ಶಶಿಕಲಾ ವೀರಯ್ಯಸ್ವಾಮಿ

ಶಶಿಕಲಾ ವೀರಯ್ಯಸ್ವಾಮಿ (ಮೇ ೧, ೧೯೪೮) ಅವರು ಕನ್ನಡದ ಪ್ರಮುಖ ಕವಯತ್ರಿ ಮತ್ತು ವೈಚಾರಿಕ ಬರಹಗಾರ್ತಿಯರಲ್ಲೊಬ್ಬರು ಎನಿಸಿದ್ದಾರೆ.ಸ್ತ್ರೀ ವಾದಿಯಾಗಿ ಗುರುತಿಸಿಕೊಂಡಿದ್ದಾರೆ.

ಮೂಲತಃ ಶಿಕ್ಷಕಿಯಾದ ಶಶಿಕಲಾ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.

ಶಶಿಕಲಾ ವೀರಯ್ಯ ಸ್ವಾಮಿ
ಜನನಶಶಿಕಲಾ
ಮೇ ೧, ೧೯೪೮
ಸಿಂದಗಿ, ವಿಜಯಪುರ ಜಿಲ್ಲೆ
ವೃತ್ತಿಶಿಕ್ಷಕರು ಮತ್ತು ಕವಯತ್ರಿ

ಜೀವನ

ಕವಯಿತ್ರಿ ಶಶಿಕಲಾರವರು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮೇ ೧, ೧೯೪೮ರಂದು ಜನಿಸಿದರು. ಅವರ ತಂದೆ ಸಿದ್ಧಲಿಂಗಯ್ಯನವರು ಮತ್ತು ತಾಯಿ ಅನ್ನಪೂರ್ಣಾದೇವಿಯವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಿಂದಗಿಯಲ್ಲಿ ನಡೆಸಿದ ಶಶಿಕಲಾ ಅವರು ಮುಂದೆ ಕಾಲೇಜು ಕಲಿತದ್ದು ಬಿಜಾಪುರ, ಗುಲಬರ್ಗಾದಲ್ಲಿ.

ಅಧ್ಯಾಪಕರು

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ಶಶಿಕಲಾ ಅವರು ವೃತ್ತಿ ಜೀವನ ಆರಂಭಿಸಿದ್ದು ಸಿಂದಗಿ ಜ್ಯೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ನಂತರ ಬೀದರ್ ಅಕ್ಕಮಹಾದೇವಿ ಪದವಿ ಕಾಲೇಜು, ಚಿಟಗುಪ್ಪ ಸರಕಾರಿ ಕಾಲೇಜು, ಗೋಕಾಕ್ ಕಾಲೇಜು ಬೆಳಗಾವಿಗಳಲ್ಲಿ ಕೆಲಸ ನಿರ್ವಹಿಸಿದರು. ಕೆಲಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ. ಯಲಹಂಕ ಸರಕಾರಿ ಜ್ಯೂ. ಕಾಲೇಜು, ಬೆಂಗಳೂರಿನ ವಾಣಿವಿಲಾಸ ಕಾಲೇಜು, ಚಿಕ್ಕಮಗಳೂರಿನ ಸರಕಾರಿ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ನಂತರದಲ್ಲಿ ಶಹಾಪೂರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯಗರಾಗಿ ಕಾರ್ಯ ನಿರ್ವಹಿಸಿದರು.

ಕೆಲಸ ನಿರ್ವಹಣೆ

ಕೆಲಕಾಲ ಧಾರವಾಡದ ಪತ್ರಾಗಾರ ಇಲಾಖೆಯಲ್ಲಿ ಪತ್ರಪಾಲಕರಾಗಿ, ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಧಾರಾವಾಹಿ ಮತ್ತು ಚಲನಚಿತ್ರಗಳ ಆಯ್ಕೆ ಸಮಿತಿ, ಬೆಂಗಳೂರು ದೂರದರ್ಶನದ ಸದಸ್ಯೆಯಾಗಿ, ಪದವಿ ಪೂರ್ವ ಶಿಕ್ಷಣಾ ಮಂಡಳಿ, ಬೆಂಗಳೂರಿನ ಕನ್ನಡ ಪಠ್ಯ ಪುಸ್ತಕ ಸಮಿತಿಯ ಸದಸ್ಯೆಯಾಗಿ, ಅನೇಕ ಸಂಘ ಸಂಸ್ಥೆಗಳ ಧರ್ಮದರ್ಶಿಯಾಗಿ ಕೂಡಾ ಶಶಿಕಲಾ ಅವರು ಜವಾಬ್ದಾರಿಯುತ ಹೊಣೆ ನಿರ್ವಹಿಸಿದ್ದಾರೆ.

