ಸ್ಮಾರಕ

ಸ್ಮಾರಕ ವು , ಬಹಿರಂಗವಾಗಿ ಒಬ್ಬ ವ್ಯಕ್ತಿಯನ್ನು ಪ್ರಶಂಸಿಸಲು ಅಥವಾ ಮುಖ್ಯವಾದ ಘಟನೆಯನ್ನು ನೆನೆಪಿಸಿಕೊಳ್ಳಲು ಅಥವಾ ಒಂದು ಸಾಮಾಜಿಕ ಸಮೂಹದ ಹಿಂದಿನ ಘಟನೆಗಳ ನೆನಪಿನ ಸಂದರ್ಭದಲ್ಲಿ ಆ ಗುಂಪಿಗೆ ಪ್ರಮುಖವಾಗಿದ್ದ ಘಟನೆಯನ್ನು ಪ್ರಖ್ಯಾತಗೊಳಿಸಲು ಕಟ್ಟುವಂತಹ ಒಂದು ಬಗೆಯ ರಚನಾ ವಿನ್ಯಾಸವಾಗಿದೆ .

ಇವುಗಳನ್ನು ನಗರಗಳ ಅಥವಾ ಸ್ಥಳಗಳ ಸೊಬಗು ಹೆಚ್ಚಿಸಲು ಬಳಸಲಾಗುತ್ತದೆ. ವಾಷಿಂಗ್ ಟನ್ D.C., ನ್ಯೂಡೆಲ್ಲಿ ಹಾಗು ಬ್ರಾಸಿಲಿಯ ಮೊದಲಾದ ಯೋಜಿಸಲ್ಪಟ್ಟ ನಗರಗಳು ಸ್ಮಾರಕಗಳ ಸುತ್ತಮುತ್ತಲು ನಿರ್ಮಾಣಗೊಂಡಿವೆ. ವಾಷಿಂಗ್ ಟನ್ ನ ಸ್ಮಾರಕ ವಿರುವ ಸ್ಥಳವು(ಅಲ್ಲದೇ ಲಂಬವಾಗಿರುವ ಜ್ಯಾಮಿತಿಯಾದರೂ ಭೌತಿಕ ವಿವರಣೆಯಲ್ಲ ) ಜಾರ್ಜ್ ವಾಷಿಂಗ್ ಟನ್ ಗೆ ಸೇರಿಕೊಳ್ಳುವ ಮೊದಲು, ನಗರದಲ್ಲಿ ಸಾರ್ವಜನಿಕ ಸ್ಥಳಗಳನ್ನು ವ್ಯವಸ್ಥಿತ ಗೊಳಿಸುವುದಕ್ಕೆಂದು ಹುಟ್ಟಿಕೊಂಡಿತು. ಹಳೆಯ ನಗರಗಳು , ಮೊದಲೇ ಪ್ರಮುಖವಾಗಿರುವಂತಹ ಸ್ಥಳಗಳಲ್ಲಿ ಇರುವಂತಹ ಅಥವಾ ಒಂದರ ಮೇಲೆ ಬೆಳಕುಚೆಲ್ಲಲು ಪುನರ್‌ವಿನ್ಯಾಸಗೊಳಿಸಿದಂತಹ ಸ್ಮಾರಕಗಳನ್ನು ಹೊಂದಿವೆ. ಶೆಲ್ಲಿ ಅವನ ಜನಪ್ರಿಯ ಕಾವ್ಯವಾದ"ಒಝೆಮೆಂಡಿಯಾಸ್‌" ("ಲುಕ್ ಆನ್ ಮೈ ವರ್ಕ್ಸ್ , ಯೇ , ಮೈಟಿ, ಅಂಡ್ ಡಿಸ್‌ಪೇರ್‌! ")ನಲ್ಲಿ ಹೇಳಿರುವ ಪ್ರಕಾರ, ಪ್ರಭಾವಬೀರುವುದು ಹಾಗು ವಿಸ್ಮಯವನ್ನು ಉಂಟುಮಾಡುವುದು ಸ್ಮಾರಕಗಳ ಮುಖ್ಯ ಉದ್ದೇಶವಾಗಿದೆ. ಇಂಗ್ಲೀಷ್ನಲ್ಲಿ "ಮಾನ್ಯುಮೆಂಟಲ್" ಎಂಬ ಪದವನ್ನು ಯಾವಾಗಲೂ ಅಸಾಧಾರಣವಾದ ಗಾತ್ರವನ್ನು ಹಾಗು ಶಕ್ತಿಯನ್ನು ತೋರಿಸಲು ಸೂಚಿಸಲಾಗುತ್ತದೆ. ಈ ಪದವನ್ನು ಲ್ಯಾಟೀನ್ ನ "ಮೊನೆರೆ" ಯಿಂದ ತೆಗೆದುಕೊಳ್ಳಲಾಗಿದೆ. ಇದು 'ನೆನಪುಮಾಡಿಕೊಳ್ಳುವುದು' ಅಥವಾ 'ಎಚ್ಚರಿಸುವುದು ಎಂಬ ಅರ್ಥ ಕೊಡುತ್ತದೆ.'

