ಅಗಸ್ತ್ಯ

ಅಗಸ್ತ್ಯ ಸಪ್ತರ್ಷಿಗಳಲ್ಲಿ ಒಬ್ಬನು.

ಪ್ರಜಾಪತಿ ಬ್ರಹ್ಮನ ಪುತ್ರ ಮರೀಚಿ. ಈ ಮರೀಚಿಯ ಮಗ ಕಶ್ಯಪ. ಈ ಕಶ್ಯಪರಿಗೆ ಅದಿತಿಯಲ್ಲಿ ಮಿತ್ರಾವರುಣರೆಂಬ ಯಮಳರು ಜನಿಸಿದರು. ಒಮ್ಮೆ ಈ ಮಿತ್ರಾವರುಣರು ಭವ್ಯವಾದ ಯಜ್ಞವೊಂದನ್ನು ಮಾಡಲು ತೊಡಗಿದರು. ಅದಕ್ಕಾಗಿ ಎಲ್ಲ ದೇವತೆಗಳೂ, ಮುನಿಗಳೂ, ಪಿತೃದೇವತೆಗಳೂ ಬಂದು ಸೇರಿದ್ದರು. ಅಲ್ಲಿಗೆ ಅಪ್ಸರೆಯರಲ್ಲಿ ಅತಿ ಲಾವಣ್ಯವತಿಯಾದ ಊರ್ವಶಿಯು ಬಂದಳು. ದೀಕ್ಷಾಬದ್ಧರಾದ ಮಿತ್ರಾವರುಣರು ಈಊರ್ವಶಿಯನ್ನು ನೋಡಿದರು. ಅವಳನ್ನು ನೋಡುವ ಮಾತ್ರದಿಂದಲೇ ಅವರ ಮನಸ್ಸಿನಲ್ಲಿ ವಿಕಾರವುಂಟಾಯಿತು. ಕಠೋರವಾದ ನಿಷ್ಠೆಯಿಂದ ಆಚರಿಸಿದ ಅವರ ಬ್ರಹ್ಮಚರ್ಯ ಸಡಿಲಗೊಂಡಿತು. ಅವರಿಬ್ಬರಿಗೂ ವೀರ್ಯಸ್ಖಲನವಾಯಿತು. ಅದನ್ನು ಕುಂಭವೊಂದರಲ್ಲಿ ರಕ್ಷಿಸಿದರು. ಅದರಿಂದ ಎರಡು ಶಿಶುಗಳು ಹುಟ್ಟಿಬಂದವು. ಹಾಗೆ ಹುಟ್ಟಿದ ಮೊದಲ ಶಿಶುವೇ ಅಗಸ್ತ್ಯ. ಆದ್ದರಿಂದಲೇ ಇವರು ಕುಂಭಸಂಭವ. ಅಗಸ್ತ್ಯ ಮಹರ್ಷಿ ವಾತಾಪಿಯನ್ನು ಜೀರ್ಣಿಸಿಕೊಂಡವರು. ಇವರು ವಿಂಧ್ಯಪರ್ವತದ ಸೊಕ್ಕನ್ನು ಮುರಿದವರು. ಈ ಮಹರ್ಷಿಗಳು ಒಮ್ಮೆ ಇಡೀ ಸಮುದ್ರವನ್ನು ಕುಡಿದರು. ಶ್ರೀ ರಾಮ ರಾವಣನೊಂದಿಗೆ ಯುದ್ಧ ಮಾಡುತ್ತಿರುವಾಗ ಅಲ್ಲಿಗೆ ಅಗಸ್ತ್ಯ ಮಹರ್ಷಿ ಬಂದು ಶ್ರೀರಾಮನಿಗೆ ಆದಿತ್ಯ ಹೃದಯ ಸ್ತೋತ್ರವನ್ನು ಉಪದೇಶ ಮಾಡಿದರು.

Agastya/Agasthiyar
ಅಗಸ್ತ್ಯ
ಅಗಸ್ತ್ಯ ಮುನಿಯ ವಿಗ್ರಹ.
ಸಂಸ್ಕೃತ ಲಿಪ್ಯಂತರಣAgastya
Tamilஅகத்தியர்
ಸಂಲಗ್ನತೆಋಷಿ (sage), ಸಪ್ತರ್ಷಿ (seven sages)
ಸಂಗಾತಿಲೋಪಾಮುದ್ರ

ಖಗೋಳ ಶಾಸ್ತ್ರದಲ್ಲಿ

ಮಹಾವ್ಯಾಧ (ಒರೈಯನ್) ನಕ್ಷತ್ರಪುಂಜದ ಪೂರ್ವ-ದಕ್ಷಿಣಕ್ಕೆ ಇರುವ ಲುಬ್ಧಕದ (ಸಿರಿಯಸ್) ದಕ್ಷಿಣದಲ್ಲಿರುವ ಸಮಾನಪ್ರಕಾಶದ ನಕ್ಷತ್ರವೇ ಅಗಸ್ತ್ಯ (ಕ್ಯಾನೊಪಸ್). ಇದು ಕರಿನಾ ಪುಂಜದ ಪ್ರಥಮ ನಕ್ಷತ್ರ. ಭೂಮಿಯಿಂದ ಇದರ ದೂರ 65೦ ಜ್ಯೋತಿರ್ವರ್ಷಗಳು. ಇದರ ಪ್ರಕಾಶ ಸೂರ್ಯಪ್ರಕಾಶದ ಸುಮಾರು 1,೦೦,೦೦೦ದಷ್ಟು. ಕಾಣುವ ಅತಿ ಪ್ರಕಾಶಮಾನ ನಕ್ಷತ್ರಗಳಲ್ಲಿ ಇದು ಎರಡನೆಯದು.

