ಕುದ್ಮಲ್ ರಂಗರಾವ್

ಕುದ್ಮಲ್ ರಂಗರಾವ್ ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ ಸಮಾಜ ಸೇವಕ.

ಕುದ್ಮಲ್ ರಂಗರಾವ್
Bornಜೂನ್ ೨೯, ೧೮೫೯
ಕುದ್ಮುಲ್,
South Kanara(the present Kasargod region)
Madras Presidency
Diedಜನವರಿ ೩೦, ೧೯೨೮
OrganizationDepressed Class Mission
Movementಹಿಂದುಳಿದ ವರ್ಗದ ಸಬಲೀಕರಣ

ಬಾಲ್ಯ ಮತ್ತು ಜೀವನ

ಕಾಸರಗೋಡಿನ ಕುದ್ಮಲ್ ಎಂಬ ಸಣ್ಣ ಗ್ರಾಮದಲ್ಲಿ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ೧೮೫೯ ಜೂನ್ ೨೬ರಂದು ದೇವಪ್ಪಯ್ಯ ಮತ್ತು ಶ್ರೀಮತಿ ಗೌರಿ ದಂಪತಿಗಳ ಮಗನಾಗಿ ರಂಗರಾವ್ ಜನಿಸಿದರು. ಬಹು ಕಷ್ಟದಿಂದಲೇ ಬಾಲ್ಯ ಶಿಕ್ಷಣವನ್ನು ಕಾಸರಗೋಡಿನಲ್ಲಿಯೇ ಮುಗಿಸಿ ಉದ್ಯೋಗಕ್ಕಾಗಿ ಮಂಗಳೂರಿಗೆ ಬರಬೇಕಾಯಿತು. ವಿದ್ಯಾಭ್ಯಾಸ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿದರು.

ರಂಗರಾವ್ ರ ಪತ್ನಿ ರುಕ್ಮಿಣಿ ದೇವಿ. ಇವರಿಗೆ ೩ ಮಂದಿ ಗಂಡು ಮಕ್ಕಳು ಮತ್ತು ೩ ಮಂದಿ ಹೆಣ್ಣು ಮಕ್ಕಳು.

ಅದು ಬ್ರಿಟೀಷರ ಆಡಳಿತದ ಕಾಲ. ಒಂದು ಕಡೆ ಬ್ರಿಟೀಷರು, ಮತ್ತೊಂದೆಡೆ ಮೇಲ್ಜಾತಿಯವರ ಹಿಡಿತದ ಈ ಹಿನ್ನಲೆಯಲ್ಲಿ ಶೋಷಣೆಗೊಳಗಾದವರು, ಈ ಕಡೆ ಯಾರ ಗಮನವೂ, ಕಾಳಜಿಯೂ ಇಲ್ಲದ ಅದೊಂದು ಸಂಧಿಗ್ದ ಕಾಲ. ಯಾವುದೋ ನಿರೀಕ್ಷೆ, ಆಸೆ ತಲೆಎತ್ತಿ ನಡೆಯಬೇಕು, ಬದುಕಬೇಕು ಎನ್ನುವ ಕಲ್ಪನೆಯು ಸುಳಿಯದ, ‍ಸುಳಿಯಲು ಅವಕಾಶವನ್ನು ನೀಡದ ಆ ಒಂದು ಸಾಮಾಜಿಕ ವ್ಯವಸ್ಥೆಯೊಳಗೆ ನುಗ್ಗಿ ಬಂದ ಆಶಾಕಿರಣದ ಒಂದು ಬೆಳಕೇ ಶ್ರೀ ಕುದ್ಮುಲ್ ರಂಗರಾವ್.

ಸಮಾಜ ಸೇವೆ

'ಪ್ರಗತಿಗೆ ವಿದ್ದ್ಯೆಯೇ ಮೂಲ' ಎಂದು ನಂಬಿದ್ದ ಅವರು ಶೋ‍‍‍‍ಶಿತ ವರ್ಗದ ಸಮುದಾಯದ ಮಕ್ಕಳಿಗೆ ‍‍‌‍‍ವಿಧ್ಯೆ ನೀಡುವ ಕುರಿತು ಚಿಂತಿಸಿದರು.