ಸ್ಮಾರಕ
ಪಾರ್ಥೆನಾನ್ ,ಪ್ರಾಚೀನ ಗ್ರೀಕ್ ನ ಸಹಿಷ್ಣುತೆಯ ಹಾಗು ಅಥೇನಿಯನ್ ಪ್ರಜಾಪ್ರಭುತ್ವದ ಸಂಕೇತ(ಗುರುತು)ವಾಗಿದೆ, ಅಲ್ಲದೇ ಪ್ರಪಂಚದ ಅತ್ಯದ್ಭುತ ಸಾಂಸ್ಕೃತಿಕ ಸ್ಮಾರಕಗಳಲ್ಲಿ ಒಂದಾಗಿದೆ.
ಸ್ಮಾರಕ
ಭಾರತದಲ್ಲಿರುವ ತಾಜ್ ಮಹಲ್, ಇದು ಮೊಘಲ್ ಚಕ್ರವರ್ತಿ ಶಹಜಾನ್ ತನ್ನ ಪತ್ನಿ ಅರ್ಜುಮನ್ ಬಾನು ಬೇಗಮ್ ನ ನೆನಪಿಗಾಗಿ ಕಟ್ಟಿಸಿರುವ ಭವ್ಯ ಸಮಾಧಿಯಾಗಿದೆ.
ಸ್ಮಾರಕ
ಅಲ್ ಮಡ ದಲ್ಲಿರುವ ಕ್ರಿಸ್ಟೋ-ರೇ (ಕ್ರಿಸ್ಟ್ ದಿ ಕಿಂಗ್ ) ,ಪ್ರಪಂಚದಲ್ಲಿರುವ ಅತ್ಯಂತ ಎತ್ತರದ ಸ್ಮಾರಕಗಳಲ್ಲಿ ಬ್ರಸಿಲ್ ಕೂಡ ಒಂದಾಗಿದೆ.
ಸ್ಮಾರಕ
ಐಫೆಲ್ ಗೋಪುರವು ಪ್ಯಾರೀಸ್ ಹಾಗು ಫ್ರಾನ್ಸ್ ನಲ್ಲಿರುವ ಅತ್ಯಂತ ಪ್ರಖ್ಯಾತ ಸ್ಮಾರಕವಾಗಿದೆ.
ಸ್ಮಾರಕ
ಕೊಸಸಿಯೋಸ್ಕೊ ದಿಬ್ಬ, ಕ್ರಾಕೌ ,ಪೋಲೆಂಡ್ ನಲ್ಲಿ ಟಡೆಯೂಸ್ಜ್ ಕೊಸಸಿಯೋಸ್ಕೊ ನ ನೆನಪಿಗಾಗಿ ನಿರ್ಮಿಸಲಾದ ದಿಬ್ಬವಾಗಿದೆ.

