ಪುರಾಣಗಳು

ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ, ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ,ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು.

ಈ ಲೇಖನ ಹಿಂದೂ ಧರ್ಮದ ಪುರಾತನ ಸಾಹಿತ್ಯ ಪ್ರಕಾರದ ಬಗ್ಗೆ ಅನೇಕ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿನ ದಂತಕಥೆಗಳ ಸಮೂಹದ ಬಗ್ಗೆ ಲೇಖನವು ಪುರಾಣ ಎಂಬ ಪುಟದಲ್ಲಿ ಇದೆ.

ಪುರಾಣಗಳಲ್ಲಿ ಮಹಾ ಪುರಾಣವೆಂದೂ, ಉಪ ಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. ಮಹಾಭಾರತ ಮತ್ತು ರಾಮಾಯಣಗಳು ಐತಿಹಾಸಿಕ ಮಹಾಕಾವ್ಯಗಳು, ಹಾಗಾಗಿ ಇವು ಪುರಾಣಗಳಲ್ಲಿ ಸೇರಿಲ್ಲ.

ಪುರಾಣಗಳು
ಭಾಗವತ ಪುರಾಣದ ಒಂದು ದೃಶ್ಯ

ಮಹಾಪುರಾಣಗಳು

  • ಮಹಾಪುರಾಣಗಳು ೧೮. ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ (೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.)
  • ೧೮ ಮಹಾಪುರಾಣಗಳು ಹೀಗಿವೆ:-
      ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಂ|
      ಅ ನಾ ಪ ಲಿಂ ಗ ಕೂ ಸ್ಕಾನಿ ಪುರಾಣಾನಿ ಪ್ರಚಕ್ಷತೇ||
    ಮಕಾರಾದಿಯಾಗಿ ಎರಡು 1) ಮತ್ಸ್ಯ ಮತ್ತು 2) ಮಾರ್ಕಂಡೇಯ ಭಕಾರಾದಿಯಾಗಿ ಎರಡು- 3) ಭವಿಷ್ಯ ಮತ್ತು 4) ಭಾಗವತ; ಬ್ರಕಾರಾದಿಯಾಗಿ ಮೂರು- 5) ಬ್ರಹ್ಮಾಂಡ, 6) ಬ್ರಹ್ಮವೈವರ್ತ, ಮತ್ತು 7) ಬ್ರಾಹ್ಮ; ವಕಾರಾದಿಯಾಗಿ ನಾಲ್ಕು- 8) ವಾಮನ, 9) ವರಾಹ, 10) ವಿಷ್ಣು ಮತ್ತು 11) ವಾಯು; 13) ಅಗ್ನಿ, 13) ನಾರದ, 14) ಪದ್ಮ, 15) ಲಿಂಗ, 16) ಗರುಡ, 17) ಕೂರ್ಮ, 18) ಸ್ಕಂದ.
    ಸಾಂಪ್ರದಾಯಿಕ ಗಣನೆಯ ಮೇರೆಗೆ ಬ್ರಾಹ್ಮ, ವೈಷ್ಣವ, ವಾಯವ್ಯ, ಭಾಗವತ, ನಾರದೀಯ, ಮಾರ್ಕಂಡೇಯ, ಆಗ್ನೇಯ, ಭವಿಷ್ಯ, ಬ್ರಹ್ಮವೈವರ್ತ, ಮತ್ಸ್ಯ, ವರಾಹ, ಲೈಂಗ, ಸ್ಕಾಂದ, ವಾಮನ, ಕೌರ್ಮ, ಗಾರುಡ ಮತ್ತು ಬ್ರಹ್ಮಾಂಡಗಳೆಂಬುವೇ 18 ಮಹಾಪುರಾಣಗಳು. ಈ ಪಟ್ಟಿಯಲ್ಲಿ ವಾಯವ್ಯಕ್ಕೆ ಬದಲಾಗಿ ದೇವೀಭಾಗವತವನ್ನೂ ಸೇರಿಸಿದ ಪಾಠಾಂತರಗಳಿವೆ. ಆದರಿವು ವಾಸ್ತವಿಕವಾಗಿ ಉಪಪುರಾಣಗಳು. ಹರಿವಂಶವನ್ನೂ ಅಷ್ಟಾದಶಪುರಾಣಗಳ ಜೊತೆಗೆ ಸೇರಿಸುವವರಿದ್ದಾರೆ. ಅದು ಅಷ್ಟೇನೂ ಉಚಿತವಲ್ಲ.

