ಸಂಪಿಗೆ

ಸಂಪಿಗೆ ಒಂದು ಹೂವಿನ ಹೆಸರು.

ಸಂಪಿಗೆ
ಸಂಪಿಗೆ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Magnoliids
ಗಣ:
Magnoliales
ಕುಟುಂಬ:
Magnoliaceae
ಕುಲ:
Magnolia
ಪ್ರಜಾತಿ:
M. champaca
Binomial name
Magnolia champaca
(L.) Baill. ex Pierre
ಸಂಪಿಗೆ
ಸಂಪಿಗೆ ಗಿಡ
ಸಂಪಿಗೆ
ಸಂಪಿಗೆ ಹೂವು

ಮ್ಯಾಗ್ನೊಲಿಯೇಸೀ ಕುಟುಂಬಕ್ಕೆ ಸೇರಿದೆ. ತೆಳುಹಳದಿ ಬಣ್ಣದ ಈ ಹೂವು ಸಾಮಾನ್ಯವಾಗಿ ಉದ್ಯಾನಗಳಲ್ಲಿ, ಸಸ್ಯೋದ್ಯಾನಗಳಲ್ಲಿ, ದೇವಸ್ಥಾನದ ಅಂಗಳದಲ್ಲಿ, ಹಾಗೂ ಕೆಲವರ ಮನೆಗಳ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕಾಣಸಿಗುತ್ತದೆ.

ಸಂಸ್ಕೃತದಲ್ಲಿ ಚಂಪಕ ಸುವರ್ಣ, ತೆಲುಗಿನಲ್ಲಿ ಚಂಪಕಮು, ಇಂಗ್ಲಿಷ್‌ನಲ್ಲಿ ಗೋಲ್ಡನ್ ಚಂಪಕ್ ಎಂದು ಕರೆಸಿಕೊಳ್ಳುವ ಈ ಹೂವಿನ ಸಸ್ಯನಾಮ ಮೈಕೇಲಿಯ ಚಂಪಕ.

೧೭೩೭ ರಲ್ಲಿ ಅಂದಿನ ಪ್ರಸಿದ್ಧ ವಿಜ್ಞಾನಿ ಮೈಕೆಲ್ ಪಿ.ಎ. ಅವರು ಕಂಡುಹಿಡಿದುದರಿಂದ ಈ ಹೆಸರು. ವಿವಿಧ ದೇಶಗಳಲ್ಲಿ ಪ್ರಮುಖವಾಗಿ ಶ್ರೀಲಂಕಾ, ಫಿಲಿಪೈನ್ಸ್, ಜಪಾನ್, ಚೀನಾ, ಇಂಡೋನೇಷ್ಯ, ದಕ್ಷಿಣ ಆಫ್ರೀಕಾದ ದಟ್ಟ ಕಾಡುಗಳಲ್ಲಿ ಸಂಪಿಗೆ ಮರ ಬೇರು ಬಿಟ್ಟಿದೆ.

ವರ್ಷದ ಮೇ ಅಥವಾ ಅಕ್ಟೋಬರ್ ತಿಂಗಳಲ್ಲಿ ಹೂ ಬಿಡುವುದು. ಕೆಂಡಸಂಪಿಗೆ ಬಹು ಸುವಾಸನೆಯುಳ್ಳದ್ದು. ಬಿಳಿ, ಬೂದು,ಕಡುಹಳದಿ,ನೀಲ ಹಳದಿ ಹೀಗೆ ಹಲವಾರು ಬಣ್ಣಗಳಲ್ಲಿ ಬಿಡುತ್ತದೆ.

ವ್ಯಾಪ್ತಿ

ಹಿಮಾಲಯ ತಪ್ಪಲು, ಅಸ್ಸಾಮ್, ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ಇದರ ವ್ಯಾಪ್ತಿ ಇದೆ.

ಸಸ್ಯ ವಿವರಣೆ

ಎತ್ತರವಾದ, ನೇರವಾದ ಸ್ತಂಭಾಕೃತಿಯ ಕಾಂಡದ ದೊಡ್ಡ ಪ್ರಮಾಣದ ನಿತ್ಯಹರಿದ್ವರ್ಣದ ಮರ. ನುಣುಪು ತೊಗಟೆ ಎಳೆಬೂದಿ ಬಣ್ಣವಿರುವುದು. ಸುವಾಸನೆಯ ಹೂಗಳಿಗೋಸ್ಕರ, ಅಲ್ಲಲ್ಲಿ ದೇವಾಲಯದ ಆವರಣ, ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.

