ಚೆನ್ನು ಕುಣಿತ

ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ.

ಚೆನ್ನು ಕುಣಿತ ಕಾಸರಗೋಡು ಪ್ರಾಂತ್ಯ ಮತ್ತು ವಿಟ್ಲ ಭಾಗದಲ್ಲಿ 'ಚೆನ್ನು ಕುಣಿತ'-ವನ್ನು 'ಕೋಪಾಲ' ಜನಾಂಗದವರು ನಡೆಸಿಕೊಡುವರು. 'ಚೆನ್ನು' ಎಂಬಾಕೆಯ ಕುರಿತು ಹಾಡುವರು. ಈ ಜನಾಂಗದ ಸಾಂಸ್ಕೃತಿಕ ಮೂಲ ಸ್ತ್ರೀ 'ಚೆನ್ನು' ಎಂಬುದಾಗಿ ಭಾವಿಸಿರುವರು. ಮಾಯಿ ಹುಣ್ಣಿಮೆ ದಿವಸ (ಫೆಬ್ರವರಿ ತಿಂಗಳು) ನಲಿಕೆ ಅಥವಾ ಕೋಪಾಳ ಜನಾಂಗದವರು ಆರಾಧಿಸುವರು. ಕೋಪಾಳ ಜನವರ್ಗದ ಹೆಂಗಸರು (ಎಂಟು-ಹತ್ತು ಜನ) ಕಾಲಿಗೆ ಗೆಜ್ಜೆ ಕಟ್ಟಿ ಎಕ್ಕ ಮಲೆ ಹೂಗಳಿಂದ ಸಿಂಗರಿಸಿಕೊಂಡು ತೆಂಬರೆ ವಾದ್ಯದೊಂದಿಗೆ ಹಾಡುತ್ತಾ ಕುಣಿಯುವರು, ಆ ಬಳಿಕ ಭತ್ತ, ಅಕ್ಕಿ-ಪಡಿಯನ್ನು ಹಾಗೂ ತೆಂಗಿನ ಕಾಯಿ ದಾನವಾಗಿ ಸ್ವೀಕರಿಸುವರು. ಈ ನೃತ್ಯ ಪ್ರಕಾರ ಇಂದು ವಿರಳವಾಗಿದೆ. ಬೆಳ್ತಂಗಡಿ ಭಾಗದಲ್ಲಿ ಮೇರ ಜನವರ್ಗದವರು 'ಚೆನ್ನು' ಕುಣಿತವನ್ನು ದುಡಿ ವಾದ್ಯದೊಂದಿಗೆ ನುಡಿಸುವರು. ವೇಷದ ನೃತ್ಯಗಾರ್ತಿಯು ಕೈಯಲ್ಲಿ ಅಡಕೆ ಹಾಳೆ ಹಿಡಿದುಕೊಂಡಿರುತ್ತಾಳೆ, ಈ ಹಾಳೆಯಲ್ಲಿ ಬಟ್ಟೆಯ ಸಿಂಬೆಯನ್ನು ಮಗುವಿನ ಆಕಾರದಲ್ಲಿ ಇಟ್ಟುಕೊಂಡು ಕುಣಿಯುವಳು, ಚೆನ್ನು -ವಿನ ಜೊತೆಯಲ್ಲಿ ವೇಷ ಭೂಷಣವಿಲ್ಲದೆ ಕುಣಿಯುವ ಹೆಂಗಸರು, ಗಂಡಸರೂ ಇರುತ್ತಾರೆ. ಇವರ ನಡುವೆ ಚೆನ್ನು ವೇಷದಾರಿ ಕುಣಿಯುತ್ತಾನೆ. ಸುತ್ತಲೂ ಐದಾರು ಮಂದಿ 'ದುಡಿ' (ಚರ್ಮ ವಾದ್ಯ) ಬಾರಿಸುತ್ತಾ ಹಾಡು ಹೇಳುತ್ತಾ ಕುಣಿಯುವರು. ಕೆಲವೆಡೆ ಚೆನ್ನು ವೇಷದ ಜೊತೆಯಲ್ಲಿ ಕೊರಗ ವೇಷವೂ ಇರುತ್ತದೆ.

