ಅವತಾರ

ಅವತಾರ (ಸಂಸ್ಕೃತ: अवतार, ಐಎಎಸ್ಟಿ: ಅವತಾರಾ; ಸಂಸ್ಕೃತ ಉಚ್ಚಾರಣೆ: ), ಹಿಂದೂ ಧರ್ಮದಲ್ಲಿ ಮೂಲ ಎಂಬ ಅರ್ಥವನ್ನು ನೀಡುತ್ತದೆ.

ಇದು ಭೂಮಿಯ ಮೇಲಿನ ದೇವತೆಯ ವಸ್ತು ನೋಟ ಅಥವಾ ಅವತಾರವಾಗಿದೆ. ಈ ಪದವನ್ನು ಹೆಚ್ಚಾಗಿ ವಿಷ್ಣುವಿನೊಂದಿಗೆ ಬಳಸಲಾಗುತ್ತದೆ. ಆದರೂ ಬೇರೆ ದೇವತೆಗಳಿಗೂ ಕೆಲವೊಮ್ಮೆ ಬಳಸಲಾಗುತ್ತದೆ. ವಿಷ್ಣು ಅವತಾರಗಳ ಹಲವಾರು ಪಟ್ಟಿಗಳು ಹಿಂದೂ ಪುರಾಣಗಳಲ್ಲಿ ಕಂಡುಬರುತ್ತವೆ, ಇದರಲ್ಲಿ ಗರುಡ ಪುರಾಣದ ದಶಾವತಾರ ಹಾಗೂ ಭಾಗವತ ಪುರಾಣದ ಇಪ್ಪತ್ತೆರಡು ಅವತಾರಗಳು ಸೇರಿವೆ, ಭಾಗವತ ಪುರಾಣದಲ್ಲಿ ನಂತರ ವಿಷ್ಣುವಿನ ಅವತಾರಗಳು ಅಗಣಿತ ಎನ್ನುತ್ತದೆ. ವಿಷ್ಣುವಿನ ಅವತಾರಗಳು ವೈಷ್ಣವಧರ್ಮದ ಮುಖ್ಯವಾದ ಆಂಶ. ಶಿವ ಹಾಗು ಗಣೇಶ ಕೂಡ ಅವತಾರಿಗಳಾಗಿರುವುದನ್ನು ಉಲ್ಲೇಖಿಸಲಾಗಿದೆ.

ಅವತಾರ
ವಿಷ್ಣುವಿನ ದಶಾವತಾರಗಳು (ಮತ್ಸ್ಯ, ಕೂರ್ಮ, ವರಾಹ, ವಾಮನ, ಕೃಷ್ಣ, ಕಲ್ಕಿ, ಬುದ್ಧ, ಪರಶುರಾಮ, ರಾಮ ಹಾಗೂ ನರಸಿಂಹ, ಹಾಗೂ ಕೃಷ್ಣ. ಜೈಪುರಿನ ವರ್ಣಚಿತ್ರ, ಈಗ ವಿಕ್ಟೋರಿಯಾ ಹಾಗು ಆಲ್ಬರ್ಟ್ ಮ್ಯೂಸಿಯಂ ನಲ್ಲಿ.

ಶಬ್ದನಿಷ್ಪತ್ತಿ ಹಾಗು ಅರ್ಥ

ಸಂಸ್ಕೃತ ನಾಮಪದ avatāra ಇದರ ಅರ್ಥ tṝ "ದಾಟಿ ಹೋಗುವುದು", ಇದಕ್ಕೆ ಪೂರ್ವಪ್ರತ್ಯಯವಾಗಿ ava "ಆಚೆಗೆ, ಕೆಳಗೆ" ಸೇರಿಸಲಾಗಿದೆ. ಈ ಪದ ವೇದಗಳಲ್ಲಿ ಬರುವುದಿಲ್ಲ, ಆದರೆ (೩.೩.೧೨೦)ರಲ್ಲಿ ದಾಖಲಾಗಿದೆ. Avatāra ಆರಂಭದಲ್ಲಿ ಪ್ರತ್ಯೇಕ ದೇವತೆಗಳನ್ನು ವರ್ಣಿಸಲು ಬಳಸಲಾಗಿತ್ತು, ೬ನೇಯ ಶತಮಾನದಲ್ಲಿ ವಿಷ್ಣುವಿನ ಅಭಿವ್ಯಕ್ತಿಗಳು ವರ್ಣಿಸಲು ಬಳಸಲಾರಂಭಿಸಲಾಯಿತು.

ವಿಷ್ಣುವಿನ ಅವತಾರಗಳು

ಅವತಾರ 
ಮತ್ಸ್ಯ,ವಿಷ್ಣುವಿನ ಮೀನು ಅವತಾರ

ಹಿಂದೂ ಧರ್ಮದಲ್ಲಿ ಅವತಾರದ ಪರಿಕಲ್ಪನೆ ಹೆಚ್ಚಾಗಿ ವಿಷ್ಣುವಿನೊಂದಿಗೆ ಬಳಸಲಾಗುತ್ತದೆ. ವಿಷ್ಣುವು ಅವತಾರಗಳನ್ನು ವಿಶೇಷ-ಉದ್ದೇಶಕ್ಕೆ ತಾಳುತ್ತಾನೆ. ಭಗವದ್ ಗೀತಾದಲ್ಲಿ ವಿವರಿಸಿದಂತೆ ವಿಷ್ಣು ಅವತಾರ ಭೂಮಿಯಲ್ಲಿ ಧರ್ಮವನ್ನು ಕಾಪಾಡಲು ಬರುವನು.

ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ
ತದಾತ್ಮಾನಾಂ ಸೃಜಾಮ್ಯಹಮ್ .

