ರಣ್ವೀರ್ ಸಿಂಗ್: ಭಾರತೀಯ ನಟ

ರಣ್ವೀರ್ ಸಿಂಗ್ ಭವ್ನಾನಿ (ಜನನ 6 ಜುಲೈ 1985) ಹಿಂದಿ ಚಲನಚಿತ್ರದಲ್ಲಿ ನಟಿಸುವ ಭಾರತೀಯ ನಟ.

ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದ ಇವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಬ್ಲೂಮಿಂಗ್ಟನ್ನ ಇಂಡಿಯಾನ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದ ನಂತರ ಭಾರತಕ್ಕೆ ಮರಳಿ ಬಂದರು. ಆರಂಭದಲ್ಲಿ ಜಾಹೀರಾತಿನಲ್ಲಿ ಕೆಲಸವನ್ನು ಮಾಡಿದರು. ನಂತರ ಯಶ್ ರಾಜ್ ಫಿಲ್ಮ್ಸ್ ನ ಬ್ಯಾಂಡ್ ಬಾಜ ಭಾರತ್ ಮೂಲಕ ಚಲನಚಿತ್ರಕ್ಕೆ ನಟನಾಗಿ ಪಾದಾರ್ಪಣೆ ಮಾಡಿದರು.

ರಣ್ವೀರ್ ಸಿಂಗ್
ರಣ್ವೀರ್ ಸಿಂಗ್: ಆರಂಭಿಕ ಜೀವನ, ವೃತ್ತಿ ಜೀವನ, ಫಿಲ್ಮೋಗ್ರಾಫಿ
Born
ರಣ್ವೀರ್ ಸಿಂಗ್ ಭವ್ನಾನಿ

(1985-07-06) ೬ ಜುಲೈ ೧೯೮೫ (ವಯಸ್ಸು ೩೮)
Occupationನಟ
Years active2010–
Spouseದೀಪಿಕಾ ಪಡುಕೋಣೆ (ವಿವಾಹ 2018)

ಆರಂಭಿಕ ಜೀವನ

ರಣ್ವೀರ್ ಸಿಂಗ್ 6 ಜುಲೈ 1985ರಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದರು. ತಾಯಿ ಅಂಜು, ತಂದೆ ಜಗ್ಜೀತ್ ಸಿಂಗ್ ಭವ್ನಾನಿ, ಅಕ್ಕ ರಿತಿಕಾ ಭವ್ನಾನಿ. ಭಾರತದ ವಿಭಜನೆಯ ಸಮಯದಲ್ಲಿ ಸಿಂಗ್ ಕುಟುಂಬವು ಕರಾಚಿಯಿಂದ ಬಾಂಬೆಗೆ ಬಂದರು. ಬಾಲ್ಯದಲ್ಲಿಯೆ ನಟನಾಗಬೇಕೆಂಬು ಅವರದ್ದು ಆಕಾಂಕ್ಷೆಯಾಗಿತ್ತು. ಬ್ಲೂಮಿಂಗ್ಟನ್ನ ಇಂಡಿಯಾನ ವಿಶ್ವವಿದ್ಯಾಲಯದಿಂದ ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ.

