ಹಲಸು: ಒಂದು ಮರ

ಹಲಸು (ತುಳು: ಪೆಲಕಾಯಿ) ನಿತ್ಯಹರಿದ್ವರ್ಣದ ದೊಡ್ಡ ಪ್ರಮಾಣದ ಮರ.

ಹಲಸು
ಹಲಸು: ಸಸ್ಯಶಾಸ್ತ್ರೀಯ ವರ್ಗೀಕರಣ, ವಿವರ, ವೈಶಿಷ್ಟ್ಯಗಳು
ಹಲಸಿನ ಮರ ಮತ್ತು ಕಾಯಿ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
Division:
ಹೂ ಬಿಡುವ ಸಸ್ಯ
(ಶ್ರೇಣಿಯಿಲ್ಲದ್ದು):
Eudicots
ವರ್ಗ:
ಮ್ಯಾಗ್ನೋಲಿಯೊಪ್ಸಿಡ
(ಶ್ರೇಣಿಯಿಲ್ಲದ್ದು):
Rosids
ಗಣ:
Rosales
ಕುಟುಂಬ:
Moraceae
ಪಂಗಡ:
Artocarpeae
ಕುಲ:
Artocarpus
ಪ್ರಜಾತಿ:
A. heterophyllus
Binomial name
Artocarpus heterophyllus
Lam.
Synonyms
  • Artocarpus brasiliensis Ortega
  • A. maximus Blanco
  • A. nanca Noronha (nom inval.)
  • A. philippensis Lam.
ಹಲಸು: ಸಸ್ಯಶಾಸ್ತ್ರೀಯ ವರ್ಗೀಕರಣ, ವಿವರ, ವೈಶಿಷ್ಟ್ಯಗಳು
From the campus of Regional Agricultural Research Center, Ambalavayal, India.
ಹಲಸು: ಸಸ್ಯಶಾಸ್ತ್ರೀಯ ವರ್ಗೀಕರಣ, ವಿವರ, ವೈಶಿಷ್ಟ್ಯಗಳು
Jackfruit leaves
ಹಲಸು: ಸಸ್ಯಶಾಸ್ತ್ರೀಯ ವರ್ಗೀಕರಣ, ವಿವರ, ವೈಶಿಷ್ಟ್ಯಗಳು
ಹಲಸಿನ ಕಾಯಿ ಹೂವು
ಹಲಸು: ಸಸ್ಯಶಾಸ್ತ್ರೀಯ ವರ್ಗೀಕರಣ, ವಿವರ, ವೈಶಿಷ್ಟ್ಯಗಳು
The jackfruit illustrated by Michael Boym in the 1656 book Flora Sinensis.
ಹಲಸು: ಸಸ್ಯಶಾಸ್ತ್ರೀಯ ವರ್ಗೀಕರಣ, ವಿವರ, ವೈಶಿಷ್ಟ್ಯಗಳು
ಹಲಸಿನ ಮರದ ತೊಗಟೆ

ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ 1,000ಮೀ ಎತ್ತರದ ಪ್ರದೇಶಗಳಲ್ಲೂ ಮೈದಾನ ಸೀಮೆಗಳಲ್ಲೂ ಕಾಣದೊರೆಯುತ್ತದೆ. ಇದು ಕರ್ನಾಟಕದ ದಕ್ಷಿಣ ಭಾಗದಲ್ಲಿ ಎಲ್ಲಾ ಕಡೆ, ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿಯೂ ಕೂಡಾ ವ್ಯಾಪಕವಾಗಿ ಬೆಳೆಯುತ್ತದೆ. ಇದು ವರ್ಷಪೂರ್ತಿ ದಟ್ಟನೆಯ ಕಡು ಹಸಿರು ಎಲೆಗಳನ್ನು ಹೊಂದಿದ್ದು, ಎಲೆಗಳು ೧೦ ರಿಂದ ೨೦ ಸೆ.ಮೀ ಉದ್ದವಿರುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಮೊರೇಸೀ ಕುಟುಂಬಕ್ಕೆ ಸೇರಿದ್ದು ಆರ್ಟೋಕಾರ್ಪಸ್ ಇಂಟೆಗ್ರಿಫೋಲಿಯ (Artocarpus heterophyllus) ಪ್ರಭೇದಕ್ಕೆ ಸೇರಿದುದಾಗಿದೆ.

