ಜಿನೊಮ್‌

ಆಧುನಿಕ ಆಣ್ವಿಕ ಜೀವವಿಜ್ಞಾನದಲ್ಲಿ, ಜಿನೊಮ್ ‌ ಎಂಬುದು ಜೀವಿಯೊಂದರ ಸಂಪೂರ್ಣ ಆನುವಂಶಿಕ ಮಾಹಿತಿಯಾಗಿದೆ.

ಅದನ್ನು DNA ಅಥವಾ, ವೈರಸ್‌ಗಳ ಹಲವು ವಿಧಗಳಿಗೆ, RNAಯಲ್ಲಿ ಸಂಕೇತರೂಪದಲ್ಲಿದೆ.

ಜಿನೊಮ್‌
ಮಾನವ ಪುರುಷನ ಜೊಡಿ-ವರ್ಣತಂತುವಿನ ಜಿನೊಮ್‌ನ ಅಂಗವಾದ 46 ವರ್ಣತಂತುಗಳ ಚಿತ್ರ.(ಮೈಟೊಕಾಂಡ್ರಿಯಲ್‌ ವರ್ಣತಂತುವನ್ನು ಇಲ್ಲಿ ತೋರಿಸಿಲ್ಲ.)

ಜಿನೊಮ್‌ ವಂಶವಾಹಿಗಳು ಹಾಗೂ ಸಂಕೇತಗೊಳಿಸಿಲ್ಲದ ಅನುಕ್ರಮಗಳೆರಡನ್ನು ಒಳಗೊಂಡಿರುತ್ತದೆ. ಜರ್ಮನಿ ದೇಶದ ಹ್ಯಾಂಬರ್ಗ್‌ ವಿಶ್ವವಿದ್ಯಾನಿಲಯದ ಸಸ್ಯವಿಜ್ಞಾನ ಪ್ರಾಧ್ಯಾಪಕ ಹ್ಯಾನ್ಸ್‌ ವಿಂಕ್ಲರ್‌ ಈ ಉಕ್ತಿಯನ್ನು 1920ರಲ್ಲಿ ಅಳವಡಿಸಿಕೊಂಡರು. ಆಕ್ಸ್‌ಫರ್ಡ್‌ ಇಂಗ್ಲಿಷ್‌ ನಿಘಂಟು, ಜಿನೊಮ್‌ ಪದವನ್ನು ಜೀನ್(gen e )ಹಾಗೂ ಕ್ರೋಮೋಸೋಮ್(chromosome ) ಪದಗಳನ್ನು ಸಂಯೋಜಿಸಿ ರೂಪಿಸಿದ ಪದವೆಂದು ಹೇಳುತ್ತದೆ. ಇನ್ನು ಕೆಲವು ಸಂಬಂಧಿತ ಓಂ ಪದಗಳು ಇದ್ದವು-ಉದಾಹರಣೆಗೆ ಬಯೋಮ್ ಹಾಗೂ ರಿಝೋಮ್ . ಇಲ್ಲಿ ಶಬ್ದ-ಸಂಪತ್ತಿನ ರಚನೆಯಾಗಿ ಇದರಲ್ಲಿ ಜಿನೊಮ್ ‌ ಪದವು ವ್ಯವಸ್ಥಿತವಾಗಿ ಹೊಂದಿಕೊಳ್ಳುತ್ತದೆ.

ಕೆಲವು ಜೀವಿಗಳು ವರ್ಣತಂತುಗಳ ಹಲವು ಪ್ರತಿಗಳನ್ನು ಹೊಂದಿವೆ: ಜೋಡಿ ವರ್ಣತಂತು, ತ್ರಿಗುಣಿತ, ಚತುರ್ಗುಣಿತ ಇತ್ಯಾದಿ. ಶಾಸ್ತ್ರೀಯ ತಳೀಯವಿಜ್ಞಾನದಲ್ಲಿ, ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಜೀವಿಯೊಂದರಲ್ಲಿ (ಮಾದರಿಯಾಗಿ ಯುಕಾರ್ಯಾ) ಗಮೀಟ್(ಗರ್ಭೋತ್ಪತ್ತಿ ಮಾಡುವ ಹೆಣ್ಣು ಅಥವಾ ಗಂಡು ಜೀವಾಣು) ದೈಹಿಕ ಜೀವಕೋಶದ ವರ್ಣತಂತುಗಳ ಅರ್ಧದಷ್ಟು ಸಂಖ್ಯೆಯನ್ನು ಹೊಂದಿರುತ್ತದೆ. ಗಮೀಟ್‌ನಲ್ಲಿ ಜಿನೊಮ್‌ ವರ್ಣತಂತುಗಳ ಸಂಪೂರ್ಣ ಗುಂಪೇ ಹೊಂದಿರುತ್ತದೆ. ಬ್ಯಾಕ್ಟೀರಿಯಾ, ಆರ್ಕಿಯಾದ ಜೀವಕೋಶಗಳು ಸೇರಿದಂತೆ ಅಗುಣಿತ ಜೀವಿಗಳಲ್ಲಿ, ಮೈಟೊಕಾಂಡ್ರಿಯಾ, ಕ್ಲೊರೊಪ್ಲಾಸ್ಟ್‌ ಸೇರಿದಂತೆ ಅಂಗಕಗಳು,ಅಥವಾ ಇದೇ ರೀತಿ ವಂಶವಾಹಿಗಳನ್ನು ಹೊಂದಿರುವ ವೈರಸ್‌ಗಳಲ್ಲಿ, DNAದ (ಕೆಲವು ವೈರಸ್‌ಗಳಲ್ಲಿ RNA)ಒಂಟಿ ಅಥವಾ ವೃತ್ತಾಕಾರದ ಮತ್ತು/ಅಥವಾ ರೇಖೀಯ ಸರಣಿಗಳ ಗುಂಪಿನಿಂದ ಜಿನೊಮ್ ನಿರ್ಮಾಣವಾಗುತ್ತದೆ.

