ಕೆ. ಎಸ್. ಚಿತ್ರಾ: ಭಾರತೀಯ ಹಿನ್ನೆಲೆ ಗಾಯಕಿ

ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ ಅಥವಾ ಕೆ.

ಎಸ್. ಚಿತ್ರಾ, ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಗಾಯಕಿ. ಸಂಗೀತದಲ್ಲಿ ಪದವಿ ಪಡೆದ ಚಿತ್ರಾ ಚಿತ್ರಸಂಗೀತವೇ ಅಲ್ಲದೆ ಶಾಸ್ತ್ರೀಯ ಸಂಗೀತ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆಗಳ ಹಾಡುಗಾರಿಕೆಗೂ ಪ್ರಸಿದ್ಧರು. ಮಲಯಾಳಂ , ತಮಿಳು, ಕನ್ನಡ, ತೆಲುಗು, ಒಡಿಯಾ , ಹಿಂದಿ, ಅಸ್ಸಾಮಿ , ಬಂಗಾಳಿ, ಸಂಸ್ಕೃತ, ತುಳು, ಉರ್ದು, ಲ್ಯಾಟಿನ್, ಅರೇಬಿಕ್, ಪಂಜಾಬಿ, ಮಲಯ್, ಶ್ರೀಲಂಕನ್ ಸೇರಿದಂತೆ ಭಾರತೀಯ ಭಾಷೆಗಳೇ ಅಲ್ಲದೆ, ವಿದೇಶೀ ಭಾಷೆಗಳಲ್ಲಿಯೂ ಹಾಡಿದ್ದಾರೆ. ಸುಮಾರು ೨೫೦೦೦ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿರಬಹುದು ಎಂದು ಅಂದಾಜಿಸಲಾಗಿದೆ. ಅವರನ್ನು ವಿವಿಧ ಭಾಷೆಯ ಜನರು ಅಭಿಮಾನದಿಂದ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಕೇರಳದಲ್ಲಿ 'ಕೇರಳತ್ತಿಂಡೆ ವಾನಂಬಾಡಿ'(ಕೇರಳದ ಕೋಗಿಲೆ) ಎಂದರೆ, ತಮಿಳಿನಲ್ಲಿ 'ಚಿನ್ನ ಕುಯಿಲ್'(ಚಿಕ್ಕ ಕೋಗಿಲೆ) ಎನ್ನುತ್ತಾರೆ. ತೆಲುಗಿನಲ್ಲಿ 'ಸಂಗೀತ ಸರಸ್ವತಿ' ಎಂದರೆ, ಕನ್ನಡದಲ್ಲಿ 'ಕನ್ನಡ ಕೋಗಿಲೆ' ಎಂದು ಅಭಿಮಾನಿಸುತ್ತಾರೆ.

ಕೆ. ಎಸ್. ಚಿತ್ರಾ
ಕೆ. ಎಸ್. ಚಿತ್ರಾ: ಆರಂಭಿಕ ಜೀವನ, ಹಿನ್ನಲೆ ಗಾಯನ ಬಗ್ಗೆ, ಕೊಡುಗೆಗಳು
ಹಿನ್ನೆಲೆ ಮಾಹಿತಿ
ಜನ್ಮನಾಮಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ
ಅಡ್ಡಹೆಸರುಕನ್ನಡದ ಮನೆಮಗಳು
ಜನನ27 ಜುಲೈ, 1963
ತಿರುವನಂತಪುರ, ಕೇರಳ, ಭಾರತ
ಸಂಗೀತ ಶೈಲಿಹಿನ್ನೆಲೆ ಗಾಯನ, ಕರ್ನಾಟಕ ಸಂಗೀತ
ವೃತ್ತಿಗಾಯಕಿ
ಸಕ್ರಿಯ ವರ್ಷಗಳು1979–ಈವರೆಗೆ
L‍abelsAudiotracs
ಅಧೀಕೃತ ಜಾಲತಾಣhttp://www.kschithra.com/

೬ ರಾಷ್ಟ್ರ ಪ್ರಶಸ್ತಿಗಳೊಂದಿಗೆ, ಭಾರತದಲ್ಲಿ ಹೆಚ್ಚು ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಏಕೈಕ ಮಹಿಳಾ ಗಾಯಕಿ ಎನಿಸಿದ್ದಾರೆ ಚಿತ್ರಾ.

