದೆ. ಇಂತಹವುಗಳನ್ನು ಹೆಚ್ಚಾಗಿ ಪರೇಡ್ ಗಳಲ್ಲಿ ಬಳಸುತ್ತಾರೆ.(ಉದಾಹರಣೆಗೆ USA ನ ಮಿನ್ನೆಅಪೊಲಿಸ್ ನಲ್ಲಿನ ಮೇ ಡೇ ಪರೇಡ್)ಮೆರವಣಿಗೆ ಪ್ರದರ್ಶನಗಳಲ್ಲಿ ಇದನ್ನು ಸುಮಾರು ಸಾಮಾನ್ಯ ಮನುಷ್ಯನಷ್ಟು ಎತ್ತರದ ಭಂಗಿಗಳಲ್ಲಿ ಬಳಸುತ್ತಾರೆ. ಈ ಸಂದರ್ಭಗಳಲ್ಲಿ ಬೊಂಬೆಗಳ ದೇಹ,ಕಾಲುಗಳ ಚಲನೆಗೆ ಇನ್ನೊಬ್ಬ ಸೂತ್ರಧಾರನ ಅಗತ್ಯವಿರುತ್ತದೆ.
  • ಪರೇಡ್ ಅಥವಾ ಪಥಚಲನಗಳಲ್ಲಿ ಗೋಚರತೆ ಮತ್ತು ಒಳಗಿನ ವ್ಯಕ್ತಿಯ ವ್ಯಕ್ತಿತ್ವ ಪ್ರೇಕ್ಷಕನಿಗೆ ಅಷ್ಟೇನು ಮಹತ್ವದ್ದಾಗಿರುವುದಿಲ್ಲ. ಈ ಸೂತ್ರದ ಬೊಂಬೆಗಳು ವಿಶೇಷವಾಗಿ ದೊಡ್ಡ ಪ್ರಮಾಣದ ಮನರಂಜನೆಗೆ ಸಂಬಂಧಿಸಿರುತ್ತವೆ.ರಾತ್ರಿ ವೇಳೆಯ ಪರೇಡ್ ಗಳು ವಿಶ್ವಾದ್ಯಂತ ವಿವಿಧ ಡಿಸ್ನಿ ಸಂಕೀರ್ಣಗಳಲ್ಲಿ ಆಯೋಜಿತವಾಗಿರುವಂತಿರುತ್ತವೆ. ಇಂತಹದೇ ಸೂತ್ರದ ಬೊಂಬೆಗಳನ್ನು ದಿ ಲೈಯನ್ ಕಿಂಗ್ ಗಾಗಿ ಜೂಲಿ ಟಾಯ್ಮರ್ ಅವರು ವಿನ್ಯಾಸಗೊಳಿಸಿದ್ದರು.
  • ಚಿನ್ ಫೇಸ್ ಸೂತ್ರದ ಬೊಂಬೆ - ಈ ಪ್ರಕಾರದ ಬೊಂಬೆಗಳಲ್ಲಿ ಸೂತ್ರದ ಬೊಂಬೆಗಳ ಲಕ್ಷಣಗಳನ್ನು ಗೆರೆಗಳ ಮೂಲಕ ಅವುಗಳ ಮೇಲೆ ಬಿಡಿಸಲಾಗಿರುತ್ತದೆ,ಇಲ್ಲವೇ ರೇಖಾಚಿತ್ರವನ್ನು ಅದರ ಮುಖಕ್ಕೆ ಅಂಟಿಸಲಾಗಿರುತ್ತದೆ. ನೋಡಿ ಕಾಲ್ಚೀಲದ ಸೂತ್ರದ ಬೊಂಬೆ.
  • ಬೆರಳಿನ ಸೂತ್ರದ ಬೊಂಬೆ - ಇದೊಂದು ಒಂದೇ ಬೆರಳು ಅಥವಾ ಹೆಬ್ಬೆರಳ ಮೇಲೆ ಅಂಟಿಕೊಂಡಿರುವ ಅತ್ಯಂತ ಸರಳವಾದ ಬೊಂಬೆ. ಬೆರಳುಗಳ ಮೇಲಿನ ಸೂತ್ರದ ಬೊಂಬೆಗಳು ಯಾವುದೇ ಚಲನಶೀಲ ಭಾಗಗಳನ್ನು ಹೊಂದಿರುವುದಿಲ್ಲ.ಕೇವಲ ಟೊಳ್ಳಾದ ಸಿಲಿಂಡರ್ ಆಕಾರವನ್ನು ಬೆರಳುಗಳ ಮುಚ್ಚಲು ಸಾಧ್ಯವಾಗಿರುವಂತೆ ಕಾಣುತ್ತವೆ. ಇಂತಹ ಪ್ರಕಾರದ ಸೂತ್ರದ ಬೊಂಬೆಗೆ ಅಳವಡಿಕೆಗಳು ಪರಿಮಿತಿಗೊಳಪಟ್ಟಿರುತ್ತವೆ.ಬಹುತೇಕ ಇವುಗಳನ್ನು ಪೂರ್ವ-ಪ್ರಾಥಮಿಕ ಶಾಲೆ ಅಥವಾ ಶಿಶುವಿಹಾರಗಳ ಮಕ್ಕಳಿಗೆ ಕಥೆ ಹೇಳಲು ಈ ತಂತ್ರಗಾರಿಕೆ ಬಳಸ ಲಾಗುತ್ತದೆ.
  • ಕಾಲ್ಚೀಲದ ಸೂತ್ರದ ಬೊಂಬೆ - ಕಾಲ್ಚೀಲ ಬಳಸಿ ಈ ಸೂತ್ರದ ಬೊಂಬೆಯನ್ನು ತಯಾರಿಸಲಾಗಿರುತ್ತದೆ.ಕಾಲ್ಚೀಲಗಳಲ್ಲಿ ಕೈತೂರಿಸಿ ಇವುಗಳನ್ನು ಆಡಿಸಲಾಗುತ್ತದೆ. ಹೀಗೆ ಸೂತ್ರಧಾರನು ತನ್ನ ಕೈಯನ್ನು ಮೇಲೆ ಮತ್ತು ಕೆಳಗೆ ಮಾಡುವ ಮೂಲಕ ಬೊಂಬೆಗೆ ಪಾತ್ರಾಭಿನಯ ನೀಡಿ ಮಾತನಾಡುತ್ತಿರುವಂತೆ ಭಾಸವಾಗುವಂತೆ ಮಾಡುತ್ತಾನೆ. ಕೆಲವು ಬಾರಿ ಕಣ್ಣುಗಳು ಹಾಗು ಇನ್ನಿತರ ಲಕ್ಷಣಗಳನ್ನು ಸೇರಿಸುವ ಮೂಲಕ ಕಾಲ್ಚೀಲದ ಈ ಬೊಂಬೆ ಮತ್ತಷ್ಟು ನೈಜವಾಗುವಂತೆ ಮಾಡಲಾಗುತ್ತದೆ.
  • ಕಾಲ್ಚೀಲದ ಈ ಸೂತ್ರದ ಬೊಂಬೆಗಳು ಇನ್ನಿತರ ಸೂತ್ರದ ಬೊಂಬೆಗಳ ಪ್ರದರ್ಶನಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ.ಯಾಕೆಂದರೆ ಅವುಗಳನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ಉಪಯೋಗಿಸಬಹುದಾಗಿದೆ. ಅವುಗಳನ್ನು ಬಹುತೇಕ ಅಣಕ,ವಿಡಂಬನೆ ಅಥವಾ ಮಕ್ಕಳ ಮನೋಭಾವ ಪ್ರದರ್ಶಿಸುವ ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ.ಯಾಕೆಂದರೆ ಅವುಗಳು ಅಷ್ಟಾಗಿ ವೃತ್ತಿಪರವಲ್ಲ ಎಂದು ಹೇಳಲಾಗುತ್ತದೆ.
