ನರ್ಮದಾ ನದಿ: ಭಾರತದ ಐದನೆಯ ಅತಿ ದೊಡ್ಡ ನದಿ

ನರ್ಮದಾ ನದಿ ಮಧ್ಯ ಭಾರತದಲ್ಲಿ ಹರಿಯುವ ಒಂದು ನದಿ.

ಇದು ಮದ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಮೂಲಕ ಹರಿದು ಅರಬ್ಬಿ ಸಮುದ್ರ ಸೇರುವುದು. ಇದು ಭಾರತ ಉಪಖಂಡದ ಐದನೆಯ ಅತಿ ದೊಡ್ಡ ನದಿ ಸಹ ಆಗಿದೆ. ನರ್ಮದಾ ನದಿಯು ಉತ್ತರ ಮತ್ತು ದಕ್ಷಿಣ ಭಾರತಗಳ ನಡುವಿನ ಸಾಂಪ್ರದಾಯಿಕ ಎಲ್ಲೆ ಎಂದು ಪರಿಗಣಿಸಲ್ಪಡುತ್ತದೆ. ಮಧ್ಯ ಪ್ರದೇಶ ರಾಜ್ಯದ ಶಾಹ್‌ದೋಲ್ ಜಿಲ್ಲೆಯ ಅಮರಕಂಟಕ ಬೆಟ್ಟದ ನರ್ಮದಾ ಕುಂಡ ಎಂದು ಹೆಸರಾಗಿರುವ ಒಂದು ಸಣ್ಣ ಕುಂಡದಿಂದ ಉಗಮಿಸುವ ನರ್ಮದಾ ನದಿ ಮುಂದೆ ಸುಮಾರು ೧೩೧೨ ಕಿ. ಮೀ. ಗಳಷ್ಟು ದೂರ ಪಶ್ಚಿಮಾಭಿಮುಖವಾಗಿ ಹರಿದು ಗುಜರಾತ್ ರಾಜ್ಯದ ಭರೂಚ್ ನಗರದ ಬಳಿ ಖಂಬಾತ್ ಕೊಲ್ಲಿ (ಅರಬ್ಬಿ ಸಮುದ್ರ)ಯನ್ನು ಸೇರುತ್ತದೆ. ವಿಂಧ್ಯ ಮತ್ತು ಸಾತ್ಪುರ ಪರ್ವತಶ್ರೇಣಿಗಳ ನಡುವಿನ ಬಿರುಕು ಕಣಿವೆಯಲ್ಲಿ ಹರಿಯುವ ನರ್ಮದಾ ನದಿ ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ವಿಶಾಲ ಪ್ರದೇಶಗಳಿಗೆ ಮುಖ್ಯ ನೀರಿನಾಸರೆಯಾಗಿದೆ. ತನ್ನ ಪಾತ್ರದ ಹಲವು ಕಡೆ ನರ್ಮದಾ ನದಿಯು ಅಂತರ ರಾಜ್ಯ ಗಡಿ ಸಹ ಆಗಿದೆ.

ನರ್ಮದಾ ನದಿ: ಭಾರತದ ಐದನೆಯ ಅತಿ ದೊಡ್ಡ ನದಿ
ಜಬಲ್‌ಪುರದ ಬಳಿ ನರ್ಮದಾ ನದಿ
ನರ್ಮದಾ ನದಿ: ಭಾರತದ ಐದನೆಯ ಅತಿ ದೊಡ್ಡ ನದಿ
ನದಿಯ ಉಗಮಸ್ಥಾನವಾದ ನರ್ಮದಾ ಕುಂಡ ಮತ್ತು ಅಲ್ಲಿನ ಮಂದಿರ
ನರ್ಮದಾ ನದಿ: ಭಾರತದ ಐದನೆಯ ಅತಿ ದೊಡ್ಡ ನದಿ
ಓಂಕಾರೇಶ್ವರದಲ್ಲಿ ನದಿಯ ಒಂದು ನೋಟ

ನರ್ಮದಾ ನದಿಯು ಹಿಂದೂ ಸಂಸ್ಕೃತಿಯಲ್ಲಿ ಅತಿ ಪವಿತ್ರಸ್ಥಾನವನ್ನು ಹೊಂದಿದೆ. ಭಾರತದ ಸಪ್ತ ಪುಣ್ಯನದಿಗಳಲ್ಲಿ ನರ್ಮದಾ ಸಹ ಒಂದು. ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ಸಿಂಧೂ ಮತ್ತು ಕಾವೇರಿ ಉಳಿದ ಪವಿತ್ರ ನದಿಗಳು. ನರ್ಮದಾ ನದಿಯ ಪ್ರದಕ್ಷಿಣೆ ಒಂದು ಅತಿ ಪಾವನಕಾಯಕವೆದು ಪರಿಗಣಿಸಲ್ಪಟ್ಟಿದೆ. ಹಿಂದೂ ಶ್ರದ್ಧಾಳುಗಳು ಹಾಗೂ ಸಾಧು ಸಂತರು ನರ್ಮದೆಯ ಸಾಗರಮುಖದಲ್ಲಿನ ಭರೂಚ್ ನಗರದಿಂದ ಕಾಲ್ನಡಿಗೆಯಲ್ಲಿ ನದಿಯ ದಂಡೆಯಲ್ಲಿ ಚಲಿಸಿ ನರ್ಮದೆಯ ಉಗಮಸ್ಥಾನವಾದ ಅಮರಕಂಟಕವನ್ನು ತಲುಪುವರು. ಅಲ್ಲಿ ನದಿಯನ್ನು ಹಾದು ಮತ್ತೆ ಭರೂಚ್ ವರೆಗೆ ನದಿಯ ಇನ್ನೊಂದು ತೀರದಲ್ಲಿ ನಡೆದು ಬರುವರು. ಸುಮಾರು ೨೬೦೦ ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗುವ ಈ ತೀರ್ಥಯಾತ್ರೆ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ.

