ಬಿ.ಎನ್.ರಾವ್

ನರಸಿಂಗ ಮಂಗಳೂರಿನ ಕೆನರಾ ಶಾಲೆಯಲ್ಲಿ ಕಲಿಯುತ್ತಿದ್ದವನು 1901ರಲ್ಲಿ ನಡೆದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮದ್ರಾಸ್ ಪ್ರೆಸಿಡೆನ್ಸಿಗೆ ಮೊದಲ ರ್ಯಾಂಕ್ ಪಡೆದು ಬಿಟ್ಟ.

ಬಿ ಎನ್ ರಾವು
B. N. Rau
ಬಿ.ಎನ್.ರಾವ್
Born26 ಫೆಬ್ರವರಿ 1887
ಮಂಗಳೂರು, British India
Died30 November 1953 (age 66)
Zurich, ಸ್ವಿಜರ್ಲ್ಯಾಂಡ್
Occupation(s)ನಾಗರಿಕ ಸೇವಕ, ನ್ಯಾಯವಾದಿ, ಸಾಂವಿಧಾನಿಕ ವಿದ್ವಾಂಸ
  • ಇವರ ಹೆಸರಿನ ಎನ್ ಎಂದರೆ ನರಸಿಂಗ; ಬಿ ಎಂದರೆ ಬೆನಗಲ್ ಅಂತ ಅರ್ ನರಸಿಂಗ. ನರಸಿಂಗನ ಅಪ್ಪ ರಾಘವೇಂದ್ರ ರಾಯರು ಸುತ್ತಮುತ್ತಲಿನ ಹಳ್ಳಿಗೆಲ್ಲ ಪ್ರಸಿದ್ಧ ವೈದ್ಯರು.

ಬಾಲ್ಯ ಮತ್ತು ಶಿಕ್ಷಣ

ಬಿ.ಎನ್.ರಾವ್ 
ಭಾರತೀಯ ಸಂವಿಧಾನದ ಕರಡು ಸಮಿತಿ:ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಕ್ಷರು, ಆಗಸ್ಟ್ 29, 1947 ರಂದು ಇತರ ಸದಸ್ಯರೊಂದಿಗೆ; ಕುಳಿತಿರುವವರಲ್ಲಿ ಬಲಗಡೆ ಕೊನೆಯವರು ಬಿ.ಎನ.ರಾವ್.

