ವರ್ಲ್ಡ್ ವೈಡ್ ವೆಬ್

ವರ್ಲ್ಡ್ ವೈಡ್‌ ವೆಬ್‌ ಎಂಬುದನ್ನು WWW ಮತ್ತು W3 ಎಂಬುದಾಗಿ ಸಂಕ್ಷೇಪಿಸುವುದು ವಾಡಿಕೆ.

ಸಾಮಾನ್ಯವಾಗಿ 'ದಿ ವೆಬ್ ‌' ಎಂದು ಕರೆಯಲ್ಪಡುವ ವರ್ಲ್ಡ್ ವೈಡ್‌ ವೆಬ್‌, ಅಂತರ್ಜಾಲ ಮಾಧ್ಯಮವು ಒಳಗೊಂಡಿರುವ ಅಂತರ ಸಂಪರ್ಕಿತ ಹೈಪರ್‌ಟೆಕ್ಸ್ಟ್‌ನ ಒಂದು ವ್ಯವಸ್ಥೆಯಾಗಿದೆ. ವೆಬ್‌ ಪುಟಗಳಲ್ಲಿ ಸೇರ್ಪಡೆಯಾಗಿರುವ ಪಠ್ಯ, ಚಿತ್ರಗಳು, ವಿಡಿಯೋ, ಮತ್ತು ಇತರ ಮಲ್ಟಿಮೀಡಿಯಾ ಸ್ವರೂಪಗಳನ್ನು ವೆಬ್‌ ಬ್ರೌಸರ್‌ ಒಂದರ ನೆರವಿನೊಂದಿಗೆ ಓರ್ವರು ವೀಕ್ಷಿಸಬಹುದು ಮತ್ತು ಹೈಪರ್‌ಲಿಂಕುಗಳನ್ನು ಬಳಸಿ ಅವುಗಳ ನಡುವೆ ಆಕಡೆಯಿಂದ ಈಕಡೆಗೆ ಚಲಿಸಬಹುದು. ಈಗ ವರ್ಲ್ಡ್‌ ವೈಡ್‌ ವೆಬ್‌ ಕನ್ಸೋರ್ಟಿಯಂನ ನಿರ್ದೇಶಕನಾಗಿರುವ ಸರ್‌ ಟಿಮ್‌ ಬರ್ನರ್ಸ್‌-ಲೀ ಎಂಬ ಇಂಗ್ಲಿಷ್‌ ಭೌತವಿಜ್ಞಾನಿಯು ಹಿಂದಿದ್ದ ಹೈಪರ್‌ಟೆಕ್ಸ್ಟ್‌ ಪದ್ಧತಿಗಳಿಂದ ಪಡೆದ ಪರಿಕಲ್ಪನೆಗಳನ್ನು ಬಳಸಿಕೊಂಡು, 1989ರ ಮಾರ್ಚ್‌ನಲ್ಲಿ ಒಂದು ಯೋಜನೆ ಅಥವಾ ಪ್ರಸ್ತಾವನೆಯನ್ನು ರಚಿಸಿದ. ಇದೇ ಮುಂದೆ ವರ್ಲ್ಡ್‌ ವೈಡ್‌ ವೆಬ್‌ ಎಂದು ಕರೆಸಿಕೊಂಡಿತು. ಸ್ವಿಜರ್‌ಲೆಂಡ್‌ನ ಜಿನೇವಾದಲ್ಲಿರುವ CERN ಎಂಬ ಕಂಪನಿಯಲ್ಲಿ ಈತನೊಟ್ಟಿಗೆ ಹಿಂದೆ ಕೆಲಸಮಾಡುತ್ತಿದ್ದ ರಾಬರ್ಟ್‌ ಕೈಲಿಯು ಎಂಬ ಬೆಲ್ಜಿಯಂನ ಕಂಪ್ಯೂಟರ್‌ ವಿಜ್ಞಾನಿಯು ನಂತರ ಈತನ ಜೊತೆ ಸೇರಿಕೊಂಡ. 1990ರಲ್ಲಿ, "ಘಟಕಗಳ ಒಂದು ಜಾಲದಂತೆ ಅನೇಕ ಬಗೆಯ ಮಾಹಿತಿಯನ್ನು ಸಂಪರ್ಕಿಸಲು ಹಾಗೂ ಅದಕ್ಕೆ ಪ್ರವೇಶಾವಕಾಶವನ್ನು ಹೊಂದಲು ಹೈಪರ್‌ಟೆಕ್ಸ್ಟ್‌ನ್ನು [...]" ಬಳಸುವುದನ್ನು ಅವರು ಪ್ರಸ್ತಾವಿಸಿದರು[5] ಮತ್ತು ಸದರಿ ವೆಬ್‌ನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದರು.

ವರ್ಲ್ಡ್ ವೈಡ್ ವೆಬ್
ರಾಬರ್ಟ್‌ ಕೈಲಿಯುವಿನಿಂದ ವಿನ್ಯಾಸಗೊಳಿಸಲ್ಪಟ್ಟ ವೆಬ್‌ನ ಐತಿಹಾಸಿಕ ಚಿಹ್ನೆ

"ವರ್ಲ್ಡ್‌ ವೈಡ್‌ ವೆಬ್‌ನ್ನು (W3) ಮಾನವ ಜ್ಞಾನದ ಒಂದು ಭಂಡಾರವನ್ನಾಗಿ ಅಭಿವೃದ್ಧಿಪಡಿಸಲಾಯಿತಲ್ಲದೇ, ದೂರದ ಯಾವುದೋ ಪ್ರದೇಶದಲ್ಲಿರುವ ಸಹಯೋಗಿಗಳು ತಮ್ಮ ಪರಿಕಲ್ಪನೆಗಳು ಹಾಗೂ ಏಕರೂಪದ ಯೋಜನೆಯೊಂದರ ಎಲ್ಲಾ ಮಗ್ಗಲುಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಟ್ಟಿತು." ಒಂದು ವೇಳೆ ಎರಡು ಯೋಜನೆಗಳು ಸ್ವತಂತ್ರವಾಗಿ ರೂಪುಗೊಂಡರೆ, ಮಧ್ಯದ ಓರ್ವ ವ್ಯಕ್ತಿಯು ಬದಲಾವಣೆಗಳನ್ನು ಮಾಡುವುದರ ಬದಲಿಗೆ, ಎರಡರ ಮಾಹಿತಿಯನ್ನೂ ಒಟ್ಟಿಗೆ ಕಲೆಹಾಕಿದ ಒಂದು ಒಗ್ಗೂಡಿಸಿದ ಕಾರ್ಯನಿದರ್ಶನವನ್ನು ಇಲ್ಲಿ ಕಾಣಬಹುದಾಗಿತ್ತು.

ಇತಿಹಾಸ

1980ರಲ್ಲಿ ತಾನೇ ರೂಪಿಸಿದ್ದ ENQUIRE ಎಂಬ ಒಂದು ದತ್ತಾಂಶ ಸпрацгн (ಡೇಟಾ ಬೇಸ್‌) ಹಾಗೂ ತಂತ್ರಾಂಶ ಯೋಜನೆಯನ್ನು ಉಲ್ಲೇಖಿಸಿದ ಪ್ರಸ್ತಾವನೆಯೊಂದನ್ನು ಟಿಮ್‌ ಬರ್ನರ್ಸ್‌-ಲೀ 1989ರ ಮಾರ್ಚ್‌ನಲ್ಲಿ ಬರೆದ ಹಾಗೂ ಒಂದು ಅತ್ಯಂತ ವ್ಯಾಪಕವಾದ ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು ವಿವರಿಸಿದ. ರಾಬರ್ಟ್‌ ಕೈಲಿಯು ನೆರವಿನೊಂದಿಗೆ ಒಂದು ಹೆಚ್ಚು ಔಪಚಾರಿಕವಾದ ಪ್ರಸ್ತಾವನೆಯೊಂದನ್ನು (1990ರ ನವೆಂಬರ್ 12ರಂದು) ಆತ ಪ್ರಕಟಿಸಿದ. ಕ್ಲೈಂಟ್‌-ಸರ್ವರ್‌ ವಿನ್ಯಾಸವೊಂದನ್ನು ಬಳಸುವ ಮೂಲಕ ಜಾಲತಾಣದ "ವೀಕ್ಷಕರು" (ಬ್ರೌಸರುಗಳು) ನೋಡಲು ಸಾಧ್ಯವಾಗುವಂತೆ "ಹೈಪರ್‌ಟೆಕ್ಸ್ಟ್‌ ದಸ್ತಾವೇಜುಗಳ" ಒಂದು "ಜಾಲ"ವಾಗಿ "WorldWideWeb" (ಒಂದೇ ಪದ, "W3" ಕೂಡಾ) ಎಂದು ಕರೆಯಲಾಗುವ "ಹೈಪರ್‌ಟೆಕ್ಸ್ಟ್‌ ಯೋಜನೆ"ಯೊಂದನ್ನು ನಿರ್ಮಿಸಲೆಂದು ಈ ಪ್ರಸ್ತಾವನೆಯು ಪ್ರಕಟಿಸಲ್ಪಟ್ಟಿತು. ಓದಲು-ಮಾತ್ರ ಅವಕಾಶವಿರುವ ಜಾಲವೊಂದನ್ನು ಮೂರು ತಿಂಗಳೊಳಗಾಗಿ ಅಭಿವೃದ್ಧಿಪಡಿಸಬಹುದೆಂದು ಈ ಪ್ರಸ್ತಾವನೆಯು ಅಂದಾಜಿಸಿತು. ಅಷ್ಟೇ ಅಲ್ಲ, "ಓದುಗರಿಂದ ಹೊಸ ಕೊಂಡಿಗಳು ಹಾಗೂ ಹೊಸ ವಿಷಯ ಸಾಮಗ್ರಿಗಳ ಸೃಷ್ಟಿಯಾಗುವಿಕೆಗೆ ಅನುವುಮಾಡಿಕೊಡುವುದನ್ನು, [ತನ್ಮೂಲಕ] ಬರಹಗಾರಿಕೆ ಅಥವಾ ಕರ್ತೃತ್ವವನ್ನು ಸಾರ್ವತ್ರಿಕವಾಗಿಸುವುದನ್ನು, ಮತ್ತು "ಓದುಗನ/ಓದುಗಳ ಆಸಕ್ತಿಯನ್ನು ಕುರಿತಾದ ಹೊಸ ವಿಷಯ ಸಾಮಗ್ರಿಯು ಲಭ್ಯವಾದಾಗಲೆಲ್ಲಾ, ಅದರ ಕುರಿತಾದ ಸ್ವಯಂಚಾಲಿತ ಸೂಚನೆಯನ್ನು ಅವರಿಗೆ ತಿಳಿಸುವುದನ್ನು" ಸಾಧಿಸಲು ಇದು ಆರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದೂ ಸಹ ಈ ಪ್ರಸ್ತಾವನೆಯು ಅಂದಾಜಿಸಿತು. ಪಕ್ವವಾಗಿ ಮೂಡಿ ಬರಲು ಸಲ್ಪ ಹೆಚ್ಚು ಸಮಯ ತೆಗೆದುಕೊಂಡ Web 2.0 ಮತ್ತು RSS/Atom ಅನ್ನೂ ನೋಡಿ.

ಬ್ರೌನ್‌ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್‌ ಫಾರ್‌ ರಿಸರ್ಚ್‌ ಇನ್‌ ಇನ್‌ಫರ್ಮೇಷನ್‌ ಅಂಡ್‌ ಸ್ಕಾಲರ್‌ಷಿಪ್‌ ಸಂಸ್ಥೆಯ ಒಂದು ಉಪೋತ್ಪಾದನೆಯಾದ ಇಲೆಕ್ಟ್ರಾನಿಕ್‌ ಬುಕ್‌ ಟೆಕ್ನಾಲಜಿಯಿಂದ ಬಂದ ಡೈನಟೆಕ್ಸ್ಟ್‌ SGML ರೀಡರ್‌ನ ಮಾದರಿಯಲ್ಲಿ ಈ ಪ್ರಸ್ತಾವನೆಯನ್ನು ವಿನ್ಯಾಸಗೊಳಿಸಲಾಗಿತ್ತು. CERNನಿಂದ ಪರವಾನಗಿಯನ್ನು ಪಡೆದಿದ್ದ ಡೈನಟೆಕ್ಸ್ ವ್ಯವಸ್ಥೆಯು ತಾಂತ್ರಿಕವಾಗಿ ಮುಂದುವರೆದಿದ್ದು, HyTime ಅನ್ವಯಿಕ ಭಾಷೆಯೊಳಗೇ SGML ISO 8879:1986ವನ್ನು ಹೈಪರ್‌ಮೀಡಿಯಾಕ್ಕೆ ವಿಸ್ತರಿಸುವಲ್ಲಿನ ಒಂದು ಪ್ರಮುಖ ಪಾತ್ರಧಾರಿಯಾಗಿತ್ತಾದರೂ, ಅದು ತೀರಾ ದುಬಾರಿಯೆಂದು ಪರಿಗಣಿಸಲ್ಪಟ್ಟಿತ್ತು. ಅಷ್ಟೇ ಅಲ್ಲ, ಪ್ರತಿ ದಸ್ತಾವೇಜಿಗೆ ನಿಗದಿಯಾಗಿದ್ದ ಶುಲ್ಕ ಮತ್ತು ಪ್ರತಿ ದಸ್ತಾವೇಜನ್ನು ಮಾರ್ಪಡಿಸುವುದಕ್ಕೆ ನಿಗದಿಯಾಗಿದ್ದ ಶುಲ್ಕದಂಥ, ಸಾರ್ವತ್ರಿಕ ಉನ್ನತ ಶಕ್ತಿ ಭೌತವಿಜ್ಞಾನ ಸಮುದಾಯದಲ್ಲಿನ ಬಳಕೆಗಾಗಿ ಒಂದು ಸೂಕ್ತವಲ್ಲದ ಪರವಾನಗಿ ನೀತಿಯನ್ನು ಇದು ಹೊಂದಿದೆ ಎಂದು ಇದು ಪರಿಗಣಿಸಲ್ಪಟ್ಟಿತ್ತು.

ವಿಶ್ವದ ಮೊಟ್ಟಮೊದಲ ವೆಬ್‌ ಸರ್ವರ್‌ನ ರೂಪದಲ್ಲಷ್ಟೇ ಅಲ್ಲದೇ, 1990ರಲ್ಲಿ ಮೊಟ್ಟಮೊದಲ ವೆಬ್‌ ಬ್ರೌಸರ್‌ ಆದ WorldWideWebನ್ನು ಬರೆಯಲೂ ಸಹ ಒಂದು NeXT ಕಂಪ್ಯೂಟರ್‌ನ್ನು ಬರ್ನರ್ಸ್‌-ಲೀ ಬಳಸಿದ. ಮೊಟ್ಟಮೊದಲ ವೆಬ್‌ ಬ್ರೌಸರ್ (ಅದು ಒಂದು ವೆಬ್‌ ಎಡಿಟರ್ ಕೂಡಾ ಆಗಿತ್ತು), ಮೊಟ್ಟಮೊದಲ ವೆಬ್‌ ಸರ್ವರ್, ಮತ್ತು ಮೊಟ್ಟ ಮೊದಲ ವೆಬ್‌ ಪುಟಗಳಂಥ ಒಂದು ಕಾರ್ಯನಿರತ ವೆಬ್‌ಗೆ ಅಗತ್ಯವಿರುವ ಎಲ್ಲಾ ಸಾಧನಗಳನ್ನೂ 1990ರ ಕ್ರಿಸ್‌ಮಸ್‌ ಹೊತ್ತಿಗೆ ಬರ್ನರ್ಸ್‌-ಲೀ ರೂಪಿಸಿದ. ಯೋಜನೆಯೇನೆಂಬುದನ್ನು ಸ್ವತಃ ಇವೇ ವಿವರಿಸಿದವು. 1991ರ ಆಗಸ್ಟ್‌ 6ರಂದು ವರ್ಲ್ಡ್‌ ವೈಡ್‌ ವೆಬ್‌ನ ಒಂದು ಕಿರು ಸಾರಾಂಶವನ್ನು alt.hypertext ನ್ಯೂಸ್‌ಗ್ರೂಪ್‌ನಲ್ಲಿ ಆತ ಪ್ರಕಟಿಸಿದ. ಅಂತರಜಾಲದಲ್ಲಿ ಒಂದು ಸಾರ್ವಜನಿಕವಾಗಿ ಲಭ್ಯವಿರುವ ಸೇವೆಯಾಗಿ ವೆಬ್‌ನ ಮೊದಲ ಪ್ರವೇಶವೂ ಸಹ ಇದೇ ದಿನಾಂಕದಂದು ಆಯಿತು. ಯುರೋಪ್‌ ಆಚೆಗಿನ ಮೊಟ್ಟಮೊದಲ ಸರ್ವರ್‌ನ್ನು 1991ರ ಡಿಸೆಂಬರ್‌ನಲ್ಲಿ SLAC ಎಂಬಲ್ಲಿ ಸ್ಥಾಪಿಸಲಾಯಿತು. ಬ್ರೌನ್‌ ವಿಶ್ವವಿದ್ಯಾಲಯದಲ್ಲಿನ ಹೈಪರ್‌ಟೆಕ್ಸ್ಟ್‌ ಎಡಿಟಿಂಗ್ ಸಿಸ್ಟಂನಂಥ (HES), 1960ರ ದಶಕಗಳಿಂದಲೂ ಅಸ್ತಿತ್ವದಲ್ಲಿದ್ದ ಹಳೆಯ ಯೋಜನೆಗಳಿಂದ ಹೈಪರ್‌ಟೆಕ್ಸ್ಟ್‌ನ ಆಧಾರರೂಪದ ನಿರ್ಣಾಯಕ ಪರಿಕಲ್ಪನೆಯು ಹುಟ್ಟಿಕೊಂಡಿತು. ಇದೇ ಸ್ವರೂಪದ ಇನ್ನಿತರ ವ್ಯವಸ್ಥೆಗಳೆಂದರೆ, ಟೆಡ್‌ ನೆಲ್ಸನ್‌ ಮತ್ತು ಆಂಡ್ರೀಸ್‌ ವ್ಯಾನ್‌ ಡ್ಯಾಮ್‌--- ಟೆಡ್‌ ನೆಲ್ಸನ್‌ನ Project Xanadu ಮತ್ತು ಡೋಗ್ಲಸ್‌ ಎಂಜಲ್‌ಬರ್ಟ್‌ನ oN-Line System (NLS). 1945ರಲ್ಲಿ ಬಂದ "As We May Think" ಎಂಬ ಪ್ರಬಂಧದಲ್ಲಿ ವಿವರಿಸಲ್ಪಟ್ಟ, ವಾನ್ನೆವರ್ ಬುಷ್‌ನ ಮೈಕ್ರೋಫಿಲ್ಮ್‌-ಆಧರಿತ "ಮೆಮೆಕ್ಸ್‌"ನಿಂದ ನೆಲ್ಸನ್‌ ಹಾಗೂ ಎಂಜೆಲ್‌ಬರ್ಟ್‌ ಇಬ್ಬರೂ ಪ್ರಭಾವಿತರಾದರು. [ಸೂಕ್ತ ಉಲ್ಲೇಖನ ಬೇಕು]

