ಕೊರಗ

ಕರ್ನಾಟಕದಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಜನಾಂಗದಲ್ಲಿ ಕೊರಗ ಒಂದು.

ಇವರು ಈ ಜನಾಂಗವು ಹೊಲೆಯರಿಗಿಂತ ಕೆಳಗಿನವರು ಎನ್ನುವರು ಆದರೆ ಇವರಾರಿಗಿಂತ ಕಡಿಮೆ ಇಲ್ಲ, ಹೆಚ್ಚಿಲ್ಲ. ಆ ದಿನಾಗಳಲ್ಲಿ ಈ ಜನಾಂಗ ಎಂದರೆ ಕೊರಗದವರು ಅಲೆಮಾರಿ ಜೀವನ ನಡೆಸುತ್ತಾ ಕಾಡಿನಲ್ಲಿ ವಾಸಿಸುತ್ತಿದ್ದರು.ಇವರು ದಿನಗಳು ಬೇಟೆಯಾಡಿ ಹಸಿಮಾಂಸ ತಿಂದು ಬದುಕುತ್ತಿದ್ದರು. ಕಾಲ ಕಳೆದಂತೆ ಬುದ್ಧಿ ಬೆಳೆದಂತೆ ಊರು ಸೇರಿದರೂ ಕಾಡಿನ ನಂಟನ್ನು ಮಾತ್ರ ಬಿಡಲಿಲ್ಲಿ. ಇವರು ಈಗ ಊರು ಸೇರಿ ಕಾಡಿನಲ್ಲಿ ದೊರೆಯುವ ಬಿದಿರಿನಿಂದ ತರತರದ ಬುಟ್ಟಿಗಳನ್ನು ಹೆಣಿಯುವ ಇವರು ಅದರಿಂದಲೇ ಬದುಕು ಸಾಗಿಸುತ್ತಿದ್ದರೆ.ಕೆಲವು ಪಟ್ಟಣಗಳಲ್ಲಿ ಅವರನ್ನು ಜೌಡಮಾಲಿಗಳಾಗಿ ಆರೋಗ್ಯ ಇಲಾಖೆಯವರು ನೆಮಿಸಿಕೊಳ್ಳುವರು. ಕೊರಗ ಜನಾಂಗದವರು ಹಳ್ಳಿಗಳಲ್ಲಿ ಸತ್ತ ಹಸು ಮತ್ತು ಎಮ್ಮೆಯ ಚರ್ಮ,ಕೊಂಬು ಮತ್ತು ಮೂಳೆಗಳನ್ನು ಸುಲಿದು ಮಾಪಿಳ್ಳೆ ವ್ಯಾಪಾರಿಗಳಿಗೆ ಮಾರುವರು. ಕೊರಗ ಜನಾಂಗದವರು ಮದುವೆ,ಹಬ್ಬದೂಟಗಳಲ್ಲಿ ಬಿಟ್ಟ ಎಂಜಲಾಹಾರವನ್ನು ತಿನ್ನುವ ಅನಿಷ್ಟ ಪದ್ದತಿ ಇತ್ತು ಈಗಿಲ್ಲ ಇಂತಹ ಅನಿಷ್ಟ ಪದ್ಧತಿಗಳನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ.

