ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು (IIMB)(ಕನ್ನಡ:ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ), ಭಾರತದ ಪ್ರಮುಖ ವ್ಯವಸ್ಥಾಪ್ರಬಂಧ ಸಂಸ್ಥೆಗಳಲ್ಲಿ ಒಂದೆನಿಸಿದೆ.

ಇದು 1973ರಲ್ಲಿ ಸ್ಥಾಪನೆಯಾಯಿತು. ಇತ್ತೀಚಿನ 2010ರ QS ಗ್ಲೋಬಲ್ 200 ಬಿಸ್ನೆಸ್ ಸ್ಕೂಲ್ಸ್ ರಿಪೋರ್ಟ್ ಪ್ರಕಾರ IIM B, ಅಗ್ರ 5 ಏಷಿಯಾ-ಪೆಸಿಫಿಕ್ B-ಶಾಲೆಗಳಲ್ಲಿ(ಶಿಕ್ಷಣ ಸಂಸ್ಥೆಗಳಲ್ಲಿ) ಭಾರತದ ಏಕೈಕ ವಾಣಿಜ್ಯ ಶಾಲೆಯೆಂದು ಶ್ರೇಣೀಕರಣಗೊಂಡಿದೆ. ವಿಶ್ವಾದ್ಯಂತ ಇರುವ 'ಅಗ್ರ-ಐದು' ಪ್ರಾದೇಶಿಕ ವಿಶ್ವವಿದ್ಯಾಲಯಗಳೊಳಗೆ GMATನಲ್ಲಿ ಸರಾಸರಿ ಅತ್ಯಧಿಕ ಅಂಕಗಳನ್ನು ಇಲ್ಲಿನ ವಿದ್ಯಾರ್ಥಿಗಳು ಗಳಿಸಿದ್ದಾರೆ.. ಎಡ್ಯೂನಿವರ್ಸಲ್, ಪ್ಯಾರಿಸ್ , IIMBಯನ್ನು ಮಧ್ಯ ಏಷಿಯಾ, ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಏಷಿಯಾದ #1 ವಾಣಿಜ್ಯ ಶಾಲೆಯೆಂದೂ ಹಾಗು ವಿಶ್ವಾದ್ಯಂತ ಇರುವ ಅಗ್ರ 27 ಶಾಲೆಗಳಲ್ಲಿ ಒಂದೆಂದು ಶ್ರೇಣೀಕರಿಸಿದೆ. IIMB, ಯುರೋಪಿಯನ್ ಕ್ವಾಲಿಟಿ ಇಂಪ್ರೂವ್ಮೆಂಟ್ ಸಿಸ್ಟಂ (EQUIS)ನ ದೃಢೀಕರಣವನ್ನೂ ಸಹ ಪಡೆದಿದೆ. ಇದನ್ನು ಯುರೋಪಿಯನ್ ಫೌಂಡೆಶನ್ ಫಾರ್ ಮ್ಯಾನೇಜ್ಮೆಂಟ್ ಎಜುಕೇಶನ್ (EFMD) ಪರಿಚಯಿಸಿತು.

ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ
ಪ್ರಕಾರಸಾರ್ವಜನಿಕ
ಸ್ಥಾಪನೆ೧೯೭೩
ಡೀನ್ಪ್ರೊ. ತ್ರಿಲೊಚನ ಶಾಸ್ತ್ರೀ
ಡೈರೆಕ್ಟರ್ಪ್ರೊ. ಪಂಕಜ ಚಾವ್ಲಾ
ಶೈಕ್ಷಣಿಕ ಸಿಬ್ಬಂಧಿ
೧೦೦
ವಿದ್ಯಾರ್ಥಿಗಳು೧೨೦೦
ಸ್ನಾತಕೋತ್ತರ ಶಿಕ್ಷಣ೭೨೫
ಡಾಕ್ಟರೇಟ್ ವಿದ್ಯಾರ್ಥಿಗಳು
೧೦೦ ಸಂಶೋಧಕ ಫೆಲೋಗಳು
ಸ್ಥಳಬೆಂಗಳೂರು, ಕರ್ನಾಟಕ, ಭಾರತ
12°53′44.5″N 77°36′8.2″E / 12.895694°N 77.602278°E / 12.895694; 77.602278
ಆವರಣನಗರ ಪ್ರದೇಶ, 100 acres (0.4 km2)
ಜಾಲತಾಣwww.iimb.ernet.in

ಶೈಕ್ಷಣಿಕ ಕಾರ್ಯಕ್ರಮಗಳು

ಸಂಸ್ಥೆಯು ಈ ಕೆಳಕಂಡ ದೀರ್ಘಾವಧಿ ಶೈಕ್ಷಣಿಕ ವಿಷಯಗಳನ್ನು ಬೋಧಿಸುತ್ತದೆ:

  • ಎಕ್ಸಿಕ್ಯುಟಿವ್ ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಮ್ ಇನ್ ಮ್ಯಾನೇಜ್ಮೆಂಟ್ (EPGP)
  • ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಮ್ ಇನ್ ಮ್ಯಾನೇಜ್ಮೆಂಟ್ (PGP)
  • ಫೆಲೋ(ಡಾಕ್ಟರಲ್) ಪ್ರೋಗ್ರಾಮ್ ಇನ್ ಮ್ಯಾನೇಜ್ಮೆಂಟ್ (FPM)
  • ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಮ್ ಇನ್ ಸಾಫ್ಟ್ ವೇರ್ ಎಂಟರ್ಪ್ರೈಸ್ ಮ್ಯಾನೇಜ್ಮೆಂಟ್ (PGSEM)
  • ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಮ್ ಇನ್ ಪಬ್ಲಿಕ್ ಪಾಲಿಸಿ ಅಂಡ್ ಮ್ಯಾನೇಜ್ಮೆಂಟ್ (PGPPM)
  • ಎಕ್ಸಿಕ್ಯುಟಿವ್ ಜನರಲ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಫಾರ್ ಮಿಡಲ್ ಲೆವಲ್ ಮ್ಯಾನೆಜರ್ಸ್ (EGMP)
  • ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಫಾರ್ ಸೀನಿಯರ್ ಮ್ಯಾನೆಜರ್ಸ್ (AMP)
  • ಜನರಲ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಫಾರ್ IT ಎಕ್ಸಿಕ್ಯುಟಿವ್ಸ್(GMITE)
  • ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಫಾರ್ ಆಂಟ್ರಪ್ರನಿಯರ್ಸ್ ಅಂಡ್ ಫ್ಯಾಮಿಲಿ ಬಿಸ್ನೇಸಸ್ (MPEFB)
  • ಬಿಸ್ನೆಸ್ ಅನಾಲಿಟಿಕ್ಸ್ ಅಂಡ್ ಇಂಟೆಲಿಜೆನ್ಸ್ (BAI)

ದೀರ್ಘಾವಧಿ ಕಾರ್ಯಕ್ರಮಗಳ ಜೊತೆಯಲ್ಲಿ, IIMB ಕಾರ್ಯನಿರ್ವಹಣೆಗೆ ಸಂಬಂಧಿಸಿದ ಶೈಕ್ಷಣಿಕ ವಿಷಯಗಳನ್ನು ಇಲ್ಲಿ ಬೋಧಿಸಲಾಗುತ್ತದೆ; ಸಂಸ್ಥೆಯ ಬೋಧನಾಂಗವು ಭಾರತದ ಹಲವಾರು ಸಾರ್ವಜನಿಕ ಹಾಗು ಖಾಸಗಿ ಸಂಘ-ಸಂಸ್ಥೆಗಳಿಗೆ ಸಲಹೆ ನೀಡುತ್ತದೆ. ಇಂಟರ್ನ್ಯಾಷನಲ್ ಮಾಸ್ಟರ್ಸ್ ಪ್ರೋಗ್ರಾಮ್ ಇನ್ ಪ್ರಾಕ್ಟೀಸಿಂಗ್ ಮ್ಯಾನೇಜ್ಮೆಂಟ್ (IMPM) ಒಂದು ಕಾರ್ಯನಿರ್ವಹಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಹಯೋಗದ ಶಿಕ್ಷಣ ಕಾರ್ಯಕ್ರಮವಾಗಿದ್ದು, ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿ, ಲಂಡನ್ ಸ್ಕೂಲ್ ಆಫ್ ಬಿಸ್ನೆಸ್, GSB ಚಿಕಾಗೋ, INSEAD, ಮ್ಯಾಕ್ಗಿಲ್ ವಿಶ್ವವಿದ್ಯಾಲಯ, ಲಾಂಕ್ಯಾಸ್ಟರ್ ವಿಶ್ವವಿದ್ಯಾಲಯ, ESADE ವಾಣಿಜ್ಯ ಶಾಲೆ ಹಾಗು ಜಪಾನಿ ವಿಶ್ವವಿದ್ಯಾಲಯಗಳ ಒಂದು ಸಹಕಾರ ಕೂಟದೊಂದಿಗೆ ಜಂಟಿಯಾಗಿ IIMB ಶಿಕ್ಷಣ ನೀಡುತ್ತವೆ.