ಚೆನ್ನು ನಲಿಕೆ ಹಾಡು

ಚೆನ್ನು ಚೆನ್ನುಗಲೆ ಚೆನ್ನು ಚೆನ್ನು ಚೆನ್ನುಗಲೆ
ಚೆನ್ನುನ ದಟ್ಟಿಗೆಡ್ ಚೆನ್ನು ಬಿನ್ನೆರ್ ಬೈದೆರ್
ಬಿನ್ನೇರೇರ್ಗಲೆ ಚೆನ್ನು ಬಿನ್ನೇರೇರ್ಗಲೆ
ಅಪ್ಪೆಲಮ್ಮೆಲ ದೆತ್ತಿ ಅಪ್ಪೆಲಮ್ಮೇಲ..
ಓ ಲಮ್ಮನ ಪುದರ್ ಪನ್ ಚೆನ್ನು ಅಪೆನ ಪುದರ್ ಪನ್..
ಓ ಲಮ್ಮನ ಪುದರ್ಯೇ ದೆತ್ತಿ ಕೋಟೆದ ಬಬ್ಬುಂದ್..
ಓ ಅಪ್ಪೆ ಪುದರ್ಯೇ ದೆತ್ತಿ ಪೊವಂಬಲಕ್ಕಂಬಲೆ..
ಓ ಲೇಲೇಲೆ ಚೆನ್ನು ಲೇಲೇಲೆ..
ಚೆನ್ನುನ ದಟ್ಟಿಗೆಡ್ ಚೆನ್ನು ಬಿನ್ನೆರ್ ಬೈದೆರ್..
ಓ ಬಂಜಿಗ್ ದಾಲದ್ದಿಂದ್ ಚೆನ್ನು ಬೈತ್ತಡಿಯೊಕ್ಕುಬಲ್..
ಒರ ತೂನಗಸ ದೆತ್ತಿ ಕೈತ್ತಡಿ ಒಕ್ಕುಬಲ್..
ಓ ಗಂಜಿಗ್‌ ದಾಲದ್ದಿಂದ್‌ ಚೆನ್ನು ಬಂಜಿಗ್ ನೋತೋಂಡಲ್‌..
ಓ ಗಂಜಿಗ್‌ ದಾಲದ್ದಿಂದ್‌ ಚೆನ್ನು ಬಂಜಿಗ್ ನೋತೋಂಡಲ್‌..
ಓ ಲೇಲೇಲೆ ಚೆನ್ನು ಲೇಲೇಲೆ..
ಓ ಬಾಲೆ ಬುಲಿಪುಂಡುಯೇ ದೆತ್ತಿ ಪಕ್ಕಿದಲೆಕ್ಕೊನೇ..
ಓ ಉಲಯಿ ಪೋಲಯ ಚೆನ್ನು ಬಾಲೆನೊಚ್ಚಿಲೇ..
ಓ ಲೇಲೆಲೇ.. ಪಿದಯಿ ಬಲೆಯೇ ದೆತ್ತಿ ಚೆನ್ನು ನಲಿಕೆ ತೊಲೆ..
ಓ ಬಾಲೆದ ಪುದರ್ಯೇ ದೆತ್ತಿ ಕೈಲ ಕಾನೆಂದೋ..
ಓ ಪುಚ್ಚೆದ ಕುತ್ತಾಂಡ ದೆತ್ತಿ ಪೇರ‍್ಡೆ ಪೋವಡ್..
ಓ ನಾಯಿದ ಕುತ್ತಾಂಡ ದೆತ್ತಿ ಕಡಲ್ ಪಾಯಡ್..
ಓ ಮಾಯಿದ ತಿಂಗೊಳುಡು ಚೆನ್ನು ಮಾಯೊನು ಪೋಪಳ್..
ಓ ಸುಗ್ಗಿದ ತಿಂಗೊಳುಡು ಚೆನ್ನು ನಟ್ಟ್‌ಬರ್ಪಳ್‌ಯಾ..
ದೂರ ಒಚ್ಚೊನು ಚೆನ್ನು ಗಿಟ್ಟ ಮಾನವೊನು..
ಬಾಲೆದಲೇರುಂಡು ಚೆನ್ನು ಬಾಲೆದಲೇರುಂಡು..
ಓ ಕಂಟ ಪುಚ್ಚೆಲುಂಡು ದೆತ್ತಿ ಕರಿಯ ನಾಯಿಲುಂಡು..
ಓ ನಾಯಿಲ ತುಚ್ಚಿಡಂದೋಸ ಚೆನ್ನು ಪುಚ್ಚೆ ಪರಂಕ್ದಂದೋ..
ಓ ಪುಚ್ಚೇಗ್ ಬಾಸೆಲುಂಡು ದೆತ್ತಿ ನಾಯಿಗ್ ಬುದ್ದಿಲುಂಡು..
ಚೆನ್ನು ಚೆನ್ನುಗಲೆ ಚೆನ್ನು ಚೆನ್ನು ಚೆನ್ನುಗಲೆ