ಕೊರಗ
ಕೊರಗ ಜನಾಂಗ ವ್ಯಕ್ತಿ

ಕೊರಗರ ವೃತ್ತಿ

ಈ ಜನಾಂಗದವರು ತಮ್ಮ ಜೀವನ್ನಕ್ಕೆ ಮತ್ತು ಹೊಟ್ಟೆ ಪಾಡಿಗೆ ತೊಟ್ಟಿಲು, ಬುಟ್ಟಿ(ಭತ್ತ ತುಂಬುವ ಕಣಿಜ) ಮೊರ, ತೂರುವ ಬುಟ್ಟಿ ತಕ್ಕಡಿ (ಪೆಟ್ಟಿಗೆ, ಮಡಿಕೆ ಇಡುವ ಸುತ್ತು ತೆಂಗಿನ ನಾರಿನ ಹಗ್ಗ ) ದನಗಳನ್ನು ಉಜ್ಜಲು ಕುಚ್ಚುಮೊಟ್ಟೆ ಇತ್ಯಾದಿಗಳನ್ನು ತಯಾರಿಸುತ್ತಾರೆ ಹಾಗೂ ಆವರು ಅದರಲ್ಲಿ ಪರಿಣತರಾಗಿದ್ದಾರೆ ಮತ್ತು ಬಳಪದ ಕಲ್ಲಿನಿಂದ ವಿವಿಧ ಬಗೆಯ ಗೃಹೋಪಯೋಗಿ ಪಾತ್ರೆಗಳನ್ನು ತಯಾರಿಸಿ ಮಾರುವರು. ಕೊರಗರ ಜಾತಿಗಳಲ್ಲಿ ಆಂಡೆಯೊಂದನ್ನು ಕಟ್ಟಿಕೊಂಡು ತಿರುಗಾಡ ಬೇಕಿತ್ತಂತೆ ಅಕಸ್ಮಾತ್ ನೆಲದಲ್ಲಿ ಉಗಿದು ಅದು ಬೇರೆಯವರ ಕಣ್ಣಿಗೆ ಬಿದ್ದರೆ ಅವರು ಬೈಗುಳಕ್ಕೆ ಬಲಿಯಾಗಬೇಕ್ಕಿತ್ತು. ಆದಿವಾಸಿಗಳನಿಸಿಕೊಂಡ ಕೊರಗ ಜನಾಂಗದವರು ತಮ್ಮ ಮಾನ ಮುಚ್ಚಿಕೊಳ್ಳಲು ಸೊಪ್ಪು ಮತ್ತು ಮರದ ತೊಗಟೆಗಳನ್ನು ಕಟ್ಟಕೊಳ್ಳುತ್ತಿದರು. ಈ ಜನಾಂಗದವರಿಗೆ ವಿವಿಧ ಹೆಸರುಗಳು ಇದವು ಹಾದು ಒಂದೊಂದು ಊರಿನಲ್ಲಿ ವಾಸಿಸುವ ಕೊರಗರಿಗೆ ಒಂದೊಮ್ದು ಹೆಸರಿದೆ. ಉದಾ:ಕುಂದಾಪುರದ ಮೂದುಕೊರಗ, ಹೆಬ್ರಿಯ ತಪ್ಪುಕೊರಗ ಇತ್ಯಾದಿ. ಊರಿ ಬೀದಿಯನ್ನು ಸ್ಛಚ್ಛಗೊಳಿಸುವ ಕೆಲ್ಸವೂ ಕೊರಗರ ಪಾಲಿನದಾಗಿದೆ.

ಕೊರಗ 
ಕೊರಗಜ್ಜ

ಕೊರಗ ಜಾನಪದ

ಇವರು ಅತಿ ಹೆಚ್ಚು ಕಸಬುಹುಳ್ಳವರು. ಅವರಲ್ಲಿ ಗಂಡಸರು ಡೋಲು,ಚಂಡೆ ಬಡಿದು ಕೊಳಲೂದಿದರೆ ಹೆಂಗಸರು ತಾಳ್ ಹಾಕುತ್ತರೆ, ಭೂತಾರಾದನೆ ಕೋಲ,ನೇಮ,ಡಕ್ಕೆ,ಬಲಿಗಳಂಥ ಆಚರಣೆಗಳಲ್ಲಿ ಕೊರಗರ ದೋಲು ಬಡಿತ ಇದ್ದೇ ಇರುತ್ತದೆ. ಕಂಬಳ ಜರುಗುವ ಸ್ಥಳಕ್ಕೆ ಕೋಣ್ಗಳನ್ನುಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಮತ್ತು ಹಿಂದಕ್ಕೆ ಬರುವಾಗ ಕೊರಗದವರು ಡೋಲು,ಚಂಡೆ ಬಾರಿಸಿಕೊಂಡು ಹೋಗಬೇಕು.ಊರಿನ ಜಾತ್ರೆಗಳಲ್ಲಿ,ಉತ್ಸವಗಳಲ್ಲಿ,ರಥ ಎಳೆಯುವ ಸಂದರ್ಭದಲ್ಲಿ ತಮ್ಮ ಸಂಸಾರದೊಂದಿಗೆ ಮೂಲೆಯೊಂದರಲ್ಲಿ ಕುಳಿತು ಡೋಲು ಬಾರಿಸಿ ದೇವರಿಗೆ ಸೇವೆ ಸಲ್ಲಿಸುತ್ತಾರೆ. ಈ ಜನಾಂಗದವರು ಕೂಡ ಜಾತ್ರೆಗಳಲ್ಲಿ ಯಕ್ಷಗಾನದ ಮತ್ತು ನಾಟಕದ ವೇಷದರಿಸಿದ ಕೊರಗರು ಜನರಿಂದ ಹಣ ವಸೂಲಿ ಮಾಡುತ್ತರೆ.ಊರು ಊರುಗಳಿಗೆ ಹೋಗಿ ಪದಗಳನ್ನು ಹಾಡುತ್ತಾ ಭತ್ತ,ಕಣಜ ಸಂಗ್ರಹಿಸುತ್ತಾರೆ.ಇವರು ತಮ್ಮ ಹೂಟ್ಟೆ ಪಾಡಿಗೆ ಹಸುಗಳಿಗೆ ಅಥವಾ ಹೆತ್ತುಗಳನ್ನು ಸಿಂಗರಿಸಿ ಮನೆಯ ಮುಂದೆ ಡೋಲು ಬಾರಿಸಿ ಕುಕ್ಕೆ ಹಿಡಿದು ಭತ್ತ ಸಂಗ್ರಹಿಸುತ್ತಾರೆ.ಊರಿನಲ್ಲಿ ಧನ ಅಥವಾ ಎಮ್ಮೆ ಸತ್ತಾರೆ ಅವುಗಳನ್ನು ಊರಿನ ಹೊರಗೆ ತಂದು ತಿನ್ನುತ್ತಾರೆ ಮತ್ತು ಅವುಗಳ ಚರ್ಮವನ್ನು ಒಣಗಿಸಿ ಹದಮಾಡಿ ಮಾರಿ ಹಣ ಮಾಡುತ್ತಾರೆ.ಎಮ್ಮೆ ಕರುವಿನ ಹದವಾದ ಚರ್ಮ ಸಿಕ್ಕರೆ ಡೋಲು ತಯಾರಿಸಿಕೊಳ್ಳುತ್ತಾರೆ.ಕೊರಗ ಹೆಂಗಸರು ಬುಟ್ಟಿ ಹೆಣೆಯುವುದು ಕಸುಬಾಗಿದೆ.