  • ಕೈ ಅಥವಾ ಕೈಗವಸಿನ ಸೂತ್ರದ ಬೊಂಬೆ - ಇಂತಹ ಸೂತ್ರದ ಬೊಂಬೆಗಳನ್ನು ಒಂದೇ ಕೈಯಿಂದ ಅವುಗಳೊಳಗೆ ತೂರಿಸಿ ಪ್ರದರ್ಶನ ಮಾಡಲಾಗುತ್ತದೆ. ಪಂಚ್ ಅಂಡ್ ಜೂಡಿ ಪ್ರಕಾರದ ಸೂತ್ರದ ಬೊಂಬೆಗಳು ಸುಪರಿಚಿತವಾಗಿವೆ. ದೊಡ್ಡ ಪ್ರಮಾಣದ ಬಹುತೇಕ ಪ್ರಕಾರಗಳಲ್ಲಿ ಸೂತ್ರಧಾರನು ಬೊಂಬೆಗಳ ತಲೆ ಮೇಲೆ ತನ್ನ ಕೈಯಿಟ್ಟು ಆಟವಾಡಿಸುತ್ತಾನೆ.ಹೀಗೆ ಬಾಯಿ ಹಾಗು ತಲೆ ಮತ್ತು ಸೂತ್ರದ ಬೊಂಬೆಯ ದೇಹವನ್ನು ನಿಯಂತ್ರಿಸಲು ಸೂತ್ರಧಾರನು ತನ್ನ ತೋಳನ್ನು ಮೇಲಕ್ಕೆತ್ತಿ ಇಡಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
  • ಸೂತ್ರದ ಬೊಂಬೆಯ ಇನ್ನಿತರ ಭಾಗಗಳು (ಪ್ರಧಾನವಾಗಿ ತೋಳುಗಳು,ಅಂದರೆ ವಿಶಿಷ್ಟ ಬದಲಾವಣೆಗಳನ್ನು ಕಣ್ಣು ರೆಪ್ಪೆಗಳ ಏರಿಳಿತವನ್ನೂ ತೋರಿಸಬಹುದು.ಇದನ್ನು ಕುಶಲತೆಯಿಂದ ಮಾಡಬಹುದಾಗಿದೆ;ಹೀಗೆ ಬಾಯಿ ತೆರೆಸುವುದು ಮತ್ತು ಮುಚ್ಚುವುದನ್ನೂ ಮಾಡಲು ಸಾಧ್ಯವಾಗು ತ್ತದೆ.)ಇಂತಹವುಗಳು ಸಾಮಾನ್ಯವಾಗಿ ಒಂದು ಕೈ ಅಳತೆಗಿಂತ ದೊಡ್ಡವು ಇರಲಾರವು. ಈ ಕಾಲ್ಚೀಲದ ಸೂತ್ರದ ಬೊಂಬೆಯು ವಿಶೇಷವಾಗಿ ಕೈಸೂತ್ರದ ಬೊಂಬೆಯಾಗಿದ್ದು ಕಾಲ್ಚೀಲದಿಂದ ಸಿದ್ದಪಡಿಸಲಾಗಿರುತ್ತದೆ.
  • ಮನುಷ್ಯ-ತೋಳಿನ ಸೂತ್ರದ ಬೊಂಬೆ-ಇದನ್ನು "ಈರ್ವರು-ಮನುಷ್ಯರ ಸೂತ್ರದ ಬೊಂಬೆ"ಅಥವಾ ಒಂದು "ಸಜೀವ-ಕೈಸೂತ್ರದ ಬೊಂಬೆ ಎನ್ನಲಾಗುತ್ತದೆ;ಇದು ಕೈಸೂತ್ರದ ಬೊಂಬೆಯಂತೆಯೇ ಇರುತ್ತದೆ,ಆದರೆ ಕೆಲಮಟ್ಟಿಗೆ ದೊಡ್ಡದಾಗಿರುತ್ತದೆ.ಹೀಗಾಗಿ ಇದಕ್ಕೆ ಇಬ್ಬರು ಸೂತ್ರಧಾರರ ಅಗತ್ಯವಿರುತ್ತದೆ. ಒಬ್ಬ ಸೂತ್ರಧಾರನು ಸೂತ್ರದ ಬೊಂಬೆಯ ತಲೆ ಮತ್ತು ಬಾಯಿಯ ಭಾಗದೊಳಗೆ ಒಂದು ಕೈಯನ್ನಿಡುತ್ತಾನೆ.
  • ಮತ್ತೊಬ್ಬ ಸೂತ್ರಬೊಂಬೆಯಾಟಗಾರ ಕೈಗವಸುಗಳು ಮತ್ತು ಸೂತ್ರದ ಬೊಂಬೆಗೆ ಅಳವಡಿಸಿದ ಹೊದಿಕೆಯ ತೋಳನ್ನು ಹಾಕಿರುತ್ತಾನೆ. ಆಗ ಬೊಂಬೆಯು ಆತನ ಕೈಯಾಡಿದಂತೆ ತನ್ನ ಚಲನೆಯ ಗತಿ ಮತ್ತು ಭಾವ ಸೂಚಕಗಳನ್ನು ಒದಗಿಸುತ್ತದೆ. ಈ ಪ್ರಕಾರದ ಕೈಗವಸು ಅಥವಾ ಕೈ ಸೂತ್ರದ ಬೊಂಬೆ ಮತ್ತು ತೆಳ್ಳನೆಯ ಕಂಬಿ ಬಳಸಿ ಬೊಂಬೆಯಾಟ ಪ್ರದರ್ಶಿಸುತ್ತಾರೆ.
  • ಲೈಟ್ ಕರ್ಟನ್ ಸೂತ್ರದ ಬೊಂಬೆಗಳ ಪ್ರದರ್ಶನಗಳಲ್ಲಿ ಹೆಚ್ಚಾಗಿ ಬೆಳಕಿನ ವ್ಯವಸ್ಥೆ ಬಳಸಲಾಗುತ್ತದೆ.ಪ್ರದರ್ಶನಗಳ ಸಣ್ಣ ಸಣ್ಣ ಭಾಗಗಳನ್ನು ವೈಭವೀಕರಿಸಲಾಗುತ್ತದೆ.ಬೊಂಬೆಗಳೇ ಪ್ರಧಾನವಾಗಿ ಗೋಚರಿಸುವಂತೆ ಮಾಡಿ ಬೊಂಬೆಯಾಟದ ಸೂತ್ರಧಾರರು ತೆರೆಯ ಮರೆಯಲ್ಲಿಯೇ ಉಳಿದುಕೊಳ್ಳುತ್ತಾರೆ. ಈ ಸೂತ್ರದ ಬೊಂಬೆಗಳು ರಂಗಮಂಚದ ಮೇಲೆ ಬೆಳಕುರಹಿತ ಹಿನ್ನಲೆಯ ಎರಡು ವಿಭಾಗಗಳಲ್ಲಿ ವಿಭಾಗಿಸಲ್ಪಡುತ್ತವೆ.
  • ಇನ್ನೊಂದೆಡೆ ಬೆಳಕಿನ ಒಂದು ಭಾಗದಲ್ಲಿ ಸೇರಿ ಬೆಳಕಿನ "ಪರದೆ"ಯನ್ನು ನಿರ್ಮಾಣ ಮಾಡಿ ಅಲ್ಲಿ ಒಂದೆಡೆ ಸೇರುವ ಆಕೃತಿಯನ್ನು ರೂಪಿಸಲು ಸಹಕಾರಿಯಾಗುತ್ತವೆ. ಈ ಸೂತ್ರದ ಬೊಂಬೆಗಳ ಆಡಿಸುವವರು ಕಪ್ಪು ಪೋಷಾಕು ಧರಿಸಿ ತೆರೆಯ ಹಿಂದೆಯೇ ಬೆಳಕಿರದ ಜಾಗೆಯಲ್ಲಿ ಇರುತ್ತಾರೆ.ಹೀಗೆ ಅವರು ಹಿಡಿದಿರುವ ಸೂತ್ರದ ಬೊಂಬೆಗಳು ಮಾತ್ರ ಬೆಳಕಿನ ಪರದೆಯ ಮೇಲೆ ರಂಗಮಂಚಕ್ಕೆ ಅಗತ್ಯಕ್ಕೆ ತಕ್ಕಂತೆ ಗೋಚರಿಸುತ್ತವೆ.
  • ಈ "ಬೆಳಕಿನ ಪರದೆಯ ಸೂತ್ರದ ಬೊಂಬೆಯು"ಒಂದು ಆಸರೆಯ ಕೊಡೆಯೆನಿಸಿದೆ.ಯಾವುದೇ ಬೊಂಬೆಯು ಅತ್ಯುತ್ತಮ ಬೆಳಕಿನೆಡೆಗೆ ಅದು ಬರುವಂತಾಗಲು ಮಂಚದ ಮೇಲೆ ಅದು ಇರಬೇಕಾಗುತ್ತದೆ.ಆದರೆ ಅದನ್ನು ನಿಯಂತ್ರಿಸುವವರು ಪರದೆಯ ಹಿಂದೆ ಅಂದರೆ ಕತ್ತಲೆ ಜಾಗದಲ್ಲಿರುತ್ತಾರೆ.ಹೀಗೆ ಬೊಂಬೆಗಳು ಮತ್ತು ಅವುಗಳ ಸೂತ್ರಧಾರರು ಪರಸ್ಪರ ವಿಭಜನೆಗೊಂಡು ಪ್ರದರ್ಶನಕ್ಕೆ ಅನುಕೂಲವಾಗುವುದೇ ಲೈಟ್ ಕರ್ಟನ್ ಪಪಿಟ್ ಎಂದು ಹೇಳಲಾಗುತ್ತದೆ.