ಆಂಟ್ರಾಪ್ರನರ್ಶಿಪ್ ಇನ್ಕ್ಯೂಬೇಶನ್ ಸೆಂಟರ್ - NSRCEL (ಉದ್ಯಮ ಅಭಿವೃದ್ಧಿಯ ಚಿಂತನಾಶೀಲ ಶಿಕ್ಷಣ)

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು
ಆಂಟ್ರಾಪ್ರನಿಯರ್ಶಿಪ್ ಇನ್ಕ್ಯೂಬೇಶನ್ ಸೆಂಟರ್ - NSRCEL

IIM ಬೆಂಗಳೂರು, N S ರಾಘವನ್ ಸೆಂಟರ್ ಫಾರ್ ಆಂಟ್ರಪ್ರನಿರಲ್ ಲರ್ನಿಂಗ್ ಮೂಲಕ ಬೆಳವಣಿಗೆಯ ಆರಂಭಿಕ ಹಂತದಲ್ಲಿರುವ ಹಲವಾರು ಉದ್ಯಮಗಳಿಗೆ ನೆರವನ್ನೂ ಸಹ ನೀಡುತ್ತಿದೆ. ಕಾರ್ಯರೂಪಕ್ಕೆ ಬರುವ ಆರಂಭಿಕ ಉದ್ಯಮಗಳು ತಮ್ಮ ವ್ಯಾಪಾರಿ ಯೋಜನೆಗಳನ್ನು ಇಲ್ಲಿ ಸಲ್ಲಿಸಬೇಕು. ಈ ರೀತಿ ಸಲ್ಲಿಸಲಾದ ಯೋಜನಾ ವರದಿಗಳನ್ನು ಯಶಸ್ವೀ ಉದ್ದಿಮೆದಾರರು ಹಾಗು ಪ್ರಾಧ್ಯಾಪಕರನ್ನು ಒಳಗೊಂಡ ಒಂದು ಪ್ರಬುದ್ದ ಸಮಿತಿಯು ವಿಮರ್ಶಿಸುತ್ತದೆ. ಆಯ್ಕೆಯಾದ ಉದ್ಯಮಗಳಿಗೆ ಸ್ಥಳ ಮತ್ತು ಬೆಳವಣಿಗೆಗೆ ನೆರವು ನೀಡುವುದರ ಜೊತೆಗೆ ಅವರ ಈ ಸಾಹಸಕ್ಕೆ ಉದ್ಯಮದ ಆರಂಭಿಕ ಹಂತಗಳಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ.

ಎಕ್ಸಿಕ್ಯುಟಿವ್ ಎಜುಕೇಶನ್ ಪ್ರೋಗ್ರಾಮ್ - EEP (ವ್ಯವಸ್ಥಾಪನಾ ಕ್ರಿಯಾಶೀಲತೆಯ ಯೋಜನಾ ಶಿಕ್ಷಣ)

EEP, ಕಾರ್ಯನಿರ್ವಾಹಕ ಶಿಕ್ಷಣದ ಸರ್ಟಿಫಿಕೇಶನ್ ಪ್ರೋಗ್ರಾಮ್ ಗಳನ್ನು ಸೀನಿಯರ್ ಹಾಗು ಮಿಡಲ್ (ಹಿರಿಯ ಮತ್ತು ಮಧ್ಯಮ ತರಗತಿಯ ಆಡಳಿತ ವ್ಯವಸ್ಥೆ) ಮ್ಯಾನೇಜ್ಮೆಂಟ್ ಕಾರ್ಯನಿರ್ವಾಹಕರಿಗೆ ನೀಡುತ್ತದೆ. ಈ ಶೈಕ್ಷಣಿಕ ಪಠ್ಯವಿಷಯಗಳು ಅಲ್ಪಾವಧಿ ಹಾಗು ದೀರ್ಘಾವಧಿಯದ್ದಾಗಿರುತ್ತವೆ. EEP, ಅವರ ಅಗತ್ಯಗಳಿಗೆ ಹೊಂದಾಣಿಕೆಯಾಗುವಂತೆ ಉದ್ದಿಮೆಗಳೊಂದಿಗೆ ನಿಯಮಾನುಸಾರದ ನಿರ್ದೇಶಿತ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಇವು ಕೆಲಸ ಮಾಡುತ್ತವೆ. ದೀರ್ಘಾವಧಿಯ ಶೈಕ್ಷಣಿಕ ವಿಷಯಗಳೆಂದರೆ: ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್(AMP), ಇದು ಜನರಲ್ ಮ್ಯಾನೇಜರ್ ಗಳು(ವ್ಯವಸ್ಥಾಪಕರು) ಹಾಗು(VPs) ಉಪಾಧ್ಯಕ್ಷರೆಡೆಗಿನ ಕಾರ್ಯಕ್ರಮಗಳ ರೂಪಿಸುವ ಭವಿಷ್ಯತ್ತಿನ ಗುರಿ ಹೊಂದಿರುತ್ತದೆ. ಎಕ್ಸಿಕ್ಯುಟಿವ್ ಜನರಲ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ (EGMP), ಇದು ಮಿಡಲ್ ಮ್ಯಾನೇಜ್ಮೆಂಟ್ ಕಾರ್ಯನಿರ್ವಹಣೆಗೆ ಸಂಬಂಧಿಸಿದೆ. IT ಕಾರ್ಯನಿರ್ವಾಹಕರಿಗೆ ಜನರಲ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ (GMITE). ಬಿಸ್ನೆಸ್ ಅನಾಲಿಟಿಕ್ಸ್ ಅಂಡ್ ಇಂಟೆಲಿಜೆನ್ಸ್ (BAI).(ವ್ಯವಹಾರ ವಿಶ್ಲೇಷಣೆ ಮತ್ತು ಗೋಪ್ಯತೆ) ವಾಣಿಜ್ಯೋದ್ಯಮಿಗಳು ಹಾಗು ಕೌಟುಂಬಿಕ ವ್ಯವಹಾರಕ್ಕಾಗಿ MPEFB ಶಿಕ್ಷಣ Short Duration Open programmes for 2010-11 http://www.iimb.ernet.in/ಕಾರ್ಯನಿರ್ವಾಹಕ-ಶಿಕ್ಷಣ/