ಜಿನೊಮ್‌ ಎಂಬ ಪದವನ್ನು ನ್ಯೂಕ್ಲಿಯರ್ DNA (ಅರ್ಥಾತ್, '[[ನ್ಯೂಕ್ಲಿಯರ್ ಜಿನೊಮ್‌|ನ್ಯೂಕ್ಲಿಯರ್ ಜಿನೊಮ್‌]]')ನ ಸಂಪೂರ್ಣ ಗುಂಪಿಗೆ ವಿಶೇಷವಾಗಿ ಅನ್ವಯಿಸಬಹುದಾಗಿದೆ.   ಮೈಟೊಕಾಂಡ್ರಿಯಲ್‌ ಜಿನೊಮ್‌ ಅಥವಾ ಕ್ಲೋರಪ್ಲಾಸ್ಟ್‌ ಜಿನೊಮ್‌ನಂತೆಯೇ,ಸ್ವಂತ DNAಹೊಂದಿರುವ ಅಂಗಕಗಳ ಸಂಗ್ರಹಕ್ಕೂ ಇದನ್ನು ಅನ್ವಯಿಸಬಹುದಾಗಿದೆ. ಇದಲ್ಲದೆ ಜಿನೊಮ್‌ ವೈರಸ್‌ಗಳು, ಪ್ಲಾಸ್ಮಿಡ್‌ಗಳು ಮತ್ತು ಸ್ಥಾನ ಬದಲಿಸುವ ಅಂಶಗಳಂತಹ ವರ್ಣತಂತುವಲ್ಲದ ಆನುವಂಶಿಕ ಅಂಶಗಳನ್ನು ಹೊಂದಿದೆ.  ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಪ್ರಭೇದದ ಜಿನೊಮ್‌ ಅನುಕ್ರಮಗೊಳಿಸಲಾಗಿದೆ ಎಂದು ಜನರು ಹೇಳಿದರೆ, ವಿಶೇಷವಾಗಿ ಅಲಿಂಗವರ್ಣತಂತುಗಳ ಒಂದು ಗುಂಪಿನ ಅನುಕ್ರಮ ಮತ್ತು ಲಿಂಗ ವರ್ಣತಂತುಗಳ ಒಂದು ವಿಧದ ಅನುಕ್ರಮದ ಪರಿಮಾಣವನ್ನು ಅವರು ಉಲ್ಲೇಖಿಸುತ್ತಾರೆ. ಅವು ಒಟ್ಟಿಗೆ ಸಂಭವನೀಯ ಎರಡೂ ಲಿಂಗಗಳನ್ನು ಪ್ರತಿನಿಧಿಸುತ್ತವೆ. ಒಂದೇ ಲಿಂಗದಲ್ಲಿ ಅಸ್ತಿತ್ವದಲ್ಲಿರುವ ಪ್ರಭೇದಗಳಲ್ಲಿ, ಜಿನೊಮ್‌ ಅನುಕ್ರಮ ಎನ್ನುವುದು ವಿವಿಧ ವ್ಯಕ್ತಿಗಳ ವರ್ಣತಂತುಗಳಲ್ಲಿನ ಸಮಗ್ರ ಗುರುತಿಸುವಿಕೆಯಾಗಿದೆ.  ಸಾಮಾನ್ಯ ಬಳಕೆಯಲ್ಲಿ, ಒಬ್ಬ ವ್ಯಕ್ತಿ ಅಥವಾ ಜೀವಿಯ ಜಿನೊಮ್‌ನ್ನು ಉಲ್ಲೇಖಿಸಲು‌  'ವಂಶವಾಹಿ ವ್ಯವಸ್ಥೆ' ಎಂಬ ಉಕ್ತಿಯನ್ನು ಕೆಲವೊಮ್ಮೆ ಸಂವಾದಾತ್ಮಕವಾಗಿ ಬಳಸಲಾಗಿದೆ.  ಸಂಬಂಧಿತ ಜೀವಿಗಳ ಜಿನೊಮ್‌ಗಳ ಜಾಗತಿಕ ಗುಣಲಕ್ಷಣಗಳ ವೃತ್ತಾಂತವನ್ನು ಸಾಮಾನ್ಯವಾಗಿ ಜಿನೊಮಿಕ್ಸ್‌ ಎನ್ನಲಾಗಿದೆ. ಇದು ಒಂಟಿ ವಂಶವಾಹಿ ಅಥವಾ ವಂಶವಾಹಿ ಗುಂಪುಗಳ ಲಕ್ಷಣಗಳನ್ನು ಅಧ್ಯಯನ ಮಾಡುವ ವಂಶವಾಹಿ ವಿಜ್ಞಾನದಿಂದ ಬೇರ್ಪಡುತ್ತದೆ. 

ಮೂಲ ಜೋಡಿಗಳು ಮತ್ತು ವಂಶವಾಹಿಗಳ ಸಂಖ್ಯೆಯು ಒಂದು ಪ್ರಭೇದದಿಂದ ಇನ್ನೊಂದಕ್ಕೆ ವ್ಯತ್ಯಾಸಗೊಳ್ಳುತ್ತದೆ. ಇವೆರಡರ ನಡುವೆ ಕೇವಲ ಸ್ಥೂಲವಾದ ಪರಸ್ಪರ-ಸಂಬಂಧವಿದೆ (ಇಂತಹ ಗಮನಕ್ಕೆ C-ಮೌಲ್ಯದ ವಿರೋಧಾಭಾಸ ಎನ್ನಲಾಗಿದೆ). ಟ್ರೈಕೊಮೋನಿಯಾಸಿಸ್ ಗೆ ಕಾರಣವಾದಪ್ರೊಟೊಸೋವದಲ್ಲಿ ಸದ್ಯ ಅತಿ ಹೆಚ್ಚು ವಂಶವಾಹಿಗಳು ಎಂದರೆ 60,000 ವಂಶವಾಹಿಗಳಿವೆ.‌ (ಅನುಕ್ರಮವಾಗಿರುವ ಯುಕಾರ್ಯೊಟಿಕ್‌ ಜಿನೊಮ್‌ಗಳ ಪಟ್ಟಿಯನ್ನು ನೋಡಿ). ಬಹುತೇಕ ಮಾನವನ ಜಿನೊಮ್‌ನಲ್ಲಿರುವ ವಂಶವಾಹಿಗಳ ಸಂಖ್ಯೆಯ ಮೂರುಪಟ್ಟಿನಷ್ಟಿದೆ.

DNAನಲ್ಲಿ ಶೇಖರಿಸಲಾದ ಮಾನವ ಜಿನೊಮ್‌ ಗ್ರಂಥಾಲಯದಲ್ಲಿ ಶೇಖರಿಸಲಾದ ಮಾಹಿತಿ-ಸೂಚನೆಗಳಿಗೆ ಸದೃಶವಾಗಿದೆ:

  • ಗ್ರಂಥಾಲಯದಲ್ಲಿ 46 ಪುಸ್ತಕಗಳುಂಟು (ವರ್ಣತಂತುಗಳು)
  • ಪುಸ್ತಕಗಳು ವಿವಿಧ ಗಾತ್ರದಲ್ಲಿರುತ್ತವೆ. ಸುಮಾರು 400ರಿಂದ 3340 ಪುಟಗಳ ತನಕ (ವಂಶವಾಹಿಗಳು)
  • ಅರ್ಥಾತ್‌ ಪ್ರತಿ ಪುಸ್ತಕದಲ್ಲಿ 48ರಿಂದ 250 ದಶಲಕ್ಷ ಅಕ್ಷರಗಳಿವೆ(A,C,G,T).
  • ಹಾಗಾಗಿ, ಗ್ರಂಥಾಲಯದಲ್ಲಿ ಒಟ್ಟು ಸುಮಾರು ಆರು ಶತಕೋಟಿಗಿಂತ ಹೆಚ್ಚು ಅಕ್ಷರಗಳುಂಟು.
  • ಈ ಗ್ರಂಥಾಲಯವು ಪಿನ್‌ಪಾಯಿಂಟ್ ಗಾತ್ರದಷ್ಟಿರುವ ಜೀವಕೋಶದ ಬೀಜದೊಳಗೆ ಹಿಡಿಸುತ್ತದೆ;
  • ನಮ್ಮ ಶರೀರದ ಪ್ರತಿಯೊಂದು ಜೀವಕೋಶದಲ್ಲಿಯೂ ಗ್ರಂಥಾಲಯದ ತದ್ರೂಪಗಳಿರುತ್ತವೆ (ಎಲ್ಲಾ 46 ಪುಸ್ತಕಗಳೂ ಇರುತ್ತವೆ).

