ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭

ಬ್ರೀಟಿಷ್ ಆಡಳಿತದ ಮುಕ್ತಾಯದ ನಂತರ ದೇಶ ವಿಭಜನೆಯಲ್ಲಿ ಮುಖ್ಯ ಪಾತ್ರ ವಹಿಸಿದ ಕಾಯ್ದೆ ಭಾರತದ ಸ್ವಾತಂತ್ರ್ಯ ಕಾಯ್ದೆ ೧೯೪೭.

ಬ್ರಿಟಿಷ್ ಸಂಸತ್ ನಲ್ಲಿ ಅಂಗೀಕೃತವಾದ ಈ ಕಾಯ್ದೆ ಭಾರತಕ್ಕೆ ಸ್ವಾತಂತ್ರ್ಯ ಕೊಡುವುದರ ಜೊತೆಗೆ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸಿತು. ೧೮ ಜೂಲೈ ೧೯೪೭ ರಲ್ಲಿ ಸಮ್ಮತಿ ಪಡೆದುಕೊಂಡ ಈ ಕಾಯ್ದೆ ಭಾರತ ಹಾಗು ಪಾಕಿಸ್ತಾನದಲ್ಲಿ ಅದೇ ವರ್ಷದ ಆಗಸ್ಟ್ ೧೫ರಿಂದ ಸಂಪೂರ್ಣ ಅನುಷ್ಠಾನವಾಯಿತು. ಆದರೆ ಅಂದಿನ ಬ್ರಿಟಿಷ್ ವೈಸ್ರಾಯ್ ಮೌಂಟ್ ಬ್ಯಾಟನ್ ಅಧಿಕಾರ ಹಸ್ತಾಂತರಕ್ಕಾಗಿ ದೆಹಲಿಯಲ್ಲಿ ಉಳಿದುಕೊಂಡಿದ್ದರು. ಅವರು ಎರಡು ದೇಶದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದ ಪಾಕಿಸ್ತಾನ ಆಗಸ್ಟ್ ೧೪ರಂದೇ ಅಧಿಕಾರ ಸ್ವೀಕರಿಸಿ ಅಧೀಕೃತವಾಗಿ ಸ್ವಾತಂತ್ರ್ಯವಾಯಿತು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಮುಸ್ಲಿಂ ಲೀಗ್ ಹಾಗು ಸಿಖ್ ಮುಖಂಡರು ಒಡಗೂಡಿ ಒಪ್ಪಿಗೆ ಕೊಟ್ಟಿದ್ದ ಜೂನ್ ೩ರ ಯೋಜನೆ ಅಥವಾ ಮೌಂಟ್ ಬ್ಯಾಟನ್ ಯೋಜನೆಯ ಆಧಾರದ ಮೇಲೆ ದೇಶ ವಿಭಜನೆಯಾಗುವುದೆಂದು ತೀರ್ಮಾನವಾದ ಮೇಲೆ ಪ್ರಧಾನ ಮಂತ್ರಿ ಕ್ಲೇಮೇಟ್ ಅಟ್ಟಲೀ ಹಾಗು ಭಾರತದ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ನೇತೃತ್ವದಲ್ಲಿ ಶಾಸನ ಸಭೆ ರಚಿಸಲಾಯಿತು. ಮೌಂಟ್ ಬ್ಯಾಟನ್ ಯೋಜನೆಯೇ ಭಾರತದ ಸ್ವಾತಂತ್ರ್ಯ ಯೋಜನೆಯಲ್ಲಿ ಕೊನೆಯದಾಗಿದೆ.

ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭
ಬ್ರಿಟಿಷ್ ಭಾರತ ವಿಭಜನೆ

ಹಿನ್ನೆಲೆ

ಅಟ್ಟಲೀ ಘೋಷಣೆಗಳು

ಯುನೈಟೆಡ್ ಕಿಂಗ್ಡಮ್ ಪ್ರಧಾನ ಮಂತ್ರಿಯಾಗಿದ್ದ ಕ್ಲೇಮೇಟ್ ಅಟ್ಟಲೀ ಫೆಬ್ರವರಿ ೨೦, ೧೯೪೭ ರಂದು ಈ ಕೆಳಕಂಡ ಎರಡು ಮುಖ್ಯ ಘೋಷಣೆಗಳನ್ನು ಮಾಡಿದರು.