ಆರಂಭಿಕ ಜೀವನ

ಚಿತ್ರಾರವರ ತಂದೆ ಕೃಷ್ಣನ್ ನಾಯರವರು ಕೂಡ ತನ್ನ ಮೊದಲ ಗುರುವಾಗಿದ್ದರು.ಅವರ ಅಕ್ಕ ಕೆ.ಎಸ್.ಬೀನರವರು ಕೂಡ ಒಬ್ಬ ಹಿನ್ನೆಲೆ ಗಾಯಕಿ.ಅವರು ಡಾ.ಕೆ.ಒಮನಕುಟ್ಟೈಯವರಿಂದ ಕರ್ನಾಟಕ ಸಂಗೀತದ ಪರಿಶೀಲನೆ ಪಡೆದು,ಬಿ.ಎ ತೇರ್ಗಡೆ ಹೊಂದಿ ,ವಿಶ್ವವಿದ್ಯಾನಿಲಯದ ಮೂರನೇ ಶ್ರೇಣಿಯೆಂದ ಮಾಸ್ಟರ್ ಡಿಗ್ರೀಯನ್ನು ಪಡೆದರು.ಕೇಂದ್ರ ಸರ್ಕಾರದಿಂದ ಅವರು ರಾಷ್ಟ್ರೀಯ ಪ್ರತಿಭಾ ಶೋಧ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದರು(೧೯೭೮-೧೯೮೪). ಅವರ ಗಂಡನ ಹೆಸರು ವಿಜಯಶಂಕರ್ .ಅವರು ಒಬ್ಬ ಇಂಜಿನಿಯರ್ ಹಾಗು ಒಬ್ಬ ಉದ್ಯಮಿ ಕೂಡ.ಚಿತ್ರಾರವರ ಕುಟುಂಬ ಚೆನೈಯಲ್ಲಿ ವಾಸಿಸುತಿದ್ದಾರೆ .ಅವರ ಏಕೈಕ ಮಗಳು ನಂದನ (ಎಂಟು ವಷ) ಒಂದು ಪೂಲ್ ಅಪಘಾತದಲ್ಲಿ ,ಏಪ್ರಿಲ್ ೨೦೧೧ ರಲ್ಲಿ ದುಬೈನಲ್ಲಿ ನಿಧನರಾದಳು.