ಚೆನ್ನು ಚೆನ್ನು ಕಣೇ.. ಚೆನ್ನು ಚೆನ್ನು ಕಣೇ..
ಚೆನ್ನುನ ಗುಡಿಸಲಿಗೆ ಚೆನ್ನು ನೆಂಟರು ಬಂದಿದ್ದಾರೆ
ನೆಂಟರು ಯಾರು ಕಣೇ ಚೆನ್ನು ನೆಂಟರು ಯಾರು ಕಣೇ
ತಂದೆ ತಾಯಂದಿರು ಒಡತಿ ತಂದೆ ತಾಯಂದಿರು
ಓ ತಂದೆಯ ಹೆಸರು ಹೇಳು ಚೆನ್ನು ತಾಯಿಯ ಹೆಸರು ಹೇಳು
ಓ ತಂದೆಯ ಹೆಸರು ಒಡತಿ ಕೋಟೆದ ಬಬ್ಬು ಅಂತ
ಓ ತಾಯಿಯ ಹೆಸರು ಒಡತಿ ಪೊವಮ್ಮ ಲೆಕ್ಕಮ್ಮಲೆ
ಓ ಲೇಲೇಲೆ ಚೆನ್ನು ಲೇಲೇಲೆ..
ಚೆನ್ನುನ ಗುಡಿಸಲಿಗೆ ಚೆನ್ನು ನೆಂಟರು ಬಂದಿದ್ದಾರೆ
ಓ ಹೊಟ್ಟೆಗೆ ಏನಿಲ್ಲೆಂದು ಚೆನ್ನು ಬೈಹುಲ್ಲು ಕೆದಕುವಳು
ಒಮ್ಮೆ ನೋಡುವಾಗ ಒಡತಿ ಕೈ ಕೆದಕುವಳು
ಓ ಅನ್ನಕ್ಕೆ ಏನಿಲ್ಲೆಂದು ಚೆನ್ನು ಹೊಟ್ಟೆ ಹೊಡಕೊಂಡಳು
ಓ ಅನ್ನಕ್ಕೆ ಏನಿಲ್ಲೆಂದು ಚೆನ್ನು ಹೊಟ್ಟೆ ಹಡಕೊಂಡಳು
ಓ ಲೇಲೇಲೆ ಚೆನ್ನು ಲೇಲೇಲೆ..
ಓ ಮಗು ಅಳುತ್ತದೆ ಒಡತಿ ಹಕ್ಕಿಯ ಹಾಗೇನೇ..
ಓ ಒಳಗೆ ಹೋಗು ಚೆನ್ನು ಮಗುವನ್ನು ತೂಗಿಕೊಳ್ಳು
ಓ ಲೇಲೇಲೆ.. ಹೊರಗೆ ಬನ್ನಿ ಒಡತಿ ಚೆನ್ನು ಕುಣಿತ ನೋಡಿ
ಓ ಮಗುವಿನ ಹೆಸರು ಒಡತಿ ಕೈಲ ಕಾನೆ ಅಂತ
ಓ ಬೆಕ್ಕಿನ ಕುತ್ತಾದರೆ ಒಡತಿ ಹಾಲಲ್ಲಿ ಹೋಗಲಿ
ನಾಯಿಯ ಕುತ್ತಾದರೆ ಒಡತಿ ಕಡಲು ಸೇರಲಿ
ಓ ಮಾಯಿ ತಿಂಗಳಲ್ಲಿ ಚೆನ್ನು ಮಾಯವಾಗುತ್ತಾಳೆ
ಓ ಸುಗ್ಗಿ ತಿಂಗಳಲ್ಲಿ ಚೆನ್ನು ಬೇಡಿ ಬರುವಳು
ದೂರಕ್ಕೆ ತೂಗಿಕೊಳ್ಳು ಚೆನ್ನು ಹತ್ತಿರ ಬಾಮಿಸು
ಮಗುವಿನ ಹತ್ತಿರ ಯಾರಿದ್ದಾರೆ ಚೆನು ಮಗುವಿನ ಹತ್ತಿರ ಯಾರಿದ್ದಾರೆ.
ಓ ಗಡವ ಬೆಕ್ಕು ಇದೆ ಒಡತಿ ಕರಿಯ ನಾಯಿ ಇದೆ
ಓ ನಾಯಿ ಕಚ್ಚದೇ ಚೆನ್ನು ಬೆಕ್ಕು ಪರಚದೇ?
ಓ ಬೆಕ್ಕಿಗೆ ಭಾಷೆಯಿದೆ ಒಡತಿ ನಾಯಿಗೆ ಬುದ್ದಿಯಿದೆ
ಚೆನ್ನು ಚೆನ್ನು ಕಣೇ.. ಚೆನ್ನು ಚೆನ್ನು ಕಣೇ..
(ಮಾಹಿತಿದಾರರು – ಕುಂಬೆ, ಪೆರ್ನಡ್ಕ, ೬೭, ಕಾಸರಗೋಡು)

