ನೆಗಡಿ

ನೆಗಡಿ ಯು ಮೇಲ್ಭಾಗದ ಉಸಿರಾಟದ ವ್ಯವಸ್ಥೆಯ ಒಂದು ಸಾಂಕ್ರಾಮಿಕವಾದ, ವೈರಾಣುವಿನ ಸೋಂಕು ಹರಡುವ ಕಾಯಿಲೆಯಾಗಿದ್ದು, ಮೂಗಿನ ವೈರಾಣುಗಳು (ರೈನೋವೈರಸ್‌‌ಗಳು) ಮತ್ತು ಮುಕುಟ ವೈರಾಣುಗಳಿಂದ (ಕರೋನಾ ವೈರಸ್‌ಗಳು) ಅದು ಪ್ರಧಾನವಾಗಿ ಉಂಟಾಗುತ್ತದೆ.

ಒಂದು ಕೆಮ್ಮು, ನೋಯುತ್ತಿರುವ ಗಂಟಲು, ಸ್ರವಿಸುವ ಮೂಗು, ಮತ್ತು ಜ್ವರ ಇವುಗಳು ಸಾಮಾನ್ಯ ರೋಗಲಕ್ಷಣಗಳಲ್ಲಿ ಸೇರಿಕೊಂಡಿವೆ. ಇದಕ್ಕೆ ಸದ್ಯಕ್ಕೆ ಯಾವುದೇ ತಿಳಿದ ಔಷಧಿಯಿಲ್ಲ; ಆದಾಗ್ಯೂ, ರೋಗಲಕ್ಷಣಗಳು ಸಾಮಾನ್ಯವಾಗಿ 7ರಿಂದ 10 ದಿನಗಳಲ್ಲಿ ಅಪ್ರಯತ್ನಿತವಾಗಿ ಪರಿಹರಿಸಲ್ಪಟ್ಟರೆ, ಕೆಲವೊಂದು ರೋಗಲಕ್ಷಣಗಳು ಪ್ರಾಯಶಃ ಮೂರು ವಾರಗಳವರೆಗೂ ಉಳಿದುಕೊಂಡಿರುತ್ತವೆ.

Common cold
Classification and external resources
ನೆಗಡಿ
Molecular surface of one variant of human rhinovirus.
ICD-10J00.0
ICD-9460
DiseasesDB31088
MedlinePlus000678
eMedicineaaem/118 med/2339
MeSHD003139

ನೆಗಡಿಯು ಮಾನವರಲ್ಲಿ ಹೆಚ್ಚು ಬಾರಿ ಪುನರಾವರ್ತಿಸುವ ಸೋಂಕಿನ ಕಾಯಿಲೆಯಾಗಿದ್ದು, ವರ್ಷವೊಂದರಲ್ಲಿ ವಯಸ್ಕರಲ್ಲಿ ಸರಾಸರಿಯಾಗಿ ಎರಡರಿಂದ ನಾಲ್ಕು ಬಾರಿ ಕಂಡುಬಂದರೆ, ಮಕ್ಕಳಲ್ಲಿ 6ರಿಂದ 12 ಬಾರಿ ಕಂಡುಬರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಶೀತಗಳು, ಇನ್‌ಫ್ಲುಯೆನ್ಸ, ಮತ್ತು ಇದೇ ಬಗೆಯ ರೋಗಲಕ್ಷಣಗಳೊಂದಿಗಿನ ಇತರ ಸೋಂಕುಗಳು ಇನ್‌ಫ್ಲುಯೆನ್ಸ-ರೀತಿಯ ಅಸ್ವಸ್ಥತೆಯ ರೋಗನಿರ್ಣಯದಲ್ಲಿ ಸೇರಿಕೊಂಡಿವೆ. ಅವುಗಳನ್ನು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕುಗಳು (ಅಪ್ಪರ್‌ ರೆಸ್ಪಿರೇಟರಿ ಟ್ರಾಕ್ಟ್‌ ಇನ್‌ಫೆಕ್ಷನ್ಸ್‌-URTI) ಎಂದೂ ಸಹ ಕರೆಯಬಹುದಾಗಿದೆ. ಇನ್‌ಫ್ಲುಯೆನ್ಸ ಕಾಯಿಲೆಯು ಶ್ವಾಸಕೋಶಗಳನ್ನು ಒಳಗೊಡಿದ್ದರೆ, ನೆಗಡಿಯಲ್ಲಿ ಅದು ಸೇರಿರುವುದಿಲ್ಲ.

ಚಿಹ್ನೆಗಳು ಹಾಗೂ ರೋಗ ಲಕ್ಷಣಗಳು

ರೋಗಲಕ್ಷಣಗಳಲ್ಲಿ ಕೆಮ್ಮು, ನೋಯುತ್ತಿರುವ ಗಂಟಲು, ಸ್ರವಿಸುವ ಮೂಗು, ಮತ್ತು ಮೂಗು ಕಟ್ಟುವಿಕೆ ಇವು ಸೇರಿಕೊಂಡಿವೆ; ಕೆಲವೊಮ್ಮೆ ಇವುಗಳೊಂದಿಗೆ ಕಣ್ಣಿನ ಕೂಡುಪೊರೆಯ ಉರಿಯೂತ (ಕೆಂಗಣ್ಣು ಬೇನೆ), ಸ್ನಾಯು ನೋವುಗಳು, ಬಳಲಿಕೆ, ತಲೆನೋವುಗಳು, ನಡುಗುವಿಕೆ, ಮತ್ತು ಹಸಿವಾಗದಿರುವಿಕೆ ಮೊದಲಾದವು ಜತೆಗೂಡಿ ಬರಬಹುದಾಗಿವೆ. ಜ್ವರವು ಅನೇಕವೇಳೆ ಕಂಡುಬರುತ್ತದೆಯಾದ್ದರಿಂದ, ಇನ್‌ಫ್ಲುಯೆನ್ಸದೊಂದಿಗೆ ಅತಿಕ್ರಮಿಸುವ ಒಂದು ರೋಗಲಕ್ಷಣದ ಚಿತ್ರಣವನ್ನು ಅದು ಸೃಷ್ಟಿಸುತ್ತದೆ. ಆದಾಗ್ಯೂ, ಇನ್‌ಫ್ಲುಯೆನ್ಸದ ರೋಗಲಕ್ಷಣಗಳು ಸಾಮಾನ್ಯವಾಗಿ ಹೆಚ್ಚು ತೀವ್ರವಾಗಿರುತ್ತವೆ. ನೆಗಡಿಯು ಸಾಮಾನ್ಯವಾಗಿ 7ರಿಂದ 10 ದಿನಗಳಲ್ಲಿ ಅಪ್ರಯತ್ನಿತವಾಗಿ ಪರಿಹರಿಸಲ್ಪಡುತ್ತದೆಯಾದರೂ, ಕೆಲವೊಂದು ರೋಗಲಕ್ಷಣಗಳು ಮೂರು ವಾರಗಳವರೆಗೆ ಉಳಿದುಕೊಳ್ಳಬಲ್ಲವಾಗಿರುತ್ತವೆ. 35–40%ನಷ್ಟು ಭಾಗದ ಮಕ್ಕಳಲ್ಲಿ ಕೆಮ್ಮು 10 ದಿನಗಳಿಗಿಂತಲೂ ಹೆಚ್ಚಿನ ಅವಧಿಯವರೆಗಿದ್ದರೆ, 10%ನಷ್ಟು ಭಾಗದ ಮಕ್ಕಳಲ್ಲಿ ಅದು 25 ದಿನಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ ಮುಂದುವರಿಯುತ್ತದೆ.

ಶೀತಗಳಿಂದ ಬಳಲುತ್ತಿರುವವರು ಅನೇಕವೇಳೆ ಚಳಿಯ ಒಂದು ಸಂವೇದನೆಯ ಕುರಿತು ಹೇಳಿಕೊಳ್ಳುತ್ತಾರಾದರೂ, ಶೀತದೊಂದಿಗೆ ಜ್ವರವು ಸಾಮಾನ್ಯವಾಗಿ ಜತೆಗೂಡಿ ಬರುವುದಿಲ್ಲ; ಅಷ್ಟೇ ಅಲ್ಲ, ಚಳಿಗಳು ಸಾಮಾನ್ಯವಾಗಿ ಜ್ವರದೊಂದಿಗೆ ಸಂಬಂಧಿಸಿರುತ್ತವೆಯಾದರೂ, ಎಲ್ಲ ಸಮಯಗಳಲ್ಲೂ ವಾಸ್ತವಿಕ ಜ್ವರದಿಂದಲೇ ಸಂವೇದನೆಯು ಉಂಟಾಗಿರಬಹುದು ಎಂದೇನೂ ಇಲ್ಲ. ಅಧ್ಯಯನವೊಂದರಲ್ಲಿ, ಒಂದು ನೋಯುತ್ತಿರುವ ಗಂಟಲು ಮತ್ತು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕಿನಿಂದ ಬಳಲುತ್ತಿರುವವರ ಪೈಕಿ 60%ನಷ್ಟು ಮಂದಿ ತಮಗೆ ತಲೆನೋವುಗಳು ಇರುವುದರ ಕುರಿತು ಹೇಳಿಕೊಂಡಿದ್ದಾರಾದರೂ, ಇದಕ್ಕೆ ಮೂಗು ಕಟ್ಟುವಿಕೆಯು ಅನೇಕವೇಳೆ ಕಾರಣವಾಗಿರುತ್ತದೆ.

ಮುನ್ನಡೆ

ಆರಂಭಿಕ ಸಂಪರ್ಕವಾದ 8ರಿಂದ 12 ಗಂಟೆಗಳ ನಂತರ ವೈರಾಣುವಿನ ನಕಲೀಕರಣವು ಆರಂಭವಾಗುತ್ತದೆ. ಆರಂಭಿಕ ಸೋಂಕು ಉಂಟಾದ 2ರಿಂದ 5 ದಿನಗಳ ನಂತರ ರೋಗಲಕ್ಷಣಗಳು ಸಾಮಾನ್ಯವಾಗಿ ಆರಂಭವಾಗುತ್ತವೆಯಾದರೂ, 10 ಗಂಟೆಗಳಷ್ಟು ಅಲ್ಪಕಾಲದ ನಂತರ ಅವು ಆಗೊಮ್ಮೆ ಈಗೊಮ್ಮೆ ಸಂಭವಿಸುತ್ತವೆ. ರೋಗಲಕ್ಷಣದ ಆಕ್ರಮಣವಾದ 2–3 ದಿನಗಳ ನಂತರ ರೋಗಲಕ್ಷಣಗಳು ಗರಿಷ್ಟ ಮಟ್ಟವನ್ನು ಮುಟ್ಟಿದರೆ, ಇನ್‌ಫ್ಲುಯೆನ್ಸ ರೋಗಲಕ್ಷಣದ ಆಕ್ರಮಣವು ಸ್ಥಿರವಾದ ಮತ್ತು ತಕ್ಷಣದ ಸ್ವರೂಪವನ್ನು ಹೊಂದಿರುತ್ತವೆ. ಸದರಿ ರೋಗಲಕ್ಷಣಗಳು 7ರಿಂದ 10 ದಿನಗಳಲ್ಲಿ ಅಪ್ರಯತ್ನಿತವಾಗಿ ಪರಿಹರಿಸಲ್ಪಡುತ್ತವೆಯಾದರೂ, ಕೆಲವೊಂದು ರೋಗಲಕ್ಷಣಗಳು ಮೂರು ವಾರಗಳವರೆಗೆ ಉಳಿದುಕೊಂಡಿರಬಲ್ಲವು.