  • ಸೂತ್ರದ ಬೊಂಬೆ ಅಥವಾ "ಸೂತ್ರಧಾರದ ಬೊಂಬೆ"-ಇವುಗಳನ್ನು ಹಲವು ಸೂತ್ರದ ದಾರಗಳೊಂದಿಗೆ ಬಂಧಿಸಲಾಗಿರುತ್ತದೆ.ಇಂತಹ ವಿವಿಧ ದಾರಗಳಿಂದ ಅವು ನಿಯಂತ್ರಿಸಲ್ಪಡುತ್ತವೆ.ಕೆಲವೊಮ್ಮೆ ಸೂತ್ರಧಾರ ಒಂದು ದಂಡಕ್ಕೆ ಇವೆಲ್ಲವುಗಳನ್ನು ತಗಲುಹಾಕಿ ಅವುಗಳ ಆಟ ಆಡಬಹುದು.ಈ ಕಂಬಿಯಂತಹ ಒಂದು ದಂಡವು ಸೂತ್ರಧಾರನಿಗೆ ಮೇಲೆ ಮತ್ತು ಕೆಳಗೆ ಕೋಲಿನಂತೆ ಇದನ್ನು ಚಲಿಸಲು ಅನುವು ಮಾಡಿಕೊಡುತ್ತದೆ.
  • ಈ ರೀತಿಯ ನಿಯಂತ್ರಣದ ಹಿಡಿಕೆಯು ಲಂಬವಾಗಿ ಅಥವಾ ಅಡ್ಡವಾಗಿಯೂ ಇರಬಹುದಾಗಿದೆ. ಆಟವಾಡಿಸಲು ಮೂಲದಲ್ಲಿ ದಾರಗಳನ್ನು ಅವುಗಳ ತಲೆ,ಬೆನ್ನು,ಕೈಗಳು (ತೋಳುಗಳ ನಿಯಂತ್ರಣಕ್ಕೆ)ಮತ್ತು ಮೊಣಕಾಲು ಮೇಲ್ಭಾಗದಲ್ಲಿ ಕಟ್ಟಿ ಅಂಟಿಸಲಾಗಿರುತ್ತದೆ. ಈ ಪ್ರಕಾರದ ಸೂತ್ರದ ಬೊಂಬೆಯಾಟವು ಒಂದು ಸಂಕೀರ್ಣತೆ ಹೊಂದಿದ ಪ್ರದರ್ಶನ ಕಲೆಯಾಗಿದೆ.
  • ಇದನ್ನು ಕಾರ್ಯಗತಗೊಳಿಸುವುದೂ ಸೂಕ್ಷ್ಮತೆಯಿಂದ ಕೂಡಿದೆ.ಇದರಲ್ಲಿ ದೊಡ್ಡ ಪ್ರಮಾಣದ ಕುಶಲತೆ ಅಡಗಿದೆ.ಯಾಕೆಂದರೆ ಬೆರಳುಗಳಿಂದ ಇಲ್ಲವೆ ಕೈಗವಸುಗಳಿಂದ ಬೊಂಬೆ ನಿಯಂತ್ರಣದ ವಿಧಾನಕ್ಕಿಂತ ಇದು ಭಿನ್ನವಾಗಿದೆ. ಈ ಸೂತ್ರದ ಬೊಂಬೆಯಾಟದ ಪ್ರದರ್ಶನವನ್ನು ವೊನ್ ಟ್ರಾಪ್ ಮಕ್ಕಳು ದಿ ಸೌಂಡ್ ಆಫ್ ಮ್ಯುಜಿಕ್ ನಲ್ಲಿ ಮೆರಿಯಾರೊಂದಿಗೆ ಸೂತ್ರದ ಬೊಂಬೆ ಆಟ ಪ್ರದರ್ಶನವನ್ನು ತೋರಿಸಿದರು.
  • ಮಾರೊಟ್ಟೆ - ಇದೊಂದು ಸರಳೀಕೃತ ಕಂಬಿ ಮೂಲಕ ಸೂತ್ರದ ಬೊಂಬೆಯಾಡಿಸುವ ವಿಧಾನವಾಗಿದೆ.ಇಲ್ಲಿ ಕೇವಲ ತಲೆ ಮತ್ತು /ಅಥವಾ ದೇಹಗಳು ಕಟ್ಟಲ್ಪಟ್ಟು ದಂಡದ ಮೇಲೆ ಇವುಗಳ ನಿಯಂತ್ರಣ ಮಾಡಲಾಗುತ್ತದೆ. ಮಾರೊಟ್ಟೆ ಎ ಮೇನ್ ಪ್ರೆನೆಂಟೆ ನಲ್ಲಿ ಸೂತ್ರಧಾರನ ಇನ್ನೊಂದು ತೋಳು ಬೊಂಬೆಯ ದೇಹವನ್ನು ನಿಯಂತ್ರಿಸುತ್ತದೆ.(ಇದು ಕೇವಲ ಬಟ್ಟೆ ಹೊದಿಕೆಯಾಗಿರುತ್ತದೆ.)
  • ಅಂದರೆ ಇಲ್ಲಿ ಸೂತ್ರದ ಬೊಂಬೆಯು ಸಮಯಕ್ಕೆ ತಕ್ಕಂತೆ ಆಟವಾಡುತ್ತದೆ. ಕೆಲವು ಮಾರೊಟ್ಟ್ಸ್ ಗಳು ಸಣ್ಣ ದಾರಗಳನ್ನು ಬೊಂಬೆಯೊಳಗಡೆ ಇರುವ ಕಡ್ಡಿಗೆ ಅಂಟಿಕೊಂಡು ಅದನ್ನು ಕೆಳಭಾಗದಿಂದಲೂ ನಿಯಂತ್ರಣವನ್ನು ಸಾಧ್ಯಗೊಳಿಸುತ್ತವೆ. ಹಿಡಿಕೆಯನ್ನು ಅದುಮಿದಾಗ ಬೊಂಬೆಯ ಬಾಯಿ ತೆರೆದುಕೊಳ್ಳುತ್ತದೆ.
  • ಆಬ್ಜೆಕ್ಟ್ ಪಪಿಟ್ - ಈ ಪ್ರಕಾರದ ಸೂತ್ರದ ಬೊಂಬೆಯನ್ನು ಎರಕದಿಂದ ಅಥವಾ ಪ್ರತಿದಿನ ಬಳಕೆಯ ವಸ್ತುಗಳಿಂದ ತಯಾರಿಸಲಾಗುತ್ತದೆ.ಕೆಲವೊಮ್ಮೆ ಪ್ರದರ್ಶನಗಳಲ್ಲಿಯೇ ಸಿದ್ದಪಡಿಸುವ ಉದಾಹರಣೆಗಳಿವೆ. (ನೋಡಿ ಇನ್ ಸ್ಟಂಟ್ ಪಪಿಟ್ಸ್ ಮೇಲೆ) ಅಥವಾ ಪೂರ್ವಭಾವಿಯಗಿ-ಸಿದ್ಧಪಡಿಸಿದ್ದು.
  • ಇಂತಹ ವಸ್ತು ಆಧಾರಿತ ಸೂತ್ರದ ಬೊಂಬೆಯು ಸೂತ್ರಧಾರನ ಕುಶಲತೆ ಮೇಲೆ ತನ್ನ ಗುಣಲಕ್ಷಣಗಳನ್ನು ತೋರಿಸುತ್ತದೆ.ಅದಲ್ಲದೇ ಅದರೊಂದಿಗೆ ಹೊರಡುವ ಶಬ್ದವು ಪ್ರೇಕ್ಷಕರಿಗೆ ಬೊಂಬೆ ಏನಾಗಬೇಕೆನ್ನುತ್ತಿದೆ ಎಂಬುದನ್ನು ವಿವರಿಸುತ್ತದೆ.(ಆದರೀಗ ಅದು ಅಸ್ತಿತ್ವದಲ್ಲಿಲ್ಲ)
  • ಪುಲ್ ಸ್ಟ್ರಿಂಗ್ ಪಪಿಟ್ -ಇದು ಸೂತ್ರದ ಬೊಂಬೆಯ ದಾರವನ್ನು ಎಳೆಯುವ ಮೂಲಕ ಬಟ್ಟೆಯಿಂದ ಮಾಡಿದ ಬೊಂಬೆಯನ್ನು ಸೂತ್ರಧಾರ ನಿಯಂತ್ರಿಸುತ್ತಾರೆ.ಬೊಂಬೆಯ ಬೆನ್ನ ಹಿಂದೆ ಇರುವ ಸೀಳುಗಂಡಿ ಮೂಲಕ ಆತ/ಆಕೆ ಅದರ ದಾರಗಳನ್ನು ಎಳೆಯುತ್ತಾರೆ.ಅಲ್ಲಿ ತಮ್ಮ ಕೈಯನ್ನು ತೂರಿಸುವ ಮೂಲಕ ಉಂಗುರದಂತಹ ಎಳೆಗಳನ್ನು ಜಗ್ಗುವ ಮೂಲಕ ಬೊಂಬೆ ಕೆಲವು ನಿಶ್ಚಿತ ಕಾರ್ಯಗಳನ್ನು ಮಾಡುತ್ತದೆ.ಕೈಬೀಸುವಿಕೆ ಅಥವಾ ಬಾಯಿ ಚಲನೆ ಮಾಡುತ್ತದೆ.
  • ಪುಶ್ ಪಪಿಟ್- ಈ ತಳ್ಳುವ ಎಳೆತದ ಸೂತ್ರದ ಬೊಂಬೆಯು ವಿಭಿನ್ನ ರೀತಿಯ ಗುಣಲಕ್ಷಣ ಹೊಂದಿರುತ್ತದೆ.ಕೆಳಭಾಗದಲ್ಲಿ ಈ ಬೊಂಬೆಗಳಿಗೆ ಸ್ಪ್ರಿಂಗ್ ನಂತಹ ಗುಂಡಿಗಳನ್ನು ಅಳವಡಿಸಿ ಸಂದರ್ಭಕ್ಕೆ ತಕ್ಕಂತೆ ಅದನ್ನು ವೇದಿಕೆಗೆ ಪರಿಚಯಿಸುತ್ತಾರೆ.ಈ ಗುಂಡಿ ಒತ್ತುವ ವರೆಗೂ ಅದು ತನ್ನ ಚಲನೆ ಆರಂಭಿಸುವುದಿಲ್ಲ. ಈ ಸೂತ್ರದ ಬೊಂಬೆಯು ತೂಗಾಡುತ್ತದೆ, ಕುಗ್ಗುತ್ತದೆ ಮತ್ತು ನಂತರ ಕುಸಿದು ಪತನವಾಗುತ್ತದೆ.ಅದಲ್ಲದೇ ಇದನ್ನು ನವೀನ ಶೈಲಿಯ ಆಟಿಕೆಯಂತೆ ಉಪಯೋಗಿಸಲಾಗುತ್ತದೆ.
  • ಪುಶ್-ಇನ್ ಅಥವಾ ಪೇಪರ್ ಪಪಿಟ್, ಅಥವಾ ಟಾಯ್ ತಿಯೆಟರ್ - ಇಂತಹ ಸೂತ್ರದ ಬೊಂಬೆಗಳನ್ನು ಕಾಗದಗಳನ್ನು ಕತ್ತರಿಸಿ ಕಾರ್ಡ್ ಬೋರ್ಡಿನ ರಟ್ಟುಗಳಿಗೆ ಅಂಟಿಸಲಾಗುತ್ತದೆ. ಇದನ್ನು ಅದರ ತಳದಲ್ಲಿ ಅಂಟಿಸಿ ನಂತರ ಪಪಿಟ್ ತಿಯೆಟರ್ ಮೇಲೆ ಪಕ್ಕಕ್ಕೆ ತಳ್ಳುವ ಮೂಲಕ ಪ್ರದರ್ಶನ ಮಾಡಲಾಗುತ್ತದೆ. ಈ ಸೂತ್ರದ ಬೊಂಬೆಗಳಿಗಾಗಿ ಹಾಳೆಗಳನ್ನು ತಯಾರಿಸಲಾಗುತ್ತದೆ,ಅದಕ್ಕಾಗಿ 19ನೆಯ ಶತಮಾನದಷ್ಟು ಹಿಂದಿನ ದೃಶ್ಯಾವಳಿಗಳನ್ನು ಮಕ್ಕಳ ಉಪಯೋಗಕ್ಕಾಗಿ ನೀಡಲಾಗುತ್ತದೆ.
  • ರಾಡ್ ಪಪಿಟ್ - ಈ ಪ್ರಕಾರದ ಸೂತ್ರದ ಬೊಂಬೆಯನ್ನು ಕಂಬಿಯೊಂದಕ್ಕೆ ಅದರ ತಲೆ ಆನಿಕೆಯಂತೆ ಅಂಟಿಸಲಾಗುತ್ತದೆ. ದೊಡ್ಡದಾದ ಕೈಗವಸೊಂದು ಆ ಕಂಬಿಯನ್ನು ಮುಚ್ಚಿ, ಸೂತ್ರದ ಬೊಂಬೆಗೆ ಕುತ್ತಿಗೆ ವರೆಗಿನ ಲಗತ್ತು ಮಾಡಲಾಗಿರುತ್ತದೆ. ಈ ರಾಡ್ ಸೂತ್ರದ ಬೊಂಬೆಗಳನ್ನು ಸೂತ್ರಧಾರನು ಬೊಂಬೆಯ ಕೈಗಳಿಗೆ ಲಗತ್ತಿಸಿದ ಕಂಬಿಯ ಎಳೆಗಳನ್ನು ಹಿಡಿತದಲ್ಲಿಟ್ಟುಕೊಂಡಿರುತ್ತಾನೆ.ದಾರಗಳನ್ನು ಸೂತ್ರದ ಬೊಂಬೆಗಳ ಕೈಗಳಿಗೆ ಜೋಡಿಸಲಾಗಿರುತ್ತದೆ.ರಾಡ್ ನ ಕೇಂದ್ರ ಭಾಗಕ್ಕೆ ಇವುಗಳನ್ನು ಅಂಟಿಸಿ ಅದರ ತಲೆ ಮುಖಾಂತರ ಆಡಿಸಲಾಗುತ್ತದೆ.
  • ಸೆನೊರ್ ವೆನ್ಸೆಸ್ - ಈ ಸೆನೊರ್ ವೆನ್ಸೆಸ್ ಪ್ರಕಾರದ ಬೊಂಬೆಗಳನ್ನು ಮನುಷ್ಯರ ಕೈಗಳ ಮೂಲಕ ಆಕೃತಿ ಮೂಡಿಸಿ ಮಾಡಲಾಗುತ್ತದೆ.ಅಂದರೆ ಬೊಂಬೆಯ ಗುಣಲಕ್ಷಣಗಳನ್ನು ಕೈಗಳ ಮೇಲೆಯೇ ಚಿತ್ರಿಸಿ ತೋರಿಸಲಾಗುತ್ತದೆ.ಹೀಗೆ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಬಾಯಿಯ ಆಕಾರ ಮಾಡಿ ಪ್ರದರ್ಶಿಸಲಾಗುತ್ತದೆ.
  • ಶಾಡೊ ಪಪಿಟ್ - ಈ ಪ್ರಕಾರದ ಚಿತ್ರಣದಲ್ಲಿ ಬೆಳಕಿಗೆ ವಿರುದ್ಧವಾಗಿ ಕೈ ಹಿಡಿದು ಬೆಳಕು ಚದುರಿದಂತೆ ಚಿತ್ರ ಚಲಿಸುವಂತೆ ದೃಶ್ಯ ನಿರ್ಮಾಣ ಮಾಡಲಾಗುತ್ತದೆ. ಸಮೂಹಕ್ಕೆ ಸೇರದ ಇದನ್ನು ಎರಡು-ಕೋನಗಳಲ್ಲಿ ಆಕಾರಗೊಳಿಸಲಾಗಿರುತ್ತದೆ.ಹೀಗೆ ಅದನ್ನು ನೆರಳು ಗೆರೆಗಳ ಮೂಲಕ ಆಕೃತಿ ಸೃಷ್ಟಿಸಲಾಗುತ್ತದೆ.ಇಲ್ಲವೆ ವಿವಿಧ ಮಟ್ಟಗಳಲ್ಲಿ ಚಿತ್ರಣದ ರೂಪಾಕೃತಿಯ ವಿವರಗಳನ್ನು ಮೂಡಿಸಲಾಗುತ್ತದೆ. ಕಟ್ಟೌಟ್ ಗಳಿಗೆ ರೂಪ ನೀಡಲು ವಿವಿಧ ಬಣ್ಣಗಳನ್ನು ನೀಡಲಾಗಿರುತ್ತದೆ.ಹೀಗೆ ವಿವಿಧ ಕೋನಗಳಲ್ಲಿ ವಿವಿಧ ಪರಿಣಾಮಗಳನ್ನು ಉಂಟು ಮಾಡಲು ಸಾಧ್ಯ ವಾಗುತ್ತದೆ.ಅಂದರೆ ಇಲ್ಲಿ (ಬೆಳಕಿನ ಮೂಲ)ವನ್ನು ಪರಿಗಣಿಸಿ ವಿಶದೀಕರಿಸಲಾಗುತ್ತದೆ. ಇವುಗಳಿಗೆ ಜವನೆಸ್ ಶಾಡೊ ಪಪಿಟ್ಸ್ (ವಾಯಂಗ್ ಕಿಲ್ಟ್ )ಗಳನ್ನು ಉತ್ತಮ ಉದಾಹರಣೆ ಎನ್ನಬಹುದು.
