ಕರ್ನಾಟಕದಲ್ಲಿ ಸಹಕಾರ ಚಳವಳಿ

ಅಪೆಕ್ಸ್ ಬ್ಯಾಂಕ್ ಸ್ಥಾಪನೆ

ಭಾರತದಲ್ಲಿ ಸಹಕಾರ ಸಂಘಗಳ ಆರಂಭ

  • ಭಾರತದಲ್ಲಿ ಮೊಟ್ಟಮೊದಲಿನ ಸಾಲವಿತರಣ (ಬ್ಯಾಂಕಿಂಗ್) ಸಹಕಾರ ಸಂಘವು ಬಂಗಾಳದಲ್ಲಿ ದಿ. ೨೫-೩-೧೯೦೪ / 25-3-1904ರಂದು/ರಲ್ಲಿ ಬಂಗಾಳ ಸರ್ಕಾರದ ಬೆಂಬಲ ಮತ್ತು ಸಹಾಯದಿಂದ ಆರಂಭವಾಯಿತು. ಸ್ನೇಹಿತರ ಸಹಕಾರ ಸಂಘಗಳ ಕಾನೂನು/ನಿಯಮಗಳ ಅಡಿಯಲ್ಲಿ ಅದು ನೊಂದಾವಣೆಯಾಗಿತ್ತು. ಸಹಕಾರ ಸಂಘದ ನಿಯಮಗಳು ೧೯೧೯/1919 ರಲ್ಲಿ ರಾಜ್ಯಗಳ ಆಡಳಿತ ವಿಷಯಗಳ ಪಟ್ಟಿಯೊಳಗೆ ಸೇರಿತು. ೧೯೫೧ /1951 ರಲ್ಲಿ ೫೦೧/501 ಕೇಂದ್ರ ಸಹಕಾರ ಯೂನಿಯನ್ ಗಳು , ಕೇಂದ್ರ ಸಹಕಾರ ಬ್ಯಾಂಕುಗಳೆಂದು ಪುನರ್ನಾಮಕರಣ ಮಾಡಲಾಯಿತು.

ಕರ್ನಾಟಕದಲ್ಲಿ ಸಹಕಾರ ಸಂಘಗಳ ರಚನೆ

  • ಕರ್ನಾಟಕದಲ್ಲಿ -ಹಿಂದಿನ ಮೈಸೂರು ರಾಜ್ಯದಲ್ಲಿ ಸಹಕಾರ ಚಳುವಳಿಯು ೧೯೦೫ / 1905 ರಲ್ಲಿ ಮೈಸೂರು ಸಹಕಾರ ಸಂಘಗಳ ನಿಯಯಮಾವಳಿಗಳನ್ನು ಜಾರಿಮಾಡುವ ಮೂಲಕ ಆರಂಭಗೊಂಡಿತು. ಇದು ನಿಧಾನ ಗತಿಯಲ್ಲಿ ಮುಂದುವರೆದು ೧೯೧೪-೧೫ /1914-15ರ ವೇಳಗೆ ೭೨೫ /725ಸಹಕಾರ ಸಂಘಗಳಿದ್ದವು. ಒಟ್ಟು ೫೬,೨೬೭/56,267 ಸದಸ್ಯರಿದ್ದರು. ಒಟ್ಟು ಬಂಡವಾಳ ರೂ.೩೦.೮೫ /30.85 ಲಕ್ಷದಷ್ಟಿತ್ತು. ೭೨೫/725 ಸಂಘಗಳಲ್ಲಿ ೬೬೧ /661 ವ್ಯವಸಾಯ (ಕ್ರೆಡಿಟ್) ಸಹಕಾರಿ ಸಂಘಗಳಾಗಿದ್ದವು. ಅವುಗಳಿಗೆ ರೈತರಿಗೆ ಸಾಲಕೊಡಲು ಒಂದು ಕೇಂದ್ರ ಬ್ಯಾಂಕ್ (ಅಪೆಕ್ಷ್ ಬ್ಯಾಂಕ್) ಅಗತ್ಯವಾಗಿತ್ತು. ಈ ಸಹಕಾರ ಬ್ಯಾಂಕುಗಳಿಗೆ ಹಣ ಒದಗಿಸುವ ಸಲುವಾಗಿಯೇ ಒಂದು ಬ್ಯಾಂಕಿನ ಅಗತ್ಯವಿದ್ದು, ಅದಕ್ಕಾಗಿ ೧೯೨೦-೨೨ /1920-22 ರಲ್ಲಿ ಲಲ್ಲ್ಲೂಭಾಯಿ ಸಮಲ್ಡಾಸ್ ಅಧ್ಯಕ್ಷತೆಯಲ್ಲಿ ನೇಮಿಸಿದ ಸಮಿತಿಯು ಮೈಸೂರು ಪ್ರಾವಿಜನಲ್ ಕೋಆಪರೇಟಿವ್ ಬ್ಯಾಂಕನ್ನು ಕೇಂದ್ರ ಬ್ಯಾಂಕಾಗಿ ಪರಿವರ್ತಿಸಲು ಮತ್ತು ಬೆಂಗಳೂರು ಪ್ರಾವಿಜನಲ್ ಕೋಆಪರೇಟಿವ್ ಬ್ಯಾಂಕನ್ನು ಅದರಲ್ಲಿ ವಿಲೀನಗೊಳಿಸಲು ಶಿಪಾರಸು ಮಾಡಿತು .
  • ಈ ಅಪೆಕ್ಸ ಬ್ಯಾಂಕು ಇತರ ಎಲ್ಲಾ ವ್ಯವಸಾಯ ಸಹಕಾರಿ ಸಂಘ-ಬ್ಯಾಂಕುಗಳಿಗೆ ಹಣ ಒದಗಿಸುವ ಏಕೈಕ ಉದ್ದೇಶ ಹೊಂದಿತ್ತು. ಅದು ರಾಜ್ಯದ ಆ ಎಲ್ಲಾ ಸಹಕಾರಿ ಸಂಘಗಳ ಮೇಲ್ವಿಚಾರಣೆಯ ಅಧಿಕಾರವನ್ನೂ ಹೊಂದಿತ್ತು. ಈ ಬಗ್ಗೆ ಅಧಿಸೂಚನೆಯನ್ನು ೧೫-೯-೧೯೨೫ /15-9-1925 ರಲ್ಲಿ ಹೊರಡಿಸಲಾಯಿತು . ಅದಕ್ಕೆ., ಮೈಸೂರು ಪ್ರಾವಿಶನಲ್ ಸಹಕಾರಿ ಅಪೆಕ್ಸ ಬ್ಯಾಂಕ್ ಎಂದು ನಾಮಕರಣ ಮಾಡಲಾಯಿತು ಸಂಕ್ಷಿಪ್ತವಾಗಿ ಅಪೆಕ್ಸ ಬ್ಯಾಂಕ್. ಆದರೆ ೧೯೫೧/ 1951 ರ ಹೊತ್ತಿಗೆ ಕರ್ನಾಟಕದ (ಹಳೇ ಮೈಸೂರಿನ) ಕೇವಲ ೩%/3%(ಶೇ.) ಜನರು ಮಾತ್ರ ಅದರ ಫಲಾನುಭವಿಗಳಾಗಿದ್ದರು. ೧೯೯೧ /1991 ರ ವರೆಗೂ ಸಹಕಾರ ಚಳುವಳಿ ಮಂದಗತಿಯಲ್ಲಿ ಮುನ್ನೆಡೆದರೂ, ಶೇ. ೬೨/62 ಗ್ರಾಮಂತರದ ಜನರು ಅದರ ಉಪಯೋಗ ಪಡೆದಿದ್ದರು.

ಕರ್ನಾಟಕದ ಮೊದಲ ಸಹಕಾರ ಸಂಘ

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಬುನಾದಿ ಹಾಕಿದ್ದು ಕರ್ನಾಟಕ ರಾಜ್ಯ. 1904ರಲ್ಲಿ ಗದಗ ಜಿಲ್ಲೆಯ (ಆಗಿನ ಧಾರವಾಡ ಜಿಲ್ಲೆ-ಆಗ ಮುಂಬಯಿ ಪ್ರಾಂತಕ್ಕೆ ಸೇರಿತ್ತು) ಕಣಗಿನಹಾಳ ಗ್ರಾಮದ ಸಣ್ಣರಾಮನಗೌಡ ಸಿದ್ದರಾಮನಗೌಡ ಪಾಟೀಲ (ಎಸ್‌.ಎಸ್‌.ಪಾಟೀಲ).