ಅವುಗಳ ಕಾಲ,ಗಾತ್ರ, ಆಕಾರ ಅಥವಾ ಐತಿಹಾಸಿಕ ಮಹತ್ವಗಳನ್ನು ಗಮನಿಸಿ ನಿರ್ಮಿಸುವಂತಹ ಪ್ರಾಯೋಗಿಕ ರಚನಾ ವಿನ್ಯಾಸಗಳೂ ಕೂಡ ಸ್ಮಾರಕಗಳೆಂದು ಕರೆಯಲ್ಪಡುತ್ತವೆ. ಚೀನಾದ ಮಹಾ ಗೋಡೆಯ ವಿಷಯದಲ್ಲಿ ನಡೆದಂತೆ ಶ್ರೇಷ್ಠ ಕಾಲ ಹಾಗು ಆಕಾರದ ಕಾರಣ ಇವು ನಿರ್ಮಿಸಲ್ಪಡುತ್ತವೆ ,ಅಥವಾ ಫ್ರಾನ್ಸ್ ನ ಒರಡೋರ್-ಸುರ್-ಗ್ಲೇನ್ನ ಹಳ್ಳಿಗಳಲ್ಲಿ ನಡೆದಂತಹ ಮಹತ್ವದ ಘಟನೆಗಳು ನಡೆಯುವುದರಿಂದಲೂ ಇವು ಪ್ರತಿಷ್ಟಾಸಲ್ಪಡುತ್ತವೆ. ಹಲವು ರಾಷ್ಟ್ರಗಳು, ರಕ್ಷಿಸಿಕೊಂಡು ಬಂದಿರುವ ಈ ರಚನಾ ವಿನ್ಯಾಸಗಳನ್ನು ,ಅಧಿಕೃತವಾಗಿ ಗುರುತಿಸಲು ಪ್ರಾಚೀನ ಸ್ಮಾರಕಗಳು ಅಥವಾ ಅದಕ್ಕೆ ಹತ್ತಿರವಿರುವ ಪದವನ್ನು ಬಳಸುತ್ತಾರೆ ಅಥವಾ ಪುರಾತತ್ತ್ವಶಾಸ್ತ್ರದ ಸ್ಥಳಗಳು ಎಂದು ಕರೆಯುತ್ತಾರೆ, ಪುರಾತತ್ತ್ವಶಾಸ್ತ್ರದ ಸ್ಥಳಗಳೆಂದರೆ ಮೂಲತಃ ಸಾಧಾರಣವಾಗಿ ವಾಸಿಸುವಂತಹ ಮನೆಗಳಾಗಿವೆ ಅಥವಾ ಇತರ ಕಟ್ಟಡಗಳಾಗಿವೆ.