ಪಠ್ಯೊ ೨

ಚೆನ್ನು ಚೆನ್ನುಗಲೇ ಚೆನ್ನು ಪೋಕರೆಟ್ಟಿಗಲೇ..
ಚೆನ್ನುನ ದಟ್ಟಿಗೆಡ್ ಚೆನ್ನು ಬಿನ್ನೆರ್ ಬೈದೆರ್..
ಓ ಬಿನ್ನೇರೇರ್ಗಲೆ ಚೆನ್ನು ಬಿನ್ನೇರೇರ್ಗಲೇ..
ಓ ಅಪ್ಪೆಲ ಬೈದಿಂಡ್ ದೆತ್ತಿ ಅಮ್ಮೆಲ ಬೈದ್‌ಂಡ್‌..
ಓ ಬಾಲೆ ಪುದರ್ ಪನ್ ಚೆನ್ನು ಬಾಲೆ ಪುದರ್ ಪನ್.
ಓ ಬಾಲೆದ ಪುದರ್‌ಯೇ ದೆತ್ತಿ ಪೂವಮ್ಮ ಲಕ್ಕಮ್ಮಲೆ..
ಓ ದೂರಗೊಚ್ಚೊನು ಚೆನ್ನು ಗಿಟ್ಟಗ್ ಮಾನವೊನು..
ಓ ಬಾಲೆದಲೇರುಂಡು ಚೆನ್ನು ಬಾಲೆದಲೇರುಂಡು..
ಓ ಕಂಟ ಪುಚ್ಚೆಲುಂಡು ದತ್ತಿ ಕರಿಯ ನಾಯಿಲುಂಡು..
ಓ ಚಣ್ಣನ ನೋತಂಡಲ್ ಚೆನ್ನು ಚಂಞಣ ನಟ್ಟೊಂಡಲ್.
ಓ ಚರೆಕ್ಕ್ ನೋತಂಡಲ್ ಚೆನ್ನು ಎಣ್ಣೆ ನಟ್ಟೊಂಡಲೇ..
ಓ ಪುಚ್ಚೆ ಪರಂಕ್ಡಂದೋ ಚೆನ್ನು ನಾಯಿ ತುಚ್ಚಂದೋ..
ಓ ಪುಚ್ಚೆಗ್ ಬಾಸೆಲುಂಡು ದೆತ್ತಿ ನಾಯಿಗ್ ಬುದ್ದಿಲುಂಡು..
ಓ ಲಮ್ಮಪುದರ್ ಪನ್ ಚೆನ್ನು ಅಪ್ಪೆ ಪುದರ್ ಪನ್..
ಓ ಅಪ್ಪೆನ್ ಪುದರ್ಯೇ ದೆತ್ತಿ ಅರಂಬೋಲಿರಂಬೋಲು..
ಓ ಅಮ್ಮೆ ಪುದರ್ಯೇ ದೆತ್ತಿ ಅಮ್ಮೆ ಪುದರ್ ಯೇ..
ಓ ಅಮ್ಮೆ ಪುದರ್‌ಯೇ ದೆತ್ತಿ ಕೋಟೆದ ಬಬ್ಬುಂದ್..
ಓ ಎಡತ್ತರಿಪ್ಪಂಡ ಚೆನ್ನು ಎಡತ್ತ ಮಿರೆಕೊರು..
ಓ ಬಲತ್ತರಿಪುಂಡ ಚೆನ್ನು ಎಡತ್ತ ಮಿರೆಕೊಡು..
ಚೆನ್ನು ಚೆನ್ನುಗಲೇ ಚೆನ್ನು ಪೋಕರೆಟ್ಟಿಗಲೇ..
ಚೆನ್ನುನ ದಟ್ಟಿಗೆಡ್ ಚೆನ್ನು ಬಿನ್ನೆರ್ ಬೈದೆರ್..

