ಶ್ರೇಯಾ ಘೋಷಾಲ್: ಭಾರತೀಯ ಹಿನ್ನೆಲೆ ಗಾಯಕಿ

ಶ್ರೇಯಾ ಘೋಷಾಲ್ (ಹುಟ್ಟು: ಮಾರ್ಚ್ ೧೨, ೧೯೮೪), ಭಾರತೀಯ ಹಿನ್ನೆಲೆಗಾಯಕಿ.

ಹಿಂದಿ, ಕನ್ನಡ ಸೇರಿದಂತೆ ಬಹುಪಾಲು ಎಲ್ಲಾ ಭಾರತೀಯ ಭಾಷೆಗಳಲ್ಲಿ ಅವರು ಹಾಡುತ್ತಾರೆ. ತಮ್ಮ ಮೊದಲ ಚಿತ್ರದ ಹಾಡಿಗೇ ‛ಅತ್ತ್ಯುತ್ತಮ ಗಾಯಕಿ ರಾಷ್ಟ್ರೀಯ ಪುರಸ್ಕಾರ’ ಪಡೆದ ಶ್ರೇಯ, ಈತನಕ ಒಟ್ಟು ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

ಶ್ರೇಯಾ ಘೋಷಾಲ್
ಶ್ರೇಯಾ ಘೋಷಾಲ್: ಜನನ ಮತ್ತು ವಿದ್ಯಾಭ್ಯಾಸ, ಸ ರಿ ಗ ಮ ಪ ವೇದಿಕೆಯಲ್ಲಿ, ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
ಹಿನ್ನೆಲೆ ಮಾಹಿತಿ
ಮೂಲಸ್ಥಳರಾವಟ್ಭಾಟ, ರಾಜಸ್ಥಾನ
ಸಂಗೀತ ಶೈಲಿಹಿನ್ನೆಲೆ ಗಾಯನ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ವೃತ್ತಿಗಾಯಕಿ
ಸಕ್ರಿಯ ವರ್ಷಗಳು೨೦೦೨ - ಇಂದಿನವರೆಗೆ

ಜನನ ಮತ್ತು ವಿದ್ಯಾಭ್ಯಾಸ

ಮಾರ್ಚ್, ೧೨, ೧೯೮೪ ರಲ್ಲಿ ಬಂಗಾಳದ 'ಬೆಹ್ರಾಮ್ ಪುರ'ದಲ್ಲಿ ಜನಿಸಿದರು. ತಂದೆ, 'ಬಿಸ್ವಜಿತ್ ಘೋಷಾಲ್', ಪರಮಾಣು ವಿಜ್ಞಾನಿ, ಬಿ .ಎ.ಆರ್.ಸಿಯ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಾಯಿ, ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ. ೩ ತಿಂಗಳ ಬಳಿಕ, ರಾಜಾಸ್ಥಾನದ ಕೋಟ ಹತ್ತಿರದ 'ರವರ್ ಭಾಟ' ಎಂಬ ಚಿಕ್ಕ ಗ್ರಾಮ ಕ್ಕೆ ವರ್ಗವಾಗಿ ಹೋದ ಬಿಸ್ವಜಿತ್, ತಮ್ಮ ಮಗಳನ್ನು ೮ನೆಯ ಗ್ರೇಡ್ ಮುಗಿಯುವ ವರೆಗೆ ೧೩ ವರ್ಷಗಳ ಕಾಲ 'ಆಟೋಮಿಕ್ ಎನರ್ಜಿ ಕೆಲಸಗಾರರ ಶಾಲೆ'ಯಲ್ಲಿ ವಿದ್ಯಾರ್ಜನೆ ಮಾಡಲು ನೆರವಾದರು. ಶ್ರೇಯಾರಿಗೆ ೭ ವರ್ಷ ಚಿಕ್ಕವರಾದ 'ಸೌಮ್ಯ ಘೋಷಾಲ್' ಎನ್ನುವ ತಮ್ಮನಿದ್ದಾನೆ. ಶ್ರೇಯಾ ೪ನೆಯ ವಯಸ್ಸಿನಲ್ಲಿದ್ದಾಗಲೇ ಸಂಗೀತಡೆದೆ ಆಸಕ್ತಿ ಹೊಮ್ಮಿತ್ತು. ತಂದೆಗೆ ೧೯೯೭ ರಲ್ಲಿ ಬೊಂಬಾಯಿನ ಶಾಖೆಗೆ ವರ್ಗವಾಯಿತು. ಆಗ ಅಣುಶಕ್ತಿನಗರದಲ್ಲಿದ್ದ 'ಆಟೋಮಿಕ್ ಎನರ್ಜಿ ಕಾಲೇಜ್'ನಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡು ತಮ್ಮ ಪದವಿಯನ್ನು ಪಡೆಯಲು ಮುಂದಿನ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಆಗಲೇ ಬಾಲಿವುಡ್ ಕ್ಷೇತ್ರದಲ್ಲಿ ಹಾಡುಗಾರಿಕೆಯನ್ನು ಆರಂಭಿಸಿದ ಶ್ರೇಯಾ, ವಿಜ್ಞಾನದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಅಸಮರ್ಥರಾದರು. ಆಗ ಅವರ ತಂದೆ, ಬೊಂಬಾಯಿನ ಉಪನಗರದ ಸಯಾನ್ ನಲ್ಲಿದ್ದ ಎಸ್. ಐ. ಇ. ಎಸ್. ಕಾಲೇಜಿನಲ್ಲಿ ಕಲಾ ವಿಷಯವನ್ನು ಅಭ್ಯಸಿಸಲು ಪ್ರೋತ್ಸಾಹಿಸಿದರು.