  • ಸೂಪರ್ ಮೇರಿಯೊಶನ್ - ಈ ಪದ್ದತಿಯನ್ನು ಗೆರ್ರಿ ಅಂಡರ್ಸನ್ ಆವಿಷ್ಕರಿಸಿದ್ದಾರೆ.ಇದನ್ನು ಅವರ ದೂರದರ್ಶನ ಸರಣಿ ಥಂಡರ್ ಬರ್ಡ್ಸ್ ನಲ್ಲಿ ವಿವರವಾಗಿ ಮಾಡಿದ್ದಾರೆ.ಎಲೆಕ್ಟ್ರಾನಿಕ್ ಶಕ್ತಿಯಿಂದ ಈ ಬೊಂಬೆಗಳ ಬಾಯಿಯಂತಹ ಅವಯವಗಳು ಅಲುಗಾಡಲು ಅನುಕೂಲ ಕಲ್ಪಿಸಲಾಗಿದೆ.ಹೀಗೆ ಈ ಸೂತ್ರದ ಬೊಂಬೆಗಳು ತುಟಿ-ಸಮನ್ವಯದ ಮೂಲಕ ಮಾತುಗಳನ್ನು ಉಚ್ಚರಿಸುವಂತೆ ಮಾಡಲಾಗಿದೆ. ಇಂತಹ ಸೂತ್ರದ ಬೊಂಬೆಗಳನ್ನುಇನ್ನೂ ಕುಶಲ ಸೂತ್ರಧಾರರೇ ದಾರಗಳ ಮೂಲಕ ನಿಯಂತ್ರಿಸುವ ಕಲೆ ಕರಗತ ಮಾಡಿಕೊಂಡಿರುತ್ತಾರೆ.
  • ಟಿಕೆಲ್ ಬಗ್- ಈ ಟಿಕೆಲ್ ಬಗ್ ಪ್ರಕಾರದ ಬೊಂಬೆಯನ್ನು ಮನುಷ್ಯರ ಕೈಯೊಳಗೇ ಮಾಡಿ ತೋರಿಸಲಾಗುತ್ತದೆ.ಇಲ್ಲಿ ನಾಲ್ಕು ಕಾಲುಗಳನ್ನು ತೋರಿಸಲಾಗುತ್ತದೆ.ಬೊಂಬೆಯ ಆಕೃತಿಯನ್ನು ಕೈ ಮೂಲಕವೇ ಪ್ರದರ್ಶಿಸುವ ಕಲೆ ಇದಾಗಿದೆ. ಮಧ್ಯದ ಬೆರಳನ್ನು ತಲೆಯಂತೆ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಒಂದು ಜೋಡಿ ಪಾದದಂತೆ ಪ್ರದರ್ಶಿಸಲಾಗುತ್ತದೆ.ಉಂಗುರದ ಬೆರಳು ಮತ್ತು ಕಿರುಬೆರಳನ್ನು ವಿರುದ್ಧ ದಿಕ್ಕಿನಲ್ಲಿನ ಇನ್ನೊಂದು ಜೊತೆ ಪಾದಗಳಂತೆ ಆಕೃತಿ ರೂಪಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
  • ಟೇಬಲ್ ಟಾಪ್ ಪಪಿಟ್ಸ್ - ಈ ಪ್ರಕಾರದ ಬೊಂಬೆಗಳಲ್ಲಿ ಒಂದು ಕಂಬಿ ಅಥವಾ ನೇರ ಸಂಪರ್ಕದ ಮೇಲೆ ಹಿಂದಿನಿಂದ ನಿಯಂತ್ರಿಸಲಾಗುತ್ತದೆ.ಇದು ಟೇಬಲ್ ಟಾಪ್ ಪ್ರಕಾರಕ್ಕೆ ಸಮರೂಪದಲ್ಲಿರುತ್ತದೆ. (ಅದೇ ಹೆಸರು ಇದಕ್ಕಿಡಲಾಗಿದೆ). ಇದು ಬುನ್ರಾಕು ವಿಧಾನದ ಹಲವು ಲಕ್ಷಣಗಳನ್ನು ಹೊಂದಿದೆ.
  • ವೆಂಟ್ರಿಲಕ್ವಿಸ್ಟ್ರಿಕ್ ಡಮ್ಮಿ - ಈ ಪ್ರಕಾರದ ಪ್ರತಿಕೃತಿ ಬೊಂಬೆಯನ್ನು ಯಕ್ಷಿಣಿಗಾರನು ಹೆಚ್ಚಾಗಿ ಬಳಸುತ್ತಾನೆ.ಪ್ರೇಕ್ಷಕರ ಗಮನವನ್ನು ತನ್ನ ಹಟುವಟಿಕೆಗಳತ್ತ ಸೆಳೆಯಲು ಆತ ಗಾರುಡಿಗನಂತೆ ಕಲ್ಪನಾಲೋಕ ಸೃಷ್ಟಿಸುತ್ತಾನೆ. ಇವುಗಳನ್ನು ಡಮ್ಮೀಸ್ ಎಂದು ಕರೆಯಲಾಗುತ್ತದೆ,ಯಾಕೆಂದರೆ ಇಂತಹ ಪ್ರತಿರೂಪಗಳು ಧ್ವನಿಯಾಗಲಾರವು. ಯಕ್ಷಿಣಿಗಾರ ರಚಿಸಿದ ಇಂತಹ ಪ್ರತಿರೂಪಗಳು ಗಾರುಡಿಗನ ಒಂದು ಕೈಯಿಂದ ನಿಯಂತ್ರಿಸಲ್ಪಡುತ್ತವೆ.
  • ವಾಟರ್ ಪಪಿಟ್ - ಇದೊಂದು ವಿಯೆಟ್ನಾಮ್ ನವರು ಮಾಡುವ ಪ್ರದರ್ಶನವಾಗಿದೆ ಅದನ್ನು "Múa rối nước".ಎನ್ನುತ್ತಾರೆ. Múa rối nước ಅಂದರೆ ಅಕ್ಷರಶಃ "ಈ ಸೂತ್ರದ ಬೊಂಬೆಗಳು ನೀರಿನ ಮೇಲೆ ನೃತ್ಯ ಮಾಡುತ್ತವೆ.", ಇಂತಹ ಪ್ರಕಾರವು ಸುಮಾರು ಹತ್ತನೆಯ ಶತಮಾನದ್ದೆಂದು ಹೇಳಲಾಗುತ್ತದೆ. ಇಂತಹ ಸೂತ್ರದ ಬೊಂಬೆಗಳನ್ನು ಮರದಿಂದ ನಿರ್ಮಿಸಲಾಗಿರುತ್ತದೆ;ಸೊಂಟದ-ಆಳದ ಕೊಳದಲ್ಲಿ ಪ್ರದರ್ಶನ ನಡೆಸಲಾಗುತ್ತದೆ. ಉದ್ದನೆಯ ಕಂಬಿಯೊಂದು ಇಂತಹ ಬೊಂಬೆಗಳ ನಿಯಂತ್ರಣ ಮಾಡುತ್ತದೆ.ನೀರಿನಲ್ಲಿ ಇವುಗಳ ಆಟವನ್ನು ಸೂತ್ರಧಾರರು ನಿಯಂತ್ರಿಸುತ್ತಾರೆ. ಈ ಸೂತ್ರದ ಬೊಂಬೆಗಳು ಆಗ ನೀರಿನ ಮೇಲೆ ತೇಲುತ್ತಿರುವಂತೆ ಭಾಸವಾಗುತ್ತದೆ. ಭತ್ತದ ಗದ್ದೆಗಳು ನೀರಿನಿಂದ ಆವೃತವಾದಾಗ ಗ್ರಾಮೀಣರು ಒಬ್ಬೊರಿಗೊಬ್ಬರು ಮನರಂಜಿಸಲು ಇಂತಹ ಆಟಕ್ಕೆ ಮುಂದಾಗುತ್ತಾರೆ.