ರಂಗರಾವ್ ಅವರು ಡಿ.ಸಿ.ಎಂ. ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮಂಗಳೂರಿನ ಕಂಕನಾಡಿ, ಮೂಲ್ಕಿ ,ಬೋಳೂರು, ಉಡುಪಿ, ಬನ್ನಂಜೆ, ನೇಜಾರು,ಅತ್ತಾವರ,ಬಾಬುಗುಡ್ಡೆ, ದಡ್ಡಲ್ ಕಾಡುಗಳಲ್ಲಿ ಉಚಿತ ಶಾಲೆಗಳನ್ನು ತೆರೆದರು. ಆ ಶಾಲೆಗಳನ್ನು 'ಪಂಚಮ ಶಾಲೆ'ಗಳೆಂದು ಕರೆಯುತಿದ್ದರು.

ದಲಿತರಿಗೆ ವೃತ್ತಿಪರ ಶಿಕ್ಶಣ ನೀಡಲು ಶೇಡಿಗುಡ್ಡೆ ಎಂಬಲ್ಲಿ ಕೈಗಾರಿಕಾ ತರಬೇತಿ ಶಾಲೆ ಪ್ರಾರಂಭಿಸಿದರು. ತಾವು ಸ್ಥಾಪಿಸಿದ ಡಿ.ಸಿ.ಎಂ. ಮಿಶನ್ ಶಾಲೆಗಳಲ್ಲಿ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಬಡಗಿ, ನೇಯ್ಗೆ, ತೋಟಗಾರಿಕೆ, ಕಸೂತಿ, ರೇಶ್ಮೆ ಹುಳು ಸಾಕಾಣಿಕೆ ಇತ್ಯಾದಿ ವೃತ್ತಿಗಳನ್ನು ಅವಲಂಬಿಸಲು ಅಗತ್ಯವಾದ ತರಬೇತಿಯನ್ನು ದಲಿತರಿಗೆ ಕೊಡಿಸಿದರು; ಸ್ವಾವಲಂಬಿ ಜೀವನಕ್ಕೆ ದಾರಿ ತೋರಿದರು. ಅನ್ಯರ ಅನ್ನಕ್ಕಿಂತ ಆತ್ಮಗೌರವದ ಗಂಜಿ ಊಟವೇ ದೊಡ್ಡದೆಂದು ತೋರಿಸಿಕೊಟ್ಟರು.

ಕೊರಗ ಜನಾಂಗದವರಿಗೆ ಕೋರ್ಟುಗುಡ್ಡೆ ಬಳಿ ಸಾಲು ಮನೆಗಳನ್ನು ಕಟ್ಟಿಸಿದರು. ಕುಲಕಸುಬಿನಲ್ಲಿ, ಗುಡಿ ಕೈಗಾರಿಕೆಗಳಲ್ಲಿ ತೊಡಗಲು ನೆರವಾದರು. ದಲಿತರ ಆರ್ಥಿಕ ಅಭಿವೃಧ್ಧಿಗಾಗಿ, ಸಹಕಾರ ಬೆಳವಣಿಗೆಗಾಗಿ ಕೋರ್ಟ್ ಹಿಲ್ಸ್ ನಲ್ಲಿ 'ಆದಿ ದ್ರಾವಿಡ ಸಹಕಾರ ಸ್ಂಘ' ಸ್ಥಾಪಿಸಿದರು.

