ಅಡ್ಜುಟೆಂಟ್ ಹಕ್ಕಿ

ಆಫ್ರಿಕಾ ಮತ್ತು ಏಷ್ಯಾ ಖಂಡಗಳ ಕೊಕ್ಕರೆಗಳಲ್ಲಿ ಅತ್ಯಂತ ದೊಡ್ಡದೂ ವಿಕಾರವೂ ಆಗಿರುವ ಪಕ್ಷಿ.

ತಲೆ ನುಣ್ಣಗಿದೆ. ಕೊಕ್ಕು ತುಂಬ ದೊಡ್ಡದು; ಕತ್ತಿನ ಕೆಳಭಾಗದಲ್ಲಿ ಒಂದು ಚೀಲ ನೇತಾಡುತ್ತದೆ. ಮಿಲಿಟರಿ ಅಧಿಕಾರಿಗಳಂತೆ ಇದು ಗಂಭೀರವಾಗಿ ನಡೆಯುವುದರಿಂದ ಇದಕ್ಕೆ ಈ ಹೆಸರು ಬಂತು.

ಅಡ್ಜುಟೆಂಟ್ ಹಕ್ಕಿ
ಅಡ್ಜುಟೆಂಟ್ ಹಕ್ಕಿ

ಕೊಕ್ಕು ಗಟ್ಟಿಯಾಗಿ ಬೋಳಾಗಿದೆ. ತಲೆಯನ್ನು ಎಳೆಗೂದಲು ಆವರಿಸಿದೆ. ಗರಿಗಳು ಬಿರುಸಾಗಿವೆ; ನಾಜೂಕಾಗಿಲ್ಲ. ಕಾಲುಗಳು ಉದ್ದ, ಬಲವುಳ್ಳವು; ಅವುಗಳ ಮೇಲೆ ಯಾವ ಹೊದ್ದಿಕೆಯೂ ಇಲ್ಲ. ರೆಕ್ಕೆ ಹರವಾಗಿದೆ. ಮನುಷ್ಯರ ವಾಸಸ್ಥಾನಗಳಿಗೆ ಈ ಹಕ್ಕಿ ಹೊಂದಿಕೊಂಡಿದೆ ಮತ್ತು ಹೊಲಸನ್ನು ನಿರ್ಮೂಲ ಮಾಡುವುದರಲ್ಲಿ ಒಳ್ಳೆಯ ಪಾತ್ರವಹಿಸುತ್ತದೆ. ಹಾವುಗಳನ್ನು ತಿನ್ನುತ್ತದಾದರೂ ಹೆಚ್ಚಾಗಿ ಹೆಣಗಳೇ ಇದರ ಆಹಾರ. ಅಲುಗಾಡದೆ ಬೆನ್ನಿಗೆ ಕೊರಳನ್ನು ಚಾಚಿಕೊಂಡು ದೀರ್ಘಕಾಲ ನಿಲ್ಲಬಲ್ಲದು. ಓಡಾಟಗಳೆಲ್ಲ ಹಗಲಿನಲ್ಲೇ. ಉತ್ತರ ಭಾಗದಲ್ಲಿರುವುವು ಪಯಣಿಗ ಹಕ್ಕಿಗಳು. ಇಂಡಿಯಾಕ್ಕೆ ಬೇಸಿಗೆಯಲ್ಲಿ ಬರುತ್ತವೆ; ಬೇಸಿಗೆ ಮುಗಿವ ಹೊತ್ತಿಗೆ ಬಂಗಾಳದಲ್ಲಿ ಸಾಧಾರಣವಾಗಿ ಕಾಣಿಸಿಕೊಳ್ಳುತ್ತವೆ. ಇವನ್ನು ಕೊಲ್ಲಬಾರದೆಂದು ಭಾರತ ಸರ್ಕಾರ ಕಾಯಿದೆ ಮಾಡಿದೆ.

ಸಾಮಾನ್ಯವಾಗಿ ಇವು ದೊಡ್ಡ ದೊಡ್ಡ ಹಿಂಡುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಾರಾಟ ಅಷ್ಟು ಹಗುರವಲ್ಲ, ರೆಕ್ಕೆಗಳ ಬಡಿತ ಹೆಚ್ಚು; ಆದರೂ ವೇಗವಾಗೂ ತುಂಬ ಎತ್ತರಕ್ಕೂ ಹಾರಬಲ್ಲವು. ಆಫ್ರಿಕದ ಜಾತಿಯ ಹಕ್ಕಿಯ ತಲೆ ಮಾಂಸದಂತೆ ಕೆಂಪಾಗಿದೆ; ಬೆನ್ನಿನ ತುಪ್ಪಳದ ಬಣ್ಣ ಲೋಹದ ಕಪ್ಪು ಹಸಿರು, ಕೊರಳು ಮತ್ತು ಕೆಳಭಾಗ ಬಿಳಿ.