ಪರಿತ್ರಾಣಾಯ ಸಾಧೂನಾಮ್
ವಿನಾಶಾಯ ಚ ದುಷ್ಕ್ರತಾಮ್,

ಧರ್ಮಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ.

— ಭಗವದ್ ಗೀತಾ ೪.೭–೮

ವಿಷ್ಣುವಿನ ಅವತಾರಗಳಾದ ಕೃಷ್ಣ ಹಾಗು ರಾಮನನ್ನು ಧರ್ಮಗ್ರಂಥಗಳಾದ ಮಹಾಭಾರತ ಹಾಗು ರಾಮಾಯಣದಲ್ಲಿ ವರ್ಣಿಸಲಾಗಿದೆ.

ದಶಾವತಾರ

ಅವತಾರ 
ವರಾಹ, ವಿಷ್ಣುವಿನ ಹಂದಿ ಅವತಾರ (೧೮ನೇಯ ಶತಮಾನದ ವರ್ಣಚಿತ್ರ)

ವಿಷ್ಣುವಿನ ಆತಿ ಪ್ರಸಿದ್ದವಾದ ಅವತಾರಗಳ ಪಟ್ಟಿಯನ್ನು ದಶಾವತಾರ ಎನ್ನಲಾಗುತ್ತದೆ. ಇದರ ಅರ್ಥ "ಹತ್ತು ಅವತಾರಗಳು". ಈ ಪಟ್ಟಿಯನ್ನು ಗರುಡ ಪುರಾಣದಲ್ಲಿ ಕಾಣಬಹುದು (೧.೮೬.೧೦"೧೧). ವಿಷ್ಣುವಿನ ಮೊದಲ ನಾಲ್ಕು ಅವತಾರಗಳು ಸತ್ಯ ಯುಗದಲ್ಲಿ ಆಗುತ್ತದೆ (ಹಿಂದೂ ಧರ್ಮದಲ್ಲಿನ ನಾಲ್ಕು ಯುಗಗಳಲ್ಲಿ ಮೊದಲನೆಯದು). ನಂತರದ ಮೂರು ಅವತಾರಗಳು ತ್ರೇತ ಯುಗದಲ್ಲಿ, ಎಂಟನೆಯ ಅವತಾರ ದ್ವಾಪರ ಯುಗದಲ್ಲಿ ಹಾಗು ಒಂಬತ್ತನೆಯ ಅವತಾರ ಕಲಿ ಯುಗದಲ್ಲಿ, ಹತ್ತನೇ ಅವತಾರ ಕಲ್ಕಿ, ಕಲಿ ಯುಗ ಕೊನೆಯಲ್ಲಿ ಸಂಭವಿಸುವುದಾಗಿ ಹೇಳಲಾಗುತ್ತದೆ.

  1. ಮತ್ಸ್ಯ, ಮೀನು-ಅವತಾರ, ಮನುವನ್ನು (ಮಾನವ ಕುಲದ ಮೂಲ) ಮಹಾಪೂರದಿಂದ ಪಾರು ಮಾಡಿದ.
  2. ಕೂರ್ಮ, ಆಮೆ-ಅವತಾರ, ಸಮುದ್ರ ಮಂಥನದ ವೇಳೆ - ಸಾಗರವನ್ನು ಕಡೆಯಲು ಸಹಾಯ ಮಾಡಿದ.
  3. ವರಾಹ, ಹಂದಿ-ಅವತಾರ, ಹಿರಣ್ಯಾಕ್ಷನಿಂದ ಭೂಮಿಯನ್ನು ರಕ್ಷಿಸಿದ.
  4. ನರಸಿಂಹ,ಅರ್ಧ ಮನುಷ್ಯ ಅರ್ಧ ಸಿಂಹ ಅವತಾರ, ದುಷ್ಟ ಅಸುರ ಹಿರಣ್ಯಕಶಿಪುವನ್ನು ಕೊಂದು ಅವನ ಮಗ ಪ್ರಹ್ಲಾದನನ್ನು ರಕ್ಷಿಸಿದ.
  5. ವಾಮನ, ಗುಚ್ಚ/ಕುಳ್ಳ-ಅವತಾರ, ರಾಜ ಮಹಾಬಲಿಯನ್ನು ಅಡಗಿಸಿದ
  6. ಪರಶುರಾಮ, ಸಾವಿರ ಕೈಗಳುಳ್ಳ ಕಾರ್ತವೀರ್ಯಾರ್ಜುನನನ್ನು ಸೋಲಿಸಿದ ಋಷಿ.
  7. ರಾಮ, ಅಯೋಧ್ಯದ ರಾಜ ಹಾಗು ಹಿಂದೂ ಮಹಾಕಾವ್ಯ ರಾಮಾಯಣದ ನಾಯಕ.
  8. ಕೃಷ್ಣ, ದ್ವಾರಕದ ರಾಜ, ಭಾಗವತ ಪುರಾಣ ಹಾಗು ಮಹಾಭಾರತದ ಕೇಂದ್ರ ಪಾತ್ರಿ ಹಾಗು ಭಗವದ್ಗೀತೆಯ ವಾಚಕ.
  9. ಕಲ್ಕಿ ("ಶಾಶ್ವತತೆ", ಅಥವಾ "ಸಮಯ", or "ಕ್ರೌರ್ಯದ ನಾಶಕ"), ಕಲಿ ಯುಗದ ಕೊನೆಯಲ್ಲಿ ಬರುವ ನಿರೀಕ್ಷೆಯಿದೆ.