ಹಿನ್ನಲೆ ಗಾಯನ ಬಗ್ಗೆ

ಕೆ. ಎಸ್. ಚಿತ್ರಾ: ಆರಂಭಿಕ ಜೀವನ, ಹಿನ್ನಲೆ ಗಾಯನ ಬಗ್ಗೆ, ಕೊಡುಗೆಗಳು 

ಅವರು ೧೯೭೯ ರಲ್ಲಿ ಎಮ್.ಜಿ.ರಧಾಕೃಷ್ಣನನ್ರವರ ಮೂಲಕ ಮಲಯಾಳಂ ಹಿನ್ನೆಲೆ ಪರಿಚಯಿಸಲಾಯಿತು.ಅವರು ರವೀನ್ದ್ರನ್ ,ಎಮ್.ಜಯಚನ್ದ್ರನ್ ಹೀಗೆ ಹಲವಾರು ಮಲಯಾಳಂ ಸಂಗೀತ ನಿರ್ದೇಶಕರಿಗೆ ಹಾಡುಗಳನ್ನು ಹಾಡಿದ್ದಾರೆ.'ಅಟ್ಟಹಾಸಮ್','ಸ್ನೆಹಪೋರ್ವಮ್ ಮೀರ' ಮತ್ತು 'ಎಕನನು'-ಅವರು ದಾಖಲಿಸಿದ್ದ ಮೊದಲ ಕೆಲವು ಚಿತ್ರಗಳಾಗಿವೆ.ಅವರು ಕೆ.ಜೆ.ಯೆಸುದಾಸ್ ಜೊತೆ ವಿದೇಶಗಳಲ್ಲಿ ಲೈವ್ ಕೊನ್ಸರ್ಟುಗಳು ಅವರು ನಡೆಸಿದ್ದಾರೆ.ಅವರು ತಮಿಳು ಚಲನಚಿತ್ರ ಉದ್ಯಮಕ್ಕೆ ಇಳಯರಾಜಾರವರು ರಚೆಸಿರುವ'ಪೂಜೈಕೇಥ ಪೋವಿದ್' ಎಂಬ ಹಾಡಿನ ಮೂಲಕ ಪ್ರವೇಶಿಸಿದರು. ೧೯೮೫ ರಲ್ಲಿ ಚಿತ್ರ 'ಪೋವೆ ಪೊಚುಡವ'ರಿಂದ 'ನೀಥಾನ ಅಂತ ಕುಯಿಲ್'ಎಂಬ ಹಾದು ಹಾಡಿದ ನಂತರ ಅವರಿಗೆ 'ಚಿನ್ನಕುಯಿಲ್'(ತಮಿಳು) ಎಂದು ಹೆಸರು ನೀಡಳಾಯಿತು. ೧೯೮೦ರ ಮಧ್ಯರಲ್ಲಿ , ಅವರು ತೆಲುಗು , ಕನ್ನಡ , ಮಲಯಾಳಂ , ಭಾಷೆಗಳಲ್ಲಿ ಹಾಡಿದ ಹಾಡುಗಳು ಯಶಸ್ವಿ ಪಡೆಯಿತು . ಅವರು ಮಹಿಳಾ ಗಾಯಕಿಯಾಗಿ ತಮಿಳಿನಲ್ಲಿ ಅತ್ಯಧಿಕ ಅಕಾಡೆಮಿ ಪ್ರಶಸ್ತಿ ಸಂಯೋಜಕ ಎ. ಆರ್. ರೆಹಮಾನ್ ಅವರ ಹಾಡುಗಳ್ನ್ನು ಹಾಡಿದ್ದಾರೆ . ಚಿತ್ರಾರವರು ಕೆ. ಜೆ ಯೇಸುದಾಸ್ , ಎಸ್. ಪಿ ಬಾಲಸುಬ್ರಮಣ್ಯಂ , ಎಮ್. ಜಿ ಶ್ರೀಕುಮಾರ್ , ಮನೊರವರ ಜೊತೆಗೂಡಿ ಗರಿಷ್ಠ ಹಾಡುಗಳನ್ನು ಹಾಡಿದ್ದಾರೆ . ಅವರು ಇಲಯರಾಜ , ಎ. ಆರ್. ರೆಹಮಾನ್ , ಜಾನ್ಸನ್ , ಎಮ್. ಜಿ ರಾಧಾಕೃಷ್ಣನ್ , ಎಮ್ ಜಯಚಂದ್ರನ್ , ರವೀಂದ್ರನ್, ಮಣಿ ಶರ್ಮರವರಿಗೋಸ್ಕರ ಗರಿಷ್ಠ ಹಾಡುಗಳನ್ನು ಹಾಡಿದ್ದಾರೆ .