  • ಅಂದು ಗ್ರಾಮದಲ್ಲಿ ಕೆಲ ಸಮಾನ ಮನಸ್ಕ ರೈತರನ್ನು ಒಗ್ಗೂಡಿಸಿದ ಪಾಟೀಲರು, ದೇಶದ ಮೊದಲ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದರು. ಆ ಸಂಘ ದೇಶದ ಮೊದಲ ಸಹಕಾರ ಸಂಘ.
  • ಈಗ ಗದಗ ಜಿಲ್ಲೆಯಲ್ಲಿ ಸುಸ್ಥಿತಿಯಲ್ಲಿರುವ ಬ್ಯಾಂಕ್‌ಗಳೆಂದರೆ, ಗದಗದ ದಿ ಮರ್ಚೆಂಟ್ಸ್‌ ಲಿಬರಲ್‌ ಕೋ–ಆಪ್‌. ಬ್ಯಾಂಕ್‌, ದಿ ಮರ್ಚೆಂಟ್ಸ್‌ ಅರ್ಬನ್‌ ಕೋ–ಆಪ್‌ ಬ್ಯಾಂಕ್ ಮತ್ತು ಆಜಾದ ಕೋ ಆಪ್‌ ಬ್ಯಾಂಕ್‌. ಮತ್ತು ಗಜೇಂದ್ರಗಡದ ದಿ ಲಕ್ಷ್ಮೀ ಅರ್ಬನ್‌ ಕೋ–ಆಪ್‌ ಬ್ಯಾಂಕ್‌ ಲಿ., *ರೋಣ ತಾಲ್ಲೂಕು ಪ್ರೈಮರಿ ಟೀಚರ್ಸ್‌ ಕೋ–ಆಪ್‌ ಕ್ರೆಡಿಟ್‌ ಬ್ಯಾಂಕ್‌, ರೋಣ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌, ಶಿರಹಟ್ಟಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ನರಗುಂದ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌, ಮುಂಡರಗಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಹಾಗೂ ಗದಗ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌.

ಎಸ್. ಎಸ್ ಪಾಟೀಲ್ ಅವರನ್ನು ಭಾರತದ ಸಹಕಾರ ಪಿತಾಮಹ ಎಂದು ಕರೆಯುತ್ತಾರೆ.

ಸಹಕಾರಿ ತತ್ವ ಮತ್ತು ನಡವಳಿಕೆ

ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ --ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಶ್ರೇಷ್ಠ ತತ್ವದ ಬುನಾದಿಯ ಮೇಲೆ ಕಟ್ಟಿರುವುದು ಈ ಸಹಕಾರ ಕ್ಷೇತ್ರ.

  • ಪರಸ್ಪರ ಸಹಕಾರ, ನಂಬಿಕೆಯ ಅಮೂಲ್ಯ ತತ್ವಗಳ ಬುನಾದಿಯ ಮೇಲೆ ಅಸ್ತಿತ್ವಕ್ಕೆ ಬಂದ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್‌ಗಳು ಇಂದು ಆರ್ಥಿಕ ನಷ್ಟ ಅನುಭವಿಸಲು, ಕೆಲವೊಮ್ಮೆ ಪತನದ ಹಾದಿಯಲ್ಲಿ ಸಾಗಲು ಅವುಗಳ ಮೂಲ ರಚನೆಯ ಲೋಪವೇ ಕಾರಣ ಎನ್ನುತ್ತಾರೆ ಸಹಕಾರಿ ಧುರೀಣರು. ಯಾವುದೇ ಒಂದು ಸಹಕಾರ ಸಂಸ್ಥೆ ಅಸ್ತಿತ್ವಕ್ಕೆ ಬರಲು ಮೊದಲು ಸಹಕಾರ ಮನೋಭಾವದ ಸಮಾನ ಮನಸ್ಕರು ಒಂದೆಡೆ ಸೇರಿ ಅವರಲ್ಲೇ ಯೋಗ್ಯರಾದ ಒಬ್ಬರನ್ನು ಮುಖ್ಯ ಪ್ರವರ್ತಕರನ್ನಾಗಿ ನೇಮಿಸಬೇಕು.
  • ನಂತರ ಸಂಘದ ಧ್ಯೇಯ ಉದ್ದೇಶವನ್ನು ಸದಸ್ಯರಾಗುವ ಅರ್ಹತೆ ಇರುವವರಿಗೆ ತಿಳಿಸಿ, ಅಂತಹವರಿಂದ ಪ್ರಾಥಮಿಕ ಷೇರು ಸಂಗ್ರಹಿಸಬೇಕು. ಹೀಗೆ ಸಂಗ್ರಹಿಸಿದ ಷೇರು ಮೊತ್ತವನ್ನು ಸೂಚಿತ ಬ್ಯಾಂಕ್‌ನ ಅಮಾನತು ಖಾತೆಯಲ್ಲಿಡಬೇಕು. ನಂತರ ಸಂಸ್ಥೆಯನ್ನು ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಿಸಿ, ಎಲ್ಲ ಷೇರುದಾರರ ಸಾಮಾನ್ಯ ಸಭೆ ಕರೆದು ಅವರಲ್ಲೇ ಒಬ್ಬ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಡಳಿತ ಮಂಡಳಿಯ ಒಪ್ಪಿಗೆ ಪಡೆದು, ನಿತ್ಯದ ವ್ಯವಹಾರ ನೋಡಿಕೊಳ್ಳಲು ಒಬ್ಬ ಕಾರ್ಯದರ್ಶಿ ಅಥವಾ ಕಾರ್ಯನಿರ್ವಹಣಾಧಿಕಾರಿ ನೇಮಿಸಿಕೊಳ್ಳಬೇಕು. ಅಗತ್ಯವಿದ್ದರೆ ಇತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬಹುದು.
  • ಇದರ ರಚನೆ ನೊಂದಾವಣೆ ಮತ್ತು ಲೆಖ್ಖ ತನಿಖೆಗೆ ರಾಜ್ಯ ಮಟ್ಟದಲ್ಲಿ ರಿಜಿಸ್ಟ್ರಾರ್ ಆಫ್ ಕೋಆಪರೇಟಿವ್ ಸೊಸೈಟೀಸ್ ಇದ್ದಾರೆ. ಹಾಗೆಯೇ ಜಿಲ್ಲಾಮಟ್ಟದಲ್ಲೂ ರಿಜಿಸ್ಟ್ರಾರ್ ಆಫ್ ಕೋಆಪರೇಟಿವ್ ಸೊಸೈಟೀಸ್ ಇದ್ದಾರೆ. ತಾಲ್ಲೂಕು ಮಟ್ಟದಲ್ಲಿ ಅಸಿಸ್ಟಂಟ್ ರಿಜಿಸ್ಟ್ರಾರ್ ಆಫ್ ಕೋ ಆಪರೇಟಿವ್ ಸೊಸೈಟೀಸ್ ಇರುತ್ತಾರೆ.
  • ಕರ್ನಾಟಕ ಸರ್ಕಾರದಲ್ಲಿ ಸಹಕಾರ ಚಳುವಳಿಯ ಏಳಿಗೆ ವ್ಯವಹಾರಗಳನ್ನು ನೋಡಿಕೊಳ್ಳಲು ಸಹಕಾರ ಸಚಿವರು ಇರುತ್ತಾರೆ.

ಜಿಲ್ಲಾ ಮಟ್ಟದ ಮತ್ತು ಗ್ರಾಮೀಣ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳು

    ವ್ಯವಸಾಯ ಸೇವಾ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್‌ನ ತಾಯಿ ಬೇರು.
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವ್ಯವಸಾಯ ಸೇವಾ ಸಹಕಾರ ಸಂಘಗಳು) ಡಿಸಿಸಿ ಬ್ಯಾಂಕ್‌ನ ತಾಯಿ ಬೇರು. ಗ್ರಾಮೀಣ ಮಟ್ಟದಲ್ಲಿ ಕೃಷಿಕರು ಸೇರಿ ಷೇರು ಹಾಕುವ ಮೂಲಕ ರಚಿತವಾಗಿರುತ್ತದೆ. ಕೃಷಿಗೆ ಬೇಕಾದ ಸಾಲ, ಸೌಲಭ್ಯಗಳನ್ನು ನೇರವಾಗಿ ರೈತರಿಗೆ ವಿತರಿಸುವ ಕೆಲಸವನ್ನು ಈ ಸಹಕಾರ ಸಂಘಗಳು ಮಾಡುತ್ತವೆ. ನಿತ್ಯದ ವ್ಯವಹಾರ ನೋಡಿಕೊಳ್ಳಲು ಪ್ರತಿ ಸಂಘಕ್ಕೂ ಒಬ್ಬ ಕಾರ್ಯದರ್ಶಿ ಇರುತ್ತಾನೆ.

ಒಂದು ಜಿಲ್ಲೆಯ ಇಂತಹ ಎಲ್ಲ ಪ್ರಾಥಮಿಕ ಸಹಕಾರ ಸಂಘಗಳ ಸದಸ್ಯತ್ವದ ಒಟ್ಟು ರೂಪವೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌. ಅಂದರೆ, ವ್ಯಕ್ತಿಯೊಬ್ಬ ನೇರವಾಗಿ ಈ ಬ್ಯಾಂಕ್‌ನ ಸದಸ್ಯನಾಗುವಂತಿಲ್ಲ. ಪ್ರಾಥಮಿಕ ಸಂಘಗಳು ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರನ್ನು ಆಯ್ಕೆ ಮಾಡುತ್ತವೆ. ಆ ನಿರ್ದೇಶಕರಲ್ಲೇ ಒಬ್ಬ ಅಧ್ಯಕ್ಷ, ಉಪಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕರ್ನಾಟಕ ಸಹಕಾರ ಸೇವೆಯ ಅಧಿಕಾರಿ ಈ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ.

