ಸರಳಾ ದೇವಿ: ಭಾರತೀಯ ಒಡಿಯಾ ಮಾತನಾಡುವ ಬರಹಗಾರ

 

ಸರಳಾ ದೇವಿ
ସରଳା ଦେବୀ
ಸರಳಾ ದೇವಿ: ಆರಂಭಿಕ ಜೀವನ, ಸಾರ್ವಜನಿಕ ಜೀವನ, ಸಾಹಿತ್ಯ ಕೃತಿಗಳು
Born(೧೯೦೪-೦೮-೧೯)೧೯ ಆಗಸ್ಟ್ ೧೯೦೪
ನಾರಿಲೋ ಗ್ರಾಮ, ಒರಿಸ್ಸಾ ವಿಭಾಗ, ಬಂಗಾಳ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ
Died4 October 1986(1986-10-04) (aged 82)
Nationalityಭಾರತೀಯ
Political partyಭಾರತೀಯ ರಾಷ್ಟ್ರೀಯ ಕಾಂಗ್ರೆಸ್
Spouse(s)ಭಾಗೀರಥಿ ಮೊಹಾಪಾತ್ರ
(ವಿವಾಹ 1917)
Children
Parents
  • ಬಸುದೇವ್ ಕನುಂಗೋ (father)
  • ಪದ್ಮಾವತಿ ದೇವಿ (mother)
Relativesಬಾಲಮುಕುಂದ ಕನುಂಗೋ (ದೊಡ್ಡಪ್ಪ)
ನಿರ್ಮಲಾ ದೇವಿ, ಪ್ರಶಸ್ತಿ ವಿಜೇತ ಕವಯಿತ್ರಿ (ಸಹೋದರಿ)
ನಿತ್ಯಾನಂದ ಕನುಂಗೋ (ಸಹೋದರ)
ಬಿಧು ಭೂಷಣ ದಾಸ್ (ಸೋದರಳಿಯ)
ಜಗದೀಶ್ ಚಂದ್ರ ಕನುಂಗೋ, ವರ್ಣಚಿತ್ರಕಾರ (ಸೋದರಳಿಯ)

ಸರಳಾ ದೇವಿ (೧೯ ಆಗಸ್ಟ್ ೧೯೦೪ - ೪ ಅಕ್ಟೋಬರ್ ೧೯೮೬) ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ, ಸ್ತ್ರೀವಾದಿ, ಸಾಮಾಜಿಕ ಕಾರ್ಯಕರ್ತೆ, ರಾಜಕಾರಣಿ ಮತ್ತು ಲೇಖಕಿ. ಇವರು, ೧೯೨೧ ರಲ್ಲಿ ಅಸಹಕಾರ ಚಳವಳಿಗೆ ಸೇರಿದ ಮೊದಲ ಒಡಿಯಾ ಮಹಿಳೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಒಡಿಯಾ ಮಹಿಳಾ ಪ್ರತಿನಿಧಿ. ಅವರು ೧ ಏಪ್ರಿಲ್ ೧೯೩೬ ರಂದು ಒಡಿಶಾ ವಿಧಾನಸಭೆಗೆ ಚುನಾಯಿತರಾದ ಮೊದಲ ಮಹಿಳೆಯಾಗಿದ್ದಾರೆ. ಅವರು ಒಡಿಶಾ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್, ಕಟಕ್ ಸಹಕಾರಿ ಬ್ಯಾಂಕ್‌ನ ಮೊದಲ ಮಹಿಳಾ ನಿರ್ದೇಶಕರು ಮತ್ತು ಉತ್ಕಲ್ ವಿಶ್ವವಿದ್ಯಾಲಯದ ಮೊದಲ ಮಹಿಳಾ ಸೆನೆಟ್ ಸದಸ್ಯರಾಗಿದ್ದರು. ಇವರು ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಅವರ ಶಿಕ್ಷಣ ಆಯೋಗದ ಒಡಿಶಾದ ಏಕೈಕ ಪ್ರತಿನಿಧಿಯಾಗಿದ್ದರು.