ಅವರು ಹಿನ್ನೆಲೆ ಗಾಯನವನ್ನು ಹೊರತುಪಡಿಸಿ ಹಾಡುಗಳ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು. (ಕೇರಳದಲ್ಲಿ -ಐಡಿಯಾ ಸ್ಟಾರ್ ಸಿಂಗರ್ ,ಜೋಸ್ಕೊ ಇನ್ಡಿಯನ್ ವೊಯ್ಸ್ ; ತಮಿಳಿನಲ್ಲಿ-ಏರ್ಟೆಲ್ ಸೂಪರ್ ಸಿಂಗರ್ ಜುನಿಯರ್ ಮತ್ತು ಆಂಧ್ರ ಪ್ರದೇಶನಲ್ಲಿ-ಎಮ್ ಎ ಎ ಟಿವಿ ಸೂಪರ್ ಸಿಂಗರ್).ಆ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ' ಅತ್ಯುತ್ತಮ ಮಹಿಳಾ ನ್ಯಾಯಾಧೀಶರು' ಎಂಬ ಪ್ರಶಸ್ತಿ ಕೋಡ ಅವರಿಗೆ ನೀಡಲಾಯಿತು. ಸ್ಟುಡಿಯೋ ಆಲ್ಬಂಗಳು : ಚಿತ್ರಾರವರು ೧೯೯೩ ರಲ್ಲಿ 'ವೂಡೂ ರಾಪರ್'ಗೆ ತನ್ನ ಮೊದಲ ಆಲ್ಬಂ 'ರಾಗ ರಾಗ'ವನ್ನು ದಾಖಲಿಸಿದರು.ಅವರು ೨೦೦೦ ರಲ್ಲಿ 'ಪಿಯಾ ಬಸಂತಿ','ಸನ್ಸೆಟ್ ಪೊಯಿನ್ಟ್' ಎಂಬ ಆಲ್ಬಂ ಹಿಂದಿಯಲ್ಲಿ ದಾಖಲಿಸಿದರು. ಅವರು ಮತ್ತು ಉಸ್ತಾದ್ ಸುಲ್ತಾನ್ ಖಾನ್ ಸಂಬಂಧಿಸಿ ಮಾಡಿದ ' ಪಿಯಾ ಬಸಂತಿ' ಎಂಬ ಆಲ್ಬಂಗೆ ಚಿನ್ನದ ದೃಢೀಕರಣವನ್ನು ಪಡೆಯಿತು .'ಸನ್ಸೆಟ್ ಪೊಯಿನ್ಟ್'ದಲ್ಲಿರುವ ಎಂಟು ಹಾಡುಗಳನ್ನು ಗುಲ್ಜಾರ್ ಬರೆದು , ಚಿತ್ರಾ ಮತ್ತು ಭೂಪಿಂದರ್ ರವರು ಸೀರಿ ಹಾಡಿದ್ದಾರೆ.೨೦೦೬ರಲ್ಲಿ ಚಿತ್ರ್ಸಾರವರು ಎಂ.ಎಸ್.ಸುಬ್ಬಲಕ್ಷ್ಮಿರವರಿಗೆ ಸಮರ್ಪಿಸಿ 'ಮಯ್ ಟ್ರಿಬ್ಯುಟ್'ಎಂಬ ಆಲ್ಬಂ ಬಿಡುಗಡೆ ಮಾಡಿದರು. ಈ ಆಲ್ಬಂ ವಿಮರ್ಶಾತ್ಮಕ ಮತ್ತು ಭಜನೆಗಲಿಂದ ಸಂಗ್ರಹಿಸಲಾಗಿದೆ. ಅವರು ೨೦೦೯ರಲ್ಲಿ ' ನೈಟಿಂಗೇಲ್- ಎ ಸೆಲ್ಯೂಟ್ ಟು ಲತಾಜಿ' ಎಂಬ ಆಲ್ಬಮನ್ನು ಲತಾ ಮಂಗೆಶ್ಕರ್ ರವರ ೮೦ ನೇ ಹುಟ್ಟುಹಬ್ಬದ ಸಂದರ್ಪದಲ್ಲಿ ಅವರಿಗೆ ಸಮರ್ಪಿಸಿದರು.

