ಚೋಟಾ ಭೀಮ್

ಚೋಟಾ ಭೀಮ್ ಭಾರತದ ಮಕ್ಕಳ ಆನಿಮೇಷನ್ ದಾರವಾಹಿಗಳು ಹಾಗು ಚಿತ್ರಗಳಾಗಿ ಹೊರಹೊಮ್ಮಿವೆ.ಇದು ಢೋಲಕ್ಪುರ್ ಎನ್ನುವ ಕಾಲ್ಪನಿಕ ಊರಿನಲ್ಲಿರುವ ಭೀಮ್ ಎನ್ನುವ ಹುಡುಗನ ಸಾಹಸಕಥೆಗಳನ್ನು ತೋರಿಸುತ್ತವೆ.ಇದನ್ನು ಗ್ರೀನ್ ಗೋಲ್ಡ್ ಆನಿಮೇಷನ್ನ ರಾಜೀವ್ ಚಿಲಕ ನಿರ್ದೇಶಿಸುತ್ತಿದ್ದು ಮಕ್ಕಳ ಪೋಗೊ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.೨೦೧೨ ಪ್ರಕಾರವಾಗಿ ಚೋಟಾ ಭೀಮ್ ೧೨೦ ಸಂಚಿಕೆಗಳನ್ನು ಮುಗಿಸಿವೆ.

ಇದು ಮಕ್ಕಳ ಪ್ರಿಯ ದಾರವಾಹಿಯಾಗಿದ್ದು ಭಾರತದಲ್ಲಿ ಬಲು ಬೇಗ ಪ್ರಶಂಸೆ ಗಳಿಸಿದೆ.

ಮೇ ೧೮ ೨೧೧೨ರಲ್ಲಿ ಚೋಟಾ ಭೀಮ್ ಅಂಡ್ ದಿ ಕರ್ಸ್ ಆಫ್ ದಮ್ಯಾನ್(ಚೋಟಾ ಭೀಮ್ ಮತ್ತು ದಮ್ಯಾನ್ನ ಶಾಪ)ಎಂಬ ಚಿತ್ರ ಬಿಡುಗಡೆಯಾಯಿತು.ಇದು ಚಿತಮಂದಿರಕ್ಕೆ ಬಿಡುಗಡೆಯಾದ ಮೊದಲ ಚಿತ್ರ ಮತ್ತು ಚೋಟಾ ಭೀಮ್ ಚಿತ್ರಗಳಲ್ಲಿ ೯ನೇ ಚಿತ್ರವಾಯಿತು.

