ಶಿರಪಾದಿ

ಶಿರಪಾದಿ ಎಂಬುದು ಮೃದ್ವಂಗಿಸಂಕುಲದ ಒಂದು ವರ್ಗ (ಸಿಫೆಲೊಪೋಡಾ).

ಇದರಲ್ಲಿ ೮೦೦ ಕ್ಕಿಂತ ಹೆಚ್ಚು ಪ್ರಭೇದಗಳಿವೆ. ಸಾಗರವಾಸಿ ಕಡಲಿನ ಅತ್ಯಂತ ಆಳದ ಪಾತಳಿಯಿಂದ ಮೇಲ್ಭಾಗದ ಸ್ತರಗಳವರೆಗೂ ಹರಡಿವೆ. ಇವು ಎಲ್ಲ ಸಮುದ್ರಗಳಲ್ಲೂ ಮಹಾಸಾಗರಗಳಲ್ಲೂ ಕಂಡುಬರುತ್ತವೆ. ಗಾತ್ರಗಳಲ್ಲಿ ಅಗಾಧ ವ್ಯತ್ಯಾಸವಿದೆ. ಅತ್ಯಂತ ಚಿಕ್ಕ ಶಿರಪಾದಿ 2 ಸೆಂಮೀ, ದೈತ್ಯ ಸ್ಕ್ವಿಡ್‌ನದು 18 ಮೀ.

ಶಿರಪಾದಿ
Temporal range: Late Cambrian – present; possible Early Cambrian presence
PreꞒ
O
S
D
C
P
T
J
K
Pg
N
ಶಿರಪಾದಿ
ಅಸ್ತಿತ್ವದಲ್ಲಿರುವ ಮತ್ತು ಗತಿಸಿದ ಶಿರಪಾದಿಗಳು; ಮೇಲೆ ಎಡದಿಂದ ಪ್ರದಕ್ಷಿಣವಾಗಿ: ಸಾಮಾನ್ಯ ಆಕ್ಟೊಪಸ್ (ಆಕ್ಟೊಪಸ್ ವಲ್ಗ್ಯಾರಿಸ್), ಕರೀಬಿಯನ್ ದಿಬ್ಬದ ಸ್ಕ್ವಿಡ್ (ಸೆಪಿಯೊಟ್ಯೂತಿಸ್ ಸೆಪಿಯಾಯ್ಡೀ), ಕೋಣೆಗಳುಳ್ಳ ನಾಟಿಲಸ್ (ನಾಟಿಲಸ್ ಪಾಂಪೀಲಿಯಸ್), ಆರ್ತೊಸ್ಫಿಂಕ್ಟಸ್, ಕ್ಲಾರ್ಕೇಟ್ಯೂತಿಸ್ ಕೋನೊಕಾಡಾ, ಮತ್ತು ಸಾಮಾನ್ಯ್ ಕಟಲ್‍ಮೀನು (ಸೆಪಿಯಾ ಅಫ಼ಿಶಿನ್ಯಾಲಿಸ್)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಮೊಲಸ್ಕಾ
ಉಪವಿಭಾಗ: ಕಾಂಚಿಫ಼ೆರಾ
ವರ್ಗ: ಸಿಫಲೊಪೋಡಾ
Cuvier, 1797
ಉಪವರ್ಗಗಳು
  • ನಾಟಿಲಾಯ್ಡೀ ವಿಶಾಲಾರ್ಥದಲ್ಲಿ (ಬಹುಮೂಲ ವರ್ಗ)
    • ಪ್ಲೆಕ್ಟ್ರೋನೊಸೆರಾಟಾಯ್ಡೀ † (ಬಹುಮೂಲ ವರ್ಗ)
    • ಮಲ್ಟಿಸೆರಟಾಯ್ಡೀ † (ಬಹುಮೂಲ ವರ್ಗ?)
    • ನಾಟಿಲಾಯ್ಡೀ ಸಂಕುಚಿತ ಅರ್ಥದಲ್ಲಿ
    • ಎಂಡೋಸೆರಟಾಯ್ಡೀ †
    • ಆರ್ತೊಸೆರಟಾಯ್ಡೀ † (ಬಹುಮೂಲ ವರ್ಗ)
  • ಬ್ಯಾಕ್ಟ್ರಿಟಾಯ್ಡೀ † (ಬಹುಮೂಲ ವರ್ಗ)
  • ಅಮೋನಾಯ್ಡೀ †
  • ಕೋಲಿಯಾಯ್ಡೀ
  • ?ಪ್ಯಾರಾಕೋಲಿಯಾಯ್ಡೀ † (ವಿವಾದಗ್ರಸ್ತ)