ಕುದ್ಮಲ್ ರಂಗರಾವ್ ಅವರ ನಿಸ್ವಾರ್ಥ ಸೇವೆ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆಯಿತು. ಸಮಾಜ ಸುಧಾರಣೆಯ ಕಾರ್ಯವನ್ನು ಮೆಚ್ಚಿ , ಅಮೇರಿಕಾದ ಖ್ಯಾತ ಉದ್ಯಮಿ ಹೆನ್ರಿ ಫೋರ್ಡ್, ಜಸ್ಟಿಸ್ ವಿಲ್ಬರ್ಟ್, ಡಾ. ಕಾರ್ನಾಟ್ ಹೀಗೆ ಹತ್ತಾರು ಪ್ರಮುಖರು ಡಿ.ಸಿ.ಎಂ. ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಗುರುದೇವ ರವೀಂದ್ರನಾಥ್ ಟಾಗೋರ್, ದೀನಬಂಧು ಸಿ. ಎಸ್. ಆಂಡ್ರೂಸ್, ಡಾ.ಆನಿಬೆಸೆಂಟ್ ಮತ್ತು ಜಿ.ಕೆ.ದೇವಧರ್ ಮುಂತಾದವರು ಈ ಸಂಸ್ಥೆಗೆ ಭೇಟಿ ನೀಡಿ ಇವರ ಮಾನವೀಯ ಸೇವೆಗಳನ್ನು ಕಣ್ಣಾರೆ ಕಂಡು ಅಭಿನಂದಿಸಿದರು.

ಸನ್ಯಾಸ ದೀಕ್ಷೆ ಸ್ವೀಕಾರ:

ಕುದ್ಮುಲ್ ರಂಗರಾವ್ ರವರು ೧೯೨೪ ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರ ಶಿಷ್ಯ ಶೃದಾನಂದ ಸ್ವಾಮೀಜಿಯವರು ಮಂಗಳೂರಿಗೆ ೨ನೇ ಸಲ ಆಗಮಿಸುವ ಸಮಯದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರಕ್ಕೆ ಸಂಕಲ್ಪ ಮಾಡಿದ್ದರು. ಆದರೆ ದಿಲ್ಲಿಯಲ್ಲಿ ಶೃದಾನಂದರ ಕೊಲೆಯಾಯಿತು.ಈ ಹಿನ್ನಲೆಯಲ್ಲಿ ಕುದ್ಮುಲ್ ರಂಗರಾವ್ ಅವರು ಶೃದಾನಂದ ಸ್ವಾಮೀಜಿಯವರ ಶಿಷ್ಯರಾದ ಸುವಿಚಾನಂದ ಸ್ವಾಮೀಜಿಯವರಿಂದ ೧೯೨೭ ರಲ್ಲಿ ಸನ್ಯಾಸ ದೀಕ್ಷೆ ಪಡೆದರು.ಪಂಡಿತ ವಿದ್ಯಾವಾಚಸ್ಫತಿಯವರು ಕುದ್ಮುಲ್ ರಂಗರಾವ್ ಗೆ ಈಶ್ವರಾನಂದ ಸನ್ಯಾಸಿ ಎಂದು ನಾಮಕರಣ ಮಾಡಿದರು.

ನಿಧನ

ತಮ್ಮ ಅನಾರೋಗ್ಯ ಹಾಗೂ ಇಳಿವಯಸ್ಸಿನಲ್ಲೂ ದಲಿತರ ಸೇವೆಯಲ್ಲಿ ಬದುಕನ್ನು ಸವೆಸಿದ ಇವರು ಹೃದಯ ಬೇನೆಯ ಖಾಯಿಲೆಗೆ ತುತ್ತಾಗಿ ೧೯೨೮ ಜೂನ್ ೩ಂರಂದು ನಿಧನರಾದರು.

