ಟೆನ್ರೆಕ್

ಟೆನ್‍ರೆಕ್ -ಮಡಗಾಸ್ಕರ್ ದ್ವೀಪದಲ್ಲಿ ಕಂಡುಬರುವ ಒಂದು ಸಸ್ತನಿ.

ಇನ್ಸೆಕ್ಟಿವೊರ ಗಣದ ಟೆನ್ರೆಸಿಡೀ ಕುಟುಂಬಕ್ಕೆ ಸೇರಿದೆ. ಇದು ಹೆಜ್‍ಹಾಗ್ ಮತ್ತು ಮೂಗಿಲಿಗಳ (ಷ್ರೂ) ಸಂಬಂಧಿ. ಟೆನ್‍ರೆಕ್ ಈಕಾಡೇಟಸ್ (ಸಾಮಾನ್ಯ ಟೆನ್‍ರೆಕ್) ಇದರ ವೈಜ್ಞಾನಿಕ ಹೆಸರು. ಸೆಂಟೀಟಸ್ ಪರ್ಯಾಯ ನಾಮ.

ಟೆನ್ರೆಕ್

ಇದರ ದೇಹದ ಉದ್ದ 30-40 mm. ಬಣ್ಣ ಕಂದು. ಇದರ ದೇಹದ ಮೇಲೆ ಬಿರುಗೂದಲುಗಳು ಮತ್ತು ಚೂಪಾದ ಮುಳ್ಳುಗಳು ಇವೆ. ಬಾಲ ಮೋಟಾಗಿದೆ. ಇದರ ಉದ್ದ 10-15 mm. ಬೆನ್ನಿನ ಮೇಲೆ ಉದ್ದವಾದ ಹಾಗೂ ದೃಢವಾದ ಕೂದಲುಗಳ ಸಾಲು ಉಂಟು. ಕೋಪಗೊಂಡಾಗ, ಚಕಿತಗೊಂಡಾಗ ಇಲ್ಲವೆ ಉದ್ರಿಕ್ತವಾದಾಗ ಈ ಸಾಲನ್ನು ನೆಟ್ಟಗೆ ನಿಮಿರಿಸುತ್ತದೆ. ಜೊತೆಗೆ ಬುಸುಗುಟ್ಟುವಂತೆ ಸದ್ದು ಮಾಡುತ್ತದೆ. ಕೆಲವು ಸಲ ಇಲಿಗಳಂತೆ ಕೀಚಲುಧ್ವನಿಗೈಯುವುದೂ ಉಂಟು. ಇದು ನಿಶಾಚರಿ. ಹಗಲಲ್ಲಿ ನೆಲದಲ್ಲಿ ಕೊರೆದು ರಚಿಸಿದ ಬಿಲಗಳಲ್ಲಿ ನಿದ್ರಿಸುತ್ತದೆ. ತನ್ನ ಚೂಪುಮೂತಿ ಮತ್ತು ನಖಗಳಿಂದ ನೆಲವನ್ನು ಅಗೆಯುತ್ತಿದ್ದು ಹೊರಬರುವ ಕೀಟ, ಎರೆಹುಳು, ಬೇರುಗಳನ್ನು ಭಕ್ಷಿಸುತ್ತದೆ. ಹೆಚ್ಚು ಉಷ್ಣತೆಯಿರುವಾಗ ಸುಪ್ತಾವಸ್ಥೆಯಲ್ಲಿದ್ದು ಬಿಡುತ್ತದೆ. ಸಾಮನ್ಯವಾಗಿ ಮೇ-ಅಕ್ಟೋಬರ್ ತಿಂಗಳುಗಳ ಅವಧಿಯಲ್ಲಿ ಹೀಗೆ ಕಾಲಕಳೆಯುವುದುಂಟು. ಈ ಕಾಲ ಮುಗಿದ ಅನಂತರ ಸಂತಾನೋತ್ಪತ್ತಿಯಲ್ಲಿ ತೊಡಗುವುದು. ಸರಾಸರಿ 21 ಮರಿಗಳು ಹುಟ್ಟುತ್ತವೆ. ಮಡಗಾಸ್ಕರಿನಲ್ಲಿ ಟೆನ್‍ರೆಕ್ಕನ್ನು ಮಾಂಸಕ್ಕೋಸ್ಕರ ಬೇಟೆಯಾಡುತ್ತಾರೆ. ಮಾರಿಷಸ್ ಮತ್ತು ರಿಯೂನಿಯನ್ ಗಳಲ್ಲಿ ಇವು ಅರೆಸಾಕುಪ್ರಾಣಿಗಳಾಗಿವೆ.