ಇವನ್ನೂ ಗಮನಿಸಿ‌

  • ಎನಿಮೇಶನ್ ಅಥವಾ ಡಿಜಿಟಲ್ ಪಪಿಟ್. ಈ ಎನಿಮೇಶನ್ ಅಥವಾ ಪ್ರತಿಕೃತಿ ರಚನೆಯು ಸೂತ್ರದ ಬೊಂಬೆಯಾಟಕ್ಕಿಂತ ವಿಭಿನ್ನವಾಗಿದೆ. ಇಂತಹ ಎನಿಮೇಟೆಡ್ ಸೂತ್ರದ ಬೊಂಬೆಗಳನ್ನು ಅವಧಿ-ಮೂಲಾಧಾರದ ಮಾಧ್ಯಮಗಳಾದ ಚಲನಚಿತ್ರ ಅಥವಾ ವಿಡಿಯೊ ಗಳಲ್ಲಿ ವಿವಿಧ ಚಿತ್ರ ಸರಣಿಗಳ ಪ್ರದರ್ಶಿಸಲು ತಯಾರಿಸಲಾಗುತ್ತದೆ.ಚಿತ್ರಗಳು ಅಥವಾ ಚೌಕಟ್ಟಿನೊಳಗಿನವುಗಳನ್ನು ತೋರಿಸಲು ಇಲ್ಲವೆ ಆಕೃತಿಗಳ ಜೀವಂತಿಕೆ ತೋರಿಸಲು ಮಾಡಲಾಗುತ್ತದೆ. ಪಪಿಟ್ ಎನಿಮೇಶನ್, ಅಥವಾ"ಪಪಿಟೂನ್",ಇದನ್ನು ಸ್ಥಿರ ಚಿತ್ರಣ ದ ಚಿತ್ರೀಕರಣ, ಇಲ್ಲಿ ಸೂತ್ರದ ಬೊಂಬೆಗಳನ್ನು ಆಯಾ ಚೌಕಟ್ಟಿಗೆ ಅನುಗುಣವಾಗಿ ಮಾಡಲಾಗುತ್ತದೆ. ಅಥವಾ ಇದನ್ನು"ಸೂಪರ್ ಮೇರಿಯೊಶನ್ (ಮೇಲೆ ನೋಡಿ)

ಸೂತ್ರದ ಬೊಂಬೆಗಳ ಪ್ರದರ್ಶನಗಳ ವಿವರಣೆ Archived 2020-10-22 ವೇಬ್ಯಾಕ್ ಮೆಷಿನ್ ನಲ್ಲಿ.

  • ಕರಾಕುರಿ ನಿಂಗ್ಯೊ - ಯಾಂತ್ರೀಕೃತ ಸೂತ್ರದ ಬೊಂಬೆಗಳು ಅಥವಾ ಜಪಾನಿನಲ್ಲಿನ ಆಟೊಮೇಟ್ ವಿಧಾನ.
  • ಲ್ಯುಬೆಕ್ ಮ್ಯುಜಿಯಮ್ ಆಫ್ ತಿಯೆಟರ್ ಪಪಿಟ್ಸ್
  • ಪೆಲ್ಹಾಮ್ ಪಪಿಟ್ಸ್ - ಈ ಪ್ರಕಾರದ ಬೊಂಬೆಗಳನ್ನು ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ,ಇದನ್ನು ಬಾಬ್ ಪೆಲ್ಹಾಮ್ ಎಂಬುವವರು ಪ್ರಧಾನವಾಗಿ ದಾರಗಳುಳ್ಳ ಬೊಂಬೆ ತಯಾರಿಕೆಯಲ್ಲಿ ಪ್ರಸಿದ್ದರಾಗಿದ್ದಾರೆ. (ಮೇರಿಯೊನೆಟೆಸ್) ಇವರು UK ನಲ್ಲಿ 1947ರಿಂದ 1993 ರ ವರೆಗೆ ಇವುಗಳ ತಯಾರಿಕೆಯಲ್ಲಿ ಖ್ಯಾತನಾಮರಾಗಿದ್ದರು. ಮೂಲದಲ್ಲಿನ ಈ ಪೆಲ್ಹಾಮ್ ಪಪಿಟ್ ಕಂಪನಿಯನ್ನು ಹಳೆಯ ನೌಕರರೊಬ್ಬರು 2008 ರಲ್ಲಿ ಮರುಪರಿಷ್ಕರಿಸಿದರು.ಸದ್ಯ ಹೊಸ ಪ್ರಕಾರದ ಪೆಲ್ಹಾಮ್ ಪಪಿಟ್ ಗಳನ್ನು ಹಳೆಯ ಶೈಲಿಯೇ ಪ್ರತಿಧ್ವನಿಸುವಂತೆ ಸಿದ್ಧಪಡಿಸಲಾಗುತ್ತದೆ.
  • ಪರ್ಸಿಯನ್ ತಿಯೆಟರ್
  • ಪಪಿಟ್ರಿ - ಸಾಂಸ್ಕೃತಿಕ ಮತ್ತು ರಂಗಮಂಚದ ಮೇಲಿನ ಸೂತ್ರದ ಬೊಂಬೆ ಪ್ರದರ್ಶನಗಳ ವೈಖರಿ ತೋರಿಸುತ್ತದೆ.
  • ಪಂಚ್ ಅಂಡ್ ಜೂಡಿ
  • ರಾಜಸ್ಥಾನಿ ಪಪಿಟ್ - ದಾರದ ಸೂತ್ರದ ಬೊಂಬೆಗಳು,ಭಾರತದ ರಾಜ್ಯವಾದ ರಾಜಸ್ಥಾನದಲ್ಲಿ ತಮ್ಮ ಮೂಲವನ್ನು ಪಡೆದಿವೆ.
  • ದಾಸ್ ಸ್ಪಿಲ್ಹೌಸ್, ಪೂರ್ವ ಜರ್ಮನಿಯ ಟೆಲೆವಿಜನ್ ಶೊ
  • ಥಾಯಿ ಹ್ಯಾಂಡ್ ಪಪಿಟ್ಸ್ - ಅಂದರೆ ಥಾಯ್ಲೆಂಡ್ ನ ಒಂದು ಪ್ರಕಾರದ ಕೈ ಸೂತ್ರದ ಬೊಂಬೆಗಳಾಗಿವೆ