ಅಂತರಜಾಲದೊಂದಿಗೆ ಹೈಪರ್‌ಟೆಕ್ಸ್ಟ್‌ನ್ನು ಜೊತೆಗೂಡಿಸಿದ್ದು ಬರ್ನರ್ಸ್‌-ಲೀಯ ಒಂದು ಪ್ರಮುಖ ಪ್ರಗತಿ. ಎರಡು ತಂತ್ರಜ್ಞಾನಗಳ ನಡುವಿನ ಒಂದು ಜತೆಗೂಡುವಿಕೆ ಅಥವಾ ಸಾಂಗತ್ಯವು ಎರಡೂ ತಾಂತ್ರಿಕ ಸಮುದಾಯಗಳ ಸದಸ್ಯರಿಗೆ ಸಾಧ್ಯವಿತ್ತು ಎಂಬುದಾಗಿ ತಾನು ಮೇಲಿಂದ ಮೇಲೆ ಸಲಹೆ ನೀಡಿದ್ದರೂ ಸಹ, ಯಾರೊಬ್ಬರೂ ಆತನ ಸಲಹೆಯನ್ನು ಸ್ವೀಕರಿಸಲಿಲ್ಲವಾದ್ದರಿಂದ, ತಾನೇ ಅಂತಿಮವಾಗಿ ಯೋಜನೆಯನ್ನು ಕೈಗೆತ್ತಿಕೊಂಡು ನಿಭಾಯಿಸಬೇಕಾಗಿ ಬಂತು ಎಂದು ವೀವಿಂಗ್‌ ದಿ ವೆಬ್‌ ಎಂಬ ತನ್ನ ಪುಸ್ತಕದಲ್ಲಿ ಆತ ವಿವರಿಸಿದ್ದಾನೆ. ಕಾಲಕ್ರಮೇಣ, ವೆಬ್‌ ಮತ್ತು ಮತ್ತೊಂದು ಸ್ಥಳದಲ್ಲಿನ ಆಕರಗಳಿಗಾಗಿರುವ ಜಾಗತಿಕವಾಗಿ ವಿಶಿಷ್ಟವಾದ ಗುರುತುಕಾರಕಗಳ ಒಂದು ವ್ಯವಸ್ಥೆಯನ್ನು ಆತ ಅಭಿವೃದ್ಧಿಪಡಿಸಿದ: ಯೂನಿಫಾರ್ಮ್‌ ರಿಸೋರ್ಸ್‌ ಲೊಕೇಟರ್‌ (URL) ಎಂದು ನಂತರದಲ್ಲಿ ಜನಪ್ರಿಯವಾದ ಯೂನಿಫಾರ್ಮ್‌ ಡಾಕ್ಯುಮೆಂಟ್‌ ಐಡೆಂಟಿಫೈಯರ್‌ (UDI) ಮತ್ತು ಯೂನಿಫಾರ್ಮ್‌ ರಿಸೋರ್ಸ್‌ ಐಡೆಂಟಿಫೈಯರ್‌ (URI); ಮತ್ತು ಪ್ರಕಟಣೆಯ ಭಾಷೆಯಾದ ಹೈಪರ್‌ ಟೆಕ್ಸ್ಟ್‌ ಮಾರ್ಕಪ್‌ ಲಾಂಗ್ವೇಜ್‌ (HTML); ಮತ್ತು ಹೈಪರ್‌ ಟೆಕ್ಸ್ಟ್‌ ಟ್ರಾನ್ಸ್‌ಫರ್ ಪ್ರೋಟಕಾಲ್‌ (HTTP) ಇವು ಅದರಲ್ಲಿ ಸೇರಿದ್ದವು.

ಆಗ ಲಭ್ಯವಿದ್ದ ಇತರ ಹೈಪರ್‌ಟೆಕ್ಸ್ಟ್‌ ವ್ಯವಸ್ಥೆಗಳು ಮತ್ತು ವರ್ಲ್ಡ್‌ ವೈಡ್‌ ವೆಬ್‌ ನಡುವೆ ಅಗಾಧವಾದ ಅಂತರವಿತ್ತು. ದ್ವಿದಿಕ್ಕಿನ ಕೊಂಡಿಗಳಿಗಿಂತ ಕೇವಲ ಏಕದಿಕ್ಕಿನ ಕೊಂಡಿಗಳು ಮಾತ್ರವೇ ವೆಬ್‌ಗೆ ಅಗತ್ಯವಾಗಿದ್ದವು. ಮತ್ತೊಂದು ಆಕರವನ್ನು ಅದರ ಮಾಲೀಕನ ಅನುಮತಿಯಿಲ್ಲದೆಯೇ ಯಾರಾದರೊಬ್ಬರು ಸಂಪರ್ಕಿಸುವುದನ್ನು ಇದು ಸಾಧ್ಯವಾಗಿಸಿತು. ವೆಬ್‌ ಸರ್ವರ್‌ಗಳು ಹಾಗೂ ಬ್ರೌಸರ್‌ಗಳನ್ನು ಸಜ್ಜುಗೊಳಿಸುವಲ್ಲಿನ ಅಥವಾ ಕಾರ್ಯಗತಗೊಳಿಸುವಲ್ಲಿನ ಕಷ್ಟವನ್ನೂ (ಹಿಂದಿನ ವ್ಯವಸ್ಥೆಗಳಿಗೆ ಹೋಲಿಸಿದಾಗ) ಸಹ ಇದು ತಗ್ಗಿಸಿತು. ಆದರೆ ಅದರ ಬದಲಿಗೆ ಸಂಪರ್ಕದ ಹಠಾತ್ ಕುಸಿತದ ತೀವ್ರ ಸಮಸ್ಯೆಯನ್ನು ಮುಂದಿಟ್ಟಿತು. HyperCardನಂಥ ತನ್ನ ಪೂರ್ವವರ್ತಿಗಳಿಗಿಂತ ಭಿನ್ನವಾಗಿರುವ ವರ್ಲ್ಡ್‌ ವೈಡ್‌ ವೆಬ್‌, ಮಾಲೀಕತನದ್ದಲ್ಲದ ಸ್ವರೂಪವನ್ನು ಹೊಂದಿತ್ತು. ಇದರಿಂದಾಗಿ ಸರ್ವರ್‌ಗಳು ಹಾಗೂ ಗ್ರಾಹಕರನ್ನು ಸ್ವತಂತ್ತ್ರವಾಗಿ ಅಭಿವೃದ್ಧಿಪಡಿಸಲು ಹಾಗೂ ಪರವಾನಗಿಯ ಕಟ್ಟುಪಾಡುಗಳಿಲ್ಲದೆಯೇ ವ್ಯಾಪ್ತಿ ವಿಸ್ತರಣೆಗಳನ್ನು ಮಾಡುವುದು ಸಾಧ್ಯವಿತ್ತು. ಯಾವುದೇ ಶುಲ್ಕವನ್ನು ಬಾಕಿ ಉಳಿಸಿಕೊಳ್ಳದ ಯಾರಿಗೇ ಆದರೂ ವರ್ಲ್ಡ್‌ ವೈಡ್‌ ವೆಬ್‌ ಉಚಿತವಾಗಿರುತ್ತದೆ ಎಂದು CERN 1993ರ ಏಪ್ರಿಲ್‌ 30ರಂದು ಪ್ರಕಟಿಸಿತು. ಗೋಫರ್ ಪ್ರೋಟಕಾಲ್‌ ಇನ್ನು ಮುಂದೆ ಉಚಿತ ಬಳಕೆಗೆ ಲಭ್ಯವಿಲ್ಲ ಎಂಬ ಪ್ರಕಟಣೆಯ ಎರಡು ತಿಂಗಳ ನಂತರ ಬಂದ ಈ ಪ್ರಕಟಣೆಯಿಂದಾಗಿ ಗೋಫರ್‌ನ್ನು ಬಳಸುತ್ತಿದ್ದವರೆಲ್ಲ ವೆಬ್‌ನ ಕಡೆಗೆ ಕ್ಷಿಪ್ರವಾಗಿ ವರ್ಗಾವಣೆಗೊಂಡರು. ಇದಕ್ಕಿಂತ ಮುಂಚೆಯೇ ಜನಪ್ರಿಯವಾಗಿದ್ದ ViolaWWW ಎಂಬ ವೆಬ್‌ ಬ್ರೌಸರ್‌ HyperCardನ್ನು ಆಧರಿಸಿತ್ತು.

1993ರಲ್ಲಿ ಮೊಸಾಯಿಕ್‌ ವೆಬ್‌ ಬ್ರೌಸರ್‌ನ ಪರಿಚಯವಾಗುವುದರೊಂದಿಗೆ ವರ್ಲ್ಡ್‌ ವೈಡ್‌ ವೆಬ್‌ಗೆ ಒಂದು ಪ್ರಮುಖ ತಿರುವು ಸಿಕ್ಕಿತು ಎಂದು ವಿದ್ವಾಂಸರು ಸಾರ್ವತ್ರಿಕವಾಗಿ ಒಪ್ಪುತ್ತಾರೆ. ಮಾರ್ಕ್‌ ಆಂಡ್ರೀಸ್ಸೆನ್‌ ನೇತೃತ್ವದಲ್ಲಿ ಅರ್ಬನಾ-ಚ್ಯಾಂಪೇನ್‌ನಲ್ಲಿನ ಇಲಿನೋಯ್ಸ್‌ ವಿಶ್ವವಿದ್ಯಾಲಯದಲ್ಲಿನ (NCSA-UIUC) ನ್ಯಾಷನಲ್‌ ಸೆಂಟರ್ ಫಾರ್ ಸೂಪರ್‌ಕಂಪ್ಯೂಟಿಂಗ್ ಅಪ್ಲಿಕೇಷನ್ಸ್‌ನಲ್ಲಿನ ಒಂದು ತಂಡದಿಂದ ಅಭಿವೃದ್ಧಿಪಡಿಸಲ್ಪಟ್ಟ ಒಂದು ಗ್ರಾಫಿಕಲ್ ಬ್ರೌಸರ್‌ ಇದಾಗಿತ್ತು. U.S. ಹೈ-ಪರ್ಫಾರ್ಮೆನ್ಸ್‌ ಕಂಪ್ಯೂಟಿಂಗ್‌ ಅಂಡ್‌ ಕಮ್ಯುನಿಕೇಷನ್ಸ್‌ ಇನಿಷಿಯೆಟೀವ್‌ ಯೋಜನೆಯಿಂದ ಮೊಸಾಯಿಕ್‌ ಬ್ರೌಸರ್‌ಗಾಗಿ ಧನಸಹಾಯವು ಸಿಕ್ಕಿತು. 1991ರ ಹೈ ಪರ್ಫಾರ್ಮೆನ್ಸ್‌ ಕಂಪ್ಯೂಟಿಂಗ್‌ ಅಂಡ್‌ ಕಮ್ಯುನಿಕೇಷನ್‌ ಕಾಯಿದೆ ಯಿಂದ ಪ್ರವರ್ತಿಸಲ್ಪಟ್ಟ ಈ ಯೋಜನೆಯು, U.S. ಸೆನೆಟರ್‌ ಆಲ್‌ ಗೋರ್‌ ಹುಟ್ಟುಹಾಕಿದ, ಕಂಪ್ಯೂಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಉಪಕ್ರಮಗಳಲ್ಲಿ ಒಂದಾಗಿತ್ತು. ಮೊಸಾಯಿಕ್‌ನ ಬಿಡುಗಡೆಗೂ ಮೊದಲು, ವೆಬ್‌ ಪುಟಗಳಲ್ಲಿ ಪಠ್ಯದೊಂದಿಗೆ ಗ್ರಾಫಿಕ್‌ಗಳನ್ನು ಸಾಮಾನ್ಯವಾಗಿ ಬೆರೆಸಲಾಗುತ್ತಿರಲಿಲ್ಲ, ಮತ್ತು ಅಂತರಜಾಲದ ಮಾಧ್ಯಮದಲ್ಲಿ ಬಳಕೆಯಲ್ಲಿದ್ದ ಗೋಫರ್‌ ಹಾಗೂ ವೈಡ್‌ ಏರಿಯಾ ಇನ್ಫರ್ಮೇಷನ್‌ ಸರ್ವರ್‌ಗಳಂಥ (WAIS) ಹಳತಾದ ಪ್ರೋಟಕಾಲ್‌ಗಳಿಗಿಂತ ಇದರ ಜನಪ್ರಿಯತೆ ಕಡಿಮೆಯಿತ್ತು. ವೆಬ್‌ ಎಂಬುದು ಇದುವರೆಗಿನ ಅತ್ಯಂತ ಜನಪ್ರಿಯ ಅಂತರಜಾಲ ಪ್ರೋಟಕಾಲ್‌ ಆಗುವಲ್ಲಿ ಮೊಸಾಯಿಕ್‌ನ ಗ್ರಾಫಿಕಲ್ ಯೂಸರ್‌ ಇಂಟರ್‌ಫೇಸ್‌ ಅನುವು ಮಾಡಿಕೊಟ್ಟಿತು.

1994ರ ಅಕ್ಟೋಬರ್‌ನಲ್ಲಿ ಟಿಮ್‌ ಬರ್ನರ್ಸ್‌-ಲೀಯು ಪರಮಾಣು ಸಂಶೋಧನೆಗೆ ಸಂಬಂಧಿಸಿದ ಐರೋಪ್ಯ ಸಂಘಟನೆಯನ್ನು (CERN) ಬಿಟ್ಟ ನಂತರ, ವರ್ಲ್ಡ್‌ ವೈಡ್‌ ವೆಬ್‌ ಕನ್ಸೋರ್ಟಿಯಂನ್ನು (W3C) ಸ್ಥಾಪಿಸಿದ. ಮ್ಯಾಸಚೂಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಲ್ಯಾಬರೇಟರಿ ಫಾರ್ ಕಂಪ್ಯೂಟರ್‌ ಸೈನ್ಸ್‌ (MIT/LCS) ಸಂಸ್ಥೆಯಲ್ಲಿ ಇದು ಸ್ಥಾಪಿಸಲ್ಪಟ್ಟಿತು. ಅಂತರ್ಜಾಲ ವಲಯದಲ್ಲಿ ಪಥನಿರ್ಮಾಪಕನೆನಿಸಿಕೊಂಡಿದ್ದ ಡಿಫೆನ್ಸ್‌ ಅಡ್ವಾನ್ಸ್ಡ್‌ ರಿಸರ್ಚ್‌ ಪ್ರಾಜೆಕ್ಟ್ಸ್‌ ಏಜೆನ್ಸಿ (DARPA) ಮತ್ತು ಐರೋಪ್ಯ ಆಯೋಗದ ಬೆಂಬಲದೊಂದಿಗೆ ಇದು ಕಾರ್ಯಸಾಧ್ಯವಾಯಿತು. 1994ರ ಅಂತ್ಯದ ವೇಳೆಗೆ, ಸದ್ಯದ ಮಾನದಂಡಗಳಿಗೆ ಹೋಲಿಸಿದಾಗ ವೆಬ್‌ಸೈಟ್‌ಗಳ ಒಟ್ಟು ಸಂಖ್ಯೆಯು ಇನ್ನೂ ಶೈಶವಸ್ಥಿತಿಯಲ್ಲೇ ಇದ್ದಾಗ, ಸಾಕಷ್ಟು ಸಂಖ್ಯೆಯ ಗಮನಾರ್ಹ ವೆಬ್‌ಸೈಟ್‌ಗಳು ಆಗಲೇ ಸಕ್ರಿಯವಾಗಿದ್ದವು. ಅಷ್ಟೇ ಅಲ್ಲ, ಅವುಗಳಲ್ಲಿ ಬಹುಪಾಲು ವೆಬ್‌ಸೈಟ್‌ಗಳು ಇಂದಿನ ಅತ್ಯಂತ ಜನಪ್ರಿಯ ಸೇವೆಗಳಿಗೆ ಸಂಬಂಧಿಸಿದಂತೆ ಮುನ್ಸೂಚಕಗಳು ಅಥವಾ ಪ್ರೇರಣೆಯಾಗಿವೆ.

