ನಿದ್ರೆ

ಒಬ್ಬ ವ್ಯಕ್ತಿ ಎಚ್ಚರವಿಲ್ಲದಿದ್ದಾಗ ನಿದ್ರೆ ಮಾಡುತ್ತಿರುತ್ತಾನೆ.

ಸಾಮಾನ್ಯವಾಗಿ ಎಲ್ಲರೂ ರಾತ್ರಿ ಹೊತ್ತು ಮಲಗಿರುತ್ತಾರೆ. ಹಗಲು ಹೊತ್ತು ಎಚ್ಚರವಿರುತ್ತಾರೆ - ಶಾಲೆಗೆ ಹೋಗುವವರು, ಕೆಲಸ ಮಾಡುವವರು, ಇತ್ಯಾದಿ. ಇದಲ್ಲದೇ, ಹಲವು ಮಕ್ಕಳು ಹಾಗು ವಯಸ್ಕರು ಮಧ್ಯಾಹ್ನ ಕೂಡ ನಿದ್ರೆ ಮಾಡುತ್ತಾರೆ. ಪ್ರಾಣಿಗಳು ಸಹ ನಿದ್ರೆ ಮಾಡುತ್ತವೆ.

ನಿದ್ರೆ
ನಿದ್ರೆ ಮಾಡುತ್ತಿರುವ ಹೆಂಗಸು

ಯಾತಕ್ಕಾಗಿ ನಿದ್ರೆ?

ನಮ್ಮ ದೇಹವು ಒಂದು ಯಂತ್ರವಿದ್ದಂತೆ,ದಿನ ಪೂರ್ತಿ ಕೆಲಸ ಮಾಡುವ ನಮ್ಮ ಕಣ್ಣು,ಕಾಲು ಕೈ, ಕಿವಿ, ನಾಲಿಗೆ,ಮೆದುಳು,ಹ್ರುದಯದ ಬಡಿತ, ತೀವ್ರ ರಕ್ತ ಸಂಚಲನೆ, ಹೆಚ್ಚು ಉಸಿರಾಡುವ ಶ್ವಾಸಕೋಶ, ಹೀಗೆ ಇತರ ಪ್ರಮುಖ ದೇಹದ ಭಾಗಗಳಿಗೆ ವಿಶ್ರಾಂತಿ ಬಹುಮುಖ್ಯವಾಗಿ ಅವಶ್ಯಕತೆ ಇರುತ್ತದೆ ,ನಿದ್ರಾವಸ್ಥೆಯಲ್ಲಿ ಮೆದುಳು ಕೆಲುವು ಕ್ರಮಗಳನ್ನು ಕೈಗೊಳ್ಳುತ್ತವೆ. ಸದ್ಯಕ್ಕೆ ಇವಾವುವು ಎಂದು ಸ್ಪಷ್ಟವಾಗಿ ತಿಳಿಯದಿದ್ದರೂ, ಶರೀರಕ್ಕೆ ನಿದ್ರೆ ಬಹಳ ಮುಖ್ಯವಾದುದ್ದೆಂದು ಹೇಳಲಾಗುತ್ತದೆ. ಮನುಷ್ಯರು ನಿದ್ರೆ ಮಾಡುವಾಗ ಕನಸು ಕಾಣುತ್ತಾರೆ, ಪ್ರಾಣಿಗಳೂ ಕಾಣಬಹುದೇನೊ. ಸಾಮಾನ್ಯವಾಗಿ ಎಲ್ಲರೂ ದಿನಕ್ಕೊಮ್ಮೆ ಮಲಗಿದರೆ, ಬೆಕ್ಕುಗಳಂಥ ಪ್ರಾಣಿಗಳು ದಿನಕ್ಕೆ ಹಲವು ಭಾರಿ ಸಣ್ಣ-ನಿದ್ರೆ ಮಾಡುತ್ತವೆ.

ಎಷ್ಟು ನಿದ್ರೆ ಬೇಕು?

ನಿದ್ರೆ ಯಾವಾಗ ಮತ್ತು ಎಷ್ಟು - ಇವೆರಡೂ ಮುಖ್ಯವಾದದ್ದು. ಇವು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ. ಇದು ಆ ವ್ಯಕ್ತಿಯ ವಯಸ್ಸಿನ ಮೇಲೆ ಅವಲಂಬಿತ. ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಅವಶ್ಯಕ. ನವಜಾತ ಶಿಶುಗಳು ದಿನಕ್ಕೆ ೧೮ ತಾಸು ಮಲಗಿದರೆ, ಒಂದು ವರ್ಷದ ಮಗುವಿಗೆ ೧೪ ತಾಸು ಸಾಕಾಗುತ್ತದೆ. ವಯಸ್ಕರಿಗೆ ಕನಿಷ್ಟ ೮ ತಾಸು ನಿದ್ರಾ ಸಮಯ ಅತ್ಯವಶ್ಯಕ.