ಸೂತ್ರದ-ಬೊಂಬೆಗಳ ವಿಧಾನಕ್ಕೆ ಸಂಬಂಧವಲ್ಲದ ಶಬ್ದಾರ್ಥಗಳು

  • ಈ ಶಬ್ದ ಸೂತ್ರದ ಬೊಂಬೆ ಯನ್ನು ಸ್ಥಾಪಿತ ರಾಜಕೀಯ ನಾಯಕನೊಬ್ಬ ಬೆಂಬಲಿಸಿದ ಮತ್ತು ನಿಯಂತ್ರಣಕ್ಕೊಳಪಟ್ಟವನೆಂಬ ಅರ್ಥದಲ್ಲಿ ಹೇಳಲಾಗುತ್ತದೆ.ಆ ದೇಶದ ಅತ್ಯಧಿಕ ಅಧಿಕಾರದ ಬಲಿಷ್ಠ ವ್ಯಕ್ತಿಯ ಕೈಯಲ್ಲಿ ಈ ಸೂತ್ರ ಇರುತ್ತದೆ ಎಂದೂ ವ್ಯಾಖ್ಯಾನಿಸಲಾಗುತ್ತದೆ. ಆಧುನಿಕ ಯುಗದಲ್ಲಿ ಅದರಲ್ಲೂ ಈ ಪ್ರಜಾತಂತ್ರದಲ್ಲಿ ಇಂತಹ ಅರ್ಥಗಳಿಗೆ ವಿವರಣೆ ಸಲ್ಲ,ಯಾಕೆಂದರೆ ಇಲ್ಲಿ ಜನಾದೇಶ ಅದನ್ನು ಅಲ್ಲಗಳೆಯುತ್ತದೆ. ಇದನ್ನು ಬಾಹ್ಯ ಜಗತ್ತಿನಿಂದ ಯಾವುದೋ ಅಧಿಕಾರ ನಮ್ಮನ್ನು ಚಲಾಯಿಸುತ್ತದೆ ಎಂದಾಗ ಇದಕ್ಕೆ ಹೋಲಿಸಬಹುದಾಗಿದೆ.
  • ಆತ ಈ ಪ್ರಜಾತಂತ್ರ ವ್ಯವಸ್ಥೆಯ ಭಾಗವಲ್ಲದೇ ಇದ್ದು ಉದಾರತೆ ಇರದವನಾಗಿ ಇಂತಹ ಸೂತ್ರದ ಬೊಂಬೆಯಾಗಲು ಸಾಧ್ಯವೆಂದು ಹೇಳಲಾಗುತ್ತದೆ. "ಸೂತ್ರದ ಬೊಂಬೆಯ ಸರ್ಕಾರ" "ಸೂತ್ರದ ಬೊಂಬೆಯ ಆಡಳಿತ" ಮತ್ತು ಸೂತ್ರದ ಬೊಂಬೆಯಂತಿರುವ ರಾಜ್ಯ ಇತ್ಯಾದಿ ಅವಿಸಂವಿಧಾನಾತ್ಮಕ ಪದಗಳನ್ನು ಆಯಾ ಪ್ರದೇಶದ ಅಥವಾ ರಾಷ್ಟ್ರದ ಸರ್ಕಾರಕ್ಕಾಗಿ ಬಳಸಲಾಗುತ್ತದೆ.ಇದು ಬಾಹ್ಯ ಸರ್ಕಾರದ ಬಲದಿಂದ ಅಥವಾ ಬೆಂಬಲದಿಂದ ಸ್ಥಾಪಿತವಾಗಿದೆ ಎಂದಾಗ ಹೀಗೆ ಸೂಕ್ತವಲ್ಲದ ಪದ ಬಳಸುವ ವಾಡಿಕೆ ಇದೆ.(ನೋಡಿ ಕ್ವಿಸ್ಲಿಂಗ್ )
  • ಈ ಸೂತ್ರದ ಬೊಂಬೆ ಪದವನ್ನು ಒಬ್ಬನು ಇನ್ನೊಬ್ಬರ ಹತೋಟಿಯಲ್ಲಿದ್ದಾಗ ಬಳಸಲಾಗುತ್ತದೆ.(ಉದಾಹರಣೆಗೆ) ಅನುಚಿತ ಪ್ರಭಾವ,ಬುದ್ದಿವಂತಿಕೆಯ ಕೊರತೆ ಅಥವಾ ಯೋಗ್ಯತೆಯ ಕಡಿಮೆ ಮಟ್ಟ ಅಥವಾ ಅಷ್ಟಾಗಿ ಹೆಸರಿಲ್ಲದಿರುವಿಕೆಗೆ ಇದನ್ನು ಬಳಸುವುದು ರೂಢಿಯಲ್ಲಿದೆ. ವಿಜ್ಞಾನ ಕಾಲ್ಪನಿಕ ಲೋಕದ ಬರೆಹಗಾರ ರಾಬರ್ಟ್ ಎ.ಹಿನ್ಲಿನ್ ಅವರ ಕಾದಂಬರಿ ದಿ ಪಪಿಟ್ ಮಾಸ್ಟರ್ಸ್ ನಲ್ಲಿ ಪರಕೀಯ ಪರಾವಲಂಬಿಗಳು ಮಾನವ ಜೀವಿಗಳಿಗೆ ಅಂಟಿಕೊಳ್ಳುವುದಲ್ಲದೇ ತಮ್ಮ ಚಟುವಟಿಕೆಗಳನ್ನು ನಿಯಂತ್ರಿಸಲು ಸಮರ್ಥವಾಗಿರುತ್ತವೆ.
  • ಸೂತ್ರದ ಬೊಂಬೆ , ಪದವು ಸಾಮಾನ್ಯವಾಗಿ ಪ್ರೀತಿ ತುಂಬಿದ ನಡತೆ ಎಂದೂ ಹೇಳಬಹುದು,ಇದಕ್ಕೆ ಸಮಾನಾರ್ಥಕವಾಗಿ "ಪ್ರೀತಿ", "ಅಚ್ಚುಮೆಚ್ಚು", "ಮುದ್ದಿನ ಬೊಂಬೆ" ಅಥವಾ"ಅಕ್ಕರೆ" ಎಂಬುದಾಗಿ ಉಚ್ಛರಿಸಬಹುದು. ಇದನ್ನು ಪ್ರಾಸಂಗಿಕವಾಗಿ ಜನಪದ-ಮಾಂತ್ರಿಕತೆ ಮತ್ತು ವಾಮಾಚಾರಕ್ಕೆ ಬಳಸಲಾಗುತ್ತದೆ.ಇಲ್ಲಿ ವಿಶೇಷವಾಗಿ ವ್ಯಕ್ತಿಯೊಬ್ಬನನ್ನು ಈ ಪಪಿಟ್ ಸೂಚಿಸುತ್ತದೆ.ಆ ವ್ಯಕ್ತಿಯ ಪ್ರಾತಿನಿಧ್ಯದ ನಿರ್ಣಾಯಕವಾಗಿ,ಗುಣಮುಖದ ಸಂಕೇತವಾಗಿ,ಸಮೃದ್ಧಿಗಾಗಿ ಅಥವಾ ನಿರ್ಬಂಧಕಗಳ ಲೌಕಿಕತೆಗಳಿಗಾಗಿ ಬಳಸುತ್ತಾರೆ.