ನೋಯುತ್ತಿರುವ ಅಥವಾ ಕೆರೆಯುತ್ತಿರುವ ಗಂಟಲಿನ ಒಂದು ಸ್ಥಿತಿಯು, ಅನೇಕವೇಳೆ ಮೇಲ್ಭಾಗದ ಉಸಿರಾಟದ ಪ್ರದೇಶದ ವೈರಾಣುವೊಂದರ ಮೊದಲ ಸೂಚನೆಯಾಗಿರುತ್ತದೆ. ಇತರ ಸಾಮಾನ್ಯ ರೋಗಲಕ್ಷಣಗಳಲ್ಲಿ ಸ್ರವಿಸುವ ಮೂಗು, ಕಟ್ಟುವಿಕೆ, ಮತ್ತು ಸೀನುವಿಕೆ ಸೇರಿಕೊಂಡಿವೆ. ಕೆಲವೊಮ್ಮೆ ಇವುಗಳ ಜತೆಗೂಡಿ ಸ್ನಾಯು ನೋವುಗಳು, ಬಳಲಿಕೆ, ಇರಸು ಮುರಸು, ತಲೆನೋವು, ಅಶಕ್ತತೆ, ಅಥವಾ ಹಸಿವಾಗದಿರುವಿಕೆಯ ಸಮಸ್ಯೆಗಳೂ ತಲೆದೋರುತ್ತವೆ. ಸರಿಸುಮಾರಾಗಿ 80%ನಷ್ಟಿರುವ ಒಂದು ಧನಾತ್ಮಕವಾದ ಊಹಿಸುವ ಮೌಲ್ಯದೊಂದಿಗೆ ಕೆಮ್ಮು ಮತ್ತು ಜ್ವರಗಳು ಮೇಲ್ಭಾಗದ ಉಸಿರಾಟದ ಪ್ರದೇಶದ ಒಂದು ವೈರಾಣುವಿಗಿಂತ ಹೆಚ್ಚಾಗಿ, ಇನ್‌ಫ್ಲುಯೆನ್ಸವನ್ನು ಸಾಮಾನ್ಯವಾಗಿ ಸೂಚಿಸುತ್ತವೆ. ಶಿಶುಗಳು ಮತ್ತು ಕಿರಿಯ ಮಕ್ಕಳಲ್ಲಿ ರೋಗಲಕ್ಷಣಗಳು ಹೆಚ್ಚು ತೀವ್ರವಾಗಿರಬಹುದು, ಮತ್ತು ಈ ಪ್ರಕರಣಗಳಲ್ಲಿ ಇದು ಜ್ವರ ಮತ್ತು ಗಂಟಲು ಉರಿಯೂತವನ್ನು ಒಳಗೊಂಡಿರಬಹುದು. ಮೇಲ್ಭಾಗದ ಉಸಿರಾಟದ ಪ್ರದೇಶದ ವೈರಾಣುಗಳು ಧೂಮಪಾನಿಗಳಲ್ಲಿ ಹೆಚ್ಚು ತೀವ್ರವಾಗಿರಲೂಬಹುದು.

ತೊಡಕುಗಳು

ನೆಗಡಿಯು ಅನೇಕ ಬಗೆಯ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಅವುಗಳೆಂದರೆ: ಶ್ವಾಸನಾಳಗಳ ಒಳಪೊರೆಯ ತೀವ್ರವಾದ ಉರಿಯೂತ, ಶ್ವಾಸನಾಳದ ಒಂದು ಸೂಕ್ಷ್ಮ ಕವಲಿನ ಉರಿಯೂತ, ಗಂಟಲುರಿ, ನ್ಯುಮೋನಿಯ, ಮೂಗಿನ ಸೈನಸ್‌ನ ಉದ್ರೇಕ, ಕಿವಿಯ ನಡುಪೊರೆಯ ಉರಿಯೂತ, ಅಥವಾ ಸ್ಟ್ರೆಪ್ಟಕಾಕಸ್‌ ಸೋಂಕಿಗೊಳಗಾದ ಗಂಟಲು. ಉಬ್ಬಸ ಮತ್ತು COPDಯಂಥ ದೀರ್ಘಕಾಲಿಕ ಶ್ವಾಸಕೋಶ ಕಾಯಿಲೆಗಳಿಂದ ಬಳಲುತ್ತಿರುವ ಜನರು ಇವಕ್ಕೆ ವಿಶೇಷವಾಗಿ ಗುರಿಯಾಗುತ್ತಾರೆ. ಉಬ್ಬಸ, ವಾತಶೋಥ ಅಥವಾ ಶ್ವಾಸನಾಳಗಳ ಒಳಪೊರೆಯ ದೀರ್ಘಕಾಲಿಕ ಉರಿಯೂತದ ತೀವ್ರವಾದ ಉಲ್ಬಣಗಳನ್ನು ಶೀತಗಳು ಉಂಟುಮಾಡಬಹುದು.

ಕಾರಣ

ವೈರಾಣುಗಳು

ಮೇಲ್ಭಾಗದ ಶ್ವಾಸೇಂದ್ರಿಯದ ಪ್ರದೇಶದ ಒಂದು ವೈರಾಣುವಿನ ಸೋಂಕಿನಿಂದಾಗಿ ನೆಗಡಿಯು ಉಂಟಾಗುತ್ತದೆ. ಮೂಗಿನ ವೈರಾಣುವೊಂದು (30–50%) ಅತ್ಯಂತ ಸಾಮಾನ್ಯವಾಗಿ ಸೂಚಿಸಲ್ಪಟ್ಟಿರುವ ವೈರಾಣುವಾಗಿದ್ದು, ಇದು 99 ಜ್ಞಾತ ಸೆರೋಟೈಪ್‌ಗಳನ್ನು ಹೊಂದಿರುವ ಪಿಕೊರ್ನಾ ವೈರಾಣುವಿನ ಒಂದು ಬಗೆಯಾಗಿದೆ. ಇತರ ವೈರಾಣುಗಳಲ್ಲಿ ಇವು ಸೇರಿವೆ: ಮುಕುಟವೈರಾಣು (10–15%), ಇನ್‌ಫ್ಲುಯೆನ್ಸ (5–15%), ಮಾನವ ಪ್ಯಾರಾಇನ್‌ಫ್ಲುಯೆನ್ಸದ ವೈರಾಣುಗಳು, ಮಾನವ ಉಸಿರಾಟದ ಏಕಜೀವಾಣುವಿನ ಪ್ರೋಟೋಪ್ಲಾಸಮ್‌ನ ವೈರಾಣು, ಅಡೆನೋ ವೈರಾಣುಗಳು, ಎಂಟೆರೋ ವೈರಾಣುಗಳು, ಮತ್ತು ಮೆಟಾನ್ಯೂಮೋ ವೈರಾಣು.

ಒಟ್ಟಾರೆಯಾಗಿ ಹೇಳುವುದಾದರೆ, ಸೀರಮ್‌ ಶಾಸ್ತ್ರೀಯವಾಗಿ ವಿಭಿನ್ನವಾಗಿರುವ 200ಕ್ಕೂ ಹೆಚ್ಚಿನ ಬಗೆಯ ವೈರಾಣುಗಳು ಶೀತಗಳನ್ನು ಉಂಟುಮಾಡುತ್ತವೆ. ವಯಸ್ಕರಲ್ಲಿ ಕಂಡುಬರುವ ಶೀತಗಳಲ್ಲಿ ಮುಕುಟವೈರಾಣುಗಳು ನಿರ್ದಿಷ್ಟವಾಗಿ ಸೂಚಿಸಲ್ಪಟ್ಟಿವೆ. 30ಕ್ಕೂ ಹೆಚ್ಚಿನ ಮುಕುಟ ವೈರಾಣುಗಳ ಪೈಕಿ 3 ಅಥವಾ 4 ವೈರಾಣುಗಳು ಮಾನವರಲ್ಲಿ ಸೋಂಕುಗಳನ್ನು ಉಂಟುಮಾಡುತ್ತವೆಯಾದರೂ, ಅವನ್ನು ಪ್ರಯೋಗಾಲಯದಲ್ಲಿ ಬೆಳೆಸುವುದು ಕಷ್ಟ ಮತ್ತು ಹೀಗಾಗಿ ಅವುಗಳ ಪ್ರಾಮುಖ್ಯತೆಯು ಕಡಿಮೆ ಮಟ್ಟದಲ್ಲಿ ಅರ್ಥೈಸಿಕೊಳ್ಳಲ್ಪಟ್ಟಿದೆ. ಅನೇಕ ವಿಭಿನ್ನ ಬಗೆಯ ವೈರಾಣುಗಳ ಕಾರಣದಿಂದಾಗಿ ಮತ್ತು ನಿರಂತರವಾಗಿ ಹಠಾತ್‌ ಬದಲಾಗುವ ಅವುಗಳ ಪ್ರವೃತ್ತಿಯಿಂದಾಗಿ, ನೆಗಡಿಗೆ ಸಂಬಂಧಿಸಿದಂತೆ ಸಂಪೂರ್ಣ ಪ್ರತಿರಕ್ಷಕ ಗುಣವನ್ನು ಗಳಿಸುವುದು ಅಸಾಧ್ಯವಾಗಿದೆ.