ಪಾತ್ರಧಾರಿಗಳು

  1. ಚೋಟಾ ಭೀಮ್- ಡೊಲಕ್ಪುರ್ವಾಸಿಯಾದ ಭೀಮ್ ೯ವರ್ಷದ ಶಕ್ತಿಯುತ ಬಾಲಕ.ಇವನ ಶಕ್ತಿ ಅವನ ಹಳ್ಲಿಗೆ ವರಾಗಿ ಕಾಣಿಸುತ್ತದೆ. ಇವನು ತಪ್ಪು ಮಾಡಿದವರನ್ನು ಒಳ್ಳೆಯ ಹಾದಿಗೆ ತರಲು ಪ್ರಯತ್ನ ಮಾಡುತ್ತಾ, ನಿರಾಶ್ರಿತ ಜನರಿಗೆ ಸಹಾಯ ಮಾಡಲು ಇಚ್ಛಿಸುತ್ತಾನೆ.ಕಳ್ಳರು ಮತ್ತು ಕೆಟ್ಟವರನ್ನು ಹೊಡಿದು ಬಡಿದು ಅಮಾಯಕ ವ್ಯಕ್ತಿಗಳಿಗೆ ಸಹಾಯ ಮಾಡುತ್ತಾನೆ.ಇವನಿಗೆ ತಿನ್ನಲು ಬಹಳ ಇಷ್ಟ, ಅದರಲ್ಲು ಲಡ್ಡು ಎಂದರೆ ಪಂಚಪ್ರಾಣ.ಇವನಿಗೆ ಮೂರು ಜನ ಪ್ರಿಯ ಸ್ನೇಹಿತರು- ಚುಟ್ಕಿ, ರಾಜು ಮತ್ತು ಜಗ್ಗು(ಕೋತಿ).
  2. ಚುಟ್ಕಿ - ೭ವರ್ಷದ ಬಾಲಕಿ ಮತ್ತು ಭೀಮ್ನ ಗೆಳತಿ. ಭೀಮ್ನ ಸಾಹಸಗಳಲ್ಲಿ ಅವನಿಗೆ ಅನಿಸಿಕೆಗಳನ್ನು ಕೊಟ್ಟು ಮುಖ್ಯ ಪಾತ್ರಧಾರಿಯಾಗಿದ್ದಾಳೆ.ಇವಳಿಗೆ ಮನೆಕೆಲಸಗಳು ಇಷ್ಟ, ಅಮ್ಮನ ಜತೆ ಲಡ್ಡೂಗಳನ್ನು ಮಾಡುತ್ತಳೆ. ಇವಳಿಗೆ ಎಲ್ಲಾ ಪ್ರಾಣಿಗಳ ಮೇಲು ಕನಿಕರವಿದೆ.
  3. ರಾಜು - ಭೀಮನನ್ನೆ ಆದರ್ಶವಾಗಿಟ್ಟುಕೊಂಡಿರುವ ೪ವರ್ಷದ ಮುದ್ದು ಧೈರ್ಯವಂತ ಬಾಲಕ ರಾಜು.ಇವನ ತಂದೆ ರಾಜನ ಸೈನ್ಯದಲ್ಲಿ ಸಿಪಾಯಿಯಾಗಿದ್ದು, ಇವನಿಗು ಅದರ ಆಸೆ. ಇವನು ಬಿಲ್ವಿದ್ಯೆಯಲ್ಲಿ ತುಂಬ ಚುರುಕಾಗಿದ್ದು ಅರ್ಜುನ ಪ್ರಶಸ್ತಿಯನ್ನು ಗೆದ್ದಿದ್ದಾನೆ.ಮೈಟಿ ರಾಜುಎಂಬ ಚಿರಗಳಲ್ಲಿ ಇವನು ಮುಖ್ಯ ಪಾತ್ರಧಾರಿ.
  4. ಜಗ್ಗು ಬಂದರ್ - ಮಾತನಾಡುವ ಕೋತಿಯೇ ಜಗ್ಗು.ಇವನು ತಮಾಷೆ ಮಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಲು ಭೀಮ್ಗೆ ಸಹಾಯ ಮಾಡುತ್ತಾನೆ.ಇವನಿಂದಲೆ ಭೀಮ್ ಮರದಿಂದ ಮರಕ್ಕೆ ಹಾರುವುದನ್ನು ಕಲಿತದ್ದು.ಜಗ್ಗು ಎಲ್ಲಾ ಪ್ರಾಣಿಗಳ ರಕ್ಷಕನಾಗಬೇಕೆಂಬ ಆಸೆ.
  5. ಕಾಲಿಯ - ೧೦ವರ್ಷದ ಜಗಳಗಂಟ.ಕೆಲುವು ಸಮಯಗಳಲ್ಲಿ ಭೀಮನನ್ನು ದ್ವೇಷಿಸಿ ಅವನಿಗಿಂತ ಮೊದಲು ಕೆಲಸ ಮಾಡಿ ಪ್ರಸಿದ್ಧನಾಗಬೇ
    ಕೆಂದು ಯೋಚಿಸದೆ ಕೆಲಸ ಮಾಡಿ ವಿಫಲವಾಗುವನು. ಅದೇ,ಕೆಲವು ಸಮಯಗಳಲ್ಲಿ ಭೀಮಿಗೆ ಸಹಾಯ ಮಾಡಿ ಡೋಲಕ್ಪುರನ್ನು ಉಳಿಸುವನು.
  6. ಡೋಲು-ಭೋಲು - ಕಾಲಿಯನ ಹಿಂಬಾಲಕರು.ಶಕ್ತಿವಂತರಲ್ಲ, ಆದರೆ ಭೀಮ್ ಮತ್ತು ಚುಟ್ಕಿಯಿನ್ದ ಸುಲಭವಾಗಿ ವಂಚಿತರಾಗುತ್ತಾರೆ.
  7. ಕೀಚಕ್ - ಪೆಹೆಲ್ವಾನ್ಪುರ್ ಹಳ್ಳಿಯ ಸಾಹಸ ಹುಡುಗ ಕೀಚಕ್.ಇವನಿಗೆ ಭೀಮ್ನ ಮೇಲೆ ಹೊಟ್ಟೆಕಿಚ್ಚು. ಬಹಳ ಸಮಯಗಳಲ್ಲಿ ಭೀಮ್ನನ್ನು ಸೋಲಸಲು ಹೋಗಿ ತಾನೆ ಸೋತು ಬಂದಿದ್ದಾನೆ.
  8. ರಾಜಕುಮಾರಿ ಇಂದುಮತಿ- ಢೊಲಕ್ಪುರ್ ರಾಜಕುಮಾರಿ. ಬಹಳ ಸುಂದರ ಮತ್ತು ಉದಾರ ಹೆಣ್ಣುಮಗಳು.
  9. ರಾಜ ಇಂದ್ರವರ್ಮ - ಢೊಲಕ್ಪುರ್ ರಾಜ.ಇವನು ವೀರ ಮತ್ತು ಧೀರ.ಭೀಮ್ನನ್ನು ರಾಜ್ಯದಲ್ಲಿ ತೊಂದರೆಯಾದಗ ಸಲಹೆ ಮತ್ತು ಸಹಾಯವನ್ನು ಕೇಳುವನು.
  10. ಟುನ್-ಟುನ್ ಆಂಟಿ - ಚುತ್ಕಿಯ ತಾಯಿ ಇವಳು. ಡೋಲಕ್ಪುರ್ನ ಲಡ್ಡು ತಯಾರಕಿ.ಇವಳ ಲಡ್ಡುಗಳು ರುಚಿಯಲ್ಲಿ ಬಹಳ ಚಂದ.
  11. ಧೂನಿ ಬಾಬ - ಗುಹೆಯೊಳಗಿರುವ ಎಲ್ಲ ವಿಷಯಗಳನ್ನು ತಿಳಿದಿರುವ ಯೋಗಿ ಧೂನಿ ಬಾಬ.ಭೀಮಿಗೆ ಕೆಲವು ವಿಷಯಗಳಲ್ಲಿ ಸಹಾಯ ಮಡುವರು.
  12. ಪ್ರೊಫೆಸ್ಸರ್ ಧೂಮ್ ಕೇತು - ವಿಜ್ಞಾನಿಯಾದ ಇವರು ಅವರದ್ದೇ ಆವಿಷ್ಕಾರಗಳನ್ನು ಮಾಡಿರುವರು.