ನಿದ್ರೆಯ ಪ್ರಮಾಣ

  • ಮನುಷ್ಯ:ಒಬ್ಬ ವ್ಯಕ್ತಿಗೆ ದಿನಕ್ಕೆ 8 ಗಂಟೆ ನಿದ್ದೆ ಅವಶ್ಯಕ. ಅಂದರೆ, ದಿನದ 33% ಸಮಯ ನಿದ್ದೆಗೆ ಮೀಸಲಿಡಬಹುದು.
  • ಫ್ಲೆಮಿಂಗೊ ಒಂಟಿ ಕಾಲಿನಲ್ಲೇ ನಿಂತು ನಿದ್ರಿಸಬಲ್ಲದು. ಜೊತೆಗೆ ಹಿಂಬದಿಗೆ ತಲೆಯನ್ನು ಅವಿತಿಟ್ಟು ನಿದ್ರಿಸುತ್ತವೆ. ಇದೇ ಜಾತಿಗೆ ಸೇರಿದ ಇನ್ನಿತರ ಹಕ್ಕಿಗಳು ಕೊಕ್ಕನ್ನು ಎದೆಯ ಭಾಗಕ್ಕೆ ಅವಿತಿಟ್ಟುಕೊಂಡು ನಿದ್ರಿಸುತ್ತವೆ.
  • ಜಿರಾಫೆ ದಿನಕ್ಕೆ ಕೇವಲ 2 ಗಂಟೆ ನಿದ್ರಿಸುವುದು. ಅಂದರೆ ದಿನದ 8% ಮಾತ್ರ ನಿದ್ದೆಗೆ ವ್ಯಯಿಸುತ್ತದೆ. ಜಿರಾಫೆಯ ಮತ್ತೂ ಒಂದು ವಿಶೇಷವೆಂದರೆ, ಅವು ನಿದ್ದೆ ಮಾಡದೇ ವಾರಾನುಗಟ್ಟಲೆ ಬೇಕಾದರೂ ಇರಬಲ್ಲವು.
  • ನಾಯಿಯು ದಿನದಲ್ಲಿ 9 ರಿಂದ 14 ಗಂಟೆಗಳ ಅವಧಿ ನಿದ್ರಿಸುತ್ತದೆ. ಆದರೆ ಆ ನಾಯಿ ಯಾವ ತಳಿ ಎಂಬುದರ ಮೇಲೆ ನಿದ್ದೆಯ ಪ್ರಮಾಣವೂ ಅವಲಂಬಿತವಾಗಿರುತ್ತದೆ. ಈ ಅವಧಿಯಲ್ಲೇ ಹಲವು ಬಾರಿ ಸಣ್ಣ ನಿದ್ದೆಯನ್ನು ಮಾಡಿ, ಎರಡು ಬಾರಿ ದೀರ್ಘ ನಿದ್ದೆ ಮುಗಿಸುತ್ತವೆ.
  • ಸ್ವಿಫ್ಟ್‌ ಹಕ್ಕಿಗೆ ಹಾರುತ್ತಲೇ ನಿದ್ದೆ ಮಾಡುವ ಛಾತಿ ಇದೆ. ಆಕಾಶದಲ್ಲಿ ಬಲು ಮೇಲೆ ಹಾರುವಾಗ ನಿದ್ದೆ ಮಾಡುತ್ತಾ ನಿರಾಳವಾಗಿ ದಾರಿ ಸಾಗಿಸಬಲ್ಲವು. ಕೆಲವು ಹಕ್ಕಿಗಳು ಒಂದು ಕಣ್ಣನ್ನು ತೆರೆದುಕೊಂಡೇ ನಿದ್ರಿಸುತ್ತವೆ. ಏಕೆಂದರೆ, ತಮ್ಮ ಬೇಟೆಯನ್ನು ತಪ್ಪಿಸದೇ ಇರಲು, ಹಾಗೆಯೇ ಇನ್ನೊಂದು ಪ್ರಾಣಿಗೆ ತಾನು ಬೇಟೆ ಆಗದೇ ಇರಲು.
