ಗೋರಿಕಾಯಿ

Cyamopsis psoralioides L.

ಗೋರಿಕಾಯಿ
Cyamopsis tetragonoloba
ಗೋರಿಕಾಯಿ
Guar bean cluster
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Fabales
ಕುಟುಂಬ:
Fabaceae
ಕುಲ:
Cyamopsis
ಪ್ರಜಾತಿ:
C. tetragonoloba
Binomial name
Cyamopsis tetragonoloba
(L.) Taub.
Synonyms

ಗೋರಿಕಾಯಿ
ಗೋರಿಕಾಯಿ

ಗೋರಿಕಾಯಿ ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ತರಕಾರಿ ಸಸ್ಯ. ಚವಳೀಕಾಯಿ ಪರ್ಯಾಯನಾಮ. ಸಯಮಾಪ್ಸಿಸ್ ಟೆಟ್ರಗೋನೊಲೋಬ ಇದರ ಶಾಸ್ತ್ರೀಯ ಹೆಸರು. ಇಂಗ್ಲಿಷಿನಲ್ಲಿ ಕ್ಲಸ್ಟರ್ ಬೀನ್ಸ್‌ ಎಂದು ಕರೆಯಲಾಗುತ್ತದೆ. ಗೋರಿಕಾಯಿ ಭಾರತದ ಮೂಲವಾಸಿ ಎಂದು ಹೇಳಲಾಗಿದೆ. ಕಾಡುಗಿಡವಾಗಿ ಇದು ಎಲ್ಲೂ ಬೆಳೆಯದು. ಭಾರತಾದ್ಯಂತ ಇದನ್ನು ಕಾಯಿಗಳಿಗಾಗಿ, ಬೀಜಕ್ಕಾಗಿ ಬೆಳೆಸಲಾಗುತ್ತಿದೆ.

ಪೋಷಕಾಂಶಗಳು

೧೦೦ ಗ್ರಾಂ ಗೋರಿಕಾಯಿಯಲ್ಲಿ ದೊರಕುವ ಪೋಷಕಾಂಶಗಳು

ತೇವಾಂಶ ೮೧.೦ ಗ್ರಾಂ
ಸಸಾರಜನಕ ೩.೯ ಗ್ರಾಂ
ಮೇದಸ್ಸು ೦.೪ ಗ್ರಾಂ
ಖನಿಜಾಂಶ ೩.೨ ಗ್ರಾಂ
ನಾರಿನಾಂಶ ೧.೪ ಗ್ರಾಂ
ಕಾರ್ಬೋಹೈಡ್ರೇಟ್ ಗ್ರಾಂ
ಕ್ಯಾಲ್ಸಿಯಂ ೧೨೯ ಮಿಲಿಗ್ರಾಂ
ಫಾಸ್ಫರಸ್ ೪೬ ಮಿಲಿಗ್ರಾಂ
ಕಬ್ಬಿಣ ೪.೫ ಮಿಲಿಗ್ರಾಂ
ಥಯಾಮಿನ್ ೦.೦೯ ಮಿಲಿಗ್ರಾಂ
ರೈಬೋಫ್ಲೇವಿನ್ ೦.೦೩ ಮಿಲಿಗ್ರಾಂ
ಎ- ಜೀವಸತ್ವ ೫೦ ಐ. ಯು.
ಸಿ- ಜೀವಸತ್ವ ೨೩ ಎಂ. ಸಿ. ಜಿ.

ಪ್ರಬೇಧಗಳು

ಗೋರಿಕಾಯಿ ಗಿಡದಲ್ಲಿ ಕುಳ್ಳು ಮತ್ತು ದೈತ್ಯ ಎಂಬ ಎರಡು ಬಗೆಗಳಿವೆ. ಎರಡೂ ನೆಟ್ಟಗೆ ಬೆಳೆಯುವ ಏಕವಾರ್ಷಿಕ ಸಸ್ಯಗಳು. ಕುಳ್ಳು ಬಗೆಯದು 60-90 ಸೆಂಮೀ ಎತ್ತರಕ್ಕೆ ಬೆಳೆದರೆ ದೈತ್ಯಬಗೆಯದು 2.5-3 ಮೀ ಎತ್ತರಕ್ಕೆ ಬೆಳೆಯುತ್ತದೆ.