ಸ್ಮಾರಕಗಳು ಐತಿಹಾಸಿಕ ಹಾಗು ರಾಜಕೀಯ ಮಾಹಿತಿಗಳನ್ನು ತಿಳಿಸುವ ಉದ್ದೇಶದಿಂದಲೂ ಕೂಡ ನಿರ್ಮಿಸಲ್ಪಟ್ಟಿರುತ್ತವೆ. ಅವುಗಳನ್ನು ಸಮಕಾಲೀನ ರಾಜಕೀಯ ಶಕ್ತಿಗಳ ಅಧಿಕಾರವನ್ನು ಮತ್ತೆ ಬಲಪಡಿಸಲು ಬಳಸಬಹುದು, ಉದಾಹರಣೆಗೆ, ಟ್ರಾಜನ್ ನ ದುಂಡುಗಂಬ ಅಥವಾ ಸೋವಿಯತ್ ರಷ್ಯಾದಲ್ಲಿರುವ ಲೆನಿನ್ ನ ಅನೇಕ ಪ್ರತಿಮೆಗಳು. ಸಾರ್ವಜನಿಕರಿಗೆ, ಪ್ರಮುಖ ಘಟನೆಗಳು ಅಥವಾ ಹಿಂದೆ ಇದ್ದ ಪ್ರಮುಖ ವ್ಯಕ್ತಿಗಳ ಬಗ್ಗೆ ತಿಳುವಳಿಕೆಯನ್ನು ನೀಡಲು ಅವುಗಳನ್ನು ಬಳಸಲಾಗುತ್ತದೆ ಉದಾಹರಣೆಗೆ,ನೂಯಾರ್ಕ್ ನಗರದಲ್ಲಿ ಇನ್ನೂ ಹಾಗೇ ಉಳಿದಿರುವ ಹಳೆಯ ಸಾರ್ವತ್ರಿಕ ಅಂಚೆ ಕಚೇರಿಯಾದ ದಿ ಜೇಮ್ಸ್ A. ಪಾರ್ಲೆ ಕಟ್ಟಡ , ಹಿಂದಿನ ಪೋಸ್ಟ್ ಮಾಸ್ಟರ್ ಜನರಲ್ ಜೇಮ್ಸ್ ಪಾರ್ಲೆಯ ನಂತರ (ಜೇಮ್ಸ್ ಪಾರ್ಲೆ ಪೋಸ್ಟ್ ಆಫೀಸ್)ಆಯಿತು.

ಸ್ಮಾರಕಗಳ ಅರ್ಥ ಸಾಮಾಜಿಕವಾಗಿ ನಿಖರವಾಗಿರುವುದಿಲ್ಲ.ಅಲ್ಲದೇ ವಿವಿಧ ಸಾಮಾಜಿಕ ಗುಂಪುಗಳ ನಡುವೆ ಇವುಗಳ ಅರ್ಥದಲ್ಲಿ ವ್ಯತ್ಯಾಸವನ್ನೂ ಕಾಣಬಹುದು. ಇದಕ್ಕೆ ಉದಾರಣೆಯ ರೀತಿಯಲ್ಲಿ , ಪೂರ್ವ ಜರ್ಮನ್ ನಲ್ಲಿ ಹಿಂದೆ ಇದ್ದ ಸಮಾಜವಾದಿ ರಾಜ್ಯ, ಪೂರ್ವದ ಸೈದ್ಧಾಂತಿಕ ಅಪವಿತ್ರತೆಯಿಂದ ಬರ್ಲಿನ್ ವಾಲ್ ಅನ್ನು 'ರಕ್ಷಣೆಯ' ರೂಪದಲ್ಲಿ ನೋಡಬಹುದು.ಇದು ಫ್ಯಾಷಿಸಂ ಪಂಥದ ಸಂಕೇತವಾಗಿದೆ ಹಾಗು ಆ ರಾಜ್ಯದಬುದ್ಧಿವಿಕಲ್ಪದ ಗುರುತಾಗಿದೆ ಎಂದು ಭಿನ್ನಮತೀಯರು ಹಾಗು ಇತರರು ವಾದಿಸಿದ್ದಾರೆ. ಈ ವಾದದ ಅರ್ಥವು, ಆಧುನಿಕ 'ಪೋಸ್ಟ್ ಪ್ರೋಸೆಶ್ವಲ್' ಪುರಾತತ್ತ್ವಶಾಸ್ತ್ರದ ವ್ಯಾಖ್ಯಾನದ ಸಾರಂಶವಾಗಿದೆ.