  • ಹಸು ನಿದ್ರಿಸುವುದು ದಿನದಲ್ಲಿ 4 ಗಂಟೆಗಳ ಕಾಲ. ಆದರೆ ಅವು ಒಂಟಿಯಾಗಿ ನಿದ್ರಿಸಲು ಇಷ್ಟಪಡುವುದಿಲ್ಲ. ತನ್ನ ಮರಿಗಳೊಂದಿಗೆ ನಿದ್ರಿಸುವುದೇ ಅದಕ್ಕೆ ಬಲು ಇಷ್ಟವಂತೆ. ಆದ್ದರಿಂದ ಕುಟುಂಬ ಇದ್ದರೆ ಮಾತ್ರ ಆರಾಮಾಗಿ ನಿದ್ದೆಗೆ ಜಾರುತ್ತವೆ ಅವು.
  • ಬಾವಲಿಗಳದ್ದು ನಿದ್ದೆ ಪಾಲು ಹೆಚ್ಚು. ಅವು ದಿನದ 20 ಗಂಟೆ ಮಲಗುತ್ತವೆ. 4 ಗಂಟೆ ಮಾತ್ರ ಎಚ್ಚರವಾಗಿ ಆಹಾರ ಹುಡುಕುವ ಕೆಲಸದಲ್ಲಿ ನಿರತವಾಗಿರುತ್ತವೆ.
  • ಬಾತುಕೋಳಿ; ಎಲ್ಲರೂ ತಮ್ಮ ಕುಟುಂಬದ ರಕ್ಷಣೆಗೆ ಆದ್ಯತೆ ನೀಡುತ್ತಾರೆ. ಈ ವಿಷಯದಲ್ಲಿ ಬಾತುಕೋಳಿ ಮತ್ತೂ ಹೆಚ್ಚು. ಅದು ನಿದ್ದೆಯಲ್ಲೂ ಎಚ್ಚರ ತಪ್ಪುವುದಿಲ್ಲ. ಬಾತುಕೋಳಿಗಳು ಸಾಲಿನಲ್ಲಿ ನಿದ್ರಿಸುತ್ತವೆ. ಸಾಲಿನ ಕೊನೆಯ ಕೋಳಿ ಒಂದು ಕಣ್ಣು ತೆರೆದು ನಿದ್ರಿಸಿದರೆ, ಮಧ್ಯದಲ್ಲಿರುವ ಬಾತುಕೋಳಿಗಳು ಸುರಕ್ಷಿತವಾಗಿ ನಿದ್ರಿಸುತ್ತವೆ.
  • ಕುದುರೆ ಮಲಗುವುದು ಹಗಲಿನ ಹೊತ್ತು, ದಿನಕ್ಕೆ 3 ಗಂಟೆ ಮಾತ್ರ. ಅಂದರೆ 12% ನಿದ್ದೆ ಮಾಡಿದರೆ, 88% ಸಮಯ ಅದು ನಿಂತೇ ಕಳೆಯುತ್ತದೆ.
  • ಗಿನ್ನಿ ಬಬೂನ್‌ ಮರದ ಮೇಲೆ ತನ್ನ ಹಿಂಗಾಲಿನ ಮೇಲೆ ಕುಳಿತು ನಿದ್ರಿಸುತ್ತದೆ. ಇದು ಅದಕ್ಕೆ ತುರ್ತು ಸಮಯದಲ್ಲಿ ಎಚ್ಚರಗೊಳ್ಳಲು ನೆರವಾಗುವ ತಂತ್ರ. ಜೊತೆಗೆ ತನ್ನ ಶತ್ರುವನ್ನು ಹೆದರಿಸಲು ಆಗಾಗ್ಗೆ ಜೋರಾಗಿ ಆಕಳಿಸುತ್ತಲೂ ಇರುತ್ತದೆ.