ಜಾತಿ ಬೆಳೆದು ಬಂದ ಕ್ರಮ

ಕಾನೂನಿನ ಮಾನ್ಯತೆ ಪಡೆಯದಿರುವ ಅನೇಕ ಗುಲಾಮ ಜಾತಿಗಳು ಭಾರತದಾದ್ಯಂತ ನೆಲಸಿವೆ.೧೮೪೩ರಲ್ಲಿ ಸರ್ಕಾರ ಕಾನೂನಿನ ಸಹಾಯದಿಂದ ಅವರನ್ನು ವಿಮೋಚನೆಗೊಳಿಸಿತು.ಆದರೆ ಈಗಲೂ ಅವರು ಪರಸ್ಥಿತಿಗಳು ಸುಧಾರಿಸಿವೆಯಾದರೂ ವಾಸ್ತವವಾಗಿ ಇನೂ ಗುಲಾಮರಾಗಿಯೇ ಇದ್ದರೆ.ಅವರ ಉಗಮ ಮತ್ತು ಸ್ಥಾನವನ್ನು ಈ ಕೆಳಗೆ ವಿವರಿಸಲಾಗಿದೆ.ಬ್ರಹ್ಮನಿಂದ ನಾಲ್ಕು ಪ್ರಮುಖ ವರ್ಗಗಳು ಸೃಷ್ಟಿಯಾದ ನಂತರ,ಬ್ರಾಹ್ಮಣ ಮತ್ತು ಕ್ಷತ್ರಿಯರು ತಮಗಿಂತಲೂ ಕೆಳವರ್ಗದ ಸ್ತ್ರಿಯರೂಂದಿಗೆ ಸಂಬಂಧವನ್ನು ಬೆಳಸಿದ ಕಾರಣವಾಗಿ ಆರು ಅನುಲೋಮ ಜಾತಿಗಳು ಹುಟ್ಟಿಕೊಂಡವು.ಅನುಲೋಮ ಎಂಬ ಪದ ಆರ್ಯ ವರ್ಗದವರಿಗೆ ವಿಶಿಷ್ಟವಾಗಿರುವ ನೇರವಾದ ಮತ್ತು ಕ್ರಮಬದ್ದವಾದ ಕೂದಲುಗಳು ಎಂಬುದನ್ನು ಸೂಚಿಸುತ್ತದೆ. ಇವರಿಗೆ ವಿರುದ್ಧವಾಗಿ ಅಂದರೆ, ಮೇಲುವರ್ಗದ ಬ್ರಾಹ್ಮಣ ಕ್ಷತ್ರಿಯ ಸ್ತ್ರೀ ಮತ್ತು ಕೆಳವರ್ಗದ ಪುರುಷ ಸಂಪರ್ಕದಿಂದಾಗಿ ಆರು ಪ್ರತಿಲೋಮ ಜಾತಿಗಳು ಉಗಮಗೊಂಡಿವೆ.