ಹಿಂದೂಸ್ಥಾನಿ ಸಂಗೀತವನ್ನು ಕೋಟಾದ 'ಮಹೇಶ್ಚಂದ್ರ ಶರ್ಮಾ'ರ ಬಳಿ ಅಭ್ಯಾಸ ಮಾಡಿದರು. ಶ್ರೇಯಾ ತನ್ನ ಹಾಡುಗಾರಿಕೆಯನ್ನು ಆರಂಭಿಸಿ ಹಾಡಿದ ಪ್ರಥಮ ಗೀತೆ ಹಿಂದಿ ಚಲನಚಿತ್ರದ 'ದೇವದಾಸ್ ಚಿತ್ರ'ದಲ್ಲಿ. ಹಾಡುಗಾರಿಕೆಗೆ 'ರಾಷ್ಟ್ರಪ್ರಶಸ್ತಿ', ಹಾಗೂ 'ಫಿಲಂ ಫೇರ್ ಪ್ರಶಸ್ತಿ' ದೊರೆಯಿತು.

ಸ ರಿ ಗ ಮ ಪ ವೇದಿಕೆಯಲ್ಲಿ

ಬಾಲಪ್ರತಿಭೆಯಾಗಿ ಸ ರೆ ಗ ಮ ಪ ದ ತೀರ್ಪುಗಾರಾಲ್ಲಿ ಒಬ್ಬರಾಗಿದ 'ಕಲ್ಯಾಣ್ಜಿ ಆನಂದ್ಜಿ'. ಬಾಲಕಿ ಶ್ರೇಯಾ ಘೋಷಾಲರ ತಂದೆತಾಯಿಯರಿಗೆ ಮನಒಲಿಸಿ ಅವಳನ್ನು ಮುಂಬೈನಗರಕ್ಕೆ ಬರಲು ಆಹ್ವಾನಿಸಿ, ಅಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ಅನುವುಮಾಡಿಕೊಡುವುದಾಗಿ ಭರವಸೆಇತ್ತರು. ಅವರೇ ೧೮ ತಿಂಗಳು ತರೆಬೇತಿ ನೀಡಿದರು. 'ಮುಕ್ತಾ ಭಿಡೆ'ಯವರ ಶಾಸ್ತ್ರೀಯ ಸಂಗೀತ ಅಭ್ಯಾಸ. ಓದಿನಲ್ಲೂ ಹಿಂದೆ ಬೀಳದೆ, 'ಆಟೋಮಿಕ್ ಎನರ್ಜಿ ಸಿಬ್ಬಂದಿ ವ'ರ್ಗದ ಮಕ್ಕಳಿಗಾಗಿ ನಿರ್ಮಿಸಿದ ಶಾಲೆಗಳಲ್ಲಿ ಓದಿಪದವಿ ಗಳಿಸಿದರು. ಬಾಲಕಿ ಸರೆಗಮಪ ಪ್ರಶಸ್ತಿ ಗೆದ್ದಿದ್ದ ಶ್ರೇಯಾ ಎರಡನೆಯ ಬಾರಿಗೆ ಪ್ರೌಢ ಗಾಯಕಿಯಾಗಿ ಸರೆಗಮಪ ವೇದಿಕೆಗೆ ಸ್ಪರ್ದಾರ್ಥಿಯಾಗಿ ಬಂದಾಗ ಪ್ರಸಿದ್ಧ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲ್ ಪ್ರತಿಭೆಗೆ ಮಾರುಹೋದರು. ಅವರ ಚಿತ್ರದಲ್ಲಿ ಹಾಡಲು ಅವಕಾಶ ಕೊಟ್ಟರು. ಐಶ್ವರ್ಯ ರಾಯ್ ರಿಗೆ ೫ ಹಾಡುಗಳಿಗೆ ಧ್ವನಿ ನೀಡಿದ್ದರು. ಎ. ಆರ್. ರೆಹಮಾನ್, ಇಳಯರಾಜ, ಮತ್ತಿತರ ಚಿತ್ರ ನಿರ್ದೇಶಕರನ್ನು ಆಕರ್ಶಿಸಿದರು. ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿರುವ ಘೋಷಾಲ್,ಕನ್ನಡದಲ್ಲಿ ಹಾಡಿದ ಹಾಡುಗಳು ಹೀಗಿವೆ.