ಅಸ್ತಿತ್ವದಲ್ಲಿರುವ ಅಂತರಜಾಲದಿಂದ ಸಂಪರ್ಕದ ಮೂಲಕ, ವಿಶ್ವಾದ್ಯಂತ ಇತರ ವೆಬ್‌ಸೈಟ್‌ಗಳು ಸೃಷ್ಟಿಸಲ್ಪಟ್ಟು ಡೊಮೈನ್‌ ಹೆಸರು ಹಾಗೂ HTMLಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಗುಣಮಟ್ಟಗಳನ್ನು ನೀಡಿವೆ. ಅಲ್ಲಿಂದೀಚೆಗೆ, ವೆಬ್‌ ಮಾನದಂಡಗಳ ಬೆಳವಣಿಗೆಯ ಮಾರ್ಗದರ್ಶನದಲ್ಲಿ ಬರ್ನರ್ಸ್‌-ಲೀಯು ಒಂದು ಸಕ್ರಿಯ ಪಾತ್ರವನ್ನು ವಹಿಸಿದ್ದಾನೆ (ವೆಬ್‌ ಪುಟಗಳು ಸಂಯೋಜಿಸಲ್ಪಡುವ ಮಾರ್ಕ್‌-ಅಪ್‌ ಭಾಷೆಗಳಂಥವು), ಮತ್ತು ಇತ್ತೀಚಿನ ವರ್ಷಗಳಲ್ಲಿ ಶಬ್ದಾರ್ಥದ ವೆಬ್‌ ಒಂದರ ತನ್ನ ದೃಷ್ಟಿಕೋನವನ್ನು ಆತ ಸಮರ್ಥಿಸಿಕೊಂಡಿದ್ದಾನೆ. ಬಳಕೆಗೆ ಸುಲಭವಾದ ಮತ್ತು ಸಂದರ್ಭಕ್ಕೆ ಸಲೀಸಾಗಿ ಹೊಂದುವಂತಿರುವ ಸ್ವರೂಪದ ಮೂಲಕ ಅಂತರ್ಜಾಲದಲ್ಲಿನ ಮಾಹಿತಿಯ ಹರಡುವಿಕೆಯನ್ನು ವರ್ಲ್ಡ್‌ ವೈಡ್‌ ವೆಬ್‌ ಕಾರ್ಯಸಾಧ್ಯಗೊಳಿಸಿದೆ. ಅಂತರಜಾಲದ ಬಳಕೆಯನ್ನು ಜನಪ್ರಿಯಗೊಳಿಸುವಲ್ಲಿ ಇದು ಈ ರೀತಿಯಾಗಿ ಒಂದು ಪ್ರಮುಖ ಪಾತ್ರವಹಿಸಿತು. ಜನಪ್ರಿಯ ಬಳಕೆಯಲ್ಲಿ ವರ್ಲ್ಡ್‌ ವೈಡ್‌ ವೆಬ್‌ ಹಾಗೂ ಅಂತರ್ಜಾಲ ಎಂಬ ಪದಗಳೆರಡನ್ನೂ ಕೆಲವೊಮ್ಮೆ ಸಮನ್ವಯಗೊಳಿಸಲಾಗುತ್ತದೆಯಾದರೂ, ವರ್ಲ್ಡ್‌ ವೈಡ್‌ ವೆಬ್‌ ಎಂಬುದು ಅಂತರಜಾಲ ಎಂಬ ಪದಕ್ಕೆ ಸಮಾನಾರ್ಥಕವಾದುದಲ್ಲ ಎನ್ನಬೇಕು. ವೆಬ್‌ ಎಂಬುದು ಅಂತರಜಾಲದ ತುದಿಯ ಅಥವಾ ಅದರ ಹತೋಟಿಯೊಂದಿಗೆ ಮೇಲೆ ರೂಪಿಸಲಾಗಿರುವ ಒಂದು ಅನ್ವಯಿಕೆಯಾಗಿದೆ.

ಕಾರ್ಯವಿಧಾನ

ಅಂತರಜಾಲ ಮತ್ತು ವರ್ಲ್ಡ್‌ ವೈಡ್‌ ವೆಬ್‌ ಎಂಬ ಪದಗಳನ್ನು ದಿನನಿತ್ಯದ ಮಾತುಗಳಲ್ಲಿ ಯಾವುದೇ ಭೇದ-ಪರಿಗಣನೆಯಿಲ್ಲದೆಯೇ ಅನೇಕ ವೇಳೆ ಬಳಸಲಾಗುತ್ತಿದೆ. ಆದರೂ, ಅಂತರಜಾಲ ಮತ್ತು ವರ್ಲ್ಡ್ ವೈಡ್‌ ವೆಬ್‌ ಎರಡೂ ಒಂದೇ ಅಲ್ಲ. ಅಂತರಜಾಲ ಎಂಬುದು ಅಂತರ್‌ಸಂಪರ್ಕಿತ ಕಂಪ್ಯೂಟರ್‌ ಜಾಲಗಳ ಒಂದು ಜಾಗತಿಕ ವ್ಯವಸ್ಥೆ. ಇದಕ್ಕೆ ಪ್ರತಿಯಾಗಿ, ವೆಬ್‌ ಎಂಬುದು ಅಂತರಜಾಲದ ಮೇಲೆ ನಡೆಯುವ ಸೇವೆಗಳಲ್ಲಿ ಒಂದು ಎನಿಸಿಕೊಳ್ಳುತ್ತದೆ. ಇದು ಅಂತರ ಸಂಪರ್ಕಿತ ದಸ್ತಾವೇಜುಗಳು ಮತ್ತು ಇತರ ಆಕರಗಳ ಒಂದು ಸಂಗ್ರಹವಾಗಿದ್ದು, ಹೈಪರ್‌ಲಿಂಕುಗಳು ಮತ್ತು URLಗಳಿಂದ ಸಂಪರ್ಕಿಸಲ್ಪಟ್ಟಿರುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ವೆಬ್‌ ಎಂಬುದು ಅಂತರಜಾಲದ ಮೇಲೆ ನಡೆಯುವ ಒಂದು ಅನ್ವಯಿಕೆ. ವರ್ಲ್ಡ್‌ ವೈಡ್‌ ವೆಬ್‌ನ ಮೇಲೆ ಒಂದು ವೆಬ್‌ ಪುಟವನ್ನು ವೀಕ್ಷಿಸುವ ಕಾರ್ಯವು, ವೆಬ್‌ ಬ್ರೌಸರ್‌ ಒಂದರೊಳಗೆ ಸದರಿ ವೆಬ್‌ ಪುಟದ URLನ್ನು ಅಚ್ಚಿಸುವ ಮೂಲಕ, ಅಥವಾ ಆ ಪುಟ ಅಥವಾ ಮೂಲಕ್ಕಿರುವ ಹೈಪರ್‌ಲಿಂಕ್‌ನ್ನು ಅನುಸರಿಸುವ ಮೂಲಕ ಸಾಮಾನ್ಯವಾಗಿ ಪ್ರಾರಂಭವಾಗುತ್ತದೆ. ಅದನ್ನು ಹೊತ್ತುತಂದು ಪ್ರದರ್ಶಿಸುವ ಉದ್ದೇಶದಿಂದ, ಆಗ ಸಂವಹನಾ ಸಂದೇಶಗಳ ಒಂದು ಸರಣಿಯನ್ನೇ ತೆರೆಯ ಹಿಂದೆ ಸದರಿ ವೆಬ್‌ ಬ್ರೌಸರ್‌ ಶುರುಮಾಡುತ್ತದೆ.

ಮೊದಲಿಗೆ, ಡೊಮೈನ್‌ ಹೆಸರಿನ ಪದ್ಧತಿ ಅಥವಾ, DNS ಎಂದು ಕರೆಯಲ್ಪಡುವ ಜಾಗತಿಕವಾದ, ಹಂಚಿಕೆಗೊಳಗಾದ ಅಂತರ್ಜಾಲ ದತ್ತಾಂಶ ಸಂಗ್ರಹವನ್ನು ಬಳಸಿಕೊಂಡು URLನ ಸರ್ವರ್‌-ಹೆಸರಿನ ಭಾಗವು ಒಂದು IP ವಿಳಾಸವಾಗಿ ವಿಘಟಿಸಲ್ಪಡುತ್ತದೆ. ವೆಬ್‌ ಸರ್ವರ್‌ನ್ನು ಸಂಪರ್ಕಿಸಲು ಈ IP ವಿಳಾಸವು ಅತ್ಯಾವಶ್ಯಕ. ಆಗ, ಆ ನಿರ್ದಿಷ್ಟ ವಿಳಾಸದಲ್ಲಿರುವ ವೆಬ್‌ ಸರ್ವರ್‌ಗೆ ಒಂದು HTTP ಕೋರಿಕೆಯನ್ನು ಕಳಿಸುವ ಮೂಲಕ ಮೂಲವನ್ನು ಬ್ರೌಸರ್‌ ಕೋರುತ್ತದೆ. ವಿಶಿಷ್ಟವಾಗಿರುವ ಒಂದು ವೆಬ್‌ ಪುಟದ ಸಂದರ್ಭದಲ್ಲಿ, ಪುಟದ HTML ಪಠ್ಯದ ಕುರಿತು ಮೊದಲು ಕೋರಿಕೆಯ ಸಲ್ಲಿಕೆಯಾಗುತ್ತದೆ ಮತ್ತು ಅದು ತಕ್ಷಣವೇ ವೆಬ್‌ ಬ್ರೌಸರ್‌ನಿಂದ ಪದಾನ್ವಯವಾಗಿ ಬಿಡಿಸಲ್ಪಟ್ಟು, ಪುಟದ ಭಾಗಗಳಾಗಿ ರೂಪುಗೊಂಡಿರುವ ಚಿತ್ರಗಳು ಹಾಗೂ ಇನ್ನಾವುದೇ ಕಡತಗಳಿಗಾಗಿ ಹೆಚ್ಚುವರಿ ಕೋರಿಕೆಗಳನ್ನು ಸಲ್ಲಿಸುತ್ತದೆ. ವೆಬ್‌ಸೈಟ್‌ ಒಂದರ ಜನಪ್ರಿಯತೆಯನ್ನು ಅಳೆಯುವ ಅಂಕಿ-ಅಂಶಗಳು ಸಾಮಾನ್ಯವಾಗಿ 'ಪುಟದ-ವೀಕ್ಷಣೆಗಳು' ಅಥವಾ ಕಂಡುಬರುವ ಸಂಬಂಧಪಟ್ಟ ಸರ್ವರ್‌ 'ಭೇಟಿಗಳು' (ಕಡತದ ಕೋರಿಕೆಗಳು)- ಇವುಗಳಲ್ಲಿ ಒಂದರ ಸಂಖ್ಯೆಯನ್ನು ಆಧರಿಸಿರುತ್ತವೆ.

ವೆಬ್‌ ಸರ್ವರ್‌ಗಳಿಂದ ಈ ಕಡತಗಳನ್ನು ಸ್ವೀಕರಿಸುವಾಗ, ಪುಟದ HTML, CSS, ಮತ್ತು ಇತರ ವೆಬ್‌ ಭಾಷೆಗಳಿಂದ ಸ್ಪಷ್ಟವಾಗಿ ನಮೂದಿಸಲ್ಪಟ್ಟಂತೆ, ಬ್ರೌಸರ್‌ಗಳು ಪುಟವನ್ನು ತೆರೆಯ ಮೇಲೆ ಹಂತಹಂತವಾಗಿ ಮೂಡಿಸಲು ಸಾಧ್ಯವಿದೆ. ಬಳಕೆದಾರನು ನೋಡುವ ತೆರೆಯ-ಮೇಲಿನ ವೆಬ್‌ ಪುಟವನ್ನು ತಯಾರಿಸಲು ಯಾವುದೇ ಚಿತ್ರಗಳು ಅಥವಾ ಆಕರಗಳನ್ನು ಸಂಯೋಜಿಸಲಾಗುತ್ತದೆ. ಬಹುತೇಕ ವೆಬ್‌ ಪುಟಗಳು ಇತರ ಪುಟಗಳಿಗೆ ಸಂಬಂಧಿಸಿದ ಹೈಪರ್‌ಲಿಂಕ್‌ಗಳನ್ನು ಸ್ವತಃ ಒಳಗೊಂಡಿರುತ್ತವೆ ಮತ್ತು ಡೌನ್‌ಲೋಡ್‌ಗಳು, ಮೂಲ ದಸ್ತಾವೇಜುಗಳು, ವ್ಯಾಖ್ಯಾನಗಳು ಮತ್ತು ಇತರ ವೆಬ್‌ ಆಕರಗಳಿಗೆ ಸಂಬಂಧಿಸಿದ ಹೈಪರ್‌ಲಿಂಕ್‌ಗಳನ್ನು ಪ್ರಾಯಶಃ ಒಳಗೊಂಡಿರುತ್ತವೆ. ಪ್ರಯೋಜನಕಾರಿಯಾದ, ಸಂಬಂಧಿತ ಆಕರಗಳ ಇಂಥ ಒಂದು ಸಂಗ್ರಹಣೆಯು ಹೈಪರ್‌ಟೆಕ್ಸ್ಟ್‌ ಕೊಂಡಿಗಳ ಮೂಲಕ ಪರಸ್ಪರ ಸಂಬಂಧಹೊಂದುವುದರ ಮೂಲಕ, ಈಗ ಅಡ್ಡಹೆಸರಿಸಲಾಗಿರುವ ಮಾಹಿತಿಯ ಒಂದು "ಜಾಲ" ಎನಿಸಿಕೊಳ್ಳುತ್ತದೆ. ಹೀಗೆ ಇದನ್ನು ಅಂತರಜಾಲದ ಮೇಲೆ ಲಭ್ಯವಾಗುವಂತೆ ಸೃಷ್ಟಿಸಿದ ಟಿಂ ಬರ್ನರ್ಸ್‌-ಲೀ, 1990ರ ನವೆಂಬರ್‌ನಲ್ಲಿ ಇದನ್ನು ಮೊದಲ ಬಾರಿಗೆ WorldWideWeb (ಮೂಲದಲ್ಲಿ CamelCase ಎಂದು ಕರೆಯಲಾಗಿದ್ದು, ನಂತರ ಅದನ್ನು ಕೈಬಿಡಲಾಯಿತು) ಎಂದು ಕರೆದ.

W3 ಎಂದರೇನು?

W3, ಅಥವಾ www ಎಂಬುದು ಅನೇಕ ವೈವಿಧ್ಯಮಯ ಅರ್ಥಗಳನ್ನು ಸಂಕೇತಿಸುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:

  • ಎಲ್ಲಾ ವಿಷಯಗಳೂ ಒಂದು ಉಲ್ಲೇಖವನ್ನು ಹೊಂದಿರುವ ಮತ್ತು ಅದರ ನೆರವಿನಿಂದ ಅವುಗಳನ್ನು ಮತ್ತೆ ಪಡೆಯಲು ಸಾಧ್ಯವಿರುವುದನ್ನು ಒಳಗೊಂಡ ಒಂದು ಸೀಮೆಯಿಲ್ಲದ ಮಾಹಿತಿಯ ಪ್ರಪಂಚದ ಪರಿಕಲ್ಪನೆ;
  • ಅನೇಕ ವೈವಿಧ್ಯಮಯ ಪ್ರೋಟಕಾಲ್‌ಗಳು ಇರುವಾಗಲೂ, ಈ ಪ್ರಪಂಚವನ್ನು ವ್ಯಾಪಿಸಲು ಅಥವಾ ಕಾರ್ಯಸಾಧ್ಯವಾಗಿಸಲು, ಈ ಯೋಜನೆಯು ಅನುಷ್ಠಾನಗೊಳಿಸಿದ ವಿಳಾಸ ವ್ಯವಸ್ಥೆ (URI);
  • ಅನ್ಯಥಾ ಲಭ್ಯವಿಲ್ಲದ, ಕಾರ್ಯನಿರ್ವಹಣೆ ಮತ್ತು ಲಕ್ಷಣಗಳನ್ನು ನೀಡುತ್ತಿರುವ ದೇಶೀಯ W3 ಸರ್ವರ್‌ಗಳಿಂದ ಬಳಕೆಯಾಗಿರುವ ಒಂದು ನೆಟ್‌ವರ್ಕ್‌ ಪ್ರೋಟಕಾಲ್‌ (HTTP);
  • ಪ್ರತಿಯೊಬ್ಬ W3 ಗ್ರಾಹಕನೂ ಅರ್ಥಮಾಡಿಕೊಳ್ಳುವುದು ಅವಶ್ಯಕವಾಗಿರುವ, ಮತ್ತು ಪಠ್ಯ, ಸೌಕರ್ಯಪಟ್ಟಿಗಳು ಮತ್ತು ಜಾಲದಾದ್ಯಂತವಿರುವ ಸರಳವಾದ ಆನ್‌-ಲೈನ್‌ ನೆರವಿನ ಮಾಹಿತಿಯಂಥ ಮೂಲಭೂತ ಅಂಶಗಳ ರವಾನೆಗಾಗಿ ಬಳಸಲಾಗುತ್ತಿರುವ ಒಂದು ಮಾರ್ಕ್‌-ಅಪ್‌ ಭಾಷೆ (HTML);
  • ಮೇಲೆ ತಿಳಿಸಲಾಗಿರುವ ಪಟ್ಟಿಯಲ್ಲಿರುವ ಅಂಶಗಳ ಪೈಕಿ ಎಲ್ಲವನ್ನೂ ಅಥವಾ ಕೆಲವನ್ನು ಬಳಸಿಕೊಂಡು ಅಂತರಜಾಲದ ಮೇಲೆ ಲಭ್ಯವಿರುವ ದತ್ತಾಂಶದ ಮೊತ್ತ.