ಚೆನ್ನು ಚೆನ್ನುಗಲೇ ಚೆನ್ನು ಪೋಕರೆಟ್ಟಿಗಲೇ..
ಚೆನ್ನುನ ಗುಡಿಸಲಿಗೆ ಚೆನ್ನು ನೆಂಟರು ಬಂದಿದ್ದಾರೆ
ನೆಂಟರು ಯಾರು ಕಣೇ ಚೆನ್ನು ನೆಂಟರು ಯಾರು ಕಣೇ
ತಂದೆಯು ಇದ್ದಾರೆ ಒಡತಿ ತಾಯಿಯು ಇದ್ದಾರೆ
ಮಗುವಿನ ಹೆಸರೇನು ಚೆನ್ನು ಮಗುವಿನ ಹೆಸರೇನು
ಓ ಮಗುವಿನ ಹೆಸರು ಒಡತಿ ಪೂವಮ್ಮ ಲೆಕ್ಕಮ್ಮಲೆ
ದೂರಕ್ಕೆ ತೂಗಿಕೊಳ್ಳು ಚೆನ್ನು ಹತ್ತಿರ ಬಾಮಿಸು
ಮಗುವಿನ ಹತ್ತಿರ ಯಾರಿದ್ದಾರೆ ಚೆನ್ನು ಮಗುವಿನ ಹತ್ತಿರ ಯಾರಿದ್ದಾರೆ..?
ಓ ಗಡವ ಬೆಕ್ಕು ಇದೆ ಒಡತಿ ಕರಿಯ ನಾಯಿಯಿದೆ..
ಓ ಚಣ್ಣನ ಹೊಡಕೊಂಡಳು ಚೆನ್ನು ಅನ್ನ ಪಡಕೊಂಡಳು
ಓ ತಲೆಗೆ ಹೊಡಕೊಂಡಳು ಚೆನ್ನು ಎಣ್ಣೆ ಪಡಕೊಂಡಳು
ಓ ನಾಯಿ ಕಚ್ಚದೇ ಚೆನ್ನು ಬೆಕ್ಕು ಪರಚದ?
ಓ ಬೆಕ್ಕಿಗೆ ಭಾಷೆಯಿದೆ ಒಡತಿ ನಾಯಿಗೆ ಬುದ್ದಿಯಿದೆ
ಓ ತಂದೆಯ ಹೆಸರು ಹೇಳು ಚೆನ್ನು ತಾಯಿಯ ಹೆಸರು ಹೇಳು
ಓ ತಾಯಿಯ ಹೆಸರು ಒಡತಿ ಅರಂಬೋಲಿರಂಬೋಲು
ಓ ತಂದೆಯ ಹೆಸರು ಒಡತಿ ತಂದೆಯ ಹೆಸರು
ಓ ತಂದೆಯ ಹೆಸರು ಒಡತಿ ಕೋಟೆದ ಬಬ್ಬು ಅಂತ
ಓ ಎಡದ ಜಿನುಗಿದರೆ ಚೆನ್ನು ಬಲದ ಮೊಲೆ ಉಳಿಸು
ಓ ಬಲದ ಜಿನುಗಿದರೆ ಚೆನ್ನು ಎರಡ ಮೊಲೆ ಉಣಿಸು
ಚೆನ್ನು ಚೆನ್ನುಗಲೇ ಚೆನ್ನು ಪೋಕರೆಟ್ಟಿಗಲೇ..
ಚೆನ್ನುನ ಗುಡಿಸಲಿಗೆ ಚೆನ್ನು ನೆಂಟರು ಬಂದಿದ್ದಾರೆ
ಮಾಹಿತಿದಾರರು: ಮಯ್ಯ (೬೫) ಪೆರ್ನಡ್ಕ, ಕಾಸರಗೋಡು