ಚೌಬೀನೆಯ ಬಿಳಿಮರ ಕಿರಿದಾಗಿದ್ದು ಮಾಸಲು ಬಣ್ಣದ್ದಾಗಿರುತ್ತದೆ. ಕಚ್ಚಾ ಹಳದಿ ಮಿಶ್ರಕಂದು. ಹದಮಾಡಲು ಸುಲಭ. ತಕ್ಕಮಟ್ಟಿಗೆ ಬಲಯುತ ಹಾಗೂ ಬಾಳಿಕೆಯದಾಗಿರುತ್ತದೆ. ಹಗುರ ಕೊಯ್ತಕ್ಕೆ ಮರಗೆಲಸಗಳಿಗೆ ಸುಲಭ. ಸಿದ್ಧಪಡಿಸಿದಾಗ ಹೊಳಪಿನಿಂದ ಕೂಡಿ ಆಕರ್ಷಕವಾಗಿರುತ್ತದೆ.

ಉಪಯೋಗಗಳು

  1. ಸಂಪಿಗೆ ಮರವನ್ನು ತೇಗದ ಮರದಂತೆ ಉಪಯೋಗಿಸುತ್ತಾರೆ. ವಿಮಾನ, ಹಡಗು ನಿರ್ಮಾಣಕ್ಕೆ, ಮಠಾಧೀಶ್ವರರನ್ನು ಹೊರುವ ಅಡ್ಡಪಲ್ಲಕ್ಕಿ, ಆಟದ ಗೊಂಬೆ, ಬರೆಯುವ ಪೆನ್ಸಿಲ್, ಪೆಟ್ಟಿಗೆ ತಯಾರಿಕೆಗೆ, ದೋಣಿ ತಯಾರಿಕೆಗೆ, ಪ್ಲೈವುಡ್ ಪೀಠೋಪಕರಣಗಳ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. ಮರ ರಕ್ಷಕ ಸಂಸ್ಕರಣೆಯಿಂದ ಇದನ್ನು ಹೆಚ್ಚು ಬಗೆಯಲ್ಲಿ ಉಪಯೋಗಿಸಬಹುದು.
  2. ಆಯುರ್ವೇದದಲ್ಲಿ ಇದರ ಬೀಜದಿಂದ ಆರೋಗ್ಯಕಾರಿ ತೈಲವನ್ನು ಉತ್ಪಾದಿಸುತ್ತಾರೆ. ಇದರ ಬೀಜದಿಂದ ಮೇಣವನ್ನೂ ತಯಾರಿಸಲಾಗುತ್ತದೆ. ಸಂಪಿಗೆ ಹೂವಿನ ತೈಲದಲ್ಲಿ 'ಐಸೊಯುಜಿನಾರ್' ಎಂಬ ಅಂಶವಿರುತ್ತದೆ. ಮರದ ತೊಗಟೆಯಲ್ಲಿ ಮೀತೈಲ್ ಆಲ್ಕೋಹಾಲ್, ಟ್ಯಾನಿನ್ ಅಂಶಗಳಿರುತ್ತದೆ. ವಿವಿಧ ರೋಗಗಳಿಗೆ ಇದರ ತೊಗಟೆ, ಹೂವಿನ ಪಕಳೆ, ಬೇರು, ಎಲೆ, ಬೀಜ, ಹಸಿಕಾಯಿಗಳಿಂದ ಒಸರುವ ಹಾಲಿನಿಂದ, ಅಂಟು, ಒಣಗಿದ ಚಕ್ಕೆ ಕಡ್ಡಿಯಿಂದ ಔಷಧಿಯನ್ನು ತಯಾರಿಸುತ್ತಾರೆ.
  3. ಸಂಧಿವಾತವಿದ್ದರೆ, ಒಂದು ಕಪ್ ಹರಳೆಣ್ಣೆಯಲ್ಲಿ ಸಂಪಿಗೆಯ ಐದಾರು ಹೂಗಳನ್ನು ಹಾಕಿ ಬೆಚ್ಚಗೆ ಮಾಡಿ ನೋವಿರುವ ಜಾಗಕ್ಕೆ ಸವರಿದರೆ ನೋವು ನಿವಾರಣೆಯಾಗುತ್ತದೆ. ತಲೆಕೂದಲು ಉದುರುತ್ತಿದ್ದರೆ , ಹೊಟ್ಟು ಹೆಚ್ಚಾದರೆ , ನಿಂಬೇಹಣ್ಣಿನ ರಸದಲ್ಲಿ ಸಂಪಿಗೆ ಹೂವುಗಳನ್ನು ರಾತ್ರಿ ಪೂರಾ ನೆನೆಹಾಕಿ ಮುಂಜಾನೆ ಹೂಗಳನ್ನು ಹಿಸುಕಿ ತೆಗೆದು ತಲೆಕೂದಲಿನ ಬುಡಕ್ಕೆ ಹಚ್ಚಬೇಕು.
ಸಂಪಿಗೆ 

