ಕಿರುಬಿಲ್ಲೆ

ಕಿರುಬಿಲ್ಲೆಗಳು, ಅಥವಾ ಥ್ರಾಂಬಸೈಟ್‌ಗಳು, (ಪ್ಲೇಟ್‍ಲೆಟ್‍ಗಳು) ಚಿಕ್ಕ, ವ್ಯಾಸದಲ್ಲಿ ೨-೩ µಮಿ ಇರುವ, ಅಸಮ ಆಕಾರದ, ಜೀವಕಣಕೇಂದ್ರವನ್ನು ಹೊಂದಿರದ, ಪೂರ್ವಗಾಮಿ ಮೆಗಕ್ಯಾರಿಯಸೈಟ್‌ಗಳ ವಿಚ್ಛೇದದಿಂದ ಉದ್ಭವಿಸಿದ ಜೀವಕೋಶಗಳು.

ಇವು ಸಣ್ಣ ಸಣ್ಣ ಪೆಪ್ಪರ್‌ಮಿಂಟ್‍ನ ಮಾದರಿಯಲ್ಲಿರುತ್ತವೆ. ಒಂದು ಕಿರುಬಿಲ್ಲೆಯ ಸರಾಸರಿ ಜೀವಾವಧಿ ೮ ರಿಂದ ೧೨ ದಿನಗಳು. ಕಿರುಬಿಲ್ಲೆಗಳು ರಕ್ತಸ್ತಂಭನದಲ್ಲಿ ಮಹತ್ವದ ಪಾತ್ರವಹಿಸುತ್ತವೆ ಮತ್ತು ಬೆಳವಣಿಗೆ ಅಂಶಗಳ ನೈಸರ್ಗಿಕ ಮೂಲಗಳಾಗಿವೆ.

ಕಿರುಬಿಲ್ಲೆ
ಒಂದು ಬಾಹ್ಯ ರಕ್ತ ಲೇಪನದಿಂದ ಒಂದು ದ್ಯುತಿ ಸೂಕ್ಷ್ಮದರ್ಶಕದ (೪೦x) ಕೆಳಗೆ ಕೆಂಪು ರಕ್ತ ಕಣಗಳಿಂದ ಸುತ್ತುವರಿಯಲ್ಪಟ್ಟಿರುವ ಎರಡು ಕಿರುಬಿಲ್ಲೆಗಳು (ನೇರಳೆ ಬಣ್ಣ).

ರಕ್ತದಲ್ಲಿ ಇವುಗಳ ಸಂಖ್ಯೆ ೧.೫ ಲಕ್ಷದಿಂದ ೪.೫ ಲಕ್ಷ ಕ್ಯು. ಮಿಲಿ. ಮೀಟರ್ ಇರುತ್ತದೆ. ಒಂದು ಘನ ಮಿಮೀ ರಕ್ತದಲ್ಲಿ ಸುಮಾರು 8 ಲಕ್ಷದಷ್ಟು ಇರುವ ಇವು ರಕ್ತಕಣಗಳಲ್ಲೆಲ್ಲ ಅತ್ಯಂತ ಸಣ್ಣವು. ಇವುಗಳಲ್ಲಿ ಅಣುಕೇಂದ್ರ ಇರುವುದಿಲ್ಲ. ಬಹುಶಃ ಇವು ಕೆಲವು ವಿಶಿಷ್ಟ ರಾಸಾಯನಿಕಗಳ ಉಗ್ರಾಣಗಳಾಗಿದ್ದು ಛಿದ್ರಣದಿಂದ ಆ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಮುಖ್ಯ ರಾಸಾಯನಿಕಗಳೆಂದರೆ ಥ್ರಾಂಬೊಪ್ಲಾಸ್ಟಿನ್, ಹಿಸ್ಟಮಿನ್, ಸಿರೋಟೋನಿನ್ ಮತ್ತು ಅಡ್ರೀನಲಿನ್. ದೇಹದಲ್ಲಿ ರಕ್ತಸ್ರಾವವಾದಾಗ, ನಿಲ್ಲಿಸುವಲ್ಲಿ, ಗಾಯಗೊಂಡ ರಕ್ತನಾಳಗಳ ಒಳಪದರದ ದುರಸ್ತಿಯಲ್ಲಿ ತಕ್ಷಣ ಭಾಗವಹಿಸುತ್ತವೆ.