ವೃತ್ತಿ ಜೀವನ

ಸಿಂಗ್ ಹಲವು ಕಾಲ ಜಾಹೀರಾತಿನಲ್ಲಿ ಕೆಲಸ ಮಾಡಿದರು. ೨೦೧೦ರಲ್ಲಿ ಸಿಂಗ್ ರವರನ್ನು ಯಶ್ ರಾಜ್ ಫಿಲ್ಮ್ಸ್ ಶಾನೋ ಶರ್ಮ ಆಡಿಷನ್ ಗೆ ಕರೆದರು. ರಣ್ವೀರ್ ರವರ ನಟನೆಯಿಂದ ಮೆಚ್ಚಿದ ಆದಿತ್ಯ ಚೋಪ್ರಾ, ಸಿಂಗ್ ರವರನ್ನು ಬಿಟ್ಟೊ ಶರ್ಮ ಪಾತ್ರಕ್ಕೆ ಆಯ್ಕೆ ಮಾಡಿದರು. ಬ್ಯಾಂಡ್ ಬಾಜ ಭಾರತ್ ಚಿತ್ರದಿಂದ ನಟನೆಗೆ ಪಾದಾರ್ಪಣೆ ಮಾಡಿದರು.ಅನುಷ್ಕಾ ಶರ್ಮ ಜೊತೆ ನಟಿಸಿದ ಈ ಚಿತ್ರವು ಜನಪ್ರಿಯವಾಯಿತು ಮತ್ತು ಅವರ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯು ದೊರೆಯಿತು. ಮನೀಶ್ ಶರ್ಮ ನಿರ್ದೇಶಿಸಿದ ಲೇಡಿಸ್ vs ರಿಕ್ಕಿ ಬಹ್ಲ್ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಪರಿನೀತಿ ಚೋಪ್ರಾ, ದಿಪನಿಟ್ಟ ಶರ್ಮ ಮತ್ತ ಅದಿತಿ ಶರ್ಮ ಜೊತೆ ನಟಿಸಿದ್ದಾರೆ. ವಿಕ್ರಮಾದಿತ್ಯ ಮೊಟ್ವಾನೆ ನಿರ್ದೇಶಿಸಿದ ಲೂಟೆರ ಚಿತ್ರದಲ್ಲಿ ಕಳ್ಳನ ಪಾತ್ರದಲ್ಲಿ ಅಭಿನಯಿಸಿದರು. ಸಂಜಯ್ ಲೀಲಾ ಭಂಸಾಲಿಯವರ ಗೋಲಿಯೊನ್ ಕಿ ರಾಸ್ಲೀಲಾ ರಾಮ್- ಲೀಲಾ ಎಂಬ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಾರೆ. ಈ ಚಿತ್ರವು ವಿಲಿಯಂ ಷೇಕ್ಸ್‌ಪಿಯರ್ನ ರೋಮಿಯೋ ಜ್ಯೂಲಿಯಟ್ ಆಧಾರಿತವಾಗಿದೆ. ರಣ್ವೀರ್ ಸಿಂಗ್ ರಾಮ್ ಎಂಬ ಗುಜರಾತಿ ಹುಡುಗನ ಪಾತ್ರವನ್ನು ಅಭಿನಯಿಸಿದ್ದರು. ೨೦೧೪ರಲ್ಲಿ ಅರ್ಜುನ್ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾರ ಜೊತೆ ಗುಂಡೇ ಚಲನಚಿತ್ರದಲ್ಲಿ ನಟಿಸಿದರು.ಕಿಲ್ ದಿಲ್ ಚಿತ್ರದಲ್ಲಿ ಪರಿನೀತಿ ಚೋಪ್ರಾ ಮತ್ತು ಅಲಿ ಝಫರ್ ಜೊತೆ ನಟಿಸಿದ್ದಾರೆ. ೨೦೧೫ರಲ್ಲಿ ದಿಲ್ ಧಡಕನೆ ದೊ ಚಲನಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ಅನಿಲ್ ಕಪೂರ್ ಜೊತೆ ನಟಿಸಿದ್ದಾರೆ. ೨೦೧೫ರಲ್ಲಿ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಜೊತೆ ನಟಿಸಿದ್ದಾರೆ. ೨೦೧೬ರಲ್ಲಿ ವಾಣಿ ಕಪೂರ್ ಜೊತೆ ಬೇಫಿಕ್ರೇ ಚಲನಚಿತ್ರದಲ್ಲಿ ನಟಿಸಿದ್ದಾರೆ. ೨೦೧೮ರಲ್ಲಿ ಸಂಜಯ್ ಲೀಲಾ ಭಂಸಾಲಿಯವರ ಪದ್ಮಾವತ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಗೂ ಶಾಹಿದ್ ಕಪೂರ್ ಜೊತೆ ನಟಿಸಿದ್ದಾರೆ.ಈ ಚಿತ್ರದಲ್ಲಿ ಅಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ರೋಹಿತ್ ಶೆಟ್ಟಿ ಚಿತ್ರಿಸಿದ ಸಿಂಬಾ ಚಿತ್ರದಲ್ಲಿ ಸಾರಾ ಅಲಿ ಖಾನ್ ಜೊತೆ ನಟಿಸಿದ್ದಾರೆ.ಈ ಚಿತ್ರದಲ್ಲಿ ಪೋಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ. ನಂತರ ೨೦೧೯ರ ಗಲ್ಲಿ ಬಾಯ್ ಚಲನಚಿತ್ರದಲ್ಲಿ ಆಲಿಯಾ ಭಟ್ ಜೊತೆ ನಟಿಸಿದ್ದಾರೆ. ಸಿಂಗ್ ರವರು ದೀಪಿಕಾ ಪಡುಕೋಣೆಯನ್ನು ವಿವಾಹವಾಗಿದ್ದಾರೆ. ಸಿಂಗ್ 83 ಚಲನಚಿತ್ರದಲ್ಲಿ ಕ್ರಿಕೇಟಿಗರಾದ ಕಪಿಲ್ ದೇವ್ ರವರ ಪಾತ್ರವನ್ನು ನಿರ್ವಹಿಸಿತ್ತಿದ್ದಾರೆ. ಇದು 1983 ಕ್ರಿಕೆಟ್ ವಿಶ್ವಕಪ್ ಆಧಾರಿತ ಕ್ರೀಡಾ ಚಲನಚಿತ್ರವಾಗಿದೆ.