ಸಾಹಿತ್ಯ ಕೃತಿಗಳು

ಕಾವ್ಯ

  • ಗುಬ್ಬಿಮನಿ
  • ಪ್ರಶ್ನೆ
  • ಜೀವ ಸಾವುಗಳ ನಡುವೆ
  • ಹೆಂಗ ಹೇಳಲೆ ಗೆಳತಿ
  • ಮಧ್ಯಂತರದ ಒಂದು ಗದ್ಯಗೀತೆ
  • ಬಟ್ಟ ಬಯಲಲ್ಲಿ ನಿಂತು
  • ಒಂಚೂರು ನೆಲ-ಒಂಚೂರು ಮುಗಿಲು.

ವ್ಯಕ್ತಿಚಿತ್ರ

  • ಶ್ರೀ ಗುರುಸಿದ್ದೇಶ್ವರ ಚರಿತ್ರೆ,
  • ಅಪ್ಪ ಮತ್ತು ಮಣ್ಣು,
  • ಕೋಡಿಕೊಪ್ಪ ಮಠದ ಬಸವರಾಜ ಶಾಸ್ತ್ರಿಗಳು

ಸಂಪಾದನೆ

  • ಆಧುನಿಕ ಕನ್ನಡ ಕವನಗಳು
  • ಸಂವೇದನೆಗಳು
  • ಪ್ರಣಯಿನಿ
  • ರಾಘವಾಂಕ
  • ಗಾಂ ಎಂಬ ಹೆಸರು
  • ಕುಂಕುಮ ಭೂಮಿ
  • ಕುಸುಮಾಂಜಲಿ

ಪ್ರಶಸ್ತಿ ಗೌರವಗಳು

ಬಿ.ಸರೋಜದೇವಿ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಮುಂತಾದ ಹಲವಾರು ಗೌರವಗಳು ಶಶಿಕಲಾ ವೀರಯ್ಯಸ್ವಾಮಿಯವರಿಗೆ ಸಂದಿವೆ.

ಬೆಂಗಳೂರು, ಕರ್ನಾಟಕ, ಮಂಗಳೂರು, ಮಹಿಳಾ ವಿಶ್ವವಿದ್ಯಾಲಯ ಮುಂತಾದ ವಿಶ್ವವಿದ್ಯಾಲಯಗಳ ಪಿ.ಯು.ಸಿ, ಬಿ.ಎಸ್ಸಿ. ಬಿ.ಎ. ತರಗತಿಗಳಿಗೆ ಪಠ್ಯಪುಸ್ತಕಗಳಲ್ಲಿ ಇವರ ಕಾವ್ಯ, ಗದ್ಯ ಮುಂತಾದವುಗಳು ಶೋಭಿಸಿವೆ.

ಮಾಹಿತಿ ಕೃಪೆ

ಕಣಜ Archived 2016-05-26 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಶಶಿಕಲಾ ವೀರಯ್ಯಸ್ವಾಮಿ ಜೀವನಶಶಿಕಲಾ ವೀರಯ್ಯಸ್ವಾಮಿ ಅಧ್ಯಾಪಕರುಶಶಿಕಲಾ ವೀರಯ್ಯಸ್ವಾಮಿ ಕೆಲಸ ನಿರ್ವಹಣೆಶಶಿಕಲಾ ವೀರಯ್ಯಸ್ವಾಮಿ ಸಾಹಿತ್ಯ ಕೃತಿಗಳುಶಶಿಕಲಾ ವೀರಯ್ಯಸ್ವಾಮಿ ಪ್ರಶಸ್ತಿ ಗೌರವಗಳುಶಶಿಕಲಾ ವೀರಯ್ಯಸ್ವಾಮಿ ಮಾಹಿತಿ ಕೃಪೆಶಶಿಕಲಾ ವೀರಯ್ಯಸ್ವಾಮಿಮೇ ೧೧೯೪೮