ಕೊಡುಗೆಗಳು

ಅವರು ಮಲಯಾಳಂ ನಲ್ಲಿ ಕೆ.ಜೆ.ಯೆಸುದಾಸ್, ಎಂ.ಜಯಚಂದ್ರನ್, ಮತ್ತು ಶರತ್ ರವರಿಗೆ ಸಾಕಷ್ಟು ಆಲ್ಬಂಗಳನ್ನು ಮಾಡಿದ್ದಾರೆ.ಅವರು ಗುಲಾಮ್ ಅಲಿ ಆಶಾ ಭೋಂಸ್ಲೆ ಜೊತೆ ಗಝಲ್ ಆಲ್ಬಂ ಯೋಜಿಸಿದ್ದಾರೆ.೨೦೧೪ರಲ್ಲಿ ಚಿತ್ರಾರವರು ಸಿಂಗಪೋರಲ್ಲಿ , ಕಪಿಲ್ ಸಿಬಲ್ ಬರೆದ ,ಎ. ಆರ್. ರೆಹಮಾನವರ 'ರೌನಖ್' ಎಂಬ ಖಾಸಗಿ ಆಲ್ಬಮ್ದಲ್ಲಿ ಹಾಡಿದರು. ಲೋಕೋಪಕಾರದ : ಚಿತ್ರಾರವರು ಕೇರಳದ ಆಧಾರಿತ ಉಪಗ್ರಹ ಚಾನಲ್ ಮತ್ತು ಏಶಿಯನೆಟ್ ಕೇಬಲ್ ವಿಷನ್(ಎ ಸಿ ವಿ) ಸೇರಿ ಬಂಡವಾಳ ಸಂಸ್ಥೆಯನ್ನು ಬಿಡುಗಡೆ ಮಡಿದರು. ಈ ಬಂಡವಾಳ ಸಂಸ್ಥೆಯಲ್ಲಿ ಸಂಗೀತ ಉದ್ಯಮದಲ್ಲಿನ ಬದಲಾವಣೆಗಳ ಕಾರಣ ತಮ್ಮ ಬದುಕು ಕಳೆದುಕೊಂಡ ನಿವೃತ್ತ ಸಂಗೀತಗಾರರಿಗಾಗಿ ಸ್ನೇಹಾ ನಂದನಾರವರು ಕಲ್ಯಾಣ ನಿಧಿ ಸಂಗ್ರಹಿಸಿದರು. ಅವರು ಸಂಗೀತ ಹಿನ್ನೆಲೆ ಕ್ಷೇತ್ರದ ಮೂರು ದಶಕಗಳು ತಾನು ಪೂರ್ಣಗೊಂಡಿರುವ ಸಂದರ್ಭದಲ್ಲಿ ಈ ಸಂಸ್ಥೆಯ ಬಿಡುಗಡೆಯನ್ನು ಮಡಿದರು. ಆರ್ಥಿಕ ಅಡೆತಡೆಗಳಿಂದ ಮತ್ತು ಆರೋಗ್ಯ ಸಮಸ್ಯೆಗಳಿಂದ ನರಳುತ್ತಿರುವ ಸಂಗೀತಗಾರರಿಗೆ ಆ ನಿಧಿ ಸಹಾಯ ಒದಗಿಸುತ್ತದೆ ಎಂದು ಚಿತ್ರಾರವರು ಹೇಳಿದರು . ತನ್ನ ವೃತ್ತಿಜೀವನದ ೧೩ನೇ ವರ್ಷವನ್ನು ಆಚರಿಸಲು ಮತ್ತು ಈ ಸಂಸ್ಥೆಯು ಆರಂಭಿಸಲು ಸಲುವಾಗಿ ,೨೦೧೧ ಫೆಬ್ರವರಿ ೧೫ನೇ ತಾರಿಕಿನಲ್ಲಿ 'ಚಿತ್ರಾ ಪೌರ್ಣಮಿ' ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿದರು. ಈ ಕಾರ್ಯಕ್ರಮ ತಿರುವನಂತಪುರಂ , ಕೇರಳದ ಲ್ಲಿ ನಡೆಯಿತು. ಕೆ.ಜೆ.ಯೆಸುದಾಸ್ , ವಿ.ಧಕ್ಶಿಣಮೂರ್ತಿ , ಸ್ರೀಕುಮಾರನ್ತಂಬಿ , ಪಿ. ಸುಶೀಲಾ , ಹರಿಹರನ್ , ಪಿ. ಜಯಚಂದ್ರನ್ , ಉಷಾ ಉಥುಪ್, ಜಾನ್ಸನ್ ,ಶ್ಯಾಮ್ , ಎಮ್. ಜಿ. ಶ್ರೀಕುಮಾರ್,ಸುಜಾತಾ ಮೆನನ್, ಉನ್ನಿ ಮೆನನ್, ಶ್ರೀನಿವಾಸ್ , ಪ್ರಿಯದರ್ಶನ್ , ಜಿ. ವೆಣುಗೋಪಾಲ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ್ದಿದರು.