ಅಲ್ಲಿಂದ ಮದ್ರಾಸಿಗೆ ಹೋಗಿ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜು ಸೇರಿದ್ದಾಯಿತು. ಅಲ್ಲಿ ಇಂಗ್ಲೀಷ್, ಸಂಸ್ಕೃತ ಮತ್ತು ಗಣಿತ ವಿಷಯಗಳನ್ನು ಅಭ್ಯಾಸ ಮಾಡಿ ಎಫ್ಎ ಪರೀಕ್ಷೆಯಲ್ಲಿ ಮತ್ತೆ ಇಡೀ ಪ್ರಾಂತ್ಯಕ್ಕೆ ಪ್ರಥಮ ರ್ಯಾಂಕ್ ಪಡೆದದ್ದೂ ಆಯಿತು. ವಿದ್ಯಾರ್ಥಿ ವೇತನ ಸಿಕ್ಕಿದ್ದರಿಂದ ನರಸಿಂಗ ಇಂಗ್ಲೆಂಡಿಗೆ ಹೋದ. ಅಲ್ಲಿ ಟ್ರಿನಿಟಿ ಕಾಲೇಜಿನಲ್ಲಿ ಮೂರು ವರ್ಷ ಪದವಿ ವ್ಯಾಸಂಗ ಮಾಡಿ 1909ರಲ್ಲಿ ಟ್ರೈಪೋಸ್ ಪಾಸು ಮಾಡಿದ. ಅದೇ ವರ್ಷ ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಅದನ್ನೂ ಪಾಸು ಮಾಡಿ ಕೊಂಡು ಆಗಿನ ಬ್ರಿಟಿಷ್ ಭಾರತದ ರಾಜಧಾನಿ ಕಲ್ಕತ್ತಕ್ಕೆ ನ್ಯಾಯಾಧೀಶನಾಗಿ ಆಯ್ಕೆಯಾಗಿ ಬಂದ. ನರಸಿಂಗ ರಾಯರು ಆ ಕಾಲದಲ್ಲಿ ಮಾಡಿದ ಬಹು ದೊಡ್ಡ ಕೆಲಸವೆಂದರೆ ಭಾರತದ ಕಾನೂನು ಸಂಹಿತೆಯನ್ನು ಹೊಸದಾಗಿ ಬರೆದದ್ದು. ಬ್ರಿಟಿಷ್ ಸರಕಾರ ವಹಿಸಿದ್ದ ಈ ಕೆಲಸವನ್ನು ದಾಖಲೆಯ ಎರಡು ವರ್ಷದಲ್ಲಿ ಮುಗಿಸಿದ್ದಕ್ಕಾಗಿ ರಾಯರಿಗೆ ನೈಟ್ಹುಡ್ ಬಿರುದು ಕೊಡಲಾಯಿತು. ಹೆಸರಿನ ಹಿಂದೆ ಸರ್ ಎಂಬ ಉಪಾಧಿ ಸೇರಿ ಕೊಂಡಿತು. ಅದಾದ ಮೇಲೆ ರಾಯರನ್ನು ಬ್ರಿಟಿಷ್ ಸರಕಾರ ಸಿಂಧ್ ಪ್ರಾಂತ್ಯಕ್ಕೆ ಕರೆಸಿ ಕೊಂಡಿತು. ಅಲ್ಲಿನ ನಗರ-ಹಳ್ಳಿಗಳಿಗೆ ನದಿ ನೀರಿನ ಹಂಚಿಕೆಯನ್ನು ಯಾವ ರೀತಿಯಲ್ಲಿ ಮಾಡ ಬೇಕೆಂಬುದಕ್ಕೆ ಅಧ್ಯಯನ ಮಾಡಿ ವರದಿ ನೀಡ ಬೇಕೆಂದು ಕೇಳಿ ಕೊಂಡಿತು. ನರಸಿಂಗ ರಾಯರು ಅದನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಿ ವರದಿ ಒಪ್ಪಿಸಿದರು. ಗಣಿತದಲ್ಲಿ ಅಪ್ರತಿಮ ಪಂಡಿತರಾಗಿದ್ದ ಅವರು ಸುಮಾರು ಇಪ್ಪತ್ತು- ಮೂವತ್ತು ವರ್ಷಗಳ ಎಲ್ಲಾ ಅಂಕಿ ಅಂಶಗಳನ್ನು ಒಟ್ಟು ಹಾಕಿ ಆಳವಾದ ಅಧ್ಯಯನ ಮಾಡಿ ಬರೆದ ಆ ವರದಿಯ ಆಧಾರದಲ್ಲೇ ಇಂದಿಗೂ ಭಾರತ-ಪಾಕಿಸ್ತಾನಗಳ ನಡುವೆ ನೀರಿನ ಹಂಚಿಕೆ ನಡೆಯುತ್ತಿದೆ. ಸದಾ ಬೆಂಕಿಯುಗುಳುವ ದೇಶಗಳ ಮಧ್ಯೆ ಕಳೆದ ಎಪ್ಪತ್ತು ವರ್ಷಗಳಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಮಸ್ಯೆ ಉದ್ಭವವಾಗಿಲ್ಲವೆಂದರೆ ಅದಕ್ಕೆ ಕಾರಣ ನರಸಿಂಗ ರಾಯರ ದೂರದೃಷ್ಟಿಯೇ ಎನ್ನ ಬೇಕು. ನದಿ ನೀರಿನ ವರದಿ ಕೊಟ್ಟ ಮೇಲೆ ಸರಕಾರ ಅವರನ್ನು ಮತ್ತೆ ಕಲ್ಕತ್ತಕ್ಕೆ ಕರೆಸಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿತು. 1944ರಲ್ಲಿ ಅವರು ಆ ಹುದ್ದೆಯಿಂದ ನಿವೃತ್ತರಾದೊಡನೆ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು!