ಫಿಲ್ಮೋಗ್ರಾಫಿ

ರಣ್ವೀರ್ ಸಿಂಗ್: ಆರಂಭಿಕ ಜೀವನ, ವೃತ್ತಿ ಜೀವನ, ಫಿಲ್ಮೋಗ್ರಾಫಿ  ಇನ್ನೂ ಬಿಡುಗೊಡೆಯಾಗದ ಚಲನಚಿತ್ರವನ್ನು ಸೂಚಿಸುತ್ತದೆ.
ವರ್ಷ ಚಲನಚಿತ್ರ ಪಾತ್ರ ನಿರ್ದೇಶಕ ಟಿಪ್ಪಣಿ
2010 ಬ್ಯಾಂಡ್ ಬಾಜ ಭಾರತ್ ಬಿಟ್ಟೊ ಶರ್ಮ ಮನೀಶ್ ಶರ್ಮ ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಅವಾರ್ಡ್
2011 ಲೇಡಿಸ್ vs ರಿಕ್ಕಿ ಬಹ್ಲ್ ರಿಕ್ಕಿ ಬಹ್ಲ್ ಮನೀಶ್ ಶರ್ಮ
2013 ಬಾಂಬೆ ಟಾಕೀಸ್ ಸ್ವತಃ ಬಹು ಅಪ್ನ ಬಾಂಬೆ ಟಾಕೀಸ್ ಹಾಡಿನಲ್ಲಿ ವಿಶೇಷ ಆಗಮನ
2013 ಲೂಟೆರ ವರುಣ್ ಶ್ರೀವಾಸ್ತವ್
ಆತ್ಮಾನಂದ್ ನಂದು ತ್ರಿಪತಿ
ವಿಕ್ರಮಾದಿತ್ಯ ಮೊಟ್ವಾನೆ
2013 ಗೋಲಿಯೊನ್ ಕಿ ರಾಸ್ಲೀಲಾ ರಾಮ್- ಲೀಲಾ ರಾಮ್ ರಜರಿ ಸಂಜಯ್ ಲೀಲಾ ಭಂಸಾಲಿ ನಾಮನಿರ್ದೇಶನ—ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಅವಾರ್ಡ್
2014 ಗುಂಡೇ ಬಿಕ್ರಮ್ ಬೊಸ್ ಅಲಿ ಅಬ್ಬಾಸ್ ಝಫರ್
2014 ಫೈಂಡಿಂಗ್ ಫನ್ನಿ ಗಬೊ ಹೊಮಿ ಅದಜನಿಯ ಕ್ಯಾಮಿಯೊ
2014 ಕಿಲ್ ದಿಲ್ ದೇವ್ ಶಾದ್ ಅಲಿ
2015 ಹೆ ಬ್ರೊ ಸ್ವತಃ ಅಜಯ್ ಚಂದೊಕ್ ಬಿರ್ಜು ಹಾಡಿನಲ್ಲಿ ವಿಶೇಷ ಆಗಮನ
2015 ದಿಲ್ ಧಡಕನೆ ದೊ ಕಬಿರ್ ಮೆಹ್ರ ಝೋಯಾ ಅಕ್ಥಾರ್
2015 ಬಾಜಿರಾವ್ ಮಸ್ತಾನಿ ಪೇಶ್ವ ಬಾಜಿರಾವ್ ಸಂಜಯ್ ಲೀಲಾ ಭಂಸಾಲಿ ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಅವಾರ್ಡ್