ಬಲರಾಮ, ಕೃಷ್ಣನ ಅಣ್ಣನನ್ನು ಕೆಲವೊಮ್ಮೆ ದಶವತಾರ[ಸೂಕ್ತ ಉಲ್ಲೇಖನ ಬೇಕು]ದ ಪಟ್ಟಿಯಲ್ಲಿ , ಬುದ್ಧನ ಬದಲಾಗಿ ಉಲ್ಲೇಖಿಸುತ್ತಾರೆ. ಇನ್ನು ಕೆಲವಡೆ ಬಲರಾಮನನ್ನು ಅವತಾರ ವಿಷ್ಣುವಿನ ಭಾಗಶಃ ಅವತಾರ ಅಥವಾ ಶೇಷನ (ವಿಷ್ಣು ಮಲಗುವ ಹಾವು),ಅವತಾರವಾಗಿ ಪರಿಗಣಿಸಲಾಗುತ್ತದೆ.

ಭಾಗವತ ಪುರಾಣದಲ್ಲಿ

ಅವತಾರ 
ಮೋಹಿನಿ, ವಿಷ್ಣುವಿನ ಏಕೈಕ ಸ್ತ್ರೀ ಅವತಾರ(ಬೇಳೂರು ದೇವಸ್ತಾನದಲ್ಲಿನ ವಿಗ್ರಹ)

ಭಾಗವತ ಪುರಾಣದಲ್ಲಿ ವಿಷ್ಣುವಿನ ೪೦ ಅವತಾರಗಳನ್ನು ಪಟ್ಟಿಸಲಾಗಿದೆ.

  1. ನಾಲ್ಕು ಕುಮಾರರು [ಬಪು ೧.೩.೬] - ಬ್ರಹ್ಮನ ನಾಲ್ಕು ಮಕ್ಕಳು
  2. ವರಾಹ [ಬಪು ೧.೩.೭]
  3. ನಾರದ [ಬಪು ೧.೩.೮] ಲೋಕಗಳನ್ನು ಸಂದರ್ಶನ ಮಾಡುವ ದೇವ ಋಷಿ ಹಾಗು ವಿಷ್ಣುವಿನ ಭಕ್ತ.
  4. ನರ-ನಾರಾಯಣ [ಬಪು ೧.೩.೯] - ಅವಳಿ ಋಷಿಗಳು
  5. ಕಪಿಲ [ಬಪು ೧.೩.೧೦] - ಋಷಿ ಹಾಗು ಸಂಖ್ಯ ತತ್ವಜ್ಞಾನದ ಶಾಲೆಯ ಸಂಸ್ಥಾಪಕರಲ್ಲಿ ಒಬ್ಬ.
  6. ದತ್ತಾತ್ರೇಯ [ಬಪು ೧.೩.೧೧] - ಹಿಂದೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗು ಶಿವನ ಸಂಯೋಜಿತ ಅವತಾರ.
  7. ಯಜ್ಞ [ಬಪು ೧.೩.೧೨] - ಅಗ್ನಿ ಕೊಂಡಲದ ಅಧಿಪತಿ
  8. ರಿಷಭ [ಬಪು ೧.೩.೧೩] - ರಾಜ ಭಾರತ ಹಾಗು ಬಾಹುಬಲಿಯ ತಂದೆ
  9. ಪ್ರಿತು [ಬಪು ೧.೩.೧೪] - ಭೂಮಿಯನ್ನು ಹಸುವಿನಂತೆ ಕರೆದ ಸಾರ್ವಭೌಮ ಹಾಗು ಬೇಸಾಯದ ತಂದೆ
  10. ಮತ್ಸ್ಯ [ಬಪು ೧.೩.೧೫]
  11. ಕೂರ್ಮ [ಬಪು ೧.೩.೧೬]
  12. ಧನ್ವಂತರಿ [ಬಪು ೧.೩.೧೭] - ಆಯುರ್ವೇದದ ತಂದೆ
  13. ಮೋಹಿನಿ [ಬಪು ೧.೩.೧೭] - ಮೋಹಗಾತಿ
  14. ನರಸಿಂಹ[ಬಪು ೧.೩.೧೮]
  15. ವಾಮನ [ಬಪು ೧.೩.೧೯]
  16. ಪರಶುರಾಮ [ಬಪು ೧.೩.೨೦]
  17. ವ್ಯಾಸ [ಬಪು] ೧.೩.೨೧] - ವೇದ ಗ್ರಂಥಗಳ ಸಂಕಲಕ ಮತ್ತು ಪುರಾಣ ಗ್ರಂಥಗಳು ಹಾಗು ಮಹಾಕಾವ್ಯ ಮಹಾಭಾರತದ ಲೇಖಕ
  18. ರಾಮ [ಬಪು ೧.೩.೨೨]
  19. ಬಲರಾಮ [ಬಪು ೧.೩.೨೩]
  20. ಕೃಷ್ಣ [ಬಪು ೧.೩.೨೩]
  21. ಬುದ್ಧ [ಬಪು ೧.೩.೨೪]
  22. ಕಲ್ಕಿ [ಬಪು ೧.೩.೨೫ ]

ಇದ್ದಲ್ಲದೆ ಇನ್ನು ನಾಲ್ಕು ಅವತಾರಗಳನ್ನು ನಂತರ ಪಟ್ಟಿಸಲಾಗಿದೆ:

  1. ಪ್ರ್ಶ್ನಿಗರ್ಭ [ಬಪು ೧೦.೩.೪೧] - ಪ್ರಶ್ನಿಯಾ ಮಗ
  2. ಹಯಗ್ರೀವ [ಬಪು ೨.೭.೧೧] - ಕುದುರೆ ಮುಖದ ಅವತಾರ
  3. ಹಂಸ [ಬಪು ೧೧.೧೩.೧೯] - ಹಂಸ
  4. ಸುವರ್ಣ ಅವತಾರ [ಬಪು ೧೧.೫.೩೨] - ಹರಿ-ನಾಮಸಂಕೀರ್ತನ ಪ್ರಸಾರಿಸಲು ಕಲಿ-ಯುಗದ ಅವತಾರ