  • ಜೂನ್ ೧೯೪೮ ರ ವೇಳೆಗೆ ಭಾರತ ಉಪಖಂಡಕ್ಕೆ ಬ್ರಿಟಿಷ್ ಸರ್ಕಾರದಿಂದ ಸಂಪೂರ್ಣ ಸ್ವಾತಂತ್ರ್ಯ ಜಾರಿ ಮಾಡುವುದು.
  • ಸ್ವಾತಂತ್ರ್ಯಾನಂತರ ಹುಟ್ಟಲಿರುವ ರಾಷ್ಟ್ರಗಳನ್ನು ಸ್ವಾತಂತ್ರ್ಯ ಕೊಟ್ಟ ನಂತರವಷ್ಟೇ ತೀರ್ಮಾನ ಮಾಡುವುದು.

ಜೂನ್ ೩ ರ ಯೋಜನೆ ಅಥವಾ ಮೌಂಟ್ ಬ್ಯಾಟನ್ ಯೋಜನೆ

೧೯೪೭ ರ ಜೂನ್ ೩ ರಂದು ಬ್ರಿಟಿಷ್ ಸರ್ಕಾರ ಭಾರತ ಉಪಖಂಡದ ಸ್ವಾತಂತ್ರ್ಯ ಕ್ಕೆ ಸಂಬಂಧ ಪಟ್ಟಂತೆ ಯೋಜನೆಯನ್ನು ಸಿದ್ಧಪಡಿಸಿತು, ಆ ಯೋಜನೆಯನ್ನು ಜೂನ್ ೩ ರ ಯೋಜನೆ ಎಂದೇ ಕರೆಯಲಾಗುತ್ತದೆ. ಯೋಜನೆ ಸಿದ್ಧಪಡಿಸುವಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ರ ಪಾತ್ರ ಬಹಳ ಇದ್ದ ಕಾರಣ ಈ ಯೋಜನೆಯನ್ನು 'ಮೌಂಟ್ ಬ್ಯಾಟನ್' ಯೋಜನೆ ಎಂದೂ ಕರೆಯಲಾಗುತ್ತದೆ. ಇದು ಭಾರತದ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟಂತೆ ಬ್ರಿಟೀಷರಿಂದ ಬಿಡುಗಡೆಯಾದ ಕೊನೆಯ ಯೋಜನೆ. ಈ ಯೋಜನೆಯ ಮುಖ್ಯಾಂಶಗಳು,

  • ಭಾರತದ ವಿಭಜನೆಯನ್ನು ಬ್ರಿಟಿಷ್ ಆಡಳಿತದ ಸರ್ಕಾರ ಯಶಸ್ವಿಯಾಗಿ ಒಪ್ಪಿಕೊಳ್ಳುತ್ತದೆ.
  • ವಿಭಜನಾನಂತರ ಜನಿಸಿದ ರಾಷ್ಟ್ರಗಳಿಗೆ ಪ್ರತ್ಯೇಕ ರಾಷ್ಟ್ರದ ಸ್ಥಾನ ಮಾನ ಜಾರಿ.
  • ಬ್ರಿಟಿಷ್ ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿ ಮುಂದುವರೆಯುವ ವಿವೇಚನೆ ಆಯಾ ದೇಶಗಳ ವ್ಯಾಪ್ತಿಗೆ.


ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭ 
ಮಹಾತ್ಮ ಗಾಂಧಿಯವರೊಂದಿಗೆ ಭಾರತದ ಗವರ್ನರ್ ಜನರಲ್ ಮೌಂಟ್ ಬ್ಯಾಟನ್

ಕಾನೂನಾತ್ಮಕ ಅಧಿಕಾರಗಳು

ಭಾರತದ ಸ್ವಾತಂತ್ರ್ಯ ಕಾಯ್ದೆ ೧೯೪೭ ರ ಪರಿಣಾಮ ಕಾನೂನಾತ್ಮಕವಾಗಿ ಸ್ವಾತಂತ್ರ್ಯಗೊಳ್ಳುವ ದೇಶಗಳಿಗೆ ಈ ಕೆಳಕಂಡ ಬದಲಾವಣೆ ಅಧಿಕಾರಗಳು ದೊರೆತವು.

  • ಬ್ರಿಟಿಷ್ ಭಾರತವನ್ನು ಸ್ವಾತಂತ್ರ್ಯಗೊಳಿಸಿ ಅನಂತರ ಭಾರತ ಹಾಗು ಪಾಕಿಸ್ತಾನ ಎಂಬ ಎರಡು ದೇಶಗಳು ಜನ್ಮ ತಳೆಯಬೇಕು. ೧೫ ಆಗಸ್ಟ್ ೧೯೪೭ ರಿಂದಲೇ ಈ ಅಂಶ ಜಾರಿಯಾಗಬೇಕು.
  • ಪಂಜಾಬ್ ಹಾಗು ಬಂಗಾಳ ಪ್ರಾಂತಗಳನ್ನು ಹೊಸದಾಗಿ ಉದಯಿಸುವ ಎರಡು ದೇಶಗಳಿಗೆ ಹಂಚಬೇಕು.
  • ಹೊಸದಾಗಿ ಜನ್ಮ ತಳೆದ ಎರದೂ ದೇಶಗಳಲ್ಲಿ ಗವರ್ನರ್ ಜನರಲ್ ಅವರ ಕಛೇರಿ ತೆರೆಯಬೇಕು. ಬ್ರಿಟಿಷ್ ಉತ್ತರಾಧಿಪತ್ಯ ಸೂಚಿಸಲು ಇದು ಸಹಾಕಾರಿಯಾಗಲಿದೆ ಎಂಬ ಭಾವನೆ.
  • ಹೊಸದಾಗಿ ಉದ್ಯವಾದ ಎರದೂ ದೇಶಗಳಿಗೆ ಸಂಪೂರ್ಣ ಶಾಸನ ಸಭೆಯ ಸ್ವಾತಂತ್ರ್ಯ ಹಾಗು ಅಧಿಕಾರ ಕೊಡುವುದು.
  • ೧೫ ಆಗಸ್ಟ್ ೧೯೪೭ ರಿಂದ ಎರಡು ದೇಶಗಳ ಮೇಲೆ ಬ್ರಿಟಿಷ್ ಸಾರ್ವಭೌಮತ್ವ ಕೊನೆಗೊಳಿಸುವುದು ಹಾಗು 'ಎಂಪರರ್ ಆ ಇಂಡಿಯಾ' ಎಂಬ ಪದ ಬಳೆಕೆಯನ್ನು ತಡೆ ಹಿಡಿಯುವುದು.(ಇದನ್ನು ಕಾರ್ಯಗತಗೊಳಿಸಿದ್ದು ಬ್ರಿಟಿಷ್ ರಾಜ ಕಿಂಗ್ ಜಾರ್ಜ್ ೬ ಜೂನ್ ೨೨ರ ೧೯೪೮ ರಲ್ಲಿ)


ಇವನ್ನೂ ನೋಡಿ

ಆಕರಗಳು

Tags:

ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭ ಹಿನ್ನೆಲೆಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭ ಕಾನೂನಾತ್ಮಕ ಅಧಿಕಾರಗಳುಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭ ಇವನ್ನೂ ನೋಡಿಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭ ಆಕರಗಳುಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭ದೆಹಲಿಪಾಕಿಸ್ತಾನಭಾರತಲೂಯಿಸ್‌ ಮೌಂಟ್‌‌ಬ್ಯಾಟನ್‌‌, ಬರ್ಮಾದ 1ನೆಯ ಅರ್ಲ್‌‌ ಮೌಂಟ್‌ಬ್ಯಾಟನ್‌‌