ಸ್ಮಾರಕಗಳನ್ನು ಸಾವಿರಾರು ವರ್ಷಗಳಿಂದ ನಿರ್ಮಿಸಲಾಗುತ್ತಿದೆ. ಅಲ್ಲದೇ ಇವು ಹೆಚ್ಚಿನ ಕಾಲ ಇರುವಂತಹವು ಹಾಗು ಪ್ರಾಚೀನ ನಾಗರಿಕತೆಯ ಪ್ರಖ್ಯಾತ ಚಿಹ್ನೆಗಳಾಗವೆ. ಈಜಿಫ್ಟಿನ ಫಿರಮಿಡ್ ಗಳು, ಗ್ರೀಕ್ ಪಾರ್ಥೆನಾನ್, ಹಾಗು ಪೂರ್ವದ ಐಲ್ಯಾಂಡ್ ನ ಮೊಯ್ ಗಳು ಅವುಗಳ ನಾಗಾರಿಕತೆಯ ಚಿಹ್ನೆ(ಗುರುತು)ಗಳಾಗಿವೆ. ಇತ್ತೀಚಿಗಿನ, ಸ್ಮಾರಕಗಳ ರಚನಾ ವಿನ್ಯಾಸಗಳು ಉದಾಹರಣೆಗೆ, ಸ್ಟ್ಯಾಚು ಆಫ್ ಲಿಬರ್ಟಿ ಹಾಗು ಐಫೆಲ್ ಗೋಪುರ ಗಳಂತವು ಆಧುನಿಕ ರಾಷ್ಟ್ರಗಳ ಲಾಂಛನದ ಪ್ರತಿಮೆಗಳಾಗಿವೆ. ಮಾನ್ಯುಮೆಂಟಲಿಟಿ ಎಂಬ ಪದ, ಸಾಂಕೇತಿಕ ಪ್ರತಿಮೆಯನ್ನು ಹಾಗು ಸ್ಮಾರಕದ ಭೌತಿಕ ಅಸ್ಥಿತ್ವಕ್ಕೆ ಸಂಬಂಧಿಸಿದೆ.

ಇಲ್ಲಿಯವರೆಗೆ, ದೊಡ್ಡ ಸ್ಮಾರಕಗಳನ್ನು ಅಧ್ಯಯನ ಮಾಡುವುದು ಪುರಾತತ್ವಶಾಸ್ತ್ರಜ್ಞರ ಕಾರ್ಯವಾಗಿತ್ತು. ಪುರಾತತ್ವಶಾಸ್ತ್ರದ ದಾಖಲೆಗಳುಕೊಟ್ಟಂತಹ ವಿಷಯಕ್ಕೆ ಸಂಬಂಧಿಸಿದ ನಿರ್ದಿಷ್ಟ ಶಾಸನ ಹಾಗು ಸೈದ್ಧಾಂತಿಕ ವಿಚಾರಗಳು ಸ್ಮಾರಕಗಳ ಹಿಂದಿನ ವ್ಯಾಖ್ಯಾನಗಳ ಮೇಲೆ ಗಮನಹರಿಸಿವೆ. ಇದಕ್ಕೆ ಉದಾಹರಣೆ , ಯುನೈಟೆಡ್ ಕಿಂಗ್ಡಮ್ ನ ನಿಗದಿತ ಪ್ರಾಚೀನ ಸ್ಮಾರಕಗಳ ನಿಯಮಗಳು.