ಬಾಹ್ಯ ಸಂಪರ್ಕಕೊಂಡಿಗಳು

Tags:

ಅರಬ್ಬಿ ಸಮುದ್ರಗುಜರಾತ್ದಕ್ಷಿಣ ಭಾರತನದಿಭಾರತಭಾರತ ಉಪಖಂಡಮಧ್ಯ ಪ್ರದೇಶಮಹಾರಾಷ್ಟ್ರವಿಂಧ್ಯ ಪರ್ವತಗಳುಸಾತ್ಪುರ ಪರ್ವತಗಳು

🔥 Trending searches on Wiki ಕನ್ನಡ:

ಭಾರತದ ರಾಷ್ಟ್ರಪತಿಭರತನಾಟ್ಯರಸ(ಕಾವ್ಯಮೀಮಾಂಸೆ)ಲಗೋರಿಮಲ್ಲಿಗೆರೋಸ್‌ಮರಿಬಾರ್ಲಿಬಂಗಾರದ ಮನುಷ್ಯ (ಚಲನಚಿತ್ರ)ಸಂಭೋಗಕೃಷ್ಣರಾಜನಗರವೇದವ್ಯಾಸಕುಮಾರವ್ಯಾಸಕಾರ್ಮಿಕರ ದಿನಾಚರಣೆರಾಜ್‌ಕುಮಾರ್ಗಾಂಧಿ- ಇರ್ವಿನ್ ಒಪ್ಪಂದಸಾಮಾಜಿಕ ಸಮಸ್ಯೆಗಳುರೇಣುಕದೇವರ ದಾಸಿಮಯ್ಯಪರಿಸರ ವ್ಯವಸ್ಥೆಮೈಸೂರು ದಸರಾಅಲ್ಲಮ ಪ್ರಭುಪು. ತಿ. ನರಸಿಂಹಾಚಾರ್ಭಾರತದ ರಾಷ್ಟ್ರಗೀತೆರೋಮನ್ ಸಾಮ್ರಾಜ್ಯಆಗಮ ಸಂಧಿಕನ್ನಡ ಛಂದಸ್ಸುಭಾರತದ ರೂಪಾಯಿಸಂಖ್ಯಾಶಾಸ್ತ್ರಅಕ್ಷಾಂಶ ಮತ್ತು ರೇಖಾಂಶಎ.ಎನ್.ಮೂರ್ತಿರಾವ್ಸೀತಾ ರಾಮಎಲೆಕ್ಟ್ರಾನಿಕ್ ಮತದಾನಊಟಮಜ್ಜಿಗೆಮಿಲಾನ್ಭಗತ್ ಸಿಂಗ್ಹಯಗ್ರೀವಆಧುನಿಕ ಕನ್ನಡ ಕಾವ್ಯದ ಬೆಳವಣಿಗೆದಿಕ್ಕುಮೊದಲನೇ ಅಮೋಘವರ್ಷಲಕ್ಷ್ಮೀಶಬಹಮನಿ ಸುಲ್ತಾನರುಕೇಶಿರಾಜತಾಜ್ ಮಹಲ್ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುವಿದ್ಯಾರಣ್ಯಉಚ್ಛಾರಣೆಹೊನ್ನಾವರಹೊಯ್ಸಳಶಾಂತಲಾ ದೇವಿಶ್ರವಣಬೆಳಗೊಳಚಂಡಮಾರುತಒಗಟುವೀರೇಂದ್ರ ಪಾಟೀಲ್ಭಾಷೆಅನುಶ್ರೀನುಗ್ಗೆಕಾಯಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಜನಪದ ಕಲೆಗಳುಹೊಂಗೆ ಮರಹೈದರಾಬಾದ್‌, ತೆಲಂಗಾಣಮಡಿಕೇರಿಬುಧಅಲಂಕಾರಅಕ್ಕಮಹಾದೇವಿಮಲ್ಲಿಕಾರ್ಜುನ್ ಖರ್ಗೆಸೌರಮಂಡಲರಾಮಾಯಣತಾಳಗುಂದ ಶಾಸನಬಿ.ಜಯಶ್ರೀಯೋಗಭಾರತದಲ್ಲಿ ಮೀಸಲಾತಿಪ್ರಬಂಧ ರಚನೆಬಳ್ಳಾರಿಬಾಬು ಜಗಜೀವನ ರಾಮ್🡆 More