ಸಂತತಿ

ಜೀವಶಾಸ್ತ್ರದಲ್ಲಿ, ಸಂತತಿಗಳು ಜೀವಿಗಳಿಗೆ ಹುಟ್ಟಿದ ಮರಿಗಳು, ಮತ್ತು ಒಂದೇ ಜೀವಿಯಿಂದ ಅಥವಾ, ಲೈಂಗಿಕ ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಎರಡು ಜೀವಿಗಳಿಂದ ಉತ್ಪತ್ತಿಯಾಗುತ್ತವೆ.

ಸಾಮೂಹಿಕ ಸಂತತಿಗಳನ್ನು ಹೆಚ್ಚು ಸಾಮಾನ್ಯ ರೀತಿಯಲ್ಲಿ ಮರಿಗುಂಪು ಅಥವಾ ಮರಿಗಳು ಎಂದು ಕರೆಯಬಹುದು. ಇದು ಮೊಟ್ಟೆಗಳಿಂದ ಹೊರಬಂದ ಕೋಳಿಮರಿಗಳಂತಹ ಏಕಕಾಲದ ಸಂತತಿಗಳ ಸಮೂಹವನ್ನು, ಅಥವಾ ಜೇನುನೊಣ ಮರಿಗಳಂತಹ ಎಲ್ಲ ಸಂತತಿಗಳನ್ನು ಸೂಚಿಸಬಹುದು.

ಸಂತತಿ
ಕಪ್ಪೆ ತತ್ತಿಗಳ ರಾಶಿಯಲ್ಲಿ ಒಂದು ಕಪ್ಪೆ

ಮಾನವ ಸಂತತಿಗಳನ್ನು ಮಕ್ಕಳು ಎಂದು ಸೂಚಿಸಲಾಗುತ್ತದೆ (ವಯಸ್ಸಿಗೆ ಸಂಬಂಧವಿರದಂತೆ, ಹಾಗಾಗಿ ಒಬ್ಬರು ವಯಸ್ಸನ್ನು ಅವಲಂಬಿಸಿ ಹೆತ್ತವರ "ಅಪ್ರಾಪ್ತ ಮಕ್ಕಳು" ಅಥವಾ ವಯಸ್ಕ ಮಕ್ಕಳು ಅಥವಾ ಶಿಶುಗಳು ಅಥವಾ ಹದಿಹರೆಯದವರನ್ನು ಸೂಚಿಸಬಹುದು); ಗಂಡು ಮಕ್ಕಳು ಪುತ್ರರು ಮತ್ತು ಹೆಣ್ಣು ಮಕ್ಕಳು ಪುತ್ರಿಯರು. ಸಂತತಿಗಳ ಉತ್ಪತ್ತಿ ಸಂಭೋಗದ ನಂತರ ಅಥವಾ ಕೃತಕ ಗರ್ಭಧಾರಣೆಯ ನಂತರ ಆಗಬಹುದು.

ಸಂತತಿಯು ನಿಖರ ಮತ್ತು ಸರಿಯಾದ ಅನೇಕ ಭಾಗಗಳು ಮತ್ತು ಲಕ್ಷಣಗಳನ್ನು ಹೊಂದಿರುತ್ತದೆ. ಒಂದು ಹೊಸ ಪ್ರಜಾತಿಯ ಸಂತತಿಯು ತಂದೆ ಮತ್ತು ತಾಯಿಯ (ಇದನ್ನು ಪೋಷಕ ಪೀಳಿಗೆ ಎಂದು ಕರೆಯಲಾಗುತ್ತದೆ) ವಂಶವಾಹಿಗಳನ್ನು ಹೊಂದಿರುತ್ತದೆ. ಈ ಪ್ರತಿಯೊಂದು ಸಂತತಿಯು ನಿರ್ದಿಷ್ಟ ಕ್ರಿಯೆಗಳು ಮತ್ತು ಲಕ್ಷಣಗಳಿಗೆ ಸಂಕೇತೀಕರಣವಿರುವ ಅಸಂಖ್ಯಾತ ವಂಶವಾಹಿಗಳನ್ನು ಹೊಂದಿರುತ್ತದೆ. ಗಂಡುಗಳು ಮತ್ತು ಹೆಣ್ಣುಗಳು ಎರಡೂ ತಮ್ಮ ಸಂತತಿಯ ಆನುವಂಶಿಕ ರಚನೆಗಳಿಗೆ ಸಮಾನವಾಗಿ ಕೊಡುಗೆ ನೀಡುತ್ತವೆ. ಸಂತತಿಗಳಲ್ಲಿ ಜಂಪತಿಗಳು ಕೂಡಿ ರಚನೆಯಾಗುತ್ತವೆ. ಸಂತತಿಯ ರಚನೆಯಲ್ಲಿ ವರ್ಣತಂತು ಒಂದು ಪ್ರಮುಖ ಅಂಶವಾಗಿದೆ. ವರ್ಣತಂತು ಅನೇಕ ವಂಶವಾಹಿಗಳನ್ನು ಹೊಂದಿರುವ ಡಿಎನ್ಎ ಯ ಒಂದು ರಚನೆ.