ಮುಕ್ತ-ಶಿಕ್ಷಣ-ಅಲ್ಪಾವಧಿ ಶೈಕ್ಷಣಿಕ ಕಾರ್ಯಕ್ರಮಗಳು

  1. ಅಧಿಕ ಪ್ರಭಾವಯುಳ್ಳ ನಾಯಕತ್ವ

ನಿರ್ವಹಣೆಯು ಪರಿಣಾಮಕಾರಿಯಾಗಲು ತೀರ್ಮಾನ ತೆಗೆದುಕೊಳ್ಳುವುದು

  1. ಹ್ಯೂಮನ್‌ ಕ್ಯಾಪಿಟಲ್‌ ಮ್ಯಾನೇಜ್‌ಮೆಂಟ್‌
  2. ಸಾಫ್ಟ್ ವೇರ್ ವೃತ್ತಿಪರರಿಗಾಗಿ ನಾಯಕತ್ವದ ತರಬೇತಿ
  3. ಹೊಸ ಮಾರುಕಟ್ಟೆಯಲ್ಲಿ ಲಾಭದ ಸಂಚಯದ ಸೃಷ್ಟಿ ಹಾಗು ಅದನ್ನು ಬೆಳೆಸುವುದು
  4. ಬ್ಯಾಂಕುಗಳು ಹಾಗು ಹಣಕಾಸು ಸಂಸ್ಥೆಗಳು ಎದುರಿಸುವ ಅಪಾಯವನ್ನು ಹೇಗೆ ನಿರ್ವಹಿಸಬೇಕೆಂಬುದರ ಬಗ್ಗೆ ಶಿಕ್ಷಣ
  5. ಸಿಕ್ಸ್ ಸಿಗ್ಮಾ ಗ್ರೀನ್ ಬೆಲ್ಟ್ ತರಬೇತಿ
  6. ಕಾರ್ಯವಿಧಾನವನ್ನು ನಿರ್ದಿಷ್ಟ ಮೂಲದಿಂದ ಪಡೆಯುವುದು ಹಾಗು ಸಪ್ಲೈ ಚೈನ್ ನಿರ್ವಹಣೆ (ಪೂರೈಕೆ ಕೊಂಡಿ)
  7. ಸ್ಟ್ರ್ಯಾಟೆಜಿಕ್ ಕಸ್ಟಮರ್ ಫೋಕಸ್
  8. ಸ್ಟ್ರ್ಯಾಟೆಜಿಕ್ ಕಾಸ್ಟ್ ಮ್ಯಾನೇಜ್ಮೆಂಟ್ (ವೆಚ್ಚ ನಿರ್ವಹಣಾ ವ್ಯವಸ್ಥೆ)
  9. ಕಾರ್ಯವಿಧಾನದ ನಿರ್ವಹಣೆ ಹಾಗು ಸ್ಪರ್ಧಾತ್ಮಕ ಪ್ರಯೋಜನ
  10. ಉತ್ಪಾದನೆಯ ಮೂಲಕ ಸ್ಪರ್ಧೆಯನ್ನು ಒಡ್ಡುವುದು
  11. ನಿರ್ವಹಣೆಯಲ್ಲಿ ಎದುರಾಗುವ ಅಪಾಯಗಳು ಹಾಗು ಸಾರ್ವಜನಿಕ ಖಾಸಗಿ ಸಹಯೋಗಗಳಲ್ಲಿನ ಒಪ್ಪಂದಗಳು
  12. ಪ್ರತಿಭೆಯ ನಿರ್ವಹಣೆ
  13. ಆಧುನಿಕ ಸಮಾಲೋಚನೆ
  14. ನಿರ್ವಹಣೆಗಾಗಿ ಸಲಹೆ ಪಡೆಯುವುದು: ಗ್ರಾಹಕರನ್ನು ಸಂಪಾದಿಸುವುದು ಹಾಗು ಅವರನ್ನು ಉಳಿಸಿಕೊಳ್ಳುವುದು
  15. ನಿರ್ಧಾರ ತೆಗೆದುಕೊಳ್ಳಲು ಬೇಕಾಗುವ ಹಣಕಾಸು(ಹಣಕಾಸು ವಿಭಾಗಕ್ಕೆ ಸೇರದ ವ್ಯವಸ್ಥಾಪಕರು)
  16. ಹಣಕಾಸು ಮೂಲಗಳನ್ನು ವಿಶದೀಕರಿಸುವುದು
  17. ನಾಯಕತ್ವದ ಉನ್ನತೀಕರಣ ಪ್ರತಿಷ್ಟಾಪನೆ
  18. ಬ್ಯಾಂಕುಗಳ ಮೌಲ್ಯ ಮಾಪನ ನಿರ್ಣಯ ಹಾಗು ಮೌಲ್ಯಾಧಾರಿತ ನಿರ್ವಹಣೆ
