ಲಕ್ಷ್ಮಿ

ಲಕ್ಷ್ಮಿ - ಹಿಂದೂ ಧರ್ಮದಲ್ಲಿನ ದೇವತೆಗಳಲ್ಲೊಬ್ಬರು.

ಈ ಲೇಖನವು ಹಿಂದೂ ದೇವತೆ ಲಕ್ಷ್ಮಿಯ ಬಗ್ಗೆ.
ಚಿತ್ರನಟಿ ಲಕ್ಷ್ಮಿ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.

ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು ಮಹಾಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ಪ್ರತಿವರ್ಷದ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವ ಮೂಲಕ ಸಲ್ಲಿಸಲಾಗುತ್ತದೆ. ದೀಪಾವಳಿ ಹಬ್ಬದ ಸಮಯದಲ್ಲಿ ಹಾಗೂ ನವರಾತ್ರಿ ಹಬ್ಬದ ಸಮಯ ದಲ್ಲಿ ಕೂಡ ವಿಶೇಷ ಪೂಜೆಗಳನ್ನು ಲಕ್ಷ್ಮಿ ಪೂಜೆ ಎಂದು ಆಚರಿಸಲಾಗುತ್ತದೆ.

ಲಕ್ಷ್ಮಿ
ಲಕ್ಷ್ಮಿ
ಲಕ್ಷ್ಮಿ ರಾಜಾ ರವಿ ವರ್ಮ ನ ವರ್ಣಚಿತ್ರ
ದೇವನಾಗರಿलक्ष्मी
ಸಂಸ್ಕೃತ ಲಿಪ್ಯಂತರಣಲಕ್ಷ್ಮಿ
ಸಂಲಗ್ನತೆದೇವಿ (Tridevi)
ನೆಲೆವೈಕುಂಠ, ಕ್ಷೀರ ಸಾಗರ
ಮಂತ್ರಓಂ ಹರಿಮ್ ಶ್ರೀ ಲಕ್ಷ್ಮಿ ಭಾಯಿ ನಮ
ಸಂಗಾತಿವಿಷ್ಣು
ವಾಹನಆನೆ, ನವಿಲು, ಗೂಬೆ

ಮಹಾಲಕ್ಷ್ಮಿಯ ವಿವಿಧ ಸ್ವರೂಪಗಳು

ಲಕ್ಷ್ಮಿಯ ಜೊತೆಗೆ, ಮಹಾಲಕ್ಷ್ಮಿಯ ಜೊತೆಗೆ ಪ್ರಾರಂಭದಲ್ಲಿ "ಶ್ರೀ" ಅಕ್ಷರವನ್ನು ಸೇರಿಸಿ ಶ್ರೀ ಲಕ್ಷ್ಮಿ, ಶ್ರೀ ಮಹಾಲಕ್ಷ್ಮಿ ಎಂದೂ ಬಳಸಲಾಗುತ್ತದೆ. ಶ್ರೀ ಎಂಬುದು ಸಿರಿ ಪದದ ತತ್ಸಮ ರೂಪ. ಸಿರಿ ಅಂದರೆ, ಸಂಪತ್ತು, ಐಶ್ವರ್ಯದ ಅಧಿದೇವತೆ ಎಂದು ಸೂಚಿಸಲು ಇದನ್ನು ಸೇರಿಸಲಾಗುತ್ತದೆ. ಅಷ್ಟಲಕ್ಷ್ಮಿಯ ವಿವಿಧ ಸ್ವರೂಪಗಳು ಈ ರೀತಿಯಿವೆ.