ವಿಧಗಳು

ವೈರಸ್‌ಗಿಂತಲೂ ಇನ್ನಷ್ಟು ಸಂಕೀರ್ಣವಾದ ಹಲವು ಜೈವಿಕ ಜೀವಿಗಳು, ತಮ್ಮ ವರ್ಣತಂತುಗಳಲ್ಲಿರುವ ಆನುವಂಶಿಕ ವಸ್ತುಗಳಲ್ಲದೆ, ಕೆಲವೊಮ್ಮೆ ಅಥವಾ ಯಾವಾಗಲೂ ಹೆಚ್ಚುವರಿ ಆನುವಂಶಿಕ ವಸ್ತುಗಳನ್ನು ಹೊತ್ತಿರುತ್ತವೆ. ರೋಗಕಾರಕ ಸೂಕ್ಷ್ಮಜೀವಿಯೊಂದರ ಜಿನೊಮ್‌ನ್ನು ಆನುಕ್ರಮಗೊಳಿಸುವಂತಹ ಇನ್ನು ಕೆಲವು ಸಂದರ್ಭಗಳಲ್ಲಿ, ಜಿನೊಮ್ ಎಂಬುದು ಇಂತಹ ಪ್ರಮುಖ ವಸ್ತುಗಳಲ್ಲಿ ಶೇಖರಿಸಲಾದ ಮಾಹಿತಿಯನ್ನೂ ಸಹ ಒಳಗೊಂಡಿರಬಹುದು, ಪ್ಲಾಸ್ಮಿಡ್‌ಗಳಲ್ಲಿ ಇವು ನಿಕ್ಷೇಪವಾಗಿರುತ್ತವೆ. ಇಂತಹ ಸನ್ನಿವೇಶಗಳಲ್ಲಿ, ಜಿನೊಮ್‌ ಎಂಬುದು ಎಲ್ಲಾ ವಂಶವಾಹಿಗಳನ್ನು ವಿವರಿಸುತ್ತದೆ ಮತ್ತು ಉಪಸ್ಥಿತವಿರಲು ಸಮರ್ಥವಾದ ಸಂಕೇತವಿಲ್ಲದ DNA ಕುರಿತು ಎಲ್ಲಾ ಮಾಹಿತಿಯನ್ನು ನೀಡುತ್ತದೆ.

ಗಿಡಗಳು, ಪ್ರೊಟೊಜೊವಾ ಮತ್ತು ಪ್ರಾಣಿಗಳಂತಹ ಯುಕಾರ್ಯೊಟ್‌ಗಳಲ್ಲಿ ಜಿನೊಮ್‌ ಕೇವಲ ವರ್ಣತಂತುವಿನ DNA ಕುರಿತು ಮಾದರಿಯ ಮಾಹಿತಿಯನ್ನು ಮಾತ್ರ ಒಯ್ಯುತ್ತದೆ. ಹಾಗಾಗಿ, ಈ ಜೀವಿಗಳು ಕ್ಲೋರಪ್ಲಾಸ್ಟ್‌ಗಳು ಹಾಗೂ, ಸ್ವಂತ DNA ಹೊಂದಿರುವ ಮೈಟೊಕಾಂಡ್ರಿಯಾಗಳನ್ನು ಹೊಂದಿದ್ದರೂ, ಇಂತಹ ಅಂಗಕಗಳೊಳಗೆ DNA ಹೊಂದಿರುವ ಆನುವಂಶೀಯ ಮಾಹಿತಿಯನ್ನು ಜಿನೊಮ್‌ನ ಅಂಗ ಎಂದು ಪರಿಗಣಿಸಲಾಗಿಲ್ಲ. ಕೆಲವೊಮ್ಮೆ ಮೈಟೊಕಾಂಡ್ರಿಯಾಗಳು ಸಹ ತಮ್ಮದೇ ಜಿನೊಮ್‌ ಹೊಂದಿದ್ದು, ಇವನ್ನು ಮೈಟೊಕಾಂಡ್ರಿಯಲ್‌ ಜಿನೊಮ್‌ ಎನ್ನಲಾಗುತ್ತದೆ. ಕ್ಲೋರಪ್ಲಾಸ್ಟ್‌ನೊಳಗಿರುವ DNAನ್ನು ಪ್ಲಾಸ್ಟೋಮ್‌ ಎನ್ನಲಾಗುತ್ತದೆ.

ಜಿನೊಮ್‌ಗಳು ಮತ್ತು ಆನುವಂಶಿಕ ಮಾರ್ಪಾಟು

ಪ್ರಭೇದವೊಂದರ ಆನುವಂಶಿಕ ವೈವಿಧ್ಯ ಅಥವಾ ಆನುವಂಶಿಕ ಬಹುರೂಪತೆಯನ್ನು ಜಿನೊಮ್‌ ಹಿಡಿಯಲಾರದು ಎಂಬುದನ್ನು ಗಮನಿಸಬೇಕಾಗಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯ ಜೀವಕೋಶದ DNAದಲ್ಲಿನ ಅರ್ಧದಷ್ಟು ಮಾಹಿತಿಯನ್ನು ಪಡೆದು ಮಾನವ ಜಿನೊಮ್‌ ಅನುಕ್ರಮವನ್ನು ತಾತ್ತ್ವಿಕವಾಗಿ ನಿರ್ಣಯಿಸಬಹುದಾಗಿದೆ. ನಿರ್ದಿಷ್ಟ ಗುಣಲಕ್ಷಣಗಳು ಮತ್ತು ರೋಗಗಳಿಗೆ ಮೂಲಾಧಾರವಾದ ಆನುವಂಶಿಕ ಮಾಹಿತಿಯ ವ್ಯತ್ಯಾಸಗಳನ್ನು ಅರಿಯಲು ವ್ಯಕ್ತಿಗಳ ನಡುವಿನ ಹೋಲಿಕೆಗಳ ಅಗತ್ಯ ಕಂಡುಬರುತ್ತದೆ. ಈ ಅಂಶವು ಜಿನೋಮ್ ಸಾಮಾನ್ಯ ಬಳಕೆಯನ್ನು ವಿವರಿಸುತ್ತದೆ(ಇದು ವಂಶವಾಹಿಯ ಸಾಮಾನ್ಯ ಬಳಕೆಗೆ ಸಮಾನಾಂತರವಾಗಿದೆ). ಇದು ಯಾವುದೇ ವಿಶಿಷ್ಟ DNA ಅನುಕ್ರಮದಲ್ಲಿನ ಮಾಹಿತಿಯನ್ನು ಉಲ್ಲೇಖಿಸುವುದಿಲ್ಲ, ಆದರೆ ಜೀವವೈಜ್ಞಾನಿಕ ಪ್ರಸಂಗವನ್ನು ಹಂಚಿಕೊಳ್ಳುವ ಇಡೀ ಅನುಕ್ರಮಗಳ ಕುಟುಂಬವನ್ನು ಉಲ್ಲೇಖಿಸುತ್ತದೆ.