ವಿವರ

ಒತ್ತಾದ ಹಸುರೆಲೆಗಳಿಂದ ಕೂಡಿದ ದುಂಡನೆಯ ಹಂದರ ಇದರದ್ದು. ಮರದ ಕಾಂಡ ಕುಳ್ಳಾಗಿ ದಪ್ಪಗಿರುವುದು. ಬೆಳೆಯಲು ನೆರಳು ಆವಶ್ಯಕ. ಕತ್ತರಿಸಿದಾಗ ಚಿಗುರುವುದು. ತೊಗಟೆ ಮತ್ತು ಎಲೆಗಳು ಆನೆಗಳಿಗೆ ಮೆಚ್ಚು. ಹಣ್ಣಿಗೋಸ್ಕರ ಇದನ್ನು ಸಾಗುವಳಿ ಮಾಡುವುದು ಸರ್ವವಿದಿತ. ಬೀಜಬಿತ್ತಿ ಇಲ್ಲವೇ ಕುಂಡಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬಹುದು.

ಕತ್ತರಿಸಿದ ಹೊಸದರಲ್ಲಿ ಚೌಬೀನೆ ಅಚ್ಚಹಳದಿ ಬಣ್ಣದಿಂದಿದ್ದು ಕ್ರಮೇಣ ಎಳೆಯ ಕಂದು ಬಣ್ಣಕ್ಕೆ ತಿರುಗುವುದು. ಹದಮಾಡಲು ಸುಲಭ; ಬಾಳಿಕೆಯುತ. ಕೊಯ್ತಕ್ಕೆ, ಕೆತ್ತನೆ ಕೆಲಸಗಳಿಗೆ ಸುಲಭ.

ವೈಶಿಷ್ಟ್ಯಗಳು

  • ಇದರ ಕಾಯಿ ದೊಡ್ಡದಾಗಿದ್ದು,೫ ಕಿ.ಗ್ರಾಂ.ನಿಂದ ೪೦ ಕಿ.ಗ್ರಾಂ.ಗಿಂತಲೂ ಹೆಚ್ಚು ತೂಗುತ್ತದೆ. ಹಣ್ಣಿನಲ್ಲಿ ಒಂದು ರೀತಿಯ ಮೇಣವಿರುತ್ತದೆ. ಕಾಯಿಯ ಹೊರಭಾಗ ಮುಳ್ಳಿನಿಂದ ಕೂಡಿರುತ್ತದೆ. ಹಣ್ಣಿನ ಒಳಗೆ ತುಂಬಾ ತೊಳೆಗಳಿದ್ದು ಸಿಹಿಯಾಗಿರುತ್ತದೆ. ಹಣ್ಣಿನಲ್ಲಿ ಎರಡು ವಿಧವಿದೆ. ೧.ಬಕ್ಕೆ ೨.ಬೊಳುವ.
  • ಬಡವರ ಹಣ್ಣು ಎಂದೇ ಖ್ಯಾತಿ ಪಡೆದಿದ್ದ ಹಲಸಿನ ಹಣ್ಣು ಉತ್ಪಾದನೆಯಲ್ಲಿ ಭಾರತ ದೇಶಕ್ಕೆ ಜಗತ್ತಿನಲ್ಲಿಯೇ ದ್ವಿತೀಯ ಸ್ಥಾನವಿದೆ. ದೇಶದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನವಿದೆ. ಅಸ್ಸಾಂ ಮತ್ತು ಕೇರಳ ರಾಜ್ಯಗಳಲ್ಲಿ ಕೂಡ ಗಮನಾರ್ಹ ಪ್ರಮಾಣದಲ್ಲಿ ಹಲಸು ಬೆಳೆಯಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 930 ಹೆಕ್ಟೇರ್‌ ವಿಸ್ತೀರ್ಣದಲ್ಲಿ 40260 ಟನ್‌ ಬೆಳೆ ಉತ್ಪಾದಿಸಲಾಗುತ್ತಿದೆ.