ಅಪಾಯಕಾರಿ ಅಂಶಗಳು

  • ಒಂದು ಆವರಿಸಲ್ಪಟ್ಟಿರುವ ಪ್ರದೇಶದಲ್ಲಿ ಸೋಂಕಿಗೊಳಗಾದ ಓರ್ವ ವ್ಯಕ್ತಿಯೊಂದಿಗೆ ಸಮಯವನ್ನು ವಿನಿಯೋಗಿಸುವುದು ಅಥವಾ ಸೋಂಕಿಗೊಳಗಾದ ಓರ್ವ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕವನ್ನು ಹೊಂದುವುದು. ನೆಗಡಿಗಳು ಸಣ್ಣಹನಿಯಿಂದ ಪ್ರವಹಿಸಲ್ಪಡುವ ಸೋಂಕುಗಳಾಗಿವೆ; ಅಂದರೆ, ಸೋಂಕಿಗೊಳಗಾದ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ, ಅಥವಾ ನಿಶ್ವಾಸ ಬಿಟ್ಟಾಗ ಅವನು ಅಥವಾ ಅವಳು ಹೊರಹೊಮ್ಮಿಸುವ ಸಣ್ಣ ಕಣಗಳನ್ನು ಉಸಿರಿನಲ್ಲಿ ತೆಗೆದುಕೊಳ್ಳುವ ಮೂಲಕ ಅವು ಪ್ರಧಾನವಾಗಿ ರವಾನೆಯಾಗುತ್ತವೆ.
  • ನೆಗಡಿಯನ್ನು ಉಂಟುಮಾಡುವಲ್ಲಿನ ಶರೀರದ ತಂಪಾಗುವಿಕೆಯ ಪಾತ್ರವು ವಿವಾದಾತ್ಮಕವಾಗಿದೆ. ಇದು ಕಾಯಿಲೆಗೆ ಸಂಬಂಧಿಸಿದಂತೆ ಜನಸಾಮಾನ್ಯರಿಂದ ಅತ್ಯಂತ ಸಾಮಾನ್ಯವಾಗಿ ನೀಡಲ್ಪಡುವ ವಿವರಣೆಯಾಗಿದ್ದು, ಒಂದಷ್ಟು ಪ್ರಯೋಗಾತ್ಮಕ ಪುರಾವೆಯನ್ನು ಇದು ಸ್ವೀಕರಿಸಿದೆ. ಅಧ್ಯಯನವೊಂದು ತೋರಿಸಿರುವ ಪ್ರಕಾರ, ಶೀತಕ್ಕೆ ಒಡ್ಡಿಕೊಳ್ಳುವುದರಿಂದಾಗಿ, ಹಾಗೆ ಒಡ್ಡಿಕೊಂಡವರ ಪೈಕಿ ಸುಮಾರು 10%ನಷ್ಟು ಮಂದಿಯಲ್ಲಿ ಶೀತದ ರೋಗಲಕ್ಷಣಗಳು ಕಂಡುಬರುತ್ತವೆ, ಮತ್ತು ಈ ಪ್ರಭಾವವನ್ನು ಅನುಭವಿಸುತ್ತಿರುವ ರೋಗಿಗಳು ಇಂಥ ಅನುಭವವನ್ನು ಹೊಂದಿಲ್ಲದವರಿಗಿಂತ ಒಟ್ಟಾರೆಯಾಗಿ ಬಹಳಷ್ಟು ಹೆಚ್ಚಿನದಾಗಿರುವ ಶೀತಗಳ ಕುರಿತು ಹೇಳಿಕೊಂಡಿದ್ದಾರೆ. ಆದಾಗ್ಯೂ, ಇತರ ವೈವಿಧ್ಯಮಯ ಅಧ್ಯಯನಗಳು ಇಂಥದೊಂದು ಪ್ರಭಾವವವನ್ನು ತೋರಿಸುವುದಿಲ್ಲ.
  • ಅಶುದ್ಧಗೊಂಡಿರುವ ಬೆರಳುಗಳಿಂದ ಕಣ್ಣುಗಳು, ಮೂಗು, ಅಥವಾ ಬಾಯಿಯನ್ನು ಪದೇ ಪದೇ ಮುಟ್ಟಿಕೊಳ್ಳುವುದು. ಕೈಗಳ ಮೇಲ್ಮೈಯಿಂದ ವೈರಾಣುಗಳನ್ನು ವರ್ಗಾಯಿಸುವ ಸಂಭಾವ್ಯತೆಯನ್ನು ಈ ವರ್ತನೆಯು ಒಂದಷ್ಟು ಹೆಚ್ಚಿಸುತ್ತದೆ; ಕೈಗಳ ಮೇಲ್ಮೈಯಲ್ಲಿ ವೈರಾಣುಗಳು ನಿರುಪದ್ರವಿಯಾಗಿದ್ದರೂ, ಮೇಲ್ಭಾಗದ ಶ್ವಾಸೇಂದ್ರಿಯದ ಪ್ರದೇಶಕ್ಕೆ ಅವು ತಲುಪಿದಾಗ, ಅಲ್ಲಿನ ಅಂಗಾಂಶಗಳಿಗೆ ಸೋಂಕುಂಟುಮಾಡುವ ಸಾಮರ್ಥ್ಯವನ್ನು ಅವು ಹೊಂದಿರುತ್ತವೆ. ಕೆಲವೊಂದು ಅಧ್ಯಯನಗಳು ತೋರಿಸುವ ಪ್ರಕಾರ, ಆಗಿಂದಾಗ್ಗೆ ಕೈತೊಳೆದುಕೊಳ್ಳುವ ಮತ್ತು ಯಾವುದೇ ಲೋಳೆಯ ಪೊರೆಗಳನ್ನು ಮುಟ್ಟಿಕೊಳ್ಳದಿರುವ ವಯಸ್ಕರಲ್ಲಿನ ಅಭ್ಯಾಸವು, ಶೀತವೊಂದಕ್ಕೆ ಈಡಾಗುವ ಸಂಭಾವ್ಯತೆಯನ್ನು ಒಂದಷ್ಟು ತಗ್ಗಿಸಬಲ್ಲದು.
  • ಧೂಮಪಾನದ ಇತಿಹಾಸವೊಂದು ಅಸ್ವಸ್ಥತೆಯ ಅವಧಿಯನ್ನು ಸುಮಾರು ಮೂರು ದಿನಗಳವರೆಗೆ ವಿಸ್ತರಿಸುತ್ತದೆ.
  • ಪ್ರತಿ ರಾತ್ರಿಯೂ ಏಳು ಗಂಟೆಗಳಿಗಿಂತ ಕಡಿಮೆ ಅವಧಿಗೆ ನಿದ್ರೆ ಮಾಡುವವರು, ಈ ಸಮಸ್ಯೆಗೆ ಈಡಾಗುವ ಸಾಧ್ಯತೆ ಹೆಚ್ಚು; ಅಂದರೆ, ಪ್ರತಿ ರಾತ್ರಿಯೂ ಎಂಟು ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ನಿದ್ರೆ ಮಾಡುವವರಿಗೆ ಇವರನ್ನು ಹೋಲಿಸಿದಾಗ, ಮೂಗಿನ ವೈರಾಣುವೊಂದಕ್ಕೆ ಒಡ್ಡಿಕೊಂಡಾಗ ಸೋಂಕೊಂದನ್ನು ಬೆಳೆಸಿಕೊಳ್ಳುವ ಒಂದು ಅಪಾಯದ ಪ್ರಮಾಣವು ಇವರಲ್ಲಿ ಮೂರು ಪಟ್ಟು ಹೆಚ್ಚಿರುತ್ತದೆ.
  • ರಕ್ತದಲ್ಲಿನ D ಜೀವಸತ್ವದ ಮಟ್ಟಗಳು ಕಡಿಮೆಯಾಗಿದ್ದಲ್ಲಿ, ಅಂಥವರು ನೆಗಡಿಗೆ ಈಡಾಗುವ ಅಪಾಯದ ಸಾಧ್ಯತೆಯು ಹೆಚ್ಚಿರುತ್ತದೆ. ಈ ಸಂಬಂಧವು ಕಾರಣಾತ್ಮಕವಾಗಿದೆಯೇ ಇಲ್ಲವೇ ಎಂಬುದನ್ನು ಇನ್ನೂ ನಿರ್ಣಯಿಸಬೇಕಾಗಿದೆ.
  • ನೆಗಡಿಗಳು ಕಾಲೋಚಿತವಾಗಿದ್ದು, ಉಷ್ಣವಲಯದ ಪ್ರದೇಶಗಳ ಹೊರಗಡೆಯಲ್ಲಿ ಚಳಿಗಾಲದ ಅವಧಿಯಲ್ಲಿ ಹೆಚ್ಚು ಪದೇ ಪದೇ ಸಂಭವಿಸುತ್ತವೆ. ವರ್ತನೆಗಳಲ್ಲಿನ ಒಂದು ಬದಲಾವಣೆಯೇ ಇದಕ್ಕೆ ಭಾಗಶಃ ಕಾರಣ ಎಂದು ನಂಬಲಾಗಿದೆ; ಅಂದರೆ, ಶೀತದ ತಾಪಮಾನಗಳಿಗೆ ಒಡ್ಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಒಳಾಂಗಣಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದಾಗಿ ಸೋಂಕಿಗೊಳಗಾದ ಜನರು ಇತರ ಜನರೊಂದಿಗೆ ನಿಕಟ ಸಾಮೀಪ್ಯತೆಗೆ ಒಡ್ಡಿಕೊಂಡಾಗ ಅದು ಒಂದು ಕಾರಣವಾಗಿ ಪರಿಣಮಿಸುತ್ತದೆ.
  • ಕಡಿಮೆ ಆರ್ದ್ರತೆಯು ವೈರಾಣುವಿನ ಸಂವಹನ ವೇಗಗಳನ್ನು ಹೆಚ್ಚಿಸುತ್ತದೆ. ಒಂದು ಸಿದ್ಧಾಂತವು ತಿಳಿಸುವ ಪ್ರಕಾರ, ಶುಷ್ಕ ಗಾಳಿಯು ನೀರಿನ ಆವಿಯಾಗುವಿಕೆಗೆ ಕಾರಣವಾಗುತ್ತದೆ. ಹೀಗಾಗಿ ವೈರಾಣುವಿನ ಸಣ್ಣತೊಟ್ಟುಗಳು ದೂರಕ್ಕೆ ಹರಡಿಕೊಳ್ಳಲು ಅವಕಾಶವಾಗುತ್ತದೆ ಮತ್ತು ಬಹಳ ಕಾಲದವರೆಗೆ ಅವು ಗಾಳಿಯಲ್ಲಿ ಉಳಿದುಕೊಳ್ಳುತ್ತವೆ.

ರೋಗಶರೀರಶಾಸ್ತ್ರ

ನೆಗಡಿ 
ನೆಗಡಿಯು ಮೇಲ್ಭಾಗದ ಶ್ವಾಸೇಂದ್ರಿಯದ ಪ್ರದೇಶದ ಒಂದು ಕಾಯಿಲೆಯಾಗಿದೆ

ಸೋಂಕಿಗೊಳಗಾದ ವ್ಯಕ್ತಿಯೋರ್ವನ ಲಾಲಾರಸ ಅಥವಾ ಮೂಗಿನ ಸ್ರವಿಕೆಗಳೊಂದಿಗೆ ಸಂಪರ್ಕವಾದಾಗ ನೆಗಡಿಯ ವೈರಾಣುವು ಮುಖ್ಯವಾಗಿ ರವಾನೆಯಾಗುತ್ತದೆ; ಅಂದರೆ, ಓರ್ವ ಸೋಂಕಿಗೊಳಗಾದ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಉತ್ಪತ್ತಿಯಾಗುವ ವೈರಾಣು-ತುಂಬಿಕೊಂಡಿರುವ ವಾಯುಕಲಿಲದಲ್ಲಿ ಓರ್ವ ಆರೋಗ್ಯವಂತ ವ್ಯಕ್ತಿಯು ಉಸಿರಾಡಿದಾಗ ನೆಗಡಿಯ ವೈರಾಣುವು ನೇರವಾಗಿ ರವಾನೆಯಾಗುತ್ತದೆ. ಅಥವಾ, ಓರ್ವ ಆರೋಗ್ಯವಂತ ವ್ಯಕ್ತಿಯು ಅಶುದ್ಧಗೊಂಡಿರುವ ಒಂದು ಮೇಲ್ಮೈಯನ್ನು ಮುಟ್ಟಿಕೊಂಡು ಅದೇ ಕೈಗಳಿಂದ ತನ್ನ ಮೂಗು ಅಥವಾ ಕಣ್ಣುಗಳನ್ನು ಮುಟ್ಟಿಕೊಂಡಾಗಲೂ ನೆಗಡಿಯ ವೈರಾಣುವು ರವಾನೆಯಾಗುತ್ತದೆ.

ರೋಗಲಕ್ಷಣವನ್ನು ಹೊಂದಿಲ್ಲದ ಸಾಕಷ್ಟು ಪ್ರಮಾಣದ ವ್ಯಕ್ತಿಗಳು ಮೂಗಿನ ಹೀರೊತ್ತಿಗೆಗಳಲ್ಲಿ ವೈರಾಣುಗಳನ್ನು ತೋರಿಸುವುದರಿಂದ, ವೈರಾಣುವಿನ ಸುರಿಸುವಿಕೆ ಅಥವಾ ಸಂವಹನಕ್ಕೆ ಸಂಬಂಧಿಸಿದಂತೆ ರೋಗಲಕ್ಷಣಗಳು ಅನವಶ್ಯಕವಾಗಿವೆ. ರೋಗಲಕ್ಷಣಗಳ ಮೂಲಕ ವೈರಾಣುವಿನ ಬಗೆಯನ್ನು ಗುರುತಿಸುವುದು ಸಾಮಾನ್ಯವಾಗಿ ಸಾಧ್ಯವಿಲ್ಲವಾದರೂ, ಇನ್‌ಫ್ಲುಯೆನ್ಸದ ವೈಲಕ್ಷಣ್ಯವನ್ನು ಅದರ ಹಠಾತ್‌ ಆಕ್ರಮಣ, ಜ್ವರ, ಮತ್ತು ಕೆಮ್ಮಿನ ಲಕ್ಷಣಗಳ ನೆರವಿನಿಂದ ಗುರುತಿಸಬಹುದಾಗಿದೆ.