ಗಣೇಶನ ಅವತಾರಗಳು

ಚಿತ್ರ:Ganesha of four yugas.jpg
(ಮೇಲಿನಿಂದ ಎಡತಿರುವು) ಗಣೇಶ ಪುರಾಣದ ಗಣೇಶನ ನಾಲ್ಕು ಅವತಾರ: ಮಹೋತ್ಕಟ, ಮಯುರೆಸ್ವರ, ಧುಮ್ರಕೆತು ಹಾಗು ಗಜಾನನ (ಸಿದ್ಧಿವಿನಾಯಕ ದೇವಸ್ತಾನ, ಮುಂಬೈನಲ್ಲಿಯ ಆಧುನಿಕ ಚಿತ್ರಕಲೆ).

ಲಿಂಗ ಪುರಾಣದಲ್ಲಿ ಗಣೇಶ ಅವತಾರತಾಳಿ ದುಷ್ಟರನ್ನು ನಿಗ್ರಹಿಸಿ, ಶಿಷ್ಟರನ್ನು ಕಾಪಾಡುವುದಾಗಿ ಹೇಳಲಾಗಿದೆ. ಎರಡು ಉಪಪುರಾಣಗಳಾದ - ಗಣೇಶ ಪುರಾಣ ಹಾಗು ಮುದ್ಗಳ ಪುರಾಣ - ಗಣೇಶನ ಅವತಾರಗಳನ್ನು ವರ್ಣಿಸಿವೆ. ಗಣೇಶನ ನಾಲ್ಕು ಅವತಾರಗಳನ್ನು ಗಣೇಶ ಪುರಾಣದಲ್ಲಿ ಪಟ್ಟಿ ಮಾಡಲಾಗಿದೆ: ಮೊಹೊತ್ಕಟ, ಮಯುರೆಶ್ವರ, ಗಜಾನನ ಹಾಗು ಧುಮ್ರಕೇತು. ಪ್ರತಿಯೊಂದು ಅವತಾರವು ಒಂದು ಯುಗಕ್ಕೆ ಸೇರಿದೆ, ಬೇರೆಬೇರೆ ವಾಹನ ಹಾಗು ಬೇರೆ ಬೇರೆ ವರ್ಣ ಹೊಂದಿರುತ್ತದೆ, ಎಲ್ಲ ಅವತಾರಗಳಿಗೂ ಒಂದೇ ಉದ್ದೇಶವಿದೆ: ದುಷ್ಟಸಂಹಾರ. ಮುದ್ಗಳ ಪುರಾಣ ಗಣೇಶನ ಎಂಟು ಅವತಾರಗಳನ್ನು ವರ್ಣಿಸಿದೆ:

  1. ವಕ್ರತುಂಡ (Vakratuṇḍa) ("ತಿರುಚು ಸೊಂಡಿಲು"), ಇವನ ವಾಹನ ಸಿಂಹ.
  2. ಏಕದಂತ ("ಒಂಟಿ ದಂತ"), ವಾಹನ ಇಲಿ.
  3. ಮಹೋದರ ("ದೊಡ ಹೊಟ್ಟೆ"), ವಾಹನ ಇಲಿ.
  4. ಗಜವಕ್ತ್ರ (ಅಥವಾ ಗಜಾನನ) ("ಆನೆ ಮುಖ"), ವಾಹನ ಇಲಿ
  5. ಲಂಬೋದರ ("ತೂಗಾಡುತ್ತಿರುವ ಹೊಟ್ಟೆ") , ವಾಹನ ಇಲಿ.
  6. ವಿಕಟ (Vikaṭa) ("ವಿರೂಪದ", "ವಿಕೃತ"), ವಾಹನ ನವಿಲು.
  7. ವಿಘ್ನರಾಜ (Vighnarāja) ("ಅಡೆತಡೆಗಳ ರಾಜ"), ವಾಹನ ಸ್ವರ್ಗೀಯ ಹಾವುŚeṣa.
  8. ಧೂಮ್ರವರ್ಣ (Dhūmravarṇa) ("ಬೂದು ಬಣ್ಣ") ಶಿವನ ಪರ್ಯಾಯವಾಗಿ, ವಾಹನ ಕುದರೆ.

ಶಿವನ ಅವತಾರಗಳು

ಅವತಾರ 
ಶರಭ (ಬಲಕ್ಕೆ) ಹಾಗು ನರಸಿಂಹ (೧೮ನೇಯ ಶತಮಾನದ ವರ್ಣಚಿತ್ರ, ಪಹರಿ/ಕಂಗ್ರ ಶಾಲೆ)