ಆರಂಭಿಕ ಜೀವನ

ಸರಳಾ ದೇವಿ: ಆರಂಭಿಕ ಜೀವನ, ಸಾರ್ವಜನಿಕ ಜೀವನ, ಸಾಹಿತ್ಯ ಕೃತಿಗಳು 
೧೯೩೮

ಸರಳಾ ದೇವಿಯವರು ೧೯ ಆಗಸ್ಟ್ ೧೯೦೪ ರಂದು ಬಾಲಿಕುಡ ಬಳಿಯ ನಾರಿಲೋ ಗ್ರಾಮದಲ್ಲಿ ಬಂಗಾಳ ಪ್ರೆಸಿಡೆನ್ಸಿಯ (ಈಗ ಜಗತ್‌ಸಿಂಗ್‌ಪುರ ಜಿಲ್ಲೆ, ಒಡಿಶಾ) ಒರಿಸ್ಸಾ ವಿಭಾಗದಲ್ಲಿ ಶ್ರೀಮಂತ ಜಮೀನ್ದಾರ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ದಿವಾನ್ ಬಸುದೇವ್ ಕನುಂಗೋ, ಮತ್ತು ತಾಯಿ ಪದ್ಮಾವತಿ ದೇವಿ. ಸರಳಾರನ್ನು, ತಂದೆಯ ಹಿರಿಯ ಸಹೋದರ, ಡೆಪ್ಯೂಟಿ ಕಲೆಕ್ಟರ್ ಆಗಿದ್ದ ಬಾಲಮುಕುಂದ ಕನುಂಗೋ ಅವರು ದತ್ತು ಪಡೆದು ಬೆಳೆಸಿದರು. ಸರಳಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಕಿಯಲ್ಲಿ ಪಡೆದರು. ಅಲ್ಲಿ ಅವರ ದೊಡ್ಡಪ್ಪ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕವಾಗಿದ್ದರು. ಆ ಸಮಯದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶವಿರಲಿಲ್ಲ, ಆದ್ದರಿಂದ ಆಕೆಯ ದೊಡ್ಡಪ್ಪ ಮನೆ ಬೋಧಕರನ್ನು ನೇಮಿಸಿದ್ದರು. ಸರಳಾ ತನ್ನ ಬೋಧಕರಿಂದ ಬಂಗಾಳಿ, ಸಂಸ್ಕೃತ, ಒಡಿಯಾ ಮತ್ತು ಮೂಲ ಇಂಗ್ಲಿಷ್ ಭಷೆಯನ್ನು ಕಲಿತರು. ಅವರು ತನ್ನ ದೊಡ್ಡಪ್ಪನೊಂದಿಗೆ ೧೩ ನೇ ವಯಸ್ಸಿನವರೆಗೆ ವಾಸಿಸಿದ್ದರು.

ಸಾರ್ವಜನಿಕ ಜೀವನ

ಬಂಕಿಯಲ್ಲಿದ್ದಾಗ, ಸರಳಾ ಅವರು ಬಂಕಿಯ ರಾಣಿಯಾದ ಸುಕಾದೇವಿಯ ಕಥೆಗಳಿಂದ ಪ್ರೇರೇಪಿಸಲ್ಪಟ್ಟರು. ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ದೊಡ್ಡ ಸಂಗ್ರಹಣೆಯ ಆಭರಣಗಳು ಮತ್ತು ಜಮೀನಿನ ಗಮನಾರ್ಹ ಭಾಗವನ್ನು ದಾನ ಮಾಡಿದರು. ಅವರು ೧೯೧೭ ರಲ್ಲಿ ಪ್ರಸಿದ್ಧ ವಕೀಲರಾದ ಭಾಗೀರಥಿ ಮೊಹಾಪಾತ್ರ ಅವರನ್ನು ವಿವಾಹವಾದರು. ಮಹಾತ್ಮ ಗಾಂಧಿಯವರ ಮೊದಲ ಒರಿಸ್ಸಾ ಭೇಟಿಯ ನಂತರ ೧೯೨೧ ರಲ್ಲಿ ಸರಳಾ ಅವರು ಸ್ವತಃ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಅವರು ಒಡಿಶಾ ವಿಧಾನಸಭೆಯ ಮೊದಲ ಮಹಿಳಾ ಸದಸ್ಯೆ ಮತ್ತು ಅದರ ಮೊದಲ ಮಹಿಳಾ ಸ್ಪೀಕರ್. ಅವರು ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ದುರ್ಗಾಬಾಯಿ ದೇಶಮುಖ್, ಆಚಾರ್ಯ ಕೃಪಲಾನಿ, ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಸರೋಜಿನಿ ನಾಯ್ಡು ಅವರ ಜೊತೆ ಸಂಪರ್ಕ ಹೊಂದಿದ್ದರು. ಅವರು ೧೯೪೩ ರಿಂದ ೧೯೪೬ ರವರೆಗೆ ಕಟಕ್‌ನಲ್ಲಿ ಸಾಹಿತ್ಯ ಸಮಾಜದ ಕಾರ್ಯದರ್ಶಿಯಾಗಿದ್ದರು.

ಸಾಹಿತ್ಯ ಕೃತಿಗಳು

ಸರಳಾ ಅವರು ೩೦ ಪುಸ್ತಕಗಳು ಮತ್ತು ೩೦೦ ಪ್ರಬಂಧಗಳನ್ನು ಬರೆದಿದ್ದಾರೆ.