🔥 Trending searches on Wiki ಕನ್ನಡ:

ದಲಿತತೋಟಶ್ರೀವಿಜಯಭೋವಿರಾಮಾಯಣನೆಲ್ಸನ್ ಮಂಡೇಲಾಆತ್ಮಚರಿತ್ರೆಮಾದಿಗಧನಂಜಯ್ (ನಟ)ಆಮ್ಲಜನಕಆದಿಪುರಾಣಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆವೈದೇಹಿಕನ್ನಡ ಸಾಹಿತ್ಯ ಪ್ರಕಾರಗಳುಸಂಧಿಬೆಸಗರಹಳ್ಳಿ ರಾಮಣ್ಣಜಾನಪದಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕದ ಜಿಲ್ಲೆಗಳುಹಂಸಲೇಖರವೀಂದ್ರನಾಥ ಠಾಗೋರ್ಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಜ್ಞಾನಪೀಠ ಪ್ರಶಸ್ತಿಭಾಮಿನೀ ಷಟ್ಪದಿಅಂಕಿತನಾಮಕರ್ನಾಟಕಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕ್ರೈಸ್ತ ಧರ್ಮಕನ್ನಡ ವ್ಯಾಕರಣಜಂಬೂಸವಾರಿ (ಮೈಸೂರು ದಸರಾ)ಎಚ್.ಎಸ್.ವೆಂಕಟೇಶಮೂರ್ತಿರಾಘವಾಂಕತತ್ಸಮಸಂಶೋಧನೆಯಕ್ಷಗಾನಸ್ವಾಮಿ ವಿವೇಕಾನಂದಫ್ರೆಂಚ್ ಕ್ರಾಂತಿಸಾಮವೇದಮಾನವ ಹಕ್ಕುಗಳುಭಾರತೀಯ ವಿಜ್ಞಾನ ಸಂಸ್ಥೆರಾಜ್ಯಪಾಲವಾಲ್ಮೀಕಿಭೂಮಿಸೂರ್ಯಗೋತ್ರ ಮತ್ತು ಪ್ರವರಅಗ್ನಿ(ಹಿಂದೂ ದೇವತೆ)ಅಖಿಲ ಭಾರತ ಬಾನುಲಿ ಕೇಂದ್ರಬಾಗಲಕೋಟೆಭೌಗೋಳಿಕ ಲಕ್ಷಣಗಳುಕೇಂದ್ರ ಸಾಹಿತ್ಯ ಅಕಾಡೆಮಿಗಣೇಶ್ (ನಟ)ಮಡಿವಾಳ ಮಾಚಿದೇವಜೀವನಅಸಹಕಾರ ಚಳುವಳಿಭಾಷೆಹಾ.ಮಾ.ನಾಯಕಚುನಾವಣೆಮಾಸ್ತಿ ವೆಂಕಟೇಶ ಅಯ್ಯಂಗಾರ್ಚೌರಿ ಚೌರಾ ಘಟನೆಹಲ್ಮಿಡಿಖೊಖೊಅಲ್ಲಮ ಪ್ರಭುರಗಳೆಆರೋಗ್ಯದುರ್ಗಸಿಂಹಕೊಳ್ಳೇಗಾಲಜಯದೇವಿತಾಯಿ ಲಿಗಾಡೆವಿಷ್ಣುವರ್ಧನ್ (ನಟ)ಮದಕರಿ ನಾಯಕಕರಾವಳಿ ಚರಿತ್ರೆಪ್ರಾಣಾಯಾಮಹಣಕಾಸುಜಾಗತೀಕರಣಮೊಗಳ್ಳಿ ಗಣೇಶಹೃದಯಭಾರತದ ಸಂವಿಧಾನ ರಚನಾ ಸಭೆಎಚ್.ಎಸ್.ಶಿವಪ್ರಕಾಶ್ಮನೋಜ್ ನೈಟ್ ಶ್ಯಾಮಲನ್🡆 More