ಮೂಗು ಸಾಮಾನ್ಯವಾಗಿ ವೈರಾಣುವಿಗೆ ಸಂಬಂಧಿಸಿದ ಪ್ರಮುಖ ಪ್ರವೇಶತಾಣವಾಗಿದೆಯಾದರೂ, ಕಣ್ಣುಗಳ ಮೂಲಕವೂ ವೈರಾಣುಗಳು ಪ್ರವೇಶಿಸಲು ಸಾಧ್ಯವಿದೆ (ಈ ನಿದರ್ಶನದಲ್ಲಿ, ಮೂಗು-ಗಂಟಲಿಗೆ ಸಂಬಂಧಿಸಿದ ಕುಳಿಯೊಳಗಿನ ನೀರಿನ ಹರಿದುಹೋಗುವಿಕೆಯು ಮೂಗಿನೊಳಗೆ ಹೊಂದಿಕೊಂಡಂತಿರುವ-ಅಶ್ರುಕಾರಕ ನಾಳದ ಮೂಲಕ ಸಂಭವಿಸುತ್ತದೆ). ಅಲ್ಲಿಂದ ಅದು ಮೂಗಿನ ಹಿಂಭಾಗಕ್ಕೆ ಸಾಗಣೆಗೊಳ್ಳುತ್ತದೆ ಮತ್ತು ಅಡಿನಾಯ್ಡ್‌ ಪ್ರದೇಶವನ್ನು ತಲುಪುತ್ತದೆ. ನಂತರದಲ್ಲಿ ವೈರಾಣುವು ICAM-1 ಎಂಬ ಒಂದು ಗ್ರಾಹಿಗೆ ಅಂಟಿಕೊಳ್ಳುತ್ತದೆ; ಈ ಗ್ರಾಹಿಯು ಮೂಗು-ಗಂಟಲಿಗೆ ಸಂಬಂಧಿಸಿದ ಕುಳಿಯ (ನ್ಯಾಸೋಫ್ಯಾರಿಂಕ್ಸ್‌) ಒಳಪೊರೆಯ ಜೀವಕೋಶಗಳ ಮೇಲ್ಮೈಯ ಮೇಲೆ ನೆಲೆಗೊಂಡಿರುತ್ತದೆ. ವೈರಾಣುವಿನ ಮೇಲ್ಮೈಯ ಮೇಲಿರುವ ಒಂದು ಸಂಧಿಸುವ ಕುಳಿಯೊಳಗೆ ಗ್ರಾಹಿಯು ಅಡಕಗೊಳ್ಳುತ್ತದೆ. ಅಡಿನಾಯ್ಡ್‌ನ ಜೀವಕೋಶಗಳ ಮೇಲೆ ದೊಡ್ಡ ಪ್ರಮಾಣದ ವೈರಾಣು ಗ್ರಾಹಿಗಳು ನೆಲೆಗೊಂಡಿರುತ್ತವೆ. ಗ್ರಾಹಿಗೆ ಜೋಡಿಕೆಯಾದ ನಂತರ ವೈರಾಣುವು ಜೀವಕೋಶದೊಳಗೆ ಒಯ್ಯಲ್ಪಡುತ್ತದೆ; ಅಲ್ಲಿ ಅದು ಒಂದು ಸೋಂಕನ್ನು ಪ್ರಾರಂಭಿಸುತ್ತದೆ. ಮೂಗಿನ ವೈರಾಣುವಿನ ಶೀತಗಳು ಮೂಗಿನ ಹೊರಪದರವನ್ನು ರೂಪಿಸುವ ಅಂಗಾಂಶಕ್ಕೆ ಸಾಮಾನ್ಯವಾಗಿ ಹಾನಿಯುಂಟುಮಾಡುವುದಿಲ್ಲ. ಸೈಟೋಕೈನ್‌ಗಳ ಉತ್ಪಾದನೆಯನ್ನು ಬೃಹತ್ಕಣಗಳು ಪ್ರಚೋದಿಸುತ್ತವೆ ಮತ್ತು ಈ ಸೈಟೋಕೈನ್‌ಗಳು ಮಧ್ಯವರ್ತಿಗಳೊಂದಿಗಿನ ಸಂಯೋಜನೆಯಲ್ಲಿ ಸೇರಿಕೊಂಡು ರೋಗಲಕ್ಷಣಗಳನ್ನು ಉಂಟುಮಾಡುತ್ತವೆ. ಸೈಟೋಕೈನ್‌ಗಳು ಇಡೀ ಶರೀರದ ಮೇಲೆ ಪ್ರಭಾವಗಳನ್ನು ಉಂಟುಮಾಡುತ್ತವೆ. ಬ್ರಾಡಿಕೈನಿನ್‌‌ ಎಂಬ ಮಧ್ಯವರ್ತಿಯು ನೋಯುತ್ತಿರುವ ಗಂಟಲು ಮತ್ತು ಮೂಗಿನ ಕೆರಳಿಕೆಯಂಥ ಸ್ಥಳೀಯ ರೋಗಲಕ್ಷಣಗಳನ್ನು ಉಂಟುಮಾಡುವಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ನೆಗಡಿಯು ಸ್ವಯಂ-ಸೀಮಿತಗೊಳ್ಳುವ ಲಕ್ಷಣವನ್ನು ಹೊಂದಿರುತ್ತದೆ, ಮತ್ತು ಆಶ್ರಯದಾತನ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕಿನೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುತ್ತದೆ. ಕೆಲವೇ ದಿನಗಳೊಳಗಾಗಿ, ಸೋಂಕುಂಟುಮಾಡುವ ಜೀವಕೋಶಗಳಿಂದ ವೈರಾಣುವನ್ನು ತಡೆಗಟ್ಟಬಲ್ಲ ನಿರ್ದಿಷ್ಟ ಪ್ರತಿಕಾಯಗಳನ್ನು ಉತ್ಪಾದಿಸುವ ಮೂಲಕ, ಶರೀರದ ರಸಧಾತುಗಳ ಪ್ರತಿರಕ್ಷಣಾ ಪ್ರತಿಸ್ಪಂದನೆಯು ಶುರುವಾಗುತ್ತದೆ. ಇದರ ಜೊತೆಗೆ, ಜೀವಕೋಶದ-ಮಧ್ಯಸ್ಥಿಕೆಯ ಪ್ರತಿರಕ್ಷಣಾ ಪ್ರತಿಸ್ಪಂದನೆಯ ಭಾಗವಾಗಿ, ಭಕ್ಷಕಕೋಶೀಯ ಭಕ್ಷಣದ ಪ್ರಕ್ರಿಯೆಯ ಮೂಲಕ ಬಿಳಿಯ ರಕ್ತಕಣಗಳು ವೈರಾಣುವನ್ನು ನಾಶಮಾಡುತ್ತವೆ ಮತ್ತು ವೈರಾಣುವಿನ ನಕಲೀಕರಣವು ಮುಂದುವರೆಯುವುದನ್ನು ತಡೆಗಟ್ಟುವ ಸಲುವಾಗಿ ಸೋಂಕಿಗೊಳಗಾದ ಜೀವಕೋಶಗಳನ್ನು ನಾಶಮಾಡುತ್ತವೆ. ಆರೋಗ್ಯವಂತ, ಪ್ರತಿರಕ್ಷಾ-ಸಮರ್ಥ ವ್ಯಕ್ತಿಗಳಲ್ಲಿ, ನೆಗಡಿಯು ಸರಾಸರಿಯಾಗಿ ಏಳು ದಿನಗಳಲ್ಲಿ ಪರಿಹಾರವಾಗುತ್ತದೆ.

ತಡೆಗಟ್ಟುವಿಕೆ

ಸೋಂಕಿಗೊಳಗಾದ ಜನರಿಂದ ದೂರವುಳಿಯುವುದು ತಡೆಗಟ್ಟುವಿಕೆಯ ಅತ್ಯುತ್ತಮ ವಿಧಾನವಾಗಿದೆ; ಏಕೆಂದರೆ ಓರ್ವ ಸೋಂಕಿಗೊಳಗಾದ ವ್ಯಕ್ತಿಯು ಕೆಮ್ಮಿದ, ಸೀನಿದ, ಅಥವಾ ಹೊರಗೆ ಬಿಟ್ಟ ವೈರಾಣು-ತುಂಬಿಕೊಂಡಿರುವ ಗಾಳಿಯನ್ನು ಆರೋಗ್ಯವಂತ ವ್ಯಕ್ತಿಯು ಒಳಗೆಳೆದುಕೊಳ್ಳುವ ಮೂಲಕ ಪ್ರಚಂಡ ಗಾತ್ರದ ಸೋಂಕುಗಳನ್ನು ದೇಹಕ್ಕೆ ಸೇರಿಸಿಕೊಂಡಂತಾಗುತ್ತದೆ. ಲಭ್ಯ ವೈದ್ಯಕೀಯ ಪುರಾವೆಯೂ ಸೂಚಿಸುವ ಪ್ರಕಾರ, ಶೀತದ ತಾಪಮಾನಗಳಿಗೆ ಒಡ್ಡಿಕೊಳ್ಳುವುದರಿಂದಾಗಿ ಪ್ರತಿರಕ್ಷಣೆ ವ್ಯವಸ್ಥೆಯು ಅಪಾಯಕ್ಕೆ ಈಡಾಗಬಹುದು (ಆದರೂ ಈ ಪ್ರಭಾವವು ವಿವಾದಾತ್ಮಕವಾಗಿದೆ). ಹೀಗಾಗಿ, ಕಡಿಮೆ ತಾಪಮಾನದ ಕಾಲಗಳ ಅವಧಿಯಲ್ಲಿ, ಶೀತ ತಾಪಮಾನಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬಹುದು. ಅದರಲ್ಲೂ ವಿಶೇಷವಾಗಿ ಅಂಥದೊಂದು ಸಂಕಷ್ಟಕ್ಕೆ ಈಡಾಗುವವರಿಗೆ ಇದು ಅನ್ವಯಿಸುತ್ತದೆ.