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಸಂಪಿಗೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಸಂಪಿಗೆ ವ್ಯಾಪ್ತಿಸಂಪಿಗೆ ಸಸ್ಯ ವಿವರಣೆಸಂಪಿಗೆ ಉಪಯೋಗಗಳುಸಂಪಿಗೆ ಉಲ್ಲೇಖಗಳುಸಂಪಿಗೆ ಹೊರಗಿನ ಕೊಂಡಿಗಳುಸಂಪಿಗೆದೇವಸ್ಥಾನಹೂವು

🔥 Trending searches on Wiki ಕನ್ನಡ:

ಕಿಸ್ (ಚಲನಚಿತ್ರ)ರಸ(ಕಾವ್ಯಮೀಮಾಂಸೆ)ಕರ್ನಾಟಕದಲ್ಲಿ ಬ್ಯಾಂಕಿಂಗ್ಪಿತ್ತಕೋಶಜಾಗತಿಕ ತಾಪಮಾನ ಏರಿಕೆಕರ್ನಾಟಕದ ವಾಸ್ತುಶಿಲ್ಪಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಹಸ್ತ ಮೈಥುನನರ್ಮದಾ ನದಿಬುದ್ಧರಾಜ್ಯಸಭೆರಾವಣಒಕ್ಕಲಿಗದ್ವೈತಹಿಮಮಾನವನ ನರವ್ಯೂಹಮಹೇಶ್ವರ (ಚಲನಚಿತ್ರ)ಪ್ರಜಾಪ್ರಭುತ್ವದ ವಿಧಗಳುಚದುರಂಗ (ಆಟ)ಲಂಚ ಲಂಚ ಲಂಚಔರಂಗಜೇಬ್ಮೀರಾಬಾಯಿಪಂಚಾಂಗಇಸ್ಲಾಂಕಾಟೇರಹಬಲ್ ದೂರದರ್ಶಕಕಾವೇರಿ ನದಿಉಪನಯನಸೇನಾ ದಿನ (ಭಾರತ)ಹಿಂದೂ ಮಾಸಗಳುಗ್ರಹವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕ್ರೈಸ್ತ ಧರ್ಮಕಾವೇರಿ ನದಿ ನೀರಿನ ವಿವಾದಆಯ್ದಕ್ಕಿ ಲಕ್ಕಮ್ಮಕಿಂಪುರುಷರುಸ್ವರಕಲ್ಹಣಮೆಂತೆನೇಮಿಚಂದ್ರ (ಲೇಖಕಿ)ಕೈಗಾರಿಕಾ ಕ್ರಾಂತಿಮಡಿವಾಳ ಮಾಚಿದೇವಆರ್ಚ್ ಲಿನಕ್ಸ್ಗೋಲ ಗುಮ್ಮಟಈಸ್ಟರ್ಕರ್ನಾಟಕದ ಅಣೆಕಟ್ಟುಗಳುಟೊಮೇಟೊಇಟಲಿಕೊಡಗುಆ ನಲುಗುರು (ಚಲನಚಿತ್ರ)ರಾಮಾಚಾರಿ (ಕನ್ನಡ ಧಾರಾವಾಹಿ)ತ್ರಿಕೋನಮಿತಿಯ ಇತಿಹಾಸಆಟಿಸಂಗರ್ಭಧಾರಣೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಬ್ಯಾಂಕ್ಬಿ. ಎಂ. ಶ್ರೀಕಂಠಯ್ಯಚಾಲುಕ್ಯವ್ಯಾಪಾರಇಮ್ಮಡಿ ಪುಲಕೇಶಿಛಂದಸ್ಸುಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆವಿರಾಟ್ ಕೊಹ್ಲಿಎಸ್.ಎಲ್. ಭೈರಪ್ಪಲಕ್ಷ್ಮಿಗಣೇಶಸುಭಾಷ್ ಚಂದ್ರ ಬೋಸ್ಕ್ರಿಯಾಪದಬಾದಾಮಿಕನ್ನಡ ಬರಹಗಾರ್ತಿಯರುಭಾರತದ ಸಂವಿಧಾನ ರಚನಾ ಸಭೆಜೋಳಶ್ರೀ ರಾಘವೇಂದ್ರ ಸ್ವಾಮಿಗಳುಅನುಭೋಗಕ್ಯಾನ್ಸರ್ಜಾಯಿಕಾಯಿ🡆 More