ಈ ಪರಿಕಲ್ಪನೆಯು ಇಂದ್ರಿಯಜನ್ಯ ಜ್ಞಾನಕ್ಕೆ ವಿರುದ್ಧವಾಗಿ ಕಂಡುಬಂದರೂ,ಇದೇ ಪರಿಕಲ್ಪನೆಯು ಚಿರತೆಯ ಆಕಾರವನ್ನು ಹೋಲುವ ಯಾವುದೇ ನಿರ್ದಿಷ್ಟ ರೂಪವಿಲ್ಲ ಎಂದು ಹೇಳುತ್ತದೆ. ಚಿರತೆಗಳು ಒಂದಕ್ಕಿಂತ ಇನ್ನೊಂದು ವ್ಯತ್ಯಾಸವಾಗುತ್ತವೆ, ಅದರಂತೆ ಅವುಗಳ ಜಿನೊಮ್‌ಗಳ ಅನುಕ್ರಮಗಳೂ ಬದಲಾಗುತ್ತವೆ. ಆದರೆ ಪ್ರತಿಯೊಂದು ಪ್ರಾಣಿಗಳು ಮತ್ತು ಅವುಗಳ ಅನುಕ್ರಮಗಳು ಸಾಮ್ಯತೆಗಳನ್ನು ಹಂಚಿಕೊಳ್ಳುತ್ತವೆ. ಅದರಿಂದಾಗಿ, ಚಿರತೆಗಳು ಮತ್ತು ಚಿರತೆಯ ಗುಣಲಕ್ಷಣದ ಪ್ರಾಣಿಗಳ ಒಂದು ಉದಾಹರಣೆಯಿಂದ ಅವುಗಳ ಬಗ್ಗೆ ಕಲಿಯಬಹುದು.

ಅನುಕ್ರಮಗೊಳಿಸುವಿಕೆ ಮತ್ತು ಮಾಪನ

ಮಾನವ ಜಿನೊಮ್‌ನ್ನು ಮಾಪನ ಮಾಡಲು ಹಾಗೂ ಅನುಕ್ರಮಗೊಳಿಸಲು ಮಾನವ ಜಿನೊಮ್‌ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಹೆಗ್ಗಣ, ಅಕ್ಕಿ, ಅರಬಿಡಾಪ್ಸಿಸ್‌ ತಾಳಿಯಾನಾ ಗಿಡ, ಬುದ್ದಲಿ ಮೀನು, ಇ.ಕೊಲಿಯಂತಹ ಬ್ಯಾಕ್ಟೀರಿಯಾ ಇತ್ಯಾದಿ ಜೀವಿಗಳು ಇತರೆ ಜಿನೊಮ್‌ ಯೋಜನೆಗಳ ಅಂಗವಾಗಿತ್ತು. ಇಸವಿ 1976ರಲ್ಲಿ, ಬೆಲ್ಜಿಯಮ್‌ ದೇಶದ ಘೆಂಟ್‌ ವಿಶ್ವವಿದ್ಯಾನಿಲಯದಲ್ಲಿ ವಾಲ್ಟರ್‌ ಫಯರ್ಸ್‌, ವೈರಲ್‌ RNA ಜಿನೊಮ್‌ ಬ್ಯಾಕ್ಟೀರಿಯೊಫೇಜ್‌ MS2ನ ಸಂಪೂರ್ಣ ನೂಕ್ಲಿಯೊಟೈಡ್‌ ಅನುಕ್ರಮವನ್ನು ಸ್ಥಿರಪಡಿಸುವಲ್ಲಿ ಮೊದಲಿಗರಾಗಿದ್ದರು. ಫೇಜ್‌ Φ-X174 ಸಂಪೂರ್ಣವಾದ ಮೊದಲ DNA-ಜಿನೊಮ್‌ ಯೋಜನೆಯಾಗಿತ್ತು. ಇದರಲ್ಲಿ ಕೇವಲ 5386 ಮೂಲ ಜೋಡಿಗಳಿದ್ದು, 1977ರಲ್ಲಿ ಫ್ರೆಡ್‌ ಸ್ಯಾಂಗರ್‌ ಇದನ್ನು ಅನುಕ್ರಮಗೊಳಿಸಿದ್ದರು. ಇಸವಿ 1995ರಲ್ಲಿ ಜಿನೊಮಿಕ್‌ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಗಳ ತಂಡವು ಸಂಪೂರ್ಣಗೊಳಿಸಿದ ಹಿಮೊಫಿಲಸ್‌ ಇಂಫ್ಲುಯೆನ್ಜೇ ಮೊದಲ ಬ್ಯಾಕ್ಟೀರಿಯ ಜಿನೋಮ್‌ ಆಗಿತ್ತು.


ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯು ಅನುಕ್ರಮಗೊಳಿಸುವಿಕೆಯ ಜಟಿಲತೆ ಮತ್ತು ವೆಚ್ಚಗಳನ್ನು ಗಮನಾರ್ಹವಾಗಿ ಕಡಿಮೆಗೊಳಿಸಿ, ಸಂಪೂರ್ಣವಾದ ಜಿನೊಮ್‌ ಅನುಕ್ರಮಗಳು ತ್ವರಿತವಾಗಿ ಹೆಚ್ಚುತ್ತಿವೆ. ಹಲವು ಜಿನೊಮ್‌ ದತ್ತಾಂಶಸಂಗ್ರಹದ ಸ್ಥಳಗಳಲ್ಲಿ, US ನ್ಯಾಷನಲ್ ಇನ್ಸ್‌ಟಿಟ್ಯೂಟ್ಸ್ ಆಫ್ ಹೆಲ್ತ್ ನಿರ್ವಹಿಸುತ್ತಿರುವ ಸಂಗ್ರಹವೂ ಸಹ ಸೇರಿದೆ.