ಪುರಾಣಗಳ ಪಟ್ಟಿ

ಕ್ರಮ ಸಂಖ್ಯೆ ಪುರಾಣದ ಹೆಸರು ಶ್ಲೋಕಗಳ ಸಂಖ್ಯೆ
೦೧ ಮತ್ಸ್ಯ ಪುರಾಣ ೧೪೦೦೦
೦೨ ಮಾರ್ಕಂಡೇಯ ಪುರಾಣ ೯೦೦೦
೦೩ ಭಾಗವತ ಪುರಾಣ ೧೮೦೦೦
೦೪ ಭವಿಷ್ಯ ಪುರಾಣ ೧೪೫೦೦
೦೫ ಬ್ರಹ್ಮ ಪುರಾಣ ೧೦೦೦೦
೦೬ ಬ್ರಹ್ಮಾಂಡ ಪುರಾಣ ೧೨೦೦೦
೦೭ ಬ್ರಹ್ಮವೈವರ್ತ ಪುರಾಣ ೧೮೦೦೦
೦೮ ವಿಷ್ಣು ಪುರಾಣ ೨೩೦೦೦
೦೯ ವರಾಹ ಪುರಾಣ ೨೪೦೦೦
೧೦ ವಾಮನ ಪುರಾಣ ೧೦೦೦೦
೧೧ ವಾಯು ಪುರಾಣ ೨೪೦೦೦
೧೨ ಅಗ್ನಿ ಪುರಾಣ ೧೦೫೦೦
೧೩ ನಾರದ ಪುರಾಣ ೨೫೦೦೦
೧೪ ಪದ್ಮ ಪುರಾಣ ೫೫೦೦೦
೧೫ ಲಿಂಗ ಪುರಾಣ ೧೧೦೦೦
೧೬ ಗರುಡ ಪುರಾಣ ೧೯೦೦೦
೧೭ ಕೂರ್ಮ ಪುರಾಣ ೧೭೦೦೦
೧೮ ಸ್ಕಂದ ಪುರಾಣ ೮೦೧೦೦

ಹೆಚ್ಚಿನ ಓದಿಗೆ

ಉಲ್ಲೇಖಗಳು

Tags:

ಪುರಾಣಗಳು ಮಹಾಪುರಾಣಗಳು ಪುರಾಣಗಳ ಪಟ್ಟಿಪುರಾಣಗಳುಮಹಾಭಾರತರಾಮಾಯಣವೇದಹಿಂದೂ ಧರ್ಮ

🔥 Trending searches on Wiki ಕನ್ನಡ:

ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪ್ರಾಥಮಿಕ ಶಾಲೆರಾಮ ಮನೋಹರ ಲೋಹಿಯಾಕನ್ನಡ ಗುಣಿತಾಕ್ಷರಗಳುಮೈಗ್ರೇನ್‌ (ಅರೆತಲೆ ನೋವು)ಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಮಲೆಗಳಲ್ಲಿ ಮದುಮಗಳುಡಿ.ಎಲ್.ನರಸಿಂಹಾಚಾರ್ಹೊಯ್ಸಳ ವಿಷ್ಣುವರ್ಧನಯೋಗವಾಹವಜ್ರಮುನಿಭಾರತೀಯ ಜನತಾ ಪಕ್ಷಯಕೃತ್ತುವಚನ ಸಾಹಿತ್ಯಹಲ್ಮಿಡಿ ಶಾಸನಅಲ್ಬರ್ಟ್ ಐನ್‍ಸ್ಟೈನ್ಭ್ರಷ್ಟಾಚಾರಕನ್ನಡ ಸಾಹಿತ್ಯ ಸಮ್ಮೇಳನಪ್ರಜಾಪ್ರಭುತ್ವಹಲಸುಪಶ್ಚಿಮ ಘಟ್ಟಗಳುಛತ್ರಪತಿ ಶಿವಾಜಿತ್ರಯಂಬಕಂ (ಚಲನಚಿತ್ರ)ಅಶ್ವಮೇಧಭಾರತದ ಮುಖ್ಯ ನ್ಯಾಯಾಧೀಶರುಅಶ್ವತ್ಥಾಮಅರ್ಜುನಉಪನಯನತಾಲ್ಲೂಕುಎಡ್ವಿನ್ ಮೊಂಟಾಗುಭಾರತ ಬಿಟ್ಟು ತೊಲಗಿ ಚಳುವಳಿಸಂಪತ್ತಿನ ಸೋರಿಕೆಯ ಸಿದ್ಧಾಂತಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಅಜಯ್ ರಾವ್‌ಚಂದ್ರಶೇಖರ ವೆಂಕಟರಾಮನ್ರಾಮ್ ಮೋಹನ್ ರಾಯ್ಪ್ಲಾಸಿ ಕದನಹಿಂದೂ ಧರ್ಮಪ್ರಾಥಮಿಕ ಶಿಕ್ಷಣಭಾರತದ ರೂಪಾಯಿಸೌರಮಂಡಲಊಳಿಗಮಾನ ಪದ್ಧತಿಚಂದ್ರಶೇಖರ ಕಂಬಾರಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲಿತಆಸ್ಪತ್ರೆಪ್ರಬಂಧ ರಚನೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮಂಗಳೂರುಪುರಂದರದಾಸಮಲೈ ಮಹದೇಶ್ವರ ಬೆಟ್ಟಲೋಕಸಭೆಬುಡಕಟ್ಟುಹುಲಿಚಾರ್ಲ್ಸ್ ಬ್ಯಾಬೇಜ್ಮಹಾತ್ಮ ಗಾಂಧಿವೈದೇಹಿಗೋತ್ರ ಮತ್ತು ಪ್ರವರಸತೀಶ್ ನಂಬಿಯಾರ್ಚಂದ್ರಸಾಮಾಜಿಕ ಮಾರುಕಟ್ಟೆಛಾಯಾಗ್ರಹಣಕಲ್ಪನಾಆದಿವಾಸಿಗಳುಹೊಂಗೆ ಮರತ್ರಿಪದಿರೋಸ್‌ಮರಿಶನಿಭಾರತೀಯ ಸ್ಟೇಟ್ ಬ್ಯಾಂಕ್ಭಾರತದ ಸ್ವಾತಂತ್ರ್ಯ ಚಳುವಳಿಭೂಕಂಪಯು.ಆರ್.ಅನಂತಮೂರ್ತಿದರ್ಶನ್ ತೂಗುದೀಪ್ರೈತವಾರಿ ಪದ್ಧತಿ🡆 More