ಪ್ರಶಸ್ತಿಗಳು

ಕೆ. ಎಸ್. ಚಿತ್ರಾ: ಆರಂಭಿಕ ಜೀವನ, ಹಿನ್ನಲೆ ಗಾಯನ ಬಗ್ಗೆ, ಕೊಡುಗೆಗಳು 
ವಾಣಿ ಜಯರಾಮ್ ಜೊತೆಗೆ ಚಿತ್ರಾ
    ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
  • ರಾಷ್ಟ್ರ ಪ್ರಶಸ್ತಿ - ೬ ಬಾರಿ
    ರಾಜ್ಯ ಪ್ರಶಸ್ತಿಗಳು
  • ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ೧೫ ಬಾರಿ
  • ಆಂಧ್ರ ಪ್ರದೇಶ ರಾಜ್ಯ ಚಲನಚಿತ್ರ ಪ್ರಶಸ್ತಿ - ೯ ಬಾರಿ
  • ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ - ೪ ಬಾರಿ
  • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ೩ ಬಾರಿ
  • ಒರಿಸ್ಸಾ ರಾಜ್ಯ ಚಲನಚಿತ್ರ ಪ್ರಶಸ್ತಿ - ೧ ಬಾರಿ
    ಇತರೆ ಪ್ರಶಸ್ತಿಗಳು
  • ೬ ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿಗಳು
  • ೭ ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು
  • ೭ ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು
  • ೭ ಮಿರ್ಚಿ ಸಂಗೀತ ಪ್ರಶಸ್ತಿಗಳು
  • ೧ ಬಾಲಿವುಡ್ ಚಲನಚಿತ್ರ ಪ್ರಶಸ್ತಿಗಳು
  • ೧ ಸ್ಟಾರ್ ಸ್ಕ್ರೀನ್ ಪ್ರಶಸ್ತಿ
  • ೧ ಎಮ್ ಟಿ ವಿ ವೀಡಿಯೊ ಸಂಗೀತ ಪ್ರಶಸ್ತಿ
  • ೯ ಸಿನಿಮಾ ಎಕ್ಸ್ಪ್ರೆಸ್ ಪ್ರಶಸ್ತಿ
  • ೧ ಜಾಗತಿಕ ಭಾರತೀಯ ಸಂಗೀತ ಅಕಾಡೆಮಿ ಪ್ರಶಸ್ತಿ
  • ೨೦ ಚೆನ್ನೈ ಚಲನಚಿತ್ರ ಅಭಿಮಾನಿಗಳ ಸಂಘದ ಪ್ರಶಸ್ತಿಗಳು
  • ೪ ಗಾಮಾ ಭಾರತೀಯ ಸಂಗೀತ ಪ್ರಶಸ್ತಿ
  • ೪೯ ಇತರ ಪ್ರಶಸ್ತಿಗಳನ್ನು ನೀಡಲಾಗಿವೆ.
    ನಾಗರಿಕ ಗೌರವ

ಉಲ್ಲೇಖನಗಳು

*http://www.filmibeat.com/celebs/ks-chitra/biography.html

*http://www.newindianexpress.com/entertainment/tamil/Chitra-Padma-Subrahmanyam-to-receive-Women-Achiever-awards/2014/02/08/article2045445.ece Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಕೆ. ಎಸ್. ಚಿತ್ರಾ ಆರಂಭಿಕ ಜೀವನಕೆ. ಎಸ್. ಚಿತ್ರಾ ಹಿನ್ನಲೆ ಗಾಯನ ಬಗ್ಗೆಕೆ. ಎಸ್. ಚಿತ್ರಾ ಕೊಡುಗೆಗಳುಕೆ. ಎಸ್. ಚಿತ್ರಾ ಪ್ರಶಸ್ತಿಗಳುಕೆ. ಎಸ್. ಚಿತ್ರಾ ಉಲ್ಲೇಖನಗಳುಕೆ. ಎಸ್. ಚಿತ್ರಾಅರೇಬಿಕ್ಅಸ್ಸಾಮಿಉರ್ದುಒಡಿಯಾಕನ್ನಡತಮಿಳುತುಳುತೆಲುಗುಪಂಜಾಬಿಬಂಗಾಳಿಮಲಯಾಳಂಲ್ಯಾಟಿನ್ಸಂಸ್ಕೃತಹಿಂದಿ

