ಸ್ವರ್ಣಯುಗ

ಸ್ವರ್ಣಯುಗ (ಸುವರ್ಣಯುಗ) ಪದವು ಗ್ರೀಕ್ ಪುರಾಣಗಳಿಂದ ಬರುತ್ತದೆ, ವಿಶೇಷವಾಗಿ ಹೆಸಿಯಡ್‍ನ ಕೃತಿಯಿಂದ.

ಇದು ಐದು ಯುಗಗಳಾದ್ಯಂತ ಜನರ ಸ್ಥಿತಿಯ ಕಾಲಕ್ರಮೇಣವಾದ ಅವನತಿಯ ವಿವರಣೆಯ ಭಾಗವಾಗಿದೆ.

ಸ್ವರ್ಣಯುಗವು ಮೊದಲಿನಿಂದಲೂ ಇದ್ದ ಶಾಂತಿ, ಸಾಮರಸ್ಯ, ಸ್ಥಿರತೆ ಮತ್ತು ಸಮೃದ್ಧಿಯ ಅವಧಿಯನ್ನು ಸೂಚಿಸುತ್ತದೆ. ಈ ಯುಗದಲ್ಲಿ ಶಾಂತಿ ಮತ್ತು ಸಾಮರಸ್ಯಗಳು ಪ್ರಚಲಿತವಾಗಿದ್ದವು, ಜನರು ತಮ್ಮ ಆಹಾರಕ್ಕಾಗಿ ಕೆಲಸ ಮಾಡಬೇಕಾಗಿರಲಿಲ್ಲ, ಏಕೆಂದರೆ ಭೂಮಿಯು ಹೇರಳವಾಗಿ ಆಹಾರವನ್ನು ಒದಗಿಸುತ್ತಿತ್ತು. ಜನರು ಬಹಳ ವಯಸ್ಸಿನವರೆಗೆ ಯುವರೂಪದಿಂದಿಗೆ ಬಾಳುತ್ತಿದ್ದರು. ಅಂತಿಮವಾಗಿ ಶಾಂತಿಯಿಂದ ಸಾಯುತ್ತಿದ್ದರು, ಮತ್ತು ಅವರ ಆತ್ಮಗಳು ಸಂರಕ್ಷಕರಾಗಿ ಇರುತ್ತಿದ್ದವು.

ದಕ್ಷಿಣ ಏಷ್ಯಾ ಉಪಖಂಡದ ಧಾರ್ಮಿಕ ಮತ್ತು ತತ್ತ್ವಶಾಸ್ತ್ರೀಯ ಸಂಪ್ರದಾಯಗಳಲ್ಲಿ ಹೋಲುವ ಪರಿಕಲ್ಪನೆಗಳಿವೆ. ಉದಾಹರಣೆಗೆ, ವೈದಿಕ ಅಥವಾ ಪ್ರಾಚೀನ ಹಿಂದೂ ಸಂಸ್ಕೃತಿಯು ಇತಿಹಾಸವನ್ನು ಆವರ್ತಕವೆಂದು, ಸರತಿಯಾಗಿ ಬರುವ ಅಂಧಕಾರ ಮತ್ತು ಸುವರ್ಣ ಯುಗಗಳಿಂದ ಕೂಡಿದ್ದೆಂದು ಕಂಡಿತು. ಕಲಿ ಯುಗ (ಕಬ್ಬಿಣದ ಯುಗ), ದ್ವಾಪರ ಯುಗ (ಕಂಚಿನ ಯುಗ), ತ್ರೇತಾಯುಗ (ಬೆಳ್ಳಿ ಯುಗ) ಮತ್ತು ಸತ್ಯಯುಗಗಳು (ಸ್ವರ್ಣಯುಗ) ನಾಲ್ಕು ಗ್ರೀಕ್ ಯುಗಗಳಿಗೆ ಅನುರೂಪವಾಗಿವೆ. ಅದೇ ರೀತಿಯ ನಂಬಿಕೆಗಳು ಪ್ರಾಚೀನ ಮಧ್ಯಪ್ರಾಚ್ಯ ಮತ್ತು ಪ್ರಾಚೀನ ವಿಶ್ವದಾದ್ಯಂತ ಕೂಡ ಇವೆ.

