ಜ್ಯಾಕ್ಸನ್‌ವಿಲ್

ಜ್ಯಾಕ್ಸನ್‍ವಿಲ್ - ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಫ್ಲಾರಿಡ ರಾಜ್ಯದ ಪ್ರಮುಖ ಬಂದರುನಗರ.

ಡೂವಲ್ ಕೌಂಟಿಯ ಆಡಳಿತ ಕೇಂದ್ರ.

ಸೇಂಟ್ಸ್ ಜಾನ್ಸ್ ನದಿಯ ದಂಡೆಯ ಮೇಲಿರುವ ಈ ಬಂದರು ಅಟ್ಲಾಂಟಿಕ್ ಸಾಗರದಿಂದ ಸು. 18 ಮೈ. ಒಳಗಿದೆ. ಇಲ್ಲಿಯ ಹಡಗುಕಟ್ಟಗಳ ಉದ್ದ ಸು. 80 ಮೈ. ಗೂ ಹೆಚ್ಚು. ಸಂಯುಕ್ತ ಸಂಸ್ಥಾನಗಳ ಆಗ್ನೇಯ ತುದಿಯಲ್ಲಿರುವ ಈ ಬಂದರಿಗೆ ದೇಶದ ಪ್ರಮುಖ ರೈಲು ಮತ್ತು ರಸ್ತೆಗಳ ಸಂಪರ್ಕವಿದೆ. ಮರದ ದಿಮ್ಮಿ ಮತ್ತು ಇತರ ಒಳನಾಡ ಉತ್ಪನ್ನಗಳನ್ನು ಈ ಬಂದರಿನ ಮೂಲಕ ರಫ್ತು ಮಾಡುತ್ತಾರೆ. ಪೆಟ್ರೊಲಿಯಂ, ರಾಸಾಯನಿಕಗಳು, ಕಚ್ಚಾ ಎಣ್ಣೆ, ಕಾಫಿ ಮುಂತಾದವನ್ನು ಇಲ್ಲಿಂದಲೇ ಆಮದಿಸುತ್ತಾರೆ. ಈ ಬಂದರು ಪ್ರಧಾನವಾಗಿ ನೌಕಾಸೈನ್ಯ ವಸ್ತುಗಳ ಉಗ್ರಾಣವಾಗಿದೆ. ನೌಕಾ ಪಡೆಗೆ ಬೇಕಾಗುವ ಬಹುಪಾಲು ಪದಾರ್ಥಗಳನ್ನು ಈ ಬಂದರಿನ ಮೂಲಕವೇ ಸಾಗಿಸಲಾಗುತ್ತದೆ. ಫ್ಲಾರಿಡದ ಸೈನಿಕ ಜಿಲ್ಲಾ ಕಚೇರಿಯಲ್ಲದೆ ಇಲ್ಲಿ ಸೈನಿಕ ವಿಮಾನ ನಿಲ್ದಾಣ ಮತ್ತು ಆಸ್ಪತ್ರೆಗಳಿವೆ. ಫ್ಲಾರಿಡ ರಾಜ್ಯದ ಪ್ರಮುಖ ಕೈಗಾರಿಕಾ ನಗರಗಳಲ್ಲಿ ಇದೂ ಒಂದು. ಅಣಿಕಟ್ಟು, ರಾಸಾಯನಿಕ ಗೊಬ್ಬರ - ಇಲ್ಲಿಯ ಪ್ರಮುಖ ಉತ್ಪನ್ನಗಳು. ಅನೇಕ ಮಾಂಸ ಸಂವೇಷ್ಟನ ಕಾರ್ಖಾನೆಗಳು ಇಲ್ಲಿವೆ. ಇಲ್ಲಿ ನೌಕಾ ನಿರ್ಮಾಣ ಮತ್ತು ದುರಸ್ತಿ ಕೆಲಸವೂ ನಡೆಯುತ್ತದೆ. ಎಡ್ವರ್ಡ್ ವಾಟರ್ಸ್ ಕಾಲೇಜು (1966), ಜೋನ್ಸ್ ಕಾಲೇಜು (1918), ಜ್ಯಾಕ್ಸನ್‍ವಿಲ್ ವಿಶ್ವವಿದ್ಯಾಲಯ (1934), ಜ್ಯಾಕ್ಸನ್‍ವಿಲ್ ಕಾಲೇಜ್ ಆಫ್ ಮ್ಯೂಸಿಕ್ - ಇವು ಇಲ್ಲಿಯ ಕೆಲವು ಮುಖ್ಯ ಶಿಕ್ಷಣ ಸಂಸ್ಥೆಗಳು. ಇದೇ ಹೆಸರಿನ ಅನೇಕ ನಗರಗಳು ಸಂಯುಕ್ತ ಸಂಸ್ಥಾನಗಳ ಬೇರೆಬೇರೆ ರಾಜ್ಯಗಳಲ್ಲೂ ಇವೆ.