ಇದರ ಜೊತೆಗೆ, ಕೈಗಳನ್ನು ಸಂಪೂರ್ಣವಾಗಿ ಮತ್ತು ನಿಯತವಾಗಿ ತೊಳೆಯುವುದರ ಕುರಿತು, ಅದರಲ್ಲೂ ವಿಶೇಷವಾಗಿ ಆರೋಗ್ಯ ಕಾಳಜಿಯ ಪರಿಸರಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಆಚರಿಸುವುದರ ಕುರಿತು ಪರಿಣಿತರು ಪದೇಪದೇ ಶಿಫಾರಸು ಮಾಡುತ್ತಾರೆ; ನೇರ ಸಂಪರ್ಕದ ಕಡಿಮೆ ಸಾಮಾನ್ಯ ಮಾರ್ಗದ ಮೂಲಕ ಸಂವಹನದ ಸಂಭಾವ್ಯತೆಯನ್ನು ತಗ್ಗಿಸುವಲ್ಲಿ ಈ ಪರಿಪಾಠವು ನೆರವಾಗುತ್ತದೆ. ಮನೆಗಳು, ಶಾಲೆಗಳು, ಮತ್ತು ಉದ್ಯೋಗದ ತಾಣಗಳಲ್ಲಿ, ಕೈತೊಳೆಯುವಿಕೆಯ ಪರಿಪಾಠಗಳು ಮತ್ತು ಮದ್ಯಸಾರ-ಆಧರಿತ ಕೈ ನಿರ್ಮಲೀಕಾರಕಗಳು ಚರ್ಮದ ಮೇಲಿನ ವೈರಾಣುಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸುತ್ತವೆಯಾದರೂ, ಮೇಲ್ಭಾಗದ ಉಸಿರಾಟದ ಪ್ರದೇಶದ ಸೋಂಕುಗಳು ದೈಹಿಕ ಸಂಪರ್ಕಕ್ಕಿಂತ ಹೆಚ್ಚಾಗಿ ಉಸಿರಾಡುವಿಕೆಯ ಮೂಲಕ ಪ್ರಧಾನವಾಗಿ ತಂದುಕೊಂಡ ಸಮಸ್ಯೆಗಳಾಗಿರುತ್ತವೆಯಾದ್ದರಿಂದ, ಈ ಪರಿಪಾಠಗಳು ವಿಶೇಷವಾಗಿ ಪರಿಣಾಮಕಾರಿ ತಡೆಗಟ್ಟುವ ವಿಧಾನಗಳು ಎನಿಸಿಕೊಳ್ಳುವುದಿಲ್ಲ. ಹೆಚ್ಚಿನ ಮಟ್ಟಗಳಲ್ಲಿನ ಕೈತೊಳೆಯುವಿಕೆಯು ನೆಗಡಿಯ ಸಂವಹನದಲ್ಲಿ 20%ನಷ್ಟಿರುವ ಅಥವಾ ಅದಕ್ಕಿಂತ ಕಡಿಮೆಯಿರುವ ಒಂದು ಇಳಿಕೆಯನ್ನು ಉಂಟುಮಾಡಬಹುದು. ಮದ್ಯಸಾರ-ಆಧರಿತ ಕೈ ನಿರ್ಮಲೀಕಾರಕಗಳು ಮೇಲ್ಭಾಗದ ಉಸಿರಾಟದ ಪ್ರದೇಶದ ಸೋಂಕುಗಳ ವಿರುದ್ಧ ಅತ್ಯಂತ ಅಲ್ಪ ಸಂರಕ್ಷಣೆಯನ್ನು ಒದಗಿಸುತ್ತವೆ; ವಿಶೇಷವಾಗಿ ಮಕ್ಕಳಿಗೆ ಸಂಬಂಧಿಸಿದಂತೆ ಇದು ಹೆಚ್ಚು ಅನ್ವಯವಾಗುತ್ತದೆ. ನೆಗಡಿಯು ಒಂದು ಬ್ಯಾಕ್ಟೀರಿಯಂಗೆ ಬದಲಿಗೆ ಒಂದು ವೈರಾಣುವಿನಿಂದ ಉಂಟಾಗುತ್ತದೆಯಾದ್ದರಿಂದ, ಚರ್ಮ ಅಥವಾ ಇತರ ಮೇಲ್ಮೈಗಳಿಂದ ವೈರಾಣುವನ್ನು ತೊಡೆದುಹಾಕುವುದಕ್ಕೆ ಸಂಬಂಧಿಸಿದಂತೆ ನಿಯತವಾದ ಸಾಬೂನಿಗಿಂತಲೂ ಬ್ಯಾಕ್ಟೀರಿಯಾ-ನಿರೋಧಕ ಸಾಬೂನುಗಳು ಉತ್ತಮವೇನಲ್ಲ. ಸಂಭಾವ್ಯವಾಗಿ ಅಶುದ್ಧಗೊಂಡಿರುವ ಬೆರಳುಗಳಿಂದ ಮೂಗು, ಕಣ್ಣುಗಳು, ಅಥವಾ ಬಾಯಿಯನ್ನು ಮುಟ್ಟಿಕೊಳ್ಳದಿರುವುದರಿಂದಲೂ ನೇರ ಸಂಪರ್ಕದ ಮೂಲಕ ವೈರಾಣುವಿನ ಸಂವಹನವಾಗುವುದನ್ನು ತಗ್ಗಿಸಬಹುದು.

ನೆಗಡಿಗೆ ಪ್ರತಿಯಾಗಿ ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿನ ಪ್ರಯತ್ನಗಳು ಅಯಶಸ್ವಿಯಾಗಿಯೇ ಉಳಿದುಕೊಂಡಿವೆ. ಕ್ಷಿಪ್ರವಾಗಿ ಬದಲಾವಣೆಗೊಳ್ಳುವ ಬೃಹತ್ತಾದ ವೈವಿಧ್ಯಮಯ ವೈರಾಣುಗಳಿಂದ ನೆಗಡಿಗಳು ಉಂಟಾಗುತ್ತವೆ; ಹೀಗಾಗಿ ವ್ಯಾಪಕವಾಗಿ ಪರಿಣಾಮಕಾರಿಯಾಗಿರುವ ಒಂದು ಲಸಿಕೆಯನ್ನು ಯಶಸ್ವಿಯಾಗಿ ಸೃಷ್ಟಿಸುವುದು ಅತ್ಯಂತ ಅಸಂಭವನೀಯವಾಗಿದೆ.

ನಿರ್ವಹಣೆ

ನೆಗಡಿ 
ನೆಗಡಿಯ ಚಿಕಿತ್ಸೆಗೆ ಸಂಬಂಧಿಸಿದಂತೆ "ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಮಾಲೋಚಿಸಿ" ಎಂದು ನಾಗರಿಕರನ್ನು ಉತ್ತೇಜಿಸುವ ಭಿತ್ತಿಚಿತ್ರ

ಅಸ್ವಸ್ಥತೆಯ ಅವಧಿಯನ್ನು ಮೊಟಕುಗೊಳಿಸುವುದಕ್ಕಾಗಿ ನಿರ್ಣಾಯಕವಾಗಿ ನಿರೂಪಿಸಲ್ಪಟ್ಟಿರುವ ಯಾವುದೇ ಔಷಧಿಗಳು ಅಥವಾ ಗಿಡಮೂಲಿಕೆಯ ಪರಿಹಾರೋಪಾಯಗಳು ಸದ್ಯಕ್ಕೆ ಲಭ್ಯವಿಲ್ಲ. ಚಿಕಿತ್ಸೆಯು ರೋಗಲಕ್ಷಣದ ಬೆಂಬಲವನ್ನು ಒಳಗೊಂಡಿದ್ದು, ಅದು ಸಾಮಾನ್ಯವಾಗಿ ಜ್ವರ, ತಲೆನೋವು, ನೋಯುತ್ತಿರುವ ಸ್ನಾಯುಗಳು, ಮತ್ತು ನೋಯುತ್ತಿರುವ ಗಂಟಲಿಗೆ ಸಂಬಂಧಿಸಿರುವ ನೋವುಶಾಮಕಗಳ ಮೂಲಕ ನಡೆಯುತ್ತದೆ.

ಸಂರಕ್ಷಕ ಚಿಕಿತ್ಸೆ

ರೋಗಲಕ್ಷಣಗಳನ್ನು ಉಪಶಮನಮಾಡುವಲ್ಲಿ ನೆರವಾಗುವ ಚಿಕಿತ್ಸೆಗಳಲ್ಲಿ ಇವು ಸೇರಿವೆ: ಐಬುಪ್ರೊಫೆನ್‌ ಮತ್ತು ಅಸಿಟಮೈನೊಫೆನ್‌ / ಪ್ಯಾರಸಿಟಮಲ್‌ ರೀತಿಯ ಸರಳ ನೋವುಶಾಮಕಗಳು ಮತ್ತು ಜ್ವರನಿವಾರಕಗಳು. ಶೀತದ ಔಷಧಿಗಳು ಸರಳ ನೋವುಶಾಮಕಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಉಳಿದುಕೊಂಡಿವೆ ಎಂಬುದನ್ನು ಪುರಾವೆಯು ತೋರಿಸುವುದಿಲ್ಲ; ಅಷ್ಟೇ ಅಲ್ಲ, ಅವುಗಳ ಪರಿಣಾಮಕಾರಿತ್ವವನ್ನು ಮತ್ತು ಅಪಾಯದ ಸಂಭವನೀಯತೆಯನ್ನು ಬೆಂಬಲಿಸುವ ಯಾವುದೇ ಪುರಾವೆಯನ್ನು ಅವು ಹೊಂದಿಲ್ಲವಾದ್ದರಿಂದ ಮಕ್ಕಳಿಗೆ ಸಂಬಂಧಿಸಿದಂತೆ ಬಳಸಲು ಅವನ್ನು ಶಿಫಾರಸು ಮಾಡಲಾಗುವುದಿಲ್ಲ.

ಹೇರಳವಾಗಿ ವಿಶ್ರಾಂತಿಯನ್ನು ಪಡೆಯುವುದು, ಜಲಸಂಚಯನವನ್ನು ಕಾಯ್ದುಕೊಳ್ಳಲು ದ್ರವಪದಾರ್ಥಗಳನ್ನು ಕುಡಿಯುವುದು, ಮತ್ತು ಬಿಸಿಯಾಗಿರುವ ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸುವುದು ಇವು ಸಮಂಜಸವಾದ ಸಂರಕ್ಷಕ ಕ್ರಮಗಳಾಗಿವೆ. ತೀವ್ರವಾದ ಉಸಿರಾಟದ ಸೋಂಕುಗಳಲ್ಲಿ ದ್ರವಪದಾರ್ಥಗಳ ಸಕ್ರಿಯ ಸೇವನೆಯನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿದ ಪುರಾವೆಯ ಕೊರತೆಯಿದೆ ಮತ್ತು ಬಿಸಿಮಾಡಿದ ಆರ್ದ್ರಗೊಳಿಸಲ್ಪಟ್ಟ ಗಾಳಿಯ ಬಳಕೆಯ ಕುರಿತೂ ಪುರಾವೆಯು ಲಭ್ಯವಿಲ್ಲ. ಮೂಗಿಗೆ ಹಾಕುವ ಲವಣಯುಕ್ತ ತೊಟ್ಟುಗಳು ಮೂಗು ಕಟ್ಟುವಿಕೆಯನ್ನು ಉಪಶಮನಮಾಡುವಲ್ಲಿ ನೆರವಾಗಬಹುದು.

ಪ್ರತಿಜೀವಕಗಳು ಮತ್ತು ವೈರಾಣು ನಿರೋಧಕಗಳು

ನೆಗಡಿಯನ್ನು ಉಂಟುಮಾಡುವ ವೈರಾಣುಗಳ ವಿರುದ್ಧ ಪ್ರತಿಜೀವಕಗಳು ಪರಿಣಾಮಕಾರಿಯಾಗಿರುವುದಿಲ್ಲ ಮತ್ತು ಅವುಗಳ ಪಾರ್ಶ್ವ ಪರಿಣಾಮಗಳ ಕಾರಣದಿಂದಾಗಿ ಅವು ಒಟ್ಟಾರೆ ಅಪಾಯವನ್ನು ಉಂಟುಮಾಡುತ್ತವೆ. ನೆಗಡಿಗೆ ಸಂಬಂಧಿಸಿದಂತೆ ಕೆಲವೊಂದು ಪೂರ್ವಭಾವಿ ಸಂಶೋಧನೆಯು ಪ್ರಯೋಜನವನ್ನು ತೋರಿಸಿದೆಯಾದರೂ, ಈ ಸಮಸ್ಯೆಯ ಕುರಿತಾಗಿ ಮಾನ್ಯತೆ ಪಡೆದಿರುವ ಯಾವುದೇ ವೈರಾಣು ನಿರೋಧಕ ಔಷಧಗಳು ಲಭ್ಯವಿಲ್ಲ.