ಈ ಹೊಸ ತಂತ್ರಜ್ಞಾನಗಳು ವೈಯಕ್ತಿಕ ಜಿನೊಮ್‌ ಅನುಕ್ರಮವನ್ನು ಪ್ರಮುಖ ರೋಗನಿರ್ಣಯ ಸಾಧನವಾಗಿ ಬಳಸುವ ಸಾಧ್ಯತೆಯನ್ನು ಹೆಚ್ಚಿಸಿದೆ. DNA ಹರಿಕಾರ ಜೇಮ್ಸ್‌ ಡಿ. ವಾಟ್ಸನ್‌ರ ಸಂಪೂರ್ಣ ಜಿನೊಮ್‌ನ್ನು ಭೇದಿಸಿರುವುದಾಗಿ ಬಗ್ಗೆ ಮೇ 2007ರಲ್ಲಿ ನ್ಯೂಯಾರ್ಕ್‌ ಟೈಮ್ಸ್ ‌ ಪ್ರಕಟಣೆಯು ಈ ಗುರಿಯತ್ತ ಪ್ರಮುಖ ಹೆಜ್ಜೆಯಾಗಿತ್ತು.

ಜಿನೊಮ್‌ ಅನುಕ್ರಮವು ಜಿನೊಮ್‌ನಲ್ಲಿನ ಪ್ರತಿ DNA ಬೇಸ್‌ನ ಕ್ರಮವನ್ನು ಪಟ್ಟಿಮಾಡಿದರೆ, ಜಿನೊಮ್‌ ನಕ್ಷೆಯು ಹೆಗ್ಗುರುತುಗಳನ್ನು ಪತ್ತೆಮಾಡುತ್ತವೆ. ಜಿನೊಮ್‌ ನಕ್ಷೆಯು ಜಿನೊಮ್‌ ಅನುಕ್ರಮಕ್ಕಿಂತ ಕಡಿಮೆ ವಿಸ್ತೃತಿ ಹೊಂದಿದೆ. ಇದು ಜಿನೊಮ್‌ ಸುತ್ತಲು ಚಲಿಸಲು ನೆರವಾಗುತ್ತದೆ.

ವಿವಿಧ ಜಿನೊಮ್‌ ಗಾತ್ರಗಳ ಹೋಲಿಕೆ

ವೈರಸ್ ವೈರಸ್ ವೈರಸ್ ವೈರಸ್ ವೈರಸ್ ವೈರಸ್ ಗಿಡ ಗಿಡ ಗಿಡ ಗಿಡ ಕಿಣ್ವ ಕೀಟ ಕೀಟ ಕೀಟ ಮೀನು ಮೀನು
ಬ್ಯಾಕ್ಟೀರಿಯೊಫೇಜ್‌ MS2 3,569 0.000002 ಅನುಕ್ರಮಗೊಳಿಸಲಾದ ಮೊದಲ RNA-ಜಿನೊಮ್‌
SV40 5,224

18

ಫೇಜ್‌ Φ-X174 5,386 ಅನುಕ್ರಮಗೊಳಿಸಲಾದ ಮೊದಲ DNA-ಜಿನೊಮ್‌
HIV 9749
ಫೇಜ್‌ λ 48,502
ಮಿಮಿವೈರಸ್‌ 1,181,404 ಗೊತ್ತಾದ ಅತಿದೊಡ್ಡ ವೈರಲ್‌ ಜಿನೊಮ್‌
ಬ್ಯಾಕ್ಟೀರಿಯಮ್‌ ಹೀಮೊಫಿಲಿಯಸ್‌ ಇನ್ಫ್ಲೂಯೆಂಜೆ 1,830,000 ಬದುಕುಳಿದಿರುವ ಜೀವಿಯ ಮೊದಲ ಜಿನೊಮ್, ಜುಲೈ 1995
ಬ್ಯಾಕ್ಟೀರಿಯಮ್‌ ಕಾರ್ಸನೆಲ್ಲಾ ರುಡ್ಡಿ 159,662 ಅತಿ ಚಿಕ್ಕ ವೈರಸೇತರ ಜಿನೊಮ್‌.
ಬ್ಯಾಕ್ಟೀರಿಯಮ್‌ ಬುಚ್ನೇರಾ ಅಫಿಡಿಕೊಲ 600,000
ಬ್ಯಾಕ್ಟೀರಿಯಮ್‌ ವಿಗ್ಲ್‌ಸ್‌ವರ್ತಿಯಾ ಗ್ಲಾಸಿನಿಡಿಯಾ 700,000
ಬ್ಯಾಕ್ಟೀರಿಯಮ್‌