# ಸ್ವರೂಪ ಭಾವಾರ್ಥ
ಆದಿಲಕ್ಷ್ಮಿ ಮೂಲ ದೇವತೆ
ಧಾನ್ಯಲಕ್ಷ್ಮಿ ಧಾನ್ಯಗಳ ಕರುಣಿಸೋ ದೇವತೆ
ಧೈರ್ಯಲಕ್ಷ್ಮಿ ಧೈರ್ಯವನ್ನು ಕೊಡುವ ದೇವತೆ
ಗಜಲಕ್ಷ್ಮಿ ಆನೆಯನ್ನು ಇಕ್ಕೆಲದಲ್ಲಿ ಹೊಂದಿದ ದೇವತೆ
ಸಂತಾನ ಲಕ್ಷ್ಮಿ ಸಂತಾನವನ್ನು ಕರುಣಿಸೋ ದೇವತೆ
ವಿಜಯಲಕ್ಷ್ಮಿ ವಿಜಯವನ್ನು ತಂದು ಕೊಡುವ ದೇವತೆ
ವಿದ್ಯಾಲಕ್ಷ್ಮಿ ವಿದ್ಯೆಗೆ ಧನ ಸಹಾಯ ಮಾಡುವ ದೇವತೆ
ಧನಲಕ್ಷ್ಮಿ ಹಣವನ್ನು ಮಡಿಲಲ್ಲಿ ಹೊಂದಿದ ದೇವತೆ

ಲಕ್ಷ್ಮಿಯ ಹೆಸರುಗಳು

ಲಕ್ಷ್ಮಿಯನ್ನು ಕಮಲದ (ಪದ್ಮ) ಹೂವಿಗೆ ಬಹಳವಾಗಿ ಸಂಪರ್ಕ ಕಲ್ಪಿಸಲಾಗುತ್ತದೆ. ಆಕೆಯ ಹಲವಾರು ಹೆಸರುಗಳು ಆ ಹೂವಿಗೆ ಸಂಬಂಧಿಸಿದ್ದಾಗಿವೆ.

  • ಪದ್ಮಪ್ರಿಯ: ಪದ್ಮವನ್ನು ಇಷ್ಟ ಪಡುವವಳು
  • ಪದ್ಮ ಮಾಲಾಧಾರ ದೇವಿ: ಪದ್ಮದ ಹಾರವನ್ನು ಧರಿಸುವವಳು
  • ಪದ್ಮಮುಖಿ: ಕಮಲದಂತೆ ಸುಂದರವಾದ ಮುಖವುಳ್ಳವಳು
  • ಪದ್ಮಾಕ್ಷಿ: ಕಮಲದಂತೆ ಸುಂದರವಾದ ಕಣ್ಣುಗಳುಳ್ಳವಳು
  • ಪದ್ಮಹಸ್ತೆ: ಕಮಲವನ್ನು ಕೈಯಲ್ಲಿ ಹಿಡಿದವಳು
  • ಪದ್ಮಸುಂದರಿ: ಕಮಲದಷ್ಟೇ ಸುಂದರವಾಗಿರುವವಳು
  • ಭಾರ್ಗವಿ: ಋಷಿ ಭೃಗುವಿನ ಮಗಳ ಅವತಾರ


ಭಾರತದಲ್ಲಿನ ಪ್ರಮುಖ ಲಕ್ಷ್ಮಿ ದೇವಸ್ಥಾನಗಳು

  • ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕೆರೆಸಂತೆ ಗ್ರಾಮದಲ್ಲಿರುವ ಮಹಾಲಕ್ಷ್ಮಿ ದೇವಾಲಯ.
  • ದಕ್ಷಿಣ ಕನ್ನಡ ಜಿಲ್ಲೆಯ ಉಚ್ಚಿಲದಲ್ಲಿರುವ ಮಹಾಲಕ್ಷ್ಮಿ ದೇವಾಲಯ
  • ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯ ಶ್ರೀಮಹಾಲಕ್ಷ್ಮಿ ದೇವಸ್ಥಾನ
  • ಮಹಾರಾಷ್ಟ್ರದ ಶ್ರೀ ಕೊಲ್ಲಪುರದಮ್ಮ ತಾಯಿ
  • ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಕುಂದೂರು ಶ್ರೀ ಮಹಾಲಕ್ಷ್ಮಿ ಮೇಳಿಯಮ್ಮ ತಾಯಿ
  • ಹಾಸನ ಜಿಲ್ಲೆಯ ಮಳಲಿ ಶ್ರೀ ಮಹಾಲಕ್ಷ್ಮಿ ತಾಯಿ