ಲಕ್ಷಣಗಳು

ಕಾಂಡ ಮತ್ತು ಎಲೆಗಳ ಮೇಲೆ ನಸು ಉದಾಬಣ್ಣದ ಕೂದಲುಗಳಿವೆ. ಗಿಡವನ್ನು ಮುಟ್ಟಿದರೆ ನವೆ ಉಂಟಾಗುವುದಕ್ಕೆ ಕಾರಣ ಈ ಕೂದಲುಗಳು. ಎಲೆಗಳು ಸಂಯುಕ್ತ ಬಗೆಯವು; ಇವು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ; ಪ್ರತಿ ಎಲೆಯಲ್ಲಿ 3 ಕಿರುಎಲೆಗಳಿವೆ. ಹೂಗಳು ಎಲೆಗಳ ಕಂಕುಳುಗಳಲ್ಲಿರುವ ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಕಾಯಿಗಳು ಪಾಡ್ ಮಾದರಿಯವು.

ವ್ಯವಸಾಯ

ಗಿಡವನ್ನು ಸಾಮಾನ್ಯವಾಗಿ ಎಲ್ಲ ಬಗೆಯ ಮಣ್ಣುಗಳಲ್ಲೂ ಬೆಳೆಸಬಹುದಾದರೂ ಚೆನ್ನಾಗಿ ನೀರು ಬಸಿದು ಹೋಗುವಂಥ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮವಾದದ್ದು. ಜೂನ್-ಜುಲೈ ಇಲ್ಲವೆ ಜನವರಿ-ಫೆಬ್ರುವರಿ ತಿಂಗಳುಗಳು ಬೇಸಾಯಕ್ಕೆ ಸೂಕ್ತ. ಎಕರೆಗೆ 15-20 ಗಾಡಿ ಕೊಟ್ಟಿಗೆ ಗೊಬ್ಬರ, 125 ಕಿಗ್ರಾಂ ಅಮೋನಿಯಂ ಸಲ್ಫೇಟ್, 250 ಕಿಗ್ರಾಂ ಸೂಪರ್ಫಾಸ್ಫೇಟ್, 60 ಕಿಗ್ರಾಂ ಮ್ಯೂರಿಯೇಟ್ ಆಫ್ ಪೊಟ್ಯಾಷ್ಗಳನ್ನು ಹಾಕಿ, 5-7 ದಿವಸಗಳಿಗೊಮ್ಮೆ ನೀರನ್ನು ಹಾಯಿಸುತ್ತಿರಬೇಕು. ಬೀಜ ಬಿತ್ತಿದ 2.5 ತಿಂಗಳ ಅನಂತರ ಕಾಯಿಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಇಳುವರಿ ಎಕರೆಗೆ 2,500 ರಿಂದ 3,500 ಕಿಗ್ರಾಂಗಳಷ್ಟು ಇರುತ್ತದೆ.