21 ಡಿಸಿಸಿ ಬ್ಯಾಂಕ್‌

  • ರಾಜ್ಯದಲ್ಲಿ ಒಟ್ಟು 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿವೆ. ಕೆಲವೆಡೆ ಜಿಲ್ಲೆಗೆ ಒಂದು ಬ್ಯಾಂಕ್‌ ಇದ್ದರೆ, ಇನ್ನೂ ಕೆಲವೆಡೆ ಎರಡು–ಮೂರು ಜಿಲ್ಲೆಗಳಿಗೆ ಒಂದೇ ಬ್ಯಾಂಕ್‌ ಇದೆ.
  • ರಾಯಚೂರು–ಕೊಪ್ಪಳ, ಧಾರವಾಡ–ಗದಗ–ಹಾವೇರಿ, ದಕ್ಷಿಣ ಕನ್ನಡ–ಉಡುಪಿ, ಬೆಂಗಳೂರು–ಚಿಕ್ಕಬಳ್ಳಾಪುರ–ರಾಮನಗರ, ಮೈಸೂರು–ಚಾಮರಾಜನಗರ. ಇಲ್ಲಿ ಜೋಡಿ ಜಿಲ್ಲೆ ಬ್ಯಾಂಕ್‌ ಇದೆ

ಯಶಸ್ವಿ ಸಹಕಾರಿ ಬ್ಯಾಂಕ್‌

  • ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳು ಲಾಭದಾಯಕವಾಗಿಲ್ಲ. ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ವಿಜಾಪುರ, ಬಳ್ಳಾರಿ ಸೇರಿದಂತೆ ಕೆಲ ಡಿಸಿಸಿ ಬ್ಯಾಂಕ್‌ಗಳು ಸಾಕಷ್ಟು ಪ್ರಗತಿ ಸಾಧಿಸಿವೆ.
  • ಧಾರವಾಡ ಹಾಗೂ ಕೋಲಾರ ಡಿಸಿಸಿ ಬ್ಯಾಂಕ್‌ಗಳು ನಷ್ಟದ ಹಾದಿಯಲ್ಲಿ ಸಾಗಿ, ಸದಸ್ಯರಿಗೆ ಷೇರು ಹಿಂದಿರುಗಿಸಲು ಆಗದ ಸ್ಥತಿಗೆ ತಲುಪಿದ್ದವು. ಸರ್ಕಾರ ಧಾರವಾಡ ಡಿಸಿಸಿ ಬ್ಯಾಂಕ್‌ ಚೇತರಿಕೆಗೆ ರೂ. 126.81 ಕೋಟಿ ಹಾಗೂ ಕೋಲಾರ ಡಿಸಿಸಿ ಬ್ಯಾಂಕ್‌ಗೆ ರೂ. 69.09ಕೋಟಿ ಬಿಡುಗಡೆ ಮಾಡಿತ್ತು. ಸದಸ್ಯ ಧಾರವಾಡ ಡಿಸಿಸಿ ಬ್ಯಾಂಕ್‌ ಮತ್ತೆ ಚೇತರಿಕೆಯ ಹಾದಿಯಲ್ಲಿ ಸಾಗಿದೆ.

ರಾಜ್ಯ ಅಪೆಕ್ಸ್‌ ಬ್ಯಾಂಕ್‌

  • 2014
  • ಎಲ್ಲ ಡಿಸಿಸಿ ಬ್ಯಾಂಕ್‌ಗಳ ಸದಸ್ಯತ್ವದ ರಾಜ್ಯ ಸಂಸ್ಥೆ ಅಪೆಕ್ಸ್‌ ಬ್ಯಾಂಕ್‌. ಜಿಲ್ಲಾ ಬ್ಯಾಂಕ್‌ಗಳು ಸಂಗ್ರಹಿಸುವ ಠೇವಣಿಯಲ್ಲಿ ಶೇ 30ರಷ್ಟು ಹಣವನ್ನು ಅಪೆಕ್ಸ್‌ ಬ್ಯಾಂಕ್‌ನಲ್ಲಿ ಮೀಸಲಿಡಲಾಗುತ್ತದೆ.
  • ಅಪೆಕ್ಸ್‌ ಬ್ಯಾಂಕ್‌ ತನ್ನ ಮೂಲನಿಧಿ ಹಾಗೂ ನಬಾರ್ಡ್‌ ನೀಡುವ ಹಣವನ್ನು ಡಿಸಿಸಿ ಬ್ಯಾಂಕ್‌ಗಳಿಗೆ ಹಂಚಿಕೆ ಮಾಡುತ್ತದೆ. ಡಿಸಿಸಿ ಬ್ಯಾಂಕ್‌ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ನೀಡುತ್ತವೆ. ಪ್ರಸ್ತುತ ಸಾಲಿನಲ್ಲಿ (2014–15) ಅಪೆಕ್ಸ್ ಬ್ಯಾಂಕ್‌ ನಬಾರ್ಡ್‌ನಿಂದ ದೊರೆತ ರೂ. 1,552 ಕೋಟಿ ಡಿಸಿಸಿ ಬ್ಯಾಂಕ್‌ಗಳಿಗೆ ನೀಡಿದ್ದು, ಒಟ್ಟು ರೂ. 10 ಸಾವಿರ ಕೋಟಿ ಸಾಲ ನೀಡುವ ಗುರಿ ಹೊಂದಿದೆ.

ರಾಜ್ಯದಲ್ಲಿನ 4,848 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ಗಳ ಮೂಲಕ ಹಣ ವಿತರಿಸಲಾಗುತ್ತದೆ. 2013–14ನೇ ಸಾಲಿನಲ್ಲಿ ರಾಜ್ಯದ 19.85 ಲಕ್ಷ ರೈತರಿಗೆ ರೂ. 7 ಸಾವಿರ ಕೋಟಿ ಅಲ್ಪಾವಧಿ ಮತ್ತು ಮಧ್ಯಾಮಾವಧಿ ಸಾಲ ವಿತರಿಸಲಾಗಿತ್ತು. ನಬಾರ್ಡ್‌ ರೂ. 4,025 ಕೋಟಿ ನೀಡಿತ್ತು.

  • 70 ಸಾವಿರಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ಸಹಕಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದು, ಅವುಗಳೂ ನೂರಾರು ಕೋಟಿ ಹಣಕಾಸಿನ ವಹಿವಾಟು ನಡೆಸುತ್ತಿವೆ. ನಗರ, ಪಟ್ಟಣ ಪ್ರದೇಶದಲ್ಲಿ 290 ಸಹಕಾರ ಬ್ಯಾಂಕ್‌ಗಳು ಹಾಗೂ 4 ಸಾವಿರ ಇತರ ಸಹಕಾರ ಸಂಘಗಳಿವೆ. ಇವುಗಳಲ್ಲಿ 28 ಮಹಿಳಾ ಸಹಕಾರ ಬ್ಯಾಂಕ್‌ಗಳೂ ಸೇರಿವೆ. ಈ ಬ್ಯಾಂಕ್‌ಗಳು ವಾರ್ಷಿಕ ರೂ. 50 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿವೆ.
  • ರಾಜ್ಯದ ಎಲ್ಲ ಸಹಕಾರ ಸಂಸ್ಥೆಗಳು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಕಾಯ್ದೆಯ ಅಡಿ ರಚಿತವಾಗಿವೆ. ಕಾಲಕಾಲಕ್ಕೆ ಕಾಯ್ದೆ ತಿದ್ದುಪಡಿಗೆ ಒಳಪಟ್ಟು ಪ್ರಸ್ತುತ ಹೊಸ ರೂಪ ಪಡೆದಿದೆ.

ಕೃಷಿ ಆಧಾರದ ಸಹಕಾರ ಬ್ಯಾಂಕ್‌ಗಳಲ್ಲದೇ ರಾಜ್ಯದಲ್ಲಿ ನೂರಾರು ವಿವಿಧ ರೂಪಗಳ ಸಹಕಾರ ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ. ಹಾಲು ಉತ್ಪಾದನೆ, ಗೃಹ ನಿರ್ಮಾಣ, ಕೈಗಾರಿಕೆ, ಸ್ಪಿನ್ನಿಂಗ್‌ ಮಿಲ್‌, ಸಕ್ಕರೆ ಕಾರ್ಖಾನೆ, ಮಾರುಕಟ್ಟೆ, ನೀರಾವರಿ, ಕೂಡುಬೇಸಾಯ, ಸಂಸ್ಕರಣ, ನೌಕರರು, ಬಳಕೆದಾರರು, ನಗರ ಸಹಕಾರ ಸಂಸ್ಥೆಗಳು ಸೇರಿದಂತೆ 38,430 ಸಹಕಾರ ಸಂಸ್ಥೆಗಳು, ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ.

  • ಇವುಗಳಲ್ಲಿ 2,364 ಸಂಘಗಳು ಬಾಗಿಲು ಮುಚ್ಚಿವೆ. 2,388 ಅವನತಿಯ ಹಾದಿಯಲ್ಲಿ ಸಾಗಿವೆ.

ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳಿಗೆ ಹೋಲಿಸಿದರೆ, ನಗರ ಪ್ರದೇಶದ ಸಂಘಗಳು ಹೆಚ್ಚು ಯಶಸ್ವಿಯಾಗಿವೆ. ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಹಕಾರ ಸಂಸ್ಥೆಗಳು ಹೆಚ್ಚಿನ ಯಶಸ್ಸು ಕಂಡಿವೆ. ಸಹಕಾರ ಸಕ್ಕರೆ ಕಾರ್ಖಾನೆಗಳು ಮಾತ್ರ ಬೆಳಗಾವಿ ಹೊರತುಪಡಿಸಿ ಉಳಿದೆಡೆ ಯಶಸ್ಸು ಕಂಡಿಲ್ಲ.