ಸ್ಮಾರಕಗಳ ವಿಧಗಳು

  • ಪ್ರತಿಮೆಗಳ ರೂಪದಲ್ಲಿ ನಿರ್ಮಿಸಲಾದ ರಚನೆಗಳು(ಕಟ್ಟಡಗಳು).
  • ಸಾವಿನ ಜ್ಞಾಪಕಾರ್ಥಕವಾಗಿ ಸತ್ತವರ ಗೋರಿಗಳ ಮೇಲೆ ಅಥವಾ ಹತ್ತಿರ ಬೊಂಬೆಯ ಆಕಾರದಲ್ಲಿ ಚರ್ಚ್ ಸ್ಮಾರಕಗಳನ್ನು ಕಟ್ಟಲಾಗುತ್ತಿತ್ತು.
  • ಸ್ಮಾರಕ ಸಮಾಧಿಗಳನ್ನು ಹಾಗು ಸ್ಮಾರಕಗಳನ್ನು ಸಾಮಾನ್ಯವಾಗಿ ಯುದ್ಧ ಅಪಘಾತದಲ್ಲಿ ಮೃತಪಟ್ಟವರ ಸಾವಿನ ಜ್ಞಾಪಕಾರ್ಥವಾಗಿ ಕಟ್ಟಲಾಗುತ್ತಿತ್ತು ,ಉದಾಹರಣೆಗೆ - ವಿಮ್ಮಿ ರಿಡ್ಜ್ ಸ್ಮಾರಕ ಹಾಗು ಇಂಡಿಯಾ ಗೇಟ್
  • ಸ್ತಂಭಕಾರದ ಸ್ಮಾರಕಗಳು, ಇವುಗಳಲ್ಲಿ ಪ್ರತಿಮೆಗಳು ಹೆಚ್ಚಾಗಿ ಮೇಲ್ಭಾಗದಲ್ಲಿರುತ್ತವೆ. ಉದಾಹರಣೆಗೆ, ಲಂಡನ್ ನಲ್ಲಿರುವ ನೆಲ್ಸನ್ ರ ಪ್ರತಿಮೆ.
  • ಗೋರಿಕಲ್ಲು, ಸತ್ತ ವ್ಯಕ್ತಿಗಾಗಿ ಕಟ್ಟುವ ಚಿಕ್ಕ ಸ್ಮಾರಕವಾಗಿದೆ.
  • ಭವ್ಯ ಸಮಾಧಿಗಳನ್ನು ಹಾಗು ಗೋರಿಗಳನ್ನುಗಳನ್ನು ಸತ್ತವರ ಶವವನ್ನು ಇರಿಸಿ ಹೂಳಲು ಕಟ್ಟಲಾಗುವುದು ,ಉದಾಹರಣೆಗೆ ಗ್ರೇಟ್ ಪಿರಮಿಡ್ ಹಾಗು ತಾಜ್ ಮಹಲ್
  • ಏಕಶಿಲೆಗಳನ್ನು ಧಾರ್ಮಿಕ ಅಥವಾ ಜ್ಞಾಪಕಾರ್ಥ ಉದ್ದೇಶಗಳಿಗಾಗಿ ಸ್ಥಾಪಿಸಲಾಗುತ್ತದೆ, ಉದಾಹರಣೆಗೆ ಸ್ಟೋನ್ ಹೆಂಜ್.
  • ದಿಬ್ಬಗಳನ್ನು ಶ್ರೇಷ್ಠ ನಾಯಕರುಗಳ ಅಥವಾ ಘಟನೆಗಳ ಜ್ಞಾಪಕಾರ್ಥವಾಗಿ ಕಟ್ಟಲಾಗುತ್ತದೆ,ಉದಾಹರಣೆಗೆ,ಕೊಸಸಿಯೋಸ್ಕೊ ದಿಬ್ಬ.
  • ಚೌಕ ಸೂಜಿ(ಯಂಥ)ಕಂಬಗಳನ್ನು ಸಾಮಾನ್ಯವಾಗಿ ಶ್ರೇಷ್ಠ ನಾಯಕರ ಜ್ಞಾಪಕಾರ್ಥವಾಗಿ ಸ್ಥಾಪಿಸಲಾಗುತ್ತದೆ, ಉದಾಹರಣೆಗೆ ವಾಷಿಂಗ್ ಟನ್ ಸ್ಮಾರಕ, ಮೊನಸ್.
  • ಜನಪ್ರಿಯ ವ್ಯಕ್ತಿಗಳ ಅಥವಾ ಸಂಕೇತ(ಚಿಹ್ನೆ)ಗಳ ಪ್ರತಿಮೆಗಳು, ಉದಾಹರಣೆಗೆ, ಸ್ಟ್ಯಾಚೂ ಆಫ್ ಲಿಬರ್ಟಿ.
  • ಟರ್ಮಿನೇಟಿಂಗ್ ವಿಸ್ಟ(ರಸ್ತೆಯ ಅಂಚಿನಲ್ಲಿ ಅಥವಾ ಮಧ್ಯದಲ್ಲಿರುವ ಸ್ಮಾರಕ), ನಗರ ವಲಯಗಳಲ್ಲಿರುವ ಸ್ಮಾರಕಗಳ ವಿನ್ಯಾಸ.
  • ವಿಜಯ ಮಂಟಪಗಳು, ಮಿಲಿಟರಿ ವಿಜಯದ ಜ್ಞಾಪಕಾರ್ಥಕ್ಕಾಗಿ ಕಟ್ಟಲಾಗುತ್ತದೆ , ಉದಾಹರಣೆಗೆ ದಿ ಅರ್ಕ್ ಡೆ ಟ್ರಿಯಾಮ್ ಫೆ
  • ಯುದ್ಧದ ಸಮಯದಲ್ಲಿ ನಡೆಯುವ ಘೋರಕೃತ್ಯಗಳ ಅಥವಾ ರಕ್ತಮಯವಾದ ಯುದ್ಧಗಳ ನೆನಪಿಗಾಗಿ, ಇಡೀ ಪ್ರದೇಶಲ್ಲಿ ಸ್ಮಾರಕಗಳನ್ನು ಕಟ್ಟಲಾಗುತ್ತದೆ, ಉದಾಹರಣೆಗೆ, ಒರಡೌರ್ -ಸುರ್ -ಗ್ಲಾನೆ ಅಥವಾ ಗೆಟ್ಟಿಸ್ ಬರ್ಗ್,ಪೆನ್ನ್ಸಿಲ್ವೇನಿಯ ಹಾಗು ಬೋರ್ಡಿನೊ.
  • ವಿಶೇಷ ಸಂದರ್ಭಗಳಲ್ಲಿ ಸ್ಮಾರಕಗಳು, ವಿಶೇಷವಾದ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಸ್ಥಳಗಳನ್ನು ಕೂಡ ಸೂಚಿಸುತ್ತವೆ.