ಪೌರಾಣಿಕ ಗ್ರಂಥಗಳಲ್ಲಿ ಶಿವನ ಅವತಾರಗಳ ಬಗ್ಗೆ ಉಲ್ಲೇಖಗಳು ಇದ್ದರೂ ಇದನ್ನು ಶೈವಧರ್ಮದಲ್ಲಿ ಸಾರ್ವತ್ರಿಕವಾಗಿ ಒಪ್ಪಿಕೊಳುವುದಿಲ್ಲ. ಲಿಂಗ ಪುರಾಣದಲ್ಲಿ ಶಿವನ ಇಪ್ಪತ್ತೆಂಟು ಅವತಾರಗಳ ಬಗ್ಗೆ ಹೇಳಿಕೆ ಇದೆ. ಶಿವ ಪುರಾಣದಲ್ಲಿ ಶೈವ ಧರ್ಮ ಪ್ರತ್ಯೇಕವಾಗಿ ಒಂದು ಅವತಾರದ ಉಲ್ಲೇಖನೆ ಇದೆ: ಶಿವ, ವಿಷ್ಣು ಅವತಾರವಾದ ನರಸಿಂಹನನ್ನು ಶಾಂತಗೊಳಿಸಲು, ಭಯಂಕರವಾದ ವೀರಭದ್ರ ಅವತಾರವನ್ನು ತಾಳುತ್ತಾನೆ. ಅದು ವಿಫಲಗೊಂಡಾಗ, ಶಿವ ಮನುಷ್ಯ-ಸಿಂಹ-ಪಕ್ಷಿ ಅವತಾರವಾದ ಶರಭಾವತಾರವನ್ನು ತಾಳುತ್ತಾನೆ. ಕಥೆ ಅಂತ್ಯದಲ್ಲಿ ನರಸಿಂಹ ಶರಭದ ಹಿಡಿತದಲ್ಲಿ ಸಿಕ್ಕಿ ಶಿವನ ಭಕ್ತನಾಗುತ್ತಾನೆ. ಆದರೆ, ವೈಷ್ಣವ ಧರ್ಮಪಾಲಕರು ಇದನ್ನು ಒಪ್ಪಿಕೊಳುವುದಿಲ್ಲ. ವಿಷ್ಣುವಿನ ಅವತಾರ ರಾಮನಿಗೆ ಸಹಾಯ ಮಾಡಿದ ವಾನರ ದೇವ ಹನುಮಂತನನ್ನು ರುದ್ರನ (ಶಿವನ) ಹನ್ನೊಂದನೆಯ ಅವತಾರವಾಗಿ ಕೆಲವರು ಭಾವಿಸುತ್ತಾರೆ. ಕೆಲವು ಪ್ರಾದೇಶಿಕ ದೇವತೆಗಳನ್ನು ಖಂಡೋಬ ಶಿವನ ಅವತಾರ ಎನಲಾಗುತ್ತದೆ.

ದೇವಿಯ ಅವತಾರಗಳು

ಅವತಾರ 
೧೭ನೆಯ ಶತಮಾನದ ವರ್ಣಚಿತ್ರದಲ್ಲಿ ಹನುಮಂತ ರಾಮ ಹಾಗು ಸೀತೆಯನ್ನು ಪೂಜಿಸ್ಸುತ್ತಿರುವುದು. ಲಕ್ಷ್ಮಣ ಕೂಡ ಇಲ್ಲಿ ಕಂಡುಬರುತ್ತಾನೆ. ರಾಮ ವಿಷ್ಣುವಿನ ಅವತಾರವೆಂದೂ, ಸೀತೆ ವಿಷ್ಣುವಿನ ಪತ್ನಿ ಲಕ್ಷ್ಮಿಯ ಅವತಾರವೆಂದೂ, ಲಕ್ಷ್ಮಣ ಶೇಷನ ಅವತಾರ, ಹಾಗು ಹನುಮಂತ ಶಿವನ ಅವತಾರವೆಂದೂ ಭಾವಿಸಲಾಗಿದೆ.

ಶಕ್ತಿಧರ್ಮದಲ್ಲೂ ಅವತಾರಗಳು ಕಂಡುಬರುತ್ತದೆ, ಈ ಪಂಗಡದವರು (ದೇವಿ)ಯನ್ನು ಪುಜಿಸ್ಸುತ್ತಾರೆ. ದೇವಿ ಭಾಗವತ ಪುರಾಣದೇವಿ ಅವತಾರಗಳನ್ನು ವರ್ಣಿಸುತ್ತದೆ, ದುಷ್ಟರನ್ನು ಶಿಕ್ಷಿಸಲು ಹಾಗು ಶಿಸ್ಟರನ್ನು ರಕ್ಷಿಸಲು ದೇವಿಯು ಅವತಾರವನ್ನು ತಳುತಾಳೆ, ಭಾಗವತ ಪುರಾಣದಲ್ಲಿ ವಿಷ್ಣುವಿನ ಅವತಾರದ ರೀತಿ. ವಿಷ್ಣುವಿನಂತೆ, ಅವನ ಪತ್ನಿ ಲಕ್ಷ್ಮಿ ಸೀತೆಯಾಗಿ ಹಾಗು ರಾಧಾಳಾಗಿ ಜನಿಸುತ್ತಾಳೆ - ರಾಮ ಹಾಗು ಕೃಷ್ಣ ಅವತಾರಗಳ ಪತ್ನಿಯರು. ನಿಳಕಂಥ, ೧೮ನೆಯ ಶತಮಾನದ ವಿವರಣಕಾರ ದೇವಿ ಭಾಗವತ ಪುರಾಣ ಕುರಿತು - ಇದರಲ್ಲಿ ದೇವಿ ಗೀತಾ ಕೂಡ ಒಳಗೊಂಡಿದೆ - ಹೇಳುವುದು ದೇವಿಯ ಹಲವು ಅವತಾರಗಳಲ್ಲಿ trimurtigalige shakti nidi jagattannu salahuttiruvavalu aadi shakti ಶಕಂಭಾರಿ ಹಾಗು ಗಂಡಸಿನಂಥ ಗುಣಗಳಿರುವ ಸಾದಾರಣವಾಗಿ ವಿಷ್ಣು ಅವತರಗಳೆಂದು ಭಾವಿಸಲ್ಪತಿರುವ ಕೃಷ್ಣ ಹಾಗು ರಾಮ ಕೂಡ ಇದೆ. ಮಹಾಲಕ್ಷ್ಮಿ ಹಾಗು ಮಹಾಸರಸ್ವತಿ ದೇವಿ ಅವತಾರಗಳು.