    ಕೈಗಾರಿಕಾ ಬ್ಯಾಂಕ್‌
  • ಕೈಗಾರಿಕಾ ಅಭಿವೃದ್ಧಿಗೆ ಸಾವಿರಾರು ಕೋಟಿ ಸಾಲ ಸೌಲಭ್ಯ ನೀಡುವ ಮೂಲಕ ರಾಜ್ಯದಲ್ಲಿ ಹೆಸರಾಗಿದ್ದ ಕೈಗಾರಿಕಾ ಸಹಕಾರ ಬ್ಯಾಂಕ್‌ ನಷ್ಟದ ಹಾದಿಯಲ್ಲಿ ಸಾಗಿ, ಇಂದು ಅವನತಿ ಕಂಡಿದೆ.

ಅವನತಿ/ನಷ್ಟದ ಪರಿಣಾಮ

  • ಯಾವುದೇ ಸಹಕಾರ ಬ್ಯಾಂಕ್‌ ಅವನತಿ ಬೆಳಕಿಗೆ ಬಂದ ತಕ್ಷಣ ಠೇವಣಿದಾರರು ಮೊದಲು ಆತಂಕಕ್ಕೆ ಒಳಗಾಗುತ್ತಾರೆ. ತಕ್ಷಣವೇ ಠೇವಣಿ ಖಾತೆಯಲ್ಲಿ ಇರಿಸಿದ ಹಣವನ್ನು ಹಿಂದಕ್ಕೆ ಪಡೆಯಲು ತೊಡಗುತ್ತಾರೆ. ಈ ಪ್ರಕ್ರಿಯೆ ಕೇವಲ ಹಗರಣ ನಡೆದ ಬ್ಯಾಂಕ್‌ಗೆ ಸೀಮಿತವಾಗುವುದಿಲ್ಲ. ಎಲ್ಲ ಸಹಕಾರ ಕ್ಷೇತ್ರದ ಮೇಲೂ ಅದು ಪರಿಣಾಮ ಬೀರುತ್ತದೆ. ಹೀಗೆ ಠೇವಣಿ ನಿರಂತರವಾಗಿ ಹಿಂತೆಗೆದರೆ ಬ್ಯಾಂಕ್‌ ಮುಳುಗಿಬಿಡುತ್ತದೆ. ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ ಹಗರಣ ಬೆಳಕಿಗೆ ಬಂದ ಒಂದು ತಿಂಗಳಲ್ಲೇ ಠೇವಣಿದಾರರು ರೂ. 90 ಕೋಟಿ ಠೇವಣಿ ಹಿಂದಕ್ಕೆ ಪಡೆದಿದ್ದಾರೆ. ಇದು ಸಹಕಾರ ಕ್ಷೇತ್ರಕ್ಕೆ ದೊಡ್ಡ ಪೆಟ್ಟು.

ಲೆಕ್ಕಪರಿಶೋಧನೆ

ಹಣ ದುರುಪಯೋಗ ಆಗದಂತೆ ತಡೆಯಲು ಸಹಕಾರ ಸಂಸ್ಥೆಯಲ್ಲಿ ನಿರಂತರ ಆಂತರಿಕ ಲೆಕ್ಕ ಪರಿಶೋಧನೆ ಮಾಡಬೇಕು. ವ್ಯವಹಾರದಲ್ಲಿ ವ್ಯತ್ಯಾಸ ಕಂಡುಬಂದರೆ ಮೊದಲು ಆಡಳಿತ ಮಂಡಳಿಯಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಬೇಕು. ಸಹಕಾರ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸಹಕಾರ ಸಂಸ್ಥೆ, ಬ್ಯಾಂಕ್‌ಗಳಿಗೆ ಅನೀರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಹಣ ದುರುಪಯೋಗ ಕಂಡು ಬಂದರೆ ಮೇಲಧಿಕಾರಿಗಳಿಗೆ, ಸಹಕಾರ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು.

ಶೇ 30ರಷ್ಟು ಠೇವಣಿ ಕಡ್ಡಾಯ

  • ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಯಮದಂತೆ ಬ್ಯಾಂಕ್‌ ಸ್ಥಾನಮಾನ ಹೊಂದುವ ಸಹಕಾರ ಸಂಘಗಳು ತಾವು ಸಂಗ್ರಹಿಸುವ ಠೇವಣಿಯಲ್ಲಿ ಶೇ 30ರಷ್ಟನ್ನು ಕಡ್ಡಾಯವಾಗಿ ಕೇಂದ್ರ ಬ್ಯಾಂಕ್‌ಗಳಲ್ಲಿ ಮೀಸಲು ನಿಧಿಯಾಗಿ ಇಡಬೇಕು.

ಅದರಲ್ಲಿ ಶಾಸನಾತ್ಮಕ ಸಮಾಪನಾ ಮೀಸಲು ಅನುಪಾತ (ಎಸ್‌ಎಲ್‌ಆರ್‌) ಶೇ 25 ಹಾಗೂ ನಗದು ಮೀಸಲು ಅನುಪಾತ (ಸಿಆರ್‌ಆರ್‌) ಶೇ 5 ಒಳಗೊಂಡಿರುತ್ತದೆ.

  • ಉದಾಹರಣೆ ಯಾವುದೇ ಒಂದು ಸಹಕಾರಿ ಬ್ಯಾಂಕ್‌ ಸಾರ್ವಜನಿಕರಿಂದ ರೂ. 100 ಕೋಟಿ ಸಂಗ್ರಹಿಸಿದರೆ ಅದರಲ್ಲಿ ರೂ. 30 ಕೋಟಿ ಹಣವನ್ನು ಕೇಂದ್ರ ಬ್ಯಾಂಕ್‌ನಲ್ಲಿ ಮೀಸಲು ನಿಧಿಯಾಗಿ ಇಡಬೇಕು. ಆ ಬ್ಯಾಂಕ್‌ನ ಠೇವಣಿ ರೂ. 9 ಕೋಟಿ ಕಡಿಮೆಯಾಯಿತು ಎಂದಿಟ್ಟುಕೊಳ್ಳಿ, ತಕ್ಷಣವೇ ಕೇಂದ್ರ ಬ್ಯಾಂಕ್‌ ರೂ. 3 ಕೋಟಿ ಹಿಂದಿರುಗಿಸುತ್ತದೆ. ರೂ. 30 ಕೋಟಿ ಹೆಚ್ಚಾಯಿತು ಎಂದರೆ ತಕ್ಷಣವೇ ಮತ್ತೆ ರೂ. 10 ಕೋಟಿಯನ್ನು ಕೇಂದ್ರ ಬ್ಯಾಂಕ್‌ಗೆ ಕಳುಹಿಸಬೇಕು.
  • ಒಂದು ವೇಳೆ ಬ್ಯಾಂಕ್‌ ನಷ್ಟದ ಹಾದಿ ಹಿಡಿದು ಸಮಾಪನಗೊಳ್ಳುವ ಪರಿಸ್ಥಿತಿ ಎದುರಾದರೆ ಠೇವಣಿದಾರರ ಹಾಗೂ ಷೇರುದಾರರ ಅಸಲು ಹಣಕ್ಕೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಆರ್‌ಬಿಐ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಡಿಸಿಸಿ ಬ್ಯಾಂಕಿನ ಮೂಲಗಳು

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವ್ಯವಸಾಯ ಸೇವಾ ಸಹಕಾರ ಸಂಘಗಳು) ಡಿಸಿಸಿ ಬ್ಯಾಂಕ್‌ನ ತಾಯಿ ಬೇರು. ಗ್ರಾಮೀಣ ಮಟ್ಟದಲ್ಲಿ ಕೃಷಿಕರು ಸೇರಿ ಷೇರು ಹಾಕುವ ಮೂಲಕ ರಚಿತವಾಗಿರುತ್ತದೆ. ಕೃಷಿಗೆ ಬೇಕಾದ ಸಾಲ, ಸೌಲಭ್ಯಗಳನ್ನು ನೇರವಾಗಿ ರೈತರಿಗೆ ವಿತರಿಸುವ ಕೆಲಸವನ್ನು ಈ ಸಹಕಾರ ಸಂಘಗಳು ಮಾಡುತ್ತವೆ. ನಿತ್ಯದ ವ್ಯವಹಾರ ನೋಡಿಕೊಳ್ಳಲು ಪ್ರತಿ ಸಂಘಕ್ಕೂ ಒಬ್ಬ ಕಾರ್ಯದರ್ಶಿ ಇರುತ್ತಾನೆ.
  • ಒಂದು ಜಿಲ್ಲೆಯ ಇಂತಹ ಎಲ್ಲ ಪ್ರಾಥಮಿಕ ಸಹಕಾರ ಸಂಘಗಳ ಸದಸ್ಯತ್ವದ ಒಟ್ಟು ರೂಪವೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌. ಅಂದರೆ, ವ್ಯಕ್ತಿಯೊಬ್ಬ ನೇರವಾಗಿ ಈ ಬ್ಯಾಂಕ್‌ನ ಸದಸ್ಯನಾಗುವಂತಿಲ್ಲ. ಪ್ರಾಥಮಿಕ ಸಂಘಗಳು ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರನ್ನು ಆಯ್ಕೆ ಮಾಡುತ್ತವೆ. ಆ ನಿರ್ದೇಶಕರಲ್ಲೇ ಒಬ್ಬ ಅಧ್ಯಕ್ಷ, ಉಪಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕರ್ನಾಟಕ ಸಹಕಾರ ಸೇವೆಯ ಅಧಿಕಾರಿ ಈ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ.