ವೃತ್ತಿ ಜೀವನ

  • 1946ರಲ್ಲಿ, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ ಖಚಿತವಾದ ಮೇಲೆ ನರಸಿಂಗ ರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ತನ್ನ ಸೇವಾವಧಿಯಲ್ಲಿ ಸುಮಾರು ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಕೆಲಸ ಮಾಡಿದ ಅವರಿಗಿಂತ ಸೂಕ್ತ ವ್ಯಕ್ತಿ ಬೇರಾರಿದ್ದಾರು? ನರಸಿಂಗ ರಾಯರು ಸರಕಾರ ಕೇಳಿ ಕೊಂಡಂತೆ ಸಂವಿಧಾನದ ಕರಡು ಸಿದ್ಧ ಪಡಿಸಿದರು. ಇದರಲ್ಲಿ ಒಟ್ಟು 243 ವಿಧಿಗಳೂ 13 ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟು ಕೊಂಡು ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು. ರಾಯರು ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು; ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ 315 ವಿಧಿಗಳೂ 8 ಅನುಚ್ಛೇದಗಳೂ ಇದ್ದವು. ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ 395ಕ್ಕೇರಿತು. ತನ್ನ ಈ ಕರ್ತವ್ಯ
  • ಸಂವಿಧಾನ ಆಂಗೀಕೃತವಾದ ಸುವರ್ಣ ಮಹೋತ್ಸವದ ಸಂದರ್ಭದಲ್ಲೂ ಅದರ ಮೂಲಕರಡನ್ನು ತಯಾರಿಸಿ ಕೊ ನೆನಪಾಗಿಲ್ಲವೆಂದರೆ ಅದು ಈ ಗಣರಾಜ್ಯದ ದುರಂತ. ನರಸಿಂಗ ರಾಯರು, ಮೇಲೆ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆಯಾದರು. ಅದೇ ಸಮಯದಲ್ಲಿ ಬರ್ಮಾ ದೇಶ, ತನ್ನ ಸಂವಿಧಾನದ ಕರಡನ್ನು ಸ ರಾಯರನ್ನು ಕೇಳಿ ಕೊಂಡಿತು! ಆ ಕೆಲಸವನ್ನೂ ಪೂರೈಸಿ ಕೊಟ್ಟ ರಾಯರು, ವಿಶ್ವಸಂಸ್ಥೆಯಲ್ಲಿ ಒಂದೊಂದೇ ಹುದ್ದೆಗಳನ್ನು ಏರುತ್ತಾಹೋಗಿ 1950ರಲ್ಲಿ ಅದರ ಸೆಕ್ಯುರಿಟಿ ಕೌನ್ಸಿಲ್ನ ಅಧ್ಯಕ್ಷರಾಗಿ ಆಯ್ಕೆಯಾದರು. (ಇದರಲ್ಲಿ ಲೇಖಕರು ಆಧಾರವಿಲ್ಲದ ಮತ್ತು ರಾಜಕೀಯ ಇತಿಹಾಸದ ಅಜ್ಞಾನದಲ್ಲಿ ತಮ್ಮ ಸ್ವಂತ ಅಭಿಪ್ರಾಯ ಸೇರಿಸಿದ್ದಾರೆ) (ತಪ್ಪು ಪ್ರಚಾರ:- Xಆಗ ಭಾರತಕ್ಕೆ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ನ ಸದಸ್ಯ ರಾಷ್ಟ್ರವಾಗಲು ಚಿನ್ನದಂಥಾ ಅವಕಾಶ ಒದಗಿ ಬಂದಿತ್ತು. ಆದರೆ ಆ ಅದೃಷ್ಟವನ್ನು ನಮ್ಮ ದೇಶದ ಆಗಿನ ಪ್ರಧಾನಿ ನೆಹರೂ ಕೃಷ್ಣಾರ್ಪಣ ಮಾಡಿದ್ದರಿಂದ ಎಪ್ಪತ್ತು ವರ್ಷಗಳೇ ಕಳೆದರೂ ನಮಗೆ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಗಿಲ್ಲ.X. ಇದು ದುರುದ್ದೇಶದ ರಾಜಕೀಯದ ತಿಳುವಳಿಕೆ ಇಲ್ಲದವರ ತಪ್ಪು ಅಭಿಪ್ರಾಯ; ಸೆಕ್ಯುರಿಟಿ ಕೌನ್ಸಿಲ್ನಲ್ಲಿ ನರಸಿಂಗರಾಯರು ಅಧ್ಯಕ್ಷರಾದ ಮಾತ್ರಕ್ಕೆ ಅವರಿಗೆ ಸದಸ್ಯತ್ವ ಕೊಡುವ ಹಕ್ಕು ಏನೂ ಇಲ್ಲ; ಕೌನ್ಸಿಲ್ ಸದಸ್ಯರ ಪೂರ್ಣ ಒಮ್ಮತದ ಬೆಂಬಲ ಬೇಕು, ಒಬ್ಬರು ವಿಟೋ (ವಿರೋಧ) ಮಾಡಿದರೂ ನಿರ್ಣಯ ಬಿದ್ದು ಹೋಗುತ್ತದೆ. ಭಾರತಕ್ಕೆ ಪಾಕಿಸ್ಥಾನದೊದನೆ ಗಡಿ ವಿವಾದವಿದ್ದು ಅದು ಸೆಕ್ಯುರಿಟಿ ಕೌನ್ಸಿಲ್ನಲ್ಲಿ ವಿವಾದ ನಡೆಯುತ್ತಿತ್ತು, ಪಾಕೀಸ್ಥಾನದ ಪರ ಗಟ್ಟಿಯಾಗಿ ಅಮೇರಿಕಾ ಮತ್ತು ಬ್ರಿಟನ್ ನಿಂತಿದ್ದು ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಭಾರತದ ವಿರುದ್ಧ ನಿಲುವು ತಳೆದಿದ್ದವು. ಆಗ ರಷ್ಯಾ ಅನೇಕ ಬಾರಿ ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಭಾರತದ ಪರ ವಿಟೋ ಉಪಯೋಗಿಸಿ ಭಾರತವನ್ನು ರಕ್ಷಿಸಿತು. ಇದು ಆರೆಸ್ಸೆಸ್ಸ್‍ನವರ ಮತ್ತು ಬಿಜೆಪಿಯವರ ಅಪಪ್ರಚಾರ, ಸೆಕ್ಯುರಿಟಿ ಕೌನ್ಸಿಲ್ನಲ್ಲಿ ವಿವಾದ ಇದ್ದಾಗ ಅದು ಸದಸ್ಯನಾಗಲು ಬರುವುದಿಲ್ಲ. ಎರಡನೆಯದಾಗಿ ಪಾಕಿಸ್ಥಾನ ಅಮೆರಿಕಾ ಜೊತೆ ಸೈನಿಕ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದು, ಅಮೇರಿಕಾ ಅದಕ್ಕೆ ಸಹಾಯ ಮಾಡಲು ಬದ್ಧವಾಗಿತ್ತು. ಭಾರತವು ತನಗೆ, ಚೀನಾ ವಿಸ್ವಸಂಸ್ತೆ ಮತ್ತು ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಸಹಾಯ ಮಾಡಬಹುದೆಂದು ಭಾರತ ಕಮ್ಯೂನಿಸ್ಟ್ ಚೀನಾಕ್ಕೆ ಬೆಂಬಲ ನೀಡಿತು, ಆದರೆ ಅದು ಅಮೇರಿಕಾಕ್ಕೆ ಬದ್ಧ ವಿರೋಧಿಯಾಗಿದ್ದರೂ ಪ್ರಜಾತಂತ್ರವಿದ್ದ ಭಾರತಕ್ಕೆ ಸಹಾಯ ಮಾಡಲಿಲ್ಲ, ಬದಲಿಗೆ ಭಾರತದ ಕಮ್ಯುನಿಸ್ಟರಿಗೆ ಸಹಾಯ ಮಾಡಲು ಬಯಸಿತು; ಆಗ ರಾಷ್ಟ್ರೀಯ ಪಕ್ಷದ ರಿಪಬ್ಲಿಕ್ ಚೀನಾಕ್ಕೆ, ಚಿಯಾಂಗ್ ಕೈ-ಶೇಕ್ ಚೀನಾ ಅಧ್ಯಕ್ಷರಾಗಿದ್ದು 'ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಆಗಲೇ ಸದಸ್ಯತ್ವ ಹೊಂದಿತ್ತು', ಆದರೆ ಕಮ್ಯೂನಿಸ್ಟ್ ಚೀನಾಕ್ಕೆ ಯುದ್ಧದಲ್ಲಿ ಅದು ಸೋತು ತೈವಾನ್ ದ್ವೀಪದಲ್ಲಿ ಅಮೇರಿಕಾ ರಕ್ಷಣೆಯಲ್ಲಿತ್ತು. ಭಾರತವು ಚೀನಾದ ಮೇಲಿನ ಆಡಳಿತದ ಕಳೆದುಕೊಂಡ ತೈವಾನ್ ದ್ವೀಪದಲ್ಲಿದ್ದ ಅಧಿಕಾರವಿಲ್ಲದ ಚಿಯಾಂಗ್ ಕೈ-ಶೇಕ್‍ರ ಚೀನಾ ಬದಲಿಗೆ, ನಿಜವಾದ ಚೀ ಕಮ್ಯುನಿಸ್ಟ್ ಚೀನಾಕ್ಕೆ ಕೌನ್ಸಿಲ್ ಸದಸ್ಯತ್ವ ಕೊಡಲು ಬೆಂಬಲಿಸಿತು.)
  • 1952ರಲ್ಲಿ ವಿಶ್ವಸಂಸ ಕೈತಪ್ಪಿ ಹೋಯಿತು. ಆದರೇನಂತೆ, ಅವರು ಹೇಗ್ನಲ್ಲಿರುವ ಅಂತರ ರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾದರು. ಆದರೆ, ಆ ಹುದ್ದೆಯಲ್ಲಿ ಬಹುಕಾಲ ಮುಂದುವರಿಯಲು ಅದೃಷ್ಟ ಇರಲಿಲ್ಲವೋ ಏನೋ. 1953ರ ನವೆಂಬರ್ 30ರಂದು ಬೆನಗಲ್ ನರಸಿಂಗ ರಾಯರು ಜ್ಯೂರಿಕ್ನಲ್ಲಿ, ತನ್ನ 66ನೆಯ ವಯಸ್ಸಿನಲ್ಲಿ ನಿಧನರಾದರು. ನರಸಿಂಗ ರಾಯರ ಉಳಿದಿಬ್ಬರು ಸೋದರರೂ ಮಹಾರಥಿಗಳೇ. ಅವರ ಮೊದಲ ತಮ್ಮ ರಾಮರಾಯರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು. ಎರಡನೆ ತಮ್ಮ ಶಿವರಾಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಕಾರ್ಮಿಕ ಹೋರಾಟಗಾರ; ಜೊತೆಗೆ ಸಂಸದನೂ ಆಗಿದ್ದವರು. ತನ್ನ ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಬದುಕಿನ ಕೊನೆಯ ಹದಿನೈದು ವರ್ಷಗಳನ್ನು ಸಂಶೋಧನೆಗೆ ಮೀಸಲಿಟ್ಟ ವಿಚಿತ್ರ ಮತ್ತು ಅಪರೂಪದ ರಾಜಕಾರಣಿ ಅವರು. ಕಾರ್ಕಳದ ಬೆನಗಲ್ಲಿನಂಥ ಒಂದು ಪುಟ್ಟ ಊರಿಂದ ವಿಶ್ವಸಂಸ್ಥೆ, ಅಂತರ ರಾಷ್ಟ್ರೀಯ ನ್ಯಾಯಾಲಯಗಳಂಥ ಎತ್ತರಗಳನ್ನು ಏರಿದ, ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ, ಭಾರತದ ಸಂವಿಧಾನವನ್ನು ಬರೆಯುವಂಥ ಅವಕಾಶ ಪಡೆದ ಧೀಮಂತರು ನಮ್ಮ ದೇಶದಲ್ಲಿ ಹೆ ದೇಶಕ್ಕೆ ಮರು ನೆನಪಿಸುವ ಕೆಲಸವನ್ನು ಯಾವ ಜನಪ್ರತಿನಿಧಿಯೂ ಇದುವರೆಗೆ ಮಾಡಿಲ್ಲ ಎನ್ನುವುದು ನಮ್ಮ ಅಭಿಮಾನ ಶೂನ್ಯತೆಯನ್ನು ಎತ್ತಿ ತೋರಿಸುವಂತಿದೆ.