ಚಲನಚಿತ್ರಗಳು

  1. ಚೋಟಾ ಭೀಮ್ ಔರ್ ಕೃಷ್ಣ (೧ನೇ ಚಿತ್ರ)
  2. ಚೋಟಾ ಭೀಮ್ ಅಂಡ್ ಕೃಷ್ಣ : ಪಾತಲಿಪುತ್ರ ಸಿಟಿ ಆಫ್ ದಿ ಡೆಡ್ (೨ನೇ ಚಿತ್ರ)
  3. ಚೋಟಾ ಭೀಮ್: ಭೀಮ್ ವರ್ಸಸ್ ಏಲಿಯನ್ಸ್ (೩ನೇ ಚಿತ್ರ)
  4. ಚೋಟಾ ಭೀಮ್: ಜರ್ನೀ ಟು ಪೆಟ್ರ (೪ನೇ ಚಿತ್ರ)
  5. ಚೋಟಾ ಭೀಮ್ ಅಂಡ್ ಕೃಷ್ಣ: ಮಾಯಾನಗರಿ (೫ನೇ ಚಿತ್ರ)
  6. ಚೋಟಾ ಭೀಮ್: ಮಾಸ್ಟರ್ ಆಫ್ ಶಾವಲಿನ್ (೬ನೇ ಚಿತ್ರ)
  7. ಚೋಟಾ ಭೀಮ್: ಢೋಲಕ್ಪುರ್ ಟು ಕಾತ್ಮಾಂಡು (೭ನೇ ಚಿತ್ರ)
  8. ಚೋಟಾ ಭೀಮ್ ಔರ್ ಹನುಮಾನ್ (೮ನೇ ಚಿತ್ರ)
  9. ಚೋಟಾ ಭೀಮ್ ಅಂಡ್ ದಿ ಕರ್ಸ್ ಆಫ್ ದಮ್ಯಾನ್ (೯ನೇ ಚಿತ್ರ)ಚಿತ್ರಮಂದಿರಕ್ಕೆ ಬಿಡುಗಡೆಯಾದ ೧ನೇ ಚಿತ್ರ
  10. ಚೋಟಾ ಭೀಮ್ ಅಂಡ್ ದಿ ರೈಸ್ ಆಫ್ ಕಿರ್ಮಾಡ (೧೦ನೇ ಚಿತ್ರ)
  11. ಚೋಟಾ ಭೀಮ್ ಔರ್ ಗಣೇಶ್: ದಿ ಅಮೇಜಿಂಗ್ ಒಡಿಸ್ಸಿ (೧೧ನೇ ಚಿತ್ರ)
  12. ಚೋಟಾ ಭೇಮ್ ಅಂಡ್ ದಿ ಬ್ರೋಕನ್ ಆಮ್ಯುಲೆಟ್ (೧೨ನೇ ಚಿತ್ರ)
  13. ಚೋಟಾ ಭೀಮ್ ಅಂಡ್ ದಿ ಕ್ರೌನ್ ಆಫ್ ವಲಹಲ್ಲ (೧೩ನೇ ಚಿತ್ರ)
  14. ಚೋಟಾ ಭೀಮ್ ಅಂಡ್ ದಿ ಥ್ರೋನ್ ಆಫ್ ಬಾಲಿ (೧೪ನೇ ಚಿತ್ರ)ಚಿತ್ರಮಂದಿರಕ್ಕೆ ಬಿಡುಗಡೆಯಾದ ೨ನೇ ಚಿತ್ರ.
  15. ಚೋಟಾ ಭೀಮ್ ಅಂಡ್ ದಿ ಇನ್ಕಾನ್ ಅಡ್ವೆಂಚರ್ (೧೫ನೇ ಚಿತ್ರ)

ಮೈಟಿ ರಾಜು ಚಿತ್ರಗಳು

ಮೈಟಿ ರಾಜು ಚೋಟಾ ಭೀಮ್ ರಾಜುವಿನ ಮೇಲೆ ಸೃಷ್ಟಿಸಿರುವ ಚಿತ್ರಗಳು.ಇವು:

  1. ಮೈಟಿ ರಾಜು
  2. ಮೈಟಿ ರಾಜು ವರ್ಸಸ್ ದಿ ಗ್ರೇಟ್ ಪೈರೇಟ್
  3. ಮೈಟಿ ರಾಜು ಅಂಡ್ ದಿ ಮಾಗ್ನೆಟರ್ಸ್
  4. ಮೈಟಿ ರಾಜು ಅಂಡ್ ದಿ ಕಮಾಂಡೋಸ್
  5. ಮೈಟಿ ರಾಜು ವರ್ಸಸ್ ಮೈಟಿ ಕ್ಲೋನ್
  6. ಚಕ್ ದೇ! ಮೈಟಿ ರಾಜು
  7. ಗೇಮ್ ಓವರ್ ಮೈಟಿ ರಾಜು

ಬಾಹ್ಯಪುಟಗಳು

  1. ಚೋಟಾ ಭೀಮ್ ವೆಬ್ಸೈಟ್
  2. ಚೋಟಾ ಭೀಮ್ ಅಂತರ್ಜಾಲ ಆಟಗಳು Archived 2013-08-06 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು

Tags:

ಚೋಟಾ ಭೀಮ್ ಪಾತ್ರಧಾರಿಗಳುಚೋಟಾ ಭೀಮ್ ಚಲನಚಿತ್ರಗಳುಚೋಟಾ ಭೀಮ್ ಮೈಟಿ ರಾಜು ಚಿತ್ರಗಳುಚೋಟಾ ಭೀಮ್ ಬಾಹ್ಯಪುಟಗಳುಚೋಟಾ ಭೀಮ್ ಉಲ್ಲೇಖಗಳುಚೋಟಾ ಭೀಮ್

