ವಣಕಿನಾಳ

ವಣಕಿನಾಳ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ.

ವಣಕಿನಾಳ
ವಣಕಿನಾಳ
village

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ 16*°30'8"N ಉತ್ತರ ಅಕ್ಷಾಂಶ ಮತ್ತು 75*27'51" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - 35°C-42°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - 18°C-28°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ.
  • ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 1500 ಇದೆ. ಅದರಲ್ಲಿ 800 ಪುರುಷರು ಮತ್ತು 700 ಮಹಿಳೆಯರು ಇದ್ದಾರೆ. ಒಟ್ಟಾರೆ ಸುಮಾರು 1000ಕ್ಕೂ ಹೆಚ್ಚು ಮತಗಳನ್ನು ಹೊಂದಿದೆ.

ಕಲೆ

ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ಮುಂತಾದವು ಗ್ರಾಮದ ಕಲೆಯಾಗಿದೆ.

ಸಂಸ್ಕೃತಿ

ವಣಕಿನಾಳ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆಗಳನ್ನು ಧರಿಸುತ್ತಾರೆ.

ಆಹಾರ (ಖಾದ್ಯ)

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.

ಕೃಷಿ

ಗ್ರಾಮದ ಪ್ರತಿಶತ 90 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 90% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿಸಾಕಾಣಿಕೆ ಉಪಕಸುಬುಗಳಾಗಿವೆ.

ಬೆಳೆಗಳು

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ ವರ್ಗ

ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ ವರ್ಗ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.

ಆರ್ಥಿಕತೆ

ಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಾಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.

ಧರ್ಮಗಳು

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು

ಗ್ರಾಮದ ಪ್ರಮುಖ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ.

ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ
  • ಶ್ರೀ ಮಾಳಿಂಗರಾಯ ದೇವಾಲಯ

ಮಸೀದಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬಗಳು

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಓಕುಳಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆ ಪ್ರಮಾಣವು ಸುಮಾರು 75%. ಅದರಲ್ಲಿ 65% ಪುರುಷರು ಹಾಗೂ 55% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ಸಿಂದಗಿ ವಿಧಾನ ಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ವಣಕಿನಾಳ 
ಬಿಜಾಪುರ ತಾಲ್ಲೂಕುಗಳು
ಇಂಡಿ | ಕೊಲ್ಹಾರ | ಚಡಚಣ | ತಾಳಿಕೋಟಿ | ತಿಕೋಟಾ | ದೇವರ ಹಿಪ್ಪರಗಿ | ನಿಡಗುಂದಿ | ಬಬಲೇಶ್ವರ | ಬಸವನ ಬಾಗೇವಾಡಿ | ಮುದ್ದೇಬಿಹಾಳ | ಸಿಂದಗಿ | ಬಿಜಾಪುರ


Tags:

ವಣಕಿನಾಳ ಭೌಗೋಳಿಕವಣಕಿನಾಳ ಹವಾಮಾನವಣಕಿನಾಳ ಜನಸಂಖ್ಯೆವಣಕಿನಾಳ ಕಲೆವಣಕಿನಾಳ ಸಂಸ್ಕೃತಿವಣಕಿನಾಳ ಆಹಾರ (ಖಾದ್ಯ)ವಣಕಿನಾಳ ಕೃಷಿವಣಕಿನಾಳ ಕಾಲುವೆವಣಕಿನಾಳ ಉದ್ಯೋಗವಣಕಿನಾಳ ಬೆಳೆಗಳುವಣಕಿನಾಳ ಸಸ್ಯ ವರ್ಗವಣಕಿನಾಳ ಪ್ರಾಣಿ ವರ್ಗವಣಕಿನಾಳ ಆರ್ಥಿಕತೆವಣಕಿನಾಳ ಧರ್ಮಗಳುವಣಕಿನಾಳ ಭಾಷೆಗಳುವಣಕಿನಾಳ ದೇವಾಲಯವಣಕಿನಾಳ ಮಸೀದಿವಣಕಿನಾಳ ಹಬ್ಬಗಳುವಣಕಿನಾಳ ಶಿಕ್ಷಣವಣಕಿನಾಳ ಸಾಕ್ಷರತೆವಣಕಿನಾಳ ರಾಜಕೀಯವಣಕಿನಾಳಕರ್ನಾಟಕವಿಜಯಪುರಸಿಂದಗಿ