21 ಡಿಸಿಸಿ ಬ್ಯಾಂಕ್‌

  • ರಾಜ್ಯದಲ್ಲಿ ಒಟ್ಟು 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿವೆ. ಕೆಲವೆಡೆ ಜಿಲ್ಲೆಗೆ ಒಂದು ಬ್ಯಾಂಕ್‌ ಇದ್ದರೆ, ಇನ್ನೂ ಕೆಲವೆಡೆ ಎರಡು–ಮೂರು ಜಿಲ್ಲೆಗಳಿಗೆ ಒಂದೇ ಬ್ಯಾಂಕ್‌ ಇದೆ.

ಜೋಡಿ ಜಿಲ್ಲೆ ಬ್ಯಾಂಕ್‌

  • ರಾಯಚೂರು–ಕೊಪ್ಪಳ, ಧಾರವಾಡ–ಗದಗ–ಹಾವೇರಿ, ದಕ್ಷಿಣ ಕನ್ನಡ–ಉಡುಪಿ, ಬೆಂಗಳೂರು–ಚಿಕ್ಕಬಳ್ಳಾಪುರ–ರಾಮನಗರ, ಮೈಸೂರು–ಚಾಮರಾಜನಗರ.

ರಾಜ್ಯದ ವಿವಿಧೆಡೆಯ ಪರಿಸ್ಥಿತಿ

    ರಾಜ್ಯಕ್ಕೆ ಮಾದರಿ–ಕರಾವಳಿ 2014
  • ಸಹಕಾರ ಚಳವಳಿಯ ಹುಟ್ಟು, ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಕೊಟ್ಟ ಮಹತ್ವಕ್ಕಿಂತಲೂ ಹೆಚ್ಚಿನ ಮಹತ್ವವನ್ನು ಸಹಕಾರಿ ಬ್ಯಾಂಕ್‌ಗಳಿಗೆ ನೀಡುತ್ತಿವೆ. ಇಲ್ಲಿನ ಡಿಸಿಸಿ ಬ್ಯಾಂಕ್‌, ಪಿಎಲ್‌ಡಿ ಬ್ಯಾಂಕ್‌, ಪಟ್ಟಣ ಸಹಕಾರಿ ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಠೇವಣಿ ಹೂಡುವುದಕ್ಕೆ ಜನ ಮುಗಿಬೀಳುವುದನ್ನು ಕಂಡಾಗ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರ ಎಷ್ಟರ ಮಟ್ಟಿಗೆ ಜನರ ಮನಸ್ಸು ತಟ್ಟಿದೆ ಎಂಬುದು ಗೊತ್ತಾಗುತ್ತದೆ. ಬಜ್ಪೆಯ ಸಹಕಾರಿ ಸಂಘ ಕಳೆದ ಹಣಕಾಸು ವರ್ಷದಲ್ಲಿ ರೂ. 6 ಕೋಟಿ ನಿವ್ವಳ ಲಾಭ ಗಳಿಸಿದೆ. ಎರಡೂ ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ಸಹಕಾರಿ ಬ್ಯಾಂಕ್‌ಗಳು ಮತ್ತು ಸೊಸೈಟಿಗಳಲ್ಲಿ ಸಾಲ ವಸೂಲಿಯೂ ಸಮರ್ಪಕವಾಗಿ ನಡೆಯುತ್ತಿದೆ.
  • ಹೀಗಾಗಿ ಸಹಕಾರಿ ಬ್ಯಾಂಕ್‌ ಮತ್ತು ಸಂಘಗಳು ಕರಾವಳಿಯಲ್ಲಿ ವ್ಯವಸ್ಥಿತವಾಗಿಯೇ ನಡೆಯುತ್ತಿವೆ ಎಂದು ಹೇಳಬಹುದು. ಆದರೆ ಇದೇ ಸ್ಥಿತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಲ್ಲ. ಅಲ್ಲಿನ 528 ಸಹಕಾರಿ ಬ್ಯಾಂಕ್‌ಗಳು ಮತ್ತು ಸಂಘಗಳ ಪೈಕಿ 219 ನಷ್ಟದಲ್ಲಿವೆ. 284 ಲಾಭದಲ್ಲಿದ್ದರೆ, 25 ಸಂಘಗಳು ಲಾಭದಲ್ಲೂ ಇಲ್ಲ, ನಷ್ಟದಲ್ಲೂ ಇಲ್ಲ. 37 ಸಂಘಗಳು ಸ್ಥಗಿತಗೊಂಡಿದ್ದರೆ, 23 ಸಮಾಪನೆಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 814 ಬ್ಯಾಂಕ್‌ ಮತ್ತು ಸಂಘಗಳ ಪೈಕಿ 659 ಲಾಭದಲ್ಲಿವೆ, 132 ನಷ್ಟದಲ್ಲಿವೆ. 23 ಸಂಘಗಳು ಲಾಭದಲ್ಲೂ ಇಲ್ಲ; ನಷ್ಟದಲ್ಲೂ ಇಲ್ಲ. 19 ಸ್ಥಗಿತಗೊಂಡಿವೆ, 19 ಸಮಾಪನೆಗೊಂಡಿವೆ. ಉಡುಪಿಯಲ್ಲಿ 607ರಲ್ಲಿ 543 ಲಾಭದಲ್ಲಿವೆ, 64 ನಷ್ಟದಲ್ಲಿವೆ. 3 ಸ್ಥಗಿತಗೊಂಡಿದ್ದರೆ, 21 ಸಮಾಪನೆಗೊಂಡಿವೆ.
  • ಕರಾವಳಿಯಲ್ಲೂ ವಂಚಕರೇ ಇಲ್ಲ ಎಂದಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ಸಹಕಾರ ಸಂಘಗಳಲ್ಲಿ ಹಣ ದುರುಪಯೋಗದ 160 ಪ್ರಕರಣಗಳು ಪತ್ತೆಯಾಗಿವೆ. ಇಷ್ಟಾಗಿಯೂ ಜನಸಾಮಾನ್ಯರು ಸಹಕಾರಿ ಸಂಘಗಳಲ್ಲಿ ಇಟ್ಟಿರುವ ವಿಶ್ವಾಸ ಕುಂದಿಲ್ಲ. ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ವಂಚನೆ ಪ್ರಕರಣ ಬಯಲಿಗೆ ಬಂದ ಮೇಲೂ, ಕರಾವಳಿ ಭಾಗದಲ್ಲಿ ಸಹಕಾರಿ ಸಂಘಗಳಿಂದ ಹಣ ಹಿಂಪಡೆಯುವ ಧಾವಂತವೇನೂ ಕಂಡು ಬಂದಿಲ್ಲ.
    ‘ನಂಬಿಕೆಯೇ ಬುನಾದಿ’

ಸಹಕಾರ ರಂಗದಲ್ಲಿ ಅಧಿಕಾರದ ಕುರ್ಚಿ ಮೇಲೆ ಕೂತವರು ಪ್ರತಿ ಕ್ಷಣವೂ ಆ ಸಂಸ್ಥೆಯ ಅಭಿವೃ ದ್ಧಿಯ ಬಗ್ಗೆ ಚಿಂತಿಸಬೇಕು. ಎಂತಹ ಸಂದರ್ಭದಲ್ಲೂ ಸ್ವಾರ್ಥ ಕ್ಕೆ ಅವಕಾಶ ನೀಡಬಾರದು. ಸಮಗ್ರ ದೃಷ್ಟಿಯ ಇಚ್ಛಾಶಕ್ತಿ ಇರಬೇಕು.

  • ನಂಬಿಕೆ ವಿಶ್ವಾಸದ ಮೇಲೆ ಎಲ್ಲ ಸಹಕಾರ ಸಂಸ್ಥೆಗಳ ಭವಿಷ್ಯ ನಿಂತಿರುತ್ತದೆ. ನಂಬಿಕೆಯೇ ಸಹಕಾರ ಕ್ಷೇತ್ರದ ಬುನಾದಿ. ಅದನ್ನು ಹಾಳು ಮಾಡಿದರೆ ಆ ಸಂಸ್ಥೆ ಅವಸಾನದತ್ತ ಸಾಗಿತೆಂದೇ ಅರ್ಥ.
    ಹೂಡಿಕೆ ಕಡಿಮೆ, ವಿವಾದ ಇಲ್ಲ’
  • ಕೊಪ್ಪಳ ಜಿಲ್ಲೆಯ ಸಹಕಾರ ಬ್ಯಾಂಕ್‌ಗಳು ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ವ್ಯಾಪ್ತಿಗೊಳಪಟ್ಟಿವೆ.