  • ಏನೋ ಒಂಥರ ಏನೋ ಒಂಥರ ಈ ಪ್ರೀತಿಯು ಈ ರೀತಿಯು ಶುರುವಾದ ಅನಂತರ,
  • ಓಗುಣವಂತ ! ನೀನೆಂದು ನನ ಸ್ವಂತ,
  • ಆಹಾ ಎಂಥ ಆ ಕ್ಷಣ
  • ಉಲ್ಲಾಸ ಹೂ ಮಳೆ,
  • ನಿನ್ನ ನೋಡಲೆಂತೋ ಮಾತನಾಡಲೆಂತೊ
  • ತನ್ಮಳಾದೆನು ತಿಳಿಯುವ ಮುನ್ನವೆ
  • ಹೇ ಹೂವೆ ನೀ ಅರಳೋ ಮುಂಜಾನೆ
  • ಸವಿಯೋ ಸವಿಯೋ ಒಲವಿನ ನೆನಪು,
  • ದೂರದಿಂದ ನೋಡ್ತಾರೋ
  • ಸೂರಿ ಸೂರಿ
  • ಶುರು ಶುರು

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಶ್ರೇಯಾ ಘೋಷಾಲ್: ಜನನ ಮತ್ತು ವಿದ್ಯಾಭ್ಯಾಸ, ಸ ರಿ ಗ ಮ ಪ ವೇದಿಕೆಯಲ್ಲಿ, ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು 
ಶ್ರೇಯಾ ಘೋಷಾಲ್

ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯನಕ್ಕಾಗಿ ಘೋಶಾಲ್ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ: ದೇವದಾಸ್ (೨೦೦೨) ಗಾಗಿ "ಬೈರಿ ಪಿಯಾ", ಪಹೇಲಿ (೨೦೦೫) ಗಾಗಿ "ಧೀರ ಜಲ್ನಾ", ಜಬ್ ವಿ ಗಾಗಿ "ಯೆ ಇಶ್ಕ್ ಹಾಯೆ" ಮೆಟ್ (೨೦೦೭), ಮತ್ತು ಬಂಗಾಳಿ ಚಲನಚಿತ್ರ ಆಂಟಾಹೀನ್ (2008) ಗಾಗಿ "ಫೆರಾರಿ ಸೋಮ" ಮತ್ತು ಮರಾಠಿ ಚಿತ್ರ ಜೊಗ್ವಾ (೨೦೦೮) ಗಾಗಿ "ಜೀವ್ ರಂಗ್ಲಾ" ಗೀತೆಗಳಿಗೆ ಒಂದು ಪ್ರಶಸ್ತಿ. ಅವರು ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ: ಹೊಸ ಸಂಗೀತ ಪ್ರತಿಭೆಗೆ ಒಂದು ಆರ್‌ಡಿ ಬರ್ಮನ್ ಪ್ರಶಸ್ತಿ, ಮತ್ತು ದೇವದಾಸ್ (೨೦೦೩) ಗಾಗಿ "ಡೋಲಾ ರೆ ಡೋಲಾ" ಗಾಗಿ ಅತ್ಯುತ್ತಮ ಮಹಿಳಾ ಪ್ಲೇಬ್ಯಾಕ್ ಸಿಂಗರ್ ವಿಭಾಗದಲ್ಲಿ ಆರು ಪ್ರಶಸ್ತಿಗಳು, "ಜಾದು ಹೈ ನಾಶಾ ಹೈ" ಜಿಸ್ಮ್ (೨೦೦೪), ಗುರು (2008) ಗಾಗಿ "ಬಾರ್ಸೊ ರೆ", ಸಿಂಗ್ ಈಸ್ ಕಿಂಗ್ (೨೦೦೯) ಗಾಗಿ "ಟೆರಿ ಓರೆ", ಬಾಜಿರಾವ್ ಮಸ್ತಾನಿ (೨೦೧೬) ಮತ್ತು "ಘೂಮರ್" ಗಾಗಿ "ದಿವಾನಿ ಮಸ್ತಾನಿ" ಪದ್ಮಾವತ್ (೨೦೧೯) ಗಾಗಿ. ಇಲ್ಲಿಯವರೆಗೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕನಾಗಿ ಘೋಶಾಲ್ ಹತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಅಮೆರಿಕದ ಒಹೈ ನಗರದಲ್ಲಿ