Tags:

en:Wikipedia:Glossaryen:Wikipedia:Guide to layouten:Wikipedia:Manual of Style

🔥 Trending searches on Wiki ಕನ್ನಡ:

ಬೆಟ್ಟದ ನೆಲ್ಲಿಕಾಯಿಪ್ಲೇಟೊಜನಪದ ಕರಕುಶಲ ಕಲೆಗಳುಜಾಲತಾಣಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುತರಕಾರಿಇಮ್ಮಡಿ ಪುಲಕೇಶಿರಮ್ಯಾ ಕೃಷ್ಣನ್ಬಾಳೆ ಹಣ್ಣುಬ್ಯಾಂಕ್ ಖಾತೆಗಳುಸುಗ್ಗಿ ಕುಣಿತದ್ವಿರುಕ್ತಿವಿಕಿಪೀಡಿಯದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಮುರುಡೇಶ್ವರ೧೮೬೨ಜ್ವರಹಾಲುರಾಮೇಶ್ವರ ಕ್ಷೇತ್ರಶ್ರೀ ಕೃಷ್ಣ ಪಾರಿಜಾತಕರ್ನಾಟಕದ ಮುಖ್ಯಮಂತ್ರಿಗಳುಹನುಮಂತಪುನೀತ್ ರಾಜ್‍ಕುಮಾರ್ಗೋಕರ್ಣಕಲ್ಯಾಣಿಶಿವರಾಮ ಕಾರಂತದಿವ್ಯಾಂಕಾ ತ್ರಿಪಾಠಿಯುಗಾದಿಭಾರತೀಯ ಸ್ಟೇಟ್ ಬ್ಯಾಂಕ್ಹುಬ್ಬಳ್ಳಿಸಂಭೋಗಕರ್ನಾಟಕದ ಜಾನಪದ ಕಲೆಗಳುಅಟಲ್ ಬಿಹಾರಿ ವಾಜಪೇಯಿಸಿಂಧೂತಟದ ನಾಗರೀಕತೆಕಮ್ಯೂನಿಸಮ್ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಅಶ್ವತ್ಥಾಮಚಾಣಕ್ಯಜಿ.ಎಸ್.ಶಿವರುದ್ರಪ್ಪದ್ರಾವಿಡ ಭಾಷೆಗಳುಕೊಡಗು ಜಿಲ್ಲೆಹಸ್ತ ಮೈಥುನಸಾಲುಮರದ ತಿಮ್ಮಕ್ಕಕನ್ನಡ ಗುಣಿತಾಕ್ಷರಗಳು1935ರ ಭಾರತ ಸರ್ಕಾರ ಕಾಯಿದೆಬೀಚಿತಿರುಪತಿಹುಲಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಕರ್ನಾಟಕ ಸ್ವಾತಂತ್ರ್ಯ ಚಳವಳಿನೈಸರ್ಗಿಕ ಸಂಪನ್ಮೂಲಪರಶುರಾಮಕಲ್ಯಾಣ ಕರ್ನಾಟಕಮಾರ್ಕ್ಸ್‌ವಾದಮಹಾತ್ಮ ಗಾಂಧಿಪ್ರಾರ್ಥನಾ ಸಮಾಜರಾಷ್ಟ್ರಕೂಟರಾಹುಲ್ ದ್ರಾವಿಡ್ಭಾರತೀಯ ನದಿಗಳ ಪಟ್ಟಿಕಾಳಿದಾಸಮಾನವನಲ್ಲಿ ನಿರ್ನಾಳ ಗ್ರಂಥಿಗಳುಪಶ್ಚಿಮ ಘಟ್ಟಗಳುಚಕ್ರವ್ಯೂಹಫೇಸ್‌ಬುಕ್‌ಅರಿಸ್ಟಾಟಲ್‌ಅಮೃತಬಳ್ಳಿಸಾರಾ ಅಬೂಬಕ್ಕರ್ಮಹಮ್ಮದ್ ಘಜ್ನಿಸಂಚಿ ಹೊನ್ನಮ್ಮಕರಗವರ್ಗೀಯ ವ್ಯಂಜನಕೃಷ್ಣರಾಜಸಾಗರದೀಪಾವಳಿಅಶ್ವತ್ಥಮರಆಯುರ್ವೇದಅವತಾರಪ್ಯಾರಾಸಿಟಮಾಲ್ಪ್ರಬಂಧ🡆 More