  • ಬಿಶ್ವಾ ಬಿಪ್ಲಬಾನಿ, ೧೯೩೦
  • ಉತ್ಕಲಾ ನಾರಿ ಸಮಸ್ಯ, ೧೯೩೪
  • ನಾರಿರಾ ದಾಬಿ, ೧೯೩೪
  • ಭಾರತೀಯ ಮಹಿಳಾ ಪ್ರಸಂಗ, ೧೯೩೫
  • ರವೀಂದ್ರ ಪೂಜೆ, ೧೯೩೫
  • ಬೀರ ರಮಣಿ, ೧೯೪೯

ಉಲ್ಲೇಖಗಳು

ಹೆಚ್ಚಿನ ಓದುವಿಕೆ

Tags:

ಸರಳಾ ದೇವಿ ಆರಂಭಿಕ ಜೀವನಸರಳಾ ದೇವಿ ಸಾರ್ವಜನಿಕ ಜೀವನಸರಳಾ ದೇವಿ ಸಾಹಿತ್ಯ ಕೃತಿಗಳುಸರಳಾ ದೇವಿ ಉಲ್ಲೇಖಗಳುಸರಳಾ ದೇವಿ ಹೆಚ್ಚಿನ ಓದುವಿಕೆಸರಳಾ ದೇವಿ

🔥 Trending searches on Wiki ಕನ್ನಡ:

ವಸ್ತುಸಂಗ್ರಹಾಲಯಹರಿಹರ (ಕವಿ)ಅಡೋಲ್ಫ್ ಹಿಟ್ಲರ್ಗಾಳಿ/ವಾಯುಅವತಾರಶಿವರಾಜ್‍ಕುಮಾರ್ (ನಟ)ಮಾನವನಲ್ಲಿ ನಿರ್ನಾಳ ಗ್ರಂಥಿಗಳುಕ್ರೀಡೆಗಳುಲಕ್ಷ್ಮೀಶಹೊನ್ನಾವರತೀ. ನಂ. ಶ್ರೀಕಂಠಯ್ಯರಾಷ್ಟ್ರೀಯ ಶಿಕ್ಷಣ ನೀತಿಅರ್ಥಶಾಸ್ತ್ರವಿಜಯ ಕರ್ನಾಟಕನದಿಕರ್ನಾಟಕದಲ್ಲಿ ಪಂಚಾಯತ್ ರಾಜ್ವಿಕಿಪೀಡಿಯಋಗ್ವೇದವಾಯು ಮಾಲಿನ್ಯಅಂತಿಮ ಸಂಸ್ಕಾರಉಪನಯನಸ್ಯಾಮ್ ಪಿತ್ರೋಡಾದರ್ಶನ್ ತೂಗುದೀಪ್ಸಂಸ್ಕಾರವಿಭಕ್ತಿ ಪ್ರತ್ಯಯಗಳುಚಾಮರಾಜನಗರಫಿರೋಝ್ ಗಾಂಧಿಯೂಟ್ಯೂಬ್‌ನೀರಿನ ಸಂರಕ್ಷಣೆಕಿತ್ತೂರು ಚೆನ್ನಮ್ಮಬುಧಸಾಲುಮರದ ತಿಮ್ಮಕ್ಕಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಸ್ಟಾರ್‌ಬಕ್ಸ್‌‌ಶಾಂತಲಾ ದೇವಿದೇವಸ್ಥಾನವ್ಯವಸಾಯಮಣ್ಣುಶಾಸನಗಳುಸಾವಯವ ಬೇಸಾಯಶ್ರೀಕೃಷ್ಣದೇವರಾಯಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿವಚನ ಸಾಹಿತ್ಯಭೂಕಂಪದಿಕ್ಕುಕರ್ನಾಟಕದ ಸಂಸ್ಕೃತಿಪೂನಾ ಒಪ್ಪಂದಈಸೂರುಬಾದಾಮಿಸಂಗ್ಯಾ ಬಾಳ್ಯಹೊಯ್ಸಳ ವಾಸ್ತುಶಿಲ್ಪಎ.ಎನ್.ಮೂರ್ತಿರಾವ್ತುಮಕೂರುಜ್ಯೋತಿಬಾ ಫುಲೆಇಂಡಿಯನ್ ಪ್ರೀಮಿಯರ್ ಲೀಗ್ಪ್ರಾಥಮಿಕ ಶಿಕ್ಷಣಬಿಳಿಗಿರಿರಂಗನ ಬೆಟ್ಟಏಡ್ಸ್ ರೋಗಜೈನ ಧರ್ಮಸಾಮಾಜಿಕ ಸಮಸ್ಯೆಗಳುರಾಜಕುಮಾರ (ಚಲನಚಿತ್ರ)ವಿಜಯ್ ಮಲ್ಯಡಿ.ವಿ.ಗುಂಡಪ್ಪಪ್ರಿನ್ಸ್ (ಚಲನಚಿತ್ರ)ಭಾರತದ ಜನಸಂಖ್ಯೆಯ ಬೆಳವಣಿಗೆಶಿಶುಪಾಲಶ್ರೀ ರಾಮಾಯಣ ದರ್ಶನಂಬಡತನಆನೆಸ್ತ್ರೀಭಾರತೀಯ ಅಂಚೆ ಸೇವೆಆಗಮ ಸಂಧಿಗಂಗ (ರಾಜಮನೆತನ)ಡಿ.ಕೆ ಶಿವಕುಮಾರ್ಭಾರತ ಸಂವಿಧಾನದ ಪೀಠಿಕೆಅಸಹಕಾರ ಚಳುವಳಿ🡆 More