ಉಪವಾಸ

ಉಪವಾಸವು ಒಂದು ಅವಧಿಯವರೆಗೆ ಸ್ವಲ್ಪ ಅಥವಾ ಸಂಪೂರ್ಣ ಆಹಾರದ, ಪಾನೀಯದ, ಅಥವಾ ಎರಡರ ಇಚ್ಛೆಯುಳ್ಳ ಲಂಘನ ಅಥವಾ ಕಡಿತ.

ಸಂಪೂರ್ಣ ಉಪವಾಸವನ್ನು ಸಾಮಾನ್ಯವಾಗಿ ಒಂದು ನಿಗದಿತ ಅವಧಿವರೆಗೆ, ಸಾಧಾರಣವಾಗಿ ೨೪ ಗಂಟೆಗಳವರೆಗೆ, ಅಥವಾ ಹಲವು ದಿನಗಳವರೆಗೆ, ಎಲ್ಲ ಆಹಾರ ಮತ್ತು ದ್ರವದ ಲಂಘನ ಎಂದು ವ್ಯಾಖ್ಯಾನಿಸಲಾಗುತ್ತದೆ. ಜಲ ಉಪವಾಸ ನೀರನ್ನು ಕುಡಿಯುವುದಕ್ಕೆ (ಆದರೆ ಬೇರೆ ಏನೂ ಇಲ್ಲ) ಅನುಮತಿಸುತ್ತದೆ. ಇತರ ಉಪವಾಸಗಳು ಭಾಗಶಃ ನಿರ್ಬಂಧಿತವಿರಬಹುದು, ಅಂದರೆ ನಿರ್ದಿಷ್ಟ ಆಹಾರಗಳು ಅಥವಾ ಪದಾರ್ಥಗಳನ್ನು ಸೀಮಿತಗೊಳಿಸುವುದು. ಉಪವಾಸವು ಸ್ವರೂಪದಲ್ಲಿ ಎಡೆಬಿಟ್ಟು ನಡೆಯಬಹುದು. ಉಪವಾಸ ಆಚರಣೆಗಳು ಸಂಭೋಗ ಮತ್ತು ಇತರ ಚಟುವಟಿಕೆಗಳು ಜೊತೆಗೆ ಆಹಾರವನ್ನೂ ಪ್ರತಿಬಂಧಿಸಬಹುದು.

ಉಪವಾಸದ ಅವಧಿಯಲ್ಲಿ ಹಲವು ಚಯಾಪಚಯ ಹೊಂದಾಣಿಕೆಗಳಾಗುತ್ತವೆ, ಮತ್ತು ಉಪವಾಸದ ಸ್ಥಿತಿಯನ್ನು ನಿರ್ಧರಿಸಲು ಕೆಲವು ರೋಗನಿದಾನ ಪರೀಕ್ಷೆಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ತನ್ನ ಕೊನೆ ಊಟದ ೮-೧೨ ಗಂಟೆಗಳ ನಂತರ ಉಪವಾಸ ಮಾಡುತ್ತಿದ್ದಾನೆ ಎಂದು ಅಂದುಕೊಳ್ಳಲಾಗುತ್ತದೆ. ಉಪವಾಸದ ಸ್ಥಿತಿಯೆಡೆಗೆ ಚಯಾಪಚಯ ಬದಲಾವಣೆಗಳು ಊಟದ ಹೀರಿಕೆ ನಂತರ ಆರಂಭವಾಗುತ್ತವೆ (ಸಾಮಾನ್ಯವಾಗಿ ಊಟದ ನಂತರ ೩-೫ ಗಂಟೆ ಬಿಟ್ಟು).