ಇತಿಹಾಸ

16ನೆಯ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚ್ ಮತ್ತು ಸ್ಟ್ಯಾನಿಷ್ ವಲಸೆಗಾರರು ಈ ಪ್ರದೇಶದಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. 1763ರಲ್ಲಿ ಇದನ್ನು ಬ್ರಿಟಿಷರು ವಶಪಡಿಸಿಕೊಂಡರು. 1816ರಲ್ಲಿ ಲೀವಿಸ್ ಹೊಗ್ಯಾನ್ಸ್ ಎಂಬಾತ ಇಲ್ಲಿಗೆ ಬಂದ (1816) ಮೊದಲ ವಲಸೆಗಾರ. ಕೌ ಫೋರ್ಡ್ ಎಂದು ಕರೆಯಲಾಗುತ್ತಿದ್ದ ಇದರ ಹೆಸರನ್ನು ಆಂಡ್ರ್ಯೂ ಜ್ಯಾಕ್ಸನನ ಗೌರವಾರ್ಥವಾಗಿ 1822ರಲ್ಲಿ ಬದಲಾಯಿಸಲಾಯಿತು.

ಜ್ಯಾಕ್ಸನ್‌ವಿಲ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅಮೇರಿಕ ಸಂಯುಕ್ತ ಸಂಸ್ಥಾನಫ್ಲಾರಿಡ

🔥 Trending searches on Wiki ಕನ್ನಡ:

ಮುಖ್ಯ ಪುಟಸಂಧಿಬಂಜಾರಪಾಂಡವರುಮಹಾಕವಿ ರನ್ನನ ಗದಾಯುದ್ಧಭಾಷೆಆದೇಶ ಸಂಧಿಪಿತ್ತಕೋಶಮಿಲಾನ್ರವಿಕೆವೇದಕಲ್ಯಾಣಿಸರ್ವೆಪಲ್ಲಿ ರಾಧಾಕೃಷ್ಣನ್ನವಿಲುದುಶ್ಯಲಾಅಮೃತಧಾರೆ (ಕನ್ನಡ ಧಾರಾವಾಹಿ)ಒಡೆಯರ್ರಸ(ಕಾವ್ಯಮೀಮಾಂಸೆ)ಸಿದ್ದಲಿಂಗಯ್ಯ (ಕವಿ)ಗಾಳಿ/ವಾಯುಮಡಿವಾಳ ಮಾಚಿದೇವಎತ್ತಿನಹೊಳೆಯ ತಿರುವು ಯೋಜನೆರುಡ್ ಸೆಟ್ ಸಂಸ್ಥೆಬಿ. ಎಂ. ಶ್ರೀಕಂಠಯ್ಯಮಾನವನ ವಿಕಾಸಭಾರತೀಯ ಸಂಸ್ಕೃತಿರತ್ನಾಕರ ವರ್ಣಿಸನ್ನಿ ಲಿಯೋನ್ಒಂದನೆಯ ಮಹಾಯುದ್ಧಗುಡಿಸಲು ಕೈಗಾರಿಕೆಗಳುಚದುರಂಗ (ಆಟ)ಮುಪ್ಪಿನ ಷಡಕ್ಷರಿಭಾರತೀಯ ರೈಲ್ವೆಉತ್ತರ ಪ್ರದೇಶಮಾವುಸಾಹಿತ್ಯದಿಕ್ಕುಶ್ಚುತ್ವ ಸಂಧಿಕರ್ನಾಟಕ ಸ್ವಾತಂತ್ರ್ಯ ಚಳವಳಿಊಳಿಗಮಾನ ಪದ್ಧತಿಕಳಸಕನ್ನಡ ಕಾವ್ಯಸಂಶೋಧನೆಶಿವತ್ರಿವೇಣಿಕಾದಂಬರಿಗಂಡಬೇರುಂಡಶ್ರುತಿ (ನಟಿ)ದೇವರ/ಜೇಡರ ದಾಸಿಮಯ್ಯಮಾರೀಚಮಾಹಿತಿ ತಂತ್ರಜ್ಞಾನ೧೬೦೮ಸುದೀಪ್ಅ.ನ.ಕೃಷ್ಣರಾಯಲೆಕ್ಕ ಬರಹ (ಬುಕ್ ಕೀಪಿಂಗ್)ವಿಶ್ವದ ಅದ್ಭುತಗಳುದರ್ಶನ್ ತೂಗುದೀಪ್ಎಂ. ಕೆ. ಇಂದಿರಪರಿಸರ ವ್ಯವಸ್ಥೆಸಮುಚ್ಚಯ ಪದಗಳುಭಾರತದ ಇತಿಹಾಸಜನಪದ ಕಲೆಗಳುಅಂಡವಾಯುಮತದಾನ ಯಂತ್ರಕೈಗಾರಿಕೆಗಳುಮಂತ್ರಾಲಯಸಾವಿತ್ರಿಬಾಯಿ ಫುಲೆರೇಡಿಯೋಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶಕ್ತಿಕರ್ನಾಟಕ ಜನಪದ ನೃತ್ಯಕರ್ನಾಟಕದ ಅಣೆಕಟ್ಟುಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕನ್ನಡ ಅಕ್ಷರಮಾಲೆಕನ್ನಡ ರಾಜ್ಯೋತ್ಸವಜಪಾನ್🡆 More