ಇವನ್ನೂ ನೋಡಿ

  • ಸ್ಮಾರಕ
  • ರಾಷ್ಟ್ರೀಯ ಸ್ಮಾರಕ
  • ರಾಷ್ಟ್ರೀಯ ಸ್ಮಾರಕ (ಸಂದಿಗ್ಧತೆಯನ್ನು ನಿವಾರಿಸುವುದು)
  • ನ್ಯಾಷನಲ್ ಮಾನ್ಯೂಮೆಂಟ್ಸ್ ರೆಕಾರ್ಡ್ ಇಂಗ್ಲೀಷ್ ಸ್ಮಾರಕಗಳ ಸಾರ್ವಜನಿಕ ದಾಖಲೆ , ಇಂಗ್ಲೆಂಡ್ ಸ್ಮಾರಕಗಳ ಬಗೆಗಿನ ಮಾಹಿತಿಗಳನ್ನು ಇಟ್ಟುಕೊಂಡಿದೆ.
  • ಸ್ಮಾರಕ ಶಿಲ್ಪಗಳು

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಸ್ಮಾರಕ ಗಳ ವಿಧಗಳುಸ್ಮಾರಕ ಇವನ್ನೂ ನೋಡಿಸ್ಮಾರಕ ಉಲ್ಲೇಖಗಳುಸ್ಮಾರಕ ಬಾಹ್ಯ ಕೊಂಡಿಗಳುಸ್ಮಾರಕಇಂಗ್ಲೀಷ್ನ್ಯೂಡೆಲ್ಲಿಶೆಲ್ಲಿ

🔥 Trending searches on Wiki ಕನ್ನಡ:

ಆಲೂರು ವೆಂಕಟರಾಯರುಬೌದ್ಧ ಧರ್ಮಅತ್ತಿಮಬ್ಬೆಭಾರತದ ಬ್ಯಾಂಕುಗಳ ಪಟ್ಟಿಮುಖ್ಯ ಪುಟಮಧುಮೇಹನಿರುದ್ಯೋಗಊಳಿಗಮಾನ ಪದ್ಧತಿಮಹಾಭಾರತಅಲ್ಲಮ ಪ್ರಭುನೇಮಿನಾಥ(ತೀರ್ಥಂಕರ)ಸಂಖ್ಯೆಸಂಭೋಗಸಾವಿತ್ರಿಬಾಯಿ ಫುಲೆಅಲೆಕ್ಸಾಂಡರ್ಸನ್ ಯಾತ್ ಸೆನ್ಜೋಗದಾಸ ಸಾಹಿತ್ಯಕರ್ನಾಟಕದ ಸಂಸ್ಕೃತಿವಾಣಿಜ್ಯ(ವ್ಯಾಪಾರ)ವಿಜಯನಗರ ಸಾಮ್ರಾಜ್ಯಛಂದಸ್ಸುಅಜಂತಾಸೂರ್ಯವ್ಯೂಹದ ಗ್ರಹಗಳುಜನಪದ ನೃತ್ಯಗಳುಪಂಪಫ.ಗು.ಹಳಕಟ್ಟಿದ್ವಾರಕೀಶ್ಗೋಕರ್ಣಯಣ್ ಸಂಧಿಭರತೇಶ ವೈಭವಭಾರತ ಸಂವಿಧಾನದ ಪೀಠಿಕೆಸುಮಲತಾಸತ್ಯ (ಕನ್ನಡ ಧಾರಾವಾಹಿ)ರಾಜ್ಯಸಭೆದುರ್ಗಸಿಂಹಮಯೂರವರ್ಮಜೀವಸತ್ವಗಳುಟೊಮೇಟೊಮಧ್ಯ ಪ್ರದೇಶಶಾಲೆಪಾಲುದಾರಿಕೆ ಸಂಸ್ಥೆಗಳುಕರ್ನಾಟಕದಲ್ಲಿ ವನ್ಯಜೀವಿಧಾಮಗಳುತೀ. ನಂ. ಶ್ರೀಕಂಠಯ್ಯಹಂಪೆದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕೇಂದ್ರ ಲೋಕ ಸೇವಾ ಆಯೋಗಪಶ್ಚಿಮ ಘಟ್ಟಗಳುತ್ಯಾಜ್ಯ ನಿರ್ವಹಣೆದ್ವಾರಕಾಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕಾಮಸೂತ್ರಶುಂಠಿಉಪನಯನಉತ್ತರ ಕನ್ನಡಯಾಣಅಂಟುಬನವಾಸಿಕೊನಾರ್ಕ್ಮೊಘಲ್ ಸಾಮ್ರಾಜ್ಯಜವಹರ್ ನವೋದಯ ವಿದ್ಯಾಲಯದೇವರ/ಜೇಡರ ದಾಸಿಮಯ್ಯಪು. ತಿ. ನರಸಿಂಹಾಚಾರ್ಹೃದಯಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಬೆಂಗಳೂರುಜಿ.ಎಚ್.ನಾಯಕ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಕರ್ನಾಟಕ ವಿಧಾನ ಸಭೆಗುಂಪುಗಳುಆತ್ಮಹತ್ಯೆಕನ್ನಡ ಗುಣಿತಾಕ್ಷರಗಳುಕಟ್ಟಡಬೀಚಿಅಂತರ್ಜಲಭಾರತದ ರಾಷ್ಟ್ರೀಯ ಉದ್ಯಾನಗಳುಹಲ್ಮಿಡಿ ಶಾಸನಕನ್ನಡ ಚಂಪು ಸಾಹಿತ್ಯ🡆 More