ರೋಗನಿದಾನ ಉಪವಾಸ ಒಂದು ಸಮಸ್ಯೆಯ ತನಿಖೆಗಾಗಿ, ಸಾಮಾನ್ಯವಾಗಿ ಸಕ್ಕರೆ ಕೊರತೆ ಕಾಯಿಲೆ, ಪರಿವೀಕ್ಷಣೆಯಡಿಯಲ್ಲಿ ನಡೆಸಲಾದ ದೀರ್ಘಕಾಲದ ಉಪವಾಸವನ್ನು (ವಯಸ್ಸನ್ನು ಆಧರಿಸಿ ೮-೭೨ ಗಂಟೆ) ಸೂಚಿಸುತ್ತದೆ. ಅನೇಕ ಜನರು ವೈದ್ಯಕೀಯ ಚಿಕಿತ್ಸಾವಿಧಾನ ಅಥವಾ ಕೋಲನಾಸ್ಕಪಿಯಂತಹ ತಪಾಸಣೆಯ ಭಾಗವಾಗಿ ಉಪವಾಸ ಮಾಡಬಹುದು.

ಉಪವಾಸ ಅನೇಕ ಧಾರ್ಮಿಕ ಆಚರಣೆಗಳ ಭಾಗವೂ ಆಗಿದೆ.

ಹಿಂದೂ ಧರ್ಮದಲ್ಲಿ

ಹಬ್ಬಗಳ ಸಂದರ್ಭದಲ್ಲಿ ಉಪವಾಸ ಮಾಡುವುದು ಅತ್ಯಂತ ಸಾಮಾನ್ಯ. ಮಹಾ ಶಿವರಾತ್ರಿ (ಬಹುತೇಕ ಜನರು ಈ ದಿನದಂದು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ, ಒಂದು ಹನಿ ನೀರನ್ನೂ ಸೇವಿಸುವುದಿಲ್ಲ), ನವರಾತ್ರಿಯ ಒಂಬತ್ತು ದಿನಗಳು (ವರ್ಷಕ್ಕೆ ಎರಡು ಬಾರಿ ಬರುತ್ತದೆ ಎಪ್ರಿಲ್ ಮತ್ತು ಅಕ್ಟೋಬರ್, ನವಂಬರ್‍ನಲ್ಲಿ) ಸಾಮಾನ್ಯ ಉದಾಹರಣೆಗಳಾಗಿವೆ. ಕರ್ವಾ ಚೌತ್ ಭಾರತದ ಕೆಲವು ಭಾಗಗಳಲ್ಲಿ ಆಚರಿಸಲಾದ ಒಂದು ಬಗೆಯ ಉಪವಾಸ. ಇದರಲ್ಲಿ ವಿವಾಹಿತ ಸ್ತ್ರೀಯರು ತಮ್ಮ ಗಂಡಂದಿರ ಯೋಗಕ್ಷೇಮ, ಅಭ್ಯುದಯ ಮತ್ತು ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಹೆಂಡತಿಯು ಚಂದ್ರನನ್ನು ಜರಡಿಯ ಮೂಲಕ ನೋಡಿದ ನಂತರ ಉಪವಾಸ ಮುರಿಯುತ್ತದೆ. ಶ್ರಾವಣ ಮಾಸದಲ್ಲಿ ಕೆಲವರು ತಮ್ಮ ಇಷ್ಟದೇವರ ಪೂಜೆಗಾಗಿ ಮೀಸಲಾದ ದಿನದಂದು ಉಪವಾಸ ಮಾಡುತ್ತಾರೆ, ಮತ್ತು ಇತರರು ತಿಂಗಳಿಡಿ ಉಪವಾಸ ಮಾಡುತ್ತಾರೆ.