ಅಮೆರಿಕದ 'ಒಹೈ ರಾಜ್ಯ'ದ ಅದೇ ಹೆಸರಿನ ನಗರದಲ್ಲಿ ಗೌರವಾರ್ಥವಾಗಿ ಆಯೋಜಿಸಿದ್ದ ಆ ಪ್ರಾಂತ್ಯದ ರಾಜ್ಯಪಾಲ, 'ಟೆಡ್ ಸ್ಟ್ರಿಕ್ ಲ್ಯಾಂಡ್ 'ಜೂನ್ ೨೬ ರ ದಿನವನ್ನು 'ಶ್ರೇಯಾಘೋಷಾಲ್ ದಿನ'ವೆಂದು ಘೋಷಿಸಿದರು. ೨೯ ರ ಹರೆಯದಲ್ಲಿ ಇಷ್ಟು ದೊಡ್ಡ ಸಾಧನೆ. ಘೋಷಾಲ್ ಹಾಡಿದ ಸುಶ್ರಾವ್ಯ ಹಾಡುಗಳು ರಾಷ್ಟ್ರದ ಮತ್ತು ವಿದೇಶದ ಸರ್ವಭಾಷೀಯರೂ ತಮ್ಮ ಏಕಾಂತದ ಕ್ಷಣಗಳಲ್ಲಿ ಗುನುಗಲು ಅನುವುಮಾಡಿಕೊಟ್ಟ ಅಪರೂಪದ ಹಾಡುಗಾತಿಯಾಗಿ ಮೆರೆದ ಶ್ರೇಯಸ್ಸು, ಶ್ರೇಯಾರವರದು.ಸಿನಿಮಾಗಳಲ್ಲಿ ಧ್ವನಿಮುದ್ರಿಕೆಗಳಲ್ಲಿ ಹಾಡುವುದರ ಜೊತೆಗೆ ,ವಿವಿಧ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಸಾಕಷ್ಟು ಗಾಂಭೀರ್ಯದಿಂದ ಕಾಣಿಸಿಕೊಳ್ಳುವಸೌಜನ್ಯವತಿ ಎಂದು ಗುರುತಿಸಲ್ಪಟ್ಟಿದ್ದಾರೆ.

ವ್ಯಯಕ್ತಿಕ ಜೀವನ

೫ ಫೆಬ್ರವರಿ ೨೦೧೫ ರಂದು, ಘೋಶಾಲ್ ತನ್ನ ಬಾಲ್ಯದ ಗೆಳೆಯ ಶಿಲಾದಿತ್ಯ ಮುಖೋಪಾಧ್ಯಾಯನನ್ನು ಸಾಂಪ್ರದಾಯಿಕ ಬಂಗಾಳಿ ಸಮಾರಂಭದಲ್ಲಿ ವಿವಾಹವಾದರು. ಮದುವೆಯಾಗುವ ಮೊದಲು, ಘೋಶಾಲ್ ಅವರೊಂದಿಗೆ ಸುಮಾರು ೧೦ ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಘೋಶಾಲ್ ಪ್ರಕಾರ, ಗಾಯಕನಲ್ಲದೆ, ಅವಳು ಪ್ರಯಾಣಿಸಲು ಮತ್ತು ಪುಸ್ತಕಗಳನ್ನು ಓದಲು ಇಷ್ಟಪಡುತ್ತಾಳೆ ಆದರೆ ಅದು ಅಡುಗೆ ಮಾಡುವುದು ಅವಳ ಮೇಲೆ ಗುಣಪಡಿಸುವ ಪರಿಣಾಮವನ್ನು ಬೀರುತ್ತದೆ.

ಉಲ್ಲೇಖಗಳು

Tags:

ಶ್ರೇಯಾ ಘೋಷಾಲ್ ಜನನ ಮತ್ತು ವಿದ್ಯಾಭ್ಯಾಸಶ್ರೇಯಾ ಘೋಷಾಲ್ ಸ ರಿ ಗ ಮ ಪ ವೇದಿಕೆಯಲ್ಲಿಶ್ರೇಯಾ ಘೋಷಾಲ್ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಶ್ರೇಯಾ ಘೋಷಾಲ್ ಅಮೆರಿಕದ ಒಹೈ ನಗರದಲ್ಲಿಶ್ರೇಯಾ ಘೋಷಾಲ್ ವ್ಯಯಕ್ತಿಕ ಜೀವನಶ್ರೇಯಾ ಘೋಷಾಲ್ ಉಲ್ಲೇಖಗಳುಶ್ರೇಯಾ ಘೋಷಾಲ್ಕನ್ನಡಹಿಂದಿ

🔥 Trending searches on Wiki ಕನ್ನಡ:

ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಬುಧಅರ್ಜುನಮಾಸ್ತಿ ವೆಂಕಟೇಶ ಅಯ್ಯಂಗಾರ್ಚಿತ್ರಲೇಖಸಂವತ್ಸರಗಳುಕಾವೇರಿ ನದಿಮುದ್ದಣ೧೬೦೮ಪೊನ್ನಕರಗ (ಹಬ್ಬ)ಸೈಯ್ಯದ್ ಅಹಮದ್ ಖಾನ್ಕಳಸಎ.ಎನ್.ಮೂರ್ತಿರಾವ್ಯುಗಾದಿರಾಷ್ಟ್ರೀಯ ಶಿಕ್ಷಣ ನೀತಿಭೂತಕೋಲರತ್ನತ್ರಯರುಮಾವುಜಾಗತೀಕರಣಬೆಂಕಿಬಿ. ಆರ್. ಅಂಬೇಡ್ಕರ್ಬಾಲಕಾರ್ಮಿಕಕನ್ನಡದಲ್ಲಿ ಸಣ್ಣ ಕಥೆಗಳುದರ್ಶನ್ ತೂಗುದೀಪ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಬೀಚಿಭಾರತದ ನದಿಗಳುಸರ್ಕಾರೇತರ ಸಂಸ್ಥೆಉದಯವಾಣಿಕರ್ನಾಟಕ ಜನಪದ ನೃತ್ಯಮೂಲಭೂತ ಕರ್ತವ್ಯಗಳುಭೀಮಸೇನಫುಟ್ ಬಾಲ್ರಾಜಕೀಯ ಪಕ್ಷಅವ್ಯಯಪುನೀತ್ ರಾಜ್‍ಕುಮಾರ್ಜಲ ಮಾಲಿನ್ಯಎರಡನೇ ಮಹಾಯುದ್ಧಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಪಂಜುರ್ಲಿಪ್ರೇಮಾಹೈದರಾಬಾದ್‌, ತೆಲಂಗಾಣಮುಖ್ಯ ಪುಟಗುಪ್ತ ಸಾಮ್ರಾಜ್ಯಮಹಾಕವಿ ರನ್ನನ ಗದಾಯುದ್ಧಭಾರತಚಿತ್ರದುರ್ಗ ಜಿಲ್ಲೆಭಾರತದ ಸಂವಿಧಾನದ್ಯುತಿಸಂಶ್ಲೇಷಣೆರಾಜ್‌ಕುಮಾರ್ರಸ(ಕಾವ್ಯಮೀಮಾಂಸೆ)ಕರ್ನಾಟಕದ ಕಲೆ ಮತ್ತು ಸಂಸ್ಕೃತಿಸಂಯುಕ್ತ ರಾಷ್ಟ್ರ ಸಂಸ್ಥೆಎತ್ತಿನಹೊಳೆಯ ತಿರುವು ಯೋಜನೆಶ್ರೀಕೃಷ್ಣದೇವರಾಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಮಂಗಳೂರುಸಾವಿತ್ರಿಬಾಯಿ ಫುಲೆನಾಮಪದಭಾಮಿನೀ ಷಟ್ಪದಿ1935ರ ಭಾರತ ಸರ್ಕಾರ ಕಾಯಿದೆಸೂಫಿಪಂಥಹಿಂದೂ ಧರ್ಮಭೂತಾರಾಧನೆಕಾರ್ಮಿಕರ ದಿನಾಚರಣೆದಿವ್ಯಾಂಕಾ ತ್ರಿಪಾಠಿನೀರುಅಲಂಕಾರಸಮಾಜಶಾಸ್ತ್ರಸಲಿಂಗ ಕಾಮಭಾರತದ ಮುಖ್ಯ ನ್ಯಾಯಾಧೀಶರುವಡ್ಡಾರಾಧನೆಕೃಷ್ಣಾ ನದಿಎಸ್.ಜಿ.ಸಿದ್ದರಾಮಯ್ಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಆದಿವಾಸಿಗಳು🡆 More