ಉಲ್ಲೇಖನಗಳು

http://www.thehindu.com/sci-tech/energy-and-environment/endangered-greater-adjutant-stork-finds-secure-home-to-breed/article5414093.ece http://www.harrivainolaphoto.com/adjutants.html

Tags:

ಆಫ್ರಿಕಾಏಷ್ಯಾಕೊಕ್ಕರೆಪಕ್ಷಿ

🔥 Trending searches on Wiki ಕನ್ನಡ:

ಆದಿಪುರಾಣದಕ್ಷಿಣ ಕನ್ನಡಮಾನವ ಹಕ್ಕುಗಳುಲಿಂಗಾಯತ ಧರ್ಮಕಲಬುರಗಿಜೀವವೈವಿಧ್ಯಸಂಸ್ಕೃತ ಸಂಧಿವಾಣಿಜ್ಯೋದ್ಯಮಪ್ಲೇಟೊಗುಣ ಸಂಧಿಲೋಹಭಾರತದ ರಾಷ್ಟ್ರಪತಿಭಾರತದ ರಾಜಕೀಯ ಪಕ್ಷಗಳುಸಿರ್ಸಿಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿ೧೭೮೫ವ್ಯವಸಾಯಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಕನ್ನಡ ಕಾವ್ಯಇಂಡಿಯಾನಾರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಅಸ್ಪೃಶ್ಯತೆಮಧುಮೇಹಭಾರತದ ಸರ್ವೋಚ್ಛ ನ್ಯಾಯಾಲಯಐರ್ಲೆಂಡ್ ಧ್ವಜರೇಡಿಯೋತ್ರಿಪದಿಗೋತ್ರ ಮತ್ತು ಪ್ರವರಸೂರ್ಯವ್ಯೂಹದ ಗ್ರಹಗಳುಶಿವಪೌರತ್ವಗಂಗ (ರಾಜಮನೆತನ)ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವೇಗದರ್ಶನ್ ತೂಗುದೀಪ್ಮಡಿಲಗಣಕ ಅಥವಾ ಲ್ಯಾಪ್‌ಟಾಪ್ಅಯಾನುಸಮುದ್ರಗುಪ್ತಕಲ್ಲಂಗಡಿಮಾನವನ ಪಚನ ವ್ಯವಸ್ಥೆಹೈಡ್ರೊಜನ್ ಕ್ಲೋರೈಡ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿವಾಣಿಜ್ಯ ಪತ್ರಕರ್ನಾಟಕ ಸಂಗೀತಗುರುತ್ವಕನ್ನಡ ವ್ಯಾಕರಣಮಹಾಭಾರತಮರುಭೂಮಿಕರ್ನಾಟಕದ ತಾಲೂಕುಗಳುತತ್ಪುರುಷ ಸಮಾಸಅಷ್ಟಾವಕ್ರಗೃಹರಕ್ಷಕ ದಳಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಧರ್ಮಸ್ಥಳಅಲೋಹಗಳುಪರಿಸರ ರಕ್ಷಣೆಭಾರತೀಯ ಸ್ಟೇಟ್ ಬ್ಯಾಂಕ್ನವರತ್ನಗಳುಪಿತ್ತಕೋಶವಲ್ಲಭ್‌ಭಾಯಿ ಪಟೇಲ್ಬಾದಾಮಿಜಾಗತಿಕ ತಾಪಮಾನ ಏರಿಕೆತಾಮ್ರಸಲಗ (ಚಲನಚಿತ್ರ)ಪೆರಿಯಾರ್ ರಾಮಸ್ವಾಮಿವಿಕಿಪೀಡಿಯಗೊರೂರು ರಾಮಸ್ವಾಮಿ ಅಯ್ಯಂಗಾರ್ತೂಕಸೂರ್ಯೋದಯಶಕ್ತಿಉಪ್ಪಿನ ಸತ್ಯಾಗ್ರಹಕ್ಯಾರಿಕೇಚರುಗಳು, ಕಾರ್ಟೂನುಗಳುಪ್ರಜಾವಾಣಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಲೆಕ್ಕ ಪರಿಶೋಧನೆಭಾರತೀಯ ನದಿಗಳ ಪಟ್ಟಿಪುರಾತತ್ತ್ವ ಶಾಸ್ತ್ರಶಾತವಾಹನರು🡆 More