ಟೆನ್ರೆಕ್
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಮಡಗಾಸ್ಕರ್

🔥 Trending searches on Wiki ಕನ್ನಡ:

ಏಡ್ಸ್ ರೋಗಅಶ್ವಗಂಧಾಹಲ್ಮಿಡಿಇಂಡಿಯನ್‌ ಎಕ್ಸ್‌ಪ್ರೆಸ್‌ರಾಧಿಕಾ ಕುಮಾರಸ್ವಾಮಿಅರ್ಥ ವ್ಯತ್ಯಾಸಪಂಚಾಂಗತುಳಸಿವೇದಪ್ರಿಯಾಂಕ ಗಾಂಧಿಕೋಲಾರಕನ್ನಡ ವ್ಯಾಕರಣಗೋಪಾಲಕೃಷ್ಣ ಅಡಿಗಮತದಾನ (ಕಾದಂಬರಿ)ಭಾರತದ ರಾಷ್ಟ್ರಪತಿಶ್ಯೆಕ್ಷಣಿಕ ತಂತ್ರಜ್ಞಾನಶಿವಮೊಗ್ಗಕನಕದಾಸರುಸಿ. ಎನ್. ಆರ್. ರಾವ್ಕುಟುಂಬಗ್ರೀಕ್ ಪುರಾಣ ಕಥೆಸಾಲುಮರದ ತಿಮ್ಮಕ್ಕಸುದೀಪ್ಅಕ್ಕಮಹಾದೇವಿಭಗವದ್ಗೀತೆಹೆಚ್.ಡಿ.ಕುಮಾರಸ್ವಾಮಿದಿಕ್ಸೂಚಿವಿಧಾನ ಸಭೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಗಾಂಧಿ ಜಯಂತಿಸಂಗೀತಚೆನ್ನಕೇಶವ ದೇವಾಲಯ, ಬೇಲೂರುಕವಿರಾಜಮಾರ್ಗಪ್ರಶಸ್ತಿಗಳುಅಕ್ಷಾಂಶ ಮತ್ತು ರೇಖಾಂಶನೀತಿ ಆಯೋಗರಾಮ್ ಮೋಹನ್ ರಾಯ್ಹಂಸಲೇಖಅಮ್ಮಇತಿಹಾಸಕೊತ್ತುಂಬರಿಯೋಗವಾಹವಾಟ್ಸ್ ಆಪ್ ಮೆಸ್ಸೆಂಜರ್ವೀರಗಾಸೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಶಿರ್ಡಿ ಸಾಯಿ ಬಾಬಾಶ್ರೀ. ನಾರಾಯಣ ಗುರುಹೊಯ್ಸಳಕರ್ನಾಟಕದ ರಾಜ್ಯಪಾಲರುಗಳ ಪಟ್ಟಿತ್ರಿಪದಿಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರಆಗಮ ಸಂಧಿತೆರಿಗೆಸಾಹಿತ್ಯಮಹೇಂದ್ರ ಸಿಂಗ್ ಧೋನಿಗ್ರಹಅವಯವಮಂಗಳಮುಖಿವಾಯು ಮಾಲಿನ್ಯಮೊರಾರ್ಜಿ ದೇಸಾಯಿಚಂದ್ರಶೇಖರ ಪಾಟೀಲಪಾಂಡವರುತೀರ್ಥಹಳ್ಳಿಆದಿವಾಸಿಗಳುಸ್ತ್ರೀಕರ್ನಾಟಕದ ವಾಸ್ತುಶಿಲ್ಪಬೇವುಉತ್ತರ ಕರ್ನಾಟಕಶ್ರೀನಿವಾಸ ರಾಮಾನುಜನ್ಅಂಕಗಣಿತತಿರುಗುಬಾಣಸಾಮಾಜಿಕ ಸಮಸ್ಯೆಗಳುಶ್ರುತಿ (ನಟಿ)ಮಂಕುತಿಮ್ಮನ ಕಗ್ಗಅಂತಿಮ ಸಂಸ್ಕಾರಭಾರತದ ಪ್ರಧಾನ ಮಂತ್ರಿಗಳ ಪಟ್ಟಿ🡆 More