ದೇಹರಚನೆ

ಶಿರಪಾದಿಯಲ್ಲಿ ತಲೆ ಮತ್ತು ಪಾದ ಒಂದುಗೂಡಿರುವುದರಿಂದ ಈ ಹೆಸರು. ದೇಹದ ಹಿಂಭಾಗದಲ್ಲಿ ಒಳಾಂಗಗಳು ಹಾಗೂ ಚಿಪ್ಪುಗಳಿವೆ. ಪಾದ ಅನೇಕ ತೋಳುಗಳಾಗಿ ವಿಭಾಗಗೊಂಡಿದ್ದು ಇವುಗಳ ಒಳಭಾಗದಲ್ಲಿ ಹೀರುಬಟ್ಟಲುಗಳಿವೆ. ವಿವಿಧ ಪ್ರಭೇದಗಳ ತೋಳುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಉಂಟು. ತಲೆಯ ಎರಡೂ ಕಡೆ ಒಂದೊಂದು ಉತ್ತಮವಾಗಿ ಬೆಳೆದ ಕಣ್ಣುಗಳೂ ಕೆಳಭಾಗದಲ್ಲಿ ಒಂದು ನಳಿಕೆಯೂ ಇವೆ.

ಶಿರಪಾದಿಗಳ ಆಕಾರ ವಿಚಿತ್ರ. ಶರೀರದ ಎರಡೂ ಕಡೆ ಒಂದೊಂದು ತ್ರಿಕೋಣಾಕಾರದ ರೆಕ್ಕೆ ಉಂಟು. ಚಿಪ್ಪು ಶರೀರದ ಒಳಭಾಗದಲ್ಲಿದೆ. ನಾಟಿಲಸ್ ಎಂಬ ಗಣಕ್ಕೆ ಸೇರುವ ಪ್ರಭೇದಗಳಲ್ಲಿ ಮಾತ್ರ ಚಿಪ್ಪು ಶರೀರದ ಹೊರಭಾಗದಲ್ಲಿರುವುದು. ಚಿಪ್ಪು ಸುಣ್ಣದಿಂದಾಗಿದೆ. ಇದರ ಒಳಮೈಯಲ್ಲಿ ಮುತ್ತಿನ ಸ್ತರವಿದೆ. ನಾಟಿಲಸ್‌ನಲ್ಲಿ ಹೊರಭಾಗಕ್ಕೂ ಈ ಸ್ತರ ಆವರಿಸಿರುವುದರಿಂದ ಚಿಪ್ಪಿಗೆ ಅಪೂರ್ವ ಸೌಂದರ್ಯ ಬಂದಿದೆ. ಆಕ್ಟೋಪಸ್‌ನಲ್ಲಿ ಚಿಪ್ಪು ಸಂಪೂರ್ಣವಾಗಿ ಮಾಯ. ಚಿಪ್ಪಿನಲ್ಲಿ ಅನಿಲ ಕೋಣೆಗಳು ತುಂಬಿರುವುದರಿಂದ ಶಿರಪಾದಿ ತೇಲುವುದಕ್ಕೆ ಅನುಕೂಲ.

ಶಿರಪಾದಿಗಳ ನರಮಂಡಲ ಉತ್ತಮವಾಗಿ ವಿಕಾಸಗೊಂಡಿದೆ. ಅಕಶೇರುಕಗಳ ಪೈಕಿ ಇವು ಬುದ್ಧಿವಂತ ಪ್ರಾಣಿಗಳು. ನರವ್ಯೂಹದಲ್ಲಿ ಒಂದು ಜೊತೆ ನರಗ್ರಂಥಿಗಳಿಂದಾದ ಮಿದುಳು, ಅನೇಕ ನರಗ್ರಂಥಿಗಳು, ಕೆಲವು ದೈತ್ಯನರಗಳಿವೆ. ದೈತ್ಯನರಗಳ ಮೂಲಕ ಸಂದೇಶಗಳು ವೇಗವಾಗಿ ಸಾಗುತ್ತವೆ. ಇಂದ್ರಿಯಗಳ ಪೈಕಿ ಕಣ್ಣು ಕಶೇರುಕಗಳ ತೆರದಲ್ಲೇ ಉತ್ತಮವಾಗಿ ವಿಕಾಸಗೊಂಡಿದೆ. ನೀರಿನ ಶುದ್ಧತೆಯನ್ನು ಅಳೆಯಲು ಆಸ್ಪ್ರೇಡಿಯಮ್ ಎಂಬ ಇಂದ್ರಿಯವೂ, ಗುರುತ್ವಾಕರ್ಷಣ ತಿಳಿದು ಸಮತೋಲನವನ್ನು ನೀಡಲು ಸ್ಟ್ಯಾಟೋಸಿಸ್ಟ ಎಂಬ ಇಂದ್ರಿಯವೂ ಇವೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