ಜಿಲ್ಲೆಯಲ್ಲಿ ಒಟ್ಟು 670 ಸಹಕಾರ ಸಂಘಗಳಿವೆ. ಅವುಗಳಲ್ಲಿ 529 ಕಾರ್ಯನಿರತವಾಗಿವೆ. 99 ಸ್ಥಗಿತಗೊಂಡಿವೆ. 42 ಬ್ಯಾಂಕ್‌ಗಳು ಕೆಲವು ವರ್ಷಗಳ ಹಿಂದೆಯೇ ಸಮಾಪನಗೊಂಡಿವೆ.

  • 102 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಐದು ಅರ್ಬನ್‌ ಬ್ಯಾಂಕ್‌ಗಳೂ ಇವೆ. ಏಳು ಸಹಕಾರ ಬ್ಯಾಂಕ್‌ಗಳಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ ಆರ್ಥಿಕ ನೆರವು ನೀಡುತ್ತಿದೆ. ಸದ್ಯ ಯಾವುದೇ ಬ್ಯಾಂಕ್‌ ವಿವಾದದಲ್ಲಿಲ್ಲ. ದೊಡ್ಡ ಹಗರಣಗಳೂ ನಡೆದಿಲ್ಲ. ಜಿಲ್ಲೆಯಲ್ಲಿ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರೂ ಕಡಿಮೆ. ಹಾಗಾಗಿ ಲಾಭ ಗಳಿಕೆಯತ್ತ ಚಿತ್ತ ಹರಿಸುವ ಮಂದಿಯೂ ಕಡಿಮೆ. ಹಾಗೆಂದು ಎಲ್ಲವೂ ಸರಿಯಿದೆ ಎಂದಲ್ಲ. ಸಣ್ಣಪುಟ್ಟ ಲೋಪಗಳೂ ಇವೆ. ಅವುಗಳನ್ನು ಲೆಕ್ಕ ಪರಿಶೋಧನೆ ವೇಳೆ ಪರಿಶೀಲಿಸಿ ಬಗೆಹರಿಸಲು ಆಯಾ ಬ್ಯಾಂಕ್‌ನ ಆಡಳಿತ ಮಂಡಳಿಗೆ ಸೂಚಿಸಲಾಗುತ್ತದೆ ಎನ್ನುತ್ತಾರೆ ಸಹಕಾರ ಸಂಘಗಳ ಉಪನಿಬಂಧಕರು.
  • ಸುಮಾರು 2,364 ಸಹಕಾರಿ ಸಂಸ್ಥೆಗಳು ಬಾಗಿಲು ಮುಚ್ಚಿವೆ ; 2,388 ಅವನತಿಯ ಹಾದಿಯಲ್ಲಿ ಸಾಗಿವೆ. ಮುಚ್ಚಿದ ಅವುಗಳಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘವು -೧೯೬ 196; ಪತ್ತಿನ ಸಹಕಾರ ಸಂಘಗಳು -೧೪೦/140 ;ಹಾಲು ಉತ್ಪಾದಕರ ಸಹಕಾರ ಸಂಘ ೪೩೧/430 ; ಗೃಹ ನಿರ್ಮಾಣ ಸಹಕಾರ ಸಂಘ -೨೫೦ /250ಇವೆ .

ಅವನತಿಗೆ ಕಾರಣಗಳು

    ಸಾಲದಲ್ಲೂ ನಿಯಮ ಉಲ್ಲಂಘನೆ
  • ಯಾವ ಪ್ರಕಾರದ ಸಾಲ ಗರಿಷ್ಠ ಎಷ್ಟು ಪ್ರಮಾಣದಲ್ಲಿರಬೇಕು ಎನ್ನುವುದನ್ನು ಬ್ಯಾಂಕ್‌ನ ಸ್ಥಿತಿಗತಿ ಅವಲಂಭಿಸಿ, ಸ್ಥಳೀಯ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿಗದಿ ಮಾಡಲಾಗಿರುತ್ತದೆ.
  • ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಬಂಗಾರದ ಅಡಮಾನ ಸಾಲವನ್ನು ಒಬ್ಬ ವ್ಯಕ್ತಿಗೆ ಗರಿಷ್ಠ ರೂ. 5 ಲಕ್ಷಕ್ಕೆ ನಿಗದಿ ಮಾಡಿದೆ. ಆದರೆ, ಬ್ಯಾಂಕ್‌ ವ್ಯವಸ್ಥಾಪಕ ನಿಯಮ ಮೀರಿ ಒಬ್ಬರಿಗೆ ರೂ. 15 ಲಕ್ಷದವರೆಗೂ ಸಾಲ ನೀಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
    ಇದೊಂದೇ ಬ್ಯಾಂಕ್‌ ಅಲ್ಲ.

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಹಗರಣ ಈಚೆಗೆ ಬಹಳ ಸುದ್ದಿ ಮಾಡಿದೆ. ಅದು ಸದ್ಯದ ಒಂದು ಉದಾಹರಣೆ ಅಷ್ಟೇ. ಡಿಸಿಸಿ ಬ್ಯಾಂಕ್‌ನಂತಹ ಎಷ್ಟೋ ಸಹಕಾರ ಬ್ಯಾಂಕ್‌ಗಳು, ಸೊಸೈಟಿಗಳು ಹೀಗೆ ನಿಯಮ ಉಲ್ಲಂಘಿಸಿ, ಬೇಕಾಬಿಟ್ಟಿ ಸಾಲ ನೀಡಿದ, ಹಣ ದುರುಪಯೋಗ ಪಡಿಸಿಕೊಂಡ ಪರಿಣಾಮ ನಷ್ಟದ ಹಾದಿ ಹಿಡಿದಿವೆ. ಕೆಲವು ಶಾಶ್ವತವಾಗಿ ಸಮಾಪನೆ (ಲಿಕ್ವಿಡೇಷನ್‌) ಆಗಿವೆ. ಎಷ್ಟೊ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳ ಆಸ್ತಿ ಮಾರಿ ಗ್ರಾಹಕರ ಅಲ್ಪಸ್ವಲ್ಪ ಹಣ ಹಿಂದಿರುಗಿಸಲಾಗಿದೆ.

ಯಶಸ್ವಿ ಬ್ಯಾಂಕ್‌ನ ಸೂತ್ರಗಳು

ಯಾವುದೇ ಸಹಕಾರ ಬ್ಯಾಂಕ್‌ ಯಶಸ್ವಿಯಾಗಲು ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಈ ನಿಯಮ ಪಾಲಿಸಬೇಕು

  • ಪಾರದರ್ಶಕ ವ್ಯವಹಾರ
  • ಗ್ರಾಹಕರ ಸಂಪೂರ್ಣ ಮಾಹಿತಿ ಸಂಗ್ರಹ
  • ಸಾಲಗಾರನ ಮರುಪಾವತಿ ಸಾಮರ್ಥ್ಯ
  • ನೌಕರರ ಕುಟುಂಬ, ಬೇನಾಮಿ ಸಾಲಕ್ಕೆ ಕಡಿವಾಣ
  • ವ್ಯವಹಾರ ಪ್ರಕ್ರಿಯೆಯಲ್ಲಿ ನಿಯಮಗಳಿಗೆ ಮನ್ನಣೆ
  • ಉತ್ತಮ ಮೇಲುಸ್ತುವಾರಿ
  • ಸಾಲ ವಸೂಲಾತಿ ಬಿಗಿ ಕ್ರಮ
  • ಅನುಪಯುಕ್ತ ವೆಚ್ಚಕ್ಕೆ ಕಡಿವಾಣ
  • ಬೇನಾಮಿ ಸಾಲದ ಬಗ್ಗೆ ಕಣ್ಗಾವಲು
  • ನಿರಂತರ ಆಂತರಿಕ ಲೆಕ್ಕ ಪರಿಶೋಧನೆ
  • ಲೆಕ್ಕ ಪರಿಶೋಧಕರ ಸಲಹೆಗೆ ಆದ್ಯತೆ