🔥 Trending searches on Wiki ಕನ್ನಡ:

ಲಸಿಕೆಸ್ವರಾಜ್ಯಇನ್ಸ್ಟಾಗ್ರಾಮ್ಭಾರತದ ಜನಸಂಖ್ಯೆಯ ಬೆಳವಣಿಗೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ನುಗ್ಗೆಕಾಯಿಸಮುದ್ರಗುಪ್ತಶಿವರಾಮ ಕಾರಂತರಮ್ಯಾನವಿಲುಗುರುರಾಜ ಕರಜಗಿಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಕೃತಕ ಬುದ್ಧಿಮತ್ತೆಗೋಪಾಲಕೃಷ್ಣ ಅಡಿಗಮಂಕುತಿಮ್ಮನ ಕಗ್ಗಜವಾಹರ‌ಲಾಲ್ ನೆಹರುಗಣೇಶಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕುಟುಂಬವಾಲ್ಮೀಕಿಅನುಶ್ರೀಬಾದಾಮಿ ಶಾಸನಡ್ರಾಮಾ (ಚಲನಚಿತ್ರ)ಮೂಕಜ್ಜಿಯ ಕನಸುಗಳು (ಕಾದಂಬರಿ)ಸನ್ನಿ ಲಿಯೋನ್ಕರ್ಮಧಾರಯ ಸಮಾಸಹೈದರಾಲಿತಂತ್ರಜ್ಞಾನಜ್ವರಮಲ್ಲಿಗೆಒಡೆಯರ್ಹೊಯ್ಸಳ ವಿಷ್ಣುವರ್ಧನಅಮೃತಧಾರೆ (ಕನ್ನಡ ಧಾರಾವಾಹಿ)ಮಂಗಳೂರುಕರ್ನಾಟಕದ ಹಬ್ಬಗಳುಸಮಾಜಶಾಸ್ತ್ರರಸ(ಕಾವ್ಯಮೀಮಾಂಸೆ)ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕನ್ನಡ ರಂಗಭೂಮಿಚಾಲುಕ್ಯಜಾನಪದರೈತವಾರಿ ಪದ್ಧತಿಭಾರತೀಯ ರಿಸರ್ವ್ ಬ್ಯಾಂಕ್ಪಂಪ ಪ್ರಶಸ್ತಿಸವರ್ಣದೀರ್ಘ ಸಂಧಿಕಂಪ್ಯೂಟರ್ವಿಜಯನಗರಭಾರತದ ಸಂವಿಧಾನದ ೩೭೦ನೇ ವಿಧಿಹೆಸರುಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ವಾಲಿಬಾಲ್ಮೋಳಿಗೆ ಮಾರಯ್ಯ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಭಾರತೀಯ ಸ್ಟೇಟ್ ಬ್ಯಾಂಕ್ನಗರೀಕರಣಕೃಷ್ಣರಾಜನಗರರವಿಕೆಸಹಕಾರಿ ಸಂಘಗಳುತುಮಕೂರುಭಾರತೀಯ ಕಾವ್ಯ ಮೀಮಾಂಸೆಶ್ಚುತ್ವ ಸಂಧಿಕೇಂದ್ರಾಡಳಿತ ಪ್ರದೇಶಗಳುನಿರ್ವಹಣೆ ಪರಿಚಯಬಸವೇಶ್ವರಕೊರೋನಾವೈರಸ್ಶಾಂತರಸ ಹೆಂಬೆರಳುಸಂವಹನಹನುಮಾನ್ ಚಾಲೀಸಭಾರತದ ಇತಿಹಾಸಮಲ್ಟಿಮೀಡಿಯಾಭೋವಿಗೋಲ ಗುಮ್ಮಟನಾರುಸಂಚಿ ಹೊನ್ನಮ್ಮದಾಳಿಂಬೆಅಷ್ಟ ಮಠಗಳು🡆 More