ಸಂಪರ್ಕ ಕಲ್ಪಿಸುವಿಕೆ

ವರ್ಲ್ಡ್ ವೈಡ್ ವೆಬ್ 
ಹೈಪರ್‌ಲಿಂಕುಗಳನ್ನು ಪ್ರದರ್ಶಿಸುತ್ತಿರುವ WWWನ ಒಂದು ಕಿರುತುಣುಕಿನ ಗ್ರಾಫಿಕ್‌ ಪ್ರತಿಕೃತಿ.

ಕಾಲಾನಂತರದಲ್ಲಿ, ಹೈಪರ್‌ಲಿಂಕ್‌ಗಳು ಕಾಣೆಯಾಗುವ, ಹೊಸ ತಾಣದಲ್ಲಿ ಸ್ಥಾಪನೆಯಾಗುವ, ಅಥವಾ ವಿಭಿನ್ನ ವಸ್ತು-ವಿಷಯದೊಂದಿಗೆ ಬದಲಿಸಲ್ಪಡುವ ಮೂಲಕ ಅನೇಕ ವೆಬ್‌ ಆಕರಗಳು ಗಮನಸೆಳೆದವು. ಕೆಲವೊಂದು ವಲಯಗಳಲ್ಲಿ ಈ ವಿದ್ಯಮಾನವನ್ನು "ಸಂಪರ್ಕದ ಹಠಾತ್-ಕುಸಿತ" ಎಂದು ಉಲ್ಲೇಖಿಸಲಾಗುತ್ತದೆ ಮತ್ತು ಅದರಿಂದ ತೊಂದರೆಗೊಳಗಾದ ಹೈಪರ್‌ಲಿಂಕ್‌ಗಳನ್ನು ಅನೇಕ ವೇಳೆ "ಮೃತ ಕೊಂಡಿಗಳು" ಎಂದು ಕರೆಯಲಾಗುತ್ತದೆ. ವೆಬ್‌ನ ಈ ಅಲ್ಪಕಾಲಿಕ ಸ್ವರೂಪವು ವೆಬ್‌ಸೈಟ್‌ಗಳನ್ನು ದಾಖಲಿಸುವ ಅನೇಕ ಪ್ರಯತ್ನಗಳನ್ನು ಪ್ರೇರೇಪಿಸಿದೆ. 1996ರಿಂದಲೂ ಕ್ರಿಯಾಶೀಲವಾಗಿರುವ ಅಂತರ್ಜಾಲ ದಾಖಲಿಕೆ ವ್ಯವಸ್ಥೆಯು ಅತ್ಯುತ್ಕೃಷ್ಟ ಪ್ರಯತ್ನಗಳಲ್ಲಿ ಒಂದಾಗಿದೆ.

Ajax ಪರಿಷ್ಕರಣೆಗಳು

JavaScript ಎಂಬುದೊಂದು ಬರಹಕ್ಕೆ ಮೀಸಲಾದ ಭಾಷೆಯಾಗಿದ್ದು, ಬ್ರೆಂಡನ್‌ ಐಚ್‌ ಎಂಬಾತ 1995ರಲ್ಲಿ ನೆಟ್‌ಸ್ಕೇಪ್‌ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಮೊದಲಿಗೆ ಇದನ್ನು ಅಭಿವೃದ್ಧಿಪಡಿಸಿದ. ವೆಬ್‌ ಪುಟಗಳೊಳಗಿನ ಬಳಕೆಗಾಗಿ ಇದು ಮೀಸಲಾಗಿತ್ತು. ECMAScript ಎಂಬುದು ಇದರ ಪ್ರಮಾಣಕ ಆವೃತ್ತಿ. ಮೇಲೆ ವಿವರಿಸಲಾದ ಪುಟ-ಪುಟದ ಮಾದರಿಯ ಕೆಲವಷ್ಟು ಇತಿಮಿತಿಗಳನ್ನು ಹೋಗಲಾಡಿಸಲು, ಕೆಲವೊಂದು ವೆಬ್‌ ಅನ್ವಯಿಕೆಗಳು Ajaxನ್ನು ಕೂಡಾ ಬಳಸುತ್ತವೆ (ಅಸಮಕಾಲಿಕವಾದ JavaScript ಮತ್ತು XML). ಸರ್ವರ್‌ಗೆ ಹೆಚ್ಚುವರಿ HTTP ಕೋರಿಕೆಗಳನ್ನು ಸಲ್ಲಿಸಬಲ್ಲ ಪುಟದೊಂದಿಗೆ JavaScript ಹೊರಗೆಡಹಲ್ಪಡುತ್ತದೆ. ಇದು ಬಳಕೆದಾರರು ಮಾಡುವ ಕಂಪ್ಯೂಟರ್‌ನ ಮೌಸ್‌-ಕ್ಲಿಕ್‌ಗಳಿಗೆ ಪ್ರತಿಸ್ಪಂದನೆಯಾಗಿ, ಅಥವಾ ಜಾರಿಹೋದ ಸಮಯದ ಆಧಾರದ ಮೇಲೆ ಇದು ವ್ಯಕ್ತವಾಗುತ್ತದೆ. ಪ್ರತಿಯೊಂದು ಪ್ರತಿಸ್ಪಂದನೆಯೊಂದಿಗೂ ಹೊಸತೊಂದು ಪುಟವನ್ನು ಸೃಷ್ಟಿಸುವ ಬದಲಿಗೆ ಹಾಲಿ ಇರುವ ಪುಟವನ್ನೇ ಮಾರ್ಪಡಿಸಲು ಸರ್ವರ್‌ನ ಪ್ರತಿಸ್ಪಂದನೆಗಳು ಬಳಕೆಯಾಗುತ್ತವೆ. ಆದ್ದರಿಂದ ಕೇವಲ ಸೀಮಿತವಾದ, ಹೆಚ್ಚುವರಿಯಾದ ಮಾಹಿತಿಯನ್ನು ಒದಗಿಸುವುದಷ್ಟೇ ಸರ್ವರ್‌ನ ಅಗತ್ಯವಾಗಿ ಕಂಡುಬರುತ್ತದೆ. ನಾನಾರೀತಿಯ Ajax ಕೋರಿಕೆಗಳನ್ನು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಿದೆ. ಶೇಖರಿಸಿದ ಮಾಹಿತಿಯು ಮತ್ತೆ ಪಡೆಯುವ ಅವಧಿಯಲ್ಲೇ ಬಳಕೆದಾರರು ಪುಟವೊಂದರೊಂದಿಗೆ ಸಂವಹನೆ ನಡೆಸಲು ಸಾಧ್ಯವಿದೆ. ಒಂದು ವೇಳೆ ಹೊಸ ಮಾಹಿತಿಯು ಲಭ್ಯವಿದೆಯೇ ಎಂಬುದನ್ನು ಕೇಳಲು ಕೆಲವೊಂದು ವೆಬ್‌ ಅನ್ವಯಿಕೆಗಳು ನಿಗದಿತವಾಗಿ ಸರ್ವರ್‌ಗೆ ಅಭಿಪ್ರಾಯ ಸಂಗ್ರಹಣೆಯನ್ನು ಕಳಿಸುವುದುಂಟು.

WWW ಪೂರ್ವಪ್ರತ್ಯಯ

ಅನೇಕ ವೆಬ್‌ ವಿಳಾಸಗಳು www ನೊಂದಿಗೆ ಪ್ರಾರಂಭವಾಗುತ್ತವೆ. ತಾವು ಒದಗಿಸುವ ಸೇವೆಗಳಿಗೆ ಅನುಸಾರವಾಗಿ ಅಂತರಜಾಲದ ಆಶ್ರಯದಾತ ವ್ಯವಸ್ಥೆಗಳನ್ನು (ಸರ್ವರ್‌ಗಳನ್ನು) ಹೆಸರಿಸುವ ಪರಿಪಾಠವು ಬಹಳ ದಿನಗಳಿಂದ ನಡೆದುಕೊಂಡು ಬಂದಿರುವುದೇ ಇದಕ್ಕೆ ಕಾರಣ. ಆದ್ದರಿಂದ, ವೆಬ್‌ ಸರ್ವರ್‌ ಒಂದಕ್ಕಾಗಿರುವ ಆಶ್ರಯದಾತನ ಹೆಸರು ಅನೇಕ ವೇಳೆ www ಆಗಿದ್ದು, ಇದು ಒಂದು FTP ಸರ್ವರ್‌ಗೆ ಸಂಬಂಧಿಸಿ ftp ಆಗಿರುತ್ತದೆ, ಮತ್ತು ಒಂದು USENET ಸುದ್ದಿ ಸರ್ವರ್‌ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಇದು news ಅಥವಾ nntp ಆಗಿರುತ್ತದೆ. ಈ ಆಶ್ರಯದಾತ ಹೆಸರುಗಳು ನಂತರ "www.example.com"ನ ರೀತಿಯಲ್ಲಿರುವಂತೆ DNS ಸಬ್‌ಡೊಮೈನ್‌ ಹೆಸರುಗಳಾಗಿ ಕಾಣಿಸಿಕೊಳ್ಳುತ್ತವೆ. ಇಂಥ ಸಬ್‌ಡೊಮೈನ್‌ ಹೆಸರುಗಳ ಬಳಕೆಯು ಹೀಗೆಯೇ ಇರಬೇಕೆಂದು ಯಾವುದೇ ತಾಂತ್ರಿಕ ಅಥವಾ ಕಾರ್ಯನೀತಿಯ ಪ್ರಮಾಣಕವು ಕಟ್ಟುಪಾಡುಗಳನ್ನು ಹೇರಿಲ್ಲ; ವಾಸ್ತವವಾಗಿ, ಮೊಟ್ಟಮೊದಲ ವೆಬ್‌ ಸರ್ವರ್‌ನ್ನು "nxoc01.cern.ch" ಎಂದು ಕರೆಯಲಾಗಿತ್ತು ಮತ್ತು ಅನೇಕ ವೆಬ್‌ ಸೈಟ್‌ಗಳು ಒಂದು www ಸಬ್‌ಡೊಮೈನ್‌ ಪೂರ್ವಪ್ರತ್ಯಯವಿಲ್ಲದೆಯೇ, ಅಥವಾ "www2", "secure" ಇತ್ಯಾದಿಯಂಥ ಕೆಲವು ಇತರ ಪೂರ್ವಪ್ರತ್ಯಯದೊಂದಿಗೆ ಅಸ್ತಿತ್ವದಲ್ಲಿವೆ. ಈ ಸಬ್‌ಡೊಮೈನ್‌ ಪೂರ್ವಪ್ರತ್ಯಯಗಳು ಯಾವುದೇ ಪರಿಣಾಮವನ್ನು ಹೊಂದಿಲ್ಲ; ಅವು ಕೇವಲ ಆಯ್ಕೆಮಾಡಿಕೊಳ್ಳಲಾದ ಹೆಸರುಗಳಾಗಿವೆ. ಸ್ವತಃ ಡೊಮೈನ್‌ ಹೆಸರು (ಉದಾಹರಣೆಗೆ, example.com) ಮತ್ತು www ಸಬ್‌ಡೊಮೈನ್‌ ಹೆಸರುಗಳೆರಡೂ (ಉದಾಹರಣೆಗೆ, www.example.com) ಅದೇ ಸೈಟ್‌ನ್ನು ಉಲ್ಲೇಖಿಸುವ ರೀತಿಯಲ್ಲಿ ಅನೇಕ ವೆಬ್‌ ಸರ್ವರ್‌ಗಳು ವ್ಯವಸ್ಥೆಗೊಳಿಸಲ್ಪಟ್ಟಿವೆ ಅಥವಾ ಸ್ಥಾಪಿಸಲ್ಪಟ್ಟಿವೆ. ಇತರ ಬಗೆಗಳಿಗೆ ಒಂದಲ್ಲಾ ಒಂದು ಸ್ವರೂಪದ ಅಗತ್ಯ ಬರಬಹುದು, ಅಥವಾ ಎರಡು ಭಿನ್ನ ರೀತಿಯ ವೆಬ್‌ ಸೈಟ್‌ಗಳ ನಕ್ಷೆಯನ್ನು ಅವು ರೂಪಿಸಬಹುದು.

ವಿಳಾಸವನ್ನು ಅಚ್ಚಿಸುವ ಅಂಕಣದಲ್ಲಿ ಒಂದು ಏಕ ಪದವನ್ನು ಅಚ್ಚಿಸಿದಾಗ ಮತ್ತು ವಾಪಸಾತಿಯ ಕೀಲಿಯನ್ನು ಒತ್ತಿದಾಗ, ಕೆಲವೊಂದು ವೆಬ್‌ ಬ್ರೌಸರ್‌ಗಳು ತಾವೇತಾವಾಗಿ ಸದರಿ ಪದದ ಆರಂಭಕ್ಕೆ "www."ನ್ನು ಮತ್ತು ಸಾಧ್ಯವಾದರೆ ಅಂತ್ಯದಲ್ಲಿ ".com", ".org" and ".net" ಇತ್ಯಾದಿಗಳನ್ನು ಜೋಡಿಸಲು ಪ್ರಯತ್ನಿಸುತ್ತವೆ. ಉದಾಹರಣೆಗೆ, 'apple' ಎಂದು ಅಚ್ಚಿಸಿ ’enter’ ಕೀಲಿಯನ್ನು ಒತ್ತಿದಾಗ, http://www.apple.com/ ಎಂಬುದಾಗಿಯೂ ಮತ್ತು 'openoffice' ಎಂದು ಅಚ್ಚಿಸಿ ’enter’ ಕೀಲಿಯನ್ನು ಒತ್ತಿದಾಗ, http://www.openoffice.org ಎಂಬ ವಿಳಾಸವು ವಿಳಾಸದ ಅಂಕಣದಲ್ಲಿ ತಾನೇ ತಾನಾಗಿ ರೂಪುಗೊಳ್ಳಬಹುದು. ಈ ರೀತಿಯ ಗುಣಲಕ್ಷಣವು, 2003ರ ಆರಂಭದಲ್ಲಿ Mozilla Firefoxನ ಆರಂಭಿಕ ಆವೃತ್ತಿಗಳಲ್ಲಿ ಸೇರ್ಪಡೆಯಾಗುವ ಮೂಲಕ (ಅದು ಇನ್ನೂ 'Firebird' ಎಂಬ ಕಾರ್ಯನಿರತ ಶೀರ್ಷಿಕೆಯನ್ನು ಹೊಂದಿದ್ದಾಗ), ಒಂದು ಉಪಕ್ರಮಕ್ಕೆ ದಾರಿಯಾಯಿತು ಎನ್ನಬಹುದು.

ಇದೇ ರೀತಿಯ ಪರಿಕಲ್ಪನೆಗೆ Microsoft ಕಂಪನಿಯು 2008ರಲ್ಲಿ US ಹಕ್ಕುಸ್ವಾಮ್ಯವನ್ನು ಪಡೆದಿತ್ತು ಎಂಬುದರ ಕುರಿತು ವರದಿಯಾಗಿತ್ತಾದರೂ, ಅದು ಕೇವಲ ಮೊಬೈಲ್‌ ಉಪಕರಣಗಳಿಗೆ ಮಾತ್ರ ಸಂಬಂಧಿಸಿತ್ತು. 