ಅಂಶಾವತಾರ , ಅವತಾರಪುರುಷರು , ದೇವಾಂಶಸಂಭೂತರು

ಈ ಅವತಾರಗಳು ನೇರವಾಗಿ ದೇವರೇ ತಾಳುವ ರೂಪಗಳು. ಇವಲ್ಲದೆ ಕೆಲವು ಅವತಾರಗಳು ಅಂಶಾವತಾರಗಳೆನಿಸಿಕೊಳ್ಳುತ್ತವೆ. ಕೆಲವು ಅವತಾರಗಳನ್ನು ದೇವಾಂಶಸಂಭೂತ ವೆಂದು ಕರೆಯಲಾಗಿದೆ. ಹನುಮಂತ ವಾಯುದೇವರ ಅಂಶ. ಅವತಾರದ ಕಲ್ಪನೆ ಭಾರತೀಯರ ಮನಸ್ಸಿನಲ್ಲಿ ಎಷ್ಟರಮಟ್ಟಿಗೆ ರೂಢಿಸಲ್ಪಟ್ಟಿದೆ ಎಂದರೆ ಯಾರಲ್ಲಿ ವಿಶೇಷವಾದ ದೈವೀಗುಣಗಳನ್ನು ಕಾಣುತ್ತಾರೆಯೋ ಅವರನ್ನು ಜನ ಅವತಾರ ಪುರುಷರೆಂದು ನಂಬುತ್ತಾರೆ. ಅನೇಕ ಸಾಧುಸಂತರನ್ನು, ಆಚಾರ್ಯ ಮಹಾನುಭಾವರನ್ನು ದೇವರ ಅವತಾರಗಳೆಂದೂ ಅಂಶಪುರುಷರೆಂದೂ ನಂಬುವುದು ವಾಡಿಕೆಯಾಗಿದೆ. ವಿಷ್ಣು ತಾನು ಅವತಾರ ಮಾಡುವುದಲ್ಲದೆ ತನ್ನ ಪರಿವಾರದವರನ್ನೂ ತನ್ನೊಡನೆ ಅವತಾರ ಮಾಡಿಸುತ್ತಾನೆ ಎಂಬುದು ಇನ್ನೊಂದು ನಂಬಿಕೆ. ಲಕ್ಷ್ಮಿ ರಾಮಾವತಾರದಲ್ಲಿ ಸೀತೆಯಾಗಿ ಹುಟ್ಟುತ್ತಾಳೆ. ಶ್ರೀಕೃಷ್ಣನಲ್ಲಿ ಅನುರಕ್ತರಾದ ಗೋಪಿಕೆಯರು ರಾಮಾವತಾರದ ಋಷಿಗಳು ಎಂದು ಹೇಳಲ್ಪಟ್ಟಿದೆ. ಶ್ರೀರಾಮಾನುಜರು ಆದಿಶೇಷನ ಅವತಾರವೆಂದು ಶ್ರೀವೈಷ್ಣವರು ನಂಬುತ್ತಾರೆ. ವೈಷ್ಣವಧರ್ಮದಲ್ಲಿ ಈ ಅವತಾರಗಳ ವಿಗ್ರಹಗಳನ್ನು ಪುಜಿಸುವ ವಾಡಿಕೆಯಿದೆ. ಈ ವಿಗ್ರಹಗಳನ್ನು ಅರ್ಚಾವತಾರವೆಂದು ಪಾಂಚರಾತ್ರಾಗಮಗಳಲ್ಲಿ ಕರೆದಿದೆ. ಭಗವಂತನ ಅವತಾರಗಳಲ್ಲಿ ಅರ್ಚಾವತಾರ ಅತಿ ಸ್ಥೂಲವಾದದ್ದು. ಇಂದ್ರಿಯಗಳಿಗೆ ಇಷ್ಟಪಟ್ಟಾಗ ಗೋಚರವಾಗಬಲ್ಲ ಅವತಾರ ಇದು. ಭಗವಂತನ ಸೌಲಭ್ಯ ಭಕ್ತ ಪರಾಧೀನತೆಯನ್ನು ಇದು ಸ್ಪಷ್ಟಪಡಿಸುತ್ತದೆಂದು ಇದಕ್ಕೆ ಸಂಬಂಧಪಟ್ಟ ಶಾಸ್ತ್ರಗಳು ವಿವರಿಸುತ್ತವೆ. ಅರ್ಚಾವತಾರದ ಪ್ರಯೋಜನಗಳನ್ನು ಮೂರು ವಿಧವಾಗಿ ವರ್ಣಿಸಿದೆ. ಅವು ರುಚಿಜನಕತ್ವ, ಶುಭಾಶ್ರಯತ್ವ, ಸೌಲಭ್ಯ. ರುಚಿಜನಕತ್ವ ಎಂದರೆ ಭಗವಂತನ ಕಡೆಗೆ ಮನಸ್ಸನ್ನು ಸ್ಥಿರಗೊಳಿಸಲು ಸಹಾಯ ಮಾಡುವ ಬಿಂಬ. ಸೌಲಭ್ಯ ಅಂದರೆ ಅದೃಶ್ಯನೂ ಅತಿಸೂಕ್ಷ್ಮನೂ ಆದ ದೇವರನ್ನು ತಮ್ಮ ಸಮೀಪಕ್ಕೆ ಬರಮಾಡಿಕೊಳ್ಳುವ ಸಾಧನ. ನಾವು ಪುಜಿಸುವ ಈ ಅರ್ಚಾಮೂರ್ತಿಗಳು ಪರಮಾತ್ಮನ ಪ್ರತೀಕಗಳು ಮಾತ್ರ. ಇವುಗಳ ಪುಜೆಯನ್ನು ಪ್ರತೀಕೋಪಾಸನೆ ಎಂದು ಕರೆದಿದೆ. ಪ್ರತಿಮೆಗಳ ಸ್ವರೂಪ, ಪ್ರಮಾಣ, ಲಾಸ್ಯ, ವಿನ್ಯಾಸಗಳು ಆಯಾ ದೇವತೆಗಳಿಗೆ ನಿರ್ದಿಷ್ಟವಾಗಿವೆ. ಶೈವ, ವೀರಶೈವರಲ್ಲಿ ಕೂಡ ನಂದಿ, ಭೃಂಗಿ, ಸ್ಕಂದ, ವೀರಭದ್ರ, ಪಾರ್ವತಿ ಮೊದಲಾದವರು ಭೂಮಿಯಲ್ಲಿ ಅವತರಿಸಿದಂತೆ ಕಥೆಗಳಿವೆ. ಉದಾಹರಣೆಗೆ, ಬಸವೇಶ್ವರ ನಂದಿಯ, ಸಿದ್ಧರಾಮ ಭೃಂಗಿಯ, ಅಕ್ಕಮಹಾದೇವಿ ಪಾರ್ವತಿಯ, ಮಾಚಿದೇವ ವೀರಭದ್ರನ, ಚೆನ್ನಬಸವ ಷಣ್ಮುಖನ ಅವತಾರವೆಂದು ವೀರಶೈವಪುರಾಣಗಳಲ್ಲಿ ಹೇಳಿದೆ.