ಇಸ್ಕರಿಚಿಯಾ ಕೊಲಿ

4,600,000
ಬ್ಯಾಕ್ಟೀರಿಯಮ್‌ ಸೊಲಿಬ್ಯಾಕ್ಟರ್‌ ಉಸಿಟಾಟಸ್‌ (ಸ್ಟ್ರೇನ್‌ ಎಲಿನ್‌ 6076) 9,970,000 ಗೊತ್ತಾದ ಅತಿದೊಡ್ಡ ಬ್ಯಾಕ್ಟೀರಿಯಲ್‌ ಜಿನೊಮ್‌
ಅಮೀಬಾಯ್ಡ್‌ ಪಾಲಿಕಾವೊಸ್‌ ಡುಬಿಯಮ್‌ ("ಅಮೀಬಾ" ಡುಬಿಯಾ ) 670,000,000,000 737 ಗೊತ್ತಿರುವ ಅತಿದೊಡ್ಡ ಜಿನೊಮ್‌.
ಅರಬಿಡಾಪ್ಸಿಸ್‌ ತಾಳಿಯಾನಾ 157,000,000 ಅನುಕ್ರಮಗೊಳಿಸಲಾದ ಗಿಡದ ಮೊದಲ ಜಿನೊಮ್‌, ಡಿಸೆಂಬರ್‌ 2000.
ಜೆನ್‌ಲಿಸಿಯಾ ಮಾರ್ಗರೆಟೇ 63,400,000 ದಾಖಲಾದ ಅತಿ ಚಿಕ್ಕ ಹೂಬಿಡುವ ಗಿಡದ ಜಿನೊಮ್‌, 2006.
ಫ್ರಿಟಿಲೆರಿಯಾ ಅಸ್ಸಿರಿಕಾ 130,000,000,000
ಪಾಪ್ಯುಲಸ್‌ ಟ್ರೈಕೊಕಾರ್ಪಾ 480,000,000 ಮರದ ಮೊದಲ ಜಿನೊಮ್‌, ಸೆಪ್ಟೆಂಬರ್‌ 2006
ಹಾವಚಿ‌ ಫಿಸ್ಕೊಮಿಟ್ರೆಲ್ಲಾ ಪಾಟೆನ್ಸ್‌ 480,000,000 ಪಾಚಿಯೊಂದರ ಮೊದಲ ಜಿನೊಮ್‌, ಜನವರಿ 2008
ಸಾಕರೊಮೈಸೆಸ್‌ ಸೆರೆವಿಸಿಯೆ 12,100,000
ಶಿಲೀಂಧ್ರ ಅಸ್ಪರ್ಗಿಲಸ್‌ ನಿಡುಲಾನ್ಸ್‌ 30,000,000
ನೆಮಟೊಡ್‌ ಸಿನೊರ್ಹಾಬ್ಡಿಟಿಸ್‌ ಎಲಿಗನ್ಸ್‌ 100,300,000 ಮೊದಲ ಬಹುಜೀವಕೋಶೀಯ ಪ್ರಾಣಿಯ ಜಿನೊಮ್‌, ಡಿಸೆಂಬರ್‌ 1998
ನೆಮಟೋಡ್‌ ಪ್ರಾಟಿಲೆಂಚಸ್‌ ಕಾಫಿಯೇ 20,000,000 ಗೊತ್ತಾದ ಅತಿ ಚಿಕ್ಕ ಪ್ರಾಣಿಯ ಜಿನೊಮ್
ಡ್ರೊಸೊಫಿಲಾ ಮೆಲಾನೊಗ್ಯಾಸ್ಟರ್‌ (ಹಣ್ಣು ನೊಣ) 130,000,000 [41]
ಬಾಂಬಿಕ್ಸ್‌ ಮೊರಿ (ರೇಷ್ಮೆ ಹುಳು) 530,000,000
ಎಪಿಸ್‌ ಮೆಲ್ಲಿಫೆರಾ (ಜೇನು ಹುಳು) 236,000,000
ಟೆಟ್ರಾಒಡಾನ್‌ ನಿಗ್ರೊವಿರಿಡಿಸ್‌ (ಬುದ್ದಲಿ ಮೀನಿನ ಒಂದು ವಿಧ) 385,000,000 ಗೊತ್ತಿರುವ ಮೊದಲ ಅತಿಚಿಕ್ಕ ಕಷೇರುಕ ಪ್ರಾಣಿಯ ಜಿನೊಮ್‌
ಸಸ್ತನಿ ಹೊನೊ ಸಾಪಿಯೆನ್ಸ್‌ 3,200,000,000 3
ಪ್ರೊಟೊಪ್ಟೆರಸ್‌ ಏಥಿಯೊಪಿಕಸ್‌ (ಮಾರ್ಬಲ್ಡ್‌ ಲಂಗ್ಫಿಷ್‌) 130,000,000,000 143 ಗೊತ್ತಾದ ಅತಿ ದೊಡ್ಡ ಕಷೇರುಕ ಪ್ರಾಣಿಯ ಜಿನೊಮ್‌

ಗಮನಿಸಿ: ಏಕೈಕ ದ್ವಿಗುಣಿತ ಮಾನವ ಜೀವಕೋಶದಲ್ಲಿ DNAನ ಎಲ್ಲಾ 46 ವರ್ಣತಂತುಗಳನ್ನು ಒಂದಕ್ಕೊಂದು ತುದಿಗಳಲ್ಲಿ ಸಂಪರ್ಕಿಸಿ ನೇರಗೊಳಸಿದರೆ, ~2 m ಉದ್ದ ಹಾಗೂ ~2.4 ನ್ಯಾನೊಮೀಟರ್‌ಗಳಷ್ಟು ಅಗಲವಿರುತ್ತದೆ.

ಜಿನೊಮ್‌ಗಳು ಮತ್ತು ಅವುಗಳ ಜೀವಿಗಳು ಬಹಳ ಸಂಕೀರ್ಣವಾಗಿರುವ ಕಾರಣ, ಒಂದು ಜಿನೊಮ್‌ನಲ್ಲಿರುವ ವಂಶವಾಹಿಗಳನ್ನು ಅತಿ ಕನಿಷ್ಠಗೊಳಿಸಿ, ಆದರೂ ಆ ಜೀವಿಯು ಬದುಕುಳಿಯುವಂತ ಮಾಡುವುದು ಒಂದು ಸಂಶೋಧನಾ ಕಾರ್ಯತಂತ್ರವಾಗಿದೆ. ಒಂಟಿ ಜೀವಕೋಶದ ಜೀವಿಗಳಿಗೆ ಕನಿಷ್ಠ ಜಿನೊಮ್‌ಗಳು ಹಾಗೂ ಬಹು-ಜೀವಕೋಶೀಯ ಜೀವಿಗಳ ಕನಿಷ್ಠ ಜಿನೊಮ್‌ಗಳ ಮೇಲೆ ಪ್ರಾಯೋಗಿಕ ಕಾರ್ಯಗಳನ್ನು ಮಾಡಲಾಗಿದೆ (ಅಭಿವೃದ್ಧಿ ಜೀವವಿಜ್ಞಾನ ನೋಡಿ). ಇದನ್ನು ವಿವೊದಲ್ಲಿ (ಜೀವಿಗಳ ದೇಹದಲ್ಲಿ ಪ್ರಯೋಗ) ಹಾಗೂ ಸಿಲಿಕೊದಲ್ಲಿ (ಜೀವಿಗಳ ಹೊರಗೆ ಪ್ರಯೋಗ) ನಡೆಸಲಾಗಿದೆ.

ಜಿನೊಮ್‌ ವಿಕಸನ

ಜಿನೊಮ್‌ಗಳು ಜೀವಿಯೊಂದರ ವಂಶವಾಹಿಗಳ ಒಟ್ಟು ಸಂಖ್ಯೆಗಿಂತಲೂ ಹೆಚ್ಚಾಗಿವೆ. ಯಾವುದೇ ವಿಶಿಷ್ಟ ವಂಶವಾಹಿಗಳು ಮತ್ತು ಅವುಗಳ ಉತ್ಪನ್ನಗಳ ವಿವರಗಳ ಉಲ್ಲೇಖವಿಲ್ಲದೆ ಮಾಪನಮಾಡಿ, ಅಧ್ಯಯನ ಮಾಡಬಹುದಾದ ಗುಣಲಕ್ಷಣಗಳನ್ನು ಹೊಂದಿವೆ. ಇಂದು ಆಸ್ತಿತ್ವದಲ್ಲಿರುವ ವಿಭಿನ್ನ ವಿಧಗಳ ಜಿನೊಮ್‌ಗಳು ಯಾವ ವ್ಯವಸ್ಥೆಗಳಿಂದ ಸೃಷ್ಟಿಯಾಯಿತು ಎಂದು ನಿರ್ಣಯಿಸಲು, ವರ್ಣತಂತು ಸಂಖ್ಯೆ (ಕಾರ್ಯೊಟೈಪ್‌), ಜಿನೊಮ್‌ ಗಾತ್ರ, ವಂಶವಾಹಿ ಕ್ರಮ, ಕೊಡಾನ್‌ ಬಳಕೆಯ ಪಕ್ಷಪಾತ ಹಾಗೂ GC-ಅಂಶದಂತಹ ಗುಣಲಕ್ಷಣಗಳನ್ನು ಸಂಶೋಧಕರು ಹೋಲಿಸುತ್ತಾರೆ (ಇತ್ತೀಚೆಗಿನ ಸ್ಥೂಲ ಮೇಲ್ನೋಟಕ್ಕಾಗಿ, ಬ್ರೌನ್‌ 2002; ಸ್ಯಾಕೋನ್‌ ಮತ್ತು ಪೆಸೊಲೆ 2003; ಬೆನ್ಫ್ರೆ ಮತ್ತು ಪ್ರೊಟೊಪಾಪಾಸ್‌ 2004; ಜಿಬ್ಸನ್‌ ಮತ್ತು ಮ್ಯೂಸ್‌ 2004; ರೀಸ್‌ 2004; ಗ್ರೆಗರಿ 2005 ನೋಡಿ).