ಹಿಂದೂಗಳ ಆಚರಣೆ

ದೀಪಗಳ ಹಬ್ಬವಾದ ದೀಪಾವಳಿಯಂದು ಅನೇಕ ಹಿಂದೂಗಳು ಲಕ್ಷ್ಮಿಯನ್ನು ಪೂಜಿಸುತ್ತಾರೆ. ಇದನ್ನು ಶರತ್ಕಾಲದಲ್ಲಿ ಆಚರಿಸಲಾಗುತ್ತದೆ, ಸಾಮಾನ್ಯವಾಗಿ ಪ್ರತಿ ವರ್ಷ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಉತ್ಸವವು ಆಧ್ಯಾತ್ಮಿಕವಾಗಿ ಕತ್ತಲೆಯ ಮೇಲೆ ಬೆಳಕಿನ ವಿಜಯ, ಅಜ್ಞಾನದ ಮೇಲಿನ ಜ್ಞಾನ, ಕೆಟ್ಟದ್ದಕ್ಕಿಂತ ಉತ್ತಮ ಮತ್ತು ಹತಾಶೆಯ ಮೇಲಿನ ಭರವಸೆಯನ್ನು ಸೂಚಿಸುತ್ತದೆ. ದೀಪಾವಳಿ ರಾತ್ರಿಯ ಮೊದಲು, ಜನರು ತಮ್ಮ ಮನೆಗಳನ್ನು ಮತ್ತು ಕಚೇರಿಗಳನ್ನು ಸ್ವಚ್ಛಗೊಳಿಸುತ್ತಾರೆ, ನವೀಕರಿಸುತ್ತಾರೆ ಮತ್ತು ಅಲಂಕರಿಸುತ್ತಾರೆ. ದೀಪಾವಳಿ ರಾತ್ರಿಯಲ್ಲಿ, ಹಿಂದೂಗಳು ಹೊಸ ಬಟ್ಟೆಗಳನ್ನು ಅಥವಾ ಅವರ ಅತ್ಯುತ್ತಮ ಬಟ್ಟೆಗಳನ್ನು ಧರಿಸುತ್ತಾರೆ. ತಮ್ಮ ಮನೆಯ ಒಳಗೆ ಮತ್ತು ಹೊರಗೆ (ದೀಪಗಳು ಮತ್ತು ಮೇಣದ ಬತ್ತಿಗಳು) ಬೆಳಗುತ್ತಾರೆ ಮತ್ತು ಸಾಮಾನ್ಯವಾಗಿ ಲಕ್ಷ್ಮಿಗೆ ಕುಟುಂಬದ ಪೂಜೆಯಲ್ಲಿ (ಪ್ರಾರ್ಥನೆ) ಭಾಗವಹಿಸುತ್ತಾರೆ. ಪೂಜೆಯ ನಂತರ, ಪಟಾಕಿ ಸಿಡಿಸುತ್ತಾರೆ. ನಂತರ ಸಿಹಿತಿಂಡಿಗಳು ಸೇರಿದಂತೆ ಕುಟುಂಬ ಹಬ್ಬ ಮತ್ತು ಕುಟುಂಬ ಸದಸ್ಯರು ಮತ್ತು ಆಪ್ತರ ನಡುವೆ ಉಡುಗೊರೆಗಳ ವಿನಿಮಯವಿರುತ್ತದೆ. ಲಕ್ಷ್ಮಿಗೆ ಸಮರ್ಪಿಸಲಾಗಿರುವ ಈ ಹಬ್ಬವನ್ನು ಹಿಂದೂಗಳು ವರ್ಷದ ಪ್ರಮುಖ ಮತ್ತು ಸಂತೋಷದಾಯಕ ಹಬ್ಬವೆಂದು ಪರಿಗಣಿಸಿದ್ದಾರೆ.

ಉಲ್ಲೇಖಗಳು


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ ಲಕ್ಷ್ಮಿ 
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ

Tags:

ಲಕ್ಷ್ಮಿ ಮಹಾಯ ವಿವಿಧ ಸ್ವರೂಪಗಳುಲಕ್ಷ್ಮಿ ಯ ಹೆಸರುಗಳುಲಕ್ಷ್ಮಿ ಭಾರತದಲ್ಲಿನ ಪ್ರಮುಖ ದೇವಸ್ಥಾನಗಳುಲಕ್ಷ್ಮಿ ಹಿಂದೂಗಳ ಆಚರಣೆಲಕ್ಷ್ಮಿ ಉಲ್ಲೇಖಗಳುಲಕ್ಷ್ಮಿದೀಪಾವಳಿನವರಾತ್ರಿವರಮಹಾಲಕ್ಷ್ಮಿ ವ್ರತವಿಷ್ಣುವೈಕುಂಠಶುಕ್ರವಾರಶ್ರಾವಣ ಮಾಸಹಿಂದೂ ಧರ್ಮ