ಸಹಕಾರ ಸಂಘ–ಸಹಕಾರ ಬ್ಯಾಂಕ್‌

  • ಕ್ಷೇತ್ರ, ವ್ಯಾಪ್ತಿಯ ಆಧಾರದಲ್ಲಿ ನಿಗದಿಯಾದ ಪ್ರಮಾಣದ ಷೇರು ಸಂಗ್ರಹಿಸಿ ಆರಂಭವಾಗುವ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದುತ್ತಾ ಭಾರತೀಯ ರಸರ್ವ್‌ ಬ್ಯಾಂಕ್‌ ನಿಗದಿ ಪಡಿಸಿದ ಷೇರು ಹಾಗೂ ಠೇವಣಿ ಸಂಗ್ರಹಿಸಿದರೆ ಅಂತಹ ಸಂಘ ಬ್ಯಾಂಕ್ ಸ್ಥಾನಮಾನ ಪಡೆಯುತ್ತದೆ.
  • ಪ್ರಸ್ತುತ ಆರ್‌ಬಿಐ ನಿಯಮದ ಪ್ರಕಾರ ಯಾವುದೇ ಸಂಘ ಬ್ಯಾಂಕ್‌ ಸ್ಥಾನಮಾನ ಪಡೆಯ ಬೇಕಾದರೆ ರೂ. 25 ಕೋಟಿ ಷೇರು ಬಂಡವಾಳ, ರೂ. 100 ಕೋಟಿ ಠೇವಣಿ ಹೊಂದಿರಬೇಕು. ಆರ್‌ಬಿಐನ ಈ ನಿಯಮ ಪ್ರತಿವರ್ಷ ಬದಲಾಗುತ್ತಿರುತ್ತದೆ.
    ರೈತರೇ ನಿಮಗಿದು ತಿಳಿದಿರಲಿ..
  • ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂದು ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದು, ರೈತರು ಸ್ಥಳೀಯ ಬ್ಯಾಂಕ್‌, ಪತ್ತಿನ ಸಹಕಾರ ಸಂಘಗಳ ಮೂಲಕ ಮಾಡುವ ಕೃಷಿ ಸಾಲದ ಬಡ್ಡಿಯನ್ನು ಗಣನೀಯವಾಗಿ ಕಡಿಮೆ ಮಾಡಿವೆ.
  • ಇಂದು ರೈತರಿಗೆ ರೂ. 3 ಲಕ್ಷದವರೆಗೂ ಬಡ್ಡಿ ರಹಿತ ಕೃಷಿ ಸಾಲ ನೀಡಲಾಗುತ್ತಿದೆ. ಸಾಲ ಮರುಪಾವತಿಯ ಅವಧಿ ಒಂದು ವರ್ಷ. ಒಂದು ವರ್ಷದ ಅವಧಿಗೂ ಮೊದಲೇ ಸಾಲ ಮರುಪಾವತಿ ಮಾಡಿದರೆ ಅಂತಹ ರೈತರಿಗೆ ಪಡೆದಿದ್ದ ಸಾಲದ ಶೇ 3ರಷ್ಟು ಹಣವನ್ನು ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ.
  • ಉದಾಹರಣೆಗೆ ಒಬ್ಬ ರೈತ 2014ರ ಆ. 13ರಂದು ರೂ. 3 ಲಕ್ಷ ಸಾಲ ಪಡೆದರೆ, ತೀರುವಳಿ ಅವಧಿ 2015ರ ಆ. 12ರವರೆಗೆ ಇರುತ್ತದೆ. ಈ ಅವಧಿ ಮುಗಿಯುವುದರೊಳಗೇ ಸಾಲ ಹಿಂದಿರುಗಿಸಿದರೆ ಆ ರೈತನಿಗೆ ರೂ. 9 ಸಾವಿರ ಪ್ರೋತ್ಸಾಹಧನ ಸಿಗುತ್ತದೆ. ಆದರೆ, ರಾಜ್ಯದ ಬಹುತೇಕ ರೈತರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂಬುದು ವಿಪರ್ಯಾಸ.

ಕರ್ನಾಟಕ ರಾಜ್ಯದಲ್ಲಿರುವ ಸಹಕಾರಿ ಸಂಘಗಳು

    ಕರ್ನಾಟಕ ರಾಜ್ಯದಲ್ಲಿರುವ ಸಹಕಾರಿ ಸಂಘಗಳು
    -1-8-2014
  • ಬಹುರಾಜ್ಯ ವ್ಯಾಪ್ತಿಯ ಸಂಘಗಳು -14
  • ರಾಜ್ಯ ವ್ಯಾಪ್ತಿಯ ಸಂಘಗಳು -142
  • ಜಿಲ್ಲೆಯಿಂದಾಚೆ ರಾಜ್ಯದ ಒಳಗೆ ಇರುವ ಸಂಘಗಳು -390
  • ಜಿಲ್ಲಾ ವ್ಯಾಪ್ತಿಯ ಸಂಘಗಳು--630
  • ತಾಲ್ಲೂಕಿನ ಆಚೆ ಜಿಲ್ಲೆಯಲ್ಲಿರುವ ಸಂಘಗಳು -1106
  • ತಾಲ್ಲೂಕು ವ್ಯಾಪ್ತಿಯ ಸಂಘಗಳು -2449
  • ತಾಲ್ಲೂಕು ವ್ಯಾಪ್ತಿಯ ಒಳಗೆ -33,699
    ಒಟ್ಟು- ಎಲ್ಲಾ ಬಗೆಯ ಸಹಕಾರಿ ಸಂಘಗಳು--38,430
  • ಸಹಕಾರಸಂಘಗಳ ಸ್ಥಿತಿ ಗತಿ:
  • ಲಾಭದಲ್ಲಿರುವ ಸಂಘಗಳು -21,592
  • ನಷ್ಟದಲ್ಲಿರುವ ಸಂಘಗಳು -12,299
  • ಲಾಭ ನಷ್ಟ ವಿಲ್ಲದ ಸಂಘಗಳು -4539

ಹಗರಣ ಆಗಸ್ಟ್ ೨೦೧೪

  • ರಾಜ್ಯದಲ್ಲೇ ಅತ್ಯುತ್ತಮ ಸಹಕಾರ ಬ್ಯಾಂಕ್‌ ಎಂದು ಪ್ರಶಸ್ತಿ, ಪುರಸ್ಕಾರ ಪಡೆದಿದ್ದ, ಶಿವಮೊಗ್ಗ ಜಿಲ್ಲೆಯ ಜನರ ನಂಬಿಕೆಯ ಬ್ಯಾಂಕ್‌ ಎಂಬ ಹೆಗ್ಗಳಿಕೆ ಗಳಿಸಿದ್ದ, ರೂ. 1,000 ಕೋಟಿ ವಹಿವಾಟು ಹೊಂದಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್‌) ಹಗರಣದಲ್ಲಿ ಸಿಲುಕಿದೆ. ಈಗ ಜನರು ಸಹಕಾರ ಕ್ಷೇತ್ರವನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.ಡಿಸಿಸಿ ಬ್ಯಾಂಕ್‌ನಲ್ಲಿ ಪೂರ್ತಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಬಂಗಾರದ ಅಡಮಾನ ಸಾಲದ ವ್ಯವಸ್ಥೆಯಲ್ಲಿ ಎಂದು ಪ್ರಕರಣದ ಬೆನ್ನು ಹತ್ತಿದ ಜಿಲ್ಲಾ ಅಪರಾಧ ತನಿಖಾ ತಂಡ ಅಭಿಪ್ರಾಯ ಪಟ್ಟಿದೆ.
  • ಡಿಸಿಸಿ ಬ್ಯಾಂಕ್‌ನ ಅಮೀರ್‌ ಅಹಮದ್‌ ವೃತ್ತದಲ್ಲಿರುವ ನಗರ ಶಾಖೆಯಲ್ಲಿ ಇತ್ತೀಚೆಗೆ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ರೂ. 1.79 ಕೋಟಿ ವ್ಯತ್ಯಾಸ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಇನ್ನಷ್ಟು ಪರಿಶೋಧನೆ ನಡೆಸಿದ ಕೇಂದ್ರ ಕಚೇರಿಯ ಅಧಿಕಾರಿಗಳಿಗೆ ಅವ್ಯವಹಾರದ ವಾಸನೆ ಬಡಿದಿತ್ತು. ಕೂಡಲೇ ಸಿಬ್ಬಂದಿ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಜಿಲ್ಲಾ ಅಪರಾಧ ತನಿಖಾ ತಂಡ ರೂ. 62.77 ಕೋಟಿ ಹಣ ದುರ್ಬಳಕೆ ಆಗಿರುವುದನ್ನು ದೃಢಪಡಿಸಿದೆ.
  • ಯಾವ ಪ್ರಕಾರದ ಸಾಲ ಗರಿಷ್ಠ ಎಷ್ಟು ಪ್ರಮಾಣದಲ್ಲಿರಬೇಕು ಎನ್ನುವುದನ್ನು ಬ್ಯಾಂಕ್‌ನ ಸ್ಥಿತಿಗತಿ ಅವಲಂಭಿಸಿ, ಸ್ಥಳೀಯ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿಗದಿ ಮಾಡಲಾಗಿರುತ್ತದೆ.
  • ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಬಂಗಾರದ ಅಡಮಾನ ಸಾಲವನ್ನು ಒಬ್ಬ ವ್ಯಕ್ತಿಗೆ ಗರಿಷ್ಠ ರೂ. 5 ಲಕ್ಷಕ್ಕೆ ನಿಗದಿ ಮಾಡಿದೆ. ಆದರೆ, ಬ್ಯಾಂಕ್‌ ನಿಯಮ ಮೀರಿ ಒಬ್ಬರಿಗೆ ರೂ. 15 ಲಕ್ಷದವರೆಗೂ ಸಾಲ ನೀಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದೊಂದೇ ಬ್ಯಾಂಕ್‌ ಕತೆಯಲ್ಲ.
  • ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಹಗರಣ ಸದ್ಯದ ಒಂದು ಉದಾಹರಣೆ ಅಷ್ಟೇ. ಡಿಸಿಸಿ ಬ್ಯಾಂಕ್‌ನಂತಹ ಎಷ್ಟೋ ಸಹಕಾರ ಬ್ಯಾಂಕ್‌ಗಳು, ಸೊಸೈಟಿಗಳು ಹೀಗೆ ನಿಯಮ ಉಲ್ಲಂಘಿಸಿ, ಬೇಕಾಬಿಟ್ಟಿ ಸಾಲ ನೀಡಿದ, ಹಣ ದುರುಪಯೋಗ ಪಡಿಸಿಕೊಂಡ ಪರಿಣಾಮ ನಷ್ಟದ ಹಾದಿ ಹಿಡಿದಿವೆ. ಕೆಲವು ಶಾಶ್ವತವಾಗಿ ಸಮಾಪನೆ (ಲಿಕ್ವಿಡೇಷನ್‌) ಆಗಿವೆ. ಎಷ್ಟೊ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳ ಆಸ್ತಿ ಮಾರಿ ಗ್ರಾಹಕರ ಅಲ್ಪಸ್ವಲ್ಪ ಹಣ ಹಿಂದಿರುಗಿಸಲಾಗಿದೆ.