ಗುಣ ಅವತಾರಗಳು

ತ್ರಿಮೂರ್ತಿಯ ಆಕರಗಳನ್ನು ಗುಣ ಅವತಾರಗಳು ಎನ್ನಲಾಗುತ್ತದೆ, ಏಕೆಂದರೆ ಇವರು ಪ್ರಕೃತಿಯ ಮೂರು ನಿಯಮಗಳನ್ನು (ಗುಣಗಳು) ನಿಯಂತ್ರಿಸುತ್ತಾರೆ,.

  • ವಿಷ್ಣು - (ಸತ್ತ್ವ) ದೇವಿಯನ್ನು ನಿಯಂತ್ರಿಸುತ್ತಾನೆ
  • ಬ್ರಹ್ಮ - (ರಾಜಸ)ನ್ನು ನಿಯಂತ್ರಿಸುತ್ತಾನೆ
  • ಶಿವ - (ತಮಸ್)ನ್ನು ನಿಯಂತ್ರಿಸುತ್ತಾನೆ

ದೇವಿ ಸರ್ವ ಶಕ್ತಳು ದಯಾ ಸಮುದ್ರಳು ತ್ರಿಮೂರ್ತಿಗಳನ್ನು ಮೂರು ಲೋಕಕ್ಕೆ ಅಧಿಪತಿಗಳನ್ನಾಗಿ ಮಾಡಿ ಶಕ್ತಿಯನ್ನು ಜಗತ್ತನ್ನು ಪಾಲಿಸುತ್ತಿರುವವಳು ಜಗನ್ಮಾಥೆ ಜಗಧೀಶ್ವರಿ ಸರ್ವಶಕ್ತಿ ಪರಬ್ರಹ್ಮ ಸ್ವರೂಪಿ ಈಶ್ವರ ರೂಪ ಶ್ರೀಮನ್ ನಾರಾಯಣಿಯ ರೂಪ ಚಿಚ್ಚಕ್ತಿ ಸ್ವರೂಪವೇ ಈ ಆದಿಶಕ್ತಿ,ಸರ್ವರೋಳು ಒಂದಾಗಿರುವಳೆ ಈ ಶಕ್ತಿ ಕೃಷ್ಣ ರೂಪಳು ಅವಳೆ ಮಹಾ ವಿಷ್ಣು , ಸದಾ ಶಿವೆಯಾಗಿ ಜಗತ್ತನ್ನು ಪಾಲಿಸುತ್ತಿರುವಳು ಸೃಷ್ಟಿ , ಸ್ಥಿತಿ, ಲಯ ಕರ್ತಳು ಇವಳೇ ಸರ್ವಾಂತರಯಾಮಿ. ಜಗತ್ತಿನಲ್ಲಿ ಅಸುರಿ ಭಾವಗಳು ರುದ್ರ ನರ್ತನ ಮಾಡುವಾಗ ಜ್ವಾಲಾಗ್ನಿಯಂತೆ ಮಹಾಕಾಳಿಯಾಗಿ, ಪ್ರಳಯ ರುದ್ರಳಾಗಿ ಎಲ್ಲವನ್ನು ತನ್ನೊಳಗೆ ಅರ್ಪಿಸಿಕೊಳ್ಳುತ್ತಾಳೆ, ಈ ಕಲಿಯುಗದ ಅಂತ್ಯ ಕಾಲದಲ್ಲಿ ಅವಳೇ ಮಹಾವಿಷ್ಣು ವಾಗಿ "ಸರ್ವಜಗತ್ತಿಗೆ ಸರ್ವೇಶ್ವರನೊಬ್ಬನೆ ಈಶ್ವರಃ" ಎಂಬ ಭಾವವನ್ನು ಜಗತ್ತಿನಲ್ಲಿ ತುಂಬಿ ತನ್ನ ಭಕ್ತರೊಂದಿಗೆ ಸದಾವಕಾಲ ಶ್ರವಣ, ಕೀರ್ತನಗಳೊಂದಿಗೆ ಜಗತ್ತು ಭಕ್ತಿಮಯದಿಂದ ತುಂಬಿಹೋಗುತ್ತೆ ಅಂತ ಋಷಿ ಪುಂಗವರು ಸಾರಿ ಸಾರಿ ಹೋದರು.