ಜಿನೊಮ್‌ಗೆ ರೂಪಾಕಾರ ನೀಡುವುದರಲ್ಲಿ ದ್ವಿಗುಣೀಕರಣಗಳು(ನಕಲು ತಯಾರಿಸುವಿಕೆ) ಪ್ರಮುಖ ಪಾತ್ರವಹಿಸುತ್ತವೆ. ದ್ವಿಗುಣೀಕರಣಗಳು ಸಂಕ್ಷಿಪ್ತ ಏಕಸಾಲು ಪುನರಾವರ್ತನೆಗಳ ವಿಸ್ತರಣೆಯಿಂದ ಹಿಡಿದು, ವಂಶವಾಹಿಗಳ ಗುಂಪುಗಳ ದ್ವಿಗುಣೀಕರಣಗಳ ತನಕ ನಡೆಯಬಹುದು. ಇಡೀ ವರ್ಣತಂತುಗಳು ಅಥವಾ ಇಡೀ ಜಿನೊಮ್‌ಗಳು ಸಹ ದ್ವಿಗುಣೀಕರಣವಾಗಬಹುದು. ಆನುವಂಶೀಯ ನವೀನತೆಯ ಸೃಷ್ಟಿಗಾಗಿ ಇಂತಹ ದ್ವಿಗುಣೀಕರಣಗಳು ಬಹುಶಃ ಮೂಲಭೂತವಾಗಿವೆ.

ಸಾಮಾನ್ಯವಾಗಿ ಬಹಳ ದೂರದ ಸಂಬಂಧ ಹೊಂದಿರುವ ಎರಡು ಜೀವಿಗಳ ಜಿನೊಮ್‌ಗಳಲ್ಲಿ ಸಣ್ಣ ಭಾಗಗಳ ನಡುವೆ ಬಹಳಷ್ಟು ಸಾಮ್ಯತೆ ಹೇಗೆ ಎಂದು ವಿವರಿಸಲು ಹಾರಿಜಾಂಟಲ್ ವಂಶವಾಹಿ ವರ್ಗಾವಣೆಯನ್ನು(ಬೇರೆ ಜೀವಿಯಿಂದ ಆನುವಂಶಿಕ ಅಂಶ ವರ್ಗಾವಣೆ) ಆವಾಹನೆ ಮಾಡಲಾಗಿದೆ. ಹಾರಿಜಾಂಟಲ್ ವಂಶವಾಹಿ ವರ್ಗಾವಣೆಯು ಹಲವು ಸೂಕ್ಷ್ಮಜೀವಿಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬಂದಿದೆ. ಜೊತೆಗೆ, ಯುಕಾರ್ಯೊಟಿಕ್‌ ಜೀವಕೋಶಗಳಲ್ಲಿ ಕ್ಲೋರಪ್ಲಾಸ್ಟ್‌ ಹಾಗೂ ಮೈಟೊಕಾಂಡ್ರಿಯ ಜಿನೊಮ್‌ಗಳಿಂದ ಅವುಗಳ ನ್ಯೂಕ್ಲಿಯರ್ ವರ್ಣತಂತುಗಳಿಗೆ ಕೆಲವು ಆನುವಂಶಿಕ ವಸ್ತುಗಳ ವರ್ಗಾವಣೆಯ ಅನುಭವ ಪಡೆದಿವೆ.

ಇವನ್ನೂ ಗಮನಿಸಿ

  • ಸಂಪೂರ್ಣ ಜಿನೊಮ್‌ ಅನುಕ್ರಮಕರಣ
  • ವಂಶವಾಹಿ
  • ವಂಶವಾಹಿ ಕುಟುಂಬ
  • ಜಿನೊಮ್‌ ಹೋಲಿಕೆ
  • ಮಾನವ ಜಿನೊಮ್‌
  • ಮಾನವ ಅತಿಸೂಕ್ಷ್ಮ ಬಯೊಮ್‌ ಯೋಜನೆ
  • ಜೀವವಿಜ್ಞಾನದಲ್ಲಿ ಆಮಿಕ್ಸ್ ವಿಷಯಗಳ ಪಟ್ಟಿ
  • ಅನುಕ್ರಮಗೊಳಿಸಲಾದ ಯುಕ್ಯಾರ್ಯೊಟಿಕ್‌ ಜಿನೊಮ್‌ಗಳ ಪಟ್ಟಿ
  • ಅನುಕ್ರಮಗೊಳಿಸಲಾದ ಬ್ಯಾಕ್ಟೀರಿಯಾದ ಜಿನೊಮ್‌ಗಳ ಪಟ್ಟಿ
  • ಅನುಕ್ರಮಗೊಳಿಸಲಾದ ಆರ್ಕಿಯಲ್‌ ಜಿನೊಮ್‌ಗಳು
  • ಅನುಕ್ರಮಗೊಳಿಸಲಾದ ಪ್ಲ್ಯಾಸ್ಟೊಮ್‌ಗಳ ಪಟ್ಟಿ
  • ಅತಿ ಸಣ್ಣ ಜಿನೊಮ್‌ ಯೋಜನೆ
  • ಮೈಟೊಕಾಂಡ್ರಿಯಾದ ಜಿನೊಮ್‌
  • ಆಣ್ವಿಕ ವರ್ಗೀಕರಣ
  • ಆಣ್ವಿಕ ವಿಕಸನ
  • ಬಹುಜಿನೊಮೀಯ ಜೀವಿ
  • ಜೇನುಹುಳು ಜಿನೊಮ್‌ ಅನುಕ್ರಮದ ಸಹಕಾರ ಕೂಟ
  • ರಾಷ್ಟ್ರೀಯ ಮಾನವ ಜಿನೊಮ್‌ ಸಂಶೋಧನಾ ಸಂಸ್ಥೆ