ಟಿಪ್ಪಣಿಗಳು

ಉಲ್ಲೇಖಗಳು‌‌

  • ಘೋಷ್, ಎಸ್.; ಮಾಸೆಯ್, ರೆಗಿನಾಲ್ಡ್, ಅಂಡ್ ಬ್ಯಾನರ್ಜಿ, ಉತ್ಪಲ್ ಕುಮಾರ್, ಇಂಡಿಯನ್ ಪಪಿಟ್ಸ್: ಪಾಸ್ಟ್, ಪ್ರೆಜೆಂಟ್ ಅಂಡ್ ಫ್ಯೂಚರ್ , ಅಭಿನವ್ ಪಬ್ಲಿಕೇಶನ್ಸ್, 2006. ISBN 0688168949
  • ಬೆಲ್, ಜಾನ್, ಸ್ಟ್ರಿಂಗ್ಸ್, ಹ್ಯಾಂಡ್ಸ್, ಶಾಡೊಸ್: ಎ ಮಾಡೆರ್ನ್ ಪಪಿಟ್ ಹಿಸ್ಟ್ರಿ , ವಯನೆ ಸ್ಟೇಟ್ ಯುನ್ವರ್ಸಿಟಿ ಪ್ರೆಸ್, 2000. ISBN 0688168949

ಪುಸ್ತಕಗಳು ಮತ್ತು ಲೇಖನಗಳು

  • Baird, Bil (1966). The Art of the Puppet. Plays. ISBN 10 0823800679. ;
  • Beaton, Mabel (1948). Marionettes: A Hobby for Everyone. New York. CS1 maint: location missing publisher (link)
  • Bell, John (2000). Strings, Hands, Shadows: A Modern Puppet History. Detroit, USA: Detroit Institute of Art. ISBN 0 89558 156 6.
  • Binyon, Helen (1966). Puppetry Today. London: Studio Vista Limited.
  • Choe, Sang-su (1961). A Study of the Korean Puppet Play. The Korean Books Publishing Company Ltd.
  • Currell, David (1985). The Complete Book of Puppetry. London: A & C Black (Publishers) Ltd. ISBN 0-7136-2429-9.
  • Currell, David (1992). An Introduction to Puppets and Puppetmaking. London: New Burlington Books, Quintet Publishing Limited. ISBN 1 85348 389 3.
  • Dubska, Alice (2006). Czech Puppet Theatre. Prague: Theatre Institute. ISBN 80 7008 199 6.
  • Dugan, E.A. (1990). Emotions in Motion. Montreal, Canada: Galerie Amrad. ISBN 0 9693081 5 9. ;
  • Feeney, John (1999). Puppet. Saudi Aramco World.
  • Flower, Cedric (1983). Puppets: Methods and Materials. Worcester, Massachusetts: Davis Publications, Inc.
  • Latshaw, George (2000). The Complete Book of Puppetry. London: Dover Publications. ISBN 978-048640-952-8.
  • Lindsay, Hilaire (1976). The First Puppet Book. Leichardt, NSW, Australia: Ansay Pty Ltd. ISBN 0 909245. ;
  • Mulholland, John (1961). Practical Puppetry. London: Herbert Jenkins Ltd.
  • Richmond, Arthur (1950). Remo Bufano's Book of Puppetry. New York: The Macmillan Company.
  • Robinson, Stuart (1967). Exploring Puppetry. London: Mills & Boon Limited.
  • Rump, Nan (1996). Puppets and Masks: Stagecraft and Storytelling. Worcester, Massachusetts: Davis Publications.
  • Sinclair, Anita (1995). The Puppetry Handbook. Richmond, Victoria, Australia: Richard Lee Publishing. ISBN 0 646 39063 5.
  • Shellstein, Sheldon (April 2006). "The Rise Of Shoop: the meteoric rise of Sheldon". Kid Time Press. ;
  • Suib, Leonard (1975). Marionettes Onstage!. New York: Harper & Row, Publishers. ISBN 0 06 014166 2.

Tags:

ಸೂತ್ರದ ಬೊಂಬೆ ಯಾಟದ ವಿಭಿನ್ನ ಪ್ರಕಾರಗಳುಸೂತ್ರದ ಬೊಂಬೆ ಮೂಲಗಳುಸೂತ್ರದ ಬೊಂಬೆ ಇವನ್ನೂ ಗಮನಿಸಿ‌ಸೂತ್ರದ ಬೊಂಬೆ ಸೂತ್ರದ-ಬೊಂಬೆಗಳ ವಿಧಾನಕ್ಕೆ ಸಂಬಂಧವಲ್ಲದ ಶಬ್ದಾರ್ಥಗಳುಸೂತ್ರದ ಬೊಂಬೆ ಟಿಪ್ಪಣಿಗಳುಸೂತ್ರದ ಬೊಂಬೆ ಉಲ್ಲೇಖಗಳು‌‌ಸೂತ್ರದ ಬೊಂಬೆ ಪುಸ್ತಕಗಳು ಮತ್ತು ಲೇಖನಗಳುಸೂತ್ರದ ಬೊಂಬೆರಂಗಮಂಟಪ

🔥 Trending searches on Wiki ಕನ್ನಡ:

ತಾಳಗುಂದ ಶಾಸನವೆಂಕಟೇಶ್ವರ ದೇವಸ್ಥಾನಹಸ್ತ ಮೈಥುನಕನಕದಾಸರುಸ್ಮಾರಕಶನಿಒಡೆಯರ್ಭಾರತದಲ್ಲಿ ಕೃಷಿಗೌತಮಿಪುತ್ರ ಶಾತಕರ್ಣಿಪ್ರಜ್ವಲ್ ದೇವರಾಜ್ತಾಳೀಕೋಟೆಯ ಯುದ್ಧನೊಳಂಬಬನವಾಸಿಅರಿಸ್ಟಾಟಲ್‌ಮಲ್ಟಿಮೀಡಿಯಾಎಕರೆಕಾಂತಾರ (ಚಲನಚಿತ್ರ)ಚನ್ನವೀರ ಕಣವಿವ್ಯವಸಾಯಜಾಗತೀಕರಣಪರಿಸರ ರಕ್ಷಣೆಏಕಾದಶಿಹಾವು ಕಡಿತಚಿಲ್ಲರೆ ವ್ಯಾಪಾರಡಿಸೆಂಬರ್ಅಕ್ಬರ್ಕರ್ನಾಟಕ ಸಂಗೀತಕನ್ನಡ ರಂಗಭೂಮಿಕರ್ನಾಟಕದ ಜಿಲ್ಲೆಗಳುಹಿಂದೂ ಧರ್ಮವಾಲಿಬಾಲ್ತಾಳೆಮರತೆನಾಲಿ ರಾಮಕೃಷ್ಣಚಿಕ್ಕಮಗಳೂರುಟಿಪ್ಪು ಸುಲ್ತಾನ್ದರ್ಶನ್ ತೂಗುದೀಪ್ವೃತ್ತಪತ್ರಿಕೆಇತಿಹಾಸಕುಮಾರವ್ಯಾಸಗೋಕಾಕ್ ಚಳುವಳಿಮತದಾನಸುಮಲತಾಓಂ ನಮಃ ಶಿವಾಯರೈತಮೆಂತೆತಲಕಾಡುಡೊಳ್ಳು ಕುಣಿತತೆರಿಗೆತ್ಯಾಜ್ಯ ನಿರ್ವಹಣೆಸವದತ್ತಿಮದುವೆಸಿಂಗಾರಿ ಬಂಗಾರಿಮೌರ್ಯ ಸಾಮ್ರಾಜ್ಯವಿಷ್ಣುಮಾರ್ಕ್ಸ್‌ವಾದಭಾಷೆಭಾರತದ ಸಂವಿಧಾನಮಾರಣಕಟ್ಟೆ - ಬ್ರಹ್ಮಲಿಂಗೇಶ್ವರಜಾಬಾಲಿಶೈಕ್ಷಣಿಕ ಮನೋವಿಜ್ಞಾನಕರ್ನಾಟಕದ ರಾಜ್ಯಪಾಲರುಗಳ ಪಟ್ಟಿತಾಪಮಾನಜಿ.ಪಿ.ರಾಜರತ್ನಂನಂಜನಗೂಡುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವಾರ್ತಾ ಭಾರತಿರಾಘವಾಂಕರಕ್ತದೊತ್ತಡವೃದ್ಧಿ ಸಂಧಿಕರ್ಣಾಟ ಭಾರತ ಕಥಾಮಂಜರಿಕೃಷ್ಣದೇವರಾಯಯಣ್ ಸಂಧಿಕನ್ನಡ ಚಳುವಳಿಗಳುಮುದ್ದಣವಿವಾದಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ🡆 More