ತಮಿಳು ಸಾಹಿತ್ಯದಲ್ಲಿ

ತಮಿಳು ನಾಡಿನ ಪೊದಿಯಲ್ ಬೆಟ್ಟದಲ್ಲಿ ನೆಲೆಸಿ ತಮಿಳುಭಾಷೆಗೆ ಜನ್ಮವಿತ್ತನೆಂದೂ ಅಗತ್ತಿಯಂ ಎಂಬ ಪ್ರಥಮ ತಮಿಳುವ್ಯಾಕರಣವನ್ನು ಬರೆದನೆಂದೂ ತಮಿಳು ಪ್ರಥಮ ಸಾಹಿತ್ಯ ಸಂಘದ ಅಧ್ಯಕ್ಷನಾಗಿದ್ದನೆಂದೂ ತಮಿಳು ಸಾಹಿತ್ಯದಲ್ಲಿ ವರ್ಣಿತವಾಗಿದೆ.

ಉಲ್ಲೇಖಗಳು

Tags:

ಕಶ್ಯಪಬ್ರಹ್ಮಚರ್ಯ

🔥 Trending searches on Wiki ಕನ್ನಡ:

ಚದುರಂಗದ ನಿಯಮಗಳುನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಸುಮಲತಾಚಾಣಕ್ಯಪ್ಯಾರಾಸಿಟಮಾಲ್ಋತುಬೆಳಕುಕನ್ನಡದಲ್ಲಿ ವಚನ ಸಾಹಿತ್ಯಗಣರಾಜ್ಯೋತ್ಸವ (ಭಾರತ)ವಿನಾಯಕ ಕೃಷ್ಣ ಗೋಕಾಕರೋಮನ್ ಸಾಮ್ರಾಜ್ಯತ್ರಿವೇಣಿಬ್ಯಾಂಕ್ಹಣಬಸವ ಜಯಂತಿಊಳಿಗಮಾನ ಪದ್ಧತಿಮಂಟೇಸ್ವಾಮಿಭಾರತದ ಸಂವಿಧಾನ ರಚನಾ ಸಭೆಕನ್ನಡದಲ್ಲಿ ಸಣ್ಣ ಕಥೆಗಳುಮಾನಸಿಕ ಆರೋಗ್ಯಅನುರಾಗ ಅರಳಿತು (ಚಲನಚಿತ್ರ)ಬುಡಕಟ್ಟುತುಳಸಿಶಕ್ತಿಶ್ಚುತ್ವ ಸಂಧಿಹೊಯ್ಸಳ ವಾಸ್ತುಶಿಲ್ಪಮಹಾತ್ಮ ಗಾಂಧಿಜಾತ್ಯತೀತತೆವಲ್ಲಭ್‌ಭಾಯಿ ಪಟೇಲ್ಧರ್ಮಒಗಟುಜಾತಿಮಾಸಗೋವಿಂದ ಪೈಭಾರತದಲ್ಲಿನ ಚುನಾವಣೆಗಳುಪ್ರೇಮಾಪಾಲಕ್ಹುಬ್ಬಳ್ಳಿನರೇಂದ್ರ ಮೋದಿವಿಧಾನ ಸಭೆ೧೬೦೮ರುಡ್ ಸೆಟ್ ಸಂಸ್ಥೆಕಲಬುರಗಿದಶಾವತಾರಕುಮಾರವ್ಯಾಸದರ್ಶನ್ ತೂಗುದೀಪ್ರಾಯಚೂರು ಜಿಲ್ಲೆತ್ರಿಪದಿನಗರಮಹಾಕವಿ ರನ್ನನ ಗದಾಯುದ್ಧಅನುಶ್ರೀಕೃಷ್ಣಾ ನದಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಚನ್ನಬಸವೇಶ್ವರಜವಾಹರ‌ಲಾಲ್ ನೆಹರುಸೈಯ್ಯದ್ ಅಹಮದ್ ಖಾನ್ಪು. ತಿ. ನರಸಿಂಹಾಚಾರ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ದಕ್ಷಿಣ ಕನ್ನಡಭಕ್ತಿ ಚಳುವಳಿಬ್ರಹ್ಮಮಾದಕ ವ್ಯಸನತಾಳಗುಂದ ಶಾಸನಕೊಪ್ಪಳಅನುರಾಧಾ ಧಾರೇಶ್ವರಮೈಸೂರು ಸಂಸ್ಥಾನಸ್ತ್ರೀಸ್ವಚ್ಛ ಭಾರತ ಅಭಿಯಾನವಿಜಯನಗರನವಿಲುಛತ್ರಪತಿ ಶಿವಾಜಿಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಕನ್ನಡ ಜಾನಪದಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಶಾಸನಗಳುಮಹಿಳೆ ಮತ್ತು ಭಾರತ🡆 More