ಕೊರಗರ ದೈವೀ ಶಕ್ತಿ

ಕೊರಗರು ಕೆಲವು ಹಕ್ಕು ಮತ್ತು ಅವಕಾಶಗಳನ್ನು ಹೊಂದಿರುವರು.ಅವರು ತಮ್ಮ ಮಾಟ,ಮಂತ್ರ ಶಕ್ತಿಯಿಂದಾಗಿ ಒಳ್ಳೆಯದನ್ನು ಅಥವಾ ಕೆಟ್ಟದ್ದನ್ನು ಏನು ಬೇಕಾದರೂ ಮಾಡುವರು.ಉದಾಹರಣೆಗಾಗಿ ಒಂದು ಪ್ರಸಂಗವನ್ನು ನೋಡಬಹುದು:ಒಂದು ವೇಳೆ ಬ್ರಾಹ್ಮಣ ಹೆಂಗಸಿನ ಮಗುವಿಗೆ ಚಿಕ್ಕ ವಯಸ್ಸಿನಲ್ಲಿ ಸಾಯುವ ಸ್ಥಿತಿ ಸಮೀಪಿಸಿದಾಗ ಅವಳು ಕೊರಗ ಹೆಂಗಸೊಬ್ಬಳನ್ನು ಕರೆಸಿ ಎಣ್ಣೆ,ಅಕ್ಕಿ ,ಮತ್ತು ತಾಮ್ರದ ಕಾಸನ್ನು ಕೊಟ್ಟು ಆವಳ ಕೈಗೆ ಸಾಯುತ್ತಿರುವ ತನ್ನ ಮಗುವನ್ನು ಹಾಕುವಳು,ಆಗ ಅವಳು ಆ ಮಗುವಿಗೆ ತನ್ನ್ನ ಎದೆಯ ಹಾಲನ್ನು ಕುಡಿಸಿ,ಅದು ಹುಡುಗನಾಗಿದ್ದರೆ'ಕೊರಗರ್' ಎಂತಲೂ ಹುಡುಗಿಯಾಗಿದ್ದರೆ 'ಕೊರಪುಲು' ಎಂತಲೂ ಹೆಸರಿಸಿ ಅನಂತರ ತಾಯಿಗೆ ಹಿಂತಿರುಗಿಸುವಳು.ಇದರಿಂದಾಗಿ ಮಗುವಿಗೆ ಹೊಸ ಜೀವನ ದೊರೆಯುತ್ತದೆಂದು ಅವಳು ನಂಬುವಳು.ಒಬ್ಬ ವ್ಯಕ್ತಿಯು, ರೋಗ ಉಲ್ಬಣ್ಗೊಂಡಾಗ ಅಥವಾ ದುರದೃಷ್ಟವಂತನಾಗಿದ್ದರೆ ಅವನು ಒಂದು ಮಡಿಕೆಯಲ್ಲಿ ಎಣ್ಣೆಯನ್ನು ಸುರಿದು ಅದನ್ನು ಮನೆ ದೇವರನ್ನು ಪೂಜಿಸಿವ ಹಾಗೆಯೇ ಪೂಜಿಸಿ, ತನ್ನ ಮುಖದ ಪ್ರತಿಬಿಂಬವನ್ನು ಅದರಲ್ಲಿ ಕಂಡು,ತನ್ನ ತಲೆಯಿಂದ ಒಂದು ಕೂದಲನ್ನು ತೆಗೆದು ಅದರಲ್ಲಿ ಹಾಕುವನು.ಅನಂತರ ಅದನ್ನು ಕೊರಗನಿಗೆ ಕೊಡುವನು.ಇದರಿಂದಾಗಿ ತನಗೆ ಪ್ರತಿಕೂಲವಾದ ದೇವರು ಅಥವಾ ನಕ್ಷತ್ರಗಳು ತೃಪ್ತಿ ಹೊಂದುವುವು ಎಂದು ನಂಬುವರು.