  19. ಯೋಜನೆಯ ಮಾಹಿತಿ-ಮೌಲ್ಯ ನಿರ್ಣಯ
  20. IT ಕಂಪನಿಗಳಿಗಾಗಿ ಸ್ಟ್ರ್ಯಾಟೆಜಿಕ್ ಲೀಡರ್ಶಿಪ್ ಪ್ರೋಗ್ರಾಮ್: ಕಾರ್ಯವಿಧಾನದ ಯೋಜನೆಯನ್ನು ಸ್ಥಾಪಿಸುವುದು
  21. ವ್ಯಾಪಾರದ ಮುಖಾಮುಖಿ(ಬಿಸ್ನೆಸ್-ಟು-ಬಿಸ್ನೆಸ್) ಮಾರಾಟಗಾರಿಕೆಯಲ್ಲಿನ ಪ್ರಗತಿ (B2B ಮಾರಾಟಗಾರಿಕೆ)
  22. ಕ್ರಿಯಾಶೀಲತೆಯ ಮರುಶೋಧನೆ ಮತ್ತು ಅನುಷ್ಠಾನಕ್ಕಾಗಿರುವ ವೃತ್ತಿಪರ ವ್ಯವಸ್ಥಾಪಕರಿಗೆ ಸ್ವಯಂಸಾಮರ್ಥ್ಯ ಹೆಚ್ಚಳಕ್ಕೆ ಪ್ರೊತ್ಸಾಹ
  23. ವಾಣಿಜ್ಯ ಒಪ್ಪಂದಗಳಲ್ಲಿ ಎದುರಾಗುವ ಸಮಸ್ಯೆಗಳ, ಅಪಾಯಗಳ ನಿರ್ವಹಣೆ
  24. ಮಾರಾಟಗಾರಿಕೆ ಹಾಗು ಬ್ರ್ಯಾಂಡಿಂಗ್ - ಮೂರು ಮಾರಾಟದ ಕವಲು-ಮಾರ್ಗಗಳ ಪ್ರಸ್ತಾಪ
  25. ಔಟ್ಸೋರ್ಸಿಂಗ್ ನಿರ್ವಹಣೆ: ಸಹಯೋಗದ ಮೂಲಕ ಮೌಲ್ಯ ಸೃಷ್ಟಿ
  26. ಸಾಫ್ಟ್ ವೇರ್ ಯೋಜನೆಯಲ್ಲಿ ತೊಡಗಿರುವ ಸಿಬ್ಬಂದಿ ನಿರ್ವಹಣೆ
  27. ಕಾರ್ಪೋರೆಟ್ ಮುಂಚೂಣಿಯಲ್ಲಿರುವ ನಾಯಕರುಗಳಿಗಾಗಿ 2011ರಲ್ಲಿ ಭಾರತದೊಂದಿಗೆ ವ್ಯಾಪಾರ ಮಾಡುವುದು.(ಡೂಯಿಂಗ್ ಬಿಸ್ನೆಸ್ ವಿಥ್ ಇಂಡಿಯಾ(DBI))
  28. ವಾಣಿಜ್ಯೋದ್ಯಮಿ/ಆಂಟ್ರಾಪ್ರಿನಿಯರಲ್ ನಾಯಕತ್ವದ ಮೂಲಕ ಮರುಶೋಧನೆ(ರೀಇನ್ವೆನ್ಷನ್ ಥ್ರೂ ಎಂಟರ್ಪ್ರಿನಿಯರಲ್/ಇಂಟ್ರಾಪ್ರಿನಿಯರ್ಲ್ ಲೀಡರ್ಶಿಪ್(REIL))
  29. ವ್ಯಾಪಕ ತೆರಿಗೆ ನಿರ್ವಹಣೆ - ಒಂದು ಸಮಗ್ರ ಪ್ರಸ್ತಾಪದ ಅಳವಡಿಕೆ
  30. ಸ್ಪರ್ಧಾತ್ಮಕ ಮಾರಾಟದ ಕಾರ್ಯವಿಧಾನ
  31. ಚಲನಚಿತ್ರ ಹಾಗು TV ಮನೋರಂಜನಾ ವೃತ್ತಿಪರರಿಗೆ ಜನರಲ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್
  32. ಕ್ರಿಯಾಶೀಲ ಮಾರಾಟಗಾರಿಕೆ
  33. ಅಂತರರಾಷ್ಟ್ರೀಯ ಸಮಾಲೋಚನಾ ಕೌಶಲಗಳು