ನೋಡಿ

ಉಲ್ಲೇಖ

Tags:

ಬಿ.ಎನ್.ರಾವ್ ಬಾಲ್ಯ ಮತ್ತು ಶಿಕ್ಷಣಬಿ.ಎನ್.ರಾವ್ ವೃತ್ತಿ ಜೀವನಬಿ.ಎನ್.ರಾವ್ ನೋಡಿಬಿ.ಎನ್.ರಾವ್ ಉಲ್ಲೇಖಬಿ.ಎನ್.ರಾವ್

🔥 Trending searches on Wiki ಕನ್ನಡ:

ಅಡೋಲ್ಫ್ ಹಿಟ್ಲರ್ಬರಇದ್ದಿಲುಮಂಕುತಿಮ್ಮನ ಕಗ್ಗದೇವನೂರು ಮಹಾದೇವಶಾಲೆರವಿ ಬೆಳಗೆರೆಭಾರತದಲ್ಲಿನ ಜಾತಿ ಪದ್ದತಿಸಂಚಿ ಹೊನ್ನಮ್ಮಭಾರತೀಯ ಶಾಸ್ತ್ರೀಯ ನೃತ್ಯಮಲೈ ಮಹದೇಶ್ವರ ಬೆಟ್ಟಕರ್ನಾಟಕ ಲೋಕಸೇವಾ ಆಯೋಗಶಬ್ದನಿರಂಜನಭಾರತದಲ್ಲಿ ತುರ್ತು ಪರಿಸ್ಥಿತಿಇಂಡಿಯನ್ ಪ್ರೀಮಿಯರ್ ಲೀಗ್ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಕರ್ಣಾಟ ಭಾರತ ಕಥಾಮಂಜರಿದಾಳಿಂಬೆಸಂಗೊಳ್ಳಿ ರಾಯಣ್ಣಜಲ ಮಾಲಿನ್ಯಭಾರತೀಯ ಧರ್ಮಗಳುಸ್ತ್ರೀಚಂದ್ರಶೇಖರ ಕಂಬಾರಕುಮಾರವ್ಯಾಸಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ದ್ರಾವಿಡ ಭಾಷೆಗಳುಎಂ. ಕೆ. ಇಂದಿರನೈಸರ್ಗಿಕ ಸಂಪನ್ಮೂಲನಯಸೇನಮುಪ್ಪಿನ ಷಡಕ್ಷರಿಎಸ್. ಜಾನಕಿಕೈಕೇಯಿಚಿಪ್ಕೊ ಚಳುವಳಿಭಾರತ ಸಂವಿಧಾನದ ಪೀಠಿಕೆಉತ್ತರ ಕರ್ನಾಟಕಐಹೊಳೆಕಾವ್ಯಮೀಮಾಂಸೆಗುರುರಾಜ ಕರಜಗಿಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಯೋನಿಹನುಮಂತಪರಿಸರ ಕಾನೂನುಖೊಖೊಬಿ. ಎಂ. ಶ್ರೀಕಂಠಯ್ಯಚಂಪೂಸಂಧಿಉತ್ತರ ಕನ್ನಡಒಗಟುಕುತುಬ್ ಮಿನಾರ್ಕನ್ನಡ ಗುಣಿತಾಕ್ಷರಗಳುಶಾತವಾಹನರುಸಾರಾ ಅಬೂಬಕ್ಕರ್ಗೌತಮ ಬುದ್ಧಪ್ರಕಾಶ್ ರೈಜಯಮಾಲಾರೆವರೆಂಡ್ ಎಫ್ ಕಿಟ್ಟೆಲ್ಸಂಪ್ರದಾಯಕ್ರೈಸ್ತ ಧರ್ಮಕ್ರಿಕೆಟ್ಭಾರತೀಯ ಮೂಲಭೂತ ಹಕ್ಕುಗಳುಬಸವೇಶ್ವರಸಿರಿ ಆರಾಧನೆಕಾದಂಬರಿರಾಷ್ಟ್ರೀಯ ಸೇವಾ ಯೋಜನೆಕೇಂದ್ರ ಲೋಕ ಸೇವಾ ಆಯೋಗಹಲ್ಮಿಡಿಪರಿಣಾಮಪೊನ್ನನವೋದಯವೆಂಕಟೇಶ್ವರಸೌರಮಂಡಲಫಿರೋಝ್ ಗಾಂಧಿಹುಣ್ಣಿಮೆವೈದೇಹಿಅಲ್ಲಮ ಪ್ರಭುಭಾರತದ ಸರ್ವೋಚ್ಛ ನ್ಯಾಯಾಲಯಅಂಟು🡆 More