ನೋಡಿ

ಉಲ್ಲೇಖಗಳು

Tags:

ನಿದ್ರೆ ಯಾತಕ್ಕಾಗಿ ?ನಿದ್ರೆ ಎಷ್ಟು ಬೇಕು?ನಿದ್ರೆ ಯ ಪ್ರಮಾಣನಿದ್ರೆ ನೋಡಿನಿದ್ರೆ ಉಲ್ಲೇಖಗಳುನಿದ್ರೆಎಚ್ಚರ

🔥 Trending searches on Wiki ಕನ್ನಡ:

ದಾಳಿಂಬೆಇಂಡಿಯನ್ ಪ್ರೀಮಿಯರ್ ಲೀಗ್ಗಿರೀಶ್ ಕಾರ್ನಾಡ್ಅಂಬರೀಶ್ಜೈಮಿನಿ ಭಾರತಲೋಕಸಭೆಸಂಕಷ್ಟ ಚತುರ್ಥಿದಕ್ಷಿಣ ಭಾರತದ ನದಿಗಳುಕರ್ನಾಟಕದ ಇತಿಹಾಸಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಒಲಂಪಿಕ್ ಕ್ರೀಡಾಕೂಟಕರ್ನಾಟಕದ ನದಿಗಳುಭೂತಾರಾಧನೆಎನ್ ಸಿ ಸಿಅರ್ಥ ವ್ಯವಸ್ಥೆಬಡತನಹಬಲ್ ದೂರದರ್ಶಕಕಾನೂನುಭಂಗ ಚಳವಳಿಕೆಮ್ಮುಹಿಮಅರಬ್ಬೀ ಸಮುದ್ರಮೈಸೂರುಅನುಷ್ಕಾ ಶೆಟ್ಟಿಪಶ್ಚಿಮ ಘಟ್ಟಗಳುಅದ್ವೈತಕಾಂತಾರ (ಚಲನಚಿತ್ರ)ರನ್ನಆಂಗ್‌ಕರ್ ವಾಟ್ಭಾರತದ ರಾಷ್ಟ್ರಗೀತೆಹುಡುಗಿಮಂಗಳೂರುಅಂತಿಮ ಸಂಸ್ಕಾರಶರಣಬಸವೇಶ್ವರ ದೇವಸ್ಥಾನ ಕಲಬುರಗಿಬುಟ್ಟಿಕಾನೂನುತಲಕಾಡುಆಯುರ್ವೇದಕೋಲಾರಈರುಳ್ಳಿಅಂತಾರಾಷ್ಟ್ರೀಯ ಸಂಬಂಧಗಳುಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಪ್ರಕಾಶ್ ರೈಕರ್ನಾಟಕ ವಿಧಾನ ಪರಿಷತ್ಬಿ. ಎಂ. ಶ್ರೀಕಂಠಯ್ಯಲೋಕೋಪಯೋಗಿ ಶಿಲ್ಪ ವಿಜ್ಞಾನಕದಂಬ ರಾಜವಂಶಭಾರತೀಯ ಭೂಸೇನೆಗ್ರಾಮೀಣ ಪ್ರಾದೇಶಿಕ ಬ್ಯಾಂಕ್ತೇಜಸ್ವಿನಿ ಗೌಡಭಾರತದ ನಿರ್ದಿಷ್ಟ ಕಾಲಮಾನಭಾಷೆರಾಯಚೂರು ಜಿಲ್ಲೆನಯಾಗರ ಜಲಪಾತನಿರ್ವಹಣೆ ಪರಿಚಯಕಾದಂಬರಿಮೂಲಧಾತುಕೋಲಾರ ಚಿನ್ನದ ಗಣಿ (ಪ್ರದೇಶ)ತುಮಕೂರುದಾಸ ಸಾಹಿತ್ಯಬೌದ್ಧ ಧರ್ಮಬಿಲ್ಹಣಸಮಾಸಕೆ. ಎಸ್. ನರಸಿಂಹಸ್ವಾಮಿರವಿಚಂದ್ರನ್ಗೌತಮ ಬುದ್ಧಒಕ್ಕಲಿಗಕರಗಹಿಂದೂ ಮಾಸಗಳುಶೈಕ್ಷಣಿಕ ಮನೋವಿಜ್ಞಾನಭಾರತದ ಸಂಸತ್ತುಕನ್ನಡ ಸಾಹಿತ್ಯ ಪರಿಷತ್ತುಜೋಗಿ (ಚಲನಚಿತ್ರ)ಪ್ರೇಮಾಸೂರ್ಯವ್ಯೂಹದ ಗ್ರಹಗಳುರಕ್ತಪೂರಣಅಜಿಮ್ ಪ್ರೇಮ್‍ಜಿಕಲ್ಲಂಗಡಿಅಮೇರಿಕ ಸಂಯುಕ್ತ ಸಂಸ್ಥಾನಮಹಿಳೆ ಮತ್ತು ಭಾರತ🡆 More