ಕಾಲೇಜು ಆವರಣ

ಸಾಮಾನ್ಯವಾಗಿ ಇದು ಇಲ್ಲಿರಲೇಬೇಕಾದ(ಬ್ಲಾಕ್) "B"ಯ ಸ್ಥಳವೆಂದು ಕರೆಯಲ್ಪಡುತ್ತದೆ. ಇದು 16 ವಿದಾರ್ಥಿನಿಲಯದ ಕಟ್ಟಡಗಳು, ಒಂದು ಕಾರ್ಯನಿರ್ವಾಹಕರಿಗಾಗಿ ಮೀಸಲಾದ ವಿಭಾಗೀಯ ಕಟ್ಟಡ, PGPPM ನಲ್ಲಿ ಪಾಲ್ಗೊಳ್ಳುವವರಿಗಾಗಿ ಒಂದು MHU ಕಟ್ಟಡ ಹಾಗು ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಕಾರ್ಯನಿರ್ವಾಹಕರಿಗೆ ವಸತಿ ಸೌಕರ್ಯ ಹೊಂದಿದೆ. ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲಿನ ಕಟ್ಟಡದಲ್ಲಿರುವ ಸಂಸ್ಥೆಯ ವಸತಿ ನಿಲಯದಲ್ಲಿ ಪ್ರತ್ಯೇಕ ಸುಸಜ್ಜಿತ ಕೋಣೆಗಳನ್ನು ನೀಡಲಾಗುತ್ತದೆ. 24 ಘಂಟೆಗಳು ಇಂಟರ್ನೆಟ್ ಸಂಪರ್ಕ, ಸಂಪೂರ್ಣ ಆಟೋಮ್ಯಾಟಿಕ್ ವಾಶಿಂಗ್ ಮಷಿನ್ ಗಳು, ಸಂಗೀತ ಕೊಠಡಿ ಹಾಗು ಮನೋರಂಜನಾ ಕೊಠಡಿಗಳು ಇಲ್ಲಿನ ವಿಶಿಷ್ಟ ಲಕ್ಷಣಗಳಾಗಿವೆ. ಕಾಲೇಜು ಆವರಣವು ವೈ-ಫೈನ ಅನಕೂಲವನ್ನೂ ಸಹ ಪಡೆದಿದೆ. ದೋಬಿಖಾನೆ ಹಾಗು ಬಟ್ಟೆ ಮಡಿ ಮಾಡುವ ಇಸ್ತ್ರಿ ಸೌಲಭ್ಯಗಳನ್ನೂ ಸಹ ಒದಗಿಸಲಾಗುತ್ತದೆ. ವಸತಿ ನಿಲಯಗಳು ಆಂತರಿಕ ದೂರವಾಣಿ ಸಂಪರ್ಕ ಸೌಲಭ್ಯವನ್ನೂ ಸಹ ಹೊಂದಿವೆ. ಈ ವ್ಯವಸ್ಥೆ ಸಂಸ್ಥೆಯ ದೂರವಾಣಿ ಒಳಸಂಪರ್ಕಕ್ಕೆ ಜೋಡಿಸುತ್ತದೆ. ವಿದ್ಯಾರ್ಥಿಗಳೇ ನಡೆಸುವ 'ಬುಕ್ ರಾಕ್' ಎಂಬ ಗ್ರಂಥಾಲಯ, ಒಂದು ಮ್ಯೂಸಿಕ್ ಕ್ಲಬ್ ಹಾಗು ವಿದ್ಯಾರ್ಥಿ ನಿಲಯದ ಆವರಣದಲ್ಲಿ ವಿದ್ಯಾರ್ಥಿಗಳೇ ನಡೆಸುವ 'MARS' ಎಂಬ ಮಳಿಗೆಯಿದೆ. ಈ ಕಾಲೇಜು ಆವರಣವು ಬಾಲಿವುಡ್ ಚಿತ್ರ ಥ್ರೀ ಈಡಿಯಟ್ಸ್ ನ ಚಿತ್ರೀಕರಣದ ಸ್ಥಳವಾಗಿತ್ತು. ಚಿತ್ರವನ್ನು ರಾಜಕುಮಾರ್ ಹಿರಾನಿ ನಿರ್ದೇಶಿಸಿದ್ದು, ಅಮೀರ್ ಖಾನ್, ಕರೀನಾ ಕಪೂರ್, R. ಮಾಧವನ್ ಹಾಗು ಶರ್ಮಾನ್ ಜೋಷಿ ಮುಂತಾದವರು ತಾರಾಗಣದಲ್ಲಿದ್ದಾರೆ. ಈ ಚಿತ್ರ ಫೈವ್ ಪಾಯಿಂಟ್ ಸಮ್ ವನ್ ಎಂಬ ಪ್ರಸಿದ್ಧ ಕಾದಂಬರಿ ಆಧರಿಸಿದೆ. ಇದರ ಲೇಖಕ IIT ದೆಹಲಿಯ ಹಳೆ ವಿದ್ಯಾರ್ಥಿ ಚೇತನ್ ಭಗತ್