ಉಪಯೋಗಗಳು

  • ಇದರ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸುತ್ತಾರೆ.ಹಣ್ಣನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಕೂಡಾ ಮಾಡುತ್ತಾರೆ. ಇದರ ದಾರು ಹಳದಿ ಬಣ್ಣ ಹೊಂದಿದೆ.ಒಣಗಿದಂತೆ ಕಂದು ಬಣ್ಣಕ್ಕೆ ತಿರುಗುತ್ತದೆ. ಸಾದಾರಣ ಹೊಳಪು ಬರುತ್ತದೆ. ಇದರ ಕಟ್ಟಿಗೆಯನ್ನು ಹೋಮ ಹವನಾದಿಗಳಿಗೆ ಉಪಯೋಗಿಸುತ್ತಾರೆ. ಅಲ್ಲದೆ ಚೌಬೀನೆಯು ಬ್ರಷ್ ಹಿಡಿಗಳು, ಕಡೆತದ ಕೆಲಸ, ಸಾಮಾನ್ಯ ಪೀಠೋಪಕರಣ, ವೀಣೆ ತಯಾರಿಕೆ ಇತ್ಯಾದಿಗಳಿಗೆ ಉಪಯುಕ್ತವಾಗಿದೆ.
  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ - ವಿಟಮಿನ್ ಸಿ ಯನ್ನು ಒಳಗೊಂಡಿರುವ ಹಲಸಿನ ಹಣ್ಣು, ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ಸಂರಕ್ಷಿಸುತ್ತದೆ. ಬಿಳಿ ರಕ್ತ ಕೋಶಗಳ ರಚನೆಯನ್ನು ಬೆಂಬಲಿಸುತ್ತಾ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಕಪ್ ಹಲಸಿನಹಣ್ಣು ಈ ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದೆ
  • ವಿಟಮಿನ್ ಸಿ ಯನ್ನು ಒಳಗೊಂಡಂತೆ ಹಲಸಿನ ಹಣ್ಣು, ಲಿಗಾನ್ಸ್, ಐಸೋಫ್ಲೇವನ್ಸ್ ಮತ್ತು ಸಪೋನಿನ್ಸ್‌ನಂತಹ ಫೈಟೋನ್ಯೂಟ್ರಿಯಂಟ್ಸ್ ಅನ್ನು ದೇಹಕ್ಕೆ ಪೂರೈಸುತ್ತದೆ ಇದು ಕ್ಯಾನ್ಸರ್ ವಿರುದ್ದ ಮತ್ತು ಬೇಗನೇ ಮುಪ್ಪಿನ ಲಕ್ಷಣಗಳನ್ನು ವರ್ಧಿಸುವುದರ ವಿರುದ್ದ ಹೋರಾಡುತ್ತದೆ. ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುತ್ತದೆ. ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶವು ಮೃದುವಾದ ಕರುಳಿನ ಚಲನೆಗೆ ಸಹಕಾರಿ

ಹಲಸಿನ ಬೆಳೆ

ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ 1.20 ಲಕ್ಷ ಹೆಕ್ಟೇರ್ ಹಾಗೂ ಕರ್ನಾಟಕದಲ್ಲಿ 11,500 ಹೆಕ್ಟೇರ್ ವ್ಯಾಪ್ತಿಯಲ್ಲಿ ಹಲಸು ಬೆಳೆಯಿದೆ. ಭಾರತದಲ್ಲಿ ಹಲಸು ಬೆಳೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು ದ್ವಿತೀಯ ಹಾಗೂ ಕರ್ನಾಟಕ ತೃತೀಯ ಸ್ಥಾನದಲ್ಲಿದೆ.

ಚಂದ್ರ ಹಲಸು

ಕೆಂಪು ತೊಳೆಯ ಹಲಸು - ಸುವಾಸನೆಯುಳ್ಳದ್ದು-ಹೆಚ್ಚು ರುಚಿಕರ. ಕೇರಳದ ಒಂದು ನರ್ಸರಿ ‘ಥಾಯ್ಲೆಂಡ್ ರೆಡ್’ ಎಂಬ ಹೆಸರಿನಲ್ಲಿ ಕೆಂಪು ಸೊಳೆ (ತೊಳೆ) ಹಲಸಿನ ಗಿಡವನ್ನು ಬಹುಪ್ರಚಾರದೊಂದಿಗೆ ಮಾರುತ್ತಿದೆ. ಇನ್ನೊಂದು ನರ್ಸರಿ ಮಲೇಷಿಯಾದ ಚಂದ್ರ ಹಲಸು ‘ಡೆಂಗ್ ಸುರೈಯಾ’ವನ್ನು ಮಾರುಕಟ್ಟೆಗಿಳಿಸಲು ಸಿದ್ಧವಾಗಿದೆ. ಬಣ್ಣದಲ್ಲೂ ರುಚಿಯಲ್ಲೂ ಬಹುಶಃ ಇವನ್ನು ಸರಿಗಟ್ಟುವ ಅಥವಾ ಇನ್ನೂ ಉತ್ತಮವಾದ ಅದೆಷ್ಟೋ ಹೆಸರೂ ಇಲ್ಲದ ಕೆಂಬಣ್ಣದ ತಳಿಗಳು ಕರ್ನಾಟಕದಲ್ಲಿವೆ. ಆದರಿವಕ್ಕೆ ಸರಿಯಾದ ಪ್ರಚಾರವಿಲ್ಲ.