Tags:

ಆಹಾರಪಾನೀಯ

🔥 Trending searches on Wiki ಕನ್ನಡ:

ವಿಭಕ್ತಿ ಪ್ರತ್ಯಯಗಳುಫುಟ್ ಬಾಲ್ಜಯಂತ ಕಾಯ್ಕಿಣಿಮುಮ್ಮಡಿ ಕೃಷ್ಣರಾಜ ಒಡೆಯರುಆಂಗ್‌ಕರ್ ವಾಟ್ವಿಜಯಾ ದಬ್ಬೆಇಸ್ಲಾಂ ಧರ್ಮನ್ಯೂಟನ್‍ನ ಚಲನೆಯ ನಿಯಮಗಳುವಿಧಾನ ಸಭೆಮಾರ್ಟಿನ್ ಲೂಥರ್ ಕಿಂಗ್ರಾಷ್ಟ್ರಕೂಟಯೂಟ್ಯೂಬ್‌ವೀರೇಂದ್ರ ಹೆಗ್ಗಡೆದಶರಥಆದಿಪುರಾಣನಾಗೇಶ ಹೆಗಡೆಪಶ್ಚಿಮ ಘಟ್ಟಗಳುಗಾಂಧಾರಕಿತ್ತೂರು ಚೆನ್ನಮ್ಮದೇವತಾರ್ಚನ ವಿಧಿಬೆಳಗಾವಿರಂಗಭೂಮಿಐಹೊಳೆಕನ್ನಡ ವ್ಯಾಕರಣಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಅಗ್ನಿ(ಹಿಂದೂ ದೇವತೆ)ಭಾರತದಲ್ಲಿ ಮೀಸಲಾತಿಭಾರತದ ತ್ರಿವರ್ಣ ಧ್ವಜಕೇಟಿ ಪೆರಿಗೋಪಾಲಕೃಷ್ಣ ಅಡಿಗಸಿದ್ಧಯ್ಯ ಪುರಾಣಿಕಚದುರಂಗದ ನಿಯಮಗಳುಪರಿಸರ ವ್ಯವಸ್ಥೆಭಾರತದಲ್ಲಿನ ಜಾತಿ ಪದ್ದತಿಸುದೀಪ್ದ್ವಂದ್ವ ಸಮಾಸಕನ್ನಡಪ್ರಭಪಲ್ಸ್ ಪೋಲಿಯೋಶ್ರೀ ರಾಮಾಯಣ ದರ್ಶನಂಮೈಸೂರು ದಸರಾಜಾಹೀರಾತುಏಣಗಿ ಬಾಳಪ್ಪಚೋಳ ವಂಶಪುಷ್ಕರ್ ಜಾತ್ರೆನಿಜಗುಣ ಶಿವಯೋಗಿಒಟ್ಟೊ ವಾನ್ ಬಿಸ್ಮಾರ್ಕ್ಮಲ್ಲಿಗೆಪಾಂಡವರುಧರ್ಮಸ್ಥಳಮಾದಿಗವೇದಭಾರತದ ಮಾನವ ಹಕ್ಕುಗಳುಯೋನಿಕೆ. ಎಸ್. ನರಸಿಂಹಸ್ವಾಮಿಅಕ್ಷಾಂಶ ಮತ್ತು ರೇಖಾಂಶದಲಿತಮೊದಲನೆಯ ಕೆಂಪೇಗೌಡತೆರಿಗೆಹಿಂದಿಗಾಂಧಿ ಜಯಂತಿಬಾಬು ಜಗಜೀವನ ರಾಮ್ಮಾನವನಲ್ಲಿ ರಕ್ತ ಪರಿಚಲನೆಮೂಲಭೂತ ಕರ್ತವ್ಯಗಳುಶಿವನ ಸಮುದ್ರ ಜಲಪಾತಯೇಸು ಕ್ರಿಸ್ತಪಂಪ ಪ್ರಶಸ್ತಿಹೆಚ್.ಡಿ.ದೇವೇಗೌಡರಾಮತಿಂಥಿಣಿ ಮೌನೇಶ್ವರಆರ್ಯ ಸಮಾಜವಿಕಿವಂದನಾ ಶಿವಒಂದೆಲಗಅಂಚೆ ವ್ಯವಸ್ಥೆಕರ್ನಾಟಕದ ಮುಖ್ಯಮಂತ್ರಿಗಳುವಿಜ್ಞಾನ🡆 More