ಚಿತ್ರ ಗ್ಯಾಲರಿ

IIM ಬೆಂಗಳೂರಿನ ಪ್ರಮುಖ ಹಳೆಯ ವಿದ್ಯಾರ್ಥಿಗಳು

  • ಡಾ. K. ರಾಧಾಕೃಷ್ಣನ್ (ವಿಜ್ಞಾನಿ)- ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ನ ಇಸ್ರೊ ಅಧ್ಯಕ್ಷ, ಬೆಂಗಳೂರು
  • ಝೆಲುಂ ಚೌಧುರಿ - ಕ್ರಿಸ್ಟಲ್ ರಿಸರ್ಚ್ ಅಂಡ್ ಕನ್ಸಲ್ಟಿಂಗ್ ನ ಸ್ಥಾಪಕ
  • ಅಶೋಕ್ ಸಿನ್ಹಾ - ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ನಿರ್ವಾಹಕ ನಿರ್ದೇಶಕ
  • ಅರುಣ್ ಬಾಲಕೃಷ್ಣನ್ - ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಅಧ್ಯಕ್ಷ & ನಿರ್ವಾಹಕ ನಿರ್ದೇಶಕ
  • ವಸಂತ್ ನಾಯಕ್ - ನೋಮುರ ಇಂಟರ್ನ್ಯಾಷನಲ್ ನ ನಿರ್ವಾಹಕ ನಿರ್ದೇಶಕ
  • ನಾಗೇಂದ್ರ ವೆಂಕಸ್ವಾಮಿ - ಜುನಿಪರ್ ಇಂಡಿಯಾದ ಅಧ್ಯಕ್ಷ.
  • ಸಮೀರ್ ಕುಮಾರ್ - ಇನ್ವೆನ್ಟಸ್ ಇಂಡಿಯಾದ ನಿರ್ವಾಹಕ ನಿರ್ದೇಶಕ
  • ವಿನೋದ್ ನಾಯರ್ - ಎನ್ಜೆನ್ ಟೆಕ್ನಾಲಜಿಸ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ
  • ವಿಕಾಸ್ ಕೇದಿಯ - ಇಂಟರ್ನೆಕ್ಸ್ಟ್ ಟೆಕ್ನಾಲಜಿಸ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ
  • ಅಶ್ವಥ್ ದಾಮೋದರನ್ - ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬಿಸ್ನೆಸ್ ನಲ್ಲಿ ಹಣಕಾಸು, ಆಯವ್ಯಯಶಾಸ್ತ್ರದ ಪ್ರಾಧ್ಯಾಪಕ
  • ಚಂದನ್ ಚಟರ್ಜಿ-ಅಹಮದಾಬಾದ್ ನ ಮುದ್ರಾ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ಸ್ ನಲ್ಲಿ ಅಕ್ಯಾಡೆಮಿಕ್ಸ್ ಮುಖ್ಯಸ್ಥ
  • ಅಮರ್ ಲಖ್ಟಕಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ CEO & ಶೇರ್ಪZ ನ ಸಹ ಸಂಸ್ಥಾಪಕ ಹಾಗು ವೆಬಿಫೈ ಸಲ್ಯೂಷನಸ್ ನ ಸಹ ಸಂಸ್ಥಾಪಕ ಕೂಡ
  • ಡಾ. ತರುಣ್ ಸೇನ್, ವರ್ಜೀನಿಯ ಟೆಕ್ ನ ನಿವೃತ್ತ ಪ್ರಾಧ್ಯಾಪಕ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು ಶೈಕ್ಷಣಿಕ ಕಾರ್ಯಕ್ರಮಗಳುಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು ಆಂಟ್ರಾಪ್ರನರ್ಶಿಪ್ ಇನ್ಕ್ಯೂಬೇಶನ್ ಸೆಂಟರ್ - NSRCEL (ಉದ್ಯಮ ಅಭಿವೃದ್ಧಿಯ ಚಿಂತನಾಶೀಲ ಶಿಕ್ಷಣ)ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು ಎಕ್ಸಿಕ್ಯುಟಿವ್ ಎಜುಕೇಶನ್ ಪ್ರೋಗ್ರಾಮ್ - EEP (ವ್ಯವಸ್ಥಾಪನಾ ಕ್ರಿಯಾಶೀಲತೆಯ ಯೋಜನಾ ಶಿಕ್ಷಣ)ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು ಮುಕ್ತ-ಶಿಕ್ಷಣ-ಅಲ್ಪಾವಧಿ ಶೈಕ್ಷಣಿಕ ಕಾರ್ಯಕ್ರಮಗಳುಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು ಚಿತ್ರ ಗ್ಯಾಲರಿಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರುಬೆಂಗಳೂರುಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳು

🔥 Trending searches on Wiki ಕನ್ನಡ:

ಕನ್ನಡ ಸಾಹಿತ್ಯನದಿಹೈನುಗಾರಿಕೆವರ್ಗೀಯ ವ್ಯಂಜನಭಾರತದಲ್ಲಿ ತುರ್ತು ಪರಿಸ್ಥಿತಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕಿತ್ತಳೆರಾಮಅಲೆಕ್ಸಾಂಡರ್ಋಗ್ವೇದಪ್ಯಾರಾಸಿಟಮಾಲ್ಅಂಬಿಗರ ಚೌಡಯ್ಯಭಾರತದ ಇತಿಹಾಸಹದಿಬದೆಯ ಧರ್ಮಶ್ಚುತ್ವ ಸಂಧಿಭಾರತದ ತ್ರಿವರ್ಣ ಧ್ವಜಕಬಡ್ಡಿರಾಷ್ಟ್ರಕೂಟಸ್ವರವಿದುರಾಶ್ವತ್ಥಅರಣ್ಯನಾಶಭಾರತೀಯ ಧರ್ಮಗಳುಗೋಪಾಲಕೃಷ್ಣ ಅಡಿಗಬಿ. ಎಂ. ಶ್ರೀಕಂಠಯ್ಯಪುರಂದರದಾಸಕರ್ನಾಟಕ ರತ್ನತುಮಕೂರುರಾಮ್ ಮೋಹನ್ ರಾಯ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಟಿಪ್ಪು ಸುಲ್ತಾನ್ಜಾಹೀರಾತುಮೈಸೂರುಕಾಗೋಡು ಸತ್ಯಾಗ್ರಹಮಂಜುಳರಾಣಿ ಅಬ್ಬಕ್ಕಅರ್ಥಶಾಸ್ತ್ರನಾಯಕ (ಜಾತಿ) ವಾಲ್ಮೀಕಿಹಾಗಲಕಾಯಿಭಾರತದ ಸಂಸತ್ತುವಿಧಾನ ಪರಿಷತ್ತುಜೇನು ಹುಳುಭಾರತದ ಮಾನವ ಹಕ್ಕುಗಳುರಾಜಸ್ಥಾನ್ ರಾಯಲ್ಸ್ಅಲ್-ಬಿರುನಿಕನ್ನಡದ ಉಪಭಾಷೆಗಳುಸಾಲುಮರದ ತಿಮ್ಮಕ್ಕಭಾರತದ ಸಂವಿಧಾನ ರಚನಾ ಸಭೆಪಾಕಿಸ್ತಾನವಾಲಿಬಾಲ್ಯಕೃತ್ತುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕಬ್ಬುಮಗಧಹನುಮಂತಅವರ್ಗೀಯ ವ್ಯಂಜನಅಗಸ್ತ್ಯಪರಿಣಾಮಸಂಸ್ಕೃತವ್ಯವಸಾಯಧರ್ಮ (ಭಾರತೀಯ ಪರಿಕಲ್ಪನೆ)ಪರಿಸರ ವ್ಯವಸ್ಥೆಕನ್ನಡ ಸಂಧಿರಕ್ತ ದಾನಕನ್ನಡ ಅಕ್ಷರಮಾಲೆಜೂಲಿಯಸ್ ಸೀಜರ್ರಾಜ್ಯಸಭೆಕರ್ನಾಟಕ ಲೋಕಸೇವಾ ಆಯೋಗಉಪ್ಪು ನೇರಳೆಆದಿಪುರಾಣದಾವಣಗೆರೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತದ ಸಂವಿಧಾನದ ೩೭೦ನೇ ವಿಧಿಪ್ರಾಥಮಿಕ ಶಿಕ್ಷಣಗೋತ್ರ ಮತ್ತು ಪ್ರವರಮಂಡಲ ಹಾವುದ್ರಾವಿಡ ಭಾಷೆಗಳುಸಾಹಿತ್ಯಓಂ (ಚಲನಚಿತ್ರ)ತಾಳೀಕೋಟೆಯ ಯುದ್ಧ🡆 More