ಪರ್ಯಾಯ ಚಿಕಿತ್ಸೆಗಳು

ನೆಗಡಿಯನ್ನು ಉಪಚರಿಸಲು ಅನೇಕ ಪರ್ಯಾಯ ಚಿಕಿತ್ಸೆಗಳನ್ನು ಬಳಸಲಾಗುತ್ತದೆ. ಆದಾಗ್ಯೂ, ಯಾವುದೇ ಪರ್ಯಾಯ ಔಷಧಿಯ ಚಿಕಿತ್ಸೆಗಳ ಬಳಕೆಯನ್ನು ಬೆಂಬಲಿಸುವುದಕ್ಕೆ ಸಂಬಂಧಿಸಿದ ವೈಜ್ಞಾನಿಕ ಪುರಾವೆಯು ಸಾಕಷ್ಟಿಲ್ಲ ಅಥವಾ ಅಸಮರ್ಪಕವಾಗಿದೆ ಎಂದು ಹೇಳಬಹುದು. ಜೇನುತುಪ್ಪವು ಮಕ್ಕಳಲ್ಲಿ ಕಂಡುಬರುವ ಕೆಮ್ಮಿನಲ್ಲಿ ಮತ್ತು ನಿದ್ರೆ ತೊಡಕನ್ನು ಸುಧಾರಿಸುವಲ್ಲಿನ ಒಂದು ಪರಿಣಾಮಕಾರಿ ಚಿಕಿತ್ಸೆಯಾಗಿ ಕಂಡುಬರಬಹುದು; ಯಾವುದೇ ಚಿಕಿತ್ಸೆಯಿಲ್ಲದಿರುವುದು ಅಥವಾ ಡೆಕ್ಸ್‌ಟ್ರೊಮೆಥೋರ್ಫಾನ್‌ ಆಯ್ಕೆಗೆ ಹೋಲಿಸಿದಾಗ ಇದು ಪರಿಣಾಮಕಾರಿಯಾಗಿದೆ. ಆದಾಗ್ಯೂ, ಶಿಶು ಆಹಾರ ವಿಷದ ಅಪಾಯದ ಕಾರಣದಿಂದಾಗಿ, ಒಂದು ವರ್ಷಕ್ಕಿಂತ ಕೆಳಗಿನ ಮಗುವೊಂದಕ್ಕೆ ಜೇನುತುಪ್ಪವನ್ನು ಎಂದಿಗೂ ನೀಡಬಾರದು.

ವ್ಯಾಧಿಯ ಮುನ್ನರಿವು

ನೆಗಡಿಯು ಸಾಮಾನ್ಯವಾಗಿ ತೀಕ್ಷ್ಣವಲ್ಲದ್ದಾಗಿರುತ್ತದೆ ಮತ್ತು ಸ್ವಯಂ-ಸೀಮಿತಗೊಳ್ಳುವ ಸ್ವಭಾವವನ್ನು ಹೊಂದಿರುತ್ತದೆ.

ಸೋಂಕುಶಾಸ್ತ್ರ

ಮೇಲ್ಭಾಗದ ಶ್ವಾಸೇಂದ್ರಿಯದ ಪ್ರದೇಶದ ಸೋಂಕುಗಳು ವಯಸ್ಕರಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಸೋಂಕಿನ ಕಾಯಿಲೆಗಳಾಗಿದ್ದು, ವಯಸ್ಕರು ವರ್ಷಕ್ಕೆ ಎರಡುರಿಂದ ನಾಲ್ಕು ಬಾರಿ ಉಸಿರಾಟದ ಸೋಂಕುಗಳಿಗೆ ಈಡಾಗುತ್ತಾರೆ. ಮಕ್ಕಳು ವರ್ಷವೊಂದರಲ್ಲಿ ಆರರಿಂದ ಹತ್ತು ಬಾರಿ ಶೀತಗಳಿಗೆ ಈಡಾಗಬಹುದು (ಮತ್ತು ಶಾಲಾ ಮಕ್ಕಳಿಗೆ ಸಂಬಂಧಿಸಿ ಹೇಳುವುದಾದರೆ ಈ ಪ್ರಮಾಣವು ವರ್ಷಕ್ಕೆ 12 ಬಾರಿಯವರೆಗೆ ಇರುತ್ತದೆ). ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಶೀತಗಳ ವ್ಯಾಪ್ತಿಯು ಶರತ್ಕಾಲ ಮತ್ತು ಚಳಿಗಾಲಗಳಲ್ಲಿ ಅಧಿಕವಾಗಿರುತ್ತದೆ ಹಾಗೂ ಬಹುಪಾಲು ಸೋಂಕುಗಳು ಸೆಪ್ಟೆಂಬರ್‌‌ ಮತ್ತು ಏಪ್ರಿಲ್‌‌ ತಿಂಗಳುಗಳ ನಡುವೆ ಸಂಭವಿಸುತ್ತವೆ. ಋತುವಿಗೆ ಅನುಗುಣವಾಗಿರುವಿಕೆಗೆ ಅಥವಾ ಕಾಲೋಚಿತತೆಗೆ ಶಾಲಾವರ್ಷದ ಆರಂಭವು ಕಾರಣವಾಗಿರಬಹುದು, ಅಥವಾ ಜನರು ತಮ್ಮ ಹೆಚ್ಚಿನ ಸಮಯಗಳನ್ನು ಒಳಾಂಗಣಗಳಲ್ಲಿ ವಿನಿಯೋಗಿಸುವುದು ಕಾರಣವಾಗಿರಬಹುದು (ಹೀಗಾಗಿ ಪರಸ್ಪರರೊಂದಿಗೆ ನಿಕಟವಾದ ಸಾಮೀಪ್ಯತೆಯನ್ನು ಹೊಂದಲು ಸಾಧ್ಯವಾಗುತ್ತದೆ); ಇದು ವೈರಾಣುವಿನ ಸಂವಹನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಇತಿಹಾಸ

ನೆಗಡಿ 
"ಶೀತವೊಂದರ ವ್ಯಾಖ್ಯಾನ." ನೆಗಡಿಯ ಕುರಿತಾಗಿ ತಾನು ಬರೆಯಲು ಆಶಿಸಿದ್ದ ಪ್ರೌಢಪ್ರಬಂಧವೊಂದಕ್ಕೆ ಸಂಬಂಧಿಸಿದ ಬೆಂಜಮಿನ್‌ ಫ್ರಾಂಕ್ಲಿನ್‌ನ ಟಿಪ್ಪಣಿಗಳು.

"ನೆಗಡಿ" ಎಂಬ ಹೆಸರು 16ನೇ ಶತಮಾನದಲ್ಲಿ ಬಳಕೆಗೆ ಬಂತು; ಇದರ ರೋಗಲಕ್ಷಣಗಳು ಮತ್ತು ಶೀತದ ಹವಾಮಾನಕ್ಕೆ ಒಡ್ಡಿಕೊಳ್ಳುವುದರ ಲಕ್ಷಣಗಳ ನಡುವಿನ ಹೋಲಿಕೆಯೇ ಇದಕ್ಕೆ ಕಾರಣವೆನ್ನಬಹುದು. Iನೇ ಜೇಮ್ಸ್‌ ಎಂಬಾತ ಮೂಗಿನ ಶೀತಗಳಿಂದ ನಿರಂತರವಾಗಿ ಬಳಲಿದ್ದು, ಮತ್ತು ಇದು ಲೋಳೆಪೊರೆಯ ಅಂಗಾಂಶದ ಚಾಚಿಕೆಗಳು, ಸೈನಸ್‌ ಕುಹರದ ತೊಂದರೆ, ಅಥವಾ ಸ್ವಯಂ-ರಕ್ತವಿಷ Archived 2008-12-05 ವೇಬ್ಯಾಕ್ ಮೆಷಿನ್ ನಲ್ಲಿ. ದಿಂದ ಉಂಟಾಗಿರಬಹುದು ಎಂದು ಆಗ ಭಾವಿಸಿದ್ದು ಇವೇ ಮೊದಲಾದ ಸಂಗತಿಗಳನ್ನು, ನೋರ್ಮನ್‌‌ ಮೂರ್‌ ಎಂಬಾತ ಔಷಧಿಯ ಅಧ್ಯಯನದ ಕುರಿತಾದ ತನ್ನ ಇತಿಹಾಸದಲ್ಲಿ ವಿವರಿಸಿದ್ದಾನೆ.

18ನೇ ಶತಮಾನದಲ್ಲಿ, ನೆಗಡಿಯ ಕಾರಣಗಳು ಮತ್ತು ತಡೆಗಟ್ಟುವಿಕೆಯ ವಿಷಯವನ್ನು ಬೆಂಜಮಿನ್‌ ಫ್ರಾಂಕ್ಲಿನ್‌ ಪರಿಗಣಿಸಿದ. ಹಲವಾರು ವರ್ಷಗಳವರೆಗೆ ನಡೆಸಿದ ಸಂಶೋಧನೆಯ ನಂತರ ಅವನು ಈ ಬಗೆಯ ತೀರ್ಮಾನಕ್ಕೆ ಬಂದ: "ಮುಚ್ಚಲ್ಪಟ್ಟಿರುವ ಸಣ್ಣ ಕೊಠಡಿಗಳು, ಡಬ್ಬಿಗಳು ಇತ್ಯಾದಿಗಳಲ್ಲಿ ಜನರು ಒಟ್ಟಾಗಿ ಜಮಾವಣೆಗೊಂಡಾಗ, ಮತ್ತು ಸಮೀಪದಲ್ಲಿ ಕುಳಿತುಕೊಂಡು ಸಂಭಾಷಿಸುತ್ತಿರುವಾಗ, ಪರಸ್ಪರರ ಉತ್ಸರ್ಜನವನ್ನು ಉಸಿರಾಡುವ ಸಂದರ್ಭ ಎದುರಾದಾಗ ಅನೇಕವೇಳೆ ಶೀತಕ್ಕೆ ಈಡಾಗಿ ಒಬ್ಬರಿಂದೊಬ್ಬರಿಗೆ ಹಬ್ಬಿಸುತ್ತಾರೆ." ಅಷ್ಟು ಹೊತ್ತಿಗಿನ್ನೂ ವೈರಾಣುಗಳನ್ನು ಪತ್ತೆಹಚ್ಚಲಾಗಿರಲಿಲ್ಲವಾದರೂ, ಗಾಳಿಯ ಮೂಲಕವಾಗಿ ನೆಗಡಿಯು ಜನರ ನಡುವೆ ಒಬ್ಬರಿಂದೊಬ್ಬರಿಗೆ ಹಬ್ಬಿತು ಎಂಬುದನ್ನು ಫ್ರಾಂಕ್ಲಿನ್‌ ಆಧಾರ ಕಲ್ಪನೆಯಾಗಿ ಗ್ರಹಿಸಿದ. ನೆಗಡಿಯನ್ನು ತಪ್ಪಿಸುವುದಕ್ಕಾಗಿ ವ್ಯಾಯಾಮ, ಸ್ನಾನ ಮಾಡುವಿಕೆ, ಮತ್ತು ಆಹಾರ ಹಾಗೂ ಪಾನೀಯ ಸೇವನೆಯ ಪ್ರಮಾಣವನ್ನು ತಗ್ಗಿಸುವುದರ ಕುರಿತು ಅವನು ಶಿಫಾರಸು ಮಾಡಿದ. ಶೀತದ ಸಂವಹನದ ಕುರಿತಾದ ಫ್ರಾಂಕ್ಲಿನ್‌ನ ಸಿದ್ಧಾಂತವು ಸುಮಾರು 150 ವರ್ಷಗಳ ನಂತರ ದೃಢೀಕರಿಸಲ್ಪಟ್ಟಿತು.