2016 ಬೇಫಿಕ್ರೇ ಧರಮ್ ಗುಲಟಿ ಆದಿತ್ಯ ಚೋಪ್ರಾ
2018 ಪದ್ಮಾವತ್ ಅಲಾವುದ್ದೀನ್ ಖಿಲ್ಜಿ ಸಂಜಯ್ ಲೀಲಾ ಭಂಸಾಲಿ ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ವಿಮರ್ಶಕರ ಪ್ರಶಸ್ತಿ
ನಾಮನಿರ್ದೇಶನ— ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಅವಾರ್ಡ್
2018 ಟೀಫಾ ಇನ್ ಟ್ರಬಮ್ ಸ್ವತಃ ಅಹ್ಸಾನ್ ರಹೀಮ್ ಪಾಕಿಸ್ತಾನಿ ಚಲನಚಿತ್ರ; ವಿಶೇಷ ಆಗಮನ
2018 ಸಿಂಬ ಸಂಗ್ರಮ್ ಸಿಂಬ ಭಲೆರಾವ್ ರೋಹಿತ್ ಶೆಟ್ಟಿ
2019 ಗಲ್ಲಿ ಬಾಯ್ ಮುರದ್ ಅಹ್ಮದ್ ಝೋಯಾ ಅಕ್ಥಾರ್
2020 83 ರಣ್ವೀರ್ ಸಿಂಗ್: ಆರಂಭಿಕ ಜೀವನ, ವೃತ್ತಿ ಜೀವನ, ಫಿಲ್ಮೋಗ್ರಾಫಿ  ಕಪಿಲ್ ದೇವ್ ಕಬೀರ್ ಖಾನ್ Filming

ಡಿಸ್ಕೋಗ್ರಾಫಿ

ಶೀರ್ಷಿಕೆ ವರ್ಷ ಆಲ್ಬಮ್ Ref(s).
ಅಸ್ಲಿ ಹಿಪ್ ಹಾಪ್ 2019 ಗಲ್ಲಿ ಬಾಯ್
ಮೆರೆ ಗಲ್ಲಿ ಮೆ
ದೂರಿ ಪೊಯಮ್
ದೂರಿ
ಕಬ್ ಸೆ ಕಬ್ ತಕ್
ಏಕ್ ಹೀ ರಾಸ್ತ
ಅಪ್ನ ಟೈಮ್ ಆಯೆಗಾ

ಉಲ್ಲೇಖಗಳು

Tags:

ರಣ್ವೀರ್ ಸಿಂಗ್ ಆರಂಭಿಕ ಜೀವನರಣ್ವೀರ್ ಸಿಂಗ್ ವೃತ್ತಿ ಜೀವನರಣ್ವೀರ್ ಸಿಂಗ್ ಫಿಲ್ಮೋಗ್ರಾಫಿರಣ್ವೀರ್ ಸಿಂಗ್ ಡಿಸ್ಕೋಗ್ರಾಫಿರಣ್ವೀರ್ ಸಿಂಗ್ ಉಲ್ಲೇಖಗಳುರಣ್ವೀರ್ ಸಿಂಗ್ಹಿಂದಿ

🔥 Trending searches on Wiki ಕನ್ನಡ:

ವಿಶ್ವ ಪರಿಸರ ದಿನನೃಪತುಂಗ ಸಾಹಿತ್ಯ ಪ್ರಶಸ್ತಿಕೃಷ್ಣರಾಜಸಾಗರಶಾತವಾಹನರುಸಮಾಜಶಾಸ್ತ್ರಕನ್ನಡ ಅಭಿವೃದ್ಧಿ ಪ್ರಾಧಿಕಾರಬಾಲಕಾರ್ಮಿಕಮಡಿವಾಳ ಮಾಚಿದೇವಛಂದಸ್ಸುಭಾರತದ ಉಪ ರಾಷ್ಟ್ರಪತಿಶಿಕ್ಷಣಮೌರ್ಯ (ಚಲನಚಿತ್ರ)ಪರಶುರಾಮಕರ್ಕಾಟಕ ರಾಶಿಸವಿತಾ ನಾಗಭೂಷಣರವಿಚಂದ್ರನ್ರತ್ನತ್ರಯರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಅಳತೆ, ತೂಕ, ಎಣಿಕೆಕೌರವರುಮಲೈ ಮಹದೇಶ್ವರ ಬೆಟ್ಟಹಸಿರುಮನೆ ಪರಿಣಾಮದಾಂಡೇಲಿಶೃಂಗೇರಿಸ್ವರವೀರಗಾಸೆಶಬರಿಕರ್ನಾಟಕದಲ್ಲಿ ಪಂಚಾಯತ್ ರಾಜ್ನಾಕುತಂತಿಐಹೊಳೆಮಾನಸಿಕ ರೋಗಗಳುಗೋಪಾಲಕೃಷ್ಣ ಅಡಿಗಸಮುಚ್ಚಯ ಪದಗಳುಕಾರ್ಮಿಕರ ದಿನಾಚರಣೆಅಮ್ಮಪುರಂದರದಾಸದಿಕ್ಕುಸಂಧಿಕಲಬುರಗಿಇನ್ಸ್ಟಾಗ್ರಾಮ್ತುಮಕೂರುಸುದೀಪ್ಹಲಸಿನ ಹಣ್ಣುಮೂಢನಂಬಿಕೆಗಳುಮಲ್ಲಿಕಾರ್ಜುನ್ ಖರ್ಗೆಜಲ ಚಕ್ರಸಿದ್ದಲಿಂಗಯ್ಯ (ಕವಿ)ತಲಕಾಡುಜೋಗಿ (ಚಲನಚಿತ್ರ)ಪ್ರಬಂಧರಾಷ್ಟ್ರೀಯ ಸೇವಾ ಯೋಜನೆಭೀಮಾ ತೀರದಲ್ಲಿ (ಚಲನಚಿತ್ರ)ಭಾರತದ ಆರ್ಥಿಕ ವ್ಯವಸ್ಥೆರಾಶಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಜಾತ್ರೆಪರಿಣಾಮವೆಂಕಟೇಶ್ವರಕಾಂತಾರ (ಚಲನಚಿತ್ರ)ದಿಯಾ (ಚಲನಚಿತ್ರ)ಅನುಶ್ರೀವ್ಯಂಜನಮಲಬದ್ಧತೆಕನ್ನಡ ಛಂದಸ್ಸುನುಡಿಗಟ್ಟುಜೇನು ಹುಳುಸಂಯುಕ್ತ ರಾಷ್ಟ್ರ ಸಂಸ್ಥೆಲಾಲ್ ಬಹಾದುರ್ ಶಾಸ್ತ್ರಿಹೆಸರುರಾಮರಾಜ್ಯಸಭೆಅ.ನ.ಕೃಷ್ಣರಾಯಕಾಮಸೂತ್ರಭಾರತದಲ್ಲಿನ ಶಿಕ್ಷಣಕರ್ನಾಟಕದಲ್ಲಿ ವನ್ಯಜೀವಿಧಾಮಗಳುಮಳೆಕೇಂದ್ರ ಲೋಕ ಸೇವಾ ಆಯೋಗಶನಿ🡆 More