🔥 Trending searches on Wiki ಕನ್ನಡ:

ಸುಗ್ಗಿ ಕುಣಿತನೀನಾದೆ ನಾ (ಕನ್ನಡ ಧಾರಾವಾಹಿ)ತ. ರಾ. ಸುಬ್ಬರಾಯವ್ಯಕ್ತಿತ್ವರಾಜಧಾನಿಗಳ ಪಟ್ಟಿದ್ರೌಪದಿ ಮುರ್ಮುಲೋಕಸಭೆಸಾಮ್ರಾಟ್ ಅಶೋಕಕೃಷ್ಣಾ ನದಿಕರ್ನಾಟಕದ ನದಿಗಳುಅಮೃತಧಾರೆ (ಕನ್ನಡ ಧಾರಾವಾಹಿ)ರೈತಸರ್ಪ ಸುತ್ತುವಡ್ಡಾರಾಧನೆದಿಯಾ (ಚಲನಚಿತ್ರ)ಅಲಂಕಾರಅಸಹಕಾರ ಚಳುವಳಿಅತ್ತಿಮಬ್ಬೆಕರ್ನಾಟಕದಲ್ಲಿ ಪಂಚಾಯತ್ ರಾಜ್ಜ್ಯೋತಿಬಾ ಫುಲೆವಿರಾಟವರದಕ್ಷಿಣೆಛತ್ರಪತಿ ಶಿವಾಜಿತಾಳಗುಂದ ಶಾಸನಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಉತ್ತರ ಕನ್ನಡವ್ಯಂಜನಭಾರತತೀ. ನಂ. ಶ್ರೀಕಂಠಯ್ಯಸ್ಯಾಮ್ ಪಿತ್ರೋಡಾಬಿಳಿ ರಕ್ತ ಕಣಗಳುಸಾದರ ಲಿಂಗಾಯತಕರ್ಮಕಾಮಸೂತ್ರಕೃಷ್ಣದೇವರಾಯಸುಬ್ರಹ್ಮಣ್ಯ ಧಾರೇಶ್ವರಶ್ರವಣಬೆಳಗೊಳಸರ್ವಜ್ಞರಾಹುಲ್ ಗಾಂಧಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿರಾಜಕೀಯ ಪಕ್ಷರೇಣುಕಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಉಡಗೊರೂರು ರಾಮಸ್ವಾಮಿ ಅಯ್ಯಂಗಾರ್ಗ್ರಹಬಾಲಕಾರ್ಮಿಕಇಂಡಿಯನ್ ಪ್ರೀಮಿಯರ್ ಲೀಗ್ಭಾರತದ ಸ್ವಾತಂತ್ರ್ಯ ದಿನಾಚರಣೆಬೆಳ್ಳುಳ್ಳಿಕನ್ನಡ ಸಾಹಿತ್ಯ ಸಮ್ಮೇಳನಬಸವೇಶ್ವರರಮ್ಯಾರಾಧೆಕನ್ನಡ ವ್ಯಾಕರಣಕನ್ನಡ ಜಾನಪದಸೀಮೆ ಹುಣಸೆಶಿಶುನಾಳ ಶರೀಫರುಬಹುವ್ರೀಹಿ ಸಮಾಸಜಶ್ತ್ವ ಸಂಧಿಕರಗಯಮರಂಗಭೂಮಿಗುರುರಾಜ ಕರಜಗಿಕನ್ನಡಮೊದಲನೆಯ ಕೆಂಪೇಗೌಡಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಪೆರಿಯಾರ್ ರಾಮಸ್ವಾಮಿಕರ್ನಾಟಕದ ತಾಲೂಕುಗಳುಬಾಲ್ಯ ವಿವಾಹರತ್ನತ್ರಯರುಮೈಸೂರು ಮಲ್ಲಿಗೆವಾಲ್ಮೀಕಿಕರ್ನಾಟಕದ ಜಾನಪದ ಕಲೆಗಳುಇ-ಕಾಮರ್ಸ್ಕೊಡಗಿನ ಗೌರಮ್ಮ🡆 More