ನೆಗಡಿ ಘಟಕ

ಯುನೈಟೆಡ್‌ ಕಿಂಗ್‌ಡಂನಲ್ಲಿ, ನೆಗಡಿ ಘಟಕವು ವೈದ್ಯಕೀಯ ಸಂಶೋಧನಾ ಪರಿಷತ್ತಿನ ವತಿಯಿಂದ 1946ರಲ್ಲಿ ಸ್ಥಾಪಿಸಲ್ಪಟ್ಟಿತು. ಹಲವಾರು ವೈರಾಣುಗಳಿಂದ ಸೋಂಕಿಗೊಳಗಾಗಿದ್ದ ಸ್ವಯಂಸೇವಕರನ್ನು ಪರೀಕ್ಷೆಗೆ ಆಯ್ದುಕೊಂಡ ಸದರಿ ಘಟಕವು ಡೀ ನಿಟ್ಟಿನಲ್ಲಿ ಅವರೊಂದಿಗೆ ಕೆಲಸ ಮಾಡಿತು. ಅಲ್ಲಿ ಮೂಗಿನ ವೈರಾಣುವನ್ನು ಪತ್ತೆಹಚ್ಚಲಾಯಿತು. 1950ರ ದಶಕದ ಅಂತ್ಯದಲ್ಲಿ, ಅಂಗಾಂಶ ಕೃಷಿಯೊಂದರಲ್ಲಿ ಈ ಶೀತ ವೈರಾಣುಗಳ ಪೈಕಿ ಒಂದನ್ನು ಬೆಳೆಸುವಲ್ಲಿ ಸಂಶೋಧಕರು ಸಮರ್ಥರಾದರು; ಇತರ ಅನೇಕ ವೈರಾಣುಗಳಿಗೆ ಸಂಬಂಧಿಸಿದಂತೆ ಬಳಸಲ್ಪಡುವ ವಿಧಾನವಾದ ಫಲೀಕೃತ ಕೋಳಿಯ ಮೊಟ್ಟೆಗಳಲ್ಲಿ ಇದು ಬೆಳೆಯುವುದಿಲ್ಲವಾದ್ದರಿಂದ, ಅವರು ಅಂಗಾಂಶ ಕೃಷಿಯ ವಿಧಾನವನ್ನು ಆಯ್ಕೆಮಾಡಿಕೊಳ್ಳಬೇಕಾಯಿತು. ಮೂಗಿನ ವೈರಾಣು ಸೋಂಕಿನ ಪರಿಪಾಕದ ಹಂತದ ಅವಧಿಯಲ್ಲಿ ಇಂಟರ್‌ಫೆರಾನ್‌‌ ಬಳಸಿ ನೀಡುವ ಚಿಕಿತ್ಸೆಯು ಕಾಯಿಲೆಗೆ ಪ್ರತಿಯಾಗಿ ನಿಂತು ಒಂದಷ್ಟು ಸಂರಕ್ಷಿಸುತ್ತದೆ ಎಂಬುದಾಗಿ 1970ರ ದಶಕದಲ್ಲಿ CCU ನಿರೂಪಿಸಿತಾದರೂ, ಯಾವುದೇ ಕಾರ್ಯಸಾಧ್ಯ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿಲ್ಲ. ಸದರಿ ಘಟಕದ ಇತಿಹಾಸದಲ್ಲಿನ ಏಕೈಕ ಯಶಸ್ವೀ ಚಿಕಿತ್ಸೆ ಎನಿಸಿಕೊಂಡಿದ್ದ, ಮೂಗಿನ ವೈರಾಣು ಶೀತಗಳ ಚಿಕಿತ್ಸೆಯಲ್ಲಿ ಮತ್ತು ರೋಗನಿರೋಧಕ ಚಿಕಿತ್ಸೆಯಲ್ಲಿ ಝಿಂಕ್‌ ಗ್ಲೂಕೊನೇಟ್‌ ಔಷಧಿಯ ಗುಳಿಗೆಗಳ ಬಳಕೆಯ ಕುರಿತಾದ ಸಂಶೋಧನೆಯನ್ನು ಸಂಪೂರ್ಣಗೊಳಿಸಿದ ಎರಡು ವರ್ಷಗಳ ನಂತರ, 1989ರಲ್ಲಿ ಸದರಿ ಘಟಕವು ಮುಚ್ಚಲ್ಪಟ್ಟಿತು.

ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭ

ಆರ್ಥಿಕತೆ

ನೆಗಡಿ 
ನೆಗಡಿಯ ವೆಚ್ಚದ ಕುರಿತಾಗಿ ವಿವರಿಸುತ್ತಿರುವ, IIನೇ ಜಾಗತಿಕ ಯುದ್ಧಕ್ಕೆ ಸೇರಿದ ಒಂದು ಬ್ರಿಟಿಷ್‌ ಭಿತ್ತಿಚಿತ್ರ
  1. REDIRECT Template:Globalize/US

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಪ್ರತಿ ವರ್ಷವೂ ಅಂದಾಜು 7.7 ಶತಕೋಟಿ $ನಷ್ಟಿರುವ ಒಂದು ಸಂರಕ್ಷಕ ವೆಚ್ಚದಲ್ಲಿ, ವಾರ್ಷಿಕವಾಗಿ 75ರಿಂದ 100 ದಶಲಕ್ಷ ವೈದ್ಯ ಭೇಟಿಗಳು ನಡೆಯುವುದಕ್ಕೆ ನೆಗಡಿಯು ಕಾರಣವಾಗುತ್ತದೆ. ಅಮೆರಿಕನ್ನರು ರೂಢಿಯಂತೆ ಅಂಗಡಿಯಲ್ಲಿ ಪಡೆದ ಔಷಧಿಗಳ ಮೇಲೆ 2.9 ಶತಕೋಟಿ $ನಷ್ಟು ಹಣವನ್ನು ಖರ್ಚುಮಾಡುತ್ತಾರೆ ಮತ್ತು ರೋಗಲಕ್ಷಣದ ಶಮನಕ್ಕೆ ಸಂಬಂಧಿಸಿದಂತಿರುವ ಶಿಫಾರಿತ ಔಷಧಿಗಳ ಮೇಲೆ 400 ದಶಲಕ್ಷ $ನಷ್ಟು ಹಣವನ್ನು ವಿನಿಯೋಗಿಸುತ್ತಾರೆ.

ಓರ್ವ ವೈದ್ಯನನ್ನು ಭೇಟಿಯಾದ ಮೂರನೇ ಒಂದು ಭಾಗಕ್ಕೂ ಹೆಚ್ಚಿನ ರೋಗಿಗಳು ಒಂದು ಪ್ರತಿಜೀವಕ ಶಿಫಾರಸನ್ನು ಸ್ವೀಕರಿಸಿದ್ದು, ಇದು ಇಂಥ ಔಷಧಗಳ ಮಿತಿಮೀರಿದ ಬಳಕೆಯಿಂದ ಉಂಟಾದ ಪ್ರತಿಜೀವಕ ನಿರೋಧಕ ಶಕ್ತಿಗೆ ಸಂಬಂಧಿಸಿದ ಸೂಚಿತ ಪರಿಣಾಮಗಳನ್ನು ಹೊಂದಿದೆ.

ಒಂದು ಅಂದಾಜಿನ ಅನುಸಾರ, ಶೀತವೊಂದರ ಕಾರಣದಿಂದಾಗಿ 22ರಿಂದ 189 ದಶಲಕ್ಷಗಳಷ್ಟರವರೆಗಿನ ಶಾಲಾದಿನಗಳು ವಾರ್ಷಿಕವಾಗಿ ತಪ್ಪಿಸಲ್ಪಟ್ಟಿವೆ. ಇದರ ಫಲವಾಗಿ, ತಮ್ಮ ಮಕ್ಕಳ ನಿಗಾವಣೆಗಾಗಿ ಮನೆಯಲ್ಲಿಯೇ ಉಳಿದುಕೊಳ್ಳಲೆಂದು ಹೆತ್ತವರು 126 ದಶಲಕ್ಷದಷ್ಟು ಕೆಲಸದ ದಿನಗಳನ್ನು ತಪ್ಪಿಸಿಕೊಂಡಿದ್ದಾರೆ. ಶೀತವೊಂದರಿಂದ ಬಳಲುತ್ತಿರುವ ಉದ್ಯೋಗಿಗಳು ತಪ್ಪಿಸಿಕೊಂಡ 150 ದಶಲಕ್ಷದಷ್ಟು ಕೆಲಸದ ದಿನಗಳಿಗೆ ಸೇರಿಸಿದಾಗ, ಶೀತ-ಸಂಬಂಧಿತ ಕೆಲಸದ ನಷ್ಟದ ಒಟ್ಟಾರೆ ಆರ್ಥಿಕ ಪರಿಣಾಮವು ತಲಾ ವರ್ಷಕ್ಕೆ 20 ಶತಕೋಟಿ $ನಷ್ಟು ಮೊತ್ತವನ್ನು ಮೀರುತ್ತದೆ. ಕೆಲಸದ ಜಾಗದಿಂದ ಗೈರುಹಾಜರಾದ 40%ನಷ್ಟು ಸಮಯವನ್ನೂ ಇದು ಒಳಗೊಂಡಿದೆ.

ಕಾನೂನು

ಅಪಾಯಗಳು ಮತ್ತು ಸಾಬೀತಾಗದ ಪ್ರಯೋಜನಗಳಿಗೆ ಸಂಬಂಧಿಸಿದ ಕಾಳಜಿಗಳ ಕಾರಣದಿಂದಾಗಿ, 6 ವರ್ಷ ವಯಸ್ಸಿನ ಮತ್ತು ಅದಕ್ಕಿಂತ ಕೆಳಗಿನ ಮಕ್ಕಳಲ್ಲಿ, ರೂಢಿಯಂತೆ ಅಂಗಡಿಯಲ್ಲಿ ಪಡೆದ ಕೆಮ್ಮು ಮತ್ತು ಶೀತದ ಔಷಧಿಗಳು ಬಳಸಲ್ಪಡುವುದನ್ನು 2009ರಲ್ಲಿ ಕೆನಡಾ ದೇಶವು ನಿರ್ಬಂಧಿಸಿತು.