ರಕ್ತ ಪರಿಚಲಿಸುತ್ತಿರುವಾಗ ಕಣಿತ್ರಗಳು (ಪ್ಲೇಟ್‌ಲೆಟ್‍ಗಳು) ಬಿಡಿಬಿಡಿಯಾಗಿಯೇ ಇರುವುದಾದರೂ ರಕ್ತದಿಂದ ತೇವವಾಗುವ ಸ್ಥಳದಲ್ಲಿ ಇವು ತಕ್ಷಣ ಒಂದಕ್ಕೊಂದು ಅಂಟಿಕೊಂಡು ಸಣ್ಣ ದೊಡ್ಡ ಗುಂಪುಗಳಾಗುತ್ತದೆ. ಶೀಘ್ರದಲ್ಲಿ ಇವು ಛಿದ್ರಿಸಿ ಇಲ್ಲಿ ತಿಳಿಸಿದ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಥ್ರಾಂಬೋಪ್ಲಾಸ್ಟಿನ್ ಮತ್ತು ಸಿರೋಟೋನಿನ್‌ಗಳು ರಕ್ತಸ್ರಾವಸ್ತಂಭನಕ್ಕೆ ಕಾರಣವಾಗಿರುವ ರಾಸಾಯನಿಕಗಳೆಂದು ವ್ಯಕ್ತವಾಗಿವೆ. ಕಣಿತ್ರಗಳು ರಕ್ತದಲ್ಲಿ ಪರಿಚಲಿಸುತ್ತಿರುವಾಗಲೂ ನಿರಂತರವಾಗಿ ನಾಶವಾಗುತ್ತಲೇ ಇರುತ್ತವೆ. ನಾಶವಾಗುತ್ತಲೇ ಇರುವ ಕಣಿತ್ರಗಳ ಬದಲು ಸುಮಾರು ಅಷ್ಟೇ ಸಂಖ್ಯೆಯಲ್ಲಿ ನಿರಂತವಾಗಿ ಹೊಸ ಕಣಿತ್ರಗಳು ಉದ್ಭವಿಸುವುದರಿಂದ ರಕ್ತದಲ್ಲಿ ಅವುಗಳ ಸಂಖ್ಯಾ ಬದಲಾವಣೆ ಅಷ್ಟಾಗಿ ಕಂಡುಬರುವುದಿಲ್ಲ. ಮೂಳೆಮಜ್ಜೆ ಹಾಗೂ ಗುಲ್ಮದಲ್ಲಿ ಇರುವ ಬಹುಕೋಶ ಕೇಂದ್ರಗಳಿರುವ ಮತ್ತು ಅಮೀಬದಂಥ, ಚಟುವಟಿಕೆ ತೋರುವ ದೈತ್ಯಕೋಶಗಳ (ಜಯಂಟ್ ಸೆಲ್ಸ್) ಚಾಟುಗಳ ಛಿದ್ರತೆಯಿಂದ ಬಿಡುಗಡೆಯಾದ ಚೂರುಗಳಾಗಿ ಕಣಿತ್ರಗಳು ಉದ್ಭವಿಸುತ್ತವೆ.

೫೦,೦೦೦ ಕ್ಯು. ಮಿಲಿ ಮೀಟರ್ ಗಿಂತ ಕ್ಕಿಂತ ಕಡಿಮೆಯಾದಲ್ಲಿ, ಪರ್ಪೂರ ಎಂಬ ಕಾಯಿಲೆ ಬಂದು, ರಕ್ತಸ್ರಾವ ಸ್ಥಗಿತಗೊಳ್ಳಲು ತಡವಾಗುವುದಲ್ಲದೆ, ಮೂಗಿನಿಂದ ರಕ್ತ ಬರಲೂಬಹುದು. ಚರ್ಮದ ಕೆಳಗೆ, ಕೀಲುಗಳಲ್ಲಿ ಸ್ವಲ್ಪ ಪೆಟ್ಟಾದರೂ, ರಕ್ತಸ್ರಾವವಾಗುತ್ತದೆ.