ಛಾಯಾಂಕಣ

ಆಧಾರ

  1. ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ

ಉಲ್ಲೇಖಗಳು

Tags:

ಹಲಸು ಸಸ್ಯಶಾಸ್ತ್ರೀಯ ವರ್ಗೀಕರಣಹಲಸು ವಿವರಹಲಸು ವೈಶಿಷ್ಟ್ಯಗಳುಹಲಸು ಉಪಯೋಗಗಳುಹಲಸು ಹಲಸಿನ ಬೆಳೆಹಲಸು ಚಂದ್ರ ಹಲಸು ಆಧಾರಹಲಸು ಉಲ್ಲೇಖಗಳುಹಲಸುಕಾಡುನಿತ್ಯಹರಿದ್ವರ್ಣಪಶ್ಚಿಮ ಘಟ್ಟಗಳುಮರಮಲೆನಾಡು

🔥 Trending searches on Wiki ಕನ್ನಡ:

ರಾಜ್ಯಸಭೆಬೃಂದಾವನ (ಕನ್ನಡ ಧಾರಾವಾಹಿ)ಒಡೆಯರ್ದಕ್ಷಿಣ ಕನ್ನಡತ್ರಿಪದಿರೇಣುಕರಜಪೂತಸುದೀಪ್ರಗಳೆಶಾಂತಲಾ ದೇವಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದಾಸ ಸಾಹಿತ್ಯವಿವಾಹಮಳೆರವಿಚಂದ್ರನ್ಕರ್ನಾಟಕ ಸಂಘಗಳುಭೂಮಿದಿಯಾ (ಚಲನಚಿತ್ರ)ವೃದ್ಧಿ ಸಂಧಿಮಹಾಭಾರತಮಾಟ - ಮಂತ್ರಕರ್ಮಧಾರಯ ಸಮಾಸಗುರುವಿಚ್ಛೇದನಕರ್ನಾಟಕ ಸಂಗೀತಸಣ್ಣ ಕೊಕ್ಕರೆಕಬ್ಬಿಣನಯನತಾರಹಿಂದೂ ಮಾಸಗಳುಅಂತರಜಾಲಸಿಂಧನೂರುಉತ್ತರ ಕರ್ನಾಟಕಶಿವಮಾನವ ಹಕ್ಕುಗಳುಆಗುಂಬೆದಯಾನಂದ ಸರಸ್ವತಿರೋಮನ್ ಸಾಮ್ರಾಜ್ಯಭಾರತದಲ್ಲಿನ ಚುನಾವಣೆಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಅಲಂಕಾರಮೂಲಧಾತುಕೃಷ್ಣದೇವರಾಯಸಂತಾನೋತ್ಪತ್ತಿಯ ವ್ಯವಸ್ಥೆಗುರು (ಗ್ರಹ)ಭೂಕಂಪಅನುಶ್ರೀಮಾನವನಲ್ಲಿ ನಿರ್ನಾಳ ಗ್ರಂಥಿಗಳುಸೆಲರಿಕೆ. ಅಣ್ಣಾಮಲೈಚದುರಂಗದ ನಿಯಮಗಳುಶಾಸನಗಳುಜಾಹೀರಾತುದಿವ್ಯಾಂಕಾ ತ್ರಿಪಾಠಿಬಾಬರ್ಭಾರತೀಯ ಸಂಸ್ಕೃತಿಜಯಚಾಮರಾಜ ಒಡೆಯರ್ಖಂಡಕಾವ್ಯತಾಳೆಮರಹಾಲುರಾಮೇಶ್ವರ ಕ್ಷೇತ್ರಸಾರ್ವಜನಿಕ ಹಣಕಾಸುಕರ್ನಾಟಕ ವಿಧಾನ ಸಭೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಚಕ್ರವ್ಯೂಹಅಂತಾರಾಷ್ಟ್ರೀಯ ಸಂಬಂಧಗಳುದೇಶಗಳ ವಿಸ್ತೀರ್ಣ ಪಟ್ಟಿಕರ್ಕಾಟಕ ರಾಶಿಭಾರತದಲ್ಲಿ ಮೀಸಲಾತಿಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ವಿಜಯದಾಸರುಕುವೆಂಪುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಜಾಗತಿಕ ತಾಪಮಾನ ಏರಿಕೆಪ್ರಜ್ವಲ್ ರೇವಣ್ಣಯು.ಆರ್.ಅನಂತಮೂರ್ತಿಎಚ್ ೧.ಎನ್ ೧. ಜ್ವರಸಂಯುಕ್ತ ರಾಷ್ಟ್ರ ಸಂಸ್ಥೆ🡆 More