ಆಕರಗಳು

ಹೆಚ್ಚಿನ ಮಾಹಿತಿಗಾಗಿ

  • Benfey, P. (2004). Essentials of Genomics. Prentice Hall.
  • Brown, Terence A. (2002). Genomes 2. Oxford: Bios Scientific Publishers. ISBN 978-1859960295.
  • Gibson, Greg (2004). A Primer of Genome Science (Second ed.). Sunderland, Mass: Sinauer Assoc. ISBN 0-87893-234-8.
  • Gregory, T. Ryan (ed) (2005). The Evolution of the Genome. Elsevier. ISBN 0-12-301463-8. ;
  • Reece, Richard J. (2004). Analysis of Genes and Genomes. Chichester: John Wiley & Sons. ISBN 0-470-84379-9.
  • Saccone, Cecilia (2003). Handbook of Comparative Genomics. Chichester: John Wiley & Sons. ISBN 0-471-39128-X.
  • Werner, E. (2003). "In silico multicellular systems biology and minimal genomes". Drug Discov Today. 8 (24): 1121–1127. doi:10.1016/S1359-6446(03)02918-0. PMID 14678738.
  • Witzany, G. (2006). "Natural Genome Editing Competences of Viruses". Acta Biotheoretica. 54 (4): 235–253. doi:10.1007/s10441-006-9000-7. PMID 17347785.

ಹೊರಗಿನ ಕೊಂಡಿಗಳು

ನೆಕ್ಸ್ಟ್‌-ಜೆನ್‌ ಸಿಕ್ವೆನ್ಸಿಂಗ್‌ ಡಾಟಾ ಅನಲಿಸಿಸ್‌ ಫಾರ್‌ ಇಲ್ಯುಮಿನಾ ಅಂಡ್‌ 454 ಸರ್ವಿಸ್‌ ಫ್ರಮ್‌ ಜಿನೊಮ್‌ ಟೆಕ್ನಾಲಜೀಸ್‌.


Tags:

ಜಿನೊಮ್‌ ವಿಧಗಳುಜಿನೊಮ್‌ ಗಳು ಮತ್ತು ಆನುವಂಶಿಕ ಮಾರ್ಪಾಟುಜಿನೊಮ್‌ ಅನುಕ್ರಮಗೊಳಿಸುವಿಕೆ ಮತ್ತು ಮಾಪನಜಿನೊಮ್‌ ವಿವಿಧ ಗಾತ್ರಗಳ ಹೋಲಿಕೆಜಿನೊಮ್‌ ವಿಕಸನಜಿನೊಮ್‌ ಇವನ್ನೂ ಗಮನಿಸಿಜಿನೊಮ್‌ ಆಕರಗಳುಜಿನೊಮ್‌ ಹೆಚ್ಚಿನ ಮಾಹಿತಿಗಾಗಿಜಿನೊಮ್‌ ಹೊರಗಿನ ಕೊಂಡಿಗಳುಜಿನೊಮ್‌

🔥 Trending searches on Wiki ಕನ್ನಡ:

ಮಧುಮೇಹಧಾನ್ಯಕರಗ (ಹಬ್ಬ)ನೇಮಿಚಂದ್ರ (ಲೇಖಕಿ)ಅರಣ್ಯನಾಶಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶನಿ (ಗ್ರಹ)ಬೊಜ್ಜುಝೊಮ್ಯಾಟೊಗಣೇಶ ಚತುರ್ಥಿಮಾವುಉತ್ಪಾದನೆಯ ವೆಚ್ಚಸಾಮಾಜಿಕ ಸಮಸ್ಯೆಗಳುಕವಲುಪೂರ್ಣಚಂದ್ರ ತೇಜಸ್ವಿಕೆಂಬೂತ-ಘನಸಿಂಧನೂರುಮೆಕ್ಕೆ ಜೋಳಗ್ರಾಮ ದೇವತೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕೊಡಗುಭಾರತೀಯ ಕಾವ್ಯ ಮೀಮಾಂಸೆಶ್ರೀ ರಾಘವೇಂದ್ರ ಸ್ವಾಮಿಗಳುಸರಸ್ವತಿಯಣ್ ಸಂಧಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಬೆಳಗಾವಿಜಿ.ಎಸ್.ಶಿವರುದ್ರಪ್ಪಕನ್ನಡ ಬರಹಗಾರ್ತಿಯರುಯೇಸು ಕ್ರಿಸ್ತಋಷಿಹಾಸನ ಜಿಲ್ಲೆಋತುಕನ್ನಡಕುಮಾರವ್ಯಾಸತಿಗಳಾರಿ ಲಿಪಿಕನ್ನಡದಲ್ಲಿ ಸಣ್ಣ ಕಥೆಗಳುಅಂತಾರಾಷ್ಟ್ರೀಯ ಸಂಬಂಧಗಳುಪ್ರಬಂಧಅರ್ಥಶಾಸ್ತ್ರಸ್ವಾಮಿ ವಿವೇಕಾನಂದಅಂತರಜಾಲಸೂರತ್ಸಮಾಜ ವಿಜ್ಞಾನಕನ್ನಡದಲ್ಲಿ ಕಾವ್ಯ ಮಿಮಾಂಸೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಜಾನಪದಚಿಕ್ಕಮಗಳೂರುಭಾರತೀಯ ಭಾಷೆಗಳುಆಲೂರು ವೆಂಕಟರಾಯರುತ್ರಿಪದಿಶೂದ್ರ ತಪಸ್ವಿತಲಕಾಡುಅರಿಸ್ಟಾಟಲ್‌ಮಾನಸಿಕ ಆರೋಗ್ಯಪಿರಿಯಾಪಟ್ಟಣವಾಯು ಮಾಲಿನ್ಯಕರ್ನಾಟಕ ವಿಧಾನ ಸಭೆಸಹೃದಯಚಂದ್ರಗುಪ್ತ ಮೌರ್ಯಭಾರತದ ಬಂದರುಗಳುಜಾತಿಪ್ರೀತಿಮಿಂಚುಯೂಟ್ಯೂಬ್‌ಕರ್ನಾಟಕದ ಶಾಸನಗಳುಭೋವಿಭಾರತ ಬಿಟ್ಟು ತೊಲಗಿ ಚಳುವಳಿಸಮಾಜಶಾಸ್ತ್ರಗ್ರಂಥಾಲಯಗಳುನ್ಯೂಟನ್‍ನ ಚಲನೆಯ ನಿಯಮಗಳುವಚನಕಾರರ ಅಂಕಿತ ನಾಮಗಳುಮಂಡಲ ಹಾವುಮೆಂತೆಗದ್ಯಪಾಲಕ್ವಿಧಾನಸೌಧಬರವಣಿಗೆ🡆 More