🔥 Trending searches on Wiki ಕನ್ನಡ:

ಸಾಲುಮರದ ತಿಮ್ಮಕ್ಕಅಜಂತಾಬಹಮನಿ ಸುಲ್ತಾನರುಅಮರ್ (ಚಲನಚಿತ್ರ)ಗುರುಸಹಕಾರಿ ಸಂಘಗಳುಹನುಮಂತಭಾರತೀಯ ಅಂಚೆ ಸೇವೆಗೋವಿಂದ ಪೈಯೂಟ್ಯೂಬ್‌ಯು.ಆರ್.ಅನಂತಮೂರ್ತಿಆದಿಮಾನವಕನ್ನಡಪ್ರಭಸೌರಮಂಡಲಅಂತಾರಾಷ್ಟ್ರೀಯ ಸಂಬಂಧಗಳುಹಳೇಬೀಡುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಜಾಗತೀಕರಣಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಮನುಸ್ಮೃತಿಡಾ. ಎಚ್ ಎಲ್ ಪುಷ್ಪವಿಷ್ಣುನಾಟಕತಾಪಮಾನಮೂತ್ರಪಿಂಡವೇಬ್ಯಾಕ್ ಮೆಷಿನ್ಮೇರಿ ಕ್ಯೂರಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವಿಕಿತ್ರಿಪದಿಅಮ್ಮಗರ್ಭಧಾರಣೆಬೌದ್ಧ ಧರ್ಮನಗರದ್ವಾರಕೀಶ್ಮಿಂಚುತುಮಕೂರುತಿರುಪತಿಕೈಗಾರಿಕೆಗಳುಪ್ರಾಥಮಿಕ ಶಿಕ್ಷಣಪಿತ್ತಕೋಶವಯನಾಡು ಜಿಲ್ಲೆಆಲ್ಫೊನ್ಸೋ ಮಾವಿನ ಹಣ್ಣುಯುಗಾದಿನಾರುಚಂದ್ರಗುಪ್ತ ಮೌರ್ಯಮಧುಬನಿ ಕಲೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕರ್ನಾಟಕದ ಮುಖ್ಯಮಂತ್ರಿಗಳುಅರ್ಥಶಾಸ್ತ್ರವಿಕ್ರಮಾರ್ಜುನ ವಿಜಯಅಜಯ್ ರಾವ್‌ಹಣಕಾಸುವರ್ಗೀಯ ವ್ಯಂಜನಸಂಯುಕ್ತ ರಾಷ್ಟ್ರ ಸಂಸ್ಥೆಜಿಂಕೆತೀ. ನಂ. ಶ್ರೀಕಂಠಯ್ಯಕನ್ನಡದಲ್ಲಿ ಕಾವ್ಯ ಮಿಮಾಂಸೆಬಾಲ ಗಂಗಾಧರ ತಿಲಕಹರಿಹರ (ಕವಿ)ಯೋನಿಅಡೋಲ್ಫ್ ಹಿಟ್ಲರ್ದುರ್ಯೋಧನತಂತ್ರಜ್ಞಾನದ ಉಪಯೋಗಗಳುಹಂಪೆಉಡಮಧ್ಯಕಾಲೀನ ಭಾರತಚದುರಂಗದ ನಿಯಮಗಳುಒಲಂಪಿಕ್ ಕ್ರೀಡಾಕೂಟಕರ್ಕಾಟಕ ರಾಶಿಹಸ್ತಪ್ರತಿಜಾಗತಿಕ ತಾಪಮಾನ ಏರಿಕೆತ. ರಾ. ಸುಬ್ಬರಾಯಸೆಸ್ (ಮೇಲ್ತೆರಿಗೆ)ಜಯಮಾಲಾಮಯೂರಶರ್ಮಪ್ರಜಾಪ್ರಭುತ್ವಶ್ಯೆಕ್ಷಣಿಕ ತಂತ್ರಜ್ಞಾನ🡆 More