🔥 Trending searches on Wiki ಕನ್ನಡ:

ಬಾಬು ಜಗಜೀವನ ರಾಮ್ಮದರ್‌ ತೆರೇಸಾಶನಿ (ಗ್ರಹ)ಸೂಪರ್ (ಚಲನಚಿತ್ರ)ಶಬರಿಭಾರತದ ಪ್ರಧಾನ ಮಂತ್ರಿತುಳಸಿಜೂಜುವಿಚ್ಛೇದನರೌಲತ್ ಕಾಯ್ದೆಗಾಂಧಿ ಜಯಂತಿಗೂಬೆಕರ್ನಾಟಕಶಿಶುನಾಳ ಶರೀಫರುಓಂ (ಚಲನಚಿತ್ರ)ದೂರದರ್ಶನಭಾರತೀಯ ಶಾಸ್ತ್ರೀಯ ನೃತ್ಯಭಾರತದ ರೂಪಾಯಿಪ್ರವಾಸಿಗರ ತಾಣವಾದ ಕರ್ನಾಟಕದಾವಣಗೆರೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಹೆಳವನಕಟ್ಟೆ ಗಿರಿಯಮ್ಮಮಾನವನ ಚರ್ಮಎಸ್.ಎಲ್. ಭೈರಪ್ಪತಾಳಗುಂದ ಶಾಸನಹವಾಮಾನಸೌರಮಂಡಲಹೆಚ್.ಡಿ.ಕುಮಾರಸ್ವಾಮಿಸಾರಜನಕಕನ್ನಡದಲ್ಲಿ ವಚನ ಸಾಹಿತ್ಯಬಾದಾಮಿವಿಜಯನಗರ ಜಿಲ್ಲೆಚಿನ್ನಜೀವನ ಚೈತ್ರಚರ್ಚ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದ ರಾಷ್ಟ್ರಗೀತೆಜೋಗಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಅಂಕಗಣಿತಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಹಂಪೆಮೈಸೂರು ಸಂಸ್ಥಾನಗೋವಿನ ಹಾಡುರತ್ನತ್ರಯರುಯು.ಆರ್.ಅನಂತಮೂರ್ತಿಕದಂಬ ಮನೆತನಉತ್ತರ ಕನ್ನಡಬಿರಿಯಾನಿಕೃಷ್ಣಭಾರತದ ಸಂವಿಧಾನ ರಚನಾ ಸಭೆಭಾರತದ ರಾಷ್ಟ್ರೀಯ ಚಿಹ್ನೆಯುಗಾದಿರಾಜ್‌ಕುಮಾರ್ಗಾಂಡೀವದ್ವಿರುಕ್ತಿಧರ್ಮಸ್ಥಳರಾಜ್ಯಗಳ ಪುನರ್ ವಿಂಗಡಣಾ ಆಯೋಗಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಿನಾಯಕ ಕೃಷ್ಣ ಗೋಕಾಕಕೃಷ್ಣ ಮಠಭಾರತದ ಚುನಾವಣಾ ಆಯೋಗಋಗ್ವೇದಒಂದೆಲಗಚುನಾವಣೆಗುರುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಅತ್ತಿಮಬ್ಬೆಗಸಗಸೆ ಹಣ್ಣಿನ ಮರಸರ್ವೆಪಲ್ಲಿ ರಾಧಾಕೃಷ್ಣನ್ಯಕ್ಷಗಾನಭಾರತದ ತ್ರಿವರ್ಣ ಧ್ವಜಜಾಗತೀಕರಣರಾಯಲ್ ಚಾಲೆಂಜರ್ಸ್ ಬೆಂಗಳೂರುಕೆಳದಿಯ ಚೆನ್ನಮ್ಮಕನ್ನಡ ಅಕ್ಷರಮಾಲೆಚಿಕ್ಕಮಗಳೂರುಪದಬಂಧ🡆 More