ನೋಡಿ

ಆಧಾರ

ಕರ್ನಾಟಕ ಅಪೆಕ್ಸಬ್ಯಾಂಕ್ - ಅಧಿಕೃತ ತಾಣ-[೧] Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.

  • ಚಂದ್ರಹಾಸ ಹಿರೇಮಳಲಿ ಮತ್ತು–ಎನ್‌.ಎಂ.ಜೆ.ಬಿ.ಆರಾಧ್ಯ .ಅಧ್ಯಕ್ಷ, ದಾವಣಗೆರೆ–ಹರಿಹರ ಅರ್ಬನ್‌ ಬ್ಯಾಂಕ್‌ ;Wed, 08/13/20-ಪ್ರಜಾವಾಣಿ-www.prajavani.net

Tags:

ಕರ್ನಾಟಕದಲ್ಲಿ ಸಹಕಾರ ಚಳವಳಿ ಭಾರತದಲ್ಲಿ ಸಹಕಾರ ಸಂಘಗಳ ಆರಂಭಕರ್ನಾಟಕದಲ್ಲಿ ಸಹಕಾರ ಚಳವಳಿ ಕರ್ನಾಟಕದಲ್ಲಿ ಸಹಕಾರ ಸಂಘಗಳ ರಚನೆಕರ್ನಾಟಕದಲ್ಲಿ ಸಹಕಾರ ಚಳವಳಿ ಕರ್ನಾಟಕದ ಮೊದಲ ಸಹಕಾರ ಸಂಘಕರ್ನಾಟಕದಲ್ಲಿ ಸಹಕಾರ ಚಳವಳಿ ಸಹಕಾರಿ ತತ್ವ ಮತ್ತು ನಡವಳಿಕೆಕರ್ನಾಟಕದಲ್ಲಿ ಸಹಕಾರ ಚಳವಳಿ ಜಿಲ್ಲಾ ಮಟ್ಟದ ಮತ್ತು ಗ್ರಾಮೀಣ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳುಕರ್ನಾಟಕದಲ್ಲಿ ಸಹಕಾರ ಚಳವಳಿ ರಾಜ್ಯ ಅಪೆಕ್ಸ್‌ ಬ್ಯಾಂಕ್‌ಕರ್ನಾಟಕದಲ್ಲಿ ಸಹಕಾರ ಚಳವಳಿ ಲೆಕ್ಕಪರಿಶೋಧನೆಕರ್ನಾಟಕದಲ್ಲಿ ಸಹಕಾರ ಚಳವಳಿ ಶೇ 30ರಷ್ಟು ಠೇವಣಿ ಕಡ್ಡಾಯಕರ್ನಾಟಕದಲ್ಲಿ ಸಹಕಾರ ಚಳವಳಿ ಡಿಸಿಸಿ ಬ್ಯಾಂಕಿನ ಮೂಲಗಳುಕರ್ನಾಟಕದಲ್ಲಿ ಸಹಕಾರ ಚಳವಳಿ ರಾಜ್ಯದ ವಿವಿಧೆಡೆಯ ಪರಿಸ್ಥಿತಿಕರ್ನಾಟಕದಲ್ಲಿ ಸಹಕಾರ ಚಳವಳಿ ಅವನತಿಗೆ ಕಾರಣಗಳುಕರ್ನಾಟಕದಲ್ಲಿ ಸಹಕಾರ ಚಳವಳಿ ಯಶಸ್ವಿ ಬ್ಯಾಂಕ್‌ನ ಸೂತ್ರಗಳುಕರ್ನಾಟಕದಲ್ಲಿ ಸಹಕಾರ ಚಳವಳಿ ಸಹಕಾರ ಸಂಘ–ಸಹಕಾರ ಬ್ಯಾಂಕ್‌ಕರ್ನಾಟಕದಲ್ಲಿ ಸಹಕಾರ ಚಳವಳಿ ಕರ್ನಾಟಕ ರಾಜ್ಯದಲ್ಲಿರುವ ಸಹಕಾರಿ ಸಂಘಗಳುಕರ್ನಾಟಕದಲ್ಲಿ ಸಹಕಾರ ಚಳವಳಿ ಹಗರಣ ಆಗಸ್ಟ್ ೨೦೧೪ಕರ್ನಾಟಕದಲ್ಲಿ ಸಹಕಾರ ಚಳವಳಿ ನೋಡಿಕರ್ನಾಟಕದಲ್ಲಿ ಸಹಕಾರ ಚಳವಳಿ ಆಧಾರಕರ್ನಾಟಕದಲ್ಲಿ ಸಹಕಾರ ಚಳವಳಿ

🔥 Trending searches on Wiki ಕನ್ನಡ:

ಅವರ್ಗೀಯ ವ್ಯಂಜನಮಧ್ವಾಚಾರ್ಯಕನ್ನಡದಲ್ಲಿ ಮಹಿಳಾ ಸಾಹಿತ್ಯನೈಸರ್ಗಿಕ ಸಂಪನ್ಮೂಲಸ್ತ್ರೀತಿಂಗಳುಇಸ್ಲಾಂ ಧರ್ಮಬಾದಾಮಿ ಶಾಸನಭಾರತದ ವಾಯುಗುಣಕರ್ನಾಟಕದ ಅಣೆಕಟ್ಟುಗಳುಕವನಸಾವಿತ್ರಿಬಾಯಿ ಫುಲೆಸಂಖ್ಯಾಶಾಸ್ತ್ರಭಾರತದ ಮುಖ್ಯ ನ್ಯಾಯಾಧೀಶರುಆದಿಪುರಾಣಏಷ್ಯಾಬಿ. ಎಂ. ಶ್ರೀಕಂಠಯ್ಯಪ್ರಜಾಪ್ರಭುತ್ವಮಂಜಮ್ಮ ಜೋಗತಿಬಿಳಿಗಿರಿರಂಗನ ಬೆಟ್ಟಒಡೆಯರ್ಬಿ.ಎಲ್.ರೈಸ್ಹವಾಮಾನಅಂತರಜಾಲಟೈಗರ್ ಪ್ರಭಾಕರ್ಮೆಕ್ಕೆ ಜೋಳಮಿಂಚುಮೂಲಧಾತುಗಳ ಪಟ್ಟಿಕೃಷ್ಣಕನಕಪುರಮಹಾಭಾರತಭಾರತೀಯ ಸ್ಟೇಟ್ ಬ್ಯಾಂಕ್ಗುಡುಗುಗದ್ಯಧರ್ಮಸ್ಥಳಪಠ್ಯಪುಸ್ತಕಗರ್ಭಧಾರಣೆಭಾರತದ ಸರ್ವೋಚ್ಛ ನ್ಯಾಯಾಲಯಸಾನೆಟ್ಅನುಶ್ರೀಕನ್ನಡದಲ್ಲಿ ನವ್ಯಕಾವ್ಯಖಾಸಗೀಕರಣಒಗಟುಹದಿಹರೆಯಆಗಮ ಸಂಧಿಅಸಹಕಾರ ಚಳುವಳಿಕೇಸರಿ (ಬಣ್ಣ)ಡಿ.ಕೆ ಶಿವಕುಮಾರ್ನಾಗವರ್ಮ-೧ಭಾರತ ಸಂವಿಧಾನದ ಪೀಠಿಕೆಮುಹಮ್ಮದ್ಅಲಾವುದ್ದೀನ್ ಖಿಲ್ಜಿವೀರಗಾಸೆಹುಲಿಕಿತ್ತೂರು ಚೆನ್ನಮ್ಮಶಾಂತಲಾ ದೇವಿಗುಪ್ತ ಸಾಮ್ರಾಜ್ಯಡಿ.ವಿ.ಗುಂಡಪ್ಪಎ.ಪಿ.ಜೆ.ಅಬ್ದುಲ್ ಕಲಾಂಕನ್ನಡ ಸಾಹಿತ್ಯ ಪ್ರಕಾರಗಳುಆದಿ ಶಂಕರಮಲಬದ್ಧತೆಚನ್ನಬಸವೇಶ್ವರಪುಟ್ಟರಾಜ ಗವಾಯಿಪಾಲಕ್ಪರಿಸರ ವ್ಯವಸ್ಥೆಭಾರತದಲ್ಲಿ ಕೃಷಿವಿಮೆಯು.ಆರ್.ಅನಂತಮೂರ್ತಿಬಾವಲಿಕರ್ನಾಟಕ ರಾಜ್ಯ ಮಹಿಳಾ ಆಯೋಗವಿಧಾನ ಸಭೆಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುರಾಜ್ಯಸಭೆಕರ್ನಾಟಕದ ಆರ್ಥಿಕ ಪ್ರಗತಿಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ವೇದ🡆 More