ಶೀತ ಹವಾಮಾನ

ಸದರಿ ಕಾಯಿಲೆಯು ತನ್ನ ಹೆಸರನ್ನು ಪಡೆಯುವುದಕ್ಕೆ ಕಾರಣವಾದ, ಮಳೆ ಅಥವಾ ಚಳಿಗಾಲದ ಸ್ಥಿತಿಗತಿಗಳಂಥ ಶೀತದ ಹವಾಮಾನಕ್ಕೆ ಸುದೀರ್ಘ ಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶೀತವೊಂದು "ಅಂಟಿಕೊಳ್ಳುತ್ತದೆ" ಎಂಬುದು ಸಾಂಪ್ರದಾಯಿಕವಾದ ಜನಸಾಮಾನ್ಯರ ಸಿದ್ಧಾಂತವಾಗಿದೆ. ನೆಗಡಿಗಳು ಕಾಲೋಚಿತವಾದ ಕಾಯಿಲೆಗಳಾಗಿದ್ದು, ಚಳಿಗಾಲದ ಅವಧಿಯಲ್ಲಿ ಅವು ಹೆಚ್ಚು ಸಂಭವಿಸುತ್ತವೆ. ಈ ಪ್ರಭಾವಕ್ಕೆ ಸಂಬಂಧಿಸಿದ ಪ್ರಯೋಗಾತ್ಮಕ ಪುರಾವೆಯು ಏಕರೀತಿಯದಲ್ಲದ ಸ್ವರೂಪವನ್ನು ಹೊಂದಿದೆ: ಶೀತದ ಹವಾಮಾನಕ್ಕೆ ಅಥವಾ ನೇರ ಚಳಿಗೆ ಅಲ್ಪಾವಧಿಗೆ ಒಡ್ಡಿಕೊಳ್ಳುವುದರಿಂದಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆಯು ಹೆಚ್ಚುತ್ತದೆ ಎಂಬುದಕ್ಕೆ ಪುರಾವೆಯನ್ನು ಒದಗಿಸಲು ಅನೇಕ ಪ್ರಯೋಗಗಳು ವಿಫಲಗೊಂಡಿವೆ; ಅದರ ಬದಲಿಗೆ, ಪರಸ್ಪರರೊಂದಿಗೆ ನಿಕಟವಾದ ಸಾಮೀಪ್ಯತೆಯಲ್ಲಿ ಒಳಾಂಗಣಗಳಲ್ಲಿ ಕಳೆಯಲಾದ ಹೆಚ್ಚಿನ ಅವಧಿಯಂಥ ವರ್ತನೆಗಳಲ್ಲಿನ ಒಂದು ಬದಲಾವಣೆಯಿಂದಾಗಿ ಕಾಲೋಚಿತವಾದ ಬದಲಾವಣೆಯು ಕಂಡುಬರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಆದಾಗ್ಯೂ, ಶರೀರದ ಚಳಿ ಮತ್ತು ಶೀತದ ಗಾಳಿಗೆ ಒಡ್ಡಿಕೊಳ್ಳುವುದರ ಎರಡೂ ಸನ್ನಿವೇಶಗಳಿಗೆ ಸಂಬಂಧಿಸಿದಂತಿರುವ ಇಂಥದೊಂದು ಪ್ರಭಾವವನ್ನು ಇತರ ಪ್ರಯೋಗಗಳು ಕಂಡುಕೊಂಡಿವೆ. ಅಷ್ಟೇ ಅಲ್ಲ, ಪ್ರತಿರಕ್ಷಣೆ ವ್ಯವಸ್ಥೆಯನ್ನು ಕೆಡಿಸಬಲ್ಲ ಕಡಿಮೆ ಮಟ್ಟದ ತಾಪಮಾನಗಳ ಕಾರ್ಯವಿಧಾನಗಳನ್ನೂ ಅವು ಸೂಚಿಸಿವೆ; ಅದೇ ವೇಳೆಗೆ, ಇತರ ಪ್ರಯೋಗಗಳು ತೋರಿಸಿರುವ ಪ್ರಕಾರ, ಶೀತದ ತಾಪಮಾನಗಳಿಗೆ ಒಡ್ಡಿಕೊಳ್ಳುವುದರಿಂದಾಗಿ ಪ್ರತಿರಕ್ಷಣೆ ವ್ಯವಸ್ಥೆಯು ಕೆಡುವ ಬದಲಿಗೆ ಪ್ರಚೋದಿಸಲ್ಪಡಬಹುದಾದ ಸಾಧ್ಯತೆಗಳಿರುತ್ತವೆ.

ಸಂಶೋಧನೆ

ಬಯೋಟಾ ಹೋಲ್ಡಿಂಗ್ಸ್ ಕಂಪನಿಯು, ಸದ್ಯಕ್ಕೆ BTA798 ಎಂಬುದಾಗಿ ಹೆಸರಿಟ್ಟುಕೊಂಡಿರುವ ಔಷಧಿಯೊಂದನ್ನು ಅಭಿವೃದ್ಧಿಪಡಿಸುತ್ತಿದ್ದು, ಅದು ಮೂಗಿನ ವೈರಾಣುವಿನ ಸಮಸ್ಯೆಯನ್ನು ತೊಡೆದುಹಾಕುವ ಕಡೆಗೆ ಗುರಿಯಿಟ್ಟಿದೆ. ಸದರಿ ಔಷಧವು IIa ಹಂತದ ವಸ್ತುನಿಷ್ಠ ಪರೀಕ್ಷೆಗಳನ್ನು ಇತ್ತೀಚೆಗಷ್ಟೇ ಸಂಪೂರ್ಣಗೊಳಿಸಿದೆ.

ವಿರೊಫಾರ್ಮಾ ಮತ್ತು ಸ್ಕೆರಿಂಗ್‌-ಪ್ಲೌ ಕಂಪನಿಗಳು ಪ್ಲೆಕೊನಾರಿಲ್‌‌ ಎಂಬ ಹೆಸರಿನ ಒಂದು ವೈರಾಣು ನಿರೋಧಕ ಔಷಧವನ್ನು ಅಭಿವೃದ್ಧಿಪಡಿಸುತ್ತಿದ್ದು, ಬಹುಪಾಲು ನೆಗಡಿಗಳನ್ನು ಉಂಟುಮಾಡುವ ವೈರಾಣುಗಳಾದ ಪಿಕೊರ್ನಾ ವೈರಾಣುಗಳ ಕಡೆಗೆ ಅದು ಗುರಿಯಿಟ್ಟಿದೆ. ಪ್ಲೆಕೊನಾರಿಲ್‌‌ ಎಂಬ ಔಷಧಿಯು ಬಾಯಿಯ ಮೂಲಕ ಸೇವಿಸುವ ಒಂದು ಸ್ವರೂಪದಲ್ಲಿ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಸ್ಕೆರಿಂಗ್‌-ಪ್ಲೌ ಕಂಪನಿಯು ಮೂಗಿನೊಳಗಡೆ-ಹಾಕುವ ಒಂದು ಔಷಧಿಯ ಸೂತ್ರೀಕರಣವನ್ನು ಅಭಿವೃದ್ಧಿಪಡಿಸುತ್ತಿದ್ದು, ಅದು ಕೆಲವೇ ಪ್ರತಿಕೂಲ ಪರಿಣಾಮಗಳನ್ನು ಹೊಂದಿರುವ ಸಾಧ್ಯತೆಗಳಿವೆ.

ಮೇರಿಲ್ಯಾಂಡ್ ವಿಶ್ವವಿದ್ಯಾಲಯದ‌, ಕಾಲೇಜ್‌ ಪಾರ್ಕ್‌ ಮತ್ತು ವಿಸ್ಕಾನ್ಸಿನ್‌-ಮ್ಯಾಡಿಸನ್‌ ವಿಶ್ವವಿದ್ಯಾಲಯಕ್ಕೆ ಸೇರಿದ ಸಂಶೋಧಕರು, ನೆಗಡಿಯನ್ನು ಉಂಟುಮಾಡುವ ಎಲ್ಲಾ ಜ್ಞಾತ ವೈರಾಣು ತಂತುಗಳಿಗೆ ಸಂಬಂಧಿಸಿದಂತಿರುವ ಜೀನೋಮ್‌ ಒಂದರ ಯೋಜನೆಯನ್ನು ರೂಪಿಸಿದ್ದಾರೆ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ನೆಗಡಿ ಚಿಹ್ನೆಗಳು ಹಾಗೂ ರೋಗ ಲಕ್ಷಣಗಳುನೆಗಡಿ ಕಾರಣನೆಗಡಿ ರೋಗಶರೀರಶಾಸ್ತ್ರನೆಗಡಿ ತಡೆಗಟ್ಟುವಿಕೆನೆಗಡಿ ನಿರ್ವಹಣೆನೆಗಡಿ ವ್ಯಾಧಿಯ ಮುನ್ನರಿವುನೆಗಡಿ ಸೋಂಕುಶಾಸ್ತ್ರನೆಗಡಿ ಇತಿಹಾಸನೆಗಡಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭನೆಗಡಿ ಸಂಶೋಧನೆನೆಗಡಿ ಉಲ್ಲೇಖಗಳುನೆಗಡಿ ಬಾಹ್ಯ ಕೊಂಡಿಗಳುನೆಗಡಿwiktionary:contagiousಕೆಮ್ಮುಜ್ವರ

🔥 Trending searches on Wiki ಕನ್ನಡ:

ಜ್ಯೋತಿಬಾ ಫುಲೆಚಂದ್ರಶೇಖರ ಕಂಬಾರಮೈಗ್ರೇನ್‌ (ಅರೆತಲೆ ನೋವು)ಹಾಸನಜಪಾನ್ಮೊದಲನೆಯ ಕೆಂಪೇಗೌಡಪ್ಲೇಟೊಕರ್ನಾಟಕಗುರುರಾಜ ಕರಜಗಿರಾಶಿಚಂಪೂಸೂರ್ಯ (ದೇವ)ಕನ್ನಡ ಚಂಪು ಸಾಹಿತ್ಯರಾಷ್ಟ್ರೀಯ ಉತ್ಪನ್ನಭರತ-ಬಾಹುಬಲಿದ್ವಿರುಕ್ತಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಉತ್ತರ ಕರ್ನಾಟಕಕರ್ನಾಟಕ ಜನಪದ ನೃತ್ಯಗಂಗ (ರಾಜಮನೆತನ)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಖೊಖೊಮಹಾಭಾರತಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಭಾರತೀಯ ಅಂಚೆ ಸೇವೆರಾಷ್ಟ್ರಕೂಟವೈದಿಕ ಯುಗಮಾನವ ಸಂಪನ್ಮೂಲ ನಿರ್ವಹಣೆಜೇನು ಹುಳುತ್ರಿಪದಿಹನುಮ ಜಯಂತಿರಾಷ್ಟ್ರೀಯ ಸ್ವಯಂಸೇವಕ ಸಂಘಭಾರತೀಯ ಮೂಲಭೂತ ಹಕ್ಕುಗಳುಮರಏಲಕ್ಕಿಅಮೃತಬಳ್ಳಿವ್ಯವಸಾಯಕರ್ನಾಟಕದ ಜಾನಪದ ಕಲೆಗಳುಬಾದಾಮಿ ಗುಹಾಲಯಗಳುಆರ್ಯರುರಾಘವಾಂಕಕಂಸಾಳೆಮೆಂತೆಜಗನ್ನಾಥದಾಸರುದ್ರೌಪದಿಅಲಂಕಾರವಿಧಾನ ಪರಿಷತ್ತುಸಂಗೀತಕುಬೇರಹಿಂದೂ ಧರ್ಮಕರ್ನಾಟಕದ ಮಹಾನಗರಪಾಲಿಕೆಗಳುದಾವಣಗೆರೆಭಾರತೀಯ ಭೂಸೇನೆಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಸಂಖ್ಯಾಶಾಸ್ತ್ರಮಲಬದ್ಧತೆಎಮ್.ಎ. ಚಿದಂಬರಂ ಕ್ರೀಡಾಂಗಣಆಂಧ್ರ ಪ್ರದೇಶಶ್ರೀರಂಗಪಟ್ಟಣಕಾದಂಬರಿಮೈಸೂರು ದಸರಾರಾಣಿ ಅಬ್ಬಕ್ಕಬರವಣಿಗೆಜಿಪುಣಸುಂದರ ಕಾಂಡಗುಲಾಬಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ತಂತ್ರಜ್ಞಾನಪ್ಲಾಸಿ ಕದನಜಾತ್ಯತೀತತೆನೀತಿ ಆಯೋಗಕಲ್ಪನಾಹಸ್ತ ಮೈಥುನಚಿತ್ರದುರ್ಗಹಣ್ಣುಡಾ ಬ್ರೋಪರಶುರಾಮ🡆 More