ಇದನ್ನು ನೋಡಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಅವತಾರ ಶಬ್ದನಿಷ್ಪತ್ತಿ ಹಾಗು ಅರ್ಥಅವತಾರ ವಿಷ್ಣುವಿನ ಗಳುಅವತಾರ ಗಣೇಶನ ಗಳುಅವತಾರ ಶಿವನ ಗಳುಅವತಾರ ದೇವಿಯ ಗಳುಅವತಾರ ಅಂಶಾವತಾರ , ಪುರುಷರು , ದೇವಾಂಶಸಂಭೂತರುಅವತಾರ ಇದನ್ನು ನೋಡಿಅವತಾರ ಉಲ್ಲೇಖಗಳುಅವತಾರ ಬಾಹ್ಯ ಕೊಂಡಿಗಳುಅವತಾರಗಣೇಶಗರುಡ ಪುರಾಣಭಾಗವತ ಪುರಾಣವಿಷ್ಣುಶಿವ

🔥 Trending searches on Wiki ಕನ್ನಡ:

ಹಿಂದೂ ಧರ್ಮಬಿಳಿ ರಕ್ತ ಕಣಗಳುಯೋಗ ಮತ್ತು ಅಧ್ಯಾತ್ಮಹೆಳವನಕಟ್ಟೆ ಗಿರಿಯಮ್ಮಗಿಡಮೂಲಿಕೆಗಳ ಔಷಧಿಗ್ರಂಥ ಸಂಪಾದನೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಉತ್ತರ ಪ್ರದೇಶಕದಂಬ ರಾಜವಂಶಅಂತರ್ಜಲಭಾರತದ ರಾಷ್ಟ್ರಪತಿಬಾಗಲಕೋಟೆಒಂದು ಮುತ್ತಿನ ಕಥೆಸಿಂಧನೂರುಬಾಲ್ಯ ವಿವಾಹಛಂದಸ್ಸುಹರಿಹರ (ಕವಿ)ಹಾಸನ ಜಿಲ್ಲೆಬಾಂಗ್ಲಾದೇಶಕರ್ನಾಟಕದ ಸಂಸ್ಕೃತಿನಾಯಕ (ಜಾತಿ) ವಾಲ್ಮೀಕಿಮಲೆಗಳಲ್ಲಿ ಮದುಮಗಳುಕರ್ನಾಟಕ ರತ್ನವಿಜಯದಾಸರುಲಕ್ಷ್ಮೀಶಮೂಗುತಿದ್ರಾವಿಡ ಭಾಷೆಗಳುಮೇಲುಮುಸುಕುವಿಧಾನ ಸಭೆಶ್ರೀರಂಗಪಟ್ಟಣಸಾಮಾಜಿಕ ತಾಣಕೃತಕ ಬುದ್ಧಿಮತ್ತೆದೆಹಲಿ ಸುಲ್ತಾನರುಪ್ರಶಾಂತ್ ನೀಲ್ಸುಂದರ್ ಪಿಚೈಫಿರೋಝ್ ಗಾಂಧಿಭೂಮಿಭೂಕಂಪಬಿ. ಆರ್. ಅಂಬೇಡ್ಕರ್ಆಂಧ್ರ ಪ್ರದೇಶಸ್ಟಾರ್‌ಬಕ್ಸ್‌‌ಭಾರತದ ಪಂಚಾಯತ್ ರಾಜ್ ವ್ಯವಸ್ಥೆಶಂಕರ್ ನಾಗ್ಹಸ್ತಪ್ರತಿಶಾಂತಕವಿಮೈಸೂರು ಸಂಸ್ಥಾನಕ್ಯಾರಿಕೇಚರುಗಳು, ಕಾರ್ಟೂನುಗಳುಹರಪನಹಳ್ಳಿ ಭೀಮವ್ವಕನ್ನಡ ಗುಣಿತಾಕ್ಷರಗಳುದಿಕ್ಕುನೀರಚಿಲುಮೆಅದ್ವೈತಮಾರ್ಕ್ಸ್‌ವಾದರಾಶಿಅಲ್ಬರ್ಟ್ ಐನ್‍ಸ್ಟೈನ್ವಾಟ್ಸ್ ಆಪ್ ಮೆಸ್ಸೆಂಜರ್ಗ್ರಹವಿಜಯಾ ದಬ್ಬೆಲಾವಂಚ೧೮೬೨ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಶ್ಯೆಕ್ಷಣಿಕ ತಂತ್ರಜ್ಞಾನಅಂತರಜಾಲಸಂಯುಕ್ತ ಕರ್ನಾಟಕಮಯೂರವರ್ಮಕರ್ನಾಟಕದ ಅಣೆಕಟ್ಟುಗಳುಅಶೋಕನ ಶಾಸನಗಳುಅಶ್ವತ್ಥಾಮಮಂಡ್ಯಜಾನಪದಶ್ರೀನಿವಾಸ ರಾಮಾನುಜನ್ಭಾರತೀಯ ಶಾಸ್ತ್ರೀಯ ಸಂಗೀತಮಾಸಭಾರತೀಯ ನದಿಗಳ ಪಟ್ಟಿಜಯಚಾಮರಾಜ ಒಡೆಯರ್ಪಂಪಬಾಗಲಕೋಟೆ ಲೋಕಸಭಾ ಕ್ಷೇತ್ರಕನ್ನಡ ಚಂಪು ಸಾಹಿತ್ಯಕೂಡಲ ಸಂಗಮ🡆 More