ವೆಬ್‌ ವಿಳಾಸದ 'http://' ಅಥವಾ 'https://' ಭಾಗವು ತನ್ನದೇ ಆದ ಅರ್ಥವನ್ನು ಹೊಂದಿದೆ: ಅವು Hypertext Transfer Protocol ಮತ್ತು HTTP Secure ಎಂಬುದನ್ನು ಸೂಚಿಸುತ್ತವೆ ಹಾಗೂ ಪುಟಗಳು ಹಾಗೂ ಅದರೆಲ್ಲ ಚಿತ್ರಗಳು ಮತ್ತು ಇತರ ಮೂಲಗಳನ್ನು ಕುರಿತು ಕೋರಿಕೆ ಸಲ್ಲಿಸಲು ಹಾಗೂ ಮನವಿ ಸಲ್ಲಿಸಲು ಬಳಕೆಯಾಗುವ ಸಂವಹನೆಯ ವಿಧ್ಯುಕ್ತ ನಿರೂಪಣೆಯನ್ನು ಅವು ವ್ಯಾಖ್ಯಾನಿಸುತ್ತವೆ. HTTP ಜಾಲದ ವಿಧ್ಯುಕ್ತ ನಿರೂಪಣೆಯು ವರ್ಲ್ಡ್‌ ವೈಡ್‌ ವೆಬ್‌ ‌ಕೆಲಸ ಮಾಡುವ ರೀತಿಗೆ ಅತ್ಯಂತ ಮೂಲಭೂತ ಸ್ವರೂಪದ್ದಾಗಿದೆ, ಮತ್ತು HTTPSನಲ್ಲಿ ಒಳಗೊಂಡಿರುವ ಎನ್‌ಕ್ರಿಪ್ಷನ್‌ ಅಂಶವು ಒಂದು ವಿಶಿಷ್ಟ ಪದರವನ್ನು ಸೇರಿಸುತ್ತದೆ. ಸಾರ್ವತ್ರಿಕ ಸ್ವರೂಪದಲ್ಲಿರುವ ಅಂತರಜಾಲದ ಮೇಲೆ ಸಂಕೇತಪದಗಳು (ಪಾಸ್‌ವರ್ಡ್‌) ಅಥವಾ ಬ್ಯಾಂಕಿನ ವಿವರಗಳಂಥ ಗೋಪ್ಯ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವಾಗ ಸದರಿ ಎನ್‌ಕ್ರಿಪ್ಷನ್‌ ಪದರವು ನೆರವಿಗೆ ಬರುತ್ತದೆ. ಒಂದು ವೇಳೆ ಇದು ಬಿಟ್ಟುಹೋಗಿದ್ದರೆ, ವೆಬ್‌ ಬ್ರೌಸರ್‌ಗಳು ಈ "ಯೋಜನೆ"ಯ ಭಾಗವನ್ನು URLಗಳಿಗೂ ಸಹ ಪೂರ್ವಪ್ರತ್ಯಯವಾಗಿ ಸೇರಿಸಿಕೊಳ್ಳುತ್ತವೆ. ಇದರ ನಡುವೆಯೂ, ಎರಡು ’ಮುಂಗೀಟುಗಳು’ (//) ವಾಸ್ತವವಾಗಿ ಆರಂಭದಲ್ಲಿ ಅನಗತ್ಯ ಎಂದು ಬರ್ನರ್ಸ್‌-ಲೀ ಸ್ವತಃ ಒಪ್ಪಿಕೊಂಡಿದ್ದಾನೆ. ಸ್ಥೂಲವಾಗಿ ಹೇಳುವುದಾರೆ, ವೆಬ್‌ URLಗಳು ಈ ಕೆಳಗಿನ ಸ್ವರೂಪವನ್ನು ಹೊಂದಿರಬೇಕೆಂದು RFC 2396ಯು ವ್ಯಾಖ್ಯಾನಿಸಿದೆ: ://?#. ಉದಾಹರಣೆಗೆ, ಇಲ್ಲಿ ಎಂಬುದು (www.example.comನಂತೆ) ವೆಬ್‌ ಸರ್ವರ್‌ ಆಗಿದೆ, ಮತ್ತು ಎಂಬುದು ವೆಬ್‌ ಪುಟವನ್ನು ಗುರುತಿಸುತ್ತದೆ. ಎಂಬುದನ್ನು ವೆಬ್‌ ಸರ್ವರ‍್ ಸಂಸ್ಕರಣೆಗೆ ಒಳಪಡಿಸುತ್ತದೆ (ಇದು ಒಂದು ಸ್ವರೂಪದಲ್ಲಿ ಕಳಿಸಿರುವ ದತ್ತಾಂಶವಾಗಿರಬಹುದು, ಉದಾಹರಣೆಗೆ, ಶೋಧಕ ಎಂಜಿನ್‌ ಒಂದಕ್ಕೆ ಕಳಿಸಲಾದ ಪದಗಳು),

ಮತ್ತು ಹಿಂತಿರುಗಿ ಬರುವ ಪುಟ ಇದನ್ನು ಅವಲಂಬಿಸುತ್ತದೆ. ಕೊನೆಗೆ, ಎಂಬುದು ವೆಬ್‌ ಸರ್ವರ್‌ಗೆ ಕಳಿಸಲ್ಪಡುವುದಿಲ್ಲ. ಬ್ರೌಸರ್‌ ಮೊದಲು ತೋರಿಸುವ ಪುಟದ ಭಾಗವನ್ನು ಇದು ಗುರುತಿಸುತ್ತದೆ.

www ನಲ್ಲಿನ ಅಕ್ಷರಗಳ ಹೆಸರನ್ನು ಪ್ರತ್ಯೇಕವಾಗಿ ಉಚ್ಚರಿಸಲ್ಪಡುವ ಮೂಲಕ ಇಂಗ್ಲಿಷ್‌ನಲ್ಲಿ wwwನ್ನು ಉಚ್ಚರಿಸಲಾಗುತ್ತದೆ (double-u double-u double-u ). ಕೆಲವೊಂದು ತಾಂತ್ರಿಕ ಬಳಕೆದಾರರು ಇದನ್ನು dub-dub-dub ಎಂಬುದಾಗಿ ಉಚ್ಚರಿಸುತ್ತಾರಾದರೂ, ಅದಿನ್ನೂ ವ್ಯಾಪಕವಾಗಿ ಹರಡಿಲ್ಲ. ಡೋಗ್ಲಸ್‌ ಆಡಮ್ಸ್‌ ಎಂಬ ಇಂಗ್ಲಿಷ್‌ ಲೇಖಕ ದಿ ಇಂಡಿಪೆಂಡೆಂಟ್‌ ಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ (1999) ಒಮ್ಮೆ ಬರೆಯುತ್ತಾ, "ಯಾವ ಮೂಲ ಪದಗುಚ್ಛದ ಸಂಕ್ಷಿಪ್ತ ರೂಪವನ್ನು ಉಚ್ಚರಿಸುವಾಗ, ಯಾವುದಕ್ಕಾಗಿ ಅದು ಸಂಕ್ಷಿಪ್ತಗೊಂಡಿತೋ ಅದಕ್ಕಿಂತ ಮೂರುಪಟ್ಟು ಹೆಚ್ಚು ಉದ್ದದ ಸಮಯವನ್ನು ತೆಗೆದುಕೊಳ್ಳುವ ಪದಗುಚ್ಛವೇನಾದರೂ ಇದ್ದರೆ, ನನಗೆ ತಿಳಿದಿರುವ ಪ್ರಕಾರ World Wide Web ಮಾತ್ರ" ಎಂಬ ವ್ಯಂಗ್ಯೋಕ್ತಿಯನ್ನು ಬಳಸಿದ್ದ. ಅಷ್ಟೇ ಅಲ್ಲ, ಸ್ಟೀಫನ್‌ ಫ್ರೈ ಎಂಬಾತ ನಂತರ ಇದನ್ನು ತನ್ನ ಪಾಡ್‌ಕಾಸ್ಟ್‌ಗಳ "ಪಾಡ್‌ಗ್ರಾಮ್ಸ್‌" ಸರಣಿಯಲ್ಲಿ "wuh wuh wuh" ಎಂಬುದಾಗಿ ಉಚ್ಚರಿಸಿದ. ಮ್ಯಾಂಡರೀನ್‌ ಎಂಬ ಚೀನಾದ ಅಧಿಕೃತ ಆಡುನುಡಿಯಲ್ಲಿ, wàn wéi wǎng 万维网 ಎಂಬ ಪದಗುಚ್ಛಕ್ಕೆ ಹೋಲುವಂತಿರುವ ಒಂದು ಧ್ವನ್ಯಾತ್ಮಕ-ಶಬ್ದಾರ್ಥದ ಹೋಲಿಕೆಯ ಮೂಲಕ ವರ್ಲ್ಡ್‌ ವೈಡ್‌ ವೆಬ್‌ ಸಾಮಾನ್ಯವಾಗಿ ಭಾಷಾಂತರಿಸಲ್ಪಟ್ಟಿದ್ದು, ಅದು www ನ ಅಗತ್ಯವನ್ನು ಪೂರೈಸುತ್ತದೆ ಹಾಗೂ ಅಕ್ಷರಶಃ "ಅಸಂಖ್ಯಾತ ಆಯಾಮದ ಜಾಲ" ಎಂಬ ಅರ್ಥವನ್ನು ನೀಡುತ್ತದೆ. ಈ ಭಾಷಾಂತರವು ಅತ್ಯಂತ ಸೂಕ್ತವಾಗಿ ವರ್ಲ್ಡ್‌ ವೈಡ್‌ ವೆಬ್‌ನ ವಿನ್ಯಾಸದ ಪರಿಕಲ್ಪನೆ ಹಾಗೂ ತ್ವರಿತ ಪ್ರಸರಣವನ್ನು ಪ್ರತಿಬಿಂಬಿಸುತ್ತದೆ. ಟಿಮ್‌ ಬರ್ನರ್ಸ್‌-ಲೀಯ ವೆಬ್‌-ಸ್ಪೇಸ್‌ ಹೇಳುವ ಪ್ರಕಾರ, World Wide Web ಎಂಬುದನ್ನು ಮೂರು ಪ್ರತ್ಯೇಕ ಪದಗಳಾಗಿ ಅಧಿಕೃತವಾಗಿ ಉಚ್ಚರಿಸಲಾಗುತ್ತದೆ. ಪ್ರತಿ ಪದದ ಮೊದಲಕ್ಷರವು ಇಂಗ್ಲಿಷ್‌ನ ದೊಡ್ಡಕ್ಷರವಾಗಿದ್ದು, ಪದಗಳ ಮಧ್ಯದಲ್ಲಿ ಯಾವುದೇ ಅಡ್ಡಗೆರೆ ಇರುವುದಿಲ್ಲ.

ಗೌಪ್ಯತೆ

ಸಾಕಷ್ಟು ಸಮಯ ಮತ್ತು ಹಣವನ್ನು ಹೊಂದಿರುವ, ಹಾಗೂ ಸೌಕರ್ಯಗಳನ್ನು ಮತ್ತು ಮನರಂಜನೆಯನ್ನು ಗಳಿಸುವ ಕಂಪ್ಯೂಟರ‍್ ಬಳಕೆದಾರರು, ವೆಬ್‌ನ್ನೂ ಒಳಗೊಂಡಂತೆ ಅಸಂಖ್ಯಾತ ತಂತ್ರಜ್ಞಾನಗಳನ್ನು ಬಳಸುವುದಕ್ಕೆ ಪ್ರತಿಯಾಗಿ, ರಹಸ್ಯ ಪಾಲನೆಯ ಹಕ್ಕನ್ನು ಬಿಟ್ಟುಕೊಟ್ಟಿರಬಹುದು ಅಥವಾ ಇಟ್ಟುಕೊಂಡಿರಬಹುದು. ವಿಶ್ವಾದ್ಯಂತ ಅರ್ಧ-ಶತಕೋಟಿಗೂ ಹೆಚ್ಚಿನ ಜನರು ಸಾಮಾಜಿಕ ಸೇವಾ ಕಾರ್ಯಜಾಲವೊಂದನ್ನು ಬಳಸಿದ್ದಾರೆ, ಮತ್ತು ವೆಬ್‌ನೊಂದಿಗೇ ಬೆಳೆಯುವ ಅಮೆರಿಕನ್ನರ ಪೈಕಿ ಅರ್ಧದಷ್ಟು ಭಾಗದ ಜನರು ಒಂದು ಆನ್‌ಲೈನ್‌ ವ್ಯಕ್ತಿಚಿತ್ರವೊಂದನ್ನು ಸೃಷ್ಟಿಸಿದ್ದಾರೆ ಮತ್ತು ಅವರು ರೂಢಿಯ ನಡವಳಿಕೆಗಳನ್ನು ಬದಲಾಯಿಸುತ್ತಿರಬಹುದಾದ ಪೀಳಿಗೆಯ ಸ್ಥಿತ್ಯಂತರದ ಭಾಗವಾಗಿದ್ದಾರೆ. U.S. ಕಾಲೇಜು ವಿದ್ಯಾರ್ಥಿಗಳಿಂದ U.S.ಗೆ ಸೇರದ 70%ನಷ್ಟು ಶ್ರೋತೃವೃಂದಕ್ಕೆ ಮುಂದುವರಿಸಲ್ಪಟ್ಟ, ಮತ್ತು ರಹಸ್ಯ ಪಾಲನೆಯ ಆದ್ಯತೆಗಳನ್ನು ಸ್ಥಾಪಿಸಲೆಂದು ರೂಪಿಸಲಾದ "ಪರಿವರ್ತನಾ ಸಾಧನಗಳ" (transition tools) ಒಂದು ಬೀಟಾ ಪರೀಕ್ಷೆಯು ಬಿಡುಗಡೆಯಾಗುವುದಕ್ಕೂ ಮುಂಚಿತವಾಗಿ 2009ರಲ್ಲಿ ಒಡಮೂಡಿದ Facebook ಅಂದಾಜಿಸಿರುವ ಪ್ರಕಾರ, ಅದರ ಸದಸ್ಯರ ಪೈಕಿ ಕೇವಲ 20%ನಷ್ಟು ಜನರು ಖಾಸಗಿ ಸ್ಥಾಪನಾ-ವ್ಯವಸ್ಥೆಗಳನ್ನು ಬಳಸುತ್ತಾರೆ ಎಂದು ತಿಳಿದುಬಂದಿದೆ.

ವೆಬ್‌ನ್ನು ಬಳಸುವ ಮಕ್ಕಳು ಮತ್ತು ಇತರ ಅಪ್ರಾಪ್ತರ ಶಿಕ್ಷಣಕ್ಕಾಗಿರುವ, ಮತ್ತು ಸಾಮಾಜಿಕ ಕಾರ್ಯಜಾಲಗಳ ಬಳಕೆದಾರರ ಸಂರಕ್ಷಣೆಗಳಿಗಾಗಿರುವ, ಉದ್ಯಮದ ಸ್ವಯಂ-ನಿಯಂತ್ರಣಕ್ಕೆ ಪೂರಕವಾಗಿ ನಿಲ್ಲುವ ಕಾನೂನುಗಳನ್ನು ರೂಪಿಸಬೇಕೆಂದು ಮನವಿಮಾಡಿಕೊಳ್ಳಲು 60 ದೇಶಗಳಿಗೆ ಸೇರಿರುವ ಗೌಪ್ಯತಾ ಪ್ರತಿನಿಧಿಗಳು ನಿರ್ಣಯಿಸಿದರು. ವೈಯಕ್ತಿಕವಾಗಿ ಗುರುತಿಸಲ್ಪಡಬಲ್ಲ ಮಾಹಿತಿಗಾಗಿರುವ ದತ್ತಾಂಶದ ಸಂರಕ್ಷಣೆಯು, ಆ ಮಾಹಿತಿಯ ಮಾರಾಟಕ್ಕಿಂತ ಹೆಚ್ಚಿನ ಪ್ರಯೋಜನವನ್ನು ವ್ಯವಹಾರಕ್ಕೆ ನೀಡುತ್ತದೆ ಎಂದೂ ಸಹ ಅವರು ನಂಬುತ್ತಾರೆ. ಬಳಕೆದಾರರು ತಮ್ಮ ವೈಯಕ್ತಿಕ ವೀಕ್ಷಣಾ ವಿವರಗಳನ್ನು ಸ್ಥಳೀಯವಾಗಿಯೇ ಅಳಿಸಿಹಾಕಲು ಮತ್ತು ಕೆಲವೊಂದು ಕುಕಿಗಳು ಹಾಗೂ ಜಾಹೀರಾತಿನ ಜಾಲಗಳನ್ನು ತಡೆಹಿಡಿಯಲು, ಬ್ರೌಸರ್‌ಗಳಲ್ಲಿನ ವಿಶಿಷ್ಟ ಲಕ್ಷಣಗಳಿಗೆ ಮೊರೆಹೋಗಬಹುದು. ಆದರೆ ಇಷ್ಟಾಗಿಯೂ ಅವರು ವೆಬ್‌ಸೈಟ್‌ಗಳ ಸರ್ವರ್‌ ಲಾಗ್‌ಗಳಲ್ಲಿ, ಮತ್ತು ನಿರ್ದಿಷ್ಟವಾಗಿ ವೆಬ್‌ ಸಂಕೇತ ಕೇಂದ್ರಗಳಲ್ಲಿ ಪತ್ತೆಹಚ್ಚಲ್ಪಡುತ್ತಾರೆ. ಬರ್ನರ್ಸ್‌-ಲೀ ಮತ್ತು ಆತನ ಸಹೋದ್ಯೋಗಿಗಳು ಹೊಣೆಗಾರಿಕೆಯಲ್ಲಿ ಭರವಸೆಯನ್ನು ಕಾಣುತ್ತಾರೆ. ಅಷ್ಟೇ ಅಲ್ಲ, ಕಾರ್ಯನೀತಿಯ ಅರಿವಿಗೆ, ಅದರಲ್ಲೂ ಪ್ರಾಯಶಃ ಲೆಕ್ಕಪರಿಶೋಧನೆಯ ದಾಖಲಿಸುವಿಕೆ, ಸಮರ್ಥನೆಗಳು ಮತ್ತು ಪ್ರಯೋಗಗಳಿಗೆ ವೆಬ್‌ನ ವಿನ್ಯಾಸವನ್ನು ವಿಸ್ತರಿಸುವ ಮೂಲಕ ಈ ಮಾಧ್ಯಮದ ಸೂಕ್ತ ಅಥವಾ ಯಥೋಚಿತ ಬಳಕೆಯನ್ನು ಸಾಧಿಸಬಹುದು ಎಂಬುದರ ಕುರಿತೂ ಅವರಿಗೆ ವಿಶ್ವಾಸವಿದೆ. ಜಾಹೀರಾತಿನ ಮೂಲಕ ಆದಾಯವನ್ನು ಸಂಗ್ರಹಿಸಿರುವ ಸೇವಾದಾರರ ಪೈಕಿ Yahoo! ವಾಣಿಜ್ಯೋದ್ದೇಶದ ವೆಬ್‌ಸೈಟ್‌ಗಳ ಬಳಕೆದಾರರ ಕುರಿತಾದ ಬಹುತೇಕ ದತ್ತಾಂಶವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ದಾಖಲಿಸಿದೆ. ಅದರ ಸೈಟ್‌ ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಜಾಹಿರಾತುದಾರಿಕೆಯ ಕಾರ್ಯಜಾಲದ ಸೈಟ್‌ಗಳ ಪ್ರತಿ ಪ್ರಾತಿನಿಧಿಕ ಬಳಕೆದಾರರಿಗೆ ಸಂಬಂಧಿಸಿದಂತೆ ಪ್ರತಿತಿಂಗಳೂ ಸುಮಾರು 2,500 ಬಿಟ್‌ಗಳಷ್ಟು ಮಾಹಿತಿಯು ಸಂಗ್ರಹವಾಗುತ್ತದೆ. Yahoo!ನ ಅರ್ಧದಷ್ಟು ಸಾಮರ್ಥ್ಯವನ್ನು ಸಾಧಿಸುವ ಮೂಲಕ MySpace ಕಂಪನಿಯು ಅದರ ನಂತರದ ಸ್ಥಾನದಲ್ಲಿದ್ದರೆ, AOL–TimeWarner, Google, Facebook, Microsoft, ಮತ್ತು eBay ಇವೇ ಮೊದಲಾದವು ನಂತರದ ಸ್ಥಾನಗಳಲ್ಲಿವೆ.