🔥 Trending searches on Wiki ಕನ್ನಡ:

ಸಂಸ್ಕೃತ ಸಂಧಿತಂತ್ರಜ್ಞಾನಅಮೃತಧಾರೆ (ಕನ್ನಡ ಧಾರಾವಾಹಿ)ಕರಗ (ಹಬ್ಬ)ವಿಧಾನ ಪರಿಷತ್ತುಭೂತಾರಾಧನೆಆಂಡಯ್ಯಪುರಾತತ್ತ್ವ ಶಾಸ್ತ್ರಬಾಗಲಕೋಟೆಚಾಮುಂಡರಾಯಎಡ್ವಿನ್ ಮೊಂಟಾಗುಮಹಿಳೆ ಮತ್ತು ಭಾರತಜೇನುಎರಡನೇ ಮಹಾಯುದ್ಧತೆನಾಲಿ ರಾಮಕೃಷ್ಣಜಾಗತೀಕರಣಸುಂದರ್ ಪಿಚೈಗಾಂಧಿ ಜಯಂತಿಪ್ರಜಾಪ್ರಭುತ್ವಹೆಚ್.ಡಿ.ಕುಮಾರಸ್ವಾಮಿಕನ್ನಡದಲ್ಲಿ ಸಣ್ಣ ಕಥೆಗಳುಮಲಬದ್ಧತೆರೈತವಾರಿ ಪದ್ಧತಿಹೆಳವನಕಟ್ಟೆ ಗಿರಿಯಮ್ಮಅಶ್ವತ್ಥಾಮನೀರಿನ ಸಂರಕ್ಷಣೆಅರವಿಂದ ಮಾಲಗತ್ತಿಗುಪ್ತ ಸಾಮ್ರಾಜ್ಯಅಳತೆ, ತೂಕ, ಎಣಿಕೆರಾವಣಸೂರ್ಯವ್ಯೂಹದ ಗ್ರಹಗಳುಪಂಚತಂತ್ರಅಶ್ವಮೇಧಮಂಡ್ಯಗೂಬೆಭಾಷಾ ವಿಜ್ಞಾನವಿಜಯಪುರಆದೇಶ ಸಂಧಿಗೌತಮ ಬುದ್ಧರಾಷ್ಟ್ರೀಯ ಸೇವಾ ಯೋಜನೆಲಸಿಕೆವಿನೋಬಾ ಭಾವೆತೆಲುಗುಕರ್ನಾಟಕದ ಏಕೀಕರಣಹಿಂದೂ ಧರ್ಮಪ್ಲೇಟೊಮಹಾಲಕ್ಷ್ಮಿ (ನಟಿ)ಬಾಲಕಾರ್ಮಿಕವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಶಾಲೆಕೃಷಿಪ್ರಜಾವಾಣಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಪಠ್ಯಪುಸ್ತಕಒಂದು ಮುತ್ತಿನ ಕಥೆಸಚಿನ್ ತೆಂಡೂಲ್ಕರ್ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವೇದವ್ಯಾಸದಕ್ಷಿಣ ಕನ್ನಡವಿತ್ತೀಯ ನೀತಿಪಂಚ ವಾರ್ಷಿಕ ಯೋಜನೆಗಳುಗ್ರಾಮ ಪಂಚಾಯತಿಹನುಮಾನ್ ಚಾಲೀಸಮ್ಯಾಕ್ಸ್ ವೆಬರ್ಭಾರತದ ಸಂಸತ್ತುಪ್ಲಾಸಿ ಕದನಹಲ್ಮಿಡಿಜೋಗಭಾರತೀಯ ರಿಸರ್ವ್ ಬ್ಯಾಂಕ್ಭಾರತೀಯ ಆಡಳಿತಾತ್ಮಕ ಸೇವೆಗಳುನುಡಿ (ತಂತ್ರಾಂಶ)ಮಹಾಭಾರತಪ್ರಬಂಧಸಂಸ್ಕೃತಿಪರಿಣಾಮ🡆 More