🔥 Trending searches on Wiki ಕನ್ನಡ:

ಬೀಚಿಯಶವಂತ ಚಿತ್ತಾಲಕ್ಯಾನ್ಸರ್ಗೋವಿಂದ ಪೈಬೆಂಗಳೂರು ಕೋಟೆಕರ್ಣನವೋದಯಚಿನ್ನಓದುವಿಕೆರಾಣಿ ಅಬ್ಬಕ್ಕಹಸಿರುಮನೆ ಪರಿಣಾಮಗೋತ್ರ ಮತ್ತು ಪ್ರವರಗಿಡಮೂಲಿಕೆಗಳ ಔಷಧಿಈರುಳ್ಳಿಗುರು (ಗ್ರಹ)ದರ್ಶನ್ ತೂಗುದೀಪ್೧೭೯೨ಗಾಂಜಾಕೊರೋನಾವೈರಸ್ಭಾರತೀಯ ಸಂಸ್ಕೃತಿಪಾರ್ವತಿಚಾಮರಾಜನಗರಅಂತಿಮ ಸಂಸ್ಕಾರಮಂಜುಮ್ಮೆಲ್ ಬಾಯ್ಸ್ಸಿದ್ದಲಿಂಗಯ್ಯ (ಕವಿ)ಕುಕ್ಕೆ ಸುಬ್ರಹ್ಮಣ್ಯ ದೇವಾಲಯತತ್ಪುರುಷ ಸಮಾಸಮುಹಮ್ಮದ್ಮಂಕುತಿಮ್ಮನ ಕಗ್ಗಮಂತ್ರಾಲಯಕೌರವರುಮೈಸೂರುವಿಜಯಪುರಹಲ್ಮಿಡಿ ಶಾಸನಅರ್ಜುನರಾಷ್ಟ್ರೀಯತೆಭಾರತದ ಭೌಗೋಳಿಕತೆಗಂಗ (ರಾಜಮನೆತನ)ಆರ್ಯಭಟ (ಗಣಿತಜ್ಞ)ಬೇವುಪ್ರಜ್ವಲ್ ರೇವಣ್ಣಪ್ರೇಮಾಗ್ರಾಹಕರ ಸಂರಕ್ಷಣೆಕದಂಬ ಮನೆತನಗಾಂಧಿ ಜಯಂತಿಚಾಲುಕ್ಯ ಶಿವ ದೇವಾಲಯಚನ್ನಬಸವೇಶ್ವರಕನ್ನಡದಲ್ಲಿ ಮಹಿಳಾ ಸಾಹಿತ್ಯದುರ್ಯೋಧನಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸ್ಕೌಟ್ ಚಳುವಳಿಬೇಸಿಗೆಬಿ. ಆರ್. ಅಂಬೇಡ್ಕರ್ಡಿ.ಕೆ ಶಿವಕುಮಾರ್ಕನ್ನಡವಿಮೆಭಕ್ತಿ ಚಳುವಳಿಅಶೋಕನ ಶಾಸನಗಳುವಿಭಕ್ತಿ ಪ್ರತ್ಯಯಗಳುಶಿಶುನಾಳ ಶರೀಫರುಹೆಚ್.ಡಿ.ಕುಮಾರಸ್ವಾಮಿಜೀವಕೋಶಭಾರತೀಯ ರೈಲ್ವೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಹೃದಯಭಾರತೀಯ ಸ್ಟೇಟ್ ಬ್ಯಾಂಕ್ಪಂಚ ವಾರ್ಷಿಕ ಯೋಜನೆಗಳುಸುಭಾಷ್ ಚಂದ್ರ ಬೋಸ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸುಧಾ ಮೂರ್ತಿಮಾನಸಿಕ ಆರೋಗ್ಯಶಬ್ದಮಣಿದರ್ಪಣಮಲ್ಲಿಗೆಕ್ರೈಸ್ತ ಧರ್ಮಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆತಾಪಮಾನಅಮೃತಧಾರೆ (ಕನ್ನಡ ಧಾರಾವಾಹಿ)ತ. ರಾ. ಸುಬ್ಬರಾಯ🡆 More