Tags:

🔥 Trending searches on Wiki ಕನ್ನಡ:

ಇಂಡಿಯನ್ ಪ್ರೀಮಿಯರ್ ಲೀಗ್ಎಂ. ಕೆ. ಇಂದಿರಭಾರತದ ರಾಷ್ಟ್ರಪತಿಸಾರ್ವಜನಿಕ ಆಡಳಿತಜನಪದ ಕಲೆಗಳುಯುಗಾದಿಜಾತ್ರೆಮರಕನ್ನಡದಲ್ಲಿ ಕಾದಂಬರಿ ಸಾಹಿತ್ಯನೀರುನಾಗಚಂದ್ರಅಸ್ಪೃಶ್ಯತೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕುರುಬಪಾಲಕ್ಭಾರತೀಯ ಕಾವ್ಯ ಮೀಮಾಂಸೆಸೀತೆಛಂದಸ್ಸುಭಾರತದ ವಿಜ್ಞಾನಿಗಳುಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಇಮ್ಮಡಿ ಪುಲಕೇಶಿಅಮೃತಧಾರೆ (ಕನ್ನಡ ಧಾರಾವಾಹಿ)ಕನ್ನಡ ಸಾಹಿತ್ಯ ಪರಿಷತ್ತುವಡ್ಡಾರಾಧನೆಶ್ರೀ ರಾಮ ಜನ್ಮಭೂಮಿಭಾರತೀಯ ಶಾಸ್ತ್ರೀಯ ಸಂಗೀತಕುಮಾರವ್ಯಾಸರಾಜೇಶ್ ಕುಮಾರ್ (ಏರ್ ಮಾರ್ಷಲ್)ಭಾರತೀಯ ಜನತಾ ಪಕ್ಷಮುದ್ದಣನೈಸರ್ಗಿಕ ಸಂಪನ್ಮೂಲಶ್ರೀನಾಥ್ಜ್ಞಾನಪೀಠ ಪ್ರಶಸ್ತಿಸತ್ಯಂನುಡಿಗಟ್ಟುಜಲ ಮಾಲಿನ್ಯಕ್ರಿಯಾಪದಅಗಸ್ಟ ಕಾಂಟ್ಇಂದಿರಾ ಗಾಂಧಿವಿರಾಮ ಚಿಹ್ನೆಕಾನೂನುಭಾರತದ ಸಂವಿಧಾನ ರಚನಾ ಸಭೆಹೊಯ್ಸಳ ವಿಷ್ಣುವರ್ಧನಅಶ್ವತ್ಥಮರಮಾಟ - ಮಂತ್ರಕರ್ಣಾಟ ಭಾರತ ಕಥಾಮಂಜರಿಚರ್ಚೆಪಾಟೀಲ ಪುಟ್ಟಪ್ಪಟೊಮೇಟೊದ್ವಿರುಕ್ತಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಒಡೆಯರ್ವಿಶ್ವ ಪರಿಸರ ದಿನಶ್ರೀನಿವಾಸ ರಾಮಾನುಜನ್ಜಿಪುಣಕೃಷ್ಣಾ ನದಿಝಾನ್ಸಿ ರಾಣಿ ಲಕ್ಷ್ಮೀಬಾಯಿಬ್ರಾಹ್ಮಣಉತ್ತರ ಕನ್ನಡಭಾರತದಲ್ಲಿ ಪಂಚಾಯತ್ ರಾಜ್ಮಧುಮೇಹಅರಿಸ್ಟಾಟಲ್‌ಭಾರತದ ರಾಜ್ಯಗಳ ಜನಸಂಖ್ಯೆವೆಂಕಟೇಶ್ವರಕನ್ನಡ ಅಕ್ಷರಮಾಲೆರಾಜಧಾನಿಗಳ ಪಟ್ಟಿವಿಕ್ರಮಾರ್ಜುನ ವಿಜಯಹರಿಶ್ಚಂದ್ರಯೋಗವಾಹಸೂರ್ಯವ್ಯೂಹದ ಗ್ರಹಗಳುಸಾರಾ ಅಬೂಬಕ್ಕರ್ಸಾಮಾಜಿಕ ಸಮಸ್ಯೆಗಳುಕಂಬಳಹಿಂದೂ ಮಾಸಗಳುಮಹಾಶರಣೆ ಶ್ರೀ ದಾನಮ್ಮ ದೇವಿಗುರುದೀಪಾವಳಿ🡆 More