ಗಿಡಕ್ಕೆ ತಗಲುವ ರೋಗಗಳಲ್ಲಿ ಬ್ಯಾಕ್ಟೀರಿಯಲ್ ಬ್ಲೈಟ್ ಎಂಬುದು ಬಹಳ ಮುಖ್ಯವಾದದ್ದು. ಮೊದಲು ಎಲೆಗಳ ಮೇಲೆ ಬಹಳ ಸಣ್ಣ, ಪಾರದರ್ಶಕ, ನೀರುಗೂಡಿದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಅನಂತರ ನಾಳದ ಒಳಗಿರುವ ಕಣ ಸಮೂಹ ಹಳದಿ ಬಣ್ಣಕ್ಕೆ ತಿರುಗಿ ಎಲೆ ಸತ್ತುಹೋಗುತ್ತದೆ. ಕ್ರಮೇಣ ರೋಗ ಮುಂದುವರಿದು ಕಾಂಡಕ್ಕೂ ಅಂಟುತ್ತದೆ. ಕೊನೆಗೆ ಪೂರ್ತಿ ಗಿಡವೇ ಸತ್ತುಹೋಗುತ್ತದೆ. ಈ ರೋಗ ಬೀಜ ಮತ್ತು ಮಣ್ಣಿನಿಂದ ಪ್ರಸಾರವಾಗುತ್ತದೆ. ರೋಗರಹಿತ ಬೀಜಗಳನ್ನು ಉಪಯೋಗಿಸುವುದು, ಸೀರಸಾನ್ ಅಥವಾ ಆಗ್ರಸಾನ್ ಎಂಬ ಔಷಧಿಗಳಿಂದ ಬೀಜಗಳನ್ನು ತೊಳೆಯುವುದು ಮತ್ತು ರೋಗ ನಿರೋಧಕ ಜಾತಿಗಳನ್ನೇ ಬಿತ್ತಲು ಉಪಯೋಗಿಸುವುದು-ಇವು ರೋಗನಿಯಂತ್ರಣದ ಕೆಲವು ಕ್ರಮಗಳು.

ಉಪಯೋಗಗಳು

ಗೋರಿಕಾಯಿ ತರಕಾರಿ ಮಾತ್ರವಾಗಿ ಅಲ್ಲದೆ ಇನ್ನಿತರ ಕಾರಣಗಳಿಂದಾಗಿಯೂ ಉಪಯುಕ್ತವೆನಿಸಿದೆ. ಇದು ದನಗಳಿಗೆ ಮತ್ತು ಕುದುರೆಗಳಿಗೆ ಒಳ್ಳೆಯ ಮೇವು. ಬೀಜಗಳನ್ನು ಬೇಯಿಸಿ, ಕೊಂಚ ಸಾಸಿವೆ ಎಣ್ಣೆಯೊಂದಿಗೆ ಸೇರಿಸಿ ದನಗಳಿಗೆ ತಿನ್ನಿಸುವುದುಂಟು. ಅಲ್ಲದೆ ಬೀಜಗಳಿಂದ ಒಂದು ರೀತಿಯ ಗೋಂದನ್ನು ತಯಾರಿಸಿ ಕಾಗದ ಮತ್ತು ಬಟ್ಟೆ ಕೈಗಾರಿಕೆಗಳಲ್ಲಿ ಉತ್ಪನ್ನಗಳಿಗೆ ಬಲವನ್ನು ಕೊಡುವ ವಸ್ತುವಾಗಿ ಬಳಸುತ್ತಾರೆ. ಹದವಾಗಿ ಬೆಳೆದ ಕಾಯಿಗಳನ್ನು ಸುಗ್ಗಿಯಲ್ಲಿ ಕಿತ್ತು ಒಣಗಿಸಿಟ್ಟುಕೊಂಡು ಬೇಕಾದಾಗ ತರಕಾರಿಯಾಗಿ ಬಳಸುತ್ತಾರಲ್ಲದೆ ಕರಿದು ಬಾಳಕ ಮಾಡುವುದೂ ಉಂಟು.

ಉಲ್ಲೇಖಗಳು

Tags:

ಗೋರಿಕಾಯಿ ಪೋಷಕಾಂಶಗಳುಗೋರಿಕಾಯಿ ಪ್ರಬೇಧಗಳುಗೋರಿಕಾಯಿ ಲಕ್ಷಣಗಳುಗೋರಿಕಾಯಿ ವ್ಯವಸಾಯಗೋರಿಕಾಯಿ ಉಪಯೋಗಗಳುಗೋರಿಕಾಯಿ ಉಲ್ಲೇಖಗಳುಗೋರಿಕಾಯಿ

🔥 Trending searches on Wiki ಕನ್ನಡ:

ರಂಜಾನ್ಯೂಟ್ಯೂಬ್‌ಶಬ್ದಮಣಿದರ್ಪಣನಾಯಕತ್ವಕರಗಶುಭ ಶುಕ್ರವಾರಸಿಂಧೂತಟದ ನಾಗರೀಕತೆಕಬೀರ್ಅಶ್ವತ್ಥಮರಸಾಮ್ರಾಟ್ ಅಶೋಕಕಾಂತಾರ (ಚಲನಚಿತ್ರ)ಹಳೆಗನ್ನಡಪೌರತ್ವಶ್ರೀಲಂಕಾಹೋಲೋಕಾಸ್ಟ್ಸಾವಿತ್ರಿಬಾಯಿ ಫುಲೆದ್ವೈತನಾಯಕನಹಟ್ಟಿಚಿನ್ನಅನುಭೋಗದೇವತಾರ್ಚನ ವಿಧಿಚದುರಂಗದ ನಿಯಮಗಳುಗುರುರಾಜ ಕರಜಗಿಕರ್ಣಭಾರತದ ಸಂವಿಧಾನ ರಚನಾ ಸಭೆಭಾರತದ ರಾಷ್ಟ್ರೀಯ ಚಿಹ್ನೆಭಾರತದ ವಿಜ್ಞಾನಿಗಳುಹೊಯ್ಸಳ ವಾಸ್ತುಶಿಲ್ಪಹಲ್ಮಿಡಿ ಶಾಸನಟೊಮೇಟೊಹಿಂದೂ ಧರ್ಮವಚನ ಸಾಹಿತ್ಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಆಲಿವ್ಪ್ಲಾಸಿ ಕದನರಾಮಝೆನಾನ್ಔರಂಗಜೇಬ್ಜಾರಿ ನಿರ್ದೇಶನಾಲಯಭಾರತೀಯ ಸಂವಿಧಾನದ ತಿದ್ದುಪಡಿಕೇಂದ್ರಾಡಳಿತ ಪ್ರದೇಶಗಳುಮಕ್ಕಳ ಸಾಹಿತ್ಯಕ್ರಿಯಾಪದಹಿಂದುಸ್ತಾನಿ ಶಾಸ್ತ್ರೀಯ ಸಂಗೀತಯಣ್ ಸಂಧಿರಂಗಭೂಮಿಭಾರತದ ಸ್ವಾತಂತ್ರ್ಯ ಚಳುವಳಿಪಂಪಅದ್ವೈತಪಾಟಲಿಪುತ್ರಭೂತಾರಾಧನೆಷೇರು ಮಾರುಕಟ್ಟೆಹನುಮಾನ್ ಚಾಲೀಸರಾಷ್ಟ್ರೀಯ ಸೇವಾ ಯೋಜನೆಅಡೋಲ್ಫ್ ಹಿಟ್ಲರ್ಆಲಮಟ್ಟಿ ಆಣೆಕಟ್ಟುಕ್ರೀಡೆಗಳುಮಹಮದ್ ಬಿನ್ ತುಘಲಕ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಆದಿ ಕರ್ನಾಟಕಇಮ್ಮಡಿ ಬಿಜ್ಜಳಅರವಿಂದ ಘೋಷ್ಮಾನವನಲ್ಲಿ ರಕ್ತ ಪರಿಚಲನೆಡಬ್ಲಿನ್ಅಲಂಕಾರಶಾಲೆಇಮ್ಮಡಿ ಪುಲಕೇಶಿವಿಶ್ವಕೋಶಗಳುವಿಜಯದಾಸರುಧೂಮಕೇತುಶ್ರೀ. ನಾರಾಯಣ ಗುರುಭೂಮಿಯ ವಾಯುಮಂಡಲಭೂಶಾಖದ ಶಕ್ತಿಸಂಗೊಳ್ಳಿ ರಾಯಣ್ಣಆರ್ಯಭಟ (ಗಣಿತಜ್ಞ)ಒಕ್ಕಲಿಗಕನ್ನಡಿಗವಿಕಿಪೀಡಿಯ🡆 More