ಲಿಂಗ ಸಂಪರ್ಕ ಎಂದು ಕರೆಯಲಾದ ಒಂದು ಆನುವಂಶಿಕತೆ ಮುಖ್ಯವಾಗಿದೆ. ಇದು ಲಿಂಗ ವರ್ಣತಂತುವಿನಲ್ಲಿ ಸ್ಥಿತವಾದ ಒಂದು ವಂಶವಾಹಿ ಮತ್ತು ಈ ಆನುವಂಶಿಕತೆಯ ಮಾದರಿಗಳು ಹೆಣ್ಣು ಮತ್ತು ಗಂಡು ಎರಡರಲ್ಲೂ ಭಿನ್ನವಾಗಿರುತ್ತವೆ. ಕ್ರಾಸಿಂಗ್ ಓವರ್ ಎಂಬ ವಿವರಣೆ ಅಥವಾ ಪ್ರಕ್ರಿಯೆಯು ಒಂದು ಸಂತತಿಯು ಎರಡೂ ಪೋಷಕ ಪೀಳಿಗೆಗಳ ವಂಶವಾಹಿಗಳನ್ನು ಹೊಂದಿರುವ ಸಿದ್ಧಾಂತವನ್ನು ಸಾಬೀತುಪಡಿಸುತ್ತದೆ. ಇದರಲ್ಲಿ ಗಂಡು ವರ್ಣತಂತುಗಳಿಂದ ವಂಶವಾಹಿಗಳು ಮತ್ತು ಹೆಣ್ಣು ವರ್ಣತಂತುಗಳಿಂದ ವಂಶವಾಹಿಗಳನ್ನು ತೆಗೆದುಕೊಂಡು, ಅರೆವಿದಳನ ಪ್ರಕ್ರಿಯೆ ನಡೆದು, ವರ್ಣತಂತುಗಳು ಸಮವಾಗಿ ವಿಭಜನೆಯಾಗುತ್ತವೆ.

ಉಲ್ಲೇಖಗಳು

Tags:

ಜೀವಶಾಸ್ತ್ರಸಾವಯವಹಕ್ಕಿ

🔥 Trending searches on Wiki ಕನ್ನಡ:

ಗುಪ್ತ ಸಾಮ್ರಾಜ್ಯಕ್ರಿಯಾಪದಪ್ರಬಂಧ ರಚನೆಚಂದ್ರಕುರಿಅವರ್ಗೀಯ ವ್ಯಂಜನದಾಸ ಸಾಹಿತ್ಯಮಾನವ ಸಂಪನ್ಮೂಲ ನಿರ್ವಹಣೆಮೈಸೂರು ಸಂಸ್ಥಾನಪ್ರಜಾಪ್ರಭುತ್ವಋತುತಾಳೀಕೋಟೆಯ ಯುದ್ಧಸೂಳೆಕೆರೆ (ಶಾಂತಿ ಸಾಗರ)ಧ್ವನಿಶಾಸ್ತ್ರವಾಲಿಬಾಲ್ದ್ರಾವಿಡ ಭಾಷೆಗಳುರಾಮ್ ಮೋಹನ್ ರಾಯ್ಕರ್ನಾಟಕದ ಜಿಲ್ಲೆಗಳುಕನ್ನಡದ ಉಪಭಾಷೆಗಳುಭಾರತದಲ್ಲಿ ಬ್ರಿಟಿಷ್ ಆಳ್ವಿಕೆಪಿ.ಲಂಕೇಶ್ಕರಪತ್ರಕುಟುಂಬಯೋಗವಾಹಭಾರತೀಯ ಜ್ಞಾನಪೀಠಮಕರ ಸಂಕ್ರಾಂತಿಖೊಖೊರಾಣಿ ಅಬ್ಬಕ್ಕಮಂಜಮ್ಮ ಜೋಗತಿಒಲಂಪಿಕ್ ಕ್ರೀಡಾಕೂಟತತ್ಸಮಖಾಸಗೀಕರಣವಿಧಾನ ಸಭೆರವಿ ಡಿ. ಚನ್ನಣ್ಣನವರ್ಡಿ.ಎಸ್.ಕರ್ಕಿದಾಸವಾಳಜಯದೇವಿತಾಯಿ ಲಿಗಾಡೆರಸ್ತೆಲೋಕಸಭೆಚಿಕ್ಕಮಗಳೂರುಮೂರನೇ ಮೈಸೂರು ಯುದ್ಧಶಿಶುನಾಳ ಶರೀಫರುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಇಂಕಾಕೆಂಗಲ್ ಹನುಮಂತಯ್ಯಶಿವಮೊಗ್ಗಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭಾರತದ ಆರ್ಥಿಕ ವ್ಯವಸ್ಥೆವಿಜಯನಗರ ಜಿಲ್ಲೆಬಿ. ಆರ್. ಅಂಬೇಡ್ಕರ್ನಿರಂಜನಸೋನು ಗೌಡದಲಿತಮೈಸೂರು ಅರಮನೆಸಾರ್ವಜನಿಕ ಹಣಕಾಸುಬಾಲ್ಯ ವಿವಾಹಸುಧಾ ಮೂರ್ತಿರಾಜ್ಯಪಾಲಹಿಂದೂ ಧರ್ಮಮೋಕ್ಷಗುಂಡಂ ವಿಶ್ವೇಶ್ವರಯ್ಯಕನ್ನಡ ರಾಜ್ಯೋತ್ಸವಬೆಟ್ಟದಾವರೆಚಿತ್ರದುರ್ಗಮಹಾತ್ಮ ಗಾಂಧಿಮಹಾಭಾರತಕರ್ಣಭಾರತದ ಸ್ವಾತಂತ್ರ್ಯ ದಿನಾಚರಣೆಎಚ್‌.ಐ.ವಿ.ಶ್ರೀಶೈಲಪಶ್ಚಿಮ ಘಟ್ಟಗಳುರುಮಾಲುಜಾತ್ರೆಕನ್ನಡ ಚಂಪು ಸಾಹಿತ್ಯಪ್ರಾಣಾಯಾಮಪಂಪ ಪ್ರಶಸ್ತಿಬಿ.ಎಲ್.ರೈಸ್ರಂಗಭೂಮಿ1935ರ ಭಾರತ ಸರ್ಕಾರ ಕಾಯಿದೆ🡆 More