ಉಲ್ಲೇಖಗಳು

ಕಿರುಬಿಲ್ಲೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಕ್ತ

Tags:

ಜೀವಕಣದ ಬೀಜಕಣಜೀವಕೋಶ

🔥 Trending searches on Wiki ಕನ್ನಡ:

ಪಂಚ ವಾರ್ಷಿಕ ಯೋಜನೆಗಳುಬಿ.ಎಫ್. ಸ್ಕಿನ್ನರ್ಒಂದನೆಯ ಮಹಾಯುದ್ಧಸಿಂಧೂತಟದ ನಾಗರೀಕತೆಕನ್ನಡದಲ್ಲಿ ಸಣ್ಣ ಕಥೆಗಳುಫುಟ್ ಬಾಲ್ಸುರಪುರದ ವೆಂಕಟಪ್ಪನಾಯಕಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುರೈತಮೋಕ್ಷಗುಂಡಂ ವಿಶ್ವೇಶ್ವರಯ್ಯವಡ್ಡಾರಾಧನೆಹದಿಹರೆಯವಿಕ್ರಮಾರ್ಜುನ ವಿಜಯಹೆಚ್.ಡಿ.ಕುಮಾರಸ್ವಾಮಿವಿದ್ಯುಲ್ಲೇಪಿಸುವಿಕೆಉತ್ತರ ಕನ್ನಡಸಾವಿತ್ರಿಬಾಯಿ ಫುಲೆಛತ್ರಪತಿ ಶಿವಾಜಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಯಕ್ಷಗಾನಆರ್.ಟಿ.ಐಇಂದಿರಾ ಗಾಂಧಿಮೂಲಭೂತ ಕರ್ತವ್ಯಗಳುಪ್ಲೇಟೊಭಾರತದಲ್ಲಿನ ಜಾತಿ ಪದ್ದತಿಕನ್ನಡ ರಂಗಭೂಮಿಕೃಷಿ ಸಸ್ಯಶಾಸ್ತ್ರಚಂದ್ರಶೇಖರ ಕಂಬಾರಸೂರ್ಯಬಾದಾಮಿ ಚಾಲುಕ್ಯರ ವಾಸ್ತುಶಿಲ್ಪರಾಷ್ಟ್ರೀಯ ಸೇವಾ ಯೋಜನೆರನ್ನಸಂಸ್ಕೃತಿಮುಮ್ಮಡಿ ಕೃಷ್ಣರಾಜ ಒಡೆಯರುಟಿ.ಪಿ.ಕೈಲಾಸಂಬ್ಯಾಡ್ಮಿಂಟನ್‌ಧರ್ಮಸ್ಥಳಎಂ. ಎಸ್. ಸ್ವಾಮಿನಾಥನ್ಶಬ್ದಮಣಿದರ್ಪಣಮೊದಲನೇ ಅಮೋಘವರ್ಷನವರತ್ನಗಳುಮತದಾನದಯಾನಂದ ಸರಸ್ವತಿ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಸಂತಾನೋತ್ಪತ್ತಿಯ ವ್ಯವಸ್ಥೆಕುರುಬಕಲ್ಯಾಣಿಥಿಯೊಸೊಫಿಕಲ್ ಸೊಸೈಟಿಪೊನ್ನಸರ್ವಜ್ಞಕಳಿಂಗ ಯುದ್ದ ಕ್ರಿ.ಪೂ.261ಒಡೆಯರ್ಭಾರತಭಾರತದ ಸ್ವಾತಂತ್ರ್ಯ ದಿನಾಚರಣೆಬ್ರಿಟೀಷ್ ಸಾಮ್ರಾಜ್ಯತೆಲುಗುಗುಡುಗುಮುಹಮ್ಮದ್ಭಾರತದ ರಾಷ್ಟ್ರಪತಿಭಾರತದ ರಾಷ್ಟ್ರೀಯ ಚಿಹ್ನೆಗ್ರಂಥ ಸಂಪಾದನೆಅನುಭೋಗಗೋಲ ಗುಮ್ಮಟಎಮಿನೆಮ್ಕ್ರೈಸ್ತ ಧರ್ಮಸಿದ್ದಲಿಂಗಯ್ಯ (ಕವಿ)ಕನ್ನಡ ಕಾವ್ಯಸವದತ್ತಿಅಮೃತಬಳ್ಳಿಪರಮಾಣು ಸಂಖ್ಯೆಕುಟುಂಬಜೀವಸತ್ವಗಳುವರ್ಣಾಶ್ರಮ ಪದ್ಧತಿಪ್ರಜಾವಾಣಿಆಟಕೌಲಾಲಂಪುರ್ಮಹಾಕಾವ್ಯಟಾರ್ಟನ್೧೭೮೫🡆 More