ಉಲ್ಲೇಖ

Tags:

ಕೊರಗ ರ ವೃತ್ತಿಕೊರಗ ಜಾನಪದಕೊರಗ ಜಾತಿ ಬೆಳೆದು ಬಂದ ಕ್ರಮಕೊರಗ ರ ದೈವೀ ಶಕ್ತಿಕೊರಗ ಉಲ್ಲೇಖಕೊರಗಅಲೆಮಾರಿಜನ ಜೀವನಆದಿವಾಸಿಗಳುಆರೋಗ್ಯಎಮ್ಮೆಕರ್ನಾಟಕಕಾಡುಜನಾಂಗಶಾಸ್ತ್ರ (ಎಥನಾಲಜಿ)ದಕ್ಷಿಣ ಕನ್ನಡ ಜಿಲ್ಲೆಬಿದಿರುಹಸು

🔥 Trending searches on Wiki ಕನ್ನಡ:

ಧರ್ಮಭಗವದ್ಗೀತೆಸಂಸ್ಕೃತಅಂಜನಿ ಪುತ್ರಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಕೈಲಾಸನಾಥರಾಷ್ಟ್ರಕವಿಚಾರ್ಲ್ಸ್‌‌ ಮ್ಯಾನ್ಸನ್‌‌‌ಸಮುದ್ರಗುಪ್ತವಾಣಿಜ್ಯೋದ್ಯಮಸೀತೆಕರ್ನಾಟಕ ಜನಪದ ನೃತ್ಯಸಲಗ (ಚಲನಚಿತ್ರ)ಭಾರತದ ಸಂವಿಧಾನಕರ್ನಾಟಕದಲ್ಲಿ ಬ್ಯಾಂಕಿಂಗ್ರಾಜ್ಯಗಳ ಪುನರ್ ವಿಂಗಡಣಾ ಆಯೋಗಕೆ. ಎಸ್. ನರಸಿಂಹಸ್ವಾಮಿಎಚ್. ಜೆ . ಲಕ್ಕಪ್ಪಗೌಡಮಾಧ್ಯಮಸಾವಯವ ಬೇಸಾಯಸೋಡಿಯಮ್ಜವಾಹರ‌ಲಾಲ್ ನೆಹರುಸ್ನಾಯುಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನಕನ್ನಡ ಸಾಹಿತ್ಯ ಪರಿಷತ್ತುಎಂ. ಎಸ್. ಸ್ವಾಮಿನಾಥನ್ಜೋಳಕರ್ನಾಟಕದಲ್ಲಿ ಸಹಕಾರ ಚಳವಳಿಬಿಲ್ಹಣಜವಹರ್ ನವೋದಯ ವಿದ್ಯಾಲಯಜೋಡು ನುಡಿಗಟ್ಟುದರ್ಶನ್ ತೂಗುದೀಪ್ತೂಕಮಾನವನ ಪಚನ ವ್ಯವಸ್ಥೆಸಿದ್ಧಯ್ಯ ಪುರಾಣಿಕಹಜ್ರಾಯಲ್ ಚಾಲೆಂಜರ್ಸ್ ಬೆಂಗಳೂರುದಾಸವಾಳಪಂಜಾಬ್ಪಿತ್ತಕೋಶಏಲಕ್ಕಿಬಿದಿರುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕನ್ನಡ ಪತ್ರಿಕೆಗಳುಟೊಮೇಟೊರಮ್ಯಾಕನ್ನಡ ವ್ಯಾಕರಣಏಕೀಕರಣಆಹಾರ ಸಂಸ್ಕರಣೆಲೋಕಸಭೆಪ್ಲಾಸಿ ಕದನಗಂಗ (ರಾಜಮನೆತನ)ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆವೃಕ್ಷಗಳ ಪಟ್ಟೆಅಶ್ವತ್ಥಮರಗುಪ್ತಗಾಮಿನಿ (ಧಾರಾವಾಹಿ)ಹಲ್ಮಿಡಿಶಬರಿವಚನ ಸಾಹಿತ್ಯಮೀನಾ (ನಟಿ)ಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಂಸ್ಕೃತಿಯೋಗಬಾಹುಬಲಿರಚಿತಾ ರಾಮ್ಪತ್ರರಂಧ್ರಟಾರ್ಟನ್ಹುರುಳಿತಂತ್ರಜ್ಞಾನದ ಉಪಯೋಗಗಳುಅಳತೆ, ತೂಕ, ಎಣಿಕೆಪಂಚ ವಾರ್ಷಿಕ ಯೋಜನೆಗಳುಭಾರತದ ಗವರ್ನರ್ ಜನರಲ್ರನ್ನಅಮ್ಮಕರ್ನಾಟಕದ ಶಾಸನಗಳು🡆 More