ಉಲ್ಲೇಖಗಳು

Tags:

ಗ್ರೀಕ್ ಪುರಾಣ ಕಥೆ

🔥 Trending searches on Wiki ಕನ್ನಡ:

ಫೇಸ್‌ಬುಕ್‌ದಾಳಿಂಬೆಬಾಗಿಲುಗ್ರಹಕುಂಡಲಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭೀಮಸೇನನದಿಗಾದೆಕದಂಬ ರಾಜವಂಶಜವಾಹರ‌ಲಾಲ್ ನೆಹರುಪ್ರಜ್ವಲ್ ರೇವಣ್ಣಪ್ರಜಾವಾಣಿಅಂಬಿಗರ ಚೌಡಯ್ಯಆಗುಂಬೆಕೊರೋನಾವೈರಸ್ಬಿ.ಎಫ್. ಸ್ಕಿನ್ನರ್ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿನವರತ್ನಗಳುಭೂಕಂಪಸಂಗ್ಯಾ ಬಾಳ್ಯನಿರುದ್ಯೋಗಯೋನಿಕರ್ನಾಟಕದ ಪ್ರಸಿದ್ಧ ದೇವಾಲಯಗಳುವಿಶ್ವ ಪರಂಪರೆಯ ತಾಣಭಾರತದಲ್ಲಿ ಕೃಷಿಅಲಾವುದ್ದೀನ್ ಖಿಲ್ಜಿಬೌದ್ಧ ಧರ್ಮಬಂಜಾರನಾಥೂರಾಮ್ ಗೋಡ್ಸೆದ್ರೌಪದಿ ಮುರ್ಮುಹಿಂದೂ ಧರ್ಮಕಬ್ಬುಮಾಸಗೋತ್ರ ಮತ್ತು ಪ್ರವರಇಮ್ಮಡಿ ಪುಲಿಕೇಶಿಬೆಟ್ಟದ ನೆಲ್ಲಿಕಾಯಿಆರ್ಯಭಟ (ಗಣಿತಜ್ಞ)ದಶಾವತಾರಅಕ್ಷಾಂಶ ಮತ್ತು ರೇಖಾಂಶಹೆಚ್.ಡಿ.ದೇವೇಗೌಡಭಾರತೀಯ ಜನತಾ ಪಕ್ಷನಂಜನಗೂಡುಸೂರ್ಯವ್ಯೂಹದ ಗ್ರಹಗಳುಮನರಂಜನೆಹುರುಳಿಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಮಧುಮೇಹಜನ್ನಗುರುಆಹಾರ ಸರಪಳಿಮನುಸ್ಮೃತಿ೧೮೬೨ಶ್ರೀ ಕೃಷ್ಣ ಪಾರಿಜಾತಸಂಗೊಳ್ಳಿ ರಾಯಣ್ಣಸಂವತ್ಸರಗಳುಗರ್ಭಧಾರಣೆನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡವಚನ ಸಾಹಿತ್ಯಸಿಂಧನೂರುಗೋಲ ಗುಮ್ಮಟಮಾನವ ಹಕ್ಕುಗಳುಅರ್ಥಶಾಸ್ತ್ರಮ್ಯಾಕ್ಸ್ ವೆಬರ್ಕಮ್ಯೂನಿಸಮ್ತೆಲುಗುಸಂಯುಕ್ತ ಕರ್ನಾಟಕಭಾಷಾಂತರಆದಿ ಶಂಕರರು ಮತ್ತು ಅದ್ವೈತಆದಿವಾಸಿಗಳುವಿಜಯಪುರಸಾರ್ವಜನಿಕ ಆಡಳಿತಅಂತರರಾಷ್ಟ್ರೀಯ ನ್ಯಾಯಾಲಯಕಲಬುರಗಿಕ್ರೀಡೆಗಳು🡆 More