ಭದ್ರತೆ

ವೆಬ್‌ ಮಾಧ್ಯಮವು ದುರುದ್ದೇಶಪೂರಿತ ಸರಕನ್ನು ಹರಡಲು ಅಪರಾಧಿಗಳು ಆಯ್ಕೆ ಮಾಡಿಕೊಂಡಿರುವ ಪಥವಾಗಿ ಹೋಗಿದೆ.

ಚಹರೆಯ ಕಳ್ಳತನ, ಮೋಸಗಾರಿಕೆ ಮತ್ತು ಬೇಹುಗಾರಿಕೆ ಮತ್ತು ಗುಪ್ತಚರ ಮಾಹಿತಿ ಸಂಗ್ರಹದಂಥ ಅನಪೇಕ್ಷಿತ ದುಷ್ಕೃತ್ಯಗಳು, ವೆಬ್‌ ಮಾಧ್ಯಮದಲ್ಲಿ ನಡೆಯುವ ಸೈಬರ್‌ ಅಪರಾಧದಲ್ಲಿ ಸೇರಿವೆ. ವೆಬ್‌-ಆಧರಿತ ಇಂಥ ಘಾಸಿಕೊಳಿಸುವಿಕೆಯ ಪ್ರಕರಣಗಳು ಈಗ ಸಾಂಪ್ರದಾಯಿಕ ಕಂಪ್ಯೂಟರ್‌ ಭದ್ರತಾ ಕಳವಳಗಳನ್ನು ಮೀರಿಸಿದೆ ಮತ್ತು ಈ ಕುರಿತು ಗೂಗಲ್‌ ಸಂಸ್ಥೆಯು ನೀಡಿರುವ ಅಂಕಿ-ಅಂಶದ ಪ್ರಕಾರ, ಹತ್ತು ವೆಬ್‌ ಪುಟಗಳ ಪೈಕಿ ಒಂದು ಪುಟವು ದುರುದ್ದೇಶಪೂರಿತ ಸಂಕೇತವನ್ನು ಹೊಂದಿರಲು ಸಾಧ್ಯವಿದೆ ಎಂದು ತಿಳಿದುಬಂದಿದೆ. ಬಹುಪಾಲು ವೆಬ್‌-ಆಧರಿತ ಆಕ್ರಮಣಗಳು ಶಾಸನಬದ್ಧವಾದ ವೆಬ್‌ಸೈಟ್‌ಗಳ ಮೇಲೆಯೇ ನಡೆಯುತ್ತವೆ, ಮತ್ತು ಸೋಫೊಸ್‌ ಸಂಸ್ಥೆಯು ನೀಡಿರುವ ಅಂಕಿ-ಅಂಶದ ಅನುಸಾರ ಇವುಗಳಲ್ಲಿ ಬಹುಪಾಲು ವೆಬ್‌ಸೈಟ್‌ಗಳು ಅಮೆರಿಕ ಸಂಯುಕ್ತ ಸಂಸ್ಥಾನಗಳು, ಚೀನಾ ಮತ್ತು ರಷ್ಯಾಗಳಲ್ಲಿ ತಮ್ಮ ನೆಲೆಯನ್ನು ಹೊಂದಿವೆ. ಎಲ್ಲಾ ದುರುದ್ದೇಶಪೂರಿತ ಬೆದರಿಕೆಗಳ ಪೈಕಿ SQL ಇಂಜೆಕ್ಷನ್‌ ದಾಳಿಗಳು ವೆಬ್‌ಸೈಟ್‌ಗಳ ವಿರುದ್ಧದ ಅತ್ಯಂತ ಸಾಮಾನ್ಯ ಬೆದರಿಕೆಯಾಗಿದೆ.  HTML ಮತ್ತು URIಗಳ ಮೂಲಕ ಕ್ರಾಸ್‌-ಸೈಟ್‌ ಸ್ಕ್ರಿಪ್ಟಿಂಗ್‌ನಂಥ (XSS) ದಾಳಿಗಳಿಗೆ ವೆಬ್‌ ಮಾಧ್ಯಮವು ಈಡಾಗಬೇಕಾಯಿತು. ಇವು JavaScriptನ ಪರಿಚಯದೊಂದಿಗೆ ಕಂಡುಬಂದವು ಹಾಗೂ ಇಂಥ ಲಿಪಿಗಳ ಬಳಕೆಯನ್ನು ಬೆಂಬಲಿಸುವ ವೆಬ್‌ 2.0 ಮತ್ತು Ajax ವೆಬ್‌ ಡಿಸೈನ್‌ನಂಥವುಗಳಿಂದಾಗಿ ಈ ದಾಳಿಗಳು ಒಂದಷ್ಟು ಮಟ್ಟಿಗೆ ಹೆಚ್ಚಾದವು ಎಂದು ಹೇಳಬಹುದು. ಇಂದು ಒಂದು ಅಂದಾಜಿನ ಅನುಸಾರ ಹೇಳುವುದಾದರೆ, ಎಲ್ಲ ವೆಬ್‌ಸೈಟ್‌ಗಳ ಪೈಕಿ 70%ನಷ್ಟು ವೆಬ್‌ಸೈಟ್‌ಗಳು XSS ದಾಳಿಗಳಿಗೆ ಈಡಾಗುವಷ್ಟರ ಮಟ್ಟಿಗೆ ಮುಕ್ತವಾಗಿವೆ. 

ಇದಕ್ಕಾಗಿ ಪ್ರಸ್ತಾಪಿಸಲಾಗಿರುವ ಪರಿಹಾರೋಪಾಯಗಳು ಅತಿ ಎನ್ನಿಸುವಷ್ಟರ ಮಟ್ಟಿಗೆ ಬದಲಾಗುತ್ತಾ ಹೋಗಿವೆ. 9/11ರ ಅವಘಡದ ನಂತರದ ಕಟ್ಟುಪಾಡುಗಳನ್ನು ಈಡೇರಿಸುವುದಕ್ಕಾಗಿ McAfeeಯಂಥ ಬೃಹತ್ ಭದ್ರತಾ ಸೇವಾ-ಮಾರಾಟಗಾರ ಕಂಪನಿಗಳು ಈಗಾಗಲೇ ನಿಯಂತ್ರಣದ ಹಾಗೂ ಅನುಸರಣೆಯ ತಂಡಗಳನ್ನು ರೂಪಿಸಿವೆ ಮತ್ತು Finjanನಂಥ ಕೆಲವೊಂದು ಕಂಪನಿಗಳು, ಸಂಕೇತಗಳು ಮತ್ತು ಎಲ್ಲಾ ವಸ್ತು-ವಿಷಯದ ಮೂಲವು ಯಾವುದೇ ಇರಲಿ, ಅವುಗಳ ಕುರಿತಾದ ನಿಜಾವಧಿಯ ಸಕ್ರಿಯ ತನಿಖೆಯ ಕುರಿತು ಶಿಫಾರಸು ಮಾಡಿವೆ. ಉದ್ಯಮಗಳು ಭದ್ರತೆಯನ್ನು ಒಂದು ವೆಚ್ಚದ ಕೇಂದ್ರವಾಗಿ ನೋಡುವುದಕ್ಕಿಂತ ವ್ಯವಹಾರದ ಅವಕಾಶವಾಗಿ ನೋಡುವುದು ಅಗತ್ಯ ಎಂದು ಕೆಲವರು ವಾದಿಸಿದ್ದಾರೆ. ಇದಕ್ಕಾಗಿ, ಬೆರಳೆಣಿಕೆಯಷ್ಟು ಸಂಸ್ಥೆಗಳಿಂದ ಜಾರಿಮಾಡಲ್ಪಟ್ಟಿರುವ "ಎಲ್ಲ ಸಮಯದಲ್ಲೂ ಡಿಜಿಟಲ್‌ ಹಕ್ಕುಗಳ ನಿರ್ವಹಣೆಯ ಮೇಲಿರುವ ಸರ್ವತ್ರತೆಯನ್ನು" ದತ್ತಾಂಶ ಮತ್ತು ಕಾರ್ಯಜಾಲಗಳನ್ನು ಇಂದು ರಕ್ಷಿಸುತ್ತಿರುವ ನೂರಾರು ಕಂಪನಿಗಳಲ್ಲಿ ಅನುಷ್ಠಾನಕ್ಕೆ ತರುವುದು ಅಗತ್ಯವಿದೆ ಎಂಬುದು ಅವರ ವಾದ. ಕಂಪ್ಯೂಟರ್‌ ಕಾರ್ಯಕ್ಷೇತ್ರದ ಭದ್ರತೆಯ ದೃಷ್ಟಿಯಿಂದ ಅಂತರಜಾಲವನ್ನು ಮುಚ್ಚಿಡುವುದರಿಂದ ಅಥವಾ ಭದ್ರಪಡಿಸುವುದಕ್ಕಿಂತಲೂ, ಬಳಕೆದಾರರು ಹೊಣೆಗಾರಿಕೆಯನ್ನು ಹಂಚಿಕೊಳ್ಳುವುದೇ ಉತ್ತಮ ಎಂದು ಜೋನಾಥನ್‌ ಝಿಟ್ರೈನ್‌ ಎಂಬಾತ ಹೇಳಿದ್ದಾನೆ.

ಮಾನದಂಡಗಳು

ಅನೇಕ ಔಪಚಾರಿಕ ಮಾನದಂಡಗಳು ಹಾಗೂ ಇತರ ತಾಂತ್ರಿಕ ನಿರ್ದಿಷ್ಟ ವಿವರಣೆಗಳು ವರ್ಲ್ಡ್‌ ವೈಡ್‌ ವೆಬ್‌, ಅಂತರಜಾಲ ಹಾಗೂ ಕಂಪ್ಯೂಟರ್‌ ಮಾಹಿತಿ ವಿನಿಮಯದ ವಿಭಿನ್ನ ಮಗ್ಗುಲುಗಳ ಕಾರ್ಯಾಚರಣೆಯನ್ನು ವ್ಯಾಖ್ಯಾನಿಸುತ್ತವೆ.

ಇವುಗಳ ಪೈಕಿಯ ಬಹುತೇಕ ದಸ್ತಾವೇಜುಗಳು ಬರ್ನರ್ಸ್‌-ಲೀ ನೇತೃತ್ವದ ವರ್ಲ್ಡ್‌ ವೈಡ್‌ ವೆಬ್‌ ಕನ್ಸೋರ್ಟಿಯಂನಿಂದ (W3C) ಸೃಷ್ಟಿಸಲ್ಪಟ್ಟಿದ್ದರೆ, ಕೆಲವೊಂದು ದಸ್ತಾವೇಜುಗಳು ಇಂಟರ್ನೆಟ್‌ ಎಂಜಿನಿಯರಿಂಗ್‌ ಟಾಸ್ಕ್‌ ಫೋರ್ಸ್‌ (IETF) ಹಾಗೂ ಇತರ ಸಂಸ್ಥೆಗಳಿಂದ ರೂಪಿಸಲ್ಪಟ್ಟಿವೆ. 

ವೆಬ್‌ ಮಾನದಂಡಗಳ ಕುರಿತು ಚರ್ಚಿಸುವಾಗ, ಸಾಮಾನ್ಯವಾಗಿ ಈ ಕೆಳಕಂಡ ಪ್ರಕಟಣೆಗಳನ್ನು ಮೂಲಭೂತ ಅಂಶಗಳೆಂದು ಪರಿಗಣಿಸಲಾಗುತ್ತದೆ:

  • ಮಾರ್ಕ್‌-ಅಪ್‌ ಭಾಷೆಗಳಿಗಾಗಿ, ಅದರಲ್ಲೂ ವಿಶೇಷವಾಗಿ HTML ಮತ್ತು XHTMLಗಳ ಕುರಿತಾಗಿ W3Cಯಿಂದ ಪಡೆದಿರುವ ಶಿಫಾರಸುಗಳು. ಇವು ಹೈಪರ್‌ಟೆಕ್ಸ್ಟ್‌ ದಸ್ತಾವೇಜುಗಳ ಸಂರಚನೆ ಹಾಗೂ ಅರ್ಥೈಸುವಿಕೆಯನ್ನು ವಿವರಿಸುತ್ತವೆ.
  • ಶೈಲಿಸಂಗ್ರಹಗಳಿಗಾಗಿ (stylesheets), ಅದರಲ್ಲೂ ವಿಶೇಷವಾಗಿ CSSಗೆ ಸಂಬಂಧಿಸಿ W3Cಯಿಂದ ಪಡೆದಿರುವ ಶಿಫಾರಸುಗಳು.
  • ಎಕ್ಮಾ ಇಂಟರ್‌ನ್ಯಾಷನಲ್‌ ಸಂಸ್ಥೆಯಿಂದ ಪಡೆದಿರುವ, ECMAScript ಕುರಿತಾಗಿರುವ ಮಾನದಂಡಗಳು (ಸಾಮಾನ್ಯವಾಗಿ JavaScriptನ ಸ್ವರೂಪದಲ್ಲಿ).
  • ದಸ್ತಾವೇಜು ಉದ್ದೇಶದ ಮಾದರಿಯ ಕುರಿತು W3Cಯು ನೀಡಿರುವ ಶಿಫಾರಸುಗಳು.

ವರ್ಲ್ಡ್‌ ವೈಡ್‌ ವೆಬ್‌ಗಾಗಿರುವ ಇತರ ಅತ್ಯಾವಶ್ಯಕ ತಂತ್ರಜ್ಞಾನಗಳ ವ್ಯಾಖ್ಯಾನಗಳನ್ನು ಈ ಕೆಳಕಂಡ, ಆದರೆ ಇವಷ್ಟಕ್ಕೇ ಸೀಮಿತವಲ್ಲದ ಹೆಚ್ಚುವರಿ ಪ್ರಕಟಣೆಗಳು ಒದಗಿಸುತ್ತವೆ:

  • Uniform Resource Identifier (URI): ಹೈಪರ್‌ಟೆಕ್ಸ್ಟ್‌ ದಸ್ತಾವೇಜುಗಳು ಮತ್ತು ಚಿತ್ರಗಳಂಥ ಆಕರಗಳನ್ನು ಅಂತರಜಾಲದಲ್ಲಿ ವೀಕ್ಷಿಸಲು ಇರುವ ಒಂದು ಸಾರ್ವತ್ರಿಕ ವ್ಯವಸ್ಥೆಯಿದು.
URLಗಳೆಂದೂ ಅನೇಕ ವೇಳೆ ಕರೆಯಲ್ಪಡುವ URIಗಳು, IETFಯ RFC 3986 / STD 66ನಿಂದ ವ್ಯಾಖ್ಯಾನಿಸಲ್ಪಟ್ಟಿವೆ: Uniform Resource Identifier (URI): Generic Syntax  ಮತ್ತು ಅದರ ಪೂರ್ವವರ್ತಿಗಳು ಹಾಗೂ ಅನೇಕ URI ಯೋಜನಾ ಲಕ್ಷಣಗಳನ್ನು-ವಿವರಿಸುವ RFCಗಳು; 
  • ಹೈಪರ್‌ಟೆಕ್ಸ್ಟ್‌ ಟ್ರಾನ್ಸ್‌ಫರ್‌ ಪ್ರೋಟಕಾಲ್‌ (HTTP) , ವಿಶೇಷವಾಗಿ RFC 2616ಯಿಂದ ವ್ಯಾಖ್ಯಾನಿಸಲ್ಪಟ್ಟಂತೆ: HTTP/1.1 ಮತ್ತು RFC 2617: ಬ್ರೌಸರ್‌ ಮತ್ತು ಸರ್ವರ್‌ಗಳು ಪರಸ್ಪರ ಹೇಗೆ ಪ್ರಮಾಣೀಕರಿಸಿಕೊಳ್ಳುತ್ತವೆ ಎಂಬುದನ್ನು HTTP Authentication ಸ್ಪಷ್ಟವಾಗಿ ನಮೂದಿಸುತ್ತದೆ.

ನೋಡಲು ಸಾಧ್ಯವಾಗುವಿಕೆ

ದೃಷ್ಟಿಯ, ಶ್ರವಣದ, ದೈಹಿಕ, ಮಾತಿನ, ಅರಿವಿನ, ಅಥವಾ ನರವೈಜ್ಞಾನಿಕ ಸಮಸ್ಯೆಗಳನ್ನು ಒಳಗೊಂಡಂತೆ ಯಾವುದೇ ದೈಹಿಕ ಅಸಾಮರ್ಥ್ಯಗಳಿದ್ದರೂ ಸಹ, ವೆಬ್‌ಗೆ ಎಲ್ಲರಿಗೂ ಪ್ರವೇಶ ದೊರೆಯುತ್ತದೆ. ಕೈ ಮುರಿತದಂಥ ತಾತ್ಕಾಲಿಕ ಅಸಾಮರ್ಥ್ಯಗಳನ್ನು ಹೊಂದಿರುವ ಇತರರಿಗೆ ಅಥವಾ ವಯಸ್ಸಾದಂತೆ ಸಾಮರ್ಥ್ಯಗಳು ಬದಲಾಗುತ್ತಾ ಹೋಗುವ ವೃದ್ಧಜೀವಿಗಳಿಗೂ ವೆಬ್‌ನ ಪ್ರವೇಶ್ಯತೆಯ ಗುಣಲಕ್ಷಣಗಳು ನೆರವಾಗುತ್ತವೆ. ಮಾಹಿತಿಯನ್ನು ಸ್ವೀಕರಿಸುವುದಕ್ಕೆ ಮಾತ್ರವೇ ಅಲ್ಲದೇ, ಮಾಹಿತಿಯನ್ನು ಒದಗಿಸುವ ಮತ್ತು ಸಮಾಜದೊಂದಿಗೆ ಸಂಹವನ ನಡೆಸುವ ಉದ್ದೇಶಗಳಿಗಾಗಿಯೂ ವೆಬ್‌ ಮಾಧ್ಯಮದ ಬಳಕೆಯಾಗುತ್ತದೆ. ಈ ಅಂಶದ ಕಾರಣದಿಂದಾಗಿ ದೈಹಿಕ ಅಸಾಮರ್ಥ್ಯಗಳಿಗೀಡಾಗಿರುವ ಜನರಿಗೂ ಸಮಾನ ಪ್ರವೇಶ ಸಾಧ್ಯತೆ ಮತ್ತು ಸಮಾನ ಅವಕಾಶವನ್ನು ವೆಬ್‌ ಮಾಧ್ಯಮವು ಒದಗಿಸುವಲ್ಲಿ ಸಮರ್ಥವಾಗಿದೆ. ಟಿಮ್‌ ಬರ್ನರ್ಸ್‌-ಲೀ ಈ ಕುರಿತು ಒಮ್ಮೆ ಮಾತನಾಡುತ್ತಾ, "ವೆಬ್‌ನ ವಿಶ್ವವ್ಯಾಪಕತೆಯಲ್ಲಿಯೇ ಅದರ ಶಕ್ತಿ ಅಡಗಿದೆ.

ಬಳಕೆದಾರರ ದೈಹಿಕ ಅಸಾಮರ್ಥ್ಯಗಳೇನೇ ಇದ್ದರೂ, ಪ್ರತಿಯೊಬ್ಬರೂ ವೆಬ್‌ನ್ನು ವೀಕ್ಷಿಸಲು ಸಾಧ್ಯವಾಗಿರುವುದು ಒಂದು ಮೂಲಭೂತವಾದ ಅಂಶವಾಗಿದೆ" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ. ಅನೇಕ ದೇಶಗಳು ವೆಬ್‌ಸೈಟ್‌ಗಳಿಗೆ ಸಂಬಂಧಿಸಿದಂತೆ ವೆಬ್‌ ಪ್ರವೇಶಸಾಧ್ಯತೆಯನ್ನು ಒಂದು ಅವಶ್ಯಕತೆಯಾಗಿ ಕಟ್ಟುಪಾಡು ಮಾಡಿವೆ. W3Cಯ ವೆಬ್‌ ಪ್ರವೇಶಸಾಧ್ಯತೆಯ ಉಪಕ್ರಮದಲ್ಲಿನ ಅಂತರರಾಷ್ಟ್ರೀಯ ಸಹಕಾರವು ಸರಳವಾದ ಮಾರ್ಗದರ್ಶಿ ಸೂತ್ರಗಳು ರೂಪುಗೊಳ್ಳುವುದಕ್ಕೆ ಕಾರಣವಾಗಿದೆ. ನೆರವಿಗೆ ನಿಲ್ಲುವ ತಂತ್ರಜ್ಞಾನವೊಂದನ್ನು ಬಳಸುವ ಅಥವಾ ಬಳಸದಿರುವ ವ್ಯಕ್ತಿಗಳಿಗೆ ವೆಬ್‌ನ ಪ್ರವೇಶಸಾಧ್ಯತೆಯು ಸುಲಭವಾಗುವಂತೆ ಮಾಡುವಲ್ಲಿ ಈ ಸೂತ್ರಗಳನ್ನು ವೆಬ್‌ ವಸ್ತು-ವಿಷಯದ ಬರಹಗಾರರು ಹಾಗೂ ತಂತ್ರಾಂಶದ ಅಭಿವೃದ್ಧಿಗಾರರು ಬಳಸಿಕೊಳ್ಳಬಹುದಾಗಿದೆ. 

ಅಂತಾರಾಷ್ಟ್ರೀಕರಣ

ವೆಬ್‌ ತಂತ್ರಜ್ಞಾನವು ಎಲ್ಲಾ ಭಾಷೆಗಳು, ಲಿಪಿಗಳು, ಮತ್ತು ಸಂಸ್ಕೃತಿಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು W3Cಯ ಅಂತರರಾಷ್ಟ್ರೀಕರಣದ ಚಟುವಟಿಕೆಯು ಭರವಸೆ ನೀಡುತ್ತದೆ. 2004 ಅಥವಾ 2005ರಲ್ಲಿ ಆರಂಭಗೊಂಡ ಯೂನಿಕೋಡ್‌ (Unicode), ಭದ್ರವಾದ ನೆಲೆಗಟ್ಟನ್ನು ಕಂಡುಕೊಂಡಿತು ಮತ್ತು ಅಂತಿಮವಾಗಿ 2007ರ ಡಿಸೆಂಬರ್‌ನಲ್ಲಿ ASCII ಹಾಗೂ Western European ಶೈಲಿಗಳೆರಡನ್ನೂ ದಾಟಿಕೊಂಡು, ಅತ್ಯಂತ ಮೇಲಿಂದ ಮೇಲೆ ಬಳಸಲ್ಪಟ್ಟ ವೆಬ್‌ ಮಾಧ್ಯಮದ ಅಕ್ಷರ ಸಂಕೇತೀಕರಣ ಶೈಲಿಯಾಗಿ ಹೊರಹೊಮ್ಮಿತು. RFC 3986ಯು ಮೂಲತಃ US-ASCIIನ ಒಂದು ಉಪವರ್ಗದಲ್ಲಿನ URIನಿಂದ ಗುರುತಿಸಲ್ಪಡುವಂತಾಗಲು ಆಕರಗಳಿಗೆ ಅವಕಾಶಮಾಡಿಕೊಟ್ಟಿತ್ತು. RFC 3987 ಸ್ವರೂಪವು ಹೆಚ್ಚು ಅಕ್ಷರಗಳಿಗೆ -ಸಾರ್ವತ್ರಿಕ ಅಕ್ಷರ ಗುಂಪಿನಲ್ಲಿನ (ಯೂನಿವರ್ಸಲ್‌ ಕ್ಯಾರೆಕ್ಟರ್‌ ಸೆಟ್‌) ಯಾವುದೇ ಅಕ್ಷರಕ್ಕೆ- ಅವಕಾಶ ನೀಡುತ್ತದೆ ಮತ್ತು ಈಗ ಒಂದು ಆಕರವನ್ನು ಯಾವುದೇ ಭಾಷೆಯಲ್ಲಿನ IRIನಿಂದ ಗುರುತಿಸಬಹುದಾಗಿದೆ.

ಅಂಕಿ-ಅಂಶಗಳು

2001ರ ಒಂದು ಅಧ್ಯಯನದ ಪ್ರಕಾರ, ವೆಬ್‌ ಮಾಧ್ಯಮದಲ್ಲಿ ಬೃಹತ್‌ ಪ್ರಮಾಣದ್ದು ಎನ್ನಬಹುದಾದ 550 ಶತಕೋಟಿಗಿಂತಲೂ ಹೆಚ್ಚಿನ ದಸ್ತಾವೇಜುಗಳು ಬಹುತೇಕವಾಗಿ ಅಗೋಚರವಾದ ವೆಬ್‌ ಸ್ವರೂಪದಲ್ಲಿ, ಅಥವಾ ಆಳವಾದ ವೆಬ್‌ ಸ್ವರೂಪದಲ್ಲಿದ್ದವು. 2,024 ದಶಲಕ್ಷದಷ್ಟು ವೆಬ್‌ ಪುಟಗಳಿಗೆ ಸಂಬಂಧಿಸಿ 2002ರಲ್ಲಿ ಕೈಗೊಳ್ಳಲಾದ ಒಂದು ಸಮೀಕ್ಷೆಯು ನಿರ್ಣಯಿಸಿರುವ ಪ್ರಕಾರ, ಇದುವರೆಗಿನ ಬಹುಪಾಲು ವೆಬ್‌ ವಸ್ತು-ವಿಷಯವು ಇಂಗ್ಲಿಷ್‌ನಲ್ಲಿದ್ದು ಅದರ ಪಾಲು 56.4%ನಷ್ಟಿದ್ದರೆ, ನಂತರದ ಸ್ಥಾನಗಳು ಜರ್ಮನ್‌ (7.7%), ಫ್ರೆಂಚ್‌ (5.6%), ಮತ್ತು ಜಪಾನೀ ಭಾಷೆಯಲ್ಲಿನ (4.9%) ಪುಟಗಳಿಗೆ ಸೇರಿವೆ. ವೆಬ್‌ ಮಾಧ್ಯಮದ ಮಾದರಿಯನ್ನು ಒದಗಿಸಲು 75 ವಿವಿಧ ಭಾಷೆಗಳಲ್ಲಿ ವೆಬ್‌ ಶೋಧಗಳನ್ನು ಬಳಸಿದ ತೀರಾ ಇತ್ತೀಚಿನ ಅಧ್ಯಯನವೊಂದು ನಿರ್ಣಯಿಸಿರುವ ಪ್ರಕಾರ, 2005ರ ಜನವರಿ ಅಂತ್ಯದ ವೇಳೆಗೆ ಸಾರ್ವಜನಿಕವಾಗಿ ಅನುಕ್ರಮಣಿಕೆ ಮಾಡಬಹುದಾದ ವೆಬ್‌ನಲ್ಲಿನ 11.5 ಶತಕೋಟಿಗೂ ಮೀರಿದ ವೆಬ್‌ ಪುಟಗಳಿದ್ದವು. As of ಮಾರ್ಚ್ 2009ಅನುಕ್ರಮಣಿಕೆ ಮಾಡಬಹುದಾದ ವೆಬ್‌ ಕಡೇಪಕ್ಷ 25.21 ಶತಕೋಟಿಯಷ್ಟು ಪುಟಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. 2008ರ ಜುಲೈ 25ರಂದು, ಗೂಗಲ್‌ ಸಾಫ್ಟ್‌ವೇರ್‌ನ ಎಂಜಿನಿಯರುಗಳಾದ ಜೆಸ್ಸೆ ಆಲ್ಪರ್ಟ್‌ ಮತ್ತು ನಿಸಾನ್‌ ಹಜಾಜ್‌ ಎಂಬಿಬ್ಬರು ಒಂದು ಹೇಳಿಕೆ ನೀಡಿ, ಗೂಗಲ್‌ ಶೋಧಕಾರ್ಯವು ಕಾರ್ಯಾಚರಣೆಯಲ್ಲಿರುವ 109.5 ದಶಲಕ್ಷಕ್ಕೂ ಹೆಚ್ಚಿನAs of ಮೇ 2009 ವೆಬ್‌ಸೈಟ್‌ಗಳಲ್ಲಿ ಒಂದು ಲಕ್ಷ ಕೋಟಿಯಷ್ಟು ವಿಶಿಷ್ಟವಾದ URLಗಳನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದರು. ಇವುಗಳ ಪೈಕಿ 74%ನಷ್ಟು ವಾಣಿಜ್ಯೋದ್ದೇಶದ ಅಥವಾ ಇತರ ವೆಬ್‌ಸೈಟ್‌ಗಳಾಗಿದ್ದು, .com ಸಾರ್ವತ್ರಿಕ ಉನ್ನತ-ಮಟ್ಟದ ಡೊಮೈನ್‌ನಲ್ಲಿ ಅವು ಕಾರ್ಯಾಚರಣೆ ನಡೆಸುತ್ತಿದ್ದವು.

ವೇಗದ ಕುರಿತಾದ ಚರ್ಚಾವಿಷಯಗಳು

ಅಂತರ್ಜಾಲದ ಮೂಲಸೌಕರ್ಯದಲ್ಲಿನ ದಟ್ಟಣೆಯ ಸಮಸ್ಯೆಗಳಿಗೆ ಸಂಬಂಧಿಸಿದ ತಡೆಯೊಡ್ಡುವಿಕೆ ಮತ್ತು ನಿಧಾನಗತಿಯ ಬ್ರೌಸಿಂಗ್‌ಗೆ ಕಾರಣವಾಗುವ ಉನ್ನತ ಮಟ್ಟದ ಅವ್ಯಕ್ತ ಸ್ಥಿತಿಯು ಒಂದು ನಿಕೃಷ್ಟಾರ್ಥದ ಪದದ ಹುಟ್ಟುವಿಕೆಗೆ ಕಾರಣವಾಯಿತು. World Wide Webನ್ನು World Wide Wait ಎಂಬ ಪರ್ಯಾಯ ಹೆಸರಿನಲ್ಲಿ ಕರೆಯುವ ಪ್ರಯತ್ನವೇ ಇದಕ್ಕೊಂದು ಉದಾಹರಣೆಯಾಗಿತ್ತು. ಅಂತರಜಾಲದ ವೇಗವನ್ನು ಹೆಚ್ಚಿಸುವ ವಿಷಯವು, ಉನ್ನತವರ್ಗದ ಸಮಾನಸ್ಕಂದ ತಂತ್ರಜ್ಞಾನ ಮತ್ತು QoS ತಂತ್ರಜ್ಞಾನಗಳ ಬಳಕೆಯನ್ನು ಕುರಿತಾದ ಒಂದು ನಿರಂತರ ಚರ್ಚೆಯಾಗಿದೆ. World Wide Waitನ್ನು ತಗ್ಗಿಸುವುದಕ್ಕೆ ಸಂಬಂಧಿಸಿದ ಇತರ ಪರಿಹಾರೋಪಾಯಗಳನ್ನು W3Cಯಲ್ಲಿ ಕಾಣಬಹುದು. ವೆಬ್‌ ಹೊಂದಿರಬೇಕಾದ ಮಾದರಿ ಪ್ರತಿಸ್ಪಂದನಾ ಕಾಲಾವಧಿಗಳ ಕುರಿತಾದ ಪ್ರಮಾಣಕ ಮಾರ್ಗದರ್ಶಿ ಸೂತ್ರಗಳು ಹೀಗಿವೆ:

  • 0.1 ಸೆಕೆಂಡ್‌ (ಸೆಕೆಂಡೊಂದರ ಹತ್ತನೇ ಒಂದು ಭಾಗ). ಮಾದರಿ ಪ್ರತಿಸ್ಪಂದನಾ ಕಾಲಾವಧಿ. ಯಾವುದೇ ಅಡಚಣೆಯು ಬಳಕೆದಾರನ ಅನುಭವಕ್ಕೆ ಬರುವುದಿಲ್ಲ.
  • 1 ಸೆಕೆಂಡ್‌. ಪ್ರತಿಕ್ರಯಿಸಲು ತೆಗೆದುಕೊಳ್ಳಬಹುದಾದ ಗರಿಷ್ಠ ಸಮಯ. 1 ಸೆಕೆಂಡ್‌ಗಿಂತಲೂ ಅಧಿಕ ಸಮಯವನ್ನು ಡೌನ್‌ಲೋಡ್‌ಗೆ ಅದು ತೆಗೆದುಕೊಂಡರೆ ಬಳಕೆದಾರನು ಅಡಚಣೆಯನ್ನು ಅನುಭವಿಸುತ್ತಾನೆ.
  • 10 ಸೆಕೆಂಡ್‌ಗಳು. ಒಪ್ಪಲಾಗದ ಪ್ರತಿಸ್ಪಂದನಾ ಕಾಲಾವಧಿ. ಬಳಕೆದಾರನ ಅನುಭವಕ್ಕೆ ಅಡಚಣೆಯಾಗುತ್ತದೆ ಮತ್ತು ಬಳಕೆದಾರನು ಸದರಿ ವೆಬ್‌ಸೈಟ್‌ನ್ನು ಅಥವಾ ಕಂಪ್ಯೂಟರ್‌ನ್ನು ಬಿಟ್ಟುಹೋಗುವ ಸಾಧ್ಯತೆಯಿರುತ್ತದೆ.

ಕ್ಯಾಷಿಂಗ್‌(Caching)

ಒಂದು ವೇಳೆ ಬಳಕೆದಾರನೊಬ್ಬನು ಕೇವಲ ಅಲ್ಪ ವಿರಾಮದ ನಂತರ ವೆಬ್‌ ಪುಟವೊಂದಕ್ಕೆ ಮರುಭೇಟಿಯಿತ್ತರೆ, ಪುಟದ ದತ್ತಾಂಶವನ್ನು ಮೂಲ ವೆಬ್‌ ಬ್ರೌಸರ್‌ನಿಂದಲೇ ಮರು-ಗಳಿಸಬೇಕು ಎಂದೇನೂ ಇಲ್ಲ. ಬಹುಪಾಲು ಎಲ್ಲಾ ಬ್ರೌಸರ್‌ಗಳು ಇತ್ತೀಚೆಗೆ ಗಳಿಸಿದ ದತ್ತಾಂಶವನ್ನು ಸಾಮಾನ್ಯವಾಗಿ ಸ್ಳಳೀಯ ಹಾರ್ಡ್‌ ಡ್ರೈವ್‌ನಲ್ಲಿ ಮರೆಮಾಡಿಡುತ್ತವೆ.

ಬ್ರೌಸರ್‌ ಒಂದರಿಂದ ಕಳಿಸಲ್ಪಟ್ಟ HTTP ಕೋರಿಕೆಗಳು ಸಾಮಾನ್ಯವಾಗಿ ಕಡೆಯ ಡೌನ್‌ಲೋಡ್‌ನ ನಂತರದ ಬದಲಾದ ದತ್ತಾಂಶವನ್ನು ಕೇಳುತ್ತವೆ. ಒಂದು ವೇಳೆ ಸ್ಥಳೀಯ ಹಾರ್ಡ್‌ಡ್ರೈವ್‌ನಲ್ಲಿ ಮರೆಮಾಡಿಟ್ಟಿರುವ ದತ್ತಾಂಶಗಳು ಇನ್ನೂ ಪ್ರಸ್ತುತವಾಗಿದ್ದರೆ, ಅವುಗಳು ಮರುಬಳಕೆಯಾಗುತ್ತವೆ. ಅಂತರಜಾಲದ ಮೇಲಿನ ವೆಬ್‌ ದಟ್ಟಣೆಯ ಪ್ರಮಾಣವನ್ನು ತಗ್ಗಿಸುವಲ್ಲಿ ಸದರಿ ಮರೆಮಾಡಿಡುವ ಅಥವಾ "ಕ್ಯಾಷಿಂಗ್‌" ಪ್ರಕ್ರಿಯೆಯು ನೆರವಾಗುತ್ತದೆ. ಡೌನ್‌ಲೋಡ್‌ ಮಾಡಲಾದ ಪ್ರತಿ ಕಡತಕ್ಕೂ ಸ್ವತಂತ್ರವಾಗಿ ಅವಧಿ ಮುಗಿಯುವಿಕೆಯ ಕುರಿತು ತೀರ್ಮಾನಿಸಲಾಗುತ್ತದೆ. ಈ ಕಡತವು ಚಿತ್ರ, ಶೈಲಿಸಂಗ್ರಹ, JavaScript, HTML, ಅಥವಾ ಸದರಿ ವೆಬ್‌ಸೈಟ್‌ ಒದಗಿಸುವ ಇತರ ವಸ್ತು-ವಿಷಯದ ಪೈಕಿ ಯಾವುದೇ ಆಗಿರಬಹುದು. ಈ ರೀತಿಯಲ್ಲಿ, ಹೆಚ್ಚು ಚಲನಶೀಲ ವಸ್ತುವನ್ನು ಒಳಗೊಂಡ ವೆಬ್‌ಸೈಟ್‌ಗಳಲ್ಲಿಯೂ ಮೂಲ ಆಕರಗಳ ಪೈಕಿ ಅನೇಕವನ್ನು ಮಾತ್ರವೇ ಸಂದರ್ಭಾನುಸಾರವಾಗಿ ಚುರುಕುಗೊಳಿಸುವುದು ಅಗತ್ಯವಾಗಿರುತ್ತದೆ. CSS ದತ್ತಾಂಶ ಮತ್ತು JavaScriptನಂಥ ಆಕರಗಳನ್ನು ವೆಬ್‌ಸೈಟ್‌ನಾದ್ಯಂತ ವ್ಯಾಪಿಸಿರುವ ಕೆಲವೊಂದು ಕಡತಗಳಿಗೆ ಸಂಕಲಿಸುವುದನ್ನು ಒಂದು ಯೋಗ್ಯವಾದ ಕ್ರಮ ಎಂದು ವೆಬ್‌ಸೈಟ್‌ ವಿನ್ಯಾಸಕಾರರು ಪರಿಗಣಿಸಿದ್ದಾರೆ. ಈ ಕ್ರಮದಿಂದಾಗಿ ಅವುಗಳನ್ನು ಪರಿಣಾಮಕಾರಿಯಾಗಿ ಮರೆಮಾಡಿಡುವುದು ಸಾಧ್ಯವಾಗುತ್ತದೆ. ಪುಟದ ಡೌನ್‌ಲೋಡ್‌ ಅವಧಿಗಳನ್ನು ತಗ್ಗಿಸುವಲ್ಲಿ ಮತ್ತು ವೆಬ್‌ ಬ್ರೌಸರ್‌ನ ಮೇಲಿನ ಬೇಡಿಕೆಗಳನ್ನು ಕಡಿಮೆ ಮಾಡುವಲ್ಲಿ ಇದು ನೆರವಾಗುತ್ತದೆ. 

ವೆಬ್‌ ವಸ್ತು-ವಿಷಯವನ್ನು ಮರೆಮಾಡಿಡಬಲ್ಲ ಅಂತರಜಾಲದ ಇತರ ಘಟಕಗಳೂ ಅಸ್ತಿತ್ವದಲ್ಲಿವೆ. ಒಬ್ಬನಿಂದ ಬೇಡಿಕೆ ಸಲ್ಲಿಕೆಗೆ ಒಳಗಾದ ವೆಬ್‌ ಆಕರಗಳನ್ನು ಎಲ್ಲರ ಪ್ರಯೋಜನಕ್ಕಾಗಿ ಸಾಂಸ್ಥಿಕ ಮತ್ತು ಶೈಕ್ಷಣಿಕ ಫೈರ್‌ವಾಲ್‌ಗಳು ಆಗಾಗ ಮರೆಮಾಡಿಡುತ್ತವೆ. (ಇದನ್ನೂ ನೋಡಿ: ಕ್ಯಾಷಿಂಗ್‌ ಪ್ರಾಕ್ಸಿ ಸರ್ವರ್‌). Google ಅಥವಾ Yahoo!ಗಳಂಥ ಕೆಲವೊಂದು ಶೋಧಕ ಎಂಜಿನ್‌ಗಳು ವೆಬ್‌ಸೈಟ್‌ಗಳ ಅಂತರ್ಗತ ವಿಷಯಗಳನ್ನು ಸಂಗ್ರಹಿಟ್ಟಿರುತ್ತವೆ. ಕಡತಗಳನ್ನು ಯಾವಾಗ ಪರಿಷ್ಕರಿಸಲಾಯಿತು ಮತ್ತು ಆದ್ದರಿಂದ ಅವುಗಳನ್ನು ಮರು-ಕಳಿಸುವ ಅಗತ್ಯವಿದೆ ಎಂಬುದನ್ನು ನಿರ್ಧರಿಸಬಲ್ಲ ವೆಬ್‌ ಸರ್ವರ್‌ನೊಳಗೆ ನಿರ್ಮಿಸಲಾಗಿರುವ ಸೌಕರ್ಯಗಳನ್ನು ಹೊರತುಪಡಿಸಿ, ಚಲನಶೀಲ ರೀತಿಯಲ್ಲಿ ಸೃಷ್ಟಿಯಾಗಿರುವ ವೆಬ್‌ ಪುಟಗಳ ವಿನ್ಯಾಸಕಾರರು, ಕೋರಿಕೆ ಸಲ್ಲಿಸುತ್ತಿರುವ ಬಳಕೆದಾರರಿಗೆ ವಾಪಸ್‌ ಕಳಿಸಲಾದ HTTP ಹೆಡರ್‌ಗಳನ್ನು ನಿಯಂತ್ರಿಸಬಲ್ಲರು. ಇದರಿಂದಾಗಿ ಇಂಥ ಕ್ಷಣಮಾತ್ರದ ಅಥವಾ ಸೂಕ್ಷ್ಮ ಸಂವೇದನೆಯ ಪುಟಗಳು ಮರೆಮಾಡಲ್ಪಡುವುದಿಲ್ಲ. ಅಂತರ್ಜಾಲದ ಬ್ಯಾಂಕಿಂಗ್‌ ವ್ಯವಸ್ಥೆ ಮತ್ತು ಸುದ್ದಿ ತಾಣಗಳು ಈ ಸೌಲಭ್ಯವನ್ನು ಮೇಲಿಂದ ಮೇಲೆ ಬಳಸುತ್ತವೆ. HTTP 'GET' ಎಂಬ ಸ್ವರೂಪವೊಂದರ ನೆರವಿನೊಂದಿಗೆ ಕೋರಿಕೆ ಸಲ್ಲಿಸಲ್ಪಟ್ಟ ದತ್ತಾಂಶವು, ಒಂದು ವೇಳೆ ಇತರ ಷರತ್ತುಗಳು ಈಡೇರಿದಲ್ಲಿ ಮರೆಮಾಡುವಿಕೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ; 'POST' ಎಂಬುದಕ್ಕೆ ದೊರೆತ ಪ್ರತಿಸ್ಪಂದನೆಯಲ್ಲಿನ ದತ್ತಾಂಶವು POSTedಗೆ ಈಡಾದ ದತ್ತಾಂಶದ ಮೇಲೆ ಅವಲಂಬಿತವಾಗಿದೆ ಎಂದು ಭಾವಿಸಲಾಗುತ್ತದೆ ಮತ್ತು ಅದು ಮರೆಮಾಡಲ್ಪಡುವುದಿಲ್ಲ.

ಇದನ್ನೂ ಗಮನಿಸಿ

Page ಮಾಡ್ಯೂಲ್:Portal/styles.css has no content.

  • ಡೀಪ್‌ ವೆಬ್‌
  • ಇಲೆಕ್ಟ್ರಾನಿಕ್‌ ಪಬ್ಲಿಷಿಂಗ್‌
  • ವೆಬ್‌ಸೈಟುಗಳ ಪಟ್ಟಿ
  • ಸ್ಟ್ರೀಮಿಂಗ್‌ ಮೀಡಿಯಾ
  • Web 1.0
  • Web 2.0
  • ವೆಬ್‌ ಪ್ರವೇಶಾವಕಾಶ
  • ವೆಬ್‌ ದಾಖಲೆ ವ್ಯವಸ್ಥೆ
  • ವೆಬ್‌ ಬ್ರೌಸರ್‌
  • ವೆಬ್‌ ನಿರ್ದೇಶಿಕೆ
  • ವೆಬ್‌ ಆಪರೇಟಿಂಗ್ ಸಿಸ್ಟಂ
  • ವೆಬ್‌ ವಿಜ್ಞಾನ
  • ವೆಬ್‌ ಶೋಧಕ ಎಂಜಿನು
  • ವೆಬ್‌ ಸೇವೆಗಳು
  • ವೆಬ್‌ಸೈಟ್‌ ವಿನ್ಯಾಸ

ಟಿಪ್ಪಣಿಗಳು

`

This article uses material from the Wikipedia ಕನ್ನಡ article ವರ್ಲ್ಡ್ ವೈಡ್ ವೆಬ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ವರ್ಲ್ಡ್ ವೈಡ್ ವೆಬ್ ಇತಿಹಾಸವರ್ಲ್ಡ್ ವೈಡ್ ವೆಬ್ ಕಾರ್ಯವಿಧಾನವರ್ಲ್ಡ್ ವೈಡ್ ವೆಬ್ ಗೌಪ್ಯತೆವರ್ಲ್ಡ್ ವೈಡ್ ವೆಬ್ ಭದ್ರತೆವರ್ಲ್ಡ್ ವೈಡ್ ವೆಬ್ ಮಾನದಂಡಗಳುವರ್ಲ್ಡ್ ವೈಡ್ ವೆಬ್ ನೋಡಲು ಸಾಧ್ಯವಾಗುವಿಕೆವರ್ಲ್ಡ್ ವೈಡ್ ವೆಬ್ ಅಂತಾರಾಷ್ಟ್ರೀಕರಣವರ್ಲ್ಡ್ ವೈಡ್ ವೆಬ್ ಅಂಕಿ-ಅಂಶಗಳುವರ್ಲ್ಡ್ ವೈಡ್ ವೆಬ್ ವೇಗದ ಕುರಿತಾದ ಚರ್ಚಾವಿಷಯಗಳುವರ್ಲ್ಡ್ ವೈಡ್ ವೆಬ್ ಕ್ಯಾಷಿಂಗ್‌(Caching)ವರ್ಲ್ಡ್ ವೈಡ್ ವೆಬ್ ಇದನ್ನೂ ಗಮನಿಸಿವರ್ಲ್ಡ್ ವೈಡ್ ವೆಬ್ ಟಿಪ್ಪಣಿಗಳುವರ್ಲ್ಡ್ ವೈಡ್ ವೆಬ್ ಆಕರಗಳುವರ್ಲ್ಡ್ ವೈಡ್ ವೆಬ್ ಬಾಹ್ಯ ಕೊಂಡಿಗಳುವರ್ಲ್ಡ್ ವೈಡ್ ವೆಬ್ಅಂತರ್ಜಾಲಚಿತ್ರಮಲ್ಟಿಮೀಡಿಯಾ

🔥 Trending searches on Wiki ಕನ್ನಡ:

ಕನ್ನಡ ಜಾನಪದಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಬೇಲೂರುಕರಗದಿಕ್ಸೂಚಿಭಾರತದ ಭೌಗೋಳಿಕತೆಸಂಗೊಳ್ಳಿ ರಾಯಣ್ಣಹತ್ತಿಭಾರತದ ರಾಷ್ಟ್ರೀಯ ಉದ್ಯಾನಗಳುಯಮಜ್ವರಯೋಗಉತ್ತರ ಕರ್ನಾಟಕಕರ್ಣಪರಮಾಣುವಿಷ್ಣುವರ್ಧನ್ (ನಟ)ಅಂಚೆ ವ್ಯವಸ್ಥೆಕನ್ನಡ ಗುಣಿತಾಕ್ಷರಗಳುಜಗನ್ನಾಥದಾಸರುವಿಧಾನ ಸಭೆಝಾನ್ಸಿ ರಾಣಿ ಲಕ್ಷ್ಮೀಬಾಯಿಆಂಧ್ರ ಪ್ರದೇಶಮಲ್ಟಿಮೀಡಿಯಾಡಾ ಬ್ರೋಕನ್ನಡ ಕಾಗುಣಿತಕಾದಂಬರಿಜೋಗಚಿಲ್ಲರೆ ವ್ಯಾಪಾರಶಿವಪ್ಪ ನಾಯಕನಂಜುಂಡೇಶ್ವರ ದೇವಸ್ಥಾನ, ನಂಜನಗೂಡುತತ್ಪುರುಷ ಸಮಾಸಪುಟ್ಟರಾಜ ಗವಾಯಿಕಾವೇರಿ ನದಿಮೂಢನಂಬಿಕೆಗಳುಹಲಸುಭಾರತದ ಪ್ರಧಾನ ಮಂತ್ರಿಲಸಿಕೆಸಮಾಜ ವಿಜ್ಞಾನತುಂಗಭದ್ರ ನದಿಯೋಗ ಮತ್ತು ಅಧ್ಯಾತ್ಮಜರಾಸಂಧಸಂವತ್ಸರಗಳುಭಾರತದ ಚುನಾವಣಾ ಆಯೋಗವಚನ ಸಾಹಿತ್ಯವೆಂಕಟೇಶ್ವರ ದೇವಸ್ಥಾನವಿಧಾನಸೌಧಭಾರತದಲ್ಲಿನ ಜಾತಿ ಪದ್ದತಿಸಂಸ್ಕೃತ ಸಂಧಿಪೊನ್ನರಗಳೆದೇವರ/ಜೇಡರ ದಾಸಿಮಯ್ಯಭಾರತದಲ್ಲಿ ಪಂಚಾಯತ್ ರಾಜ್ಭೂಮಿಸಂಖ್ಯೆಇಮ್ಮಡಿ ಪುಲಕೇಶಿಭಾರತೀಯ ಧರ್ಮಗಳುಬಂಗಾರದ ಮನುಷ್ಯ (ಚಲನಚಿತ್ರ)ಪೂರ್ಣಚಂದ್ರ ತೇಜಸ್ವಿಚಾಲುಕ್ಯಕರ್ನಾಟಕದ ಹಬ್ಬಗಳುಕನ್ನಡತಿ (ಧಾರಾವಾಹಿ)ಪರೀಕ್ಷೆಪಂಜುರ್ಲಿಮಹಾತ್ಮ ಗಾಂಧಿಅನುರಾಗ ಅರಳಿತು (ಚಲನಚಿತ್ರ)ಯುರೋಪ್ಅಳಿಲುಸೆಸ್ (ಮೇಲ್ತೆರಿಗೆ)೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಕೃಷಿನಾಟಕಭಾರತದ ಆರ್ಥಿಕ ವ್ಯವಸ್ಥೆರಾಷ್ಟ್ರೀಯತೆಕಾಗೋಡು ಸತ್ಯಾಗ್ರಹವಂದೇ ಮಾತರಮ್ಮಿಲಾನ